Shuru
Apke Nagar Ki App…
Karibasava Balal
More news from ಕರ್ನಾಟಕ and nearby areas
- ನಾಯಕನಹಟ್ಟಿ ಪಟ್ಟಣದಲ್ಲಿ ಸಿಹಿ ಹಂಚಿ ಕಾರ್ಮಿಕರ ದಿನ ಸಂಭ್ರಮಚಾರಣೆ. ಚಳ್ಳಕೆರೆ:ನಾಯಕನಹಟ್ಟಿ: ಶುಕ್ರವಾರ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಕರ್ನಾಟಕ ಸೇಟ್ ಕನ್ ಸ್ಟ್ರಕ್ಷನ್ ವರ್ಕರ್ ಸೆಂಟ್ರಲ್ ಯೂನಿಯನ್ ವತಿಯಿಂದ ಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ್ ಮಾತನಾಡಿದ ಅವರು ನಾಯಕನಹಟ್ಟಿ ಹೋಬಳಿಯ ಕಟ್ಟಡ ಹಾಗೂ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಕೂಡಿ ಸರ್ಕಾರದ ಆದೇಶದಂತೆ ಮೇ 1ರಂದು ಪ್ರತಿ ವರ್ಷ ಪಟ್ಟಣದಲ್ಲಿ ಕಾರ್ಮಿಕರ ದಿನಾಚರಣೆಯನ್ನು ಸಿಹಿ ಹಂಚಿ ಸಂಭ್ರಮದಿಂದ ಆಚರಿಸುತ್ತೇವೆ. ರಾಜ್ಯ ಸರ್ಕಾರ ಕಾರ್ಮಿಕರ ನೆರವಿಗೆ ಮುಂದಾಗಬೇಕು ಕಾರ್ಮಿಕರಿಗೆ ಮೂಲಭೂತ ಸೌಲಭ್ಯ ನೀಡಬೇಕು ಎಂದರು. ಈ ಸಮಯದಲ್ಲಿ ಹೋಬಳಿ ಘಟಕ ಅಧ್ಯಕ್ಷ ಚನ್ನಬಸಯ್ಯನಹಟ್ಟಿ ಬಿ. ತಿಪ್ಪೇಸ್ವಾಮಿ ಮಾತನಾಡಿದರು ಪ್ರತಿ ವರ್ಷ ಮೇ ಒಂದರಂದು ಪಟ್ಟಣದಲ್ಲಿ ಕಾರ್ಮಿಕರ ದಿನಾಚರಣೆ ಆಚರಣೆ ಮಾಡುವುದು ಸಂತಸದ ವಿಷಯ ನಮ್ಮ ಕಾರ್ಮಿಕರು ಸಂಘಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು. ಇದೇ ವೇಳೆ ಕರ್ನಾಟಕ ಸೇಟ್ ಕನ್ ಸ್ಪೆಕ್ಷನ್ ವರ್ಕರ್ ಸೆಂಟ್ರಲ್ ಯೂನಿಯನ್ ಚಿತ್ರದುರ್ಗ ಗೌರವಾಧ್ಯಕ್ಷ ಪ್ರಸನ್ನ, ಉಪಾಧ್ಯಕ್ಷ ಎಂ. ಸಿ. ಮಚ್ಚೇಂದ್ರಪ್ಪ, ಸಹ ಕಾರ್ಯದರ್ಶಿ ಗೋಪಾಲ್, ಖಜಾಂಚಿ ನಾಗರಾಜ್ ಕಾರ್ಯದರ್ಶಿ ಶಫಿವುಲ್ಲಾ, ಪ್ರಧಾನ ಕಾರ್ಯದರ್ಶಿ ಶಿವು ಹಾಗೂ ನಾಯಕನಹಟ್ಟಿ ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ನಾಯಕನಹಟ್ಟಿ ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ಎನ್ ಸಿ. ತಿಪ್ಪೇಸ್ವಾಮಿ, ಖಜಾಂಚಿ ರೇಖಲಗೆರೆ ಮಲ್ಲಿಕಾರ್ಜುನ, ಕಾರ್ಯದರ್ಶಿ ಬೋಸಯ್ಯ, ಸಂಘದ ಎಲ್ಲಾ ಪದಾಧಿಕಾರಿಗಳು ಇದ್ದರು.1
- ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವ ಹೆಚ್ ಆಂಜನೇಯ ಅವರು ಮಾತನಾಡಿದ್ದು ದಲಿತರಿಗೆ ಅಗ್ರಸ್ಥಾನ ಕೊಟ್ಟ ಪಕ್ಷ ಅದು ಕಾಂಗ್ರೆಸ್ ಆಗಿದೆ. ಕೇಂದ್ರದ ನಾಯಕರು ದಲಿತರು, ರಾಜ್ಯಸಭಾ ವಿರೋಧ ಪಕ್ಷದ ನಾಯಕರು ಕೂಡ ದಲಿತರು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊಟ್ಟಿದ್ದಾರೆ.ರಾಜ್ಯದಲ್ಲೂ ಕೂಡ ದಲಿತರಿಗೆ ಅವಕಾಶ ಕೊಟ್ಟಿದ್ದಾರೆ. ಬಿಜೆಪಿಯವರು ಎಷ್ಟು ಬಾರಿ ರಾಜ್ಯ ಘಟಕದ ಅಧ್ಯಕ್ಷರನ್ನ ದಲಿತರಿಗೆ ಕೊಟ್ಟಿದ್ದಾರೆ ಮಿಸ್ಟರ್ ಕಾರಜೋಳ್ ಎಂದು ಹೆಚ್ ಆಂಜನೇಯ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಎಂದರೆ ಎಂದರೆ ಸಾಮಾಜಿಕ ನ್ಯಾಯ, ಸಾಮಾಜಿಕ ನ್ಯಾಯ ಎಂದರೆ ಕಾಂಗ್ರೆಸ್ ಆಗಿದೆ ಎಂದು ಹೆಚ್ ಆಂಜನೇಯ ಪ್ರತಿಕ್ರಿಯೆ ನೀಡಿದ್ದಾರೆ1
- ಹಾವೇರಿ ಜಿಲ್ಲೆ ಹಾನಗಲ್1
- ಕಡೂರು: ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಸಮರ್ಥ ನಾಯಕತ್ವದಲ್ಲಿ ಜೆಡಿಎಸ್ ಪಕ್ಷ ಸಧೃಢ ಪ್ರಾದೇಶಿಕ ಪಕ್ಷವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು. ಕಡೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ದೇವರಾಜ ಅರಸರು,ಯಡಿಯೂರಪ್ಪ,ಬಂಗಾರಪ್ಪ ಮುಂತಾದವರು ಪ್ರಾದೇಶಿಕ ಪಕ್ಷಗಳನ್ನು ಕಟ್ಟಿದರೂ ರಾಜ್ಯದಲ್ಲಿ ಗಟ್ಟಿಯಾಗಿ ನಿಂತದ್ದು ಜನತಾದಳ ಪಕ್ಷ. ಎಚ್.ಡಿ.ದೇವೇಗೌಡರ ದಿಟ್ಟ ಹೋರಾಟದಿಂದ ರಾಜ್ಯದಲ್ಲಿ ಜನತಾದಳ ಪ್ರಾದೇಶಿಕ ಪಕ್ಷವಾಗಿ 25 ವರ್ಷಗಳು ತುಂಬಿವೆ.ಉತ್ತರ ಕರ್ನಾಟಕವೂ ಸೇರಿದಂತೆ ರಾಜ್ಯದಲ್ಲಿ ಜನರ ಜೊತೆಯೇ ಸದಾ ಇರುವ ಜನತಾದಳ ಪಕ್ಷದ ಸಂಘಟನೆಗಾಗಿ" ಜನರೊಂದಿಗೆ ಜನತಾದಳ" ಎಂಬ ಕಾರ್ಯಕ್ರಮ ಆಯೋಜಿಸಲಾಗಿದ್ದು, ಏಪ್ರಿಲ್ 19 ರಂದು ಕಡೂರು ಎಪಿಎಂಸಿ ಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ಕಡೂರಿಗೆ ಆಗಮಿಸುತ್ತಿದ್ದಾರೆ. ಜನತಾದಳದ ಜೀವಾಳವಾಗಿರುವ ಕಾರ್ಯಕರ್ತರ ಸಮಾವೇಶ ಮತ್ತು ಪಕ್ಷದ ಸದಸ್ಯತ್ವ ಅಭಿಯಾನದ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯಲಿದೆ.ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಇದು ಮಹತ್ವದ ಕಾರ್ಯಕ್ರಮ. ಮುಂದಿನ ದಿನಗಳಲ್ಲಿ ಎಚ್.ಡಿ.ಕುಮಾರಸ್ವಾಮಿಯವರೂ ಸಹ ಆಗಮಿಸಲಿದ್ದಾರೆ ಎಂದರು. ಈ ಕಾರ್ಯಕ್ರಮದ ಕುರಿತು ಕೆಲ ಗೊಂದಲಗಳು ಇದ್ದವಾದರೂ ಈಗ ಅವೆಲ್ಲವೂ ಬಗೆಹರಿದಿವೆ. ಜೆಡಿಎಸ್ ನಾಯಕರಾದ ವೈ.ಎಸ್.ವಿ.ದತ್ತ ಅವರೂ ಸಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಈ ಮೊದಲೇ ಈ ಕಾರ್ಯಕ್ರಮ ಏರ್ಪಾಡಾಗುತ್ತಾದರೂ ದತ್ತ ಅವರ ಅಪೇಕ್ಷೆಯಂತೆ ಮುಂದೂಡಲಾಗಿತ್ತು. ಈಗ ದೇವೇಗೌಡರು, ಕುಮಾರಸ್ವಾಮಿಯವರ ಆದೇಶದಂತೆ ಈ ಕಾರ್ಯಕ್ರಮ ಏರ್ಪಾಡಾಗಿದೆ.10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸಮಾವೇಶಗೊಳ್ಳಲಿದ್ದಾರೆ. ವೈ.ಎಸ್.ವಿ.ದತ್ತ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲ ಎಂದರು. ಜಿಲ್ಲಾ ಘಟಕದ ಅಧ್ಯಕ್ಷರ ಸ್ಥಾನ ಕಾಲಿಯಿದೆ. ಈ ಕಾರಣದಿಂದ ತಾಲ್ಕೂಕು ಘಟಕಗಳ ಪದಾಧಿಕಾರಿಗಳ ನೇಮಕಾತಿ ವಿಳಂಬವಾಗಿದೆ.ಎಷ್ಟೋ ಜನ ಕಾರ್ಯಕರ್ತರಾಗಿದ್ದವರೂ ಇನ್ನೂ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ಪಡೆದಿಲ್ಲ. ಹಾಗಾಗಿ ಪಕ್ಷದ ಸದಸ್ಯತ್ವದ ನೊಂದಣಿಯೂ ನಡೆಯಲಿದೆ. ಶೀಘ್ರದಲ್ಲೆ ಪದಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದರು. ಮುಂದಿನ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಎಸ್ ಅಥವಾ ಬಿಜೆಪಿ ಯವರಿರುತ್ತಾರೆಯೇ ಎಂಬ ಪ್ರಶ್ನೆ ಈಗ ಅಪ್ರಸ್ತುತ. ಅದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ. ಎರಡೂ ಪಕ್ಷಗಳ ಒಮ್ಮತದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆ. ಪಕ್ಷ ಸಂಘಟನೆಯ ವಿಚಾರದಲ್ಲಿಯೂ ಗೊಂದಲವಿಲ್ಲ. ಜೆಡಿಎಸ್ ಪಕ್ಷದ ಸಂಘಟನೆ ನಿರಂತರವಾಗಿ ನಡೆಯುತ್ತಿದೆ. ಎನ್.ಡಿ.ಎ ಭಾಗವಾಗಿ ಜೆಡಿಎಸ್ ಪಕ್ಷ ರಾಜ್ಯದ ಅಭಿವೃದ್ಧಿಗಾಗಿ ಸದಾ ಯೋಚಿಸುವ ಪ್ರಬಲ ಪ್ರಾದೇಶಿಕ ಪಕ್ಷವಾಗಿದೆ.ಕಡೂರಿನಲ್ಲಿ ಬಿಜೆಪಿ- ಜೆಡಿಎಸ್ ಎರಡೂ ಪಕ್ಷಗಳು ಒಟ್ಟಾಗಿಯೇ ಕಾಂಗ್ರೆಸ್ ವಿರುದ್ಧ ಹೋರಾಡುತ್ತದೆ ಎಂದರು. ಜೆಡಿಎಸ್ ಯುವ ಮುಖಂಡ ಚೇತನ್ ಕೆಂಪರಾಜು, ರಘು ಎರೇಹಳ್ಳಿ, ಹಳೇಹಟ್ಟಿ ಆನಂದನಾಯ್ಕ ಮತ್ತಿತರರು ಇದ್ದರು.3
- ಕನ್ನಡದ ವರನಟ Dr. Rajkumar ಅವರ ಪುಣ್ಯಭೂಮಿ ಕುರಿತಾಗಿ ನಟ Chetan Kumar ನೀಡಿದ್ದಾರೆನ್ನಲಾದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಬಳ್ಳಾರಿಯಲ್ಲಿ ಅಭಿಮಾನಿಗಳು ಮತ್ತು Karnataka Rakshana Vedike ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ G. Parameshwara ಅವರಿಗೆ ಮನವಿ ಸಲ್ಲಿಸಿದ್ದು, ಚೇತನ್ ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ರಾಜಕುಮಾರ್ ಅವರ ನಾಡಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿ, ಇಂತಹ ಹೇಳಿಕೆಗಳನ್ನು ಖಂಡಿಸಲಾಗಿದೆ.1
- 1824ರ ನಂತರದ ಕಿತ್ತೂರು ಸಂಸ್ಥಾನದ ಹೊಸ ಸಂಶೋಧನೆಗಳು ಹಾಗೂ ವಂಶಜರು ವಿಷಯವಾಗಿ ಮೇ 3ರಂದು ಕಿತ್ತೂರು ಸಂಸ್ಥಾನದ ವಂಶಜರು ರಾ.ಹ. ದೇಶಪಾಂಡೆ ಭವನದಲ್ಲಿ ವಿಶೇಷ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಾಹಿತಿ ಬಾಳಣ್ಣ ಶೀಗಿಹಳ್ಳಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಿತ್ತೂರು ಸಂಸ್ಥಾನ ಕುರಿತು ಸಾಕಷ್ಟು ಕೃತಿಗಳು, ಸಂಶೋಧನೆಗಳು ಈಗಾಗಲೇ ನಡೆದಿವೆ. ಜೊತೆಗೆ ಸಂಸ್ಥಾನದ ವಂಶಜರ ಬಗ್ಗೆ ಕನ್ನಡಿಗರಿಗೆ ಅಷ್ಟೊಂದು ಮಾಹಿತಿಯೂ ಇಲ್ಲ. ಈ ಹಿನ್ನಲೆಯಲ್ಲಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮೇ 3ರ ಬೆಳಗ್ಗೆ 10.30ಕ್ಕೆ ಪಾಲಿಕೆ ಮಾಜಿ ಸದಸ್ಯ ಸಿ.ಎಸ್. ಪಾಟೀಲ ಉದ್ಘಾಟಿಸುವರು. ಮಾಜಿ ಶಾಸಕ ಎ.ಬಿ. ದೇಸಾಯಿ ಅಧ್ಯಕ್ಷತೆ, ಡಾ.ಅರವಿಂದ ಯಾಳಗಿ ಆಶಯ ನುಡಿ ಹೇಳಲಿದ್ದಾರೆ ಎಂದರು.1
- Post by Karibasava Balal1
- Post by Suresh Belagere1
- ಚಿತ್ರದುರ್ಗದ ಭೋವಿ ಅಭಿವೃದ್ಧಿ ನಿಗಮದ ಕಚೇರಿಗೆ ನಿಗಮದ ಅಧ್ಯಕ್ಷರಾದ ಎಂ.ರಾಮಪ್ಪ ಅನಿರೀಕ್ಷಿತ ಬೇಟಿ ನೀಡಿದ್ದಾರೆ. ಈ ವೇಳೆ ಅವರು ಕಚೇರಿಯ ಖಡತಗಳನ್ನ ಪರಿಶೀಲನೆ ನಡೆಸಿದ್ದು ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳನ್ನ ಸರೊಯಾದ ರೀತಿಯಲ್ಲಿ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.1