BIG Statment || ಮಹಿಳಾ ಮೀಸಲಾತಿ: ಬಿಜೆಪಿಗರ ಕುತಂತ್ರ ಬಯಲು ಮಾಡಿದ ಡಾ. ಜ್ಯೋತಿ ಪಾಟೀಲ್ ಮಹಿಳಾ ಮೀಸಲಾತಿ ಜಾರಿಗೆ ಕೇಂದ್ರ ವಿಫಲ ಯಾದಗಿರಿ: ಮಹಿಳಾ ಮೀಸಲಾತಿ ಮಸೂದೆ ಜಾರಿ ಮಾಡುವಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಹಿಳಾ ಘಟಕ ರಾಜ್ಯ ಕಾರ್ಯದರ್ಶಿ ಡಾ.ಜ್ಯೋತಿ ಪಾಟೀಲ್ ತುನ್ನೂರ ಅವರು ಆರೋಪಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ೨೦೨೩ರಲ್ಲೇ ಈ ಮಸೂದೆ ಮಂಡನೆಯಾಗಿದ್ದರೂ ಮಹಿಳಾ ಮಿಸಲಾತಿ ಜಾರಿ ಮಾಡುವಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಹಿಂದೇಟು ಹಾಕಿದೆ ಯಾಕೆ? ಎಂಬುದು ಮೋದಿ ಸಾಹೇಬರೇ ಉತ್ತರ ಕೊಡಬೇಕು. ಬಿಜೆಪಿ ಸರ್ಕಾರಕ್ಕೆ ಮಹಿಳೆಯರ ಸಬಲೀಕರಣಕ್ಕಿಂತ ಚನಾವಣೆ ಗೆಲ್ಲುವುದು ಅತ್ಯಂತ ಮುಖ್ಯವಾಗಿದೆ ಎಂದು ದೂರಿದ್ದಾರೆ. ಮಹಿಳೆಯರ ಮೇಲೆ ಕಾಳಜಿಯಿಲ್ಲದೇ ಸ್ವ ಹಿತಾಸಕ್ತಿಗಾಗಿ ಮಹಿಳಾ ಮೀಸಲು ಕಾಯ್ದೆಯನ್ನು ಬಿಜೆಪಿ ಜಾರಿ ಮಾಡುತ್ತಿಲ್ಲ. ಬಿಜೆಪಿ ಸರ್ಕಾರವು ಲೋಕಸಭಾ ಕ್ಷೇತ್ರಗಳ ಮರುವಿಂಗಡನೆ ಮಸೂದೆಯನ್ನು ಮಂಡಿಸಲು ಮಹಿಳೆಯರ ಮೀಸಲಾತಿ ಕಾಯ್ದೆ ಮಂಡಿಸಿತು ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ. ಮಹಿಳಾ ಮೀಸಲಾತಿಯನ್ನು ವಿರೋಧಿಸುವ ಸಲುವಾಗಿಯೇ ಡಿಲಿಮಿ ಟೇಷನ್ ಮಸೂದೆ ನೆಪದಲ್ಲಿ ಮಹಿಳಾ ಮೀಸಲಾತಿಯನ್ನು ಮುನ್ನಲೆಗೆ ತಂದಿತ್ತು. ಇದೊಂದು ಬಿಜೆಪಿಗರ ರಾಜಕೀಯ ಕುತಂತ್ರದ ಭಾಗವಾಗಿದೆ ಎಂದು ಟೀಕಿಸಿದ್ದಾರೆ. `ಕಾಂಗ್ರೆಸ್ ಮಿತ್ರ ಪಕ್ಷಗಳಿಂದ ಭ್ರೂಣ ಹತ್ಯೆ' ಎನ್ನುವ ಪ್ರಧಾನಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸತ್ತೇನೆ. ಮಹಿಳಾ ಮೀಸಲಾತಿ ಬಿಲ್ ಹಾಗೂ ಕ್ಷೇತ್ರ ಪುನರ್ವಿಂಗಡಣೆ ಬಿಲ್ ಎರಡು ಬೇರೆಬೇರೆ, ಆದ್ರೆ ಇವರು ಬೇರೆ ರೀತಿ ಬಿಂಬಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಹಿಳಾ ಮೀಸಲಾತಿ ಬಿಲ್ ಡಿಲಿಮೇಟೇಷನ್ ಬಿಲ್‌ಗೆ ವ್ಯತ್ಯಾಸವಿದೆ. ಮೋದಿ ಅವರು ೨೦೨೩ರಲ್ಲಿ ನಾರಿ ಶಕ್ತಿ ಬಿಲ್ ಮಂಡನೆ ಮಾಡಿದ್ದರು. ಇದಕ್ಕೆ ಎಲ್ಲಾ ಪಕ್ಷದ ನಾಯಕರು ಸಹಮತ ವ್ಯಕ್ತಪಡಿಸಿದ್ರು. ೪೦ ತಿಂಗಳಾದ್ರೂ ಇದನ್ನ ಮೋದಿ ಯಾಕೆ ಮುಂಚೂಣಿಗೆ ತಂದಿರಲಿಲ್ಲ? ಏಕೆ ಅಧಿಸೂಚನೆ ಹೊರಡಿಸರಲಿಲ್ಲ? ಎಂದು ಪ್ರಶ್ನಿಸಿದ್ದಾರೆ. ಮೋದಿ ಅವರು ರಾಜಕೀಯ ದಾಳ ಉರುಳಿಸ್ತಿದ್ದಾರೆ. ಹೊರತು ಅವರಿಗೂ ಮಹಿಳಾ ಮೀಸಲಾತಿ ಬಿಲ್ ಅನಷ್ಠಾನ ಬೇಕಿಲ್ಲ. ಕಾಂಗ್ರೆಸ್ ಪಕ್ಷ ಯಾವತ್ತಿದ್ದರೂ ಮಹಿಳಾ ಮೀಸಲಾತಿ ಪರವಾಗಿಯೇ ಇದೆ ಎಂದಿದ್ದಾರೆ

- Post by Sharanappa Annadata1
- ಮಹಿಳಾ ಮೀಸಲಾತಿ ವಿರೋಧ ಮಹಿಳೆಯರಿಗೆ ಅಪಮಾನ: ಲಲಿತಾ ಅನಪುರ ಕಿಡಿ1
- ಶ್ರೀ ಗಿರಿ ಅಭಯ ಆಂಜನೇಯಸ್ವಾಮಿ ಸೇವಾ ಸಮಿತಿ ವತಿಯಿಂದ ಏಪ್ರಿಲ್ 25 ರಂದು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ‘ಅಭಯಾಂತರಂಗ’ ಗ್ರಂಥ ಲೋಕಾರ್ಪಣೆ ಹಾಗೂ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಶ್ರೀ ಗಿರಿ ಅಭಯ ಆಂಜನೇಯಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷರಾದ ಬಿ. ಬಸವರಾಜ್ ಬುಧವಾರ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು,ಅಂದು ಬೆಳಿಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಚರಂತೇಶ್ವರ ಮಠದ ಪೂಜ್ಯ ಶ್ರೀ ಶರಣಬಸವ ದೇವರು ದಿವ್ಯ ಸಾನಿಧ್ಯ ವಹಿಸಲಿದ್ದು, ಸಚಿವರಾದ ಎನ್.ಎಸ್. ಬೋಸರಾಜು ಉದ್ಘಾಟನೆ ನೆರವೇರಿಸಲಿದ್ದಾರೆ.1
- ಕಾಶಿ ಪೀಠದ ಜಗದ್ಗುರುಗಳ ಸಮ್ಮುಖದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಸಭೆ ವೈಭವದಿಂದ ಜರುಗಿತು.1
- ಲೋಕಾಯುಕ್ತ ಬಲೆಗೆ ಕೆರೂರ ಪಿ.ಎಸ್.ಐ. ಭೀಮಪ್ಪ ಕೆರೂರ - ಸುಳ್ಳು ಕೇಸ್ ದಾಖಲಿಸುತ್ತೇನೆಂದು ವ್ಯಕ್ತಿಯೊಬ್ಬನಿಂದ ಲಂಚ ಪಡೆಯುವಾಗ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದ ಪಿ.ಎಸ್.ಐ.ಭೀಮಪ್ಪ ರಬಕವಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಂಗಳವಾರ ಫಿರ್ಯಾದಿದಾರ ಬೆಳಗಂಟಿ ಕೆರೂರ ನಿವಾಸಿ ಮುತ್ತಪ್ಪ ಹುಲ್ಲಪ್ಪ ನಾಯ್ಕರ ಇವರು ಬಾಗಲಕೋಟೆ ಲೋಕಾಯುಕ್ತ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾದಿ ನೀಡಿದ್ದರಲ್ಲಿ, ಎ.17 ರಂದು ಫಿರ್ಯಾದಿಯ ಸ್ನೇಹಿತ ಶಂಕ್ರಪ್ಪ ನೀಲಪ್ಪ ಬೂದಿಹಾಳ ಸಾ:ಕೆರೂರ ಇವನಿಗೆ ಅವನ ಮೋಟರ ಸೈಕಲ್ ನಂ:ಕೆಎ-29 ಇಸಿ-0914 ಸಮೇತ ಕೆರೂರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸ್ ಠಾಣೆಯಲ್ಲಿ ಕೂಡಿಸಿ ಅವನಿಗೆ ಇಸ್ಪೀಟ್ ಆಡಿಸಿದ್ದಿಯಾ. ಬಡ್ಡಿ ಆಡಿದ್ದೀಯಾ ಅಂತಾ ಸುಳ್ಳು ಆಪಾದನೆ ಮಾಡಿ ನಿನ್ನ ಮೇಲೆ ಕೇಸ್ ಮಾಡುತ್ತೇವೆ ಅಂತಾ ಹೆದರಿಸಿ ರೂ.1 ಲಕ್ಷ 70 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟು, ಎ.18 ರಂದು ರಾತ್ರಿ ಶಂಕ್ರಪ್ಪ ಬೂದಿಹಾಳ ಇವನಿಗೆ ಕೆರೂರ ಪೊಲೀಸ್ ಠಾಣೆಯಿಂದ ಬಿಟ್ಟು ಕಳುಹಿಸಿ ಲಂಚದ ಹಣ ಕೊಟ್ಟು, ಅವನ ಮೋಟರ ಸೈಕಲ್ ನಂ:ಕೆಎ-29 ಇಸಿ-0914 ನೇದ್ದನ್ನು ಬಿಡಿಸಿಕೊಂಡು ಹೋಗಲು ತಿಳಿಸಿ ಲಂಚಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಈ ಬಗ್ಗೆ ಫಿರ್ಯಾದಿದಾರರು ದೂರು ನೀಡಿದ್ದರಿಂದ ಬಾಗಲಕೋಟೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಇಂದು ಬುಧವಾರ ಪ್ರಕರಣದಲ್ಲಿಯ ಆಪಾದಿತರಾದ ಪಿ.ಎಸ್.ಐ. ಭೀಮಪ್ಪ ರಬಕವಿ, ಪೊಲೀಸ್ ಪೇದೆ ಸಂತೋಷ ಬಿರಾದಾರ ಇಬ್ಬರೂ ಕೆರೂರ ಪೊಲೀಸ್ ಠಾಣೆ, ಇವರುಗಳು ಫಿರ್ಯಾದಿಯಿಂದ ಲಂಚದ ಹಣ ರೂ.1 ಲಕ್ಷ 70 ಸಾವಿರ ಹಣ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿರುತ್ತಾರೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಬಿ. ನಂದಗಾಂವಿ, ಇವರ ಮಾರ್ಗದರ್ಶನದಲ್ಲಿ ಡಿ.ಎಸ್.ಪಿ. ಸುರೇಶರೆಡ್ಡಿ, ಬಿ.ಎ. ಬಿರಾದಾರ, ಎಂ.ಬಿ. ಬಿರಾದಾರ, ಮತ್ತು ಎನ್. ಆರ್. ಖಿಲಾರೆ, ಪಿಐ-3 ಕರ್ನಾಟಕ ಲೋಕಾಯುಕ್ತ ಬಾಗಲಕೋಟೆ ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.1
- ವಿಜಯಪುರ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ ಮೇ ತಿಂಗಳು ಜೂನ್ ತಿಂಗಳಲ್ಲಿ ಜನರು ಹೊರಗೆ ಹೋಗಬಾರದು ಅವಶ್ಯ ಇದ್ರೆ ಮಾತ್ರ ಹೊರಗಡೆ ಹೋಗಬೇಕು ಡಾ ಶಸ್ತ್ರ ಚಿಕಿತ್ಸೆ ವೈದ್ಯರು ಹೇಳಿದ್ದಾರೆ1
- Post by Iranna Tarnal1
- ಯಾದಗಿರಿ || ಮಹಿಳಾ ಮೀಸಲಾತಿ ವಿಷಯ: ಕಾಂಗ್ರೆಸ್ ವಿರುದ್ಧ ಜೆಡಿಎಸ್ ಮಹಿಳಾ ಘಟಕದ ಆಕ್ರೋಶ1