Shuru
Apke Nagar Ki App…
*ಭಾರತ ನಲ್ಲಿ ವೈರಲ್*
Md Aleemulla Shariff
*ಭಾರತ ನಲ್ಲಿ ವೈರಲ್*
More news from Karnataka and nearby areas
- *ಭಾರತ ನಲ್ಲಿ ವೈರಲ್*1
- ಹನೂರು : ಶಾಲಾ ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ ಎಂದು ವಿದ್ಯಾರ್ಥಿಗಳಿಂದ ಪ್ರತಿಭಟನೆ ನೆಡೆಸಿರುವ ಘಟನೆ ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ಜರುಗಿದೆ ಶಾಲಾ ಸಮಯಕ್ಕೆ ಸರಿಯಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಾಹನಗಳು ಬರುತ್ತಿಲ್ಲ ಎಂದು ಲೊಕ್ಕನಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಬಸ್ ಗಳನ್ನು ತಡೆದು ಪೋಷಕರು ಮತ್ತು ಮಕ್ಕಳು ಪ್ರತಿಭಟನೆಯನ್ನು ನಡೆಸಿದರು. ಇದೆ ವೇಳೆ ಮಾತನಾಡಿದಂತಹ ಪ್ರತಿಭಟನಾ ನಿರತ ಪೋಷಕರು ನಮ್ಮ ಮಕ್ಕಳು ನಮ್ಮ ಗ್ರಾಮದಿಂದ ಕೊಳ್ಳೇಗಾಲ ಹನೂರು ಪಟ್ಟಣದ ವಿವಿಧ ಕಾಲೇಜುಗಳಿಗೆ ಪ್ರತಿನಿತ್ಯ ತೆರಳುತ್ತಾರೆ. ಆದರೆ ಶಾಲಾ ಕಾಲೇಜುಗಳ ಸಮಯಕ್ಕೆ ಅನುಗುಣವಾಗಿ ಸರ್ಕಾರಿ ಬಸ್ ಗಳು ಬರುತ್ತಿಲ್ಲ. ಇದರ ಪರಿಣಾಮ ಶಾಲಾ ಕಾಲೇಜುಗಳಿಗೆ ನಮ್ಮ ಮಕ್ಕಳು ತಡವಾಗಿ ಹೋಗುತ್ತಿದ್ದಾರೆ. ಇದರಿಂದ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ವಹಿಸಬೇಕು ಎಂದು ಪ್ರತಿಭಟನೆಯನ್ನು ನಡೆಸಿದರು. ಪ ಶಾಲಾ ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ ಎಂದು ಪ್ರತಿಭಟನೆ ನಡೆಸಿರುವುದು ಇದು ಮೊದಲೆನಲ್ಲ. ಈ ಹಿಂದೆ ಸಹ ಇದೇ ಲೊಕ್ಕನಹಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿ ಬಸ್ ಗಳನ್ನು ತಡೆದು ಪ್ರತಿಭಟನೆ ನಡೆಸಿದ್ದೆವು. ಸ್ಥಳಕ್ಕೆ ಬಂದಿದ್ದ ಅಂದಿನ ಅಧಿಕಾರಿಗಳು ಸಾದಾ ಸಮಯಕ್ಕೆ ಬಸ್ ಬಿಡುದಾಗಿ ಭರವಸೆಯನ್ನ ಕೊಟ್ಟು ತೆರಳಿದ್ದರು. ಸ್ವಲ್ಪ ದಿನಗಳ ಬಳಿಕ ಮತ್ತೆ ಇದೇ ಸಮಸ್ಯೆಯನ್ನ ಅನುಭವಿಸುತ್ತಿದ್ದೇವೆ. ಹಾಗಾಗಿ ಶಾಶ್ವತ ವಾದಂತಹ ಪರಿಹಾರವನ್ನು ಸಾರಿಗೆ ಇಲಾಖೆ ಅಧಿಕಾರಿಗಳು ನಮಗೆ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದ ಕಾಡಂಚಿನ ಭಾಗದ ಹಳ್ಳಿಗಳಿಗೆ ಸಂಚಾರ ಮಾಡುತ್ತಿರುವ ಕೆ ಎಸ್ ಆರ್ ಟಿ ಸಿ ಡಕೋಟಾ ಬಸ್ ಗಳಾಗಿದ್ದು, ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಚಾಳಿ ಯಾಗಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಕಳೆದ ತಿಂಗಳಲ್ಲಿ ಮಣಗಳ್ಳಿ, ಶಾಗ್ಯ ಬಳಿ ಒಂದೆ ದಿನದಲ್ಲಿ ಎರಡು ಬಸ್ ಕೆಟ್ಟು ನಿಂತಿರುವ ನಿದರ್ಶನವಿದೆ. ಹಾಗಾಗಿ ಗ್ರಾಮೀಣ ಭಾಗದ ಕಾಡಂಚಿನ ಭಾಗದ ಗ್ರಾಮಗಳಿಗೆ ಸಂಚಾರ ಮಾಡಲು ಕನಿಷ್ಠಪಕ್ಷ ಟೂಲ್ ಕಿಟ್ ಗಳ ವ್ಯವಸ್ಥೆ ಇರುವಂತಹ ಬಸ್ ಗಳನ್ನು ಕಲ್ಪಿಸಬೇಕು ಎಂದು ಗ್ರಾಮೀಣ ಭಾಗದ ಸಾರ್ವಜನಿಕರು ಒತ್ತಾಯ ಮಾಡಿದ್ದಾರ ಬಹುತೇಕ ಬೆಳಗಿನ ಜಾವ ಹಾಗೂ ಸಂಜೆ ವೇಳೆಗೆ ಶಾಲಾ ಕಾಲೇಜುಗಳ ಮಕ್ಕಳೇ ಸರ್ಕಾರಿ ಬಸ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ, ಪದೇ ಪದೇ ಬಸ್ ಗಳು ತೊಂದರೆಗೆ ಒಳಗಾಗು ತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿ ಶಾಲಾ ಕಾಲೇಜುಗಳ ಮಕ್ಕಳಿಗೆ ತೊಂದರೆ ಆಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ನಾವು ಗಮನಿಸುತ್ತಿದ್ದೇವೆ. ಹಾಗಾಗಿ ಸಾಲ ಕಾಲೇಜುಗಳ ಮಕ್ಕಳಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಪ್ರಜ್ಞಾವಂತ ನಾಗರೀಕರು ಆಗ್ರಹ ಪಡಿಸಿದ್ದಾರೆ.1
- ಶಿಡ್ಲಘಟ್ಟದಲ್ಲಿ ಜನವರಿ 4 ರಂದು ರಂಗೋಲಿಹಬ್ಬ, ಬನ್ನಿ ಭಾಗವಹಿಸಿ!1
- ಕಲೆ ಮತ್ತು ವಾಸ್ತುಶಿಲ್ಪದಿಂದ ಇತಿಹಾಸವನ್ನು ಶ್ರೀಮಂತಗೊಳಿಸಿದ ಅಮರ ಶಿಲ್ಪಿ ಜಕಣಾಚಾರಿ:- ಬಾಗೇಪಲ್ಲಿ:- ಅಮರಶಿಲ್ಪಿ ಜಕಣಾಚಾರಿ ಅವರು ತಮ್ಮ ಕೈಚಳಕದ ಮೂಲಕ ಕೆತ್ತನೆ ಮಾಡಿದ ಶಿಲ್ಪ ಕಲಾಕೃತಿಗಳು ಇಂದು ಇಡೀ ವಿಶ್ವದ ಪ್ರವಾಸಿಗರ ಗಮನ ಸೆಳೆಯುತ್ತಿದ್ದು, ದೇಶದ ಅಭಿವೃದ್ಧಿಗೆ ವಿಶ್ವಕರ್ಮರ ಕೊಡುಗೆ ಅಪಾರ ಕಲೆ ಮತ್ತು ವಾಸ್ತುಶಿಲ್ಪದಿಂದ ಇತಿಹಾಸವನ್ನು ಶ್ರೀಮಂತಗೊಳಿಸಿದರು ಎಂದು ತಹಶಿಲ್ದಾರ್ ಮನೀಷಾ ಎನ್ ಪತ್ರಿ ಹೇಳಿದರು. ಅವರು ಇಂದು ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ , ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ತಾಲ್ಲೂಕು ಪಂಚಾಯತಿ ಜಿಲ್ಲಾ ಪಂಚಾಯತಿ ಸಂಯುಕ್ತಾಶ್ರಯದಲ್ಲಿ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಜಕಣಾಚಾರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ,ದೀಪಾ ಬೆಳಗಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಬಿಇಓ ಎನ್. ವೆಂಕಟೇಶಪ್ಪ ಇಸಿಓ ಪದ್ಮಾವತಿ, ಆರ್.ಹನುಮಂತ ರೆಡ್ಡಿ ಸಾಕ್ಷರತೆ ಶಿವಪ್ಪ ಸುಕನ್ಯಾ ,ವಿನಾಯಕ ಮೂರ್ತಿ, ವೀರಾಚಾರಿ ಅದ್ಯಕ್ಷ ಶ್ರೀನಿವಾಸ್ ಆಚಾರಿ ಹಾಗೂ ಸಮುದಾಯದವರು ಹಾಜರಿದ್ದರು.1
- ಜಾಜೂರು ಗ್ರಾಮದಲ್ಲಿ ಕಿಡಿಗೇಡಿಗಳ ಕೃತ್ಯಕ್ಕೆ ಬಲಿಯಾದ ಅಡಿಕೆ ಮರಗಳು1
- ಬ್ಯಾನರ್ ಪಾಲಿಟಿಕ್ಸ್ ಯುವಕ ಬಲಿ.ಪೋಲೀಸರಿಂದ ಲಾಠಿ ಚಾರ್ಜ್..1
- ಗಂಗಾವತಿ ಶಾಸಕ ಜನಾರ್ಧನರೆಡ್ಡಿ ಹಾಗೂ ಅವರ ಬೆಂಬಲಿಗರು ಗುಂಪಾಗಿ ಕಾಂಗ್ರೆಸ್ ಕಾರ್ಯಕರ್ತನನ್ನು ಹತ್ಯೆಗೈದ ಘಟನೆಗೆ ಸಂಬಂಧಿಸಿ ನಾಳೆ, ದಿನಾಂಕ 02.01.2026 ಗುರುವಾರ ಬೆಳಿಗ್ಗೆ 10.30 ಗಂಟೆಗೆ ಬಳ್ಳಾರಿ ನಗರದ ನಕ್ಷತ್ರ ಹೋಟೆಲಿನಲ್ಲಿ ಪತ್ರಿಕಾಗೋಷ್ಠಿ ನಡೆಯಲಿದೆ. ಈ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ನಾರಾ ಪ್ರತಾಪ್ ರೆಡ್ಡಿ, ಮುಂಡ್ರಿಗಿ ನಾಗರಾಜ್, ಪಿ. ಗಾದೆಪ್ಪ, ವಿಷ್ಣು ಬೋಯಪಾಟಿ, ಮಹಾನಗರ ಪಾಲಿಕೆಯ ಸದಸ್ಯರು ಮತ್ತು ವಾಲ್ಮೀಕಿ ನಾಯಕರ ಸಮಾಜದ ಮುಖಂಡರು ಭಾಗವಹಿಸಿ ಮಾತನಾಡಲಿದ್ದಾರೆ.1
- *ಭಾರತ ನಲ್ಲಿ ವೈರಲ್*1