ಸರಣಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳ ಬಂಧನ;ಸುಮಾರು 20.5 ಲಕ್ಷ ರೂ ಮೌಲ್ಯದ ಚಿನ್ನಾಭರಣ,ವಾಹನಗಳ ವಶ. ಮಾಗಡಿ ಪೊಲೀಸರಿಂದ ಸರಣಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳ ಬಂಧನ; ಸುಮಾರು 20.5 ಲಕ್ಷ ರೂ ಮೌಲ್ಯದ ಚಿನ್ನಾಭರಣ,ವಾಹನಗಳು ಪೊಲೀಸರ ವಶಕ್ಕೆ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗೇರಹಳ್ಳಿ ಗ್ರಾಮದ ಮನೆಗೆ ಅಪರಿಚಿತರು ನುಗ್ಗಿ, ಮನೆಯಲ್ಲಿ ಮಲಗಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಸರವನ್ನು ಕಿತ್ತುಕೊಂಡು ಹೋಗಿರುವ ಬಗ್ಗೆ ಹಾಗೂ ಅದೇ ದಿನ ಗೇರಹಳ್ಳಿ ಗ್ರಾಮದ ದೇವಸ್ಥಾನವೊಂದರಲ್ಲಿ ಕಳ್ಳತನ ಮಾಡಿ ನಂತರ, ಬೈಚಾಪುರ ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಮಾಡಿರುವ ಬಗ್ಗೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಮೊ.ಸಂ:171/2026 ಕಲಂ-310(2), 311 BNS, ಮೊ.ಸಂ:173/2026 ಕಲಂ:305 BNS ಮತ್ತು ಮೊ.ಸಂ:176/2026 ಕಲಂ:305 BNS, ರೀತ್ಯಾ ಒಟ್ಟು 3 ಪ್ರಕರಣಗಳು ದಾಖಲಾಗಿದ್ದು, ಈ ಬಗ್ಗೆ ತನಿಖೆಯನ್ನು ಕೈಗೊಂಡು, ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳ ಪತ್ತೆ ಮಾಡಿ ವಶಕ್ಕೆ ಪಡೆದು, ವಿಚಾರಣೆ ನಡೆಸಿ ಕಳ್ಳತನ ಮಾಡಲಾಗಿದ್ದ ಸುಮಾರು 20,50,000/- ರೂ ಮೌಲ್ಯದ ಚಿನ್ನ & ಬೆಳ್ಳಿಯ ಆಭರಣ ಹಾಗೂ ವಾಹನಗಳನ್ನು ಅಮಾನತ್ತು ಪಡಿಸಿಕೊಂಡು, ಮಾಗಡಿ ಪೊಲೀಸ್ ಠಾಣೆಯ 03 ಪ್ರಕರಣಗಳು ಸೇರಿದಂತೆ, ಕುದೂರು ಪೊಲೀಸ್ ಠಾಣೆಯ-03 ಪ್ರಕರಣಗಳು, ತಾವರೆಕೆರೆ, ಬಿಡದಿ, ಅಕ್ಕೂರು, ಸಾತನೂರು, ಎಂ.ಕೆ ದೊಡ್ಡಿ ಪೊಲೀಸ್ ಠಾಣೆಯ ತಲಾ 01 ಪ್ರಕರಣಗಳು, ಸೇರಿ ಒಟ್ಟು 12 ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಮಾಗಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿರುತ್ತಾರೆ. ವಶ ಪಡೆಸಿಕೊಂಡ ಸ್ವತ್ತುಗಳ ವಿವರ 1. 78 ಗ್ರಾಂ ಚಿನ್ನಾಭರಣಗಳು 2. 2 ಕೆಜಿ 558 ಗ್ರಾಂ ಬೆಳ್ಳಿಯ ವಸ್ತುಗಳು 3. 6 ದ್ವಿಚಕ್ರ ವಾಹನಗಳು 4. ಹಿತ್ತಾಳೆ ಸಾಮಗ್ರಿಗಳು 5. ಕೃತ್ಯಕ್ಕೆ ಬಳಕೆ ಮಾಡಿದ್ದ, 1-ಕಾರು, 1- ಬುಲೆರೋ, 1 ಬೈಕ್ ಅನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
ಸರಣಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳ ಬಂಧನ;ಸುಮಾರು 20.5 ಲಕ್ಷ ರೂ ಮೌಲ್ಯದ ಚಿನ್ನಾಭರಣ,ವಾಹನಗಳ ವಶ. ಮಾಗಡಿ ಪೊಲೀಸರಿಂದ ಸರಣಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳ ಬಂಧನ; ಸುಮಾರು 20.5 ಲಕ್ಷ ರೂ ಮೌಲ್ಯದ ಚಿನ್ನಾಭರಣ,ವಾಹನಗಳು ಪೊಲೀಸರ ವಶಕ್ಕೆ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗೇರಹಳ್ಳಿ ಗ್ರಾಮದ ಮನೆಗೆ ಅಪರಿಚಿತರು ನುಗ್ಗಿ, ಮನೆಯಲ್ಲಿ ಮಲಗಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಸರವನ್ನು ಕಿತ್ತುಕೊಂಡು ಹೋಗಿರುವ ಬಗ್ಗೆ ಹಾಗೂ ಅದೇ ದಿನ ಗೇರಹಳ್ಳಿ ಗ್ರಾಮದ ದೇವಸ್ಥಾನವೊಂದರಲ್ಲಿ ಕಳ್ಳತನ ಮಾಡಿ ನಂತರ, ಬೈಚಾಪುರ ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಮಾಡಿರುವ ಬಗ್ಗೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಮೊ.ಸಂ:171/2026 ಕಲಂ-310(2), 311 BNS, ಮೊ.ಸಂ:173/2026 ಕಲಂ:305 BNS ಮತ್ತು ಮೊ.ಸಂ:176/2026 ಕಲಂ:305 BNS, ರೀತ್ಯಾ ಒಟ್ಟು 3 ಪ್ರಕರಣಗಳು ದಾಖಲಾಗಿದ್ದು, ಈ ಬಗ್ಗೆ ತನಿಖೆಯನ್ನು ಕೈಗೊಂಡು, ಕೃತ್ಯದಲ್ಲಿ
ಭಾಗಿಯಾಗಿದ್ದ ಮೂವರು ಆರೋಪಿಗಳ ಪತ್ತೆ ಮಾಡಿ ವಶಕ್ಕೆ ಪಡೆದು, ವಿಚಾರಣೆ ನಡೆಸಿ ಕಳ್ಳತನ ಮಾಡಲಾಗಿದ್ದ ಸುಮಾರು 20,50,000/- ರೂ ಮೌಲ್ಯದ ಚಿನ್ನ & ಬೆಳ್ಳಿಯ ಆಭರಣ ಹಾಗೂ ವಾಹನಗಳನ್ನು ಅಮಾನತ್ತು ಪಡಿಸಿಕೊಂಡು, ಮಾಗಡಿ ಪೊಲೀಸ್ ಠಾಣೆಯ 03 ಪ್ರಕರಣಗಳು ಸೇರಿದಂತೆ, ಕುದೂರು ಪೊಲೀಸ್ ಠಾಣೆಯ-03 ಪ್ರಕರಣಗಳು, ತಾವರೆಕೆರೆ, ಬಿಡದಿ, ಅಕ್ಕೂರು, ಸಾತನೂರು, ಎಂ.ಕೆ ದೊಡ್ಡಿ ಪೊಲೀಸ್ ಠಾಣೆಯ ತಲಾ 01 ಪ್ರಕರಣಗಳು, ಸೇರಿ ಒಟ್ಟು 12 ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಮಾಗಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿರುತ್ತಾರೆ. ವಶ ಪಡೆಸಿಕೊಂಡ ಸ್ವತ್ತುಗಳ ವಿವರ 1. 78 ಗ್ರಾಂ ಚಿನ್ನಾಭರಣಗಳು 2. 2 ಕೆಜಿ 558 ಗ್ರಾಂ ಬೆಳ್ಳಿಯ ವಸ್ತುಗಳು 3. 6 ದ್ವಿಚಕ್ರ ವಾಹನಗಳು 4. ಹಿತ್ತಾಳೆ ಸಾಮಗ್ರಿಗಳು 5. ಕೃತ್ಯಕ್ಕೆ ಬಳಕೆ ಮಾಡಿದ್ದ, 1-ಕಾರು, 1- ಬುಲೆರೋ, 1 ಬೈಕ್ ಅನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
- ಮಳವಳ್ಳಿ ತಾಲೂಕು ನಲ್ಲಿ ಅಕ್ರಮ ಮಣ್ಣು ದಂದೆ ಮಳವಳ್ಳಿ : ಮಳವಳ್ಳಿ ತಾಲೂಕಿನಲ್ಲಿ ಮಣ್ಣಿನ ದಂಧೆ ಅಕ್ರಮವಾಗಿ ನಡೆಯುತ್ತಿದ್ದು ಕೆಲ ಗ್ರಾಮಗಳಲ್ಲಿ ಅವೇರಳ್ಳಿ ಹೆಬ್ಬಣಿ ಮುಂತಾದ ಗ್ರಾಮಗಳಲ್ಲಿ ಮಣ್ಣಿನ ದಂಧೆ ಸಾಗುತ್ತಿದೆ ಇದಕ್ಕೆ ಗ್ರಾಮಸ್ಥರ ಆಕ್ರೋಶ ಹಾಗೂ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿ ಇದಕ್ಕೆ ಸೂಕ್ತವಾದ ಕಾನೂನಿ ಕ್ರಮವನ್ನು ಜರಗಿಸಬೇಕು ಎಂದು ತಹಸಿಲ್ದಾರ್ ಜಿಲ್ಲಾ ಕಚೇರಿ ನಲ್ಲಿ ಮನವಿ ಮಾಡಲು ತೀರ್ಮಾನಿಸಿದ್ದಾರೆ1
- ಯೋಗಾಭ್ಯಾಸ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ: ಶಿವಾನಂದ ಶಿವಾಚಾರ್ಯ ಮಹಾಸ್ವಾಮಿ ಮಳವಳ್ಳಿ: ಬೆಳದಿಂಗಳಲ್ಲಿ ಶರಣರ ಚಿಂತನಮಂಥನ ಸಮಿತಿ ವತಿಯಿಂದ ಹುಣ್ಣಿಮೆ ಪ್ರಯುಕ್ತ 142 ನೇ ಚಿಂತನ ಮಂಥನ ಕಾರ್ಯಕ್ರಮ ಮಳವಳ್ಳಿ ಪಟ್ಟಣದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಪೂರಿಗಾಲಿ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿ ಉದ್ಘಾಟಿಸಿ ಮಾತನಾಡಿ,ಪ್ರತಿ ದಿನ ಮನೆಯಲ್ಲಿ ಯೋಗಾಭ್ಯಾಸದಿಂದ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ ಎಂದರು. ಇದೇ ವೇಳೆ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಯೋಗಾಸನ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕಿ ಶಶಿಕಲಾ, ಯೋಗ ಶಿಕ್ಷಕ ಶ್ರೀನಿಧಿ, ಚಿಂತನ ಮಂಥನ ಸಮಿತಿ ಮಲ್ಲೇಶ್, ನಾಗರಾಜು, ಪರಶಿವಮೂರ್ತಿ,ನಟರಾಜಮೂರ್ತಿ ಸೇರಿದಂತೆ ಹಲವರು ಇದ್ದರು.1
- ಇಂದು ನಡೆದ ಸರಣಿ ಅಪಘಾತ , ದಿನೇ ದಿನೇ ಹೆಚ್ಚಾಗುತ್ತಿದೆ ಬೆಂಗಳೂರಿನಲ್ಲಿ ಇಂತಹ ಪ್ರಕರಣಗಳು. ಇಂದು ಯಲಹಂಕದ ಏರ್ಪೋರ್ಟ್ ರಸ್ತೆಯ ಬಳಿ ನಡೆದ ಸರಣಿ ಅಪಘಾತ, ಇಂದು ಮಧ್ಯಾಹ್ನ ಸುಮಾರು ನಾಲ್ಕು ಗಂಟೆಗೆ ಈ ಘಟನೆ ನಡೆದಿದ್ದು ಸದ್ಯಕ್ಕೆ ಯಾರ ಪ್ರಾಣಿಗೂ ಹಾನಿಯಾಗಲಿಲ್ಲ ಆದರೆ ಗಾಡಿಗಳು ಮಾತ್ರ ಜಕಮ್ ಗೊಂಡಿವೆ1
- ದೇಶದ ನಂಬರ್ ಒನ್ ವಿಐ Vi ಕಂಪನಿಯಿಂದ ಗ್ರಾಹಕರಿಗೆ ಧಮಾಕ ಕೊಡುಗೆ ದೇಶದ ನಂಬರ್ ಒನ್ ಬಿ ಐ ಕಂಪನಿಯಿಂದ ಗ್ರಾಹಕರಿಗೆ ಧಮಾಕ ಕೊಡುಗೆ ರೂ 325 ರಿಚಾರ್ಜ್ ಮಾಡಿಸಿದರೆ ಅನ್ಲಿಮಿಟೆಡ್ ಡಾಟಾ ಅನ್ಲಿಮಿಟೆಡ್ ಕರೆ 100 ಎಸ್ ಎಮ್ ಎಸ್ ಇಂದೇ ವಿಐ ಗ್ರಹಕರಾಗಿ ಕೊಡುಗೆ ತಮ್ಮದಾಗಿಸಿಕೊಳ್ಳಿ ವಿತರಕರ ವಿಶೇಷ ಪ್ರಕಟಣೆ1
- ಶಾಸಕ ಬಾಬು ಬಂಡಿಸಿದೇಗೌಡ ಕತ್ತೆ ಕೆಲಸ ಮಾಡುವ ವಿಡಿಯೋ ವೈರಲ್,ಏನಂದ್ರು ಗೊತ್ತಾ ನೆಟ್ಟಿಗರು ಮಂಡ್ಯ ಶ್ರೀರಂಗಪಟ್ಟಣ ಶಾಸಕ ಬಾಬು ಬಂಡಿ ಸಿದ್ದೇಗೌಡ ವ್ಯವಸಾಯ ಮಾಡುವ ವಿಡಿಯೋ ಆಗಿಸಿ ಸಾಮಾಜಿಕ ಜಾಲತಾಣದಲ್ಲಿ ಶಾಸಕರ ಗದ್ದೆ ಕೆಲಸ ಮಾಡುವ ವಿಡಿಯೋ ಬೈಕೇರಿ ಹೋಗುವ ಜೊತೆಯಲ್ಲಿ ಗುದ್ದಲಿ ಹಿಡಿದು ಗದ್ದೆಯಲ್ಲಿ ಕೆಲಸ ಮಾಡುವ ವಿಡಿಯೋಗೆ ನೆಟ್ಟಗಿರೋ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಲ್ಮೆಟ್ ಹಾಕದೆ ಗಾಡಿ ಓಡಿಸಬೇಕು ಕೆಲವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ1
- ಸುದ್ದಿಗೊಷ್ಠಿ ಮದ್ಯೆ ಕಣ್ಣೀರಾಕಿದ ಸಚಿವ ನಾಗೇಂದ್ರ... ಕಣ್ಣೀರಾಕಿ ರಾಜೀನಾಮೆ ಘೋಷಿಸಿದ ನಾಗೇಂದ್ರ. ಶಾಸಕ ಸ್ಥಾನಕ್ಕೂ ರಾಜೀನಾಮೆ ನಿಡ್ತಿನಿ...!? ಬೆಂಗಳೂರು, ಆ.28: ವಿಧಾನಸೌಧದಲ್ಲಿ ಸಚಿವರಾದ ಬಿ. ನಾಗೇಂದ್ರ, ಅಜಯ್ ಸಿಂಗ್, ರಿಜ್ವಾನ್ ಅರ್ಷದ್, ನಾಸೀರ್ ಅಹಮದ್ ಹಾಗೂ ಜಿ.ಸಿ. ಚಂದ್ರಶೇಖರ್ ಅವರ ಜಂಟಿ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಮಾತನಾಡಿದ ಸಚಿವ ಬಿ. ನಾಗೇಂದ್ರ, ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸದನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕಿತ್ತು. ಆದರೆ ವಿಪಕ್ಷದವರು ಸದನವನ್ನೇ ನಡೆಯಲು ಬಿಡಲಿಲ್ಲ ಎಂದು ಆರೋಪಿಸಿದರು. “ವಿಪಕ್ಷದವರು ಮನುಸ್ಮೃತಿಯನ್ನು ಜಾರಿಗೆ ತರಲು ಹೊರಟಿದ್ದಾರೆ. ಅವರಿಗೆ ಇದು ಯಾವ ಕಾಲ ಎಂಬುದು ಗೊತ್ತಿಲ್ಲ. ಇದು ಸಂವಿಧಾನದ ಕಾಲ, ಬಾಬಾಸಾಹೇಬರ ಕಾಲ” ಎಂದು ಹೇಳಿದರು. ರಾಮಾಯಣದ ಉತ್ತರಕಾಂಡದಲ್ಲಿನ ಶಂಬೂಕನ ಪ್ರಸಂಗವನ್ನು ಉಲ್ಲೇಖಿಸಿದ ನಾಗೇಂದ್ರ, ಇಂದಿನ ಯುಗದಲ್ಲಿ ಶಂಬೂಕನ ಹತ್ಯೆಯಾಗಲು ಸಾಧ್ಯವಿಲ್ಲ. ಸಂವಿಧಾನ ಶೂದ್ರರು, ದಲಿತರು, ಮಹಿಳೆಯರು, ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುತ್ತಿದೆ ಎಂದರು. “ರಾಜ್ಯದಲ್ಲಿ ಭೀಕರ ಬರಗಾಲವಿದೆ. ಕೆಪಿಎಸ್‌ಸಿ ಹಗರಣದ ಕುರಿತು ಚರ್ಚೆ ಮಾಡಬಹುದಿತ್ತು. ಶಾಸಕರು ತಮ್ಮ ಕ್ಷೇತ್ರಗಳ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸಬಹುದಿತ್ತು. ನಾವು ಎಲ್ಲದಕ್ಕೂ ಅವಕಾಶ ನೀಡುತ್ತಿದ್ದೆವು. ಆದರೆ ಯಾವುದೇ ಆಧಾರವಿಲ್ಲದ ವಿಚಾರಗಳನ್ನು ಮುಂದಿಟ್ಟುಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ” ಎಂದು ನಾಗೇಂದ್ರ ಆರೋಪಿಸಿದರು. 2024ರಲ್ಲೇ ರಾಜೀನಾಮೆ ನೀಡಿದ್ದೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ನಾಗೇಂದ್ರ, 2024ರಲ್ಲೇ ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ ಎಂದು ಹೇಳಿದರು. “ನಂತರ ಎಸ್‌ಐಟಿ, ಸಿಐಡಿ ತನಿಖೆ ಎದುರಿಸಿದ್ದೇನೆ. ಕೇಂದ್ರದ ಇಡಿಯಿಂದ ನನ್ನನ್ನು ಬಂಧಿಸಲಾಗಿತ್ತು. ಜೈಲಿಗೂ ಹೋಗಿ ಬಂದಿದ್ದೇನೆ. ಎರಡು ಬಾರಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಮೊದಲ ಚಾರ್ಜ್‌ಶೀಟ್‌ನಲ್ಲಿ ನನ್ನ ಹೆಸರಿರಲಿಲ್ಲ. ಎರಡನೇ ಚಾರ್ಜ್‌ಶೀಟ್‌ನಲ್ಲಿ ನನ್ನ ಹೆಸರು ಸೇರಿಸಲಾಗಿದೆ” ಎಂದು ಹೇಳಿದರು. ತಾವು ಸಂವಿಧಾನಕ್ಕೆ ಗೌರವ ನೀಡುವುದಾಗಿ ತಿಳಿಸಿದ ನಾಗೇಂದ್ರ, ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧದ ಪ್ರಾಸಿಕ್ಯೂಷನ್ ವಿಚಾರದಲ್ಲಿ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. “ವಾಲ್ಮೀಕಿ ಹಗರಣದಲ್ಲಿ ನನ್ನ ಪಾತ್ರವಿಲ್ಲ” “ವಾಲ್ಮೀಕಿ ಹಗರಣದಲ್ಲಿ ನನ್ನ ಪಾತ್ರವಿಲ್ಲ. ನಾನು ಕೇವಲ ಸಚಿವನಾಗಿದ್ದೆ. ನಾನು ನೋಟ್‌ಶೀಟ್ ಹಾಕಿದ್ದೇನಾ? ಎಲ್ಲಾದರೂ ಸಹಿ ಹಾಕಿದ್ದೇನಾ? ನಾನು ಇದರಲ್ಲಿ ಭಾಗಿಯಾಗಿದ್ದೇನಾ?” ಎಂದು ಪ್ರಶ್ನಿಸಿದರು. ಅಕ್ರಮವಾಗಿ ವರ್ಗಾವಣೆಯಾಗಿದ್ದ ಹಣ ವಾಪಸ್ ಆಗಿದೆ ಎಂದು ಹೇಳಿದ ಅವರು, “ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಯಾರ ಅಧೀನದಲ್ಲಿದೆ? ನಿರ್ಮಲಾ ಸೀತಾರಾಮನ್ ಅವರ ಅಧೀನದಲ್ಲಿರುವ ಬ್ಯಾಂಕ್ ಅಲ್ಲವೇ? ಹಾಗಾದರೆ ಅವರ ಮೇಲೆ ಏಕೆ ತನಿಖೆ ನಡೆಯುತ್ತಿಲ್ಲ? ನಾನು ದಲಿತ ಎಂಬ ಕಾರಣಕ್ಕೆ ನನ್ನ ಮೇಲೆ ಕ್ರಮ ಕೈಗೊಳ್ಳಲಾಗಿದೆಯೇ?” ಎಂದು ಪ್ರಶ್ನಿಸಿದರು. ಈ ವೇಳೆ ನಾಗೇಂದ್ರ ಭಾವುಕರಾಗಿ ಮಾತನಾಡಿದರು. ಕಣ್ಣೀರು ಹಾಕಿದ ಅವರು ಟಿಶ್ಯೂ ಬಳಸಿ ಕಣ್ಣೊರೆಸಿಕೊಂಡರು. ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವ ಘೋಷಣೆ ಮುಖ್ಯಮಂತ್ರಿ, ಪಕ್ಷದ ವರಿಷ್ಠರಿಗೆ ಮುಜುಗರವಾಗಬಾರದು ಹಾಗೂ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ನಾಗೇಂದ್ರ ಹೇಳಿದರು. “ಈಗ ನಾನು ನನ್ನ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ನನಗೆ ಆಗಿರುವ ಅನ್ಯಾಯವನ್ನು ನಾನು ಹೇಳುತ್ತೇನೆ. ಬನ್ನಿ ಅಖಾಡಕ್ಕೆ ಹೋಗೋಣ, ಜನತಾ ನ್ಯಾಯಾಲಯಕ್ಕೆ ಹೋಗೋಣ” ಎಂದು ಸವಾಲು ಹಾಕಿದರು. ಬಳ್ಳಾರಿ ಬಿಜೆಪಿ ನಾಯಕರಾದ ಬಿ. ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, “ರಾಮುಲಣ್ಣ, ನೀ ಬಾರಣ್ಣ, ನೀನೇ ಬಾ. ನನ್ನ ಸವಾಲು ಸ್ವೀಕರಿಸು. ಜನತಾ ನ್ಯಾಯಾಲಯಕ್ಕೆ ಹೋಗೋಣ” ಎಂದು ಸವಾಲು ಹಾಕಿದರು. “ನನ್ನ ಮೇಲೆ ಇಡಿ, ಸಿಬಿಐ ಬಿಡಬಹುದು. ಆದರೆ ನಿಮ್ಮ ಗೊಡ್ಡು ಬೆದರಿಕೆಗೆ ನಾನು ಬಗ್ಗುವುದಿಲ್ಲ. ನಾನು ಆರೋಪ ಮುಕ್ತನಾಗಿ ಹೊರಬರುವ ವಿಶ್ವಾಸವಿದೆ” ಎಂದು ನಾಗೇಂದ್ರ ಹೇಳಿದರು. ಬಳ್ಳಾರಿ ಜನರು ಈಗಾಗಲೇ ಬಿಜೆಪಿ ನಾಯಕರಿಗೆ ಎರಡು ಬಾರಿ ಛೀಮಾರಿ ಹಾಕಿದ್ದಾರೆ. ನೀವು ಚಲಾವಣೆಯಲ್ಲಿಲ್ಲದ ನಾಣ್ಯಗಳಾಗಿದ್ದೀರಿ ಎಂದು ಟೀಕಿಸಿದ ಅವರು, ತಮ್ಮ ವಿರುದ್ಧದ ಆರೋಪಗಳಿಗೆ ಜನತಾ ನ್ಯಾಯಾಲಯದಲ್ಲೇ ಉತ್ತರ ನೀಡುವುದಾಗಿ ಹೇಳಿದರು. ಕೊನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ರಣದೀಪ್ ಸಿಂಗ್ ಸುರ್ಜೇವಾಲಾ, ಕೆ.ಸಿ. ವೇಣುಗೋಪಾಲ್, ಹರಿಪ್ರಸಾದ್ ಸೇರಿದಂತೆ ತಮ್ಮ ಪರ ನಿಂತ ಎಲ್ಲ ನಾಯಕರನ್ನು ಸ್ಮರಿಸಿದ ನಾಗೇಂದ್ರ, ಪಕ್ಷದ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಅವರಿಗೆ ರಾಜೀನಾಮೆ ಸಲ್ಲಿಸುವುದಾಗಿ ತಿಳಿಸಿದರು.1
- ಕಣ್ಣೀರಿಡುತ್ತಲೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ಘೋಷಣೆ! | ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಸಚಿವ ಬಿ. ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ. ರಾಜೀನಾಮೆ ಘೋಷಿಸುವ ವೇಳೆ ಬಿ.ನಾಗೇಂದ್ರ ಅವರು ತೀವ್ರ ಭಾವುಕರಾಗಿ ಕಣ್ಣೀರಿಟ್ಟ ಘಟನೆ ಗಮನ ಸೆಳೆಯಿತು. ಯಾವುದೇ ಒತ್ತಡವಿಲ್ಲದೆ ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದರು. ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸುವುದಾಗಿ ತಿಳಿಸಿದ ಅವರು, ಪಕ್ಷದ ವರಿಷ್ಠರಿಗೂ ಮನವಿ ಮಾಡಿರುವುದಾಗಿ ಹೇಳಿದರು. ಈ ಬೆಳವಣಿಗೆಯ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಮುಂದೇನು ಎಂಬ ಕುತೂಹಲ ಹೆಚ್ಚಾಗಿದೆ. ಸಂಪೂರ್ಣ ಸುದ್ದಿಗಾಗಿ ವಿಡಿಯೋ ನೋಡಿ ಮತ್ತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ ತಿಳಿಸಿ. #BNagendra #ಬಿನಾಗೇಂದ್ರ #KarnatakaPolitics #KarnatakaNews #BreakingNews #PoliticalNews #BangaloreNews #Congress #Karnataka #KannadaNews #ರಾಜಕೀಯ #ರಾಜೀನಾಮೆ #ಬೆಂಗಳೂರು #asnnews24kannada1
- ಒಂಟಿಸಲಗನ ಪುಂಡಾಟ: ಹಸು ಬಲಿ , ರೈತನಿಗೆ ತೀವ್ರಗಾಯ ಆಸ್ಪತ್ರೆಗೆ ದಾಖಲು ಮಳವಳ್ಳಿ: ಒಂಟಿ ಸಲಗದ ಪುಂಡಾಟಕ್ಕೆ ಒಂದು ಹಸು ಬಲಿಯಾಗಿ ರೈತನಿಗೆ ಕಾಲು ಮುರಿತಗೊಂಡಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಬಾಳೆಹೊನ್ನಿಗ ಬಳಿ ನಡೆದಿದೆ. ತಾಲ್ಲೂಕಿನ ಬಾಳೆಹೊನ್ನಿಗ ಗ್ರಾಮದ ರಾಜಶೇಖರರವರಿಗೆ ಸೇರಿದ ಹಸುವೇ ಸಾವನ್ನಪ್ಪಿದ್ದು , ಇದಲ್ಲದೇ ಎಲೆತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕುಳ್ಳಾಡಿ ಜೋಗಯ್ಯ ಎಂಬುವರ ಮೇಲೆ ದಾಳಿ ಮಾಡಿ ಕಾಲು ಮುರಿತಗೊಂಡಿದೆ. ಗಾಯಗೊಂಡ ವ್ಯಕ್ತಿಯನ್ನು ಅರಣ್ಯ ಇಲಾಖೆ ಅರಣ್ಯಾಧಿಕಾರಿ ಪ್ರಮೋದ್ ಹಾಗೂ ಸಿಬ್ಬಂದಿಗಳು ಹಲಗೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಅರಣ್ಯ ಇಲಾಖೆ ಆಧಿಕಾರಿ ಹಾಗೂ ಸಿಬ್ಬಂದಿಗಳು ಮತ್ತು ಹಲಗೂರು ಪೊಲೀಸರು ಕಾಡಾನೆಯನ್ನು ಬೀಮನಕಿಂಡಿ ಅರಣ್ಯ ಪ್ರದೇಶಕ್ಕೆ ಓಡಿಸಲು ಹರಸಾಹಸ ಪಟ್ಟರು ಎನ್ನಲಾಗಿದೆ.1