ರೈತ ಬಾಂಧವರು ತಾವು ಬೆಳೆದಿರುವ ಭತ್ತ ಮತ್ತು ರಾಗಿಯನ್ನು ಸರ್ಕಾರವು ಆರಂಭಿಸಿರುವ ಬೆಂಬಲ ಬೆಲೆಯ ಖರೀದಿ ಕೇಂದ್ರದಲ್ಲಿಯೇ ಮಾರಾಟ ಮಾಡಬೇಕು- ಶಾಸಕ ಹೆಚ್.ಟಿ.ಮಂಜು. ಕೆ.ಆರ್.ಪೇಟೆ,ಫೆ.16: ರೈತ ಬಾಂಧವರು ತಾವು ಬೆಳೆದಿರುವ ಭತ್ತ ಮತ್ತು ರಾಗಿಯನ್ನು ಸರ್ಕಾರವು ಆರಂಭಿಸಿರುವ ಬೆಂಬಲ ಬೆಲೆಯ ಖರೀದಿ ಕೇಂದ್ರದಲ್ಲಿಯೇ ಮಾರಾಟ ಮಾಡಬೇಕು. ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದರೆ ಕಷ್ಟಪಟ್ಟು ಬೆಳೆದ ಬೆಳೆಯ ಲಾಭವು ದಲ್ಲಾಳಿಯ ಪಾಲಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಹೆಚ್.ಟಿ.ಮಂಜು ರೈತರಲ್ಲಿ ಮನವಿ ಮಾಡಿದರು. ಅವರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ನಾಗರೀಕ ಸರಬರಾಜು ನಿಗಮದ ವತಿಯಿಂದ ಸರ್ಕಾರದ ಬೆಂಬಲಿ ಬೆಲೆಯಲ್ಲಿ ಭತ್ತ ಮತ್ತು ರಾಗಿ ಖರೀದಿ ಕೇಂದ್ರವನ್ನು ರಾಮದಾನ್ಯ ರಾಗಿಯ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ರೈತರು ಖರೀದಿ ಕೇಂದ್ರಕ್ಕೆ ಗುಣಮಟ್ಟದ ರಾಗಿ ಮತ್ತು ಭತ್ತವನ್ನು ಸರಬರಾಜು ಮಾಡಬೇಕು. ಯಾವುದೇ ಕಾರಣಕ್ಕೂ ಗುಣಮಟ್ಟ ಇಲ್ಲದೇ ಮಾರಾಟ ಮಾಡಬಾರದು. ರೈತರು ಮೋಸಗಾರರಲ್ಲ. ಅವರು ಬೆಳೆದ ರಾಗಿಯನ್ನು ಗುಣಮಟ್ಟವನ್ನು ಕಾಪಾಡಿಯೇ ಸರಕಾರದ ಬೆಂಬಲ ಬೆಲೆಯಲ್ಲಿ ಮಾರಾಟವನ್ನು ಮಾಡುತ್ತಾರೆ. ಆದರೆ ಮಧ್ಯವರ್ತಿಗಳು ಬೇರೆ ಭಾಗಗಳಿಂದ ರಾಗಿಯನ್ನು ಕಡಿಮೆ ಬೆಲೆಗೆ ಖರೀದಿಸಿ ನಮ್ಮದೆ ರೈತರ ಆರ್‌ಟಿಸಿಗಳನ್ನು ದುರುಪಯೋಪಡಿಸಿಕೊಂಡು ಸರಕಾರಕ್ಕೆ ಮಾರಾಟ ಮಾಡುತ್ತಾರೆ. ಇದರ ಬಗೆಗೆ ಅಧಿಕಾರಿಗಳು ಏಕೆ ಕ್ರಮವಹಿಸುತ್ತಿಲ್ಲ? ಒಂದು ಎಕರೆಗೆ ಎಷ್ಟು ರಾಗಿಯನ್ನು ಬೆಳೆಯಲಾಗುತ್ತದೆ ಎಂದು ಯೋಚಿಸಿ ಹೇಳಬೇಕಾಗಿಲ್ಲ. ಸಾಮಾನ್ಯ ಪ್ರಜ್ಞೆಯಿದ್ದರೆ ಸಾಕು. ಆದರೂ ಕೂಡಾ ಆರ್‌ಟಿಸಿ ಇದೆ ಎಂದು ಹೇಳಿಕೊಂಡು ಬರುವ ದಳ್ಳಾಳಿಗಳಿಗೆ ಬಿಸಿ ಮುಟ್ಟಿಸಬೇಕು ಎಂದು ಶಾಸಕ ಮಂಜು ಸಲಹೆ ನೀಡಿದರು. ನಮ್ಮ ತಾಲೂಕಿನಿಂದ ಒಟ್ಟು ಕೆ.ಆರ್.ಪೇಟೆಯಲ್ಲಿ 3563 ರೈತರು ರಾಗಿ ಖರೀದಿ ಕೇಂದ್ರದಲ್ಲಿ ನೊಂದಾಯಿಸಿಕೊಂಡಿದ್ದು, ಬಲ್ಲೇನಹಳ್ಳಿ ಖರೀದಿ ಕೇಂದ್ರದಲ್ಲಿ 1043 ರೈತರು ನೊಂದಾಯಿಸಿಕೊಂಡಿದ್ದಾರೆ. ಒಟ್ಟಾರೆ ನಮ್ಮ ತಾಲೂಕಿನಲ್ಲಿ 107670 ಕ್ವಿಂಟಾಲ್ ರಾಗಿಯನ್ನು ಸರ್ಕಾರ ಖರೀದಿಸಲಿದೆ. ಇನ್ನೂ ಕೂಡಾ ಸಮಯವಿದ್ದು ರೈತರು ಯಾವುದೆ ಗೊಂದಲಕ್ಕೊಳಗಾಗದೆ ಗುಣಮಟ್ಟದ ರಾಗಿಯನ್ನು ಮಾರಾಟ ಮಾಡಿ ಎಂದು ಶಾಸಕರು ಹೇಳಿದರು. ಕಾರ್ಯಕ್ರಮದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಞ ರ‍್ನೇನಹಳ್ಳಿ ಬಲದೇವ್, ಎಪಿಎಂಸಿ ಮಾಜಿ ಅಧ್ಯಕ್ಷ ಹೊನ್ನೇನಹಳ್ಳಿ ನಾಗರಾಜೇಗೌಡ, ಎಪಿಎಂಸಿ ಕಾರ್ಯದರ್ಶಿ ವಿದ್ಯಾ, ಕೆಎಸ್‌ಎಫ್‌ಸಿ ವ್ಯವಸ್ಥಾಪಕ ಮನೋಹರ್, ಆಹಾರ ಇಲಾಖೆಯ ಅಧಿಕಾರಿ ನಟರಾಜ್, ಜೆಡಿಎಸ್ ಮುಖಂಡ ಪಿಕೆಜಿ ಮಹೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಸಿದ್ದರು, ಚಿತ್ರಶೀರ್ಷಿಕೆ:16.ಕೆ.ಆರ್.ಪಿ-02: ಕೆ.ಆರ್.ಪೇಟೆ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ನಾಗರೀಕ ಸರಬರಾಜು ನಿಗಮದ ವತಿಯಿಂದ ಸರ್ಕಾರದ ಬೆಂಬಲಿ ಬೆಲೆಯಲ್ಲಿ ಭತ್ತ ಮತ್ತು ರಾಗಿ ಖರೀದಿ ಕೇಂದ್ರವನ್ನು ಶಾಸಕ ಹೆಚ್.ಟಿ.ಮಂಜು ರಾಮದಾನ್ಯ ರಾಗಿಯ ರಾಶಿಗೆ ಪೂಜೆ ಸಲ್ಲಿಸಿ ನೆರವೇರಿಸಿ ಮಾತನಾಡಿದರು. ===============================
ರೈತ ಬಾಂಧವರು ತಾವು ಬೆಳೆದಿರುವ ಭತ್ತ ಮತ್ತು ರಾಗಿಯನ್ನು ಸರ್ಕಾರವು ಆರಂಭಿಸಿರುವ ಬೆಂಬಲ ಬೆಲೆಯ ಖರೀದಿ ಕೇಂದ್ರದಲ್ಲಿಯೇ ಮಾರಾಟ ಮಾಡಬೇಕು- ಶಾಸಕ ಹೆಚ್.ಟಿ.ಮಂಜು. ಕೆ.ಆರ್.ಪೇಟೆ,ಫೆ.16: ರೈತ ಬಾಂಧವರು ತಾವು ಬೆಳೆದಿರುವ ಭತ್ತ ಮತ್ತು ರಾಗಿಯನ್ನು ಸರ್ಕಾರವು ಆರಂಭಿಸಿರುವ ಬೆಂಬಲ ಬೆಲೆಯ ಖರೀದಿ ಕೇಂದ್ರದಲ್ಲಿಯೇ ಮಾರಾಟ ಮಾಡಬೇಕು. ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದರೆ ಕಷ್ಟಪಟ್ಟು ಬೆಳೆದ ಬೆಳೆಯ ಲಾಭವು ದಲ್ಲಾಳಿಯ ಪಾಲಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಹೆಚ್.ಟಿ.ಮಂಜು ರೈತರಲ್ಲಿ ಮನವಿ ಮಾಡಿದರು. ಅವರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ನಾಗರೀಕ ಸರಬರಾಜು ನಿಗಮದ ವತಿಯಿಂದ ಸರ್ಕಾರದ
ಬೆಂಬಲಿ ಬೆಲೆಯಲ್ಲಿ ಭತ್ತ ಮತ್ತು ರಾಗಿ ಖರೀದಿ ಕೇಂದ್ರವನ್ನು ರಾಮದಾನ್ಯ ರಾಗಿಯ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ರೈತರು ಖರೀದಿ ಕೇಂದ್ರಕ್ಕೆ ಗುಣಮಟ್ಟದ ರಾಗಿ ಮತ್ತು ಭತ್ತವನ್ನು ಸರಬರಾಜು ಮಾಡಬೇಕು. ಯಾವುದೇ ಕಾರಣಕ್ಕೂ ಗುಣಮಟ್ಟ ಇಲ್ಲದೇ ಮಾರಾಟ ಮಾಡಬಾರದು. ರೈತರು ಮೋಸಗಾರರಲ್ಲ. ಅವರು ಬೆಳೆದ ರಾಗಿಯನ್ನು ಗುಣಮಟ್ಟವನ್ನು ಕಾಪಾಡಿಯೇ ಸರಕಾರದ ಬೆಂಬಲ ಬೆಲೆಯಲ್ಲಿ ಮಾರಾಟವನ್ನು ಮಾಡುತ್ತಾರೆ. ಆದರೆ ಮಧ್ಯವರ್ತಿಗಳು ಬೇರೆ ಭಾಗಗಳಿಂದ ರಾಗಿಯನ್ನು ಕಡಿಮೆ ಬೆಲೆಗೆ ಖರೀದಿಸಿ ನಮ್ಮದೆ ರೈತರ ಆರ್‌ಟಿಸಿಗಳನ್ನು ದುರುಪಯೋಪಡಿಸಿಕೊಂಡು ಸರಕಾರಕ್ಕೆ ಮಾರಾಟ ಮಾಡುತ್ತಾರೆ. ಇದರ ಬಗೆಗೆ ಅಧಿಕಾರಿಗಳು ಏಕೆ
ಕ್ರಮವಹಿಸುತ್ತಿಲ್ಲ? ಒಂದು ಎಕರೆಗೆ ಎಷ್ಟು ರಾಗಿಯನ್ನು ಬೆಳೆಯಲಾಗುತ್ತದೆ ಎಂದು ಯೋಚಿಸಿ ಹೇಳಬೇಕಾಗಿಲ್ಲ. ಸಾಮಾನ್ಯ ಪ್ರಜ್ಞೆಯಿದ್ದರೆ ಸಾಕು. ಆದರೂ ಕೂಡಾ ಆರ್‌ಟಿಸಿ ಇದೆ ಎಂದು ಹೇಳಿಕೊಂಡು ಬರುವ ದಳ್ಳಾಳಿಗಳಿಗೆ ಬಿಸಿ ಮುಟ್ಟಿಸಬೇಕು ಎಂದು ಶಾಸಕ ಮಂಜು ಸಲಹೆ ನೀಡಿದರು. ನಮ್ಮ ತಾಲೂಕಿನಿಂದ ಒಟ್ಟು ಕೆ.ಆರ್.ಪೇಟೆಯಲ್ಲಿ 3563 ರೈತರು ರಾಗಿ ಖರೀದಿ ಕೇಂದ್ರದಲ್ಲಿ ನೊಂದಾಯಿಸಿಕೊಂಡಿದ್ದು, ಬಲ್ಲೇನಹಳ್ಳಿ ಖರೀದಿ ಕೇಂದ್ರದಲ್ಲಿ 1043 ರೈತರು ನೊಂದಾಯಿಸಿಕೊಂಡಿದ್ದಾರೆ. ಒಟ್ಟಾರೆ ನಮ್ಮ ತಾಲೂಕಿನಲ್ಲಿ 107670 ಕ್ವಿಂಟಾಲ್ ರಾಗಿಯನ್ನು ಸರ್ಕಾರ ಖರೀದಿಸಲಿದೆ. ಇನ್ನೂ ಕೂಡಾ ಸಮಯವಿದ್ದು ರೈತರು ಯಾವುದೆ ಗೊಂದಲಕ್ಕೊಳಗಾಗದೆ ಗುಣಮಟ್ಟದ ರಾಗಿಯನ್ನು ಮಾರಾಟ ಮಾಡಿ
ಎಂದು ಶಾಸಕರು ಹೇಳಿದರು. ಕಾರ್ಯಕ್ರಮದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಞ ರ‍್ನೇನಹಳ್ಳಿ ಬಲದೇವ್, ಎಪಿಎಂಸಿ ಮಾಜಿ ಅಧ್ಯಕ್ಷ ಹೊನ್ನೇನಹಳ್ಳಿ ನಾಗರಾಜೇಗೌಡ, ಎಪಿಎಂಸಿ ಕಾರ್ಯದರ್ಶಿ ವಿದ್ಯಾ, ಕೆಎಸ್‌ಎಫ್‌ಸಿ ವ್ಯವಸ್ಥಾಪಕ ಮನೋಹರ್, ಆಹಾರ ಇಲಾಖೆಯ ಅಧಿಕಾರಿ ನಟರಾಜ್, ಜೆಡಿಎಸ್ ಮುಖಂಡ ಪಿಕೆಜಿ ಮಹೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಸಿದ್ದರು, ಚಿತ್ರಶೀರ್ಷಿಕೆ:16.ಕೆ.ಆರ್.ಪಿ-02: ಕೆ.ಆರ್.ಪೇಟೆ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ನಾಗರೀಕ ಸರಬರಾಜು ನಿಗಮದ ವತಿಯಿಂದ ಸರ್ಕಾರದ ಬೆಂಬಲಿ ಬೆಲೆಯಲ್ಲಿ ಭತ್ತ ಮತ್ತು ರಾಗಿ ಖರೀದಿ ಕೇಂದ್ರವನ್ನು ಶಾಸಕ ಹೆಚ್.ಟಿ.ಮಂಜು ರಾಮದಾನ್ಯ ರಾಗಿಯ ರಾಶಿಗೆ ಪೂಜೆ ಸಲ್ಲಿಸಿ ನೆರವೇರಿಸಿ ಮಾತನಾಡಿದರು. ===============================
- ಅರಕಲಗೂಡು ತಾಲೂಕು ಕೊಡಕಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀ ದೇವಿ, ಶ್ರೀ ಮಾರಮ್ಮ ಮತ್ತು ಶ್ರೀ ಗ್ರಾಮ ದೇವತೆ, ದೇವರುಗಳ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನಗಳ ಉದ್ಘಾಟನಾ ಸಮಾರಂಭ ಫೆಬ್ರವರಿ 19ರಿಂದ 27ರ ತನಕ ಜರುಗಲಿದೆ ಎಂದು ಗ್ರಾಮದ ಮುಖಂಡ ಕೊಡಕಹಳ್ಳಿ ಅಶೋಕ್ ತಿಳಿಸಿದರು. ನೂತನವಾಗಿ ನಿರ್ಮಾಣಗೊಂಡಿರುವ ದೇವಸ್ಥಾನಗಳಲ್ಲಿ ವಿವಿಧ ಪೂಜಾ ಕಾರ್ಯಗಳು, ಉತ್ಸವ ಅದ್ದೂರಿಯಾಗಿ ನಡೆಯಲಿದೆ, ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರಾದ ಎ. ಮಂಜು ಸೇರಿದಂತೆ ವಿವಿಧ ಗಣ್ಯರು, ಮಠಾಧೀಶರು, ಮುಖಂಡರು ಭಾಗವಹಿಸುವರು. ಈ ದೇವರ ಕಾರ್ಯದಲ್ಲಿ ಕೊಡಕಹಳ್ಳಿ ಸೇರಿದಂತೆ ಸುತ್ತಾಮುತ್ತಲ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು. #templeopening #Kodakahalli #villegevibes❤️ #Arkalgud #temple #News5Kannada1
- *ಭಾರತ ನಲ್ಲಿ ವೈರಲ್*1
- ಮಂಡ್ಯ ನಗರದ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಮೇಲ್ ಬಂದ ಹಿನ್ನೆಲೆ ಕೋರ್ಟ್ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಮಾಹಿತಿ ತಿಳಿದ ತಕ್ಷಣ ಪೊಲೀಸ್ ಇಲಾಖೆ ಹಾಗೂ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ದೌಡಾಯಿಸಿ ತಪಾಸಣೆ ನಡೆಸಿದರು. ಕೋರ್ಟ್ ಆವರಣವನ್ನು ಖಾಲಿ ಮಾಡಿಸಿ ಭದ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿಸಲಾಯಿತು. ಪ್ರಾಥಮಿಕ ಪರಿಶೀಲನೆಯಲ್ಲಿ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.1
- Students Of Govt U.H.P.B.SCHOOL Chamraja Double Road KR Mohalla Mysuru Organised Science & Arts Exhibitions1
- ಜಾತ್ರೆ ವೇಳೆ ನಡೆಯುತ್ತಿದ್ದ ಜಗಳ ಬಿಡಿಸಿದ ತಪ್ಪಿಗೆ ಹೋಂಗಾರ್ಡ್ ಮೇಲೆ ಹಲ್ಲೆ ನಡೆಸಿದ ಯುವಕರ ಗುಂಪು ಬೈಕ್ ಗೆ ಬೆಂಕಿ ಹಚ್ಚಿ ಸಜೀವ ದಹನಕ್ಕೆ ಯತ್ನಿಸಿದ ಶಾಕಿಂಗ್ ಪ್ರಕರಣ ನಂಜನಗೂಡಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಏಚಗುಂಡ್ಲ ಗ್ರಾಮದಲ್ಲಿ ನಡೆದಿದೆ.ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಡ್ಯೂಟಿ ಮಾಡುವ ಹೋಂಗಾರ್ಡ್ ರಂಗಸ್ವಾಮಿ ನಾಯಕ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆ.ರಂಗಸ್ವಾಮಿ ನಾಯಕರಿಗೆ ಸೇರಿದ ಬೈಕ್ ಗೆ ಬೆಂಕಿ ಹಚ್ಚಿ ಗೂಂಡಾಯಿಸಂ ಪ್ರದರ್ಶಿಸಿದ್ದಾರೆ.ಪುಂಡರಿಂದ ದಾಳಿಗೆ ಸಿಲುಕಿದ ರಂಗಸ್ವಾಮಿನಾಯಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಠಾಣೆಯಿಂದ ನಿಯೋಜನೆಗೊಂಡು ಕರ್ತವ್ಯ ನಿರ್ವಹಿಸಿದ ಹೋಂಗಾರ್ಡ್ ರಂಗಸ್ವಾಮಿ ನಾಯಕನ ಮೇಲೆ ಹಲ್ಲೆ ನಡೆಸಿ ಬೈಕ್ ಸುಟ್ಟುಹಾಕಿದ್ದರೂ ಪೊಲೀಸರು ಪ್ರಕರಣ ದಾಖಲಿಸದಿರುವುದು ಅಚ್ಚರಿಗೆ ಕಾರಣವಾಗಿದೆ. ಬುಧುವಾರ ಏಚಗುಂಡ್ಲ ಗ್ರಾಮದಲ್ಲಿ ಜಾತ್ರೆ ನಡೆಯುತ್ತಿತ್ತು.ಭದ್ರತೆಗಾಗಿ ಹೋಂಗಾರ್ಡ್ ರಂಗಸ್ವಾಮಿಯವರನ್ನ ನಿಯೋಜಿಸಲಾಗಿತ್ತು.ಈ ವೇಳೆ ಕೆಲವು ಯುವಕರು ಕುಡಿದು ಗಲಾಟೆ ಮಾಡಿಕೊಂಡಿದ್ದರು.ಈ ವೇಳೆ ರಂಗಸ್ವಾಮಿ ಗಲಾಟೆ ಬಿಡಿಸಿದ್ರು.ಮರುದಿನ ಮಹದೇವಸ್ವಾಮಿ ಹಾಗೂ ರಮೇಶ್ ರವರು ಐದಾರು ಜನರ ಗುಂಪು ಕಟ್ಟಿಕೊಂಡು ರಂಗಸ್ವಾಮಿ ಮೇಲೆ ಅಟ್ಯಾಕ್ ಮಾಡಿದ್ದಾರೆ.ತೀವ್ರಹಲ್ಲೆ ನಡೆಸಿ ಬೈಕ್ ಗೆ ಬೆಂಕಿ ಹಚ್ಚಿದ್ದಾರೆ.ತನಗೂ ಬೆಂಕಿ ಹಚ್ಚುವುದು ಗ್ಯಾರೆಂಟಿ ಎಂದು ಅರಿತ ರಂಗಸ್ವಾಮಿ ಅಲ್ಲಿಂದ ತಪ್ಪಿಸಿಕೊಂಡು ಗ್ರಾಮಾಂತರ ಠಾಣೆಗೆ ಬಂದು ಮಾಹಿತಿ ನೀಡಿದ್ದಾರೆ.ಹಲ್ಲೆಗೆ ಒಳಗಾದ ರಂಗಸ್ವಾಮಿ ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಘಟನೆ ನಡೆದು ನಾಲ್ಕು ದಿನಗಳ ಕಳೆದರೂ ಯಾವುದೇ ಪ್ರಕರಣ ದಾಖಲಾಗದಿರುವುದು ಅಚ್ಚರಿಗೆ ಕಾರಣವಾಗಿದೆ.ಹೋಂಗಾರ್ಡ್ ಗೇ ಭದ್ರತೆ ಇಲ್ಲದಿದ್ದಲ್ಲಿ ಸಾರ್ವಜನಿಕರಿಗೆ ಭದ್ರತೆ ಬಗ್ಗೆ ಅನುಮಾನ ಮೂಡುತ್ತಿದೆ. ಕೆಲವೇ ದಿನಗಳ ಹಿಂದೆ ನಂಜನಗೂಡಿನಲ್ಲಿ ಬೈಕ್ ಸಮೇತ ಯುವಕನನ್ನ ಸುಟ್ಟು ಕೊಂದ ಘಟನೆ ಇನ್ನೂ ಮಾಸದಿರುವ ಸಮಯದಲ್ಲಿ ಈ ಪ್ರಕರಣ ಬೆಚ್ಚಿಬೀಳಿಸಿದೆ.ಇನ್ನಾದ್ರೂ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಗೂಂಡಾ ವರ್ತನೆ ತೋರಿದ ಯುವಕರ ವಿರುದ್ದ ಪ್ರಕರಣ ದಾಖಲಿಸುವರೇ...?1
- ಪೊಲೀಸ್ ರು ಕಾನೂನು ರಕ್ಷಕರು ಹೀಗೆಲ್ಲ ಮಾಡಬಾರದು.🙏🏼🙏🏼🙏🏼🫣 #DelhiPolice #MumbaiPolice #UPPolice #KarnatakaPolice , #IndianPolice, #PoliceManthan, #UPPolice, and #DigitalPolicing. #LawAndOrder KannadaComedy #FunnyKannada #KannadaMemes #UttaraKarnatakaComedy #KannadaTikTok #viral #Sadhana #sadhanam #homeopathy #Krishnanagar #sadhanayogi #bhms #sadhanayogeshagowda #drsadhanahomeopathyconsultanttumkur #Radha'sHomeopathy , #HomeocareInternational #BestHomeopathyClini1
- ಮಳವಳ್ಳಿ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ರಥೋತ್ಸವ ಅಪಾರಭಕ್ತರಿಂದ ದರ್ಶನ ವಿಶೇಷ ಪೂಜೆ1
- ಅರಕಲಗೂಡು: ಪಟ್ಟಣದ ಕೋಟೆ ಪುರಾಣ ಪ್ರಸಿದ್ದ ಅಮೃತೇಶ್ವರಸ್ವಾಮಿ ಮಹಾ ರಥೋತ್ಸವವು ಸೋಮವಾರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು. ಬೆಳಿಗ್ಗೆ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ಅಭಿಷೇಕ, ಪೂಜಾ ಕೈಂಕರ್ಯಗಳು ನೆರವೇರಿದವು. ಬಳಿಕ ಉತ್ಸವ ಮೂರ್ತಿಗಳನ್ನು ಅಲಂಕರಿಸಿ ಕೃಷ್ಣಗಂಧೋತ್ಸವ ನಡೆಸಲಾಯಿತು. ಉತ್ಸವದಲ್ಲಿ ಬಂದ ಮೂರ್ತಿಗಳನ್ನು ಅಲಂಕರಿಸಿದ ರಥದಲ್ಲಿ ಪ್ರತಿಷ್ಠಾಪಿಸಿ ಪೂಜಾವಿಧಿಗಳನ್ನು ನಡೆಸಲಾಯಿತು. ಅರೇಮಾದನಹಳ್ಳಿ ವಿಶ್ವಕರ್ಮ ಮೂಲ ಮಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ತಹಶೀಲ್ದಾರ್ ಕೆ.ಸಿ. ಸೌಮ್ಯ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ನೆರೆದಿದ್ದ ಭಕ್ತರು ಶಿವನಾಮ ಸ್ಮರಣೆ ಮಾಡುತ್ತಾ ರಥ ಬೀದಿಯಲ್ಲಿ ತೇರನ್ನು ಎಳೆದು ಸಂಭ್ರಮಿಸಿದರು. ನಾದಸ್ವರ, ತಮಟೆ ವಾದ್ಯಗಳು ರಥೋತ್ಸವಕ್ಕೆ ಮೆರಗು ನೀಡಿತು. ತಮಟೆ ವಾದ್ಯದ ಲಯಕ್ಕೆ ಯುವಕರು, ಚಿಣ್ಣರು, ಮಹಿಳೆಯರು ಹೆಜ್ಜೆಹಾಕಿದರು. ತೇರನ್ನು ಎಳೆಯುತ್ತಿದ್ದ ಭಕ್ತರಿಗೆ ಬಿಸಿಲಿನ ದಗೆ ನೀಗಿಸಲು ಮನೆ, ಮನೆಗಳಲ್ಲಿ ಮಜ್ಜಿಗೆ, ಪಾನಕ, ಮುಂತಾದ ತಂಪು ಪಾನಿಯಗಳನ್ನು ವಿತರಿಸಲಾಯಿತು. ರಥ ಸ್ವಸ್ಥಾನ ಸೇರಿದ ಬಳಿಕ ಪ್ರಸಾದ ವಿನಿಯೋಗ ನಡೆಸಲಾಯಿತು. ಪಪಂ ಮುಖ್ಯಧಿಕಾರಿ ಸಿ.ಡಿ. ನಾಗೇಂದ್ರಕುಮಾರ್, ಕಂದಾಯ ನಿರೀಕ್ಷಕ ಕೆ.ಸಿ. ಲೋಕೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪುಟ್ಟರಾಜ್, ಮುಖಂಡರಾದ ಮುತ್ತಿಗೆ ರಾಜೇಗೌಡ, ವಿ. ಎ. ನಂಜುಂಡಸ್ವಾಮಿ, ನರಸೇಗೌಡ, ವೆಂಕಟೇಶ್, ರಮೇಶ್ ವಾಟಾಳ್, ನಿತ್ಯಜ್ಯೋತಿ ನಾಗರಾಜ್, ಎ.ಎಸ್. ಹಿರಣ್ಣಯ್ಯ, ಎ.ಎನ್. ಗಣೇಶಮೂರ್ತಿ, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನರಸಿಂಹ ಮೂರ್ತಿ, ಕಾರ್ಯದರ್ಶಿ ರಮೇಶ್ ಉಪಸ್ಥಿತರಿದ್ದರು. ರಾತ್ರಿ ಶಾಂತೋತ್ಸವ ನಡೆಯಿತು.1