logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್.ಪಿ.ಸಿ ವಾರಂಟ್ ಅಸಾಮಿಯ ಬಂಧನ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್.ಪಿ.ಸಿ ವಾರಂಟ್ ಅಸಾಮಿಯನ್ನು ಬಂಧಿಸಲಾಗಿದೆ. ಸುಹಾನ್ @ ಸೋನು, ಬಂಧಿತ ವ್ಯಕ್ತಿ. ಆರೋಪಿತನ ವಿರುದ್ದ ವಿವಿಧ ಠಾಣೆಗಳಲ್ಲಿ ಕೇಸ್ ಗಳು ದಾಖಲಾಗಿತ್ತು. ಉರ್ವ ಪೊಲೀಸ್ ಠಾಣಾ ಅ.ಕ್ರ. 62/2016, ಕಲಂ. 399, 120(B) ಐಪಿಸಿ ಕೇಸ್, ಉರ್ವ ಪೊಲೀಸ್ ಠಾಣಾ ಅ.ಕ್ರ 126/2017, ಕಲಂ 120(B), 399, 402, 188 ಐಪಿಸಿ ಕೇಸ್, ಮಂಗಳೂರು ಉತ್ತರ ಪೊಲೀಸ್ ಠಾಣಾ ಅ.ಕ್ರ, 32/2020 ಕಲಂ. 143 147 148 504 506 323 324 ಜೊತೆಗೆ 149 ಐಪಿಸಿ ಕೇಸ್ ದಾಖಲಾಗಿತ್ತು. ಆರೋಪಿತನು ಮಂಗಳೂರು ನಗರದ ಉರ್ವ ಪೊಲೀಸ್ ಠಾಣೆ ಮತ್ತು ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಇತನ ವಿರುದ್ದ ಉರ್ವ ಪೊಲೀಸ್ ಠಾಣಾ ಪ್ರಕರಣದಲ್ಲಿ ನ್ಯಾಯಾಲಯವು ಎಲ್.ಪಿ.ಸಿ ವಾರಂಟ್ ಹೊರಡಿಸಿತ್ತು. ಆರೋಪಿಯನ್ನು ಮಹಾರಾಷ್ಟ್ರ ರಾಜ್ಯ ಮುಂಬೈನಲ್ಲಿ ಉರ್ವ ಪೊಲೀಸ್ ಠಾಣಾ ಎಎಸ್ಐ ಲಕ್ಷ್ಮಣ್ ಮತ್ತು ಸಿಬ್ಬಂದಿರವರು ಪತ್ತೆಮಾಡಿ ದಸ್ತಗಿರಿ ಮಾಡಿದ್ದು, ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

19 hrs ago
user_Shamsheer Budoli
Shamsheer Budoli
Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
19 hrs ago

9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್.ಪಿ.ಸಿ ವಾರಂಟ್ ಅಸಾಮಿಯ ಬಂಧನ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್.ಪಿ.ಸಿ ವಾರಂಟ್ ಅಸಾಮಿಯನ್ನು ಬಂಧಿಸಲಾಗಿದೆ. ಸುಹಾನ್ @ ಸೋನು, ಬಂಧಿತ ವ್ಯಕ್ತಿ. ಆರೋಪಿತನ ವಿರುದ್ದ ವಿವಿಧ ಠಾಣೆಗಳಲ್ಲಿ ಕೇಸ್ ಗಳು ದಾಖಲಾಗಿತ್ತು. ಉರ್ವ ಪೊಲೀಸ್ ಠಾಣಾ ಅ.ಕ್ರ. 62/2016, ಕಲಂ. 399, 120(B) ಐಪಿಸಿ ಕೇಸ್, ಉರ್ವ ಪೊಲೀಸ್ ಠಾಣಾ ಅ.ಕ್ರ 126/2017, ಕಲಂ 120(B), 399, 402, 188 ಐಪಿಸಿ ಕೇಸ್, ಮಂಗಳೂರು ಉತ್ತರ ಪೊಲೀಸ್ ಠಾಣಾ ಅ.ಕ್ರ, 32/2020 ಕಲಂ. 143 147 148 504 506 323 324 ಜೊತೆಗೆ 149 ಐಪಿಸಿ ಕೇಸ್ ದಾಖಲಾಗಿತ್ತು. ಆರೋಪಿತನು ಮಂಗಳೂರು ನಗರದ ಉರ್ವ ಪೊಲೀಸ್ ಠಾಣೆ ಮತ್ತು ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಇತನ ವಿರುದ್ದ ಉರ್ವ ಪೊಲೀಸ್ ಠಾಣಾ ಪ್ರಕರಣದಲ್ಲಿ ನ್ಯಾಯಾಲಯವು ಎಲ್.ಪಿ.ಸಿ ವಾರಂಟ್ ಹೊರಡಿಸಿತ್ತು. ಆರೋಪಿಯನ್ನು ಮಹಾರಾಷ್ಟ್ರ ರಾಜ್ಯ ಮುಂಬೈನಲ್ಲಿ ಉರ್ವ ಪೊಲೀಸ್ ಠಾಣಾ ಎಎಸ್ಐ ಲಕ್ಷ್ಮಣ್ ಮತ್ತು ಸಿಬ್ಬಂದಿರವರು ಪತ್ತೆಮಾಡಿ ದಸ್ತಗಿರಿ ಮಾಡಿದ್ದು, ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

More news from Hassan and nearby areas
  • ಅರಕಲಗೂಡು: ತಂಬಾಕು ಬೆಳೆಗಾರರಿಗೆ ಸರಿಯಾದ ಬೆಲೆ ನೀಡದೆ ತಂಬಾಕು ಮಂಡಳಿ ಮತ್ತು ಕಂಪನಿಗಳು ಬೆಳೆಗಾ ರರನ್ನು ವಂಚಿಸುತ್ತಿದ್ದು, ಅದನ್ನು ವಿರೋಧಿಸಿ ಏ.3 ರಂದು ಬೆಳಿಗ್ಗೆ 11 ಗಂಟೆಯಿಂದ ಭಾರತೀಯ ಕಿಸಾನ್ ಸಂಘ ಮತ್ತು ತಂಬಾಕು ಬೆಳೆಗಾರರು ಅಹೋರಾತ್ರಿ ಧರಣಿ ಹಮ್ಮಿಕೊಂಡಿರು ವುದಾಗಿ ಕಿಸಾನ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಂದಿಗನಹಳ್ಳಿ ರವಿ ಅವರು ತಿಳಿಸಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಂಬಾಕು ಮಂಡಳಿ ವಹಿ ವಾಟು ಆರಂಭಿಸಿ 6 ತಿಂಗಳು ಕಳೆದರೂ ಇನ್ನೂ ಅರ್ಧಷ್ಟು ತಂಬಾಕು ಮಾರಾಟ ಕಂಡಿಲ್ಲ. ಬೆಳೆಗಾರರು ಮಂಡಳಿಗೆ ತರುವ ತಂಬಾಕನ್ನು ಕಂಪನಿಗಳು ತಮಗೆ ಬೇಕಾದ್ದನ್ನು ಇಷ್ಟಬಂದಷ್ಟು ಧರ ನಿಗಧಿಮಾಡಿ ಕೊಳ್ಳುತ್ತಿವೆ. ಬೆಳೆಗಾ ರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರೂ ಮಂಡಳಿ ರೈತರಿಗೆ ನ್ಯಾಯ ದೊರಕಿಸಿ ಕೊಡಲು ವಿಫಲವಾಗಿದೆ. ಅದನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿ ಕೊಂಡಿದ್ದು ಎಲ್ಲಾ ರೈತ ಪರ ಸಂಘಟ ನೆಗಳು, ಬೆಳೆಗಾರರೂ ಪ್ರತಿಭಟನೆ . ಯಲ್ಲಿ ಪಾಲ್ಗೊಳ್ಳುವ ಮೂಲಕ ಬೆಳೆಗಾರರಿಗೆ ನ್ಯಾಯಾ ದೊರಕಿಸಿ ಕೊಡಲು ಸಹಕರಿಸುವಂತೆ ಮನವಿ ಮಾಡಿದರು. ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸೀಬಳ್ಳಿ ಯೋಗಣ್ಣ ಮಾತನಾಡಿ, ಕಳೆದ ವರ್ಷದ ಅ.10 ರಂದು ತಂಬಾಕು ವಹಿವಾಟು ಪ್ರಾರಂಭವಾಗಿದ್ದು, ಈ ವರೆಗೂ ಬೆಲೆ ಸ್ಥಿರತೆ ಕಂಡುಕೊಂಡಿಲ್ಲ, ಪ್ರಾರಂಭದಲ್ಲಿ ಆಂಧ್ರದಲ್ಲಿ ರೂ. 450 ದರ ನಿಗದಿಯಾದರೆ ಕರ್ನಾಟಕದಲ್ಲಿ ರೂ. 350 ಬೆಲೆ ನಿಗಧಿಯಾಗಿತ್ತು. ಬಳಿಕ ದಿನೇ, ದಿನೇ ದರ ಕುಸಿಯುತ್ತಲೆ ಸಾಗುತ್ತಿದೆ. ಹಾಸನ ಮತ್ತು ಮೈಸೂರು ಜಿಲ್ಲೆಗಳ ಜನಪ್ರತಿನಿಧಿಗಳು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕೇಂದ್ರ ವಾಣಿಜ್ಯ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಪರಿಹಾರಕ್ಕೆ ಮಾತುಕತೆ ನಡೆಸಿದರೂ ಫಲಪ್ರದವಾಗಿಲ್ಲ. ಸಂಸದರಾದ ಯಧುವೀರ್ ಮತ್ತು ಶ್ರೇಯಸ್ ಪಠೇಲ್ ಸಂಸತ್‌ನಲ್ಲಿ ಸಮಸ್ಯೆ ಬಗ್ಗೆ ಗಮನ ಸಳೆದರೂ ಪ್ರಯೋಜನವಾ ಗಿಲ್ಲ. ಬೆಳೆಗಾರರು ಹೋರಾಟದ ಹಾದಿ ಹಿಡಿಯಬೇಕಾಗಿದೆ. ಸಂಸತ್ ಹಾಗೂ ಸದಸನದಲ್ಲಿ ನ್ಯಾಯ ದೊರಕಿಸಲು ಸಾಧ್ಯವಾಗದ ಜನಪ್ರತಿಗಳು ಹೋರಾ ಟದ ಹಾದಿ ಹಿಡಿದಿರುವ ರೈತರೊಂದಿಗೆ ಸೇರಿ ಪ್ರತಿಭಟನೆ ಮೂಲಕ ಪರಿಹಾರ ದೊರಕಿಸಲು ನೆರವಾಗಬೇಕು. ವಾರ್ಷಿಕ ರೂ. 45 ಸಾವಿರ ಕೋಟಿ ವಿದೇಶಿ ವಿನಿಮಯ ಗಳಿಸುವ ತಂಬಾಕು ಬೆಳೆಗಾರರ ಸಮಸ್ಯೆ ಕುರಿತು ಕೇಂದ್ರ ಸರ್ಕಾರ, ವಾಣಿಜ್ಯ ಇಲಾಖೆ ಹಾಗೂ ತಂಬಾಕು ಮಂಡಳಿ ಗಮನ ಹರಿಸದೆ ನಿರ್ಲಕ್ಷ್ಯ ತೋರುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಮುಖಂಡರಾದ ಮಂಜಣ್ಣ, ವಿರೇಂದ್ರ, ಸಂಜು, ವೇದಾನಂದ ಗೋಷ್ಠಿಯಲ್ಲಿದ್ದರು.
    1
    ಅರಕಲಗೂಡು: ತಂಬಾಕು ಬೆಳೆಗಾರರಿಗೆ ಸರಿಯಾದ ಬೆಲೆ ನೀಡದೆ ತಂಬಾಕು ಮಂಡಳಿ ಮತ್ತು ಕಂಪನಿಗಳು ಬೆಳೆಗಾ ರರನ್ನು ವಂಚಿಸುತ್ತಿದ್ದು, ಅದನ್ನು ವಿರೋಧಿಸಿ ಏ.3 ರಂದು ಬೆಳಿಗ್ಗೆ 11 ಗಂಟೆಯಿಂದ ಭಾರತೀಯ ಕಿಸಾನ್ ಸಂಘ ಮತ್ತು ತಂಬಾಕು ಬೆಳೆಗಾರರು ಅಹೋರಾತ್ರಿ ಧರಣಿ ಹಮ್ಮಿಕೊಂಡಿರು ವುದಾಗಿ ಕಿಸಾನ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಂದಿಗನಹಳ್ಳಿ ರವಿ ಅವರು ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಂಬಾಕು ಮಂಡಳಿ ವಹಿ ವಾಟು ಆರಂಭಿಸಿ 6 ತಿಂಗಳು ಕಳೆದರೂ ಇನ್ನೂ ಅರ್ಧಷ್ಟು ತಂಬಾಕು ಮಾರಾಟ ಕಂಡಿಲ್ಲ. ಬೆಳೆಗಾರರು ಮಂಡಳಿಗೆ ತರುವ ತಂಬಾಕನ್ನು ಕಂಪನಿಗಳು ತಮಗೆ ಬೇಕಾದ್ದನ್ನು ಇಷ್ಟಬಂದಷ್ಟು ಧರ ನಿಗಧಿಮಾಡಿ ಕೊಳ್ಳುತ್ತಿವೆ. ಬೆಳೆಗಾ ರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರೂ ಮಂಡಳಿ ರೈತರಿಗೆ ನ್ಯಾಯ ದೊರಕಿಸಿ ಕೊಡಲು ವಿಫಲವಾಗಿದೆ. ಅದನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿ ಕೊಂಡಿದ್ದು ಎಲ್ಲಾ ರೈತ ಪರ ಸಂಘಟ ನೆಗಳು, ಬೆಳೆಗಾರರೂ ಪ್ರತಿಭಟನೆ . ಯಲ್ಲಿ ಪಾಲ್ಗೊಳ್ಳುವ ಮೂಲಕ ಬೆಳೆಗಾರರಿಗೆ ನ್ಯಾಯಾ ದೊರಕಿಸಿ ಕೊಡಲು ಸಹಕರಿಸುವಂತೆ ಮನವಿ ಮಾಡಿದರು.
ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸೀಬಳ್ಳಿ ಯೋಗಣ್ಣ ಮಾತನಾಡಿ, ಕಳೆದ ವರ್ಷದ ಅ.10 ರಂದು ತಂಬಾಕು ವಹಿವಾಟು ಪ್ರಾರಂಭವಾಗಿದ್ದು, ಈ ವರೆಗೂ ಬೆಲೆ ಸ್ಥಿರತೆ ಕಂಡುಕೊಂಡಿಲ್ಲ, ಪ್ರಾರಂಭದಲ್ಲಿ ಆಂಧ್ರದಲ್ಲಿ ರೂ. 450 ದರ ನಿಗದಿಯಾದರೆ ಕರ್ನಾಟಕದಲ್ಲಿ ರೂ. 350 ಬೆಲೆ ನಿಗಧಿಯಾಗಿತ್ತು. ಬಳಿಕ ದಿನೇ, ದಿನೇ ದರ ಕುಸಿಯುತ್ತಲೆ ಸಾಗುತ್ತಿದೆ. ಹಾಸನ ಮತ್ತು ಮೈಸೂರು ಜಿಲ್ಲೆಗಳ ಜನಪ್ರತಿನಿಧಿಗಳು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕೇಂದ್ರ ವಾಣಿಜ್ಯ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಪರಿಹಾರಕ್ಕೆ ಮಾತುಕತೆ ನಡೆಸಿದರೂ ಫಲಪ್ರದವಾಗಿಲ್ಲ. ಸಂಸದರಾದ ಯಧುವೀರ್ ಮತ್ತು ಶ್ರೇಯಸ್ ಪಠೇಲ್ ಸಂಸತ್‌ನಲ್ಲಿ ಸಮಸ್ಯೆ ಬಗ್ಗೆ ಗಮನ ಸಳೆದರೂ ಪ್ರಯೋಜನವಾ ಗಿಲ್ಲ. ಬೆಳೆಗಾರರು ಹೋರಾಟದ ಹಾದಿ ಹಿಡಿಯಬೇಕಾಗಿದೆ. ಸಂಸತ್ ಹಾಗೂ ಸದಸನದಲ್ಲಿ ನ್ಯಾಯ ದೊರಕಿಸಲು ಸಾಧ್ಯವಾಗದ ಜನಪ್ರತಿಗಳು ಹೋರಾ ಟದ ಹಾದಿ ಹಿಡಿದಿರುವ ರೈತರೊಂದಿಗೆ ಸೇರಿ ಪ್ರತಿಭಟನೆ ಮೂಲಕ ಪರಿಹಾರ ದೊರಕಿಸಲು ನೆರವಾಗಬೇಕು. ವಾರ್ಷಿಕ ರೂ. 45 ಸಾವಿರ ಕೋಟಿ ವಿದೇಶಿ ವಿನಿಮಯ ಗಳಿಸುವ ತಂಬಾಕು ಬೆಳೆಗಾರರ ಸಮಸ್ಯೆ ಕುರಿತು ಕೇಂದ್ರ ಸರ್ಕಾರ, ವಾಣಿಜ್ಯ ಇಲಾಖೆ ಹಾಗೂ ತಂಬಾಕು ಮಂಡಳಿ ಗಮನ ಹರಿಸದೆ ನಿರ್ಲಕ್ಷ್ಯ ತೋರುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತ ಪಡಿಸಿದರು. 
ಮುಖಂಡರಾದ ಮಂಜಣ್ಣ, ವಿರೇಂದ್ರ, ಸಂಜು, ವೇದಾನಂದ ಗೋಷ್ಠಿಯಲ್ಲಿದ್ದರು.
    user_News5Kannada
    News5Kannada
    Local News Reporter Arkalgud, Hassan•
    8 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    13 hrs ago
  • ರಸ್ತೆ ದಾಟುತ್ತಿದ್ದ ಜಿಂಕೆಗೆ ಅಪರಿಚಿತ ವಾಹನ ಡಿಕ್ಕಿ ಯಾಗಿದ್ದು ಡಿಕ್ಕಿಯಾದ ರಭಸಕ್ಕೆ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ನೇರಳೆ ಗೇಟ್ ಬಳಿ ಸಂಭವಿಸಿದೆ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ‌ನೀಡಿ ಪರಿಶೀಲನೆ ನೆಡೆಸಿದ್ದಾರೆ ಅಲ್ಲದೆ ಇತ್ತೀಚೆಗೆ ನೇರಳೆ ಗ್ರಾಮದ ಗೇಟ್ ಬಳಿ ಜಿಂಕೆಗಳು ಅಪಘಾತದಿಂದ ಹೆಚ್ಚು ಬಲಿಯಾಗುತ್ತಿದ್ದು ಈ ಜಾಗದಲ್ಲಿ ನಾಮಫಲಕ ಹಾಗೂ ಸ್ಪೀಡ್ ಬ್ರೇಕರ್ ಹಾಕುವಂತೆ ಸ್ಥಳೀಯು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.
    1
    ರಸ್ತೆ ದಾಟುತ್ತಿದ್ದ ಜಿಂಕೆಗೆ ಅಪರಿಚಿತ ವಾಹನ ಡಿಕ್ಕಿ  ಯಾಗಿದ್ದು  ಡಿಕ್ಕಿಯಾದ ರಭಸಕ್ಕೆ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ನೇರಳೆ ಗೇಟ್ ಬಳಿ ಸಂಭವಿಸಿದೆ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ‌ನೀಡಿ ಪರಿಶೀಲನೆ ನೆಡೆಸಿದ್ದಾರೆ ಅಲ್ಲದೆ ಇತ್ತೀಚೆಗೆ ನೇರಳೆ ಗ್ರಾಮದ ಗೇಟ್ ಬಳಿ ಜಿಂಕೆಗಳು ಅಪಘಾತದಿಂದ ಹೆಚ್ಚು ಬಲಿಯಾಗುತ್ತಿದ್ದು ಈ ಜಾಗದಲ್ಲಿ ನಾಮಫಲಕ ಹಾಗೂ ಸ್ಪೀಡ್ ಬ್ರೇಕರ್ ಹಾಕುವಂತೆ ಸ್ಥಳೀಯು
ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.
    user_Sandeep Kumar
    Sandeep Kumar
    Local News Reporter ಮೈಸೂರು, ಮೈಸೂರು, ಕರ್ನಾಟಕ•
    21 hrs ago
  • ನಂಜನಗೂಡು: ರಸ್ತೆ ದಾಟುತ್ತಿದ್ದ ಜಿಂಕೆಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಜಿಂಕೆ ಸಾವನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ನೇರಳೆ ಗೇಟ್ ಬಳಿ ನಡೆದಿದೆ. ನಂಜನಗೂಡು ಮತ್ತು ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ನೇರಳೆ ಗೇಟ್ ಬಳಿ ಜಿಂಕೆಯೊಂದು ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಜಿಂಕೆಯು ಸ್ಥಳದಲ್ಲಿಯೇ ಮೃತಪಟ್ಟಿದೆ. ಅಪರಿಚಿತ ವಾಹನದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ನೇರಳೆ ಗೇಟ್ ಬಳಿ ಜಿಂಕೆಗಳು ಹೆಚ್ಚಾಗಿ ರಸ್ತೆ ಅಪಘಾತದಿಂದ ಸಾವನ್ನಪ್ಪಿರುವ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಈ ಸ್ಥಳದಲ್ಲಿ ನಾಮಫಲಕ ಮತ್ತು ಸ್ಪೀಡ್ ಬ್ರೇಕರ್ ಅಳವಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆ ದಾಟುವ ವೇಳೆ ಈ ಘಟನೆ ನಡೆದಿದ್ದು, ಆ ಸ್ಥಳದಲ್ಲಿ ನಾಮಫಲಕ ಅಳವಡಿಸುವಂತೆ ವರದಿ ಸಲ್ಲಿಸುತ್ತೇನೆ ಎಂದು ವಲಯ ಅರಣ್ಯ ಅಧಿಕಾರಿ ನಿತಿನ್ ಕುಮಾರ್ ತಿಳಿಸಿದ್ದಾರೆ.
    1
    ನಂಜನಗೂಡು: ರಸ್ತೆ ದಾಟುತ್ತಿದ್ದ ಜಿಂಕೆಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಜಿಂಕೆ ಸಾವನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ನೇರಳೆ ಗೇಟ್ ಬಳಿ ನಡೆದಿದೆ.
ನಂಜನಗೂಡು ಮತ್ತು ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ನೇರಳೆ ಗೇಟ್ ಬಳಿ ಜಿಂಕೆಯೊಂದು ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಜಿಂಕೆಯು ಸ್ಥಳದಲ್ಲಿಯೇ ಮೃತಪಟ್ಟಿದೆ. ಅಪರಿಚಿತ ವಾಹನದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ನೇರಳೆ ಗೇಟ್ ಬಳಿ ಜಿಂಕೆಗಳು ಹೆಚ್ಚಾಗಿ ರಸ್ತೆ ಅಪಘಾತದಿಂದ ಸಾವನ್ನಪ್ಪಿರುವ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಈ ಸ್ಥಳದಲ್ಲಿ ನಾಮಫಲಕ ಮತ್ತು ಸ್ಪೀಡ್ ಬ್ರೇಕರ್ ಅಳವಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆ ದಾಟುವ ವೇಳೆ ಈ ಘಟನೆ ನಡೆದಿದ್ದು, ಆ ಸ್ಥಳದಲ್ಲಿ ನಾಮಫಲಕ ಅಳವಡಿಸುವಂತೆ ವರದಿ ಸಲ್ಲಿಸುತ್ತೇನೆ ಎಂದು ವಲಯ ಅರಣ್ಯ ಅಧಿಕಾರಿ ನಿತಿನ್ ಕುಮಾರ್ ತಿಳಿಸಿದ್ದಾರೆ.
    user_Mysore update
    Mysore update
    ನಂಜನಗೂಡು, ಮೈಸೂರು, ಕರ್ನಾಟಕ•
    18 hrs ago
  • ನರಹರಿ ನಗರದ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯ ದೇವಸ್ಥಾನದಲ್ಲಿ ಮಂಡಲದ ಪೂಜೆ.. ಚಳ್ಳಕೆರೆ ನಗರದ ನರಹರಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಕರಿಬಸವೇಶ್ವರ ಅಜ್ಜಯ ದೇವಸ್ಥಾನದಲ್ಲಿ.. ದೇವಸ್ಥಾನ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ 48ನೇ ದಿನದ ಮಂಡಲ ಪೂಜೆ ಕಾರ್ಯಕ್ರಮವನ್ನ ಶ್ರದ್ಧಾ ಭಕ್ತಿಯಿಂದ ಹಮ್ಮಿಕೊಳ್ಳಲಾಯಿತು. ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ದೇವಾಲಯದಲ್ಲಿ ಪೆಬ್ರವರಿ 11ರಂದು ಶ್ರೀ ಕರಿಬಸವೇಶ್ವರ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕಳಸಸ್ಥಾಪನೆ ಮಾಡಲಾಗಿತ್ತು. ಅಂದಿನಿಂದ ಕರಿಬಸವೇಶ್ವರ ಗದ್ದಿಗೆಯಲ್ಲಿ ವಿಶೇಷ ಪೂಜೆ, ಭಜನೆ, ಕೀರ್ತನೆಗಳು ಜರಗಿದವು. ಕರಿಬಸವೇಶ್ವರ ದೇವಸ್ಥಾನ ನಿರ್ಮಾಣಗೊಂಡು ಇಲ್ಲಿಗೆ 48ನೇ ದಿನ ಆಗಿರುವುದರಿಂದ ದೇವಸ್ಥಾನದಲ್ಲಿ ಮಂಡಲ ಪೂಜೆ ಅಂಗವಾಗಿ ಬೆಳಗಿನಜಾವ ಮೂರು ಗಂಟೆಯಿಂದಲೇ ನವಗ್ರಹ ಪೋಜೆ ಅಷ್ಟಲಕ್ಷ್ಮಿ ಪೂಜೆ, ಪಾರ್ವತಿ, ಪರಮೇಶ್ವರ ವಿಘ್ನೇಶ್ವರ ಪೂಜೆ ,ಹೋಮ ಹವನ ಭಜನೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.. ಗುರು ಕರಿಬಸವೇಶ್ವರ ದೇವಸ್ಥಾನಕ್ಕೆ ಸಾಕಷ್ಟು ಭಕ್ತರು ಆಗಮಿಸಿ ಎಲ್ಲಾ ಪೂಜೆ ಕಾರ್ಯದಲ್ಲಿ ಭಾಗಿಯಾಗಿ ಅನ್ನದಾಸೋಹ ಪಾಲ್ಗೊಂಡರು ಗುರು ಕರಿಬಸವೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಗಳು ಜತೆಗೆ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಧಾನ ಅರ್ಚಕರು ಹಾಗೂ ಶ್ರೀ ಕರಿಬಸವೇಶ್ವರ ಸ್ವಾಮಿ ಟ್ರಸ್ಟ್ ನ ಅಧ್ಯಕ್ಷ ಟಿ. ವೀರಭದ್ರ ಸ್ವಾಮಿ ತಿಳಿಸಿದ್ದಾರೆ....
    1
    ನರಹರಿ ನಗರದ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯ ದೇವಸ್ಥಾನದಲ್ಲಿ ಮಂಡಲದ ಪೂಜೆ..
ಚಳ್ಳಕೆರೆ  ನಗರದ ನರಹರಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಕರಿಬಸವೇಶ್ವರ ಅಜ್ಜಯ ದೇವಸ್ಥಾನದಲ್ಲಿ.. ದೇವಸ್ಥಾನ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ 48ನೇ ದಿನದ ಮಂಡಲ ಪೂಜೆ ಕಾರ್ಯಕ್ರಮವನ್ನ  ಶ್ರದ್ಧಾ ಭಕ್ತಿಯಿಂದ ಹಮ್ಮಿಕೊಳ್ಳಲಾಯಿತು.
ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ದೇವಾಲಯದಲ್ಲಿ ಪೆಬ್ರವರಿ 11ರಂದು ಶ್ರೀ ಕರಿಬಸವೇಶ್ವರ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕಳಸಸ್ಥಾಪನೆ ಮಾಡಲಾಗಿತ್ತು. ಅಂದಿನಿಂದ ಕರಿಬಸವೇಶ್ವರ ಗದ್ದಿಗೆಯಲ್ಲಿ ವಿಶೇಷ ಪೂಜೆ, ಭಜನೆ, ಕೀರ್ತನೆಗಳು ಜರಗಿದವು.
ಕರಿಬಸವೇಶ್ವರ ದೇವಸ್ಥಾನ ನಿರ್ಮಾಣಗೊಂಡು ಇಲ್ಲಿಗೆ 48ನೇ ದಿನ ಆಗಿರುವುದರಿಂದ ದೇವಸ್ಥಾನದಲ್ಲಿ ಮಂಡಲ ಪೂಜೆ ಅಂಗವಾಗಿ ಬೆಳಗಿನಜಾವ ಮೂರು ಗಂಟೆಯಿಂದಲೇ ನವಗ್ರಹ ಪೋಜೆ  ಅಷ್ಟಲಕ್ಷ್ಮಿ ಪೂಜೆ, ಪಾರ್ವತಿ, ಪರಮೇಶ್ವರ ವಿಘ್ನೇಶ್ವರ ಪೂಜೆ ,ಹೋಮ ಹವನ  ಭಜನೆ  ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು..
ಗುರು ಕರಿಬಸವೇಶ್ವರ ದೇವಸ್ಥಾನಕ್ಕೆ ಸಾಕಷ್ಟು ಭಕ್ತರು ಆಗಮಿಸಿ ಎಲ್ಲಾ ಪೂಜೆ ಕಾರ್ಯದಲ್ಲಿ ಭಾಗಿಯಾಗಿ ಅನ್ನದಾಸೋಹ  ಪಾಲ್ಗೊಂಡರು
ಗುರು ಕರಿಬಸವೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಗಳು ಜತೆಗೆ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಧಾನ ಅರ್ಚಕರು ಹಾಗೂ ಶ್ರೀ ಕರಿಬಸವೇಶ್ವರ ಸ್ವಾಮಿ ಟ್ರಸ್ಟ್ ನ ಅಧ್ಯಕ್ಷ ಟಿ. ವೀರಭದ್ರ ಸ್ವಾಮಿ ತಿಳಿಸಿದ್ದಾರೆ....
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    18 hrs ago
  • ದೊಡ್ಡ ಉಳ್ಳಾರ್ತಿ ಗ್ರಾಮದ ಗೋಮಾಳ ಜಾಗದಲ್ಲಿ ರಾತ್ರೋರಾತ್ರಿ ಕಿಡಿಗೇಡಿಗಳು ಯಾವುದೋ ಫ್ಯಾಕ್ಟರಿಯ ಕಲುಷಿತ ಕೆಮಿಕಲ್ ಆಯಿಲ್ ತಂದು ಸುರಿದು ಹೋದ ಘಟನೆ ಬೆಳಕಿಗೆ ಬಂದಿದೆ. ಈ ಕಲುಷಿತ ಆಯಿಲ್ ಗೋಮಾಳ ಜಾಗವನ್ನು ಸಂಪೂರ್ಣವಾಗಿ ಹಾನಿಗೊಳಪಡಿಸಿದೆ.
    1
    ದೊಡ್ಡ ಉಳ್ಳಾರ್ತಿ ಗ್ರಾಮದ ಗೋಮಾಳ ಜಾಗದಲ್ಲಿ ರಾತ್ರೋರಾತ್ರಿ ಕಿಡಿಗೇಡಿಗಳು ಯಾವುದೋ ಫ್ಯಾಕ್ಟರಿಯ ಕಲುಷಿತ ಕೆಮಿಕಲ್ ಆಯಿಲ್ ತಂದು ಸುರಿದು ಹೋದ ಘಟನೆ ಬೆಳಕಿಗೆ ಬಂದಿದೆ. ಈ ಕಲುಷಿತ ಆಯಿಲ್ ಗೋಮಾಳ ಜಾಗವನ್ನು ಸಂಪೂರ್ಣವಾಗಿ ಹಾನಿಗೊಳಪಡಿಸಿದೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    18 hrs ago
  • ಸೈಕಲ್ ಸವಾರನೋರ್ವನಿಗೆ ಪಿಕಪ್ ಡಿಕ್ಕಿಯಾಗಿ ಸೈಕಲ್ ಸವಾರ ಸಾವನ್ನಪ್ಪಿದ ಘಟನೆ ಬಿಸಿರೋಡಿನ ಕೈಕಂಬ ಎಂಬಲ್ಲಿ ನಡೆದಿದೆ ಶಾಂತಿ ಅಂಗಡಿ ನಿವಾಸಿ ಗ್ವಾಡ್ವಿನ್ ( 45) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಫೈಟಿಂಗ್ ಕೆಲಸಗಾರನಾಗಿರುವ ಇವರು ಮನೆಯಿಂದ ಸೈಕಲ್ ನಲ್ಲಿ ಹೊರಟು ಹೆದ್ದಾರಿ ಬದಿಯಲ್ಲಿ ಹೋಗುತ್ತಿರುವ ವೇಳೆ ಇವರಿಗೆ ಪಿಕಪ್ ವಾಹನ ಡಿಕ್ಕಿಯಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯವಾಗಿರುವ ಇವರು ಸ್ಥಳದಲ್ಲಿಯೇ ಮೃತಪಟ್ಟ ಬಗ್ಗೆ ಪೋಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಟ್ರಾಫಿಕ್ ಎಸ್.ಐ.ಆದರ್ಶ್ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
    1
    ಸೈಕಲ್ ಸವಾರನೋರ್ವನಿಗೆ ಪಿಕಪ್ ಡಿಕ್ಕಿಯಾಗಿ ಸೈಕಲ್ ಸವಾರ ಸಾವನ್ನಪ್ಪಿದ ಘಟನೆ ಬಿಸಿರೋಡಿನ ಕೈಕಂಬ ಎಂಬಲ್ಲಿ ನಡೆದಿದೆ
ಶಾಂತಿ ಅಂಗಡಿ ನಿವಾಸಿ ಗ್ವಾಡ್ವಿನ್ ( 45) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ಫೈಟಿಂಗ್ ಕೆಲಸಗಾರನಾಗಿರುವ ಇವರು ಮನೆಯಿಂದ ಸೈಕಲ್ ನಲ್ಲಿ ಹೊರಟು ಹೆದ್ದಾರಿ ಬದಿಯಲ್ಲಿ ಹೋಗುತ್ತಿರುವ ವೇಳೆ ಇವರಿಗೆ ಪಿಕಪ್ ವಾಹನ ಡಿಕ್ಕಿಯಾಗಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯವಾಗಿರುವ ಇವರು ಸ್ಥಳದಲ್ಲಿಯೇ ಮೃತಪಟ್ಟ ಬಗ್ಗೆ ಪೋಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಟ್ರಾಫಿಕ್ ಎಸ್.ಐ.ಆದರ್ಶ್ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    19 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    15 hrs ago
  • ಜ್ಯೂಸ್ ಬಾಟಲ್ ಗಳ ನಡುವೆ ಅಡಗಿದ್ದ ನಾಗರಹಾವನ್ನು ರಕ್ಷಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಮೈಸೂರಿನ ಪ್ರೀತಿ ಬಡಾವಣೆಯ ವಿನಾಯಕ ಸ್ಪೋರ್ಟ್ಸ್ ನಲ್ಲಿ ಜ್ಯೂಸ್ ಬಾಟಲ್ ಗಳ ಮಧ್ಯೆ ಇದ್ದ ಹಾವನ್ನು ಕಂಡೊಡನೆ ಉರಗ ಸಂರಕ್ಷಕ ಸ್ನೇಕ್ ರಮೇಶ್ ಗೆ ಕರೆ ಮಾಡಿ ಮಾಹಿತಿ‌ನೀಡಲಾಗಿತ್ತು ಬಳಿಕ ಆಗಮಿಸಿದ ಸ್ನೇಕ್ ರಮೇಶ್ ರಿಂದ ನಾಗರಹಾವು ರಕ್ಷಣೆ ಮಾಡಿ ಸುರಕ್ಷಿತ ಸ್ಥಳದಲ್ಲಿ ಬಿಡುಗಡೆ ಮಾಡಲಾಗಿದೆ.
    1
    ಜ್ಯೂಸ್ ಬಾಟಲ್ ಗಳ ನಡುವೆ ಅಡಗಿದ್ದ ನಾಗರಹಾವನ್ನು ರಕ್ಷಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.
ಮೈಸೂರಿನ ಪ್ರೀತಿ ಬಡಾವಣೆಯ ವಿನಾಯಕ ಸ್ಪೋರ್ಟ್ಸ್ ನಲ್ಲಿ  ಜ್ಯೂಸ್ ಬಾಟಲ್ ಗಳ ಮಧ್ಯೆ ಇದ್ದ ಹಾವನ್ನು ಕಂಡೊಡನೆ ಉರಗ ಸಂರಕ್ಷಕ ಸ್ನೇಕ್ ರಮೇಶ್ ಗೆ ಕರೆ ಮಾಡಿ ಮಾಹಿತಿ‌ನೀಡಲಾಗಿತ್ತು
ಬಳಿಕ ಆಗಮಿಸಿದ ಸ್ನೇಕ್ ರಮೇಶ್ ರಿಂದ ನಾಗರಹಾವು ರಕ್ಷಣೆ ಮಾಡಿ ಸುರಕ್ಷಿತ ಸ್ಥಳದಲ್ಲಿ ಬಿಡುಗಡೆ ಮಾಡಲಾಗಿದೆ.
    user_Sandeep Kumar
    Sandeep Kumar
    Local News Reporter ಮೈಸೂರು, ಮೈಸೂರು, ಕರ್ನಾಟಕ•
    21 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.