Shuru
Apke Nagar Ki App…
ಜ್ಯೂಸ್ ಬಾಟಲ್ ಗಳ ನಡುವೆ ಅಡಗಿ ಕುಳಿತಿದ್ದ ನಾಗರಹಾವಿನ ರಕ್ಷಣೆ. ಜ್ಯೂಸ್ ಬಾಟಲ್ ಗಳ ನಡುವೆ ಅಡಗಿದ್ದ ನಾಗರಹಾವನ್ನು ರಕ್ಷಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಮೈಸೂರಿನ ಪ್ರೀತಿ ಬಡಾವಣೆಯ ವಿನಾಯಕ ಸ್ಪೋರ್ಟ್ಸ್ ನಲ್ಲಿ ಜ್ಯೂಸ್ ಬಾಟಲ್ ಗಳ ಮಧ್ಯೆ ಇದ್ದ ಹಾವನ್ನು ಕಂಡೊಡನೆ ಉರಗ ಸಂರಕ್ಷಕ ಸ್ನೇಕ್ ರಮೇಶ್ ಗೆ ಕರೆ ಮಾಡಿ ಮಾಹಿತಿನೀಡಲಾಗಿತ್ತು ಬಳಿಕ ಆಗಮಿಸಿದ ಸ್ನೇಕ್ ರಮೇಶ್ ರಿಂದ ನಾಗರಹಾವು ರಕ್ಷಣೆ ಮಾಡಿ ಸುರಕ್ಷಿತ ಸ್ಥಳದಲ್ಲಿ ಬಿಡುಗಡೆ ಮಾಡಲಾಗಿದೆ.
Sandeep Kumar
ಜ್ಯೂಸ್ ಬಾಟಲ್ ಗಳ ನಡುವೆ ಅಡಗಿ ಕುಳಿತಿದ್ದ ನಾಗರಹಾವಿನ ರಕ್ಷಣೆ. ಜ್ಯೂಸ್ ಬಾಟಲ್ ಗಳ ನಡುವೆ ಅಡಗಿದ್ದ ನಾಗರಹಾವನ್ನು ರಕ್ಷಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಮೈಸೂರಿನ ಪ್ರೀತಿ ಬಡಾವಣೆಯ ವಿನಾಯಕ ಸ್ಪೋರ್ಟ್ಸ್ ನಲ್ಲಿ ಜ್ಯೂಸ್ ಬಾಟಲ್ ಗಳ ಮಧ್ಯೆ ಇದ್ದ ಹಾವನ್ನು ಕಂಡೊಡನೆ ಉರಗ ಸಂರಕ್ಷಕ ಸ್ನೇಕ್ ರಮೇಶ್ ಗೆ ಕರೆ ಮಾಡಿ ಮಾಹಿತಿನೀಡಲಾಗಿತ್ತು ಬಳಿಕ ಆಗಮಿಸಿದ ಸ್ನೇಕ್ ರಮೇಶ್ ರಿಂದ ನಾಗರಹಾವು ರಕ್ಷಣೆ ಮಾಡಿ ಸುರಕ್ಷಿತ ಸ್ಥಳದಲ್ಲಿ ಬಿಡುಗಡೆ ಮಾಡಲಾಗಿದೆ.
More news from ಕರ್ನಾಟಕ and nearby areas
- ರಸ್ತೆ ದಾಟುತ್ತಿದ್ದ ಜಿಂಕೆಗೆ ಅಪರಿಚಿತ ವಾಹನ ಡಿಕ್ಕಿ ಯಾಗಿದ್ದು ಡಿಕ್ಕಿಯಾದ ರಭಸಕ್ಕೆ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ನೇರಳೆ ಗೇಟ್ ಬಳಿ ಸಂಭವಿಸಿದೆ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿನೀಡಿ ಪರಿಶೀಲನೆ ನೆಡೆಸಿದ್ದಾರೆ ಅಲ್ಲದೆ ಇತ್ತೀಚೆಗೆ ನೇರಳೆ ಗ್ರಾಮದ ಗೇಟ್ ಬಳಿ ಜಿಂಕೆಗಳು ಅಪಘಾತದಿಂದ ಹೆಚ್ಚು ಬಲಿಯಾಗುತ್ತಿದ್ದು ಈ ಜಾಗದಲ್ಲಿ ನಾಮಫಲಕ ಹಾಗೂ ಸ್ಪೀಡ್ ಬ್ರೇಕರ್ ಹಾಕುವಂತೆ ಸ್ಥಳೀಯು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.1
- Post by Md Aleemulla Shariff1
- ನಂಜನಗೂಡು: ರಸ್ತೆ ದಾಟುತ್ತಿದ್ದ ಜಿಂಕೆಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಜಿಂಕೆ ಸಾವನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ನೇರಳೆ ಗೇಟ್ ಬಳಿ ನಡೆದಿದೆ. ನಂಜನಗೂಡು ಮತ್ತು ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ನೇರಳೆ ಗೇಟ್ ಬಳಿ ಜಿಂಕೆಯೊಂದು ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಜಿಂಕೆಯು ಸ್ಥಳದಲ್ಲಿಯೇ ಮೃತಪಟ್ಟಿದೆ. ಅಪರಿಚಿತ ವಾಹನದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ನೇರಳೆ ಗೇಟ್ ಬಳಿ ಜಿಂಕೆಗಳು ಹೆಚ್ಚಾಗಿ ರಸ್ತೆ ಅಪಘಾತದಿಂದ ಸಾವನ್ನಪ್ಪಿರುವ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಈ ಸ್ಥಳದಲ್ಲಿ ನಾಮಫಲಕ ಮತ್ತು ಸ್ಪೀಡ್ ಬ್ರೇಕರ್ ಅಳವಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆ ದಾಟುವ ವೇಳೆ ಈ ಘಟನೆ ನಡೆದಿದ್ದು, ಆ ಸ್ಥಳದಲ್ಲಿ ನಾಮಫಲಕ ಅಳವಡಿಸುವಂತೆ ವರದಿ ಸಲ್ಲಿಸುತ್ತೇನೆ ಎಂದು ವಲಯ ಅರಣ್ಯ ಅಧಿಕಾರಿ ನಿತಿನ್ ಕುಮಾರ್ ತಿಳಿಸಿದ್ದಾರೆ.1
- ತುಮಕೂರು: ಸಮಾಜಸೇವೆ ಮತ್ತು ದಾನಧರ್ಮದ ಪ್ರತೀಕವಾಗಿದ್ದ ತ್ರಿವಿಧ ದಾಸೋಹಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ 119ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಸಿದ್ದಗಂಗಾ ಮಠದಲ್ಲಿ ಭಕ್ತಿಭಾವದ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಮೈಸೂರು ಮೂಲದ ಪುನೀತ್ ಕಲಾವಿದ ತಂಡ ವಿಶೇಷವಾಗಿ 8000 ಚದರ ಅಡಿ ವಿಸ್ತೀರ್ಣದ ಬೃಹತ್ ರಂಗೋಲಿ ರಚಿಸಿ ಗಮನ ಸೆಳೆದಿತು. ಸಿದ್ದಗಂಗಾ ಮಠದ ಆವರಣದಲ್ಲಿ ಮೂಡಿಬಂದ ಈ ಅದ್ಭುತ ರಂಗೋಲಿಯಲ್ಲಿ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರವನ್ನು ಅತ್ಯಂತ ಕಲಾತ್ಮಕವಾಗಿ ರೂಪಿಸಲಾಗಿದ್ದು, ಭಕ್ತರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಬಣ್ಣಗಳ ಸಮನ್ವಯ, ವಿನ್ಯಾಸದ ನಿಖರತೆ ಹಾಗೂ ಆಧ್ಯಾತ್ಮಿಕ ಭಾವನೆಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ರಂಗೋಲಿ ಸಿದ್ಧಗೊಂಡಿತ್ತು. ಈ ಮಹತ್ವದ ಕಲಾಕೃತಿಯನ್ನು ಮೈಸೂರು ನಗರದ ಪುನೀತ್ ಕಲಾವಿದ ತಂಡದ ಕಲಾವಿದರು ಶ್ರಮಪಟ್ಟು ರೂಪಿಸಿದ್ದಾರೆ. ತಂಡದ ಪ್ರಮುಖ ಕಲಾವಿದರಾದ ಪುನೀತ್ ಕಲಾವಿದ, ಲಕ್ಷ್ಮಿ ಸಿ, ಆದಿತ್ಯ ಪಿ, ಹರ್ಷಿತ್ ಆರ್, ಹಾಗೂ ಕುಮಾರಸ್ವಾಮಿ ಕೆ.ಬಿ ಅವರು ಹಲವು ದಿನಗಳ ಪರಿಶ್ರಮದಿಂದ ರಂಗೋಲಿಯನ್ನು ಸಿದ್ಧಗೊಳಿಸಿದರು. ಅವರ ಕಲಾತ್ಮಕ ಪ್ರತಿಭೆಗೆ ಮಠದ ಭಕ್ತರು ಹಾಗೂ ಭೇಟಿ ನೀಡಿದವರು ಶ್ಲಾಘನೆ ವ್ಯಕ್ತಪಡಿಸಿದರು. ಶ್ರೀ ಶಿವಕುಮಾರ ಸ್ವಾಮೀಜಿಯವರು ಶಿಕ್ಷಣ, ಅನ್ನದಾನ ಮತ್ತು ಮಾನವೀಯ ಸೇವೆಗಳ ಮೂಲಕ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಅವರ ಸ್ಮರಣಾರ್ಥವಾಗಿ ಕಲೆಯ ಮೂಲಕ ಗೌರವ ಸಲ್ಲಿಸುವುದು ವಿಶೇಷವಾಗಿದೆ ಎಂದು ಭಕ್ತರು ಅಭಿಪ್ರಾಯಪಟ್ಟರು. ರಂಗೋಲಿ ವೀಕ್ಷಿಸಲು ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ, ಕಲಾವಿದರ ಕಾರ್ಯವನ್ನು ಪ್ರಶಂಸಿಸಿದರು. ಸಿದ್ದಗಂಗಾ ಮಠದ ಆವರಣವು ಆಧ್ಯಾತ್ಮಿಕ ವಾತಾವರಣದೊಂದಿಗೆ ಕಲಾ ಸಂಭ್ರಮದ ಕೇಂದ್ರವಾಗಿತ್ತು. ಶಿವಕುಮಾರ ಸ್ವಾಮೀಜಿಯವರ ಆದರ್ಶಗಳು ಯುವಜನತೆಗೆ ಸ್ಪೂರ್ತಿಯಾಗಲಿ ಎಂಬ ಸಂದೇಶದೊಂದಿಗೆ ಪುನೀತ್ ಕಲಾವಿದ ತಂಡ ಈ ಬೃಹತ್ ರಂಗೋಲಿ ಮೂಲಕ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದೆ. ಈ ಕಲಾಕೃತಿ ಮಠದ ಕಾರ್ಯಕ್ರಮಗಳಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು.1
- ಪರಮಪೂಜ್ಯ ತ್ರಿವಿಧ ದಾಸೋಹಿ ಸೇವೆ-ಕೂಡುಗೆ -ತತ್ವ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತ - ಮಳವಳ್ಳಿ ಪಟ್ಟಣದಲ್ಲಿ ಸಮಾಜ ಸೇವಕರಾದ ಹೆಬ್ಬಣಿ ಬಬ್ರುವಾಹನ ಹೇಳಿಕೆ ಮಳವಳ್ಳಿ:ತ್ರಿವಿಧ ದಾಸೋಹಿ ನಡೆದಾಡುವ ದೇವರು ಡಾ. ಶಿವಕುಮಾರ ಸ್ವಾಮೀಜಿಯವರ ಜೀವಮ,ಸೇವೆ,ಕೂಡುಗೆ ಶಾಂತಿ ಸೌಹಾರ್ದತೆ ಸಮಾನತೆ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಸಮಾಜ ಸೇವಕ ಬಬ್ರುವಾಹನ ಹೇಳಿದರು ಪಟ್ಟಣದ ಮಾಮರ ಸೌಹಾರ್ದ ಸಹಕಾರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಡಾ.ಶಿವಕುಮಾರ್ ಸ್ವಾಮೀಜಿಯವರ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಸಿದ್ದಗಂಗಾ ಮಠದ ಸೇವೆ ದೇಶದ ಇತರೆ ಮಠಗಳಿಗೆ ಮಾದರಿಯಾಗಿದೆ ಎಂದ ಅವರು ಅಕ್ಷರ ಜ್ಞಾನ ದಾಸೋಹ ಸೇವೆಯನ್ನು ಇತರೆ ಮಠಗಳು ಅನುಸರಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವಂತೆ ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ಅಗಮಿಸಿದ ಜನರಿಗೆ ಸಿಹಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾಮರ ಸೌಹರ್ಧ ಸಹಕಾರ ಸಂಘದ ಅಧ್ಯಕ್ಷರಾದ ಎಂ ಶಿವಕುಮಾರ್, ಸಿಬ್ಬಂದಿಗಳಾದ ರಮ್ಯಾ ಪೂರ್ಣಿಮಾ, ಹೀನ ,ಸುಬ್ರಮಣ್ಯ,ಅಶ್ವಿನಿ ಇತರರು ಉಪಸ್ಥಿತರಿದ್ದರು. ಉಪ್ಪನಹಳ್ಳಿ ಆಚರಣೆ:ತಾಲೂಕಿನ ಉಪ್ಪನಹಳ್ಳಿ ಗ್ರಾಮದ ಮುಖಂಡರು ಹಾಗೂ ಶ್ರೀ ಬಸವೇಶ್ವರಯುವಕರ ಸಂಘದ1
- ಅಂದಿನಿಂದ ಇಂದಿ ನವರೆಗೂ ಪ್ರತಿ ವರ್ಷ ಕೂಡ ಯುಗಾದಿ ಹಬ್ಬದ ನಂತರ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ ನಡೆದುಕೊಂಡು ಬರುತ್ತಿದೆ. ಬಸವೇಶ್ವರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪ್ರದಾಯಿಕವಾಗಿ ಅರ್ಚಕರು ಬೆಳಗ್ಗೆಯಿಂದ ಉಪವಾಸ ಇದ್ದು, ಸ್ವಾಮಿಗೆ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ ನೆರವೇರಿಸಿದರು. ದಟ್ಟವಾದ ಅರಣ್ಯ ಪ್ರದೇಶದ ಮಧ್ಯೆ ಇರುವ ಅರಳಿಮರದ ಕೆಳಗೆ ಬಸವೇಶ್ವರ ಸ್ವಾಮಿಯ ಲಿಂಗಕ್ಕೆ ಪೂರ್ವಜರು ಪೂಜೆ ಮಾಡಿಕೊಂಡು ಬರುತ್ತಿದ್ದರು. ಅಲ್ಲಿಂದ ಪಚ್ಚೇದೊಡ್ಡಿ ಗ್ರಾಮದಲ್ಲಿ ಬಸವೇಶ್ವರ ಸ್ವಾಮಿಯ ಲಿಂಗಾವನ್ನ ಪ್ರತಿಷ್ಠಾಪನೆ ಮಾಡಿ. ಪ್ರತಿ ವರ್ಷ ಕೂಡ ವಿಶೇಷ ಪೂಜೆ ನೆರವೇರಿಸಿಕೊಂಡು ಬಂದಿರುತ್ತಾರೆ. ಕಾಂಚಳ್ಳಿ ಗ್ರಾಮದಿಂದ ಜಡೆಸ್ವಾಮಿ (ಶಿವನ ಪ್ರತಿರೂಪ ) ದೇವರನ್ನ ಪಚ್ಚೇದೊಡ್ಡಿಗೆ ತಂದು ವಿಶೇಷ ಪೂಜೆ ಪುನಸ್ಕಾರಗಳನ್ನ ಮಾಡುತ್ತಾರೆ. ತಳಿರು ತೋರಣಗಳಿಂದ ಸಿಂಗರಿಸಿ, ದೇವರಿಗೆ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗುತ್ತದೆ. ಎಸ್. ಎ. ಸೌಂಡ್ಸ್ ಸಿಸ್ಟಮ್ ವತಿಯಿಂದ ಪಚ್ಚೆದೊಡ್ಡಿ ಗ್ರಾಮದ ದೇವಾಲಯದ ಸುತ್ತಮುತ್ತ ವಿದ್ಯುತ್ ದೀಪ ಅಲಂಕಾರಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರಿಗೆ ಅನ್ನ ದಾನ ವಿಶೇಷ ಪೂಜೆ ನಡೆದ ನಂತರ ರಾತ್ರಿ 8 ಗಂಟೆಗೆ ನೆರೆದಿರುವ ಭಕ್ತರಿಗೆ ಪಾಯಸ, ಮುದ್ದೆ, ದ್ವಿದಳ ದಾನ್ಯದ ಸಾಂಬಾರು, ಪಲ್ಯ, ಹಪ್ಪಳ,ಅನ್ನಸಾಂಬಾರ್ ಅನ್ನು ನೆರೆದಿರುವ ಭಕ್ತರಿಗೆ ಅನ್ನದಾನದ ವ್ಯವಸ್ಥೆಯನ್ನ ಕಲ್ಪಿಸಿದರು. ನಟರಾಜ್ ಮೈಸೂರು ತಂಡದವರಿಂದ ರಾತ್ರಿ 10 ರಿಂದ ಬೆಳಿಗ್ಗೆ 4 ರವರೆಗೆ ಹರಿಕಥೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಬಸವೇಶ್ವರ ಸ್ವಾಮಿಯ ಅರ್ಚಕ ಬಸವರಾಜು, ಅರ್ಚಕರಾದ ಶಿವು, ಶ್ರೀನಿವಾಸ್, ಗೌಡರದ ಮನ್ನಾರ್ ಕೃಷ್ಣೆಗೌಡ, ಕೃಷ್ಣೆಗೌಡ,ನಾಗರಾಜು, ರಾಜು, ಗಣೇಶ್, ಮಾದೇವ, ಜಡೆಸ್ವಾಮಿ,ಕುಮಾರ್, ಗಾವಳಿ ರಾಜು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಇದ್ದರು.4
- ಮುತ್ತಶೆಟ್ಟಿಯೂರಿನಲ್ಲಿ ಮೂರು ಜಾನುವಾರುಗಳ ಅನುಮಾನಾಸ್ಪದ ಸಾವು ಹನೂರು ತಾಲೂಕಿನ ರಾಮಾಪುರ ಸಮೀಪದ ಮುತ್ತಶೆಟ್ಟಿಯೂರು ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಮೂರು ಜಾನುವಾರುಗಳು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ಗ್ರಾಮದ ರಮೇಶ್ ಕೃಷ್ಣಪ್ಪ ಅವರಿಗೆ ಸೇರಿದ ಹಸುಗಳನ್ನು ಜಮೀನುಗಳ ಸಮೀಪದ ಬಯಲು ಪ್ರದೇಶಕ್ಕೆ ಮೇಯಲು ಬಿಡಲಾಗಿತ್ತು. ದಿಡೀರ್‌ವಾಗಿ ಕುಸಿದ ಹಸುಗಳು ಸ್ಥಳದಲ್ಲೇ ಮೃತಪಟ್ಟಿವೆ ಸ್ಥಳೀಯ ರೈತರು ತಕ್ಷಣ ನೀರು ನೀಡಿ ಜೀವ ಉಳಿಸಲು ಪ್ರಯತ್ನಿಸಿದರೂ ಫಲಕಾರಿಯಾಗಿರಲಿಲ್ಲ. ಸ್ಥಳಕ್ಕೆ ಆಗಮಿಸಿದ ಪಶು ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕ ಸಿದ್ದರಾಜು ಪರಿಶೀಲನೆ ನಡೆಸಿ, ಮಾತನಾಡಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ವಿಷಯುಕ್ತ ಆಹಾರ ತಿಂದಿರಬಹುದು. ಎಂದಿದ್ದಾರೆ,1
- ಜ್ಯೂಸ್ ಬಾಟಲ್ ಗಳ ನಡುವೆ ಅಡಗಿದ್ದ ನಾಗರಹಾವನ್ನು ರಕ್ಷಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಮೈಸೂರಿನ ಪ್ರೀತಿ ಬಡಾವಣೆಯ ವಿನಾಯಕ ಸ್ಪೋರ್ಟ್ಸ್ ನಲ್ಲಿ ಜ್ಯೂಸ್ ಬಾಟಲ್ ಗಳ ಮಧ್ಯೆ ಇದ್ದ ಹಾವನ್ನು ಕಂಡೊಡನೆ ಉರಗ ಸಂರಕ್ಷಕ ಸ್ನೇಕ್ ರಮೇಶ್ ಗೆ ಕರೆ ಮಾಡಿ ಮಾಹಿತಿನೀಡಲಾಗಿತ್ತು ಬಳಿಕ ಆಗಮಿಸಿದ ಸ್ನೇಕ್ ರಮೇಶ್ ರಿಂದ ನಾಗರಹಾವು ರಕ್ಷಣೆ ಮಾಡಿ ಸುರಕ್ಷಿತ ಸ್ಥಳದಲ್ಲಿ ಬಿಡುಗಡೆ ಮಾಡಲಾಗಿದೆ.1