ಕರವಸೂಲಾತಿ ವೇಗ ಹೆಚ್ಚಿಸಿ: ಜಿಪಂ ಉಪಕಾರ್ಯದರ್ಶಿ ಎನ್,ವೈ ಬಸರಿಗಿಡದ ಗುಳೇದಗುಡ್ಡ: ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ನೇತೃತ್ವದಲ್ಲಿ ಎಲ್ಲ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಮುತುವರ್ಜಿ ವಹಿಸಿ ಕರವಸೂಲಾತಿ ವೇಗ ಹೆಚ್ಚಿಸಿ, ಹೆಚ್ಚು ಕರವಸೂಲಾತಿ ಮಾಡಬೇಕೆಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎನ್.ವೈ. ಬಸರಿಗಿಡದ ಸೂಚಿಸಿದರು. ಅವರು ಸೋಮವಾರ ತಾಲ್ಲೂಕಿನ ಮಂಗಳಗುಡ್ಡ, ನಾಗರಾಳ ಎಸ್ ಪಿ , ಲಾಯದಗುಂದಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಸಭೆ ನಡೆಸಿ, ಕರ ವಸೂಲಿಯನ್ನು ಶೇಕಡಾವಾರು ಗುರಿ ಸಾಧನೆಗೆ ತಲುಪಿಸುವಂತೆ ಸೂಚನೆ ನೀಡಿದರು. ಹಾಗೂ ಬಾಕಿದಾರರಿಗೆ ನೋಟಿಸ್ ಜಾರಿಗೊಳಿಸುವುದು, ಸಾರ್ವಜನಿಕ ಜಾಗೃತಿ ಮೂಡಿಸುವುದು ಹಾಗೂ ಪಾರದರ್ಶಕ ದಾಖಲೆ ವ್ಯವಸ್ಥೆ ಅನುಸರಿಸುವ ಕುರಿತು ಮಾರ್ಗದರ್ಶನ ನೀಡಿದ ಅವರು, ಮನೆಮನೆಗೆ ತೆರಳಿ ಕರ ವಸೂಲಿ ಕಾರ್ಯವಿಧಾನ, ದಾಖಲೆ ನಿರ್ವಹಣೆ ಹಾಗೂ ಬಾಕಿ ತೆರಿಗೆ ಸಂಗ್ರಹದ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಗ್ರಾಮದ ಸಮಗ್ರ ಅಭಿವೃದ್ಧಿಗೆ ಸ್ಥಳೀಯ ತೆರಿಗೆ ಸಂಗ್ರಹ ಅತ್ಯಂತ ಮುಖ್ಯ. ಸಂಗ್ರಹಿಸಿದ ಹಣವನ್ನು ರಸ್ತೆ, ನೀರು, ಸ್ವಚ್ಛತೆ ಹಾಗೂ ಬೀದಿ ದೀಪಗಳ ನಿರ್ವಹಣೆಗೆ ಸಮರ್ಪಕವಾಗಿ ಬಳಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರ ಸಹಾಯಕ ನಿರ್ದೇಶಕ ರಾಮಚಂದ್ರ ಮೈತ್ರಿ, ಮಂಗಳಗುಡ್ಡ ಗ್ರಾಮ ಪಂಚಾಯಿತಿ ಪಿಡಿಒ, ಮಲ್ಲಿಕಾರ್ಜುನ ವಾರದ, ನಾಗರಾಳ ಎಸ್.ಪಿ, ಪಿಡಿಒ ಮಹಾಂತೇಶ ಕೋಟಿ, ಲಾಯದಗುಂದಿ ಗ್ರಾಪಂ ಪಿಡಿಒ ಗೋಪಾಲ ಕೃಷ್ಣ ನಾಯಕ, ಹಳದೂರ ಗ್ರಾಪಂ ಪಿಡಿಒ ಗೂಳಪ್ಪ ಹರದೊಳ್ಳಿ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಇದ್ದರು
ಕರವಸೂಲಾತಿ ವೇಗ ಹೆಚ್ಚಿಸಿ: ಜಿಪಂ ಉಪಕಾರ್ಯದರ್ಶಿ ಎನ್,ವೈ ಬಸರಿಗಿಡದ ಗುಳೇದಗುಡ್ಡ: ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ನೇತೃತ್ವದಲ್ಲಿ ಎಲ್ಲ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಮುತುವರ್ಜಿ ವಹಿಸಿ ಕರವಸೂಲಾತಿ ವೇಗ ಹೆಚ್ಚಿಸಿ, ಹೆಚ್ಚು ಕರವಸೂಲಾತಿ ಮಾಡಬೇಕೆಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎನ್.ವೈ. ಬಸರಿಗಿಡದ ಸೂಚಿಸಿದರು. ಅವರು ಸೋಮವಾರ ತಾಲ್ಲೂಕಿನ ಮಂಗಳಗುಡ್ಡ, ನಾಗರಾಳ ಎಸ್ ಪಿ , ಲಾಯದಗುಂದಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಸಭೆ ನಡೆಸಿ, ಕರ ವಸೂಲಿಯನ್ನು ಶೇಕಡಾವಾರು ಗುರಿ ಸಾಧನೆಗೆ ತಲುಪಿಸುವಂತೆ ಸೂಚನೆ ನೀಡಿದರು. ಹಾಗೂ ಬಾಕಿದಾರರಿಗೆ ನೋಟಿಸ್ ಜಾರಿಗೊಳಿಸುವುದು, ಸಾರ್ವಜನಿಕ ಜಾಗೃತಿ ಮೂಡಿಸುವುದು ಹಾಗೂ ಪಾರದರ್ಶಕ ದಾಖಲೆ ವ್ಯವಸ್ಥೆ ಅನುಸರಿಸುವ ಕುರಿತು ಮಾರ್ಗದರ್ಶನ ನೀಡಿದ ಅವರು, ಮನೆಮನೆಗೆ ತೆರಳಿ ಕರ ವಸೂಲಿ ಕಾರ್ಯವಿಧಾನ, ದಾಖಲೆ ನಿರ್ವಹಣೆ ಹಾಗೂ ಬಾಕಿ ತೆರಿಗೆ ಸಂಗ್ರಹದ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಗ್ರಾಮದ ಸಮಗ್ರ ಅಭಿವೃದ್ಧಿಗೆ ಸ್ಥಳೀಯ ತೆರಿಗೆ ಸಂಗ್ರಹ ಅತ್ಯಂತ ಮುಖ್ಯ. ಸಂಗ್ರಹಿಸಿದ ಹಣವನ್ನು ರಸ್ತೆ, ನೀರು, ಸ್ವಚ್ಛತೆ ಹಾಗೂ ಬೀದಿ ದೀಪಗಳ ನಿರ್ವಹಣೆಗೆ ಸಮರ್ಪಕವಾಗಿ ಬಳಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರ ಸಹಾಯಕ ನಿರ್ದೇಶಕ ರಾಮಚಂದ್ರ ಮೈತ್ರಿ, ಮಂಗಳಗುಡ್ಡ ಗ್ರಾಮ ಪಂಚಾಯಿತಿ ಪಿಡಿಒ, ಮಲ್ಲಿಕಾರ್ಜುನ ವಾರದ, ನಾಗರಾಳ ಎಸ್.ಪಿ, ಪಿಡಿಒ ಮಹಾಂತೇಶ ಕೋಟಿ, ಲಾಯದಗುಂದಿ ಗ್ರಾಪಂ ಪಿಡಿಒ ಗೋಪಾಲ ಕೃಷ್ಣ ನಾಯಕ, ಹಳದೂರ ಗ್ರಾಪಂ ಪಿಡಿಒ ಗೂಳಪ್ಪ ಹರದೊಳ್ಳಿ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಇದ್ದರು
- ಗುಳೇದಗುಡ್ಡ: ಶಾಲೆಯಲ್ಲಿ ಆಹಾರ ಉತ್ಸವದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿದೆಸೆಯಿಂದಲೇ ಅಹಾರದ ಬಗ್ಗೆ ಅರಿವು, ವ್ಯಾಪಾರ ಮಾಡುವ ಬಗ್ಗೆ ಅನುಭವ ಹಾಗೂ ಗ್ರಾಹಕರೊಂದಿಗೆ ವ್ಯವಹರಿಸುವ ಜ್ಞಾನ ದೊರೆಯುತ್ತದೆ. ಇಂತಹ ಉತ್ಸವದಿಂದ ಮಕ್ಕಳಲ್ಲಿ ವ್ಯಾಪಾರದಲ್ಲಿ ಆಸಕ್ತಿ ಬೆಳೆಯಲು ಸಹಾಯಕವಾಗಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಕಲೀಲ ಕೊತ್ತಲ ಹೇಳಿದರು. ಅವರು ಸೋಮವಾರ ಪಟ್ಟಣ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂ 2ರಲ್ಲಿ ಹಮ್ಮಿಕೊಂಡಿದ್ದ ಫುಡ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಮಾತನಾಡಿ, ಉತ್ಸವದಲ್ಲಿ ವಿದ್ಯಾರ್ಥಿಗಳೇ ತಯಾರಿಸಿದ ವಿವಿಧ ಬಗೆಯ ಆಹಾರ ಪದಾರ್ಥಗಳು ಮಾರಾಟಕ್ಕೆ ಇದ್ದು, ವಿದ್ಯಾರ್ಥಿಗಳು ಇಂತಹ ಉತ್ಸವದಲ್ಲಿ ಭಾಗವಹಿಸಿ ಅನುಭವ ಪಡೆಯಬೇಕು ಎಂದರು. ನ್ಯಾಯವಾದಿ ಕೆ.ಆರ್.ರಾಯಚೂರ ಫುಡ್ ಫೆಸ್ಟಿವಲ್ ಉದ್ಘಾಟಿಸಿ ಮಾತನಾಡಿ, ಫುಡ್ ಫೆಸ್ಟಿವಲ್ ಕಾರ್ಯಕ್ರಮವನ್ನು ಶಾಲೆಯಲ್ಲಿ ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ವ್ಯವಹಾರ ಜ್ಞಾನ ಬೆಳೆಸುವ ಕಾರ್ಯ ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ನಾಸಿರಾ ಹುಲ್ಲಿಕೇರಿ, ರಂಜನಸಾಬ ಮಕಾನದಾರ, ಮಹಿಬೂಬಸಾಬ ಹಣಗಿ, ಉಮರ ಡಾಲಾಯತ್, ಮಹಿಬೂಬ ಬಾಗವಾನ, ಮಹಿಬೂಬ ಸವರಾಜ, ಮಹಿಬೂಬ ಮುದ್ದೇಬಿಹಾಳ, ಯಾಸೀನ್ ಫನಿಬಂದ್, ಅನ್ವರ ಮುದಗಲ್ಲ, ಅಮದ್ ಅಮೀನಗಡ, ದಾವಲ ಬಾಗವಾನ, ಮುಸ್ತಾಕ ಯಾಳಗಿ, ಖಾಸಿಂಸಾಬ ಜಮಾದಾರ, ಮುಖ್ಯಗುರು ಅಬೂಬಕರ ಮಕಾನದಾರ, ಶಿಕ್ಷಕ ಸುರೇಶ ಬಾಟ, ಫರ್ಜಿನಾ ಕಲೆಗಾರ ಮತ್ತಿತರರು ಇದ್ದರು,1
- ಧಾರ್ಮಿಕ ಶ್ರದ್ಧಾಕೇಂದ್ರ ಸುಕ್ಷೇತ್ರ ಮದ್ವೀರಶೈವ ಶಿವಯೋಗ ಮಂದಿರದ 116 ನೇ ಕಾರಣಿಕ ಯುಗಪುರುಷ ಹಾನಗಲ್ ಕುಮಾರ ಶ್ರೀಗಳ 65 ಅಡಿ ಎತ್ತರದ ಮಾಹಾರಥೋತ್ಸವ ಸೋಮವಾರ ಸಂಜೆ 6 ಗಂಟೆಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದೊಂದಿಗೆ ಜರುಗಿತು. ಏಷ್ಯಾ ಖಂಡದಲ್ಲಿಯೇ ಅತಿ ಎತ್ತರದ (೬೫ಅಡಿ) ಮಾಹಾರಥೋತ್ಸವಕ್ಕೆ ಸಾಂಪ್ರದಾಯಕವಾಗಿ ಪೂಜೆ ಪುನಸ್ಕಾರ ನೆರೆವೇರಿಸಿದ ಸಂಸ್ಥೆಯ ಅಧ್ಯಕ್ಷ, ಮೂರು ಸಾವಿರಮಠದ ಶ್ರೀ ಗುರುಸಿದ್ದ ರಾಜಯೋಗೇಂದ್ರ ಮಹಾಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ಶಿರಬಡಗಿ ಗ್ರಾಮದ ಭಕ್ತಾಧಿಗಳು ತಂದ ಹಗ್ಗದಿಂದ ಭಕ್ತಗಣ ರಥ ಎಳೆಯಲಾಯಿತು. ಮಾಹಾರಥೋತ್ಸವಕ್ಕೆ ಭಕ್ತರು ಹೂವು ಸಮರ್ಪಿಸುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ಅಪಾರ ಭಕ್ತ ಸಮೂಹ ಶಿವನ ಹಾಗೂ ಶಿವಯೋಗಿಗಳ ಸ್ಮರಣೆ ಮೂಲಕ ರಥ ಎಳೆದರು. ಸಂಸ್ಥೆಯ ಅಧ್ಯಕ್ಷರೂ ಆಗಿರುವ ಮೂರು ಸಾವಿರಮಠದ ಶ್ರೀ ಗುರುಸಿದ್ದ ರಾಜಯೋಗೇಂದ್ರ ಮಹಾಸ್ವಾಮಿಗಳ ಉಪಾಧ್ಯಕ್ಷ ಹಾವೇರಿ ಹುಕ್ಕೇರಿ ಮಠದ ಸದಾಶಿವ ಶ್ರೀಗಳ ನೇತೃತ್ವದಲ್ಲಿ ಪೂಜೆ ಕೈಂಕರ್ಯಗಳು ಜರುಗಿದವು. ಮಾಹಾರಥೋತ್ಸವದಲ್ಲಿ ನಾಡಿನ ಮಹಾಸ್ವಾಮಿಗಳಾದ ಹೊಳೆಹುಚ್ಚೇಶ್ವರ ಶ್ರೀ, ಫಕೀರ ದಿಂಗಾಲೇಶ್ವರ ಸ್ವಾಮಿಜಿ ನೂರಾರು ಮಠಾಧೀಶರು, ಮಹಾಸ್ವಾಮಿಗಳು, ವಟುಸಾಧಕರು ಹಾಜರಿದ್ದರು. ಶಾಸಕ ಭೀಮಸೇನ ಚಿಮ್ಮನಕಟ್ಟಿ, ಮಾಜಿ ಶಾಸಕ ಎಂ.ಕೆ.,ಪಟ್ಟಣಶೆಟ್ಟಿ ಧರ್ಮದರ್ಶಿ ಎಂ.ಬಿ.ಹಂಗರಗಿ, ಶರಣಪ್ಪಗೌಡ ಪಾಟೀಲ, ಕುಮಾರಗೌಡ ಜನಾಲಿ,ಮಹಾಂತೇಶ ಮಮದಾಪೂರ, ಶಾಂತಗೌಡ ಪಾಟೀಲ, ಬಸವರಾಜ ಪಾಟೀಲ, ಸಿದ್ದನಗೌಡ ಪಾಟೀಲ, ಆರ್.ಬಿ.ಪಾಟೀಲ, ಮುಕ್ಕಣಗೌಡ ಜನಾಲಿ, ನಾಗರಾಜ ಕಾಚೆಟ್ಟಿ, ಡಾ.ಆರ್.ಸಿ.ಭಂಡಾರಿ, ಪಂಪಣ್ಣ ಕಾಚೆಟ್ಟಿ, ಸಿಪಿಐ. ಕರೆಪ್ಪ ಬನ್ನೆ, ಪಿ.ಎಸ್.ಐ ಹನಮಂತ ನರಳೆ, ಜಿಲ್ಲೆಯ ವಿವಿಧ ಭಾಗಗಳ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ತಾಲೂಕಿನ ಮಂಗಳೂರು ಗ್ರಾಮದ ಭಜನಾ ಮಂಡಳಿಯವರು ನಂದಿಕೋಲು ಮೆರವಣಿಗೆಯೊಂದಿಗೆ ಮಹಾರಥೋತ್ಸವದಲ್ಲಿ ಗಮನಾರ್ಹವಾಗಿತ್ತು.1
- ಬಾಗಲಕೋಟೆ ತಹಶೀಲ್ದಾರ ಕಚೇರಿ ಆವರಣದಲ್ಲಿ ಸಾರ್ವಜನಿಕರ ಸೌಲಭ್ಯಕ್ಕಾಗಿ 2022ನೇ ಸಾಲಿನಲ್ಲಿ ಸುಮಾರು 8.40 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಶೌಚಾಲಯ, ಗ್ರಂಥಾಲಯ ಹಾಗೂ ವಾಚನಾಲಯ ಕಟ್ಟಡ ಉದ್ಘಾಟನೆ ಆಗದೇ ಬೀಗ ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ. ಕಟ್ಟಡವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸದೇ ಇರುವುದರಿಂದ ಸ್ಥಳೀಯರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷರು ಕಟ್ಟಡವನ್ನು ಪರಿಶೀಲಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಸಾರ್ವಜನಿಕರ ತೆರಿಗೆಯ ಹಣದಲ್ಲಿ ನಿರ್ಮಾಣವಾದ ಈ ಕಟ್ಟಡವನ್ನು ತಕ್ಷಣವೇ ಸಾರ್ವಜನಿಕರಿಗೆ ತೆರೆಯಬೇಕು. ಇಲ್ಲಿ ಗ್ರಂಥಾಲಯ ಎಂದು ಫಲಕದಲ್ಲಿ ಉಲ್ಲೇಖಿಸಿದ್ದರೆ, ಗ್ರಂಥಾಲಯದ ವ್ಯವಸ್ಥೆ ಎಲ್ಲಿದೆ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಸಾರ್ವಜನಿಕರ ಮೂಲಭೂತ ಹಕ್ಕುಗಳಾದ ನೀರು, ಶೌಚಾಲಯ ಮುಂತಾದ ಸೌಲಭ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ” ಎಂದು ಅವರು ಆಗ್ರಹಿಸಿದರು. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಕಟ್ಟಡವನ್ನು ಸಾರ್ವಜನಿಕ ಬಳಕೆಗೆ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಇದೀಗ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.1
- ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಶ್ರೀ ನಿವಾಸ ಚಿತ್ರಮಂದಿರ ಹತ್ತಿರ ಇರುವ ಬೈಕ್ ಗ್ಯಾರೇಜ್ ಗೆ ಬೆಂಕಿ ತಗುಲಿ ೮ ಕ್ಕೂ ಹೆಚ್ಚು ಬೈಕ್ ಗಳು ಬೆಂಕಿಗೆ ಆಹುತಿಯಾದ ಘಟನೆ ಫೆ.೧೬ ರಾತ್ರಿ ೧೦ ಗಂಟೆಯ ಸಂದರ್ಭ ನಡೆದಿದೆ. ಬೆಂಕಿ ತಗುಲಿದ ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಈ ಬೆಂಕಿ ಅವಘಡದಲ್ಲಿ ೮ ಕ್ಕೂ ಹೆಚ್ಚು ಬೈಕ್ ಗಳು ಬೆಂಕಿಗೆ ಆಹುತಿಯಾಗಿದೆ ಎಂದು ಗ್ಯಾರೇಜ್ ಮಾಲೀಕ ಕೃಷ್ಣ ವದ್ದಿ ತಿಳಿಸಿದ್ದಾರೆ. ಗ್ಯಾರೇಜ್ ಗೆ ಬೆಂಕಿ ತಗುಲಿದ ಕಾರಣ ತಿಳಿದುಬಂದಿಲ್ಲ.1
- ರಾಮದುರ್ಗ : ಸುರೇಬಾನ ನಾಡಕಚೇರಿ ಮುಂಭಾಗದಲ್ಲಿ ಪಾನ್ ಮಸಾಲ ಹಾಗೂ ಗುಟ್ಕಾ ತಿಂದು ಉಗುಳಲು ಬಕೆಟ್ ಇಡುತ್ತಿರುವ ದೃಶ್ಯ ಕಂಡು ಬಂದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರತಿ ದಿನ ಸಾವಿರಾರು ಜನರು ವಿವಿಧ ಸರ್ಕಾರಿ ಕೆಲಸಗಳಿಗಾಗಿ ನಾಡಕಚೇರಿಗೆ ಭೇಟಿ ನೀಡುತ್ತಾರೆ. ಇಂತಹ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಬೇಕಾದ ಜವಾಬ್ದಾರಿ ಅಧಿಕಾರಿಗಳದ್ದಾಗಿದ್ದರೂ, ಆವರಣದಲ್ಲಿ ಅಸ್ವಚ್ಛತೆ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ. ಇನ್ನೂ ಆತಂಕಕಾರಿ ವಿಷಯವೆಂದರೆ, ನಾಡಕಚೇರಿ ಆವರಣದಲ್ಲೇ ಪೂರ್ವ ಪ್ರಾಥಮಿಕ ಶಾಲೆ ಕಾರ್ಯನಿರ್ವಹಿಸುತ್ತಿದ್ದು, ದಿನನಿತ್ಯ ನೂರಾರು ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಾನ್ ಮಸಾಲ ಹಾಗೂ ಗುಟ್ಕಾ ಉಗುಳುವಿಕೆ ಮಕ್ಕಳ ಆರೋಗ್ಯಕ್ಕೂ ಹಾನಿಕಾರಕವಾಗುವ ಸಾಧ್ಯತೆ ಇದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಮತ್ತು ಸಾರ್ವಜನಿಕರು ಅಧಿಕಾರಿಗಳ ನಿರ್ಲಕ್ಷ್ಯವೇ ಈ ಪರಿಸ್ಥಿತಿಗೆ ಕಾರಣ ಎಂದು ಆರೋಪಿಸಿದ್ದಾರೆ. ತಕ್ಷಣವೇ ಸ್ವಚ್ಛತಾ ಕ್ರಮ ಕೈಗೊಳ್ಳಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಿಕೆ ನಿಷೇಧಿಸಲು ಕಠಿಣ ಕ್ರಮ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.3
- ಬೆಳಗಾಂವ ಜಿಲ್ಲಾ ರಾಮದುರ್ಗ ತಾಲೂಕಿನ ಹೊಸಕೋಟೆ ಗ್ರಾಮದ ಸಾರ್ವಜನಿಕರು ರಾಮದುರ್ಗ ತಾಲೂಕಿಗೆ ಬಂದಂತ ಆರೋಗ್ಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿ ತಮ್ಮ ಅಳಿಲನ್ನು ಮಾಧ್ಯಮದವರ ಮುಂದೆ ಹೇಳಿಕೊಂಡರು. ಹೊಸಕೋಟೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಬ್ಬ ಡಾಕ್ಟರ್ ಇದ್ದು ಎರಡು ವರ್ಷದಿಂದ ಅವರ ಸೇವೆ ಒಳ್ಳೆ ತರಹ ಮಾಡುತ್ತಾ ಬಂದಿದ್ದು ಹೊಸಕೋಟೆ ಗ್ರಾಮದ ಸುತ್ತು ಮುತ್ತಿಲಿನ ಹಳ್ಳಿಗಳಿಗೆ ಇವರ ಸೇವೆ ಅಚ್ಚುಮೆಚ್ಚಿಗೆ ಪಾತ್ರರಾಗಿದ್ದಾರೆ. ಈಗ ಸರ್ಕಾರದವರು ಇವರನ್ನು ವರ್ಗಾವಣೆ ಮಾಡಿದ್ದಕ್ಕೆ ಹೊಸಕೋಟೆ ಗ್ರಾಮಸ್ಥರು ಅವರನ್ನು ವರ್ಗಾವಣೆ ಮಾಡದಂತೆ ಮನವಿ ಸಲ್ಲಿಸಿ ತಮ್ಮ ಅನಿಸಿಕೆಗಳನ್ನು ಮಾಧ್ಯಮದವರು ಮುಂದೆ ಹೇಳಿಕೊಂಡು ಅವರನ್ನು ವರ್ಗಾವಣೆ ಮಾಡಿದಲ್ಲಿ ಜಿಲ್ಲಾಮಟ್ಟದಲ್ಲಿ ಸತ್ಯಾಗ್ರಹ ಮಾಡಲಾಗುವುದೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.1
- ಮುಧೋಳ : ತಾಲೂಕಿನ ಮುಗಳಖೋಡ ಗ್ರಾಮದ ಆರಾಧ್ಯ ದೈವ ಪರಮಾನಂದ ದೇವರ ಜಾತ್ರೋತ್ಸವ ಸೋಮವಾರ ಸಂಭ್ರಮದಿಂದ ಜರುಗಿತು. ಜಾತ್ರೆ ಹಿನ್ನೆಲೆ ದೇವರಿಗೆ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ಹತ್ತಾರು ದಾರ್ಮಿಕ ಕೈಂಕರ್ಯ ನಡೆದವು. ಮುತ್ತೈದೆಯರು ಆರತಿ ಹಿಡಿದು ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡರು. ಸಂಜೆ ದೇವರ ಸನ್ನಿಧಿಯಲ್ಲಿ ಜರುಗಿದ ದೈವ ವಾಣಿ ಆಲಿಸಲು ಸಾವಿರಾರು ಭಕ್ತರು ನೆರೆದಿದ್ದರು. ಮುಗಳಖೋಡ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಜಾತ್ರೋತ್ಸವದಲ್ಲಿ ಪಾಲ್ಗೊಂಡು ದೃವರ ಕೃಪಾಶೀರ್ವಾದಕ್ಕೆ ಪಾತ್ರರಾದರು.3
- ಬಾಗಲಕೋಟೆ: ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ವಸೂಲಾತಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಮುಧೋಳ ಭಾಗದ ರೈತರು ಸೋಮವಾರ ಬಾಗಲಕೋಟೆ ಜಿಲ್ಲೆಯ ಸಂಸದ ಪಿ.ಸಿ. ಗದ್ದಿಗೌಡರ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು. ಬಾಗಲಕೋಟೆ ಡಿಸಿ ಭವನದಲ್ಲಿರುವ ಸಂಸದ ಕಚೇರಿಗೆ ಬಂದ ರೈತರು, ಬ್ಯಾಂಕ್‌ಗಳಿಂದ ಲಿಲಾವ್ ನೋಟಿಸ್‌ಗಳನ್ನು ನೀಡಲಾಗುತ್ತಿದ್ದು, ಸಾಲ ಮರುಪಾವತಿಸದಿದ್ದರೆ ಆಸ್ತಿ ಜಪ್ತಿ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ ಎಂದು ದೂರಿದರು. ಇದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ ಎಂದು ತಿಳಿಸಿದರು. ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರಿಗೆ ಕಿರುಕುಳ ನೀಡದಂತೆ ಸೂಚನೆ ನೀಡಬೇಕು ಹಾಗೂ ಸಾಲ ಮರುಪಾವತಿಗೆ ಒನ್ ಟೈಮ್ ಸೆಟಲ್‌ಮೆಂಟ್ ವ್ಯವಸ್ಥೆ ಕಲ್ಪಿಸಬೇಕು ಎಂದು ರೈತರು ಆಗ್ರಹಿಸಿದರು. ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಈ ವೇಳೆ ಸಂಸದ ಪಿ.ಸಿ. ಗದ್ದಿಗೌಡರ ಅವರು ರೈತರು ಮತ್ತು ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಸಭೆಯಲ್ಲಿ ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಿಇಒ ಶಶಿಧರ ಕುರೇರ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.3