Shuru
Apke Nagar Ki App…
ಧಗ ಧಗ ಹೊತ್ತಿ ಉರಿದ ಬೈಕ್ ಗ್ಯಾರೇಜ್ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಶ್ರೀ ನಿವಾಸ ಚಿತ್ರಮಂದಿರ ಹತ್ತಿರ ಇರುವ ಬೈಕ್ ಗ್ಯಾರೇಜ್ ಗೆ ಬೆಂಕಿ ತಗುಲಿ ೮ ಕ್ಕೂ ಹೆಚ್ಚು ಬೈಕ್ ಗಳು ಬೆಂಕಿಗೆ ಆಹುತಿಯಾದ ಘಟನೆ ಫೆ.೧೬ ರಾತ್ರಿ ೧೦ ಗಂಟೆಯ ಸಂದರ್ಭ ನಡೆದಿದೆ. ಬೆಂಕಿ ತಗುಲಿದ ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಈ ಬೆಂಕಿ ಅವಘಡದಲ್ಲಿ ೮ ಕ್ಕೂ ಹೆಚ್ಚು ಬೈಕ್ ಗಳು ಬೆಂಕಿಗೆ ಆಹುತಿಯಾಗಿದೆ ಎಂದು ಗ್ಯಾರೇಜ್ ಮಾಲೀಕ ಕೃಷ್ಣ ವದ್ದಿ ತಿಳಿಸಿದ್ದಾರೆ. ಗ್ಯಾರೇಜ್ ಗೆ ಬೆಂಕಿ ತಗುಲಿದ ಕಾರಣ ತಿಳಿದುಬಂದಿಲ್ಲ.
Aaryan Ganiger
ಧಗ ಧಗ ಹೊತ್ತಿ ಉರಿದ ಬೈಕ್ ಗ್ಯಾರೇಜ್ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಶ್ರೀ ನಿವಾಸ ಚಿತ್ರಮಂದಿರ ಹತ್ತಿರ ಇರುವ ಬೈಕ್ ಗ್ಯಾರೇಜ್ ಗೆ ಬೆಂಕಿ ತಗುಲಿ ೮ ಕ್ಕೂ ಹೆಚ್ಚು ಬೈಕ್ ಗಳು ಬೆಂಕಿಗೆ ಆಹುತಿಯಾದ ಘಟನೆ ಫೆ.೧೬ ರಾತ್ರಿ ೧೦ ಗಂಟೆಯ ಸಂದರ್ಭ ನಡೆದಿದೆ. ಬೆಂಕಿ ತಗುಲಿದ ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಈ ಬೆಂಕಿ ಅವಘಡದಲ್ಲಿ ೮ ಕ್ಕೂ ಹೆಚ್ಚು ಬೈಕ್ ಗಳು ಬೆಂಕಿಗೆ ಆಹುತಿಯಾಗಿದೆ ಎಂದು ಗ್ಯಾರೇಜ್ ಮಾಲೀಕ ಕೃಷ್ಣ ವದ್ದಿ ತಿಳಿಸಿದ್ದಾರೆ. ಗ್ಯಾರೇಜ್ ಗೆ ಬೆಂಕಿ ತಗುಲಿದ ಕಾರಣ ತಿಳಿದುಬಂದಿಲ್ಲ.
More news from ಕರ್ನಾಟಕ and nearby areas
- ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಶ್ರೀ ನಿವಾಸ ಚಿತ್ರಮಂದಿರ ಹತ್ತಿರ ಇರುವ ಬೈಕ್ ಗ್ಯಾರೇಜ್ ಗೆ ಬೆಂಕಿ ತಗುಲಿ ೮ ಕ್ಕೂ ಹೆಚ್ಚು ಬೈಕ್ ಗಳು ಬೆಂಕಿಗೆ ಆಹುತಿಯಾದ ಘಟನೆ ಫೆ.೧೬ ರಾತ್ರಿ ೧೦ ಗಂಟೆಯ ಸಂದರ್ಭ ನಡೆದಿದೆ. ಬೆಂಕಿ ತಗುಲಿದ ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಈ ಬೆಂಕಿ ಅವಘಡದಲ್ಲಿ ೮ ಕ್ಕೂ ಹೆಚ್ಚು ಬೈಕ್ ಗಳು ಬೆಂಕಿಗೆ ಆಹುತಿಯಾಗಿದೆ ಎಂದು ಗ್ಯಾರೇಜ್ ಮಾಲೀಕ ಕೃಷ್ಣ ವದ್ದಿ ತಿಳಿಸಿದ್ದಾರೆ. ಗ್ಯಾರೇಜ್ ಗೆ ಬೆಂಕಿ ತಗುಲಿದ ಕಾರಣ ತಿಳಿದುಬಂದಿಲ್ಲ.1
- ಗುಳೇದಗುಡ್ಡ: ಶಾಲೆಯಲ್ಲಿ ಆಹಾರ ಉತ್ಸವದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿದೆಸೆಯಿಂದಲೇ ಅಹಾರದ ಬಗ್ಗೆ ಅರಿವು, ವ್ಯಾಪಾರ ಮಾಡುವ ಬಗ್ಗೆ ಅನುಭವ ಹಾಗೂ ಗ್ರಾಹಕರೊಂದಿಗೆ ವ್ಯವಹರಿಸುವ ಜ್ಞಾನ ದೊರೆಯುತ್ತದೆ. ಇಂತಹ ಉತ್ಸವದಿಂದ ಮಕ್ಕಳಲ್ಲಿ ವ್ಯಾಪಾರದಲ್ಲಿ ಆಸಕ್ತಿ ಬೆಳೆಯಲು ಸಹಾಯಕವಾಗಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಕಲೀಲ ಕೊತ್ತಲ ಹೇಳಿದರು. ಅವರು ಸೋಮವಾರ ಪಟ್ಟಣ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂ 2ರಲ್ಲಿ ಹಮ್ಮಿಕೊಂಡಿದ್ದ ಫುಡ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಮಾತನಾಡಿ, ಉತ್ಸವದಲ್ಲಿ ವಿದ್ಯಾರ್ಥಿಗಳೇ ತಯಾರಿಸಿದ ವಿವಿಧ ಬಗೆಯ ಆಹಾರ ಪದಾರ್ಥಗಳು ಮಾರಾಟಕ್ಕೆ ಇದ್ದು, ವಿದ್ಯಾರ್ಥಿಗಳು ಇಂತಹ ಉತ್ಸವದಲ್ಲಿ ಭಾಗವಹಿಸಿ ಅನುಭವ ಪಡೆಯಬೇಕು ಎಂದರು. ನ್ಯಾಯವಾದಿ ಕೆ.ಆರ್.ರಾಯಚೂರ ಫುಡ್ ಫೆಸ್ಟಿವಲ್ ಉದ್ಘಾಟಿಸಿ ಮಾತನಾಡಿ, ಫುಡ್ ಫೆಸ್ಟಿವಲ್ ಕಾರ್ಯಕ್ರಮವನ್ನು ಶಾಲೆಯಲ್ಲಿ ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ವ್ಯವಹಾರ ಜ್ಞಾನ ಬೆಳೆಸುವ ಕಾರ್ಯ ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ನಾಸಿರಾ ಹುಲ್ಲಿಕೇರಿ, ರಂಜನಸಾಬ ಮಕಾನದಾರ, ಮಹಿಬೂಬಸಾಬ ಹಣಗಿ, ಉಮರ ಡಾಲಾಯತ್, ಮಹಿಬೂಬ ಬಾಗವಾನ, ಮಹಿಬೂಬ ಸವರಾಜ, ಮಹಿಬೂಬ ಮುದ್ದೇಬಿಹಾಳ, ಯಾಸೀನ್ ಫನಿಬಂದ್, ಅನ್ವರ ಮುದಗಲ್ಲ, ಅಮದ್ ಅಮೀನಗಡ, ದಾವಲ ಬಾಗವಾನ, ಮುಸ್ತಾಕ ಯಾಳಗಿ, ಖಾಸಿಂಸಾಬ ಜಮಾದಾರ, ಮುಖ್ಯಗುರು ಅಬೂಬಕರ ಮಕಾನದಾರ, ಶಿಕ್ಷಕ ಸುರೇಶ ಬಾಟ, ಫರ್ಜಿನಾ ಕಲೆಗಾರ ಮತ್ತಿತರರು ಇದ್ದರು,1
- ಧಾರ್ಮಿಕ ಶ್ರದ್ಧಾಕೇಂದ್ರ ಸುಕ್ಷೇತ್ರ ಮದ್ವೀರಶೈವ ಶಿವಯೋಗ ಮಂದಿರದ 116 ನೇ ಕಾರಣಿಕ ಯುಗಪುರುಷ ಹಾನಗಲ್ ಕುಮಾರ ಶ್ರೀಗಳ 65 ಅಡಿ ಎತ್ತರದ ಮಾಹಾರಥೋತ್ಸವ ಸೋಮವಾರ ಸಂಜೆ 6 ಗಂಟೆಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದೊಂದಿಗೆ ಜರುಗಿತು. ಏಷ್ಯಾ ಖಂಡದಲ್ಲಿಯೇ ಅತಿ ಎತ್ತರದ (೬೫ಅಡಿ) ಮಾಹಾರಥೋತ್ಸವಕ್ಕೆ ಸಾಂಪ್ರದಾಯಕವಾಗಿ ಪೂಜೆ ಪುನಸ್ಕಾರ ನೆರೆವೇರಿಸಿದ ಸಂಸ್ಥೆಯ ಅಧ್ಯಕ್ಷ, ಮೂರು ಸಾವಿರಮಠದ ಶ್ರೀ ಗುರುಸಿದ್ದ ರಾಜಯೋಗೇಂದ್ರ ಮಹಾಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ಶಿರಬಡಗಿ ಗ್ರಾಮದ ಭಕ್ತಾಧಿಗಳು ತಂದ ಹಗ್ಗದಿಂದ ಭಕ್ತಗಣ ರಥ ಎಳೆಯಲಾಯಿತು. ಮಾಹಾರಥೋತ್ಸವಕ್ಕೆ ಭಕ್ತರು ಹೂವು ಸಮರ್ಪಿಸುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ಅಪಾರ ಭಕ್ತ ಸಮೂಹ ಶಿವನ ಹಾಗೂ ಶಿವಯೋಗಿಗಳ ಸ್ಮರಣೆ ಮೂಲಕ ರಥ ಎಳೆದರು. ಸಂಸ್ಥೆಯ ಅಧ್ಯಕ್ಷರೂ ಆಗಿರುವ ಮೂರು ಸಾವಿರಮಠದ ಶ್ರೀ ಗುರುಸಿದ್ದ ರಾಜಯೋಗೇಂದ್ರ ಮಹಾಸ್ವಾಮಿಗಳ ಉಪಾಧ್ಯಕ್ಷ ಹಾವೇರಿ ಹುಕ್ಕೇರಿ ಮಠದ ಸದಾಶಿವ ಶ್ರೀಗಳ ನೇತೃತ್ವದಲ್ಲಿ ಪೂಜೆ ಕೈಂಕರ್ಯಗಳು ಜರುಗಿದವು. ಮಾಹಾರಥೋತ್ಸವದಲ್ಲಿ ನಾಡಿನ ಮಹಾಸ್ವಾಮಿಗಳಾದ ಹೊಳೆಹುಚ್ಚೇಶ್ವರ ಶ್ರೀ, ಫಕೀರ ದಿಂಗಾಲೇಶ್ವರ ಸ್ವಾಮಿಜಿ ನೂರಾರು ಮಠಾಧೀಶರು, ಮಹಾಸ್ವಾಮಿಗಳು, ವಟುಸಾಧಕರು ಹಾಜರಿದ್ದರು. ಶಾಸಕ ಭೀಮಸೇನ ಚಿಮ್ಮನಕಟ್ಟಿ, ಮಾಜಿ ಶಾಸಕ ಎಂ.ಕೆ.,ಪಟ್ಟಣಶೆಟ್ಟಿ ಧರ್ಮದರ್ಶಿ ಎಂ.ಬಿ.ಹಂಗರಗಿ, ಶರಣಪ್ಪಗೌಡ ಪಾಟೀಲ, ಕುಮಾರಗೌಡ ಜನಾಲಿ,ಮಹಾಂತೇಶ ಮಮದಾಪೂರ, ಶಾಂತಗೌಡ ಪಾಟೀಲ, ಬಸವರಾಜ ಪಾಟೀಲ, ಸಿದ್ದನಗೌಡ ಪಾಟೀಲ, ಆರ್.ಬಿ.ಪಾಟೀಲ, ಮುಕ್ಕಣಗೌಡ ಜನಾಲಿ, ನಾಗರಾಜ ಕಾಚೆಟ್ಟಿ, ಡಾ.ಆರ್.ಸಿ.ಭಂಡಾರಿ, ಪಂಪಣ್ಣ ಕಾಚೆಟ್ಟಿ, ಸಿಪಿಐ. ಕರೆಪ್ಪ ಬನ್ನೆ, ಪಿ.ಎಸ್.ಐ ಹನಮಂತ ನರಳೆ, ಜಿಲ್ಲೆಯ ವಿವಿಧ ಭಾಗಗಳ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ತಾಲೂಕಿನ ಮಂಗಳೂರು ಗ್ರಾಮದ ಭಜನಾ ಮಂಡಳಿಯವರು ನಂದಿಕೋಲು ಮೆರವಣಿಗೆಯೊಂದಿಗೆ ಮಹಾರಥೋತ್ಸವದಲ್ಲಿ ಗಮನಾರ್ಹವಾಗಿತ್ತು.1
- ಬಾಗಲಕೋಟೆ ತಹಶೀಲ್ದಾರ ಕಚೇರಿ ಆವರಣದಲ್ಲಿ ಸಾರ್ವಜನಿಕರ ಸೌಲಭ್ಯಕ್ಕಾಗಿ 2022ನೇ ಸಾಲಿನಲ್ಲಿ ಸುಮಾರು 8.40 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಶೌಚಾಲಯ, ಗ್ರಂಥಾಲಯ ಹಾಗೂ ವಾಚನಾಲಯ ಕಟ್ಟಡ ಉದ್ಘಾಟನೆ ಆಗದೇ ಬೀಗ ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ. ಕಟ್ಟಡವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸದೇ ಇರುವುದರಿಂದ ಸ್ಥಳೀಯರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷರು ಕಟ್ಟಡವನ್ನು ಪರಿಶೀಲಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಸಾರ್ವಜನಿಕರ ತೆರಿಗೆಯ ಹಣದಲ್ಲಿ ನಿರ್ಮಾಣವಾದ ಈ ಕಟ್ಟಡವನ್ನು ತಕ್ಷಣವೇ ಸಾರ್ವಜನಿಕರಿಗೆ ತೆರೆಯಬೇಕು. ಇಲ್ಲಿ ಗ್ರಂಥಾಲಯ ಎಂದು ಫಲಕದಲ್ಲಿ ಉಲ್ಲೇಖಿಸಿದ್ದರೆ, ಗ್ರಂಥಾಲಯದ ವ್ಯವಸ್ಥೆ ಎಲ್ಲಿದೆ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಸಾರ್ವಜನಿಕರ ಮೂಲಭೂತ ಹಕ್ಕುಗಳಾದ ನೀರು, ಶೌಚಾಲಯ ಮುಂತಾದ ಸೌಲಭ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ” ಎಂದು ಅವರು ಆಗ್ರಹಿಸಿದರು. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಕಟ್ಟಡವನ್ನು ಸಾರ್ವಜನಿಕ ಬಳಕೆಗೆ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಇದೀಗ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.1
- ರಾಮದುರ್ಗ : ಸುರೇಬಾನ ನಾಡಕಚೇರಿ ಮುಂಭಾಗದಲ್ಲಿ ಪಾನ್ ಮಸಾಲ ಹಾಗೂ ಗುಟ್ಕಾ ತಿಂದು ಉಗುಳಲು ಬಕೆಟ್ ಇಡುತ್ತಿರುವ ದೃಶ್ಯ ಕಂಡು ಬಂದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರತಿ ದಿನ ಸಾವಿರಾರು ಜನರು ವಿವಿಧ ಸರ್ಕಾರಿ ಕೆಲಸಗಳಿಗಾಗಿ ನಾಡಕಚೇರಿಗೆ ಭೇಟಿ ನೀಡುತ್ತಾರೆ. ಇಂತಹ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಬೇಕಾದ ಜವಾಬ್ದಾರಿ ಅಧಿಕಾರಿಗಳದ್ದಾಗಿದ್ದರೂ, ಆವರಣದಲ್ಲಿ ಅಸ್ವಚ್ಛತೆ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ. ಇನ್ನೂ ಆತಂಕಕಾರಿ ವಿಷಯವೆಂದರೆ, ನಾಡಕಚೇರಿ ಆವರಣದಲ್ಲೇ ಪೂರ್ವ ಪ್ರಾಥಮಿಕ ಶಾಲೆ ಕಾರ್ಯನಿರ್ವಹಿಸುತ್ತಿದ್ದು, ದಿನನಿತ್ಯ ನೂರಾರು ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಾನ್ ಮಸಾಲ ಹಾಗೂ ಗುಟ್ಕಾ ಉಗುಳುವಿಕೆ ಮಕ್ಕಳ ಆರೋಗ್ಯಕ್ಕೂ ಹಾನಿಕಾರಕವಾಗುವ ಸಾಧ್ಯತೆ ಇದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಮತ್ತು ಸಾರ್ವಜನಿಕರು ಅಧಿಕಾರಿಗಳ ನಿರ್ಲಕ್ಷ್ಯವೇ ಈ ಪರಿಸ್ಥಿತಿಗೆ ಕಾರಣ ಎಂದು ಆರೋಪಿಸಿದ್ದಾರೆ. ತಕ್ಷಣವೇ ಸ್ವಚ್ಛತಾ ಕ್ರಮ ಕೈಗೊಳ್ಳಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಿಕೆ ನಿಷೇಧಿಸಲು ಕಠಿಣ ಕ್ರಮ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.3
- ಬಹು ವರ್ಷದ ಕನಸು ನನಸು ಮಾಡಿದ್ದಾರೆ ನಮ್ಮ ಸೋಮಣ್ಣ” – ಸಚಿವ ಜಮೀರ್ ಅಹಮದ್ ಖಾನ್ ✨🏗️ ಸಚಿವರಾದ B. Z. Zameer Ahmed Khan ಅವರು “ಬಹು ವರ್ಷದ ಕನಸು ನಮ್ಮ ಸೋಮಣ್ಣ ಅವರು ನನಸು ಮಾಡಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು 🙌 ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅಭಿವೃದ್ಧಿ ಕಾರ್ಯಗಳ ಕುರಿತಾಗಿ ಅವರು ನೀಡಿದ ಪ್ರಶಂಸೆ ಗಮನ ಸೆಳೆದಿದೆ.1
- ಬೆಳಗಾಂವ ಜಿಲ್ಲಾ ರಾಮದುರ್ಗ ತಾಲೂಕಿನ ಹೊಸಕೋಟೆ ಗ್ರಾಮದ ಸಾರ್ವಜನಿಕರು ರಾಮದುರ್ಗ ತಾಲೂಕಿಗೆ ಬಂದಂತ ಆರೋಗ್ಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿ ತಮ್ಮ ಅಳಿಲನ್ನು ಮಾಧ್ಯಮದವರ ಮುಂದೆ ಹೇಳಿಕೊಂಡರು. ಹೊಸಕೋಟೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಬ್ಬ ಡಾಕ್ಟರ್ ಇದ್ದು ಎರಡು ವರ್ಷದಿಂದ ಅವರ ಸೇವೆ ಒಳ್ಳೆ ತರಹ ಮಾಡುತ್ತಾ ಬಂದಿದ್ದು ಹೊಸಕೋಟೆ ಗ್ರಾಮದ ಸುತ್ತು ಮುತ್ತಿಲಿನ ಹಳ್ಳಿಗಳಿಗೆ ಇವರ ಸೇವೆ ಅಚ್ಚುಮೆಚ್ಚಿಗೆ ಪಾತ್ರರಾಗಿದ್ದಾರೆ. ಈಗ ಸರ್ಕಾರದವರು ಇವರನ್ನು ವರ್ಗಾವಣೆ ಮಾಡಿದ್ದಕ್ಕೆ ಹೊಸಕೋಟೆ ಗ್ರಾಮಸ್ಥರು ಅವರನ್ನು ವರ್ಗಾವಣೆ ಮಾಡದಂತೆ ಮನವಿ ಸಲ್ಲಿಸಿ ತಮ್ಮ ಅನಿಸಿಕೆಗಳನ್ನು ಮಾಧ್ಯಮದವರು ಮುಂದೆ ಹೇಳಿಕೊಂಡು ಅವರನ್ನು ವರ್ಗಾವಣೆ ಮಾಡಿದಲ್ಲಿ ಜಿಲ್ಲಾಮಟ್ಟದಲ್ಲಿ ಸತ್ಯಾಗ್ರಹ ಮಾಡಲಾಗುವುದೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.1
- ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಹಜರತ್ ಸೈಯದ್ ಷಾ ಮುರ್ತುಜಾ ಖಾದ್ರಿ ದರ್ಗಾ ಉರುಸು ಅಂಗವಾಗಿ ಅಲಂಪೂರಪೇಟ್ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಅಸೋಸಿಯೇಶನ್ ವತಿಯಿಂದ ಏರ್ಪಡಿಸಲಾಗಿದ್ದ ಹಾರ್ಡ ಟೆನಿಷ್ ಓಪನ್ ಕ್ರಿಕೆಟ್ ಟೂರ್ನಾಮೆಂಟ್‌ದಲ್ಲಿ ಪ್ರಥಮ ಬಹುಮಾನ ೧ ಲಕ್ಷ ೨೫ ಸಾವಿರ ರೂ ವನ್ನು ಗಂಗಾವತಿಯ ತೈಮುರ ಟೀಂ ಮುಡಿಗೇರಿಸಿಕೊಂಡಿದೆ. ದ್ವಿತೀಯ ಬಹುಮಾನವನ್ನು ಇಳಕಲ್ಲದ ಎಂ.ಎA.ಸಿಸಿ ತಂಡ ೬೫ ಸಾವಿರ ರೂ ಪಡೆದುಕೊಂಡಿದೆ. ಬಹುಮಾನವನ್ನು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ವಿತರಿಸಿದರು. ಈ ಸಮಯದಲ್ಲಿ ಅಲಂಪೂರಪೇಟ್ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಅಸೋಸಿಯೇಶನ್ ಅಧ್ಯಕ್ಷ ನಬೀರಸೂಲ ಆನೆಗುಂದಿ, ರಫೀಕ ಸೈಯದ್, ಗ್ರಾನೈಟ್ ಉದ್ದಿಮೆದಾರ ಪ್ರವೀಣ ಹೂಲಗೇರಿ, ವೆಂಕಟೇಶ ಬಂಡಿ, ರಾಜು ಬನ್ನಿಗೊಳ, ನೀಲಕಂಠ ಶಾಸ್ತಿçÃ, ಅಸ್ಲಂ ಬೇಪಾರಿ ಹಾಗೂ ಕಮೀಟಿಯ ಪದಾಧಿಕಾರಿಗಳು ಸದಸ್ಯರು ಇದ್ದರು. ಕ್ರೀಕೆಟ್ ಟೂರ್ನಾಮೆಂಟ್ ಕಾಮೆಂಟ್ರಿಯನ್ನು ಬಾಬುಲಾಲ ಖಾಜಿ, ಅಬ್ದುಲ ರಹೇಮಾನ ಕರಡಿ ಯಶಸ್ವಿಯಾಗಿ ನಡೆಸಿಕೊಟ್ಟರು.1