Shuru
Apke Nagar Ki App…
ಕಲ್ಬುರ್ಗಿ ನಗರ ಪೊಲೀಸರ ಭರ್ಜರಿ ಕಾರ್ಯಚರಣೆ ಕುಖ್ಯಾತ ಮನೆಗಳರ ಬಂಧನ
ಕಲ್ಯಾಣವಾಣಿ ನ್ಯೂಸ್
ಕಲ್ಬುರ್ಗಿ ನಗರ ಪೊಲೀಸರ ಭರ್ಜರಿ ಕಾರ್ಯಚರಣೆ ಕುಖ್ಯಾತ ಮನೆಗಳರ ಬಂಧನ
More news from ಕರ್ನಾಟಕ and nearby areas
- Post by ABU NEWS CHANNEL ಸಂಪಾದಕರು1
- *ವಿಮಾನ ದುರಂತ ಅಣುಕು ಪ್ರದರ್ಶನ* ಬೆಂ.ಗ್ರಾ ಜಿಲ್ಲೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸಹಯೋಗದಲ್ಲಿ ವಿಮಾನ ದುರಂತಗಳನ್ನು ತಡೆಗಟ್ಟುವ ಸಂಬಂಧ ಇಂದು ಚಾಣಕ್ಯ ವಿಶ್ವವಿದ್ಯಾಲಯ ಕ್ಯಾಂಪಸ್, ದೇವನಹಳ್ಳಿ ಇಲ್ಲಿ ಚಾಲೆಂಜರ್ '26 ಸರಣಿಯ ಅಡಿಯಲ್ಲಿ ಪೂರ್ಣ ಪ್ರಮಾಣದ ವಿಮಾನ ಅಪಘಾತ ಕುರಿತು ಅಣುಕು ಪ್ರದರ್ಶನ ಆಯೋಜಿಸಲಾಗಿತ್ತು. ಈ ಅಣಕು ಪ್ರದರ್ಶನದಲ್ಲಿ ನೈಜ ಘಟನೆಯಂತೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗಾವಿಗೆ ಹೊರಡುವ ನಾಗರಿಕ ದೇಶೀಯ ವಿಮಾನವು ಟೇಕ್-ಆಫ್ ನಂತರ ವಿಮಾನ ನಿಲ್ದಾಣದ ಸುತ್ತಮುತ್ತಲಿನ ತಾಂತ್ರಿಕ ವೈಫಲ್ಯದಿಂದಾಗಿ ಚಾಣಕ್ಯ ವಿಶ್ವವಿದ್ಯಾಲಯದ ಮೈದಾನದ ಬಳಿ ಬೆಳಿಗ್ಗೆ 11.15 ರ ಸಮಯದಲ್ಲಿ ವಿಮಾನ ಅಪಘಾತಕ್ಕೀಡಾಯಿತು. ತಕ್ಷಣವೇ ಚಾಣಕ್ಯ ವಿಶ್ವವಿದ್ಯಾಲಯದ ಸ್ಥಳೀಯ ಸಿಬ್ಬಂದಿಗಳು ಹತ್ತಿರದ ಪೊಲೀಸ್ ಸ್ಟೇಷನ್ ಗೆ ಮಾಹಿತಿ ನೀಡಿದರು. ನಂತರ ಡಿಡಿಎಂಎ, ಕೆಎಸ್‌ಎಫ್‌ಇಎಸ್, ಡಿಎಚ್‌ಒ, ಪೊಲೀಸ್ ಎಲ್ & ಒ, ಸಂಚಾರ ಪೊಲೀಸ್, ನಾಗರಿಕ ರಕ್ಷಣಾ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪರಿಣಾಮ ಬೀರುವ ವಿಮಾನಯಾನ ಸಂಸ್ಥೆಗಳು (ಏರ್ ಇಂಡಿಯಾ ಎಕ್ಸ್‌ಪ್ರೆಸ್) ಮತ್ತು ಬಿಐಎಎಲ್ ಸೇರಿದಂತೆ ತುರ್ತು ಪ್ರತಿಕ್ರಿಯೆ ನೀಡುವವರನ್ನು ತ್ವರಿತವಾಗಿ ಸಂಪರ್ಕಿಸಿ ಘಟನಾ ಸ್ಥಳಕ್ಕೆ ನಿಯೋಜಿಸಲಾಯಿತು. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ತಕ್ಷಣವೇ ಮಾಹಿತಿ ಪಡೆದ ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಅವರು ಘಟನಾ ಸ್ಥಳಕ್ಕೆ ಆಗಮಿಸಿ, ಎಲ್ಲಾ ಇಲಾಖೆ ಹಾಗೂ ಏಜೆನ್ಸಿಗಳನ್ನು ಸಮನ್ವಯಗೊಳಿಸಿ ಕೂಡಲೇ ತ್ವರಿತ ರಕ್ಷಣಾ ಕಾರ್ಯಾಚರಣೆ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಸೂಚನೆ ನೀಡಿದರು. ವಿಮಾನ ಅಪಘಾತ ದುರಂತದಲ್ಲಿ ವಿಮಾನದಲ್ಲಿನ ಸಿಬ್ಬಂದಿ ಸೇರಿ ಒಟ್ಟು 46 ಪ್ರಯಾಣಿಕರು ಇದ್ದರು, ವಿಮಾನ ಅಪಘಾತವಾದ ನಂತರ ಒಬ್ಬ ಪುರುಷ, ಒಬ್ಬ ಮಹಿಳೆ, ಒಬ್ಬ ಬಾಲಕ ಸೇರಿ ಮೂವರು ಮೃತಪಟ್ಟಿದ್ದರು. ಅತೀ ತೀವ್ರ ಗಾಯಗೊಂಡವರು 20 ಪ್ರಯಾಣಿಕರು, ತೀವ್ರ ಗಾಯಗೊಂಡವರು 17, ಸಾಧಾರಣ ಗಾಯಗೊಂಡವರು 09 ಪ್ರಯಾಣಿಕರು ಹಾಗೂ ಸ್ಥಳೀಯ ನಿವಾಸಿಗಳು ಮೂವರಿದ್ದರು. ಇದು ಕೇವಲ ಅಣುಕು ಪ್ರದರ್ಶನವಾಗಿದ್ದು, ಗುಜರಾತ್ ನಲ್ಲಿ ನಡೆದ ವಿಮಾನ ದುರಂತದ ಹಿನ್ನೆಲೆಯಲ್ಲಿ, ವಿಪತ್ತುಗಳು ಸಂಭವಿಸಿದಾಗ ಸರ್ವಸನ್ನದ್ಧರಾಗಿರಲು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಅಣುಕು ಪ್ರದರ್ಶನ ನೈಜ ಘಟನೆಯಂತೆ ನಡೆಸಲಾಗಿದ್ದು ವಿಪತ್ತು ಸಂಭವಿಸಿದಾಗ ಇಲಾಖೆಗಳ ಜವಾಬ್ದಾರಿ ಯನ್ನು ಪ್ರತ್ಯಕ್ಷವಾಗಿ ತಿಳಿಸಲು ಈ ಕಾರ್ಯಾಚರಣೆ ನಡೆಸಲಾಗಿದೆ. ಈ ಅಣುಕು ಪ್ರದರ್ಶನದಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿರುವುದಿಲ್ಲ. ಅಣುಕು ಪ್ರದರ್ಶನವು ಯಶಸ್ವಿಯಾಗಿ ಜರುಗಿತು. ಈ ಸಂಧರ್ಭದಲ್ಲಿ ಎಸ್ಪಿ ಚಂದ್ರಕಾಂತ್ ಎಂ.ವಿ, ಡಿವೈಎಸ್ಪಿ ಪಾಂಡುರಂಗ, ಡಿಹೆಚ್ಒ ಡಾ. ಲಕ್ಕಾ ಕೃಷ್ಣ ರೆಡ್ಡಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮುಖ್ಯಸ್ಥರಾದ ಡಾ. ದೇವಾಸಿಯಾ, ನಿತಿನ್ ಸಾವಂತ್, ರಘುವೀರ್, ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್, ಪೊಲೀಸ್, ಆರೋಗ್ಯ ಸಿಬ್ಬಂದಿ, ಉಪಸ್ಥಿತರಿದ್ದರು. *ಯಾವುದೇ ವಿಪತ್ತು ಸಂಭವಿಸಿದಾಗ ಜಿಲ್ಲಾಡಳಿತ, ಸಂಬಂಧಪಟ್ಟ ಅಧಿಕಾರಿಗಳು, ಭಾಗಿದಾರರು ಸರ್ವ ಸನ್ನದ್ಧರಾಗಿರಬೇಕು, ಇಲಾಖೆ ಹಾಗೂ ಭಾಗಿದಾರರ ಸಮನ್ವಯತೆ, ಸಹಕಾರದಿಂದ ವಿಪತ್ತು ನಿರ್ವಹಣೆ ಸಾಧ್ಯ, ಅಣುಕು ಪ್ರದರ್ಶನ ಏರ್ಪಡಿಸುವುದರಿಂದ ಎಲ್ಲರು ಘಟನೆಗಳ ಬಗ್ಗೆ, ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ತಿಳಿದುಕೊಳ್ಳಬಹುದು-ಡಿಸಿ ಡಾ. ಕೆ.ಎನ್ ಅನುರಾಧ*4
- ಹುಣಸಗಿ: ಜಾತಿನಿಂದನೆ ಮಾಡಿ ಹಲ್ಲೆ; ಮೂವರ ವಿರುದ್ಧ ದೂರು ಹುಣಸಗಿ: ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಜಾತಿನಿಂದನೆ ಮಾಡಿ, ಹಲ್ಲೆ ನಡೆಸಿದ ಅಮಾನವೀಯ ಘಟನೆ ತಾಲೂಕಿನ ಬೈಚಬಾಳ ಗ್ರಾಮದಲ್ಲಿ ನಡೆದಿದೆ.1
- Post by ಶಿವಪ್ಪ ಜಿ ಕಂಬಾರ್ ಕೆಂಭಾವಿ3
- ಜಾಲಹಳ್ಳಿ ಗ್ರಾಮದ ಶ್ರಮಿಕ ಭವನದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖಂಡರಾದ ಗಿರಿಯಪ್ಪ ಪೂಜಾರಿ ಅವರು, ಕಾರ್ಮಿಕರ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಪ್ರತಿಯೊಬ್ಬ ಕಾರ್ಮಿಕನಿಗೂ ಕನಿಷ್ಠ ವೇತನ ಸಿಗಬೇಕಾದ ಹಕ್ಕು ಇದ್ದರೂ, ಇಂದಿಗೂ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ ಎಂದು ಅವರು ಹೇಳಿದರು. ಸರಕಾರಕ್ಕೆ ಹಲವಾರು ಹೋರಾಟಗಳ ಮೂಲಕ ಮನವಿ ಸಲ್ಲಿಸಿದ್ದರೂ, ಇನ್ನೂ ನಿರೀಕ್ಷಿತ ಫಲ ಸಿಗದೆ ಇರುವುದನ್ನು ವಿಷಾದಿಸಿದರು. ಇದೇ ವೇಳೆ, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ಉದ್ಯೋಗ ಭದ್ರತೆ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬುದನ್ನೂ ಅವರು ಹೇಳಿದರು. ಕೆಲಸದ ಗಂಟೆಗಳು ಹೆಚ್ಚಾಗುತ್ತಿರುವುದು, ವೇತನ ಕಡಿಮೆಯಾಗಿರುವುದು, ಸಾಮಾಜಿಕ ಭದ್ರತಾ ಸೌಲಭ್ಯಗಳ ಕೊರತೆ ಇತ್ಯಾದಿ ಸಮಸ್ಯೆಗಳು ಕಾರ್ಮಿಕರನ್ನು ಸಂಕಷ್ಟಕ್ಕೆ ತಳ್ಳಿವೆ ಎಂದು ಹೇಳಿದರು. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಇದೇ ತಿಂಗಳ ಮೇ 30ರಂದು ರಾಯಚೂರಿನಲ್ಲಿ ಕನಿಷ್ಠ ವೇತನ ಜಾರಿಗಾಗಿ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಸಾವಿರಾರು ಕಾರ್ಮಿಕರು ಭಾಗವಹಿಸುವ ನಿರೀಕ್ಷೆಯಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು. ನಮ್ಮ ಗುರಿ ಈಡೇರುವವರೆಗೆ ಹೋರಾಟ ಮುಂದುವರಿಯಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮದ ಆರಂಭದಲ್ಲಿ ಮುದರಂಗಪ್ಪ ಯರಕಮಟ್ಟಿ ಅವರು ಸ್ವಾಗತ ಕೋರಿ ನಿರೂಪಣೆ ಮಾಡಿದರು. ಈ ಸಂದರ್ಭದಲ್ಲಿ ಮೈಬೂಬ್ ಸಾಬ್ ಕುರುಕುಂದಿ, ಹೈದರ್ ಬಿ ಉದ್ಧಾರ, ಮುದ್ದಮ್ಮ, ಕಾಶಿನಾಥ್, ಮುದ್ದು ರಂಗಪ್ಪ, ಬಾಲಯ್ಯ ಗೋಸಲ್, ಸತ್ಯಭಾಮ, ಅನ್ನಮ್ಮ ರಾಂಪಾಳಿ, ಮಲ್ಲಮ್ಮ ಬೈಚಬಾಳ್, ಶಂಕರ್ ಸೋಮನ ಮರಡಿ ಸೇರಿದಂತೆ ನೂರಾರು ಕಾರ್ಮಿಕ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ ---1
- Post by Nayeem1
- Post by Kalyan karanataka news channel1
- ಪಿಜಿ ಪಾಳ್ಯ ಸಫಾರಿ ಪ್ರದೇಶದಲ್ಲಿ ಕಪ್ಪು ಚಿರತೆ ದರ್ಶನ ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯಧಾಮದ ಪಿಜಿಪಾಳ್ಯ ಸಫಾರಿ ಪ್ರದೇಶದಲ್ಲಿ ಕಪ್ಪು ಚಿರತೆ ಪ್ರತ್ಯಕ್ಷವಾಗಿರುವ ಘಟನೆ ವರದಿಯಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪಿಜಿ ಪಾಳ್ಯ ಸಫಾರಿ ವೇಳೆ ಕಾಡಿನೊಳಗೆ ಚಲಿಸುತ್ತಿದ್ದ ಕರಿ ಚಿರತೆಯನ್ನು ಸಫಾರಿಗೆ ತೆರಳಿದ ಪ್ರವಾಸಿಗರು ಮತ್ತು ಸಿಬ್ಬಂದಿ ಗಮನಿಸಿದ್ದು, ಕೆಲಕಾಲ ಅದು ಅರಣ್ಯ ಪ್ರದೇಶದಲ್ಲಿ ಸಂಚರಿಸಿ ನಂತರ ದಟ್ಟ ಕಾಡಿನೊಳಗೆ ಮರೆಯಾಗಿದೆ ಎಂದು ತಿಳಿದು ಬಂದಿದೆ. ಈ ಅಪರೂಪದ ಪ್ರಾಣಿಯ ದೃಶ್ಯಾವಳಿಯನ್ನು ಪ್ರವಾಸಿಗರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಪ್ರವಾಸಿಗರಲ್ಲಿ ಕುತೂಹಲ ಮತ್ತು ಆನಂದವನ್ನು ಮೂಡಿಸಿದ್ದು, ವನ್ಯಜೀವಿ ಪ್ರೇಮಿಗಳ ಗಮನ ಸೆಳೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಈ ಪ್ರದೇಶದಲ್ಲಿ ನಿಗಾವಹಣೆ ಹೆಚ್ಚಿಸಿದ್ದು, ಪ್ರವಾಸಿಗರು ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ.1
- Post by ABU NEWS CHANNEL ಸಂಪಾದಕರು1