ಹನೂರು :ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ದೇಗುಲ ಸೇರಿದಂತೆ ತಾಲೂಕಿನ ವಿವಿಧ ದೇಗುಲಗಳಲ್ಲಿ ಗುರುವಾರ ಸಂಕ್ರಾಂತಿ ಹಬ್ಬದ ಅಂಗವಾಗಿ ವಿಶೇಷ ಪೂಜೆಗಳು ನೆರವೇರಿದವು. ಸಂಕ್ರಾಂತಿ ಪ್ರಯುಕ್ತ ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ದೇಗುಲವನ್ನು ತಳಿರು–ತೋರಣ, ಕಬ್ಬು ಹಾಗೂ ಪುಷ್ಪಗಳಿಂದ ಸೊಗಸಾಗಿ ಸಿಂಗರಿಸಲಾಗಿತ್ತು. ಬೆಳಿಗ್ಗೆ ದೇವಿಗೆ ಪನ್ನೀರು, ಎಳನೀರು, ಕುಂಕುಮ, ಗಂಧ, ಜೇನುತುಪ್ಪ, ಹಾಲು, ಮೊಸರು, ಸಕ್ಕರೆ ಮತ್ತು ಗಂಧದ ಅಭಿಷೇಕ ನೆರವೇರಿಸಲಾಯಿತು. ಬಳಿಕ ದೇವಿಯ ಮೂರ್ತಿಯನ್ನು ಚಿನ್ನಾಭರಣ ಮತ್ತು ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆ ನಡೆಸಲಾಯಿತು. ಮಹಾಮಂಗಳಾರತಿ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಪಟ್ಟಣದ ಜೊತೆಗೆ ಭೈರನತ್ತ, ಮಣಗಳ್ಳಿ, ಬಂಡಳ್ಳಿ, ಉದ್ದನೂರು, ಬೆಳತ್ತೂರು, ರಾಮಾಪುರ, ಮಾಲಾಪುರ, ಅಜ್ಜೀಪುರ, ಚಿಂಚಳ್ಳಿ, ಮಂಗಲ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ ಭಕ್ತರು ದೇವಿಯ ದರ್ಶನ ಪಡೆದು ಹಣ್ಣು–ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು. ಹರಕೆ ಹೊತ್ತ ಭಕ್ತರು ದೇಗುಲದ ಮುಂಭಾಗದಲ್ಲಿ ಉಪ್ಪು ಸುರಿದು ಭಕ್ತಿ ಭಾವ ವ್ಯಕ್ತಪಡಿಸಿದರು. .
ಹನೂರು :ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ದೇಗುಲ ಸೇರಿದಂತೆ ತಾಲೂಕಿನ ವಿವಿಧ ದೇಗುಲಗಳಲ್ಲಿ ಗುರುವಾರ ಸಂಕ್ರಾಂತಿ ಹಬ್ಬದ ಅಂಗವಾಗಿ ವಿಶೇಷ ಪೂಜೆಗಳು ನೆರವೇರಿದವು. ಸಂಕ್ರಾಂತಿ ಪ್ರಯುಕ್ತ ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ದೇಗುಲವನ್ನು ತಳಿರು–ತೋರಣ, ಕಬ್ಬು ಹಾಗೂ ಪುಷ್ಪಗಳಿಂದ ಸೊಗಸಾಗಿ ಸಿಂಗರಿಸಲಾಗಿತ್ತು. ಬೆಳಿಗ್ಗೆ ದೇವಿಗೆ ಪನ್ನೀರು, ಎಳನೀರು,
ಕುಂಕುಮ, ಗಂಧ, ಜೇನುತುಪ್ಪ, ಹಾಲು, ಮೊಸರು, ಸಕ್ಕರೆ ಮತ್ತು ಗಂಧದ ಅಭಿಷೇಕ ನೆರವೇರಿಸಲಾಯಿತು. ಬಳಿಕ ದೇವಿಯ ಮೂರ್ತಿಯನ್ನು ಚಿನ್ನಾಭರಣ ಮತ್ತು ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆ ನಡೆಸಲಾಯಿತು. ಮಹಾಮಂಗಳಾರತಿ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಪಟ್ಟಣದ
ಜೊತೆಗೆ ಭೈರನತ್ತ, ಮಣಗಳ್ಳಿ, ಬಂಡಳ್ಳಿ, ಉದ್ದನೂರು, ಬೆಳತ್ತೂರು, ರಾಮಾಪುರ, ಮಾಲಾಪುರ, ಅಜ್ಜೀಪುರ, ಚಿಂಚಳ್ಳಿ, ಮಂಗಲ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ ಭಕ್ತರು ದೇವಿಯ ದರ್ಶನ ಪಡೆದು ಹಣ್ಣು–ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು. ಹರಕೆ ಹೊತ್ತ ಭಕ್ತರು ದೇಗುಲದ ಮುಂಭಾಗದಲ್ಲಿ ಉಪ್ಪು ಸುರಿದು ಭಕ್ತಿ ಭಾವ ವ್ಯಕ್ತಪಡಿಸಿದರು. .
- ಮಳವಳ್ಳಿ:ಮಾತೃಶ್ರೀ ಅಮ್ಮನವರು ಜ್ಞಾನವಿಕಾಸ ಯೋಜನೆಯ ಮೂಲಕ ಲಕ್ಷಾಂತರ ಬಡಮಹಿಳೆಯರಿಗೆ ನೆರವು-ಯೋಜನಾಧಿಕಾರಿ ಲೋಕೇಶ್ ಹೇಳಿಕೆ • ಮಾತೃಶ್ರೀ ಅಮ್ಮನವರ ಹುಟ್ಟುಹಬ್ಬ –ಜಿಲ್ಲೆಯ ೫೨೭ ಪಲಾನುಭವಿಗಳಿಗೆ ಹಣ್ಣು-ಹಂಪಲ ವಿತರಣೆ- ಎಂ.ಶಿವಕುಮಾರ್ ಹೇಳಿಕೆ ಮಳವಳ್ಳಿ:ಜ್ಞಾನ ವಿಕಾಸ ಯೋಜನೆಯ ಮೂಲಕ ರಾಜ್ಯದ ಲಕ್ಷಾಂತರ ಬಡ ನಿರ್ಗತಿಕ ಮಹಿಳೆಯರಿಗೆ ಜೀವನ ರೂಪಿಸಿದ ಶ್ರೀ ಕ್ಷೇತ್ರ ದರ್ಮಸ್ಥಳದ ಮಾತೃಶ್ರೀ ಅಮ್ಮನವರ ಜೀವನ , ಸೇವೆ,ಕೊಡುಗೆ,ಯೋಜನೆಗಳು ದಾರಿದೀಪವಾಗಿವೆ ಎಂದು ಯೋಜನಾಧಿಕಾರಿ ಲೋಕೇಶ್ ಹೇಳಿದರು. ಪಟ್ಟಣದ ಎನ್‌ಇ.ಎಸ್.ಬಡಾವಣೆಯಲ್ಲಿ ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆವತಿಯಿಂದ ಮಾತೃಶ್ರೀ ಅಮ್ಮನವರ ಜನ್ಮ ದಿನದ ಅಂಗವಾಗಿ ಅಯೋಜಿಸಿದ್ದ ಮಾಶಾಸನ ಪಲಾನುಭವಿಗಳಿಗೆ ಹಣ್ಣು-ಹಂಪಲ ವಿತರಣೆ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿದ ಅವರು ಮಾತೃಶ್ರೀ ಅಮ್ಮನವರು ಜ್ಞಾನ ವಿಕಾಸ ಯೋಜನೆಯಡಿಯಲ್ಲಿ ಸುಮಾರು ೩೦ ಕಾರ್ಯಕ್ರಮಗಳ ಮೂಲಕ ಬಡ,ನಿರ್ಗತಿಕ ಮಹಿಳಾ ಸಮುದಾಯಕ್ಕೆ ನೆರವಾಗುವಂತಹ ಸೌಲಭ್ಯಗಳನ್ನು ಅವರ ಮನೆ ಬಾಗಿಲಿಗೆ ನೀಡುತ್ತಿದ್ದಾರೆಂದರು. ಬಾಕ್ಸ್ ಸುದ್ದಿ: ಜ್ಞಾನವಿಕಾಸ ಯೋಜನೆಗಳ ಅನುಷ್ಠಾನ: ರಾಜ್ಯದಾದ್ಯಂತ ಜ್ಞಾನವಿಕಾಸ ಯೋಜನೆಯಡಿಯಲ್ಲಿ ಮಾತೃಶ್ರೀ ಅಮ್ಮನವರು ಮಹಿಳಾ ಸಬಲೀಕರಣಕ್ಕಾಗಿ ಜ್ವಲಂತ ವಿಷಯಗಳ ಮಾಹಿತಿ ಸಂಗ್ರಹಣೆ,ನಾನು ಓದಿದ ಪುಸ್ತಕಗಳ ವಿಮರ್ಶೆ,ಸರಕಾರಿ ಯೋಜನೆಗಳು,ಶಿಕ್ಷಣ,ಆರೋಗ್ಯ ಮತ್ತು ನೈರ್ಮಲ್ಯ ಕಾರ್ಯಕ್ರಮ,ನಹಿಳೆಯರ ಹಕ್ಕ ಮತ್ತು ಕಾನೂನು ,ಪೌಷ್ಠಿಕ ಅಹಾರ ಅರಿವು ಕಾರ್ಯಕ್ರಮ,ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ,ಮಹಿಳಾ ಕೇಂದ್ರಗಳ ವಾರ್ಷಿಕೋತ್ಸವ,ಮಹಿಳೆಯರಿಗೆ ಅರಿವು ಮೂಡಿಸುವ ಚಲನಚಿತ್ರ ಕಾರ್ಯಕ್ರಮ,ಮಹಿಳೆಯರಿಗಾಗಿ ಆದ್ಯಯನ ಪ್ರವಾಸ,ಸಾರ್ವಜನಿಕರಿಗೆ ಅರಿವು ಮೂಡಿಸಲು ಬೀದಿ ನಾಟಕ ಅಯೋಜನೆ,ಸೃಜನ ಶೀಲ ಕಾರ್ಯಕ್ರಮ,ಮಕ್ಕಳಿಗೆ ಟ್ಯೂಷನ್ ಕ್ಲಾಸ್,ಮಹಿಳೆಯರಿಗೆ ಹೊಲಿಗೆ ತರಬೇತಿ,ಸ್ವುದ್ಯೋಗ ಪ್ರೇರಣಾ ಶಿಬಿರ,ಜ್ಞಾನ ವಿಕಾಸ ಯುಟ್ಯೂಬ್ ಅಭಿಯಾನ,ಅಜ್ಜಿ ಕೈತುತ್ತು, ಕಾರ್ಯಕ್ರಮ,ಕ್ಷೇತ್ರ ಅದ್ಯಯನ ಪ್ರವಾಸ,ವಿಶೇಷ ದಿನಗಳ ಆಚರಣೆ,ಆರೋಗ್ಯ ತಪಾಸಣೆ ಶಿಬಿರ,ಮೆನ್ಸೆ÷್ಟöÊಲ್ ಕಪ್ ಅಭಿಯಾನ,ವಾತ್ಸಲ್ಯ ಮಾಹಿತಿ ಕಾರ್ಯಕ್ರಮ,ಗೆಳತಿ ಮಾಹಿತಿ ಕಾರ್ಯಕ್ರಮ,ವಾತ್ಸಲ್ಯ ಪಲಾನುಭವಿಗಳಿಗೆ ವಾತ್ಸಲ್ಯ ಮನೆ ರಚನೆ,ವಾತ್ಸಲ್ಯ ಪಲಾನುಭವಿಗಳಿಗೆ ಶೌಚಾಲಯ ರಚನೆ,ವಾತ್ಸಲ್ಯ ಪಾತ್ರೆ ಹಾಗೂ ಬಟ್ಟೆಕಿಟ್ ವಿತರಣೆ ಕಾರ್ಯಕ್ರಮ,ವಾತ್ಸಲ್ಯ ಫುಡ್ ಮಿಕ್ಸ್ ಕಾರ್ಯಕ್ರಮ,ವಾತ್ಸಲ್ಯ ಪಲಾನುಭವಿಗಳಿಗೆ ಪ್ರತಿ ತಿಂಗಳು ಮಾಶಾಸನ ವಿತರಣೆ,ಜನಮಂಗಳ ಪರಿಕರ ವಿತರಣೆ ಸೇರಿದಮತೆ ಮಾತೃಸ್ರೀ ಅಮ್ಮನವರು ಸುಮಾರು ೩೦ ಕ್ಕೂ ಹೆಚ್ಚು ಕಾರ್ಯಕ್ರಮಗಳ ಮೂಲಕ ರಾಜ್ಯದ ಲಕ್ಷಾಂತರ ಬಡ ನಿರ್ಗತಿಕೆ ಮಹಿಳೆಯರಿಗೆ ಅಸರಯಾಗಿದ್ದಾರೆಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಎಂ.ಶಿವಕುಮಾರ ಪಲಾನುಭವಿಗಳಿಗೆ ಹಣ್ಣು-ಹಂಪಲ ವಿತರಿಸಿ ಮಾತನಾಡಿ ಮಾತೃಸ್ರೀ ಅಮ್ಮನವರ ಹುಟ್ಟು ಹಬ್ಬವನ್ನು ರಾಜ್ಯದಾದ್ಯಂತ ಅಚರಣೆ ಮಾಡುತ್ತಿದ್ದು ಅದರಲ್ಲೂ ಮಂಡ್ಯ ಜಿಲ್ಲೆಯ ಮಳವಳ್ಳಿ,ಮಂಡ್ಯ,ನಾಗಮAಗಲ,ಮದ್ದೂರು,ಹೊಸಹಳ್ಳಿ,ಭಾರತಿನಗರ ಸೇರಿದಂತೆ ೬ ವಲಯ ವ್ಯಾಪ್ತಿಯಲ್ಲಿ ಒಟ್ಟು ೫೨೭ ಮಾಶಾಸನ ಪಲಾನುಭವಿಗಳಿಗೆ ಅಭಿಮಾನಿಗಳು,ಸೇವಾ ಕಾರ್ಯಕರ್ತರು ವಿತರಣೆ ಮಾಡುತ್ತಿದ್ದಾರೆ. ಮಾತೃಶ್ರೀ ಅಮ್ಮನವರ ಜನ್ಮ ದಿನ ಆಚರಣೆ ಮಾಡುತ್ತಿರುವುದು ನಮ್ಮೆಲ್ಲರ ಪುಣ್ಯವಾಗಿದೆ,ಪೂಜ್ಯ ಖಾವಂದರ ದಿವ್ಯಶಕ್ತಿಯಾಗಿ ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಜ್ಞಾನ ವಿಕಾಸ ಯೋಜನೆಗಳನ್ನು ಅನುಷ್ಟಾಗೊಳಿಸುವ ಮೂಲಕ ಸಮಾಜದ ಕಟ್ಟ ಕಡೆಯ ನಿರ್ಗತಿಕ ಮಹಿಳೆಯರಿಗೆ ಅಸರೆಯಾಗಿ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಕೆಲಸ ಮಾಡುತ್ತಿರುವುದು ಮಾದರಿಎ ಂದರು. ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಶೈಲ,ಮೇಲ್ವಿಚಾರಕಿ ಪ್ರಮೀಳ,ಸೇವಾ ಪ್ರತಿನಿಧಿ ರುಕ್ಮಿಣಿ ಸೇರಿದಂತೆ ಮಾಶಾಸನ ಪಲಾನುಭವಿಗಳು ಸ್ಥಳಿಯ ಮುಖಂಡರು,ಸ್ವಸಹಾಯ ಸಂಘದ ಮಹಿಳಾ ಸದಸ್ಯರು ಉಪಸ್ಥಿತರಿದ್ದರು. ಚಿತ್ರ-೨ ಎಂ ಎಲ್ ವಿ೧ ಮಳವಳ್ಳಿ ಪಟ್ಟಣದಲ್ಲಿ ಮಾತೃಶ್ರೀ ಅಮ್ಮನವರ ಹುಟ್ಟುಹಬ್ಬದ ಅಂಗವಾಗಿ ಮಾಶಾಸನ ಪಲಾನುಭವಿಗೆ ಯೋಜನಾಧಿಕಾರಿ ಲೋಕೆಶ್ ಮತ್ತು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಎಂ.ಶಿವಕುಮಾರ್ ಹಣ್ಣು ಹಂಪಲ ವಿತರಿಸಿದರು1
- *ಭಾರತ ನಲ್ಲಿ ವೈರಲ್*1
- 'ಲೈಂಗಿಕ ಆಸೆ ತೀರಿಸಿದರೆ ಮಾತ್ರ ಊಟ'.. ಕಾಶ್ಮೀರಿ ಮಹಿಳೆಯರ ಮೇಲೆ ದೌರ್ಜನ್ಯ POK-ನಲ್ಲಿ ಕಾಶ್ಮೀರ ಮಹಿಳೆಯರ ಮೇಲೆ ಉಗ್ರರ ದೌರ್ಜನ್ಯಗಳ ಬಗ್ಗೆ ಪಾಕ್ ಧರ್ಮಗುರು ಮುಪ್ತಿ ಸಯೀದ್ ಖಾನ್ ಹೇಳಿರುವ ವಿಡಿಯೋ ಬಹಿರಂಗವಾಗಿದೆ. ಪಾಕಿಸ್ತಾನದಿಂದ ನುಸುಳಿರುವ ಉಗ್ರರು ನಿರಾಶ್ರಿತರ ಶಿಬಿರಗಳಲ್ಲಿನ ಅಸಹಾಯಕ ಮಹಿಳೆಯರು, ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಆ ಮಹಿಳೆಯರಿಗೆ ತಿನ್ನಲು ರೊಟ್ಟಿ ಬೇಕಾದರೆ ಇಂತಹ ದುಸ್ಥಿತಿ ಎದುರಿಸಬೇಕಿದೆ ಎಂದಿದ್ದಾರೆ. ಇದರೊಂದಿಗೆ ನುಸುಳುವಿಕೆಯನ್ನು ಪಾಕ್ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ ಎಂದು ಗುಪ್ತಚರ ವಲಯಗಳು ಹೇಳುತ್ತಿವೆ. ✍️ವರದಿ: ಸುರೇಂದ್ರ ಶಿವಮೊಗ್ಗ....1
- Post by ಅರವಿಂದ್ ರಾಜೀವ್1
- ನಗರದ ಆರ್‌ಟಿಒ ಕಚೇರಿಗೆ ಶುಕ್ರವಾರ ಹುಸಿ ಬಾಂಬ್ ಬೆದರಿಕೆ ಇಮೇಲ್ ಬಂದ ಹಿನ್ನೆಲೆಯಲ್ಲಿ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳವು ಶ್ವಾನಗಳೊಂದಿಗೆ ಕಚೇರಿಯಲ್ಲಿ ತೀವ್ರ ಪರಿಶೀಲನೆ ನಡೆಸಿತು. ಕಚೇರಿ ಆವರಣದ ಒಳಭಾಗದ ಜೊತೆಗೆ ಹೊರಗಡೆ ನಿಲ್ಲಿಸಿದ್ದ ವಾಹನಗಳನ್ನೂ ಸೂಕ್ಷ್ಮವಾಗಿ ತಪಾಸಣೆ ಮಾಡಲಾಗಿದೆ. ಅದೃಷ್ಟವಶಾತ್ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ದುಷ್ಕರ್ಮಿಗಳು ಇಮೇಲ್ ಮೂಲಕ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮೂಲ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.1
- ದೇವನಹಳ್ಳಿ ಗ್ಯಾಸ್ ಸಮಸ್ಯೆ ಕುರಿತು ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿಕೆ. ಯುದ್ಧ ನಡೆಯುತ್ತಲೇ ಇದೆ, ಇನ್ನೂ ನಿಂತಿಲ್ಲ. ಚುನಾವಣೆ ಇರುವುದರಿಂದ ಅಧಿಕಾರಿಗಳನ್ನ ಕರೆಸಿ ಮೀಟಿಂಗ್ ಮಾಡಲಿಕ್ಕೆ ಆಗಲಿಲ್ಲ. 5 ನೇ ತಾರೀಕು ಸಾಧ್ಯವಾದರೆ ಮೀಟಿಂಗ್ ಮಾಡುತ್ತೇನೆ. 25 ದಿನಕ್ಕೆ ನಗರದಲ್ಲಿ, 45 ದಿನಕ್ಕೆ ಹಳ್ಳಿಯಲ್ಲಿ ಸಿಲಿಂಡರ್ ಕೊಡಲಾಗುತ್ತದೆ. ಅದರಲ್ಲಿ ಏನೂ ತೊಂದರೆ ಇಲ್ಲ, ಇದರಲ್ಲಿ ವಿನಾ ಕಾರಣ ಗೊಂದಲ ಸೃಷ್ಟಿಯಾಗಿದೆ. ಆಟೋಗ್ಯಾಸ್ ನಲ್ಲಿ 3 ಸಾವಿರ ಸಿಲಿಂಡರ್ ದಿನ ಕೊಡುತ್ತಿದ್ದೇವೆ ಆಟೋದವರು ಪ್ರತಿ ನಿತ್ಯ ಖಾಸಗಿಯವರ ಬಳಿ ತೆಗೆದುಕೊಳ್ಳುತ್ತಿದ್ದರು. ಈಗ ರೇಟ್ ಹೆಚ್ಚಾಗಿದೆ ಎಂದು ಇಲ್ಲಿಗೆ ಬಂದಿದ್ದಾರೆ. ಸರ್ಕಾರಿ ಕಂಪನಿಗಳಲ್ಲಿ ತೆಗೆದುಕೊಳ್ಳುವವರಿಗೆ ಯಾವುದೇ ತೊಂದರೆ ಆಗಿಲ್ಲ. ಖಾಸಗಿ ಕಂಪನಿಯವರಿಗೂ ಹೇಳಿದ್ದೇವೆ. ಹೆಚ್ಚು ಹಣ ತೆಗೆದುಕೊಂಡರೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದೇವೆ ಇರೋದರಲ್ಲಿ ಮಿತವಾಗಿ ಬಳಕೆ ಮಾಡಿಕೊಳ್ಳಬೇಕು. ದೇವನಹಳ್ಳಿಯಲ್ಲಿ ಸಚಿವ ಕೆಹೆಚ್ ಮುನಿಯಪ್ಪ ಹೇಳಿಕೆ1
- 'ರಾಮಾಯಣ' ಟೀಸರ್.. ರಾಮನ ಲುಕ್ ರಿವೀಲ್! ರಣ್‌ಬೀರ್ ಕಪೂರ್, ಯಶ್ ಅಭಿನಯದ 'ರಾಮಾಯಣ' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಹನುಮ ಜಯಂತಿ ಅಂಗವಾಗಿ 'ರಾಮ' ಹೆಸರಿನಲ್ಲಿ ನಿರ್ಮಾಪಕರು ವಿಶೇಷ ವಿಡಿಯೋ ರಿಲೀಸ್ ಮಾಡಿದ್ದಾರೆ. 2.38 ನಿಮಿಷಗಳ ವಿಡಿಯೋದಲ್ಲಿ ರಾಮನಾಗಿ ರಣ್‌ಬೀರ್ ಲುಕ್, VFX, BGM ಗಮನ ಸೆಳೆಯುತ್ತಿವೆ. ನಿತೇಶ್ ತಿವಾರಿ ಈ ಪೌರಾಣಿಕ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ವರ್ಷ ದೀಪಾವಳಿ ಸಂದರ್ಭದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಪಾರ್ಟ್-2 ಮುಂದಿನ ವರ್ಷದ ದೀಪಾವಳಿಗೆ ಬರಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ✍️ವರದಿ: ಸುರೇಂದ್ರ ಶಿವಮೊಗ್ಗ....2
- Post by ಅರವಿಂದ್ ರಾಜೀವ್1
- ಬೂದಿಕೋಟೆ ಹೋಬಳಿಯ ಭೀಮಗಾನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಸುತ್ತಮುತ್ತ ಹಲವು ವರ್ಷಗಳಿಂದ ಸ್ವಚ್ಛತೆ ಕೊರತೆಯಿಂದ ಕಸದ ರಾಶಿ ತುಂಬಿಕೊಂಡಿದೆ. ಗ್ರಾಮಸ್ಥರು ಮನೆಗಳ ಕಸವನ್ನು ಶಾಲೆಯ ಬಳಿ ಎಸೆಯುತ್ತಿರುವುದರಿಂದ ದುರ್ನಾತ ವ್ಯಾಪಕವಾಗಿದ್ದು, ಹಾವುಗಳಂತಹ ವಿಷ ಜಂತುಗಳು ಶಾಲಾ ಕೊಠಡಿಗಳೊಳಗೆ ಪ್ರವೇಶಿಸುತ್ತಿವೆ ಎಂಬ ಆತಂಕ ವ್ಯಕ್ತವಾಗಿದೆ. ಇದರಿಂದ ವಿದ್ಯಾರ್ಥಿಗಳು ಭಯಭೀತರಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಗಂಭೀರ ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.1