ಮೈಸೂರಿನ ಬಿಎಸ್ ಎಸ್ ವಿದ್ಯೋದಯ ಶಾಲೆಯಲ್ಲಿ ಗಮನ ಸೆಳೆದ ಶಿಕ್ಷಕರ ಮೂಕಾಭಿನಯ ಮೈಸೂರು: ಮೈಸೂರಿನ ಬಿಎಸ್ಎಸ್ ವಿದ್ಯೋದಯ ಶಾಲೆಯಲ್ಲಿ ಗುರು ಉತ್ಸವದ ಹಿನ್ನಲೆಯಲ್ಲಿ ಶಿಕ್ಷಕರಿಗಾಗಿ ನಡೆದ ಮೈಮ್ (ಮೂಕ ಅಭಿನಯ) ಸ್ಪರ್ಧೆ ಗಮನಸೆಳೆಯಿತು. ಶಿಕ್ಷಕರು ವೃತ್ತಿಪರ ಬದುಕಿನ ಮೌಲ್ಯಗಳನ್ನು ಹಾಗೂ ಅವರ ಪರಿಶ್ರಮವನ್ನು ಕಲಾತ್ಮಕವಾಗಿ ಬಿಂಬಿಸುವಲ್ಲಿ ಯಶಸ್ವಿಯಾದರು. ಅಷ್ಟೇ ಅಲ್ಲದೆ ಶಿಕ್ಷಕರು ಕೇವಲ ಪಾಠ ಮಾಡುವುದಷ್ಟೇ ಅಲ್ಲ, ಕಲೆಯಲ್ಲೂ ಸೈ ಎಂಬುದನ್ನು ಸಾಭೀತು ಮಾಡಿದರು. ತಮ್ಮ ದೈನಂದಿನ ಶಾಲಾ ಜೀವನ, ವಿದ್ಯಾರ್ಥಿಗಳೊಂದಿಗಿನ ಒಡನಾಟ, ತರಗತಿಯ ಅನುಭವಗಳು ಹಾಗೂ ಸಮಾಜದಲ್ಲಿ ಶಿಕ್ಷಕರ ಪಾತ್ರವನ್ನು ವಿವಿಧ ಆಕರ್ಷಕ ಭಂಗಿಗಳಲ್ಲಿ ಯಾವುದೇ ಸಂಭಾಷಣೆಯಿಲ್ಲದೆ ಕೇವಲ ಹಾವಭಾವಗಳ ಮೂಲಕ ಅತ್ಯಂತ ಮನೋಜ್ಞವಾಗಿ ಪ್ರಸ್ತುತಪಡಿಸಿ ನೋಡುಗರ ಮನಸೂರೆಗೊಂಡರು. ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಆಗಮಿಸಿದ್ದ ಪ್ರಸಿದ್ಧ ಕಲಾವಿದರಾದ ಗೀತಾ ಮೋಂಟಡ್ಕ ಮತ್ತು ಮೈಮ್ ಗೌತಮ್ ಅವರು ಸ್ಪರ್ಧಿಗಳ ಅಭಿನಯವನ್ನು ವೀಕ್ಷಿಸಿ, ಕಲಾ ಪ್ರತಿಭೆಯನ್ನು ಪ್ರಶಂಸಿಸಿದರು. ಶಾಲೆಯ ಪ್ರಾಂಶುಪಾಲರಾದ ನವ್ಯ ಜಗದೀಶ್, ಆಡಳಿತ ವರ್ಗದ ವಾಸುದೇವ ಭಟ್ ಉಪಸ್ಥಿತರಿದ್ದರು.
ಮೈಸೂರಿನ ಬಿಎಸ್ ಎಸ್ ವಿದ್ಯೋದಯ ಶಾಲೆಯಲ್ಲಿ ಗಮನ ಸೆಳೆದ ಶಿಕ್ಷಕರ ಮೂಕಾಭಿನಯ ಮೈಸೂರು: ಮೈಸೂರಿನ ಬಿಎಸ್ಎಸ್ ವಿದ್ಯೋದಯ ಶಾಲೆಯಲ್ಲಿ ಗುರು ಉತ್ಸವದ ಹಿನ್ನಲೆಯಲ್ಲಿ ಶಿಕ್ಷಕರಿಗಾಗಿ ನಡೆದ ಮೈಮ್ (ಮೂಕ ಅಭಿನಯ) ಸ್ಪರ್ಧೆ ಗಮನಸೆಳೆಯಿತು. ಶಿಕ್ಷಕರು ವೃತ್ತಿಪರ ಬದುಕಿನ ಮೌಲ್ಯಗಳನ್ನು ಹಾಗೂ ಅವರ ಪರಿಶ್ರಮವನ್ನು ಕಲಾತ್ಮಕವಾಗಿ ಬಿಂಬಿಸುವಲ್ಲಿ ಯಶಸ್ವಿಯಾದರು. ಅಷ್ಟೇ ಅಲ್ಲದೆ ಶಿಕ್ಷಕರು ಕೇವಲ ಪಾಠ ಮಾಡುವುದಷ್ಟೇ ಅಲ್ಲ, ಕಲೆಯಲ್ಲೂ ಸೈ ಎಂಬುದನ್ನು ಸಾಭೀತು ಮಾಡಿದರು. ತಮ್ಮ ದೈನಂದಿನ ಶಾಲಾ ಜೀವನ, ವಿದ್ಯಾರ್ಥಿಗಳೊಂದಿಗಿನ ಒಡನಾಟ, ತರಗತಿಯ ಅನುಭವಗಳು ಹಾಗೂ ಸಮಾಜದಲ್ಲಿ ಶಿಕ್ಷಕರ ಪಾತ್ರವನ್ನು ವಿವಿಧ ಆಕರ್ಷಕ ಭಂಗಿಗಳಲ್ಲಿ ಯಾವುದೇ ಸಂಭಾಷಣೆಯಿಲ್ಲದೆ ಕೇವಲ ಹಾವಭಾವಗಳ ಮೂಲಕ ಅತ್ಯಂತ ಮನೋಜ್ಞವಾಗಿ ಪ್ರಸ್ತುತಪಡಿಸಿ ನೋಡುಗರ ಮನಸೂರೆಗೊಂಡರು. ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಆಗಮಿಸಿದ್ದ ಪ್ರಸಿದ್ಧ ಕಲಾವಿದರಾದ ಗೀತಾ ಮೋಂಟಡ್ಕ ಮತ್ತು ಮೈಮ್ ಗೌತಮ್ ಅವರು ಸ್ಪರ್ಧಿಗಳ ಅಭಿನಯವನ್ನು ವೀಕ್ಷಿಸಿ, ಕಲಾ ಪ್ರತಿಭೆಯನ್ನು ಪ್ರಶಂಸಿಸಿದರು. ಶಾಲೆಯ ಪ್ರಾಂಶುಪಾಲರಾದ ನವ್ಯ ಜಗದೀಶ್, ಆಡಳಿತ ವರ್ಗದ ವಾಸುದೇವ ಭಟ್ ಉಪಸ್ಥಿತರಿದ್ದರು.
- ಕನ್ನಡ ಸ್ಯಾಂಡಲ್ ವುಡ್ ಹೀರೋ ರಾವಣ ಪಾತ್ರದಲ್ಲಿ ಯಶ್ ಅವರು ಕಂಡುಬಂದ ದೃಶ್ಯ ಕನ್ನಡ ಸ್ಯಾಂಡಲ್ ವುಡ್ ಹೀರೋ ರಾವಣ ಪಾತ್ರದಲ್ಲಿ ಯಶ್ ಅವರು ಕಂಡುಬಂದ ದೃಶ್ಯ1
- ಕಾವೇರಿ ನೀರು ಬಿಡುಗಡೆ ವಿರೋಧಿಸಿ ಮೈಸೂರು_ ನಂಜನಗೂಡು ರಸ್ತೆ ತಡೆ ಪ್ರತಿಭಟನೆ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಇಂದು ಮೈಸೂರು–ಊಟಿ ರಸ್ತೆಯ ನಂಜನಗೂಡು ಬಿ.ಡಿ.ಒ. ಕಚೇರಿ ಎದುರು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ರಸ್ತೆ ತಡೆ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು ರಾಜ್ಯದ ನೀರಿನ ಹಿತಾಸಕ್ತಿಯನ್ನು ಕಾಪಾಡುವಂತೆ ಸರ್ಕಾರವನ್ನು ಆಗ್ರಹಿಸಿದರು. ಪ್ರತಿಭಟನೆಯಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.1
- All About,Greatfull and Thankful for Our #CEO #KarnatakaStateBoardOfAuqaf #Bengaluru for his Performance of Duty Regards *ಭಾರತ ನಲ್ಲಿ ವೈರಲ್*1
- ಕೆಆರ್‌ಎಸ್‌ನಲ್ಲಿ ನೀರಿದ್ದಾಗ ಮಾತ್ರ ತಮಿಳುನಾಡಿಗೆ ನೀರು ಬಿಡುವುದಾಗಿ ರಾಜ್ಯ ಸರಕಾರ ಘೋಷಣೆ ಮಾಡಬೇಕು- ವೆಂಕಟಗಿರಿ ಯಯ್ಯ ಮಂಡ್ಯ: ಕೇಂದ್ರ ಸರಕಾರ ರಾಷ್ಟೀಯಸ ಜಲನೀತಿ ರೂಪಿಸುವವರೆಗೂ ಕೆಆರ್‌ಎಸ್‌ನಲ್ಲಿ ನೀರಿದ್ದಾಗ ಮಾತ್ರ ತಮಿಳುನಾಡಿಗೆ ನೀರು ಬಿಡುವುದಾಗಿ ರಾಜ್ಯ ಸರಕಾರ ಘೋಷಣೆ ಮಾಡಬೇಕು ಎಂದು ಕರ್ನಾಟಕದ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಕಾವೇರಿ ನೀರು ನಿಯಂತ್ರಣಾ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲಿಸಬಾರದು. ಸ್ವಾತಂತ್ರö್ಯ ಪೂರ್ವದ 1924ರ ಕಾವೇರಿ ಒಪ್ಪಂದವನ್ನುದ ಆಧಾರದ ಮೇಲೆ ಸ್ವತಂತ್ರ್ಯ ಭಾರತದ ವಿವಿಧ ನ್ಯಾಯಾಲಯ ಮತ್ತು ಪ್ರಾಧಿಕಾರಗಳ ಅಸಂವಿಧಾನಿಕ ಆದೇಶ ಗಳನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು. ಕಾವೇರಿ ನದಿ ನೀರು ಹಂಚಿಕೆ ಸಂಬಂಧ 1924ರ ಒಪ್ಪಂದವು 50 ವರ್ಷಗಳ ಅವಧಿಗೆ ಸೀಮಿತವಾಗಿ 1974ಕ್ಕೆ ಅಂತಿಮಗೊಂಡಿದೆ. ಸಂವಿಧಾನದ ಅನುಚ್ಛೇದ 262ರಂದು ದೇಶದ ಮತ್ತು ಅಂತರಾಜ್ಯಗಳ ಎಲ್ಲ ವಿವಾದಗಳಿಗೆ ಪರಿಹಾರ ಕಂಡುಕೊಳ್ಳುವುದು ಸರಕಾರಗಳ ಬದ್ಧತೆಯಾಗಿದೆ. ಅಂತರ ರಾಜ್ಯ ಜಲವಿವಾದ ಪರಿಹಾರ ಕಾಯ್ದೆ ಸಂವಿಧಾನ ವಿರೋಧಿಯಾಗಿದ್ದು, 1924ರ ಮೈಸೂರು- ತಮಿಳುನಾಡು ನಡುವಿನ ಒಪ್ಪಂದಕ್ಕೆ ಇಂದಿಗೂ ಕೇಂದ್ರ ಹಾಗೂ ರಾಜ್ಯ ಸರಕಾಗಳು ಇಂದಿಗೂ ತಲೆ ಬಾಗಿರುವುದು ಖಂಡನಾರ್ಹ ಎಂದು ಕಿಡಿ ಕಾರಿದರು. ಇಲ್ಲಿಂದ ಹರಿಬಿಟ್ಟ ನೀರು ಸಂಗ್ರಹಿಸಿಟ್ಟುಕೊಳ್ಳದ ತಮಿಳುನಾಡು ಸರಕಾರಸಮುದ್ರಕ್ಕೆಹರಿಬಿಡುತ್ತಿದೆ. ಬಿಕ್ಕಟ್ಟು ಬಗೆಹರಿಸು ನೀಡು ಬಿಡುವ ಹಕ್ಕನ್ನು ಕೇಂದ್ರ ಸರಕಾರ ತಮ್ಮಲ್ಲೆ ಇರಿಸಿಕೊಂಡು ರಾಷ್ಟಿçÃಯ ಜಲನೀತಿ ರೂಪಿಸಬೇಕು. ಅಲ್ಲಿವರೆಗೂ ರಾಜ್ಯ ಸರಕಾರ ಇದ್ದಾಗ ಮಾತ್ರ ತಮಿಳುನಾಡಿಗೆ ನೀರು ಬಿಡಲು ಮುಂದಾಗಬೇಕು. ಇಲ್ಲವಾದಲ್ಲಿ ತೀವ್ರತರದ ಚಳುವಳಿಗೆ ಮುಂದಾಗಬೇಕಾಗುವುದು ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಬಿ.ಆನಂದ, ಮಹಿಳಾ ಜಿಲ್ಲಾಧ್ಯಕ್ಷೆ ಸುಶ್ಮಿತ, ಪ್ರಧಾನ ಕಾರ್ಯದರ್ಶಿ ಸುರೇಶ್‌ಕುಮಾರ್, ಸಂಘಟನಾ ಕಾರ್ಯದರ್ಶಿ ಸಿದ್ದಯ್ಯ,ತಲ್ಲೊಕು ಅಧ್ಯಕ್ಷರಾದ ಕುಮಾರ್, ಬಸಸವರಾಜು, ಸದಸ್ಯ ಚಂದ್ರು ಇದ್ದರು.1
- ಆಗಸ್ಟ್ 15ರ ಐತಿಹಾಸಿಕ ರಕ್ತದಾನ ಶಿಬಿರ ಅಂಗವಾಗಿ ಮಳವಳ್ಳಿ ಪಟ್ಟಣದಲ್ಲಿ ಅಳವಡಿಸಿರುವ ಸ್ವಾಗತ ಕಮಾನುಗಳ ಉದ್ಘಾಟಿಸಿದ ಶ್ರೀಗಳು ಮಳವಳ್ಳಿ : ಬರುವ ಆಗಸ್ಟ್ 15 ರಂದು 80ನೇ ಸ್ವಾತಂತ್ರ್ಯೋ ತ್ಸದ ಅಂಗವಾಗಿ ಟೀಮ್ ಮಳವಳ್ಳಿ ಯುವಕ ಮಿತ್ರರ ಬಳಗದ ವತಿಯಿಂದ ಆಯೋಜಿ ಸಿರುವ ಐತಿಹಾಸಿಕ ಬೃಹತ್ ರಕ್ತದಾನ ಶಿಬಿರದ ಅಂಗವಾಗಿ ಮಳವಳ್ಳಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿರುವ ಬೃಹತ್ ಸ್ವಾಗತ ಮಹಾದ್ವಾರ ಗಳ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಶನಿವಾರ ಮಧ್ಯಾಹ್ನ 12. 30 ರ ಸಮಯದಲ್ಲಿ ಇಲ್ಲಿನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾ ಣದ ಮುಂಭಾಗ ಮೈಸೂರು ರಸ್ತೆಯಲ್ಲಿ ಅಳವಡಿಸಿರುವ ರಕ್ತದಾನಿಗಳ ಸ್ವಾಗತ ಮಹಾ ದ್ವಾರವನ್ನು ಕುಂದೂರು ರಸ ಸಿದ್ದೇಶ್ವರ ಮಠದ ಶ್ರೀ ನಂಜುಂ ಡಸ್ವಾಮಿ ಅವರು ಉದ್ಘಾಟಿಸಿ ದರೆ ಇದೇ ರಸ್ತೆಯ ಇನ್ನೊಂದು ದ್ವಾರದ ಕಮಾನನ್ನು ರಾಜ ಸ್ತಾನ್ ಸಮಾಜದ ಮೋಹನ್ ಲಾಲ್ ಉದ್ಘಾಟಿಸಿದರು. ಪೇಟೆ ವೃತ್ತದ ಬಳಿಯ ಕೊಳ್ಳೇಗಾಲ ಮುಖ್ಯ ರಸ್ತೆಯಲ್ಲಿ ಅಳವಡಿಸಿ ರುವ ಸ್ವಾಗತ ಕಮಾನನ್ನು ರಾಜಸ್ತಾನ್ ಸಮಾಜದ ಮುಖಂಡರಾದ ಮದನ್ ಲಾಲ್ ಉದ್ಘಾಟಿಸಿದರೆ ಇನ್ನೊಂದು ಬದಿಯ ಕಮಾನನ್ನು ಟಿಎಪಿಸಿ ಎಂಎಸ್ ಅಧ್ಯಕ್ಷರಾದ ದ್ಯಾಪೇ ಗೌಡ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶ್ರೀ ನಂಜುಂಡ ಸ್ವಾಮಿ ಅವರು ರಕ್ತದಾನ ಮಹಾದಾನವಾಗಿದ್ದು ಇಂತಹದೊಂದು ರಕ್ತದಾನ ಶಿಬಿರವನ್ನು ಮಳವಳ್ಳಿಯಲ್ಲಿ ಏರ್ಪಡಿಸಿರುವುದು ನಿಜಕ್ಕೂ ಐತಿಹಾಸಿಕ ಎಂದು ಪ್ರಶಂಸಿಸಿ ದರು ಪಕ್ಷಾತೀತವಾಗಿ ಜಾತ್ಯಾತೀ ತವಾಗಿ ಆಯೋಜಿಸಿರುವು ಟೀಮ್ ಮಳವಳ್ಳಿಯ ಎಲ್ಲಾ ಸದ್ಬಕ್ತರ ಈ ಕಾರ್ಯ ಮಳವ ಳ್ಳಿಯ ಕೀರ್ತಿಪತಾಕೆ ನಾಡಿನೆ ಲ್ಲಡೆ ಹರಡುವಂತೆ ಮಾಡಿದೆ ಎಂದು ಶ್ಲಾಘಿಸಿದ ಶ್ರೀಗಳು ಈ ಶಿಬಿರ ಯಶಸ್ವಿಯಾಗಲಿ ಇಂತಕ ಮಹತ್ ಕಾರ್ಯಗಳನ್ನು ಮಾಡುವ ಶಕ್ತಿಯನ್ನು ಟೀಮ್ ಮಳವಳ್ಳಿಯ ಎಲ್ಲಾ ಭಕ್ತರಿಗೂ ಭಗವಂತ ನೀಡಲಿ ಎಂದು ಶುಭ ಹಾರೈಸಿದರು. ಪುರಸಭೆಯ ಮಾಜಿ ಉಪಾಧ್ಯಕ್ಷ ನಂದ ಕುಮಾರ್, ನೀವೃತ್ತ ಸೈನಿಕ ಸುರೇಶ್, ಮುಖಂಡರಾದ ಎಟಿಎಂ ಸ್ವಾಮಿ, ಗುಂಡ, ಬದ್ರಿ ಸೇರಿ ಹಲವಾರು ಮುಖಂಡರ ಜೊತೆ ಟೀಮ್ ಮಳವಳ್ಳಿಯ ಹಲವಾರು ಕಾರ್ಯಕರ್ತರು ಈ ವೇಳೆ ಹಾಜರಿದ್ದರು.1
- ತಮಿಳುನಾಡಿ ಗೆ ನೀರು ಬಿಡದಂತೆ ಸರ್ಕಾರ ತೀರ್ಮಾನ ಗೊಳ್ಳುವಂತೆ ಕಾರ್ಯಕರ್ತರಿಂದ ರಸ್ತೆ ತಡೆ ಪ್ರತಿಭಟನೆ ಮಳವಳ್ಳಿ: ತಮಿಳುನಾಡಿಗೆ ಕಾವೇರಿ ನೀರು ನಿರ್ವಾಹಣ ಮಂಡಳಿ ಆದೇಶದಂತೆ ಕಾವೇರಿನೀರು ಬಿಡಲು ಹೊರಟಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಮೂಲಸಂಘಟನೆಯ ಕಾರ್ಯಕರ್ತರು ಮಳವಳ್ಳಿ ತಾಲ್ಲೂಕಿನ ಕಾಗೇಪುರ ಗೇಟ್ ಬಳಿ ರಸ್ತೆತಡೆ ಹಾಗೂ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ದೇವಿಪುರಬಸವರಾಜು ನೇತೃತ್ವದಲ್ಲಿ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ರಾಮಲಿಂಗೇಗೌಡ ಮಾತನಾಡಿ, ಒಂದು ದಿನಕ್ಕೆ 3500 ಕ್ಯೂಸೆಕ್ಸ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಾಹಣಾ ಮಂಡಳಿ ಆದೇಶ ಮಾಡಿದ್ದು, ರಾಜ್ಯ ಸರ್ಕಾರ ಆ ಆದೇಶವನ್ನು ತಿರಸ್ಕಾರ ಮಾಡಬೇಕು. ನಾಳೆ ವಿಧಾನಸಭೆ ಯಲ್ಲಿ ಸರ್ವಸದಸ್ಯರ ಸಭೆಯಲ್ಲಿ ರಾಜ್ಯ ಸರ್ಕಾರ ಕರೆದಿದ್ದು, ಎಲ್ಲಾ ಶಾಸಕರು ತಮಿಳುನಾಡಿಗೆ ನೀರು ಬಿಡದಂತೆ ತೀರ್ಮಾನ ತೆಗೆದುಕೊಳ್ಳುವಂತೆ ಆಗ್ರಹಿಸಿದರು. ಇನ್ನೂ ಇದೇ ವೇಳೆ ತಾಲ್ಲೂಕು ಅಧ್ಯಕ್ಷ ದೇವಿಪುರ ಬಸವರಾಜು ಮಾತನಾಡಿ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗೆ ಕುಡಿಯಲು ನೀರಿಲ್ಲ , ತಮಿಳುನಾಡಿಗೆ ನೀರು ಬಿಡಬೇಕಂತೆ ಇದು ಸಾಧ್ಯವಿಲ್ಲ , ನೀರು ಬಿಟ್ಟರೆ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ತಾಲ್ಲೂಕು ಅಧ್ಯಕ್ಷ ದೇವಿಪುರ ಬಸವರಾಜು, ಜಿಲ್ಲಾ ಉಪಾಧ್ಯಕ್ಷ ರಾಮಲಿಂಗೇಗೌಡ, ಸೋ.ಶಿ ಪ್ರಕಾಶ, ಪ್ರಭುಲಿಂಗು, ಶಿವನಂಜು, ಭೂಮಿಗೌಡ, ಚೌಡೇಗೌಡ, ಮಲ್ಲೇಶ್, ಗಿರೀಶ್, ಹನುಮಂತ, ಕೃಷ್ಣ, ಲಿಂಗಪಟ್ಟಣ ಬಸವರಾಜು, ಮಹೇಶ್ ಸೇರಿದಂತೆ ಹಲವರು ಇದ್ದರು.1
- ಶಿಂಷಾ ಎಡ ಮತ್ತು ಬಲದಂಡೆ ನಾಲೆಗಳಿಗೆ ತಕ್ಷಣ ನೀರು ಹರಿಸುವಂತೆ ಆಗ್ರಹಿಸಿ,ಪ್ರತಿಭಟನೆ ಮದ್ದೂರು-ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುವ ರಾಜ್ಯ ಸರ್ಕಾರದ ಆದೇಶವನ್ನು ವಿರೋಧಿಸಿ ಹಾಗೂ ಶಿಂಷಾ ಎಡ ಮತ್ತು ಬಲದಂಡೆ ನಾಲೆಗಳಿಗೆ ತಕ್ಷಣ ನೀರು ಹರಿಸುವಂತೆ ಆಗ್ರಹಿಸಿ, ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ವಿನೋದ್ ಬಾಬಾ ನೇತೃತ್ವದಲ್ಲಿ ಕೆಸ್ತೂರು ವೃತ್ತ ಘಟಕದ ವತಿಯಿಂದ ಶನಿವಾರ ರಸ್ತೆತಡೆ ಪ್ರತಿಭಟನೆ ನಡೆಸಲಾಯಿತು. ಬೆಳಿಗ್ಗೆ 11 ಗಂಟೆಗೆ ಆರಂಭವಾದ ಪ್ರತಿಭಟನೆಯಲ್ಲಿ ರೈತರು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು. ಪರಿಣಾಮ ಸುಮಾರು ಎರಡು ಕಿಲೋಮೀಟರ್ವರೆಗೆ ವಾಹನಗಳ ಸಂಚಾರ ದಟ್ಟಣೆ ಉಂಟಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ವಿನೋದ್ ಬಾಬಾ, ಕೆಆರ್ಎಸ್ ಜಲಾಶಯ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತಿರುವ ಕಬ್ಬು ಹಾಗೂ ವಿವಿಧ ತೋಟಗಾರಿಕೆ ಬೆಳೆಗಳು ನೀರಿನ ಕೊರತೆಯಿಂದ ಒಣಗುತ್ತಿವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದು ರಾಜ್ಯದ ರೈತರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.1
- "ಬಿಜೆಪಿಯವರು ನನ್ನ ಪ್ಯಾಂಟ್-ಅಂಗಿ ಹರಿಯುತ್ತಿದ್ದಾರೆ" : ಡಿಕೆಶಿ ವ್ಯಂಗ್ಯ ರಾಜ್ಯದಲ್ಲಿ ನಿರಂತರ ಮಳೆಯ ಪರಿಣಾಮ ಜಲಾಶಯಗಳು ವೇಗವಾಗಿ ಭರ್ತಿಯಾಗುತ್ತಿದ್ದು, ಹೆಚ್ಚುವರಿ ನೀರನ್ನು ಹೊರಬಿಡುವುದು ಅನಿವಾರ್ಯ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಹೋರಾಟಗಾರರು ಜಲಾಶಯಗಳ ಬಳಿ ತೆರಳಬಾರದು ಹಾಗೂ ನೀರು ಬಿಡುವುದಿಲ್ಲ ಎಂದು ನದಿಗಳಿಗೆ ಇಳಿದು ಪ್ರತಿಭಟನೆ ನಡೆಸಬಾರದು ಎಂದು ಎಚ್ಚರಿಕೆ ನೀಡಿದರು. ಮೈಸೂರಿನಲ್ಲಿ ಮಾತನಾಡಿದ ಅವರು, “ಆ ರೀತಿ ನದಿಗೆ ಇಳಿದರೆ ಕೊಚ್ಚಿಕೊಂಡು ಹೋಗುವ ಅಪಾಯವಿದೆ. ಜೀವ ಅಮೂಲ್ಯವಾದದ್ದು. ಯಾರೂ ಇಂತಹ ಸಾಹಸಕ್ಕೆ ಕೈ ಹಾಕಬಾರದು” ಎಂದು ಮನವಿ ಮಾಡಿದರು. ಇದೇ ವೇಳೆ ಆಗಸ್ಟ್ 3ರಂದು ರಾಜ್ಯಕ್ಕೆ ಆಗಮಿಸಬೇಕಿದ್ದ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಭೇಟಿ ರದ್ದಾಗಿದೆ ಎಂದು ತಿಳಿಸಿದರು. “ಪ್ರಸ್ತುತ ಪರಿಸ್ಥಿತಿ ಸೂಕ್ತವಾಗಿಲ್ಲದ ಕಾರಣ ಅವರು ಬರುತ್ತಿಲ್ಲ. ಶಾಂತ ವಾತಾವರಣದಲ್ಲಿ ಚರ್ಚೆ ನಡೆದರೆ ಮಾತ್ರ ಉತ್ತಮ ಫಲಿತಾಂಶ ಸಿಗುತ್ತದೆ. ಪರಿಸ್ಥಿತಿ ಸಹಜವಾದ ಬಳಿಕ ಅವರು ರಾಜ್ಯಕ್ಕೆ ಆಗಮಿಸಲಿದ್ದಾರೆ” ಎಂದರು. ಬಿಜೆಪಿ ಹೋರಾಟಗಳ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, “ಹೋರಾಟದ ಹೆಸರಿನಲ್ಲಿ ನನ್ನ ಪ್ಯಾಂಟ್, ಅಂಗಿಯನ್ನೇ ಹರಿಯುತ್ತಿದ್ದಾರೆ. ಕರ್ನಾಟಕದ ಸಂಸದರು ರಾಜ್ಯದ ಪರವಾಗಿ ಸಂಸತ್‌ನಲ್ಲಿ ಧ್ವನಿ ಎತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಡ್ಯಾಂಗೆ ಬಾಗಿನ ಅರ್ಪಿಸುವ ಬಗ್ಗೆ ಹೇಗೆ ಮಾತನಾಡಲು ಸಾಧ್ಯ?” ಎಂದು ವ್ಯಂಗ್ಯವಾಡಿದರು.1