logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕಾಂಗ್ರೆಸ್ ತೊರೆದು ನೂರಾರು ಯುವಕರು ಜೆಡಿಎಸ್ ಸೇರ್ಪಡೆ * ಶಾಸಕ ಶರಣಗೌಡ ಕಂದಕೂರ ಹೇಳಿಕೆ ದೇಶಕ್ಕೆ ಮೋದಿ, ರಾಜ್ಯಕ್ಕೆ ಕುಮಾರಣ್ಣನ ಅಗತ್ಯವಿದೆ ಗುರಮಠಕಲ್ (ಯಾದಗಿರಿ): ಗುರಮಠಕಲ್ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಯ ಪ್ರಕ್ರಿಯೆ ಸಧ್ಯ ಟ್ರೈಲರ್ ಇದ್ದು ಮುಂದೆ ಪಿಕ್ಚರ್ ಅಭಿ ಬಾಕಿ ಹೈ ಎಂದು ಶಾಸಕ ಶರಣಗೌಡ ಕಂದಕೂರ ತಿಳಿಸಿದರು. ಗುರಮಠಕಲ್ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಕಾಂಗ್ರೆಸ್ ತೊರೆದು ಜೆಡಿಎಸ್ ಗೆ ಸೇರ್ಪಡೆಯಾದ ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿ, ನಮ್ಮ ಅಭಿವೃದ್ಧಿ ಕಾರ್ಯಗಳನ್ನು‌ ಮೆಚ್ಚಿ ಇಂದು ನೂರಾರು ಜನ ಪಕ್ಷಕ್ಕೆ ಬರುತ್ತಿದ್ದಾರೆ. ಅವರ ಕಷ್ಟ, ಸುಖಗಳಲ್ಲಿ ಭಾಗಿಯಾಗುವುದು ನನ್ನ ಕರ್ತವ್ಯ, ಅದನ್ನು‌‌ ಖಂಡಿತವಾಗಿಯೂ ಮಾಡುತ್ತೇನೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಭದ್ರವಾಗಿ ಬೇರೂರಿದ್ದು ಅದನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು. ಹತ್ತಿಕುಣಿ ನಾಲಾ ಆಧುನೀಕರಣಕ್ಕೆ ರಾಜ್ಯ ಸರ್ಕಾರ ಅನುದಾನ ನೀಡಿದೆ ಎಂದು ಸ್ಥಳೀಯ ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಆದರೆ, ರಾಜ್ಯದಲ್ಲಿನ‌ ಸರ್ಕಾರ ಗುರಮಠಕಲ್ ಕ್ಷೇತ್ರಕ್ಕೆ ಮೂರು ವರ್ಷಗಳಿಂದ ಕುಡಿಯುವ ನೀರು ಕೊಟ್ಟಿಲ್ಲ ಇನ್ನೂ ಕೋಟಿಗಟ್ಟಲೇ ಅನುದಾನ ಕೊಡುತ್ತಾರಾ? ಎಂದು ಪ್ರಶ್ನಿಸಿದರು. ಕ್ಷೇತ್ರದ ಕುಡಿಯುವ ನೀರಿನ ವಿಷಯದಲ್ಲಿ ಅಧಿವೇಶನದಲ್ಲಿ ಸತತ 8 ಬಾರಿ ಪ್ರಶ್ನೆ ಮಾಡಿದ್ದೇನೆ. ಆದಕ್ಕೆ ಇದುವರೆಗೂ ಉತ್ತರವಿಲ್ಲ. ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ನನಗೆ ಯಾರು ಸಹಕಾರ ಕೊಟ್ಟಿದ್ದಾರೆ, ಯಾರು ಅಡ್ಡಿ ಮಾಡಿದ್ದಾರೆ ಎಲ್ಲ ಗೊತ್ತಿದೆ. ಅದನ್ನು ನಿಮ್ಮೂರಿಗೆ ಬಂದು ಹೇಳುವೆ ಎಂದರು. ಪುರಸಭೆ ಮಾಜಿ ಅಧ್ಯಕ್ಷ ಭೀಮಶಪ್ಪ ಗುಡಸೆ ಮಾತನಾಡಿ, ಮತಕ್ಷೇತ್ರದಲ್ಲಿ ಹೊಸ ಬದಲಾವಣೆ ತರಲು ನಮ್ಮ ಶಾಸಕ ಶರಣಗೌಡ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ವಿಧಾನಸಭೆಯ ಪ್ರತಿ ಅಧಿವೇಶನದಲ್ಲಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಅಭಿವೃದ್ಧಿಗೆ ಮುನ್ನಡೆ ಬರೆಯಲು ಹೋರಾಟ ನಡೆಸುತ್ತಿದ್ದಾರೆ.‌ ಇಂಥ ನಾಯಕರ ಕೈ ಬಲಪಡಿಸಲು ಯುವಕರು ಮುಂದಾಗಬೇಕು ಎಂದರು. ಮುಖಂಡ ನರಸಪ್ಪ ಕವಡೆ ಮಾತನಾಡಿ, ಜೆಡಿಎಸ್ ಪಕ್ಷದ ಬಗ್ಗೆ ನಮ್ಮ ನಾಯಕರ ಬಗ್ಗೆ ಕಾಂಗ್ರೆಸ್ ನಾಯಕರು ಸಾಕಷ್ಟು ಟೀಕೆ ಮಾಡುತ್ತಿದ್ದಾರೆ. ನಮ್ಮ ಶಾಸಕರು ಕಿಂಚಿತ್ತಾದರೂ ಅಕ್ರಮ ಹಾದಿ ಹಿಡಿದಿದ್ದಾರೆ ದಾಖಲೆ ನೀಡಿ ಇಲ್ಲವೇ ಬಹಿರಂಗವಾಗಿ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು. ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಸರ್ಕಾರ ರೈತರ ಭೂಮಿ ವಶ ಪಡಿಸಿಕೊಳ್ಳಲು ಮುಂದಾದಾಗ ನಮ್ಮ ಹಿಂದಿನ ಶಾಸಕರಾಗಿದ್ದ ದಿ.ನಾಗನಗೌಡ ಕಂದಕೂರು ಅವರು ಉರಿ ಬಿಸಿಲು ಲೆಕ್ಕಿಸದೆ ಹೋರಾಟ ನಡೆಸಿದ್ದರು.‌ ಅಂದು ಕಾಂಗ್ರೆಸ್ ನವರು ಮೌನಕ್ಕೆ ಶರಣಾಗಿದ್ದರು. ಇಂದು ಸರ್ಕಾರ ಭೂ ಸ್ವಾಧೀನ ಕೈ ಬಿಡಲು ಕಾರಣ ನಮ್ಮ ಶಾಸಕ ಶರಣಗೌಡ ಅವರ ಸತತ ಹೋರಾಟವೇ ಕಾರಣ ಎಂದರು. ಪಕ್ಷದ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ಪ್ರಾಸ್ತಾವಿಕ ಮಾತನಾಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸಿರಡ್ಡಿ ಅನಪುರ ಮೊದಲು ಕನ್ನಡವನ್ನು ಶುದ್ಧವಾಗಿ ಮಾತನಾಡಲು ಕಲಿಯಲಿ ಎಂದು ವ್ಯಂಗ್ಯವಾಡಿದ ಅವರು, ನಮ್ಮ ಶಾಸಕರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸದಿದ್ದರೆ ಜೆಡಿಎಸ್ ಕಾರ್ಯಕರ್ತರು ಸುಮ್ಮನೆ ಕೂಡುವುದಿಲ್ಲ ಎಂದು ಗುಡುಗಿದರು. ಕ್ಷೇತ್ರದ ಯರಗೋಳ, ಹೋರುಂಚಾ, ಬದ್ದೆಪಲ್ಲಿ, ತುರಕನದೊಡ್ಡಿ, ಹಿರೇನೂರ, ಸಾವೂರು, ಗ್ರಾಮ ಸೈದಾಪುರದ ಯುವಕರು ಜೆಡಿಎಸ್ ಸೇರ್ಪಡೆಗೊಂಡರು. ಬ್ಲಾಕ್ ಅಧ್ಯಕ್ಷ ಶರಣು ಆವಂಟಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ರಾಮಣ್ಣ ಯಡ್ಡಳ್ಳಿ, ಪಕ್ಷದ ಜಿಲ್ಲಾ ವಕ್ತಾರ ಮಲ್ಲನಗೌಡ ಹಳಿಮನಿ ಕೌಳೂರು, ಅಜಯರಡ್ಡಿ ಯಲ್ಹೇರಿ, ಬಸ್ಸಣ್ಣ ದೇವರಳ್ಳಿ, ಶರಣು ಆವಂಟಿ, ತಾಪಂ ಮಾಜಿ ಅಧ್ಯಕ್ಷ ಈಶ್ವರ ನಾಯಕ್ , ನರಸಪ್ಪ ಕವಡೆ, ವೆಂಕಟೇಶ ಕಡದ್, ಗುರುನಾಥರಡ್ಡಿ ಸೈದಾಪುರ, ಶರಣಯ್ಯಾ ಸ್ಚಾಮಿ ಅರಿಕೇರಾ, ಚಂದ್ರುಗೌಡ ಸೈದಾಪುರ, ಬಸವರಾಜ ಕಣೇಕಲ್,ಜಯೇಂದ್ರ ಚೌವ್ಹಾಣ್ ಇದ್ದರು. ನಮ್ಮ ಶಾಸಕರ ಬಗ್ಗೆ ಹಗುರವಾಗಿ ಮಾತನಾಡಬೇಡಿ ನಮ್ಮ ಶಾಸಕರು 40% ಕಮಿಷನ್ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸಿರಡ್ಡಿ ಅನಪುರ ಆರೋಪ ಮಾಡುತ್ತಿದ್ದಾರೆ. ಅವರಿಗೆ ನಿಜವಾಗಿಯೂ ನೈತಿಕತೆ ಇದ್ದರೆ, ಯಾವ ದೇವರ ಬಳಿಯಾದರೂ ಬರಲಿ ನಾನು ಅಣೆ, ಪ್ರಮಾಣ ಮಾಡಲು ಸಿದ್ಧ.‌ ನೀವು ಬರುತ್ತೀರಾ? ಎಂದು ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ಖಾರವಾಗಿ ಸವಾಲು ಹಾಕಿದರು. ಬಸಿರಡ್ಡಿ ಅವರೇ ನೀವು ಎಷ್ಟು ಲಂಚ ತಿನ್ನುತ್ತಿದ್ದೀರಿ ಎಂಬ ಅಂಕಿ-ಅಂಶ ನಮ್ಮ ಬಳಿ ಇದೆ. ಗುರುಮಠಕಲ್ ಕ್ಷೇತ್ರದ ಕಾಂಗ್ರೆಸ್ ನಲ್ಲಿ ಮನೆಯೊಂದು ಮೂರು ಬಾಗಿಲು ಅಲ್ಲ, ಎಟೆಂಟು ಬಾಗಿಲುಗಳಾಗಿವೆ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಾಬುರಾವ್ ಚಿಂಚನಸೂರ್ ಸ್ಪರ್ಧೆ ಮಾಡಿದರೆ ಮಾತ್ರ ನಿಮ್ಮ ಗೌರವ ಉಳಿಯುತ್ತದೆ. ‌ಇಲ್ಲದಿದ್ದರೆ, ಕಾಂಗ್ರೆಸ್ ನ ಡೆಪಾಸಿಟ್ ಜಪ್ತಿಯಾಗು ಪಕ್ಷವನ್ನು ಟಾರ್ಚ್ ಹಾಕಿ ಹುಡುಕುವ ಸ್ಥಿತಿ ಎದುರಾಗುತ್ತದೆ ಎಂದು ಭವಿಷ್ಯ ನುಡಿದರು. ಕ್ಷೇತ್ರದ ಯುವಕರು ಮತ್ತೊಬ್ಬರ ಮಾತು ಕೇಳಿ ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ.‌ ನಾನು ಶಾಸಕನಾಗಿ ಕ್ಷೇತ್ರದ ಜನ ತಲೆ ತಗ್ಗಿಸುವ ಕೆಲಸ ನಮ್ಮ‌ ದೊಡ್ಡಪ್ಪ‌ ಆಗಲಿ, ನಮ್ಮ ತಂದೆಯವರಾಗಲಿ‌‌ ಮತ್ತು ನಾನಾಗಲಿ‌‌ ಯಾವತ್ತೂ ಮಾಡುವುದಿಲ್ಲ. - ಶರಣಗೌಡ ಕಂದಕೂರ ಶಾಸಕ ------ ಹಿಂದುಳಿದ ಕೋಲಿ ಸಮಾಜದ ಬಾಬುರಾವ್ ಚಿಂಚನಸೂರ ಅವರಿಗೆ ಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸ್ಥಳೀಯ ಕಾಂಗ್ರೆಸ್ ನಾಯಕರು ಸಿದ್ದರಿಲ್ಲ ಎಂಬುದು ಆ ಪಕ್ಷದ ಕಾರ್ಯಕರ್ತರೇ ಹೇಳುತ್ತಿದ್ದಾರೆ. - ಸುಭಾಶ್ಚಂದ್ರ ಕಟಕಟಿ ಜೆಡಿಎಸ್ ಜಿಲ್ಲಾಧ್ಯಕ್ಷ ಕಾಂಗ್ರೆಸ್ ತೊರೆದು ನೂರಾರು ಯುವಕರು ಜೆಡಿಎಸ್ ಸೇರ್ಪಡೆ * ಶಾಸಕ ಶರಣಗೌಡ ಕಂದಕೂರ ಹೇಳಿಕೆ ದೇಶಕ್ಕೆ ಮೋದಿ, ರಾಜ್ಯಕ್ಕೆ ಕುಮಾರಣ್ಣನ ಅಗತ್ಯವಿದೆ ಗುರಮಠಕಲ್ (ಯಾದಗಿರಿ): ಗುರಮಠಕಲ್ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಯ ಪ್ರಕ್ರಿಯೆ ಸಧ್ಯ ಟ್ರೈಲರ್ ಇದ್ದು ಮುಂದೆ ಪಿಕ್ಚರ್ ಅಭಿ ಬಾಕಿ ಹೈ ಎಂದು ಶಾಸಕ ಶರಣಗೌಡ ಕಂದಕೂರ ತಿಳಿಸಿದರು. ಗುರಮಠಕಲ್ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಕಾಂಗ್ರೆಸ್ ತೊರೆದು ಜೆಡಿಎಸ್ ಗೆ ಸೇರ್ಪಡೆಯಾದ ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿ, ನಮ್ಮ ಅಭಿವೃದ್ಧಿ ಕಾರ್ಯಗಳನ್ನು‌ ಮೆಚ್ಚಿ ಇಂದು ನೂರಾರು ಜನ ಪಕ್ಷಕ್ಕೆ ಬರುತ್ತಿದ್ದಾರೆ. ಅವರ ಕಷ್ಟ, ಸುಖಗಳಲ್ಲಿ ಭಾಗಿಯಾಗುವುದು ನನ್ನ ಕರ್ತವ್ಯ, ಅದನ್ನು‌‌ ಖಂಡಿತವಾಗಿಯೂ ಮಾಡುತ್ತೇನೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಭದ್ರವಾಗಿ ಬೇರೂರಿದ್ದು ಅದನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು. ಹತ್ತಿಕುಣಿ ನಾಲಾ ಆಧುನೀಕರಣಕ್ಕೆ ರಾಜ್ಯ ಸರ್ಕಾರ ಅನುದಾನ ನೀಡಿದೆ ಎಂದು ಸ್ಥಳೀಯ ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಆದರೆ, ರಾಜ್ಯದಲ್ಲಿನ‌ ಸರ್ಕಾರ ಗುರಮಠಕಲ್ ಕ್ಷೇತ್ರಕ್ಕೆ ಮೂರು ವರ್ಷಗಳಿಂದ ಕುಡಿಯುವ ನೀರು ಕೊಟ್ಟಿಲ್ಲ ಇನ್ನೂ ಕೋಟಿಗಟ್ಟಲೇ ಅನುದಾನ ಕೊಡುತ್ತಾರಾ? ಎಂದು ಪ್ರಶ್ನಿಸಿದರು. ಕ್ಷೇತ್ರದ ಕುಡಿಯುವ ನೀರಿನ ವಿಷಯದಲ್ಲಿ ಅಧಿವೇಶನದಲ್ಲಿ ಸತತ 8 ಬಾರಿ ಪ್ರಶ್ನೆ ಮಾಡಿದ್ದೇನೆ. ಆದಕ್ಕೆ ಇದುವರೆಗೂ ಉತ್ತರವಿಲ್ಲ. ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ನನಗೆ ಯಾರು ಸಹಕಾರ ಕೊಟ್ಟಿದ್ದಾರೆ, ಯಾರು ಅಡ್ಡಿ ಮಾಡಿದ್ದಾರೆ ಎಲ್ಲ ಗೊತ್ತಿದೆ. ಅದನ್ನು ನಿಮ್ಮೂರಿಗೆ ಬಂದು ಹೇಳುವೆ ಎಂದರು. ಪುರಸಭೆ ಮಾಜಿ ಅಧ್ಯಕ್ಷ ಭೀಮಶಪ್ಪ ಗುಡಸೆ ಮಾತನಾಡಿ, ಮತಕ್ಷೇತ್ರದಲ್ಲಿ ಹೊಸ ಬದಲಾವಣೆ ತರಲು ನಮ್ಮ ಶಾಸಕ ಶರಣಗೌಡ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ವಿಧಾನಸಭೆಯ ಪ್ರತಿ ಅಧಿವೇಶನದಲ್ಲಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಅಭಿವೃದ್ಧಿಗೆ ಮುನ್ನಡೆ ಬರೆಯಲು ಹೋರಾಟ ನಡೆಸುತ್ತಿದ್ದಾರೆ.‌ ಇಂಥ ನಾಯಕರ ಕೈ ಬಲಪಡಿಸಲು ಯುವಕರು ಮುಂದಾಗಬೇಕು ಎಂದರು. ಮುಖಂಡ ನರಸಪ್ಪ ಕವಡೆ ಮಾತನಾಡಿ, ಜೆಡಿಎಸ್ ಪಕ್ಷದ ಬಗ್ಗೆ ನಮ್ಮ ನಾಯಕರ ಬಗ್ಗೆ ಕಾಂಗ್ರೆಸ್ ನಾಯಕರು ಸಾಕಷ್ಟು ಟೀಕೆ ಮಾಡುತ್ತಿದ್ದಾರೆ. ನಮ್ಮ ಶಾಸಕರು ಕಿಂಚಿತ್ತಾದರೂ ಅಕ್ರಮ ಹಾದಿ ಹಿಡಿದಿದ್ದಾರೆ ದಾಖಲೆ ನೀಡಿ ಇಲ್ಲವೇ ಬಹಿರಂಗವಾಗಿ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು. ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಸರ್ಕಾರ ರೈತರ ಭೂಮಿ ವಶ ಪಡಿಸಿಕೊಳ್ಳಲು ಮುಂದಾದಾಗ ನಮ್ಮ ಹಿಂದಿನ ಶಾಸಕರಾಗಿದ್ದ ದಿ.ನಾಗನಗೌಡ ಕಂದಕೂರು ಅವರು ಉರಿ ಬಿಸಿಲು ಲೆಕ್ಕಿಸದೆ ಹೋರಾಟ ನಡೆಸಿದ್ದರು.‌ ಅಂದು ಕಾಂಗ್ರೆಸ್ ನವರು ಮೌನಕ್ಕೆ ಶರಣಾಗಿದ್ದರು. ಇಂದು ಸರ್ಕಾರ ಭೂ ಸ್ವಾಧೀನ ಕೈ ಬಿಡಲು ಕಾರಣ ನಮ್ಮ ಶಾಸಕ ಶರಣಗೌಡ ಅವರ ಸತತ ಹೋರಾಟವೇ ಕಾರಣ ಎಂದರು. ಪಕ್ಷದ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ಪ್ರಾಸ್ತಾವಿಕ ಮಾತನಾಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸಿರಡ್ಡಿ ಅನಪುರ ಮೊದಲು ಕನ್ನಡವನ್ನು ಶುದ್ಧವಾಗಿ ಮಾತನಾಡಲು ಕಲಿಯಲಿ ಎಂದು ವ್ಯಂಗ್ಯವಾಡಿದ ಅವರು, ನಮ್ಮ ಶಾಸಕರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸದಿದ್ದರೆ ಜೆಡಿಎಸ್ ಕಾರ್ಯಕರ್ತರು ಸುಮ್ಮನೆ ಕೂಡುವುದಿಲ್ಲ ಎಂದು ಗುಡುಗಿದರು. ಕ್ಷೇತ್ರದ ಯರಗೋಳ, ಹೋರುಂಚಾ, ಬದ್ದೆಪಲ್ಲಿ, ತುರಕನದೊಡ್ಡಿ, ಹಿರೇನೂರ, ಸಾವೂರು, ಗ್ರಾಮ ಸೈದಾಪುರದ ಯುವಕರು ಜೆಡಿಎಸ್ ಸೇರ್ಪಡೆಗೊಂಡರು. ಬ್ಲಾಕ್ ಅಧ್ಯಕ್ಷ ಶರಣು ಆವಂಟಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ರಾಮಣ್ಣ ಯಡ್ಡಳ್ಳಿ, ಪಕ್ಷದ ಜಿಲ್ಲಾ ವಕ್ತಾರ ಮಲ್ಲನಗೌಡ ಹಳಿಮನಿ ಕೌಳೂರು, ಅಜಯರಡ್ಡಿ ಯಲ್ಹೇರಿ, ಬಸ್ಸಣ್ಣ ದೇವರಳ್ಳಿ, ಶರಣು ಆವಂಟಿ, ತಾಪಂ ಮಾಜಿ ಅಧ್ಯಕ್ಷ ಈಶ್ವರ ನಾಯಕ್ , ನರಸಪ್ಪ ಕವಡೆ, ವೆಂಕಟೇಶ ಕಡದ್, ಗುರುನಾಥರಡ್ಡಿ ಸೈದಾಪುರ, ಶರಣಯ್ಯಾ ಸ್ಚಾಮಿ ಅರಿಕೇರಾ, ಚಂದ್ರುಗೌಡ ಸೈದಾಪುರ, ಬಸವರಾಜ ಕಣೇಕಲ್,ಜಯೇಂದ್ರ ಚೌವ್ಹಾಣ್ ಇದ್ದರು. ನಮ್ಮ ಶಾಸಕರ ಬಗ್ಗೆ ಹಗುರವಾಗಿ ಮಾತನಾಡಬೇಡಿ ನಮ್ಮ ಶಾಸಕರು 40% ಕಮಿಷನ್ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸಿರಡ್ಡಿ ಅನಪುರ ಆರೋಪ ಮಾಡುತ್ತಿದ್ದಾರೆ. ಅವರಿಗೆ ನಿಜವಾಗಿಯೂ ನೈತಿಕತೆ ಇದ್ದರೆ, ಯಾವ ದೇವರ ಬಳಿಯಾದರೂ ಬರಲಿ ನಾನು ಅಣೆ, ಪ್ರಮಾಣ ಮಾಡಲು ಸಿದ್ಧ.‌ ನೀವು ಬರುತ್ತೀರಾ? ಎಂದು ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ಖಾರವಾಗಿ ಸವಾಲು ಹಾಕಿದರು. ಬಸಿರಡ್ಡಿ ಅವರೇ ನೀವು ಎಷ್ಟು ಲಂಚ ತಿನ್ನುತ್ತಿದ್ದೀರಿ ಎಂಬ ಅಂಕಿ-ಅಂಶ ನಮ್ಮ ಬಳಿ ಇದೆ. ಗುರುಮಠಕಲ್ ಕ್ಷೇತ್ರದ ಕಾಂಗ್ರೆಸ್ ನಲ್ಲಿ ಮನೆಯೊಂದು ಮೂರು ಬಾಗಿಲು ಅಲ್ಲ, ಎಟೆಂಟು ಬಾಗಿಲುಗಳಾಗಿವೆ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಾಬುರಾವ್ ಚಿಂಚನಸೂರ್ ಸ್ಪರ್ಧೆ ಮಾಡಿದರೆ ಮಾತ್ರ ನಿಮ್ಮ ಗೌರವ ಉಳಿಯುತ್ತದೆ. ‌ಇಲ್ಲದಿದ್ದರೆ, ಕಾಂಗ್ರೆಸ್ ನ ಡೆಪಾಸಿಟ್ ಜಪ್ತಿಯಾಗು ಪಕ್ಷವನ್ನು ಟಾರ್ಚ್ ಹಾಕಿ ಹುಡುಕುವ ಸ್ಥಿತಿ ಎದುರಾಗುತ್ತದೆ ಎಂದು ಭವಿಷ್ಯ ನುಡಿದರು. ಕ್ಷೇತ್ರದ ಯುವಕರು ಮತ್ತೊಬ್ಬರ ಮಾತು ಕೇಳಿ ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ.‌ ನಾನು ಶಾಸಕನಾಗಿ ಕ್ಷೇತ್ರದ ಜನ ತಲೆ ತಗ್ಗಿಸುವ ಕೆಲಸ ನಮ್ಮ‌ ದೊಡ್ಡಪ್ಪ‌ ಆಗಲಿ, ನಮ್ಮ ತಂದೆಯವರಾಗಲಿ‌‌ ಮತ್ತು ನಾನಾಗಲಿ‌‌ ಯಾವತ್ತೂ ಮಾಡುವುದಿಲ್ಲ. - ಶರಣಗೌಡ ಕಂದಕೂರ ಶಾಸಕ ------ ಹಿಂದುಳಿದ ಕೋಲಿ ಸಮಾಜದ ಬಾಬುರಾವ್ ಚಿಂಚನಸೂರ ಅವರಿಗೆ ಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸ್ಥಳೀಯ ಕಾಂಗ್ರೆಸ್ ನಾಯಕರು ಸಿದ್ದರಿಲ್ಲ ಎಂಬುದು ಆ ಪಕ್ಷದ ಕಾರ್ಯಕರ್ತರೇ ಹೇಳುತ್ತಿದ್ದಾರೆ. - ಸುಭಾಶ್ಚಂದ್ರ ಕಟಕಟಿ ಜೆಡಿಎಸ್ ಜಿಲ್ಲಾಧ್ಯಕ್ಷ

2 hrs ago
user_YADGIR NEWS
YADGIR NEWS
Video Creator ಯಾದಗಿರಿ, ಯಾದಗಿರಿ, ಕರ್ನಾಟಕ•
2 hrs ago
e5993265-5259-4420-9e70-9ba1f7ef3622

More news from ಕರ್ನಾಟಕ and nearby areas
  • ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಲಕ್ಷಾಂತರ ಲೀಟರ್ ನೀರು ಪೋಲಾಗುತ್ತಿದೆ. ಬೇಸಿಗೆಯಲ್ಲಿ ಜನರು ನೀರಿಗಾಗಿ ಪರದಾಡುತ್ತಿರುವಾಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಮೂಲ್ಯ ನೀರು ವ್ಯರ್ಥವಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಪೈಪ್ ದುರಸ್ತಿ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
    1
    ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಲಕ್ಷಾಂತರ ಲೀಟರ್ ನೀರು ಪೋಲಾಗುತ್ತಿದೆ. ಬೇಸಿಗೆಯಲ್ಲಿ ಜನರು ನೀರಿಗಾಗಿ ಪರದಾಡುತ್ತಿರುವಾಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಮೂಲ್ಯ ನೀರು ವ್ಯರ್ಥವಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಪೈಪ್ ದುರಸ್ತಿ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
    user_YADGIR NEWS
    YADGIR NEWS
    Video Creator ಯಾದಗಿರಿ, ಯಾದಗಿರಿ, ಕರ್ನಾಟಕ•
    21 hrs ago
  • ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತಾಲೂಕು ಘಟಕ ಹಾಗೂ ಜಾಲಹಳ್ಳಿ ಹೋಬಳಿ ಘಟಕದ ವತಿಯಿಂದ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಜಾಲಹಳ್ಳಿಯ ವಾರ್ಡ್ ನಂ. 07ರಲ್ಲಿ ಮಹಿಳೆಯರು ಸಾರ್ವಜನಿಕ ಶೌಚಾಲಯಕ್ಕೆ ಹೋಗುವ ಮುಖ್ಯ ರಸ್ತೆಗೆ ಅಡ್ಡವಾಗಿ ಅನಧಿಕೃತವಾಗಿ ಶೇಡ್ ಹಾಗೂ ಮನೆ ನಿರ್ಮಾಣ ಮಾಡಲಾಗಿದೆ ಎಂದು ಕರವೇ ಮುಖಂಡರು ಆರೋಪಿಸಿದರು. ರಂಗಯ್ಯ ತಂದೆ ಶಿವಪ್ಪ ವಂದಲಿ ಹಾಗೂ ಶಿವನ ತಂದೆ ಶಿವಪ್ಪ ಅವರು ಅಕ್ರಮವಾಗಿ ಶೇಡ್ ನಿರ್ಮಾಣ ಮಾಡಿರುವುದರಿಂದ ಮಹಿಳೆಯರು ಶೌಚಾಲಯಕ್ಕೆ ತೆರಳಲು ತೊಂದರೆ ಉಂಟಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ಶೇಡ್‌ನ ಕೆಳಭಾಗದಲ್ಲಿ ಸಾರ್ವಜನಿಕರಿಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಗಳು ಹಾದು ಹೋಗುತ್ತಿದ್ದು, ಇದರಿಂದ ಸಾರ್ವಜನಿಕರಿಗೂ ಸಮಸ್ಯೆ ಉಂಟಾಗುತ್ತಿದೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತಾಲೂಕು ಘಟಕ ಹಾಗೂ ಜಾಲಹಳ್ಳಿ ಹೋಬಳಿ ಘಟಕದ ವತಿಯಿಂದ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಜಾಲಹಳ್ಳಿಯ ವಾರ್ಡ್ ನಂ. 07ರಲ್ಲಿ ಮಹಿಳೆಯರು ಸಾರ್ವಜನಿಕ ಶೌಚಾಲಯಕ್ಕೆ ಹೋಗುವ ಮುಖ್ಯ ರಸ್ತೆಗೆ ಅಡ್ಡವಾಗಿ ಅನಧಿಕೃತವಾಗಿ ಶೇಡ್ ಹಾಗೂ ಮನೆ ನಿರ್ಮಾಣ ಮಾಡಲಾಗಿದೆ ಎಂದು ಕರವೇ ಮುಖಂಡರು ಆರೋಪಿಸಿದರು. ರಂಗಯ್ಯ ತಂದೆ ಶಿವಪ್ಪ ವಂದಲಿ ಹಾಗೂ ಶಿವನ ತಂದೆ ಶಿವಪ್ಪ ಅವರು ಅಕ್ರಮವಾಗಿ ಶೇಡ್ ನಿರ್ಮಾಣ ಮಾಡಿರುವುದರಿಂದ ಮಹಿಳೆಯರು ಶೌಚಾಲಯಕ್ಕೆ ತೆರಳಲು ತೊಂದರೆ ಉಂಟಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ಶೇಡ್‌ನ ಕೆಳಭಾಗದಲ್ಲಿ ಸಾರ್ವಜನಿಕರಿಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಗಳು ಹಾದು ಹೋಗುತ್ತಿದ್ದು, ಇದರಿಂದ ಸಾರ್ವಜನಿಕರಿಗೂ ಸಮಸ್ಯೆ ಉಂಟಾಗುತ್ತಿದೆ ಎಂದು ತಿಳಿಸಿದರು. ಮಹಿಳೆಯರ ಸಂಚಾರಕ್ಕೆ ಅಡಚಣೆ ಆಗಿರುವುದರಿಂದ ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕಟ್ಟಡ ಪರವಾನಗಿಯನ್ನು ರದ್ದುಪಡಿಸಿ, ಅಕ್ರಮ ಶೇಡ್ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಮ ಪಂಚಾಯತ್ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಮುಖಂಡರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ನಂದಪ್ಪ ಪಿ. ಮಡ್ಡಿ (ಕರವೇ ತಾಲೂಕು ಅಧ್ಯಕ್ಷರು), ರಂಗಣ್ಣ ಕೋಲ್ಕಾರ್, ಗುರುನಾಥ್ ರೆಡ್ಡಿ (ತಾಲೂಕು ಪ್ರಧಾನ ಕಾರ್ಯದರ್ಶಿ), ಮೌನೇಶ್ ದೇಸಾಯಿ, ರಾಮಣ್ಣ ತೆಗ್ಗಳ್ಳಿ (ಗ್ರಾಮ ಪಂಚಾಯತ್ ಸದಸ್ಯರು), ಚನ್ನಬಸವ (ಗ್ರಾಮ ಪಂಚಾಯತ್ ಸದಸ್ಯರು), ಬಸಮ್ಮ (ಗ್ರಾಮ ಪಂಚಾಯತ್ ಸದಸ್ಯರು), ರಮೇಶ್, ರಂಗಪ್ಪ ಬಂಡಿ, ಭೀಮಣ್ಣ ನಾಯಕ್ (ತಾಲೂಕು ಸಂಚಾಲಕರು), ಅಮರೇಶ್ (ಹೋಬಳಿ ಉಪಾಧ್ಯಕ್ಷರು), ತಮ್ಮಣ್ಣ, ವೆಂಕಟೇಶ್ (ಜಾಲಹಳ್ಳಿ ಗ್ರಾಮ ಘಟಕ ಉಪಾಧ್ಯಕ್ಷರು) ಸೇರಿದಂತೆ ಹಲವರು ಉಪಸ್ಥಿತರಿದ್ದರು. 🖋️ ವರದಿ:ಖಾಜಾ ಹುಸೇನ್ ಬಾಬಾ ಜಾಲಹಳ್ಳಿ
    1
    ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತಾಲೂಕು ಘಟಕ ಹಾಗೂ ಜಾಲಹಳ್ಳಿ ಹೋಬಳಿ ಘಟಕದ ವತಿಯಿಂದ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಜಾಲಹಳ್ಳಿಯ ವಾರ್ಡ್ ನಂ. 07ರಲ್ಲಿ ಮಹಿಳೆಯರು ಸಾರ್ವಜನಿಕ ಶೌಚಾಲಯಕ್ಕೆ ಹೋಗುವ ಮುಖ್ಯ ರಸ್ತೆಗೆ ಅಡ್ಡವಾಗಿ ಅನಧಿಕೃತವಾಗಿ ಶೇಡ್ ಹಾಗೂ ಮನೆ ನಿರ್ಮಾಣ ಮಾಡಲಾಗಿದೆ ಎಂದು ಕರವೇ ಮುಖಂಡರು ಆರೋಪಿಸಿದರು. ರಂಗಯ್ಯ ತಂದೆ ಶಿವಪ್ಪ ವಂದಲಿ ಹಾಗೂ ಶಿವನ ತಂದೆ ಶಿವಪ್ಪ ಅವರು ಅಕ್ರಮವಾಗಿ ಶೇಡ್ ನಿರ್ಮಾಣ ಮಾಡಿರುವುದರಿಂದ ಮಹಿಳೆಯರು ಶೌಚಾಲಯಕ್ಕೆ ತೆರಳಲು ತೊಂದರೆ ಉಂಟಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಇದೇ ಶೇಡ್‌ನ ಕೆಳಭಾಗದಲ್ಲಿ ಸಾರ್ವಜನಿಕರಿಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಗಳು ಹಾದು ಹೋಗುತ್ತಿದ್ದು, ಇದರಿಂದ ಸಾರ್ವಜನಿಕರಿಗೂ ಸಮಸ್ಯೆ ಉಂಟಾಗುತ್ತಿದೆ 
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತಾಲೂಕು ಘಟಕ ಹಾಗೂ ಜಾಲಹಳ್ಳಿ ಹೋಬಳಿ ಘಟಕದ ವತಿಯಿಂದ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಜಾಲಹಳ್ಳಿಯ ವಾರ್ಡ್ ನಂ. 07ರಲ್ಲಿ ಮಹಿಳೆಯರು ಸಾರ್ವಜನಿಕ ಶೌಚಾಲಯಕ್ಕೆ ಹೋಗುವ ಮುಖ್ಯ ರಸ್ತೆಗೆ ಅಡ್ಡವಾಗಿ ಅನಧಿಕೃತವಾಗಿ ಶೇಡ್ ಹಾಗೂ ಮನೆ ನಿರ್ಮಾಣ ಮಾಡಲಾಗಿದೆ ಎಂದು ಕರವೇ ಮುಖಂಡರು ಆರೋಪಿಸಿದರು. ರಂಗಯ್ಯ ತಂದೆ ಶಿವಪ್ಪ ವಂದಲಿ ಹಾಗೂ ಶಿವನ ತಂದೆ ಶಿವಪ್ಪ ಅವರು ಅಕ್ರಮವಾಗಿ ಶೇಡ್ ನಿರ್ಮಾಣ ಮಾಡಿರುವುದರಿಂದ ಮಹಿಳೆಯರು ಶೌಚಾಲಯಕ್ಕೆ ತೆರಳಲು ತೊಂದರೆ ಉಂಟಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದೇ ಶೇಡ್‌ನ ಕೆಳಭಾಗದಲ್ಲಿ ಸಾರ್ವಜನಿಕರಿಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಗಳು ಹಾದು ಹೋಗುತ್ತಿದ್ದು, ಇದರಿಂದ ಸಾರ್ವಜನಿಕರಿಗೂ ಸಮಸ್ಯೆ ಉಂಟಾಗುತ್ತಿದೆ ಎಂದು ತಿಳಿಸಿದರು. ಮಹಿಳೆಯರ ಸಂಚಾರಕ್ಕೆ ಅಡಚಣೆ ಆಗಿರುವುದರಿಂದ ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕಟ್ಟಡ ಪರವಾನಗಿಯನ್ನು ರದ್ದುಪಡಿಸಿ, ಅಕ್ರಮ ಶೇಡ್ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಮ ಪಂಚಾಯತ್ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಮುಖಂಡರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಂದಪ್ಪ ಪಿ. ಮಡ್ಡಿ (ಕರವೇ ತಾಲೂಕು ಅಧ್ಯಕ್ಷರು), ರಂಗಣ್ಣ ಕೋಲ್ಕಾರ್, ಗುರುನಾಥ್ ರೆಡ್ಡಿ (ತಾಲೂಕು ಪ್ರಧಾನ ಕಾರ್ಯದರ್ಶಿ), ಮೌನೇಶ್ ದೇಸಾಯಿ, ರಾಮಣ್ಣ ತೆಗ್ಗಳ್ಳಿ (ಗ್ರಾಮ ಪಂಚಾಯತ್ ಸದಸ್ಯರು), ಚನ್ನಬಸವ (ಗ್ರಾಮ ಪಂಚಾಯತ್ ಸದಸ್ಯರು), ಬಸಮ್ಮ (ಗ್ರಾಮ ಪಂಚಾಯತ್ ಸದಸ್ಯರು), ರಮೇಶ್, ರಂಗಪ್ಪ ಬಂಡಿ, ಭೀಮಣ್ಣ ನಾಯಕ್ (ತಾಲೂಕು ಸಂಚಾಲಕರು), ಅಮರೇಶ್ (ಹೋಬಳಿ ಉಪಾಧ್ಯಕ್ಷರು), ತಮ್ಮಣ್ಣ, ವೆಂಕಟೇಶ್ (ಜಾಲಹಳ್ಳಿ ಗ್ರಾಮ ಘಟಕ ಉಪಾಧ್ಯಕ್ಷರು) ಸೇರಿದಂತೆ ಹಲವರು ಉಪಸ್ಥಿತರಿದ್ದರು.
🖋️ ವರದಿ:ಖಾಜಾ ಹುಸೇನ್ ಬಾಬಾ ಜಾಲಹಳ್ಳಿ
    user_Khajahussain Baba Jalahalli
    Khajahussain Baba Jalahalli
    Pharmacist ದೇವದುರ್ಗ, ರಾಯಚೂರು, ಕರ್ನಾಟಕ•
    3 hrs ago
  • ಜೈಭೀಮ್ ನ್ಯೂಸ್ 4ನೇ ವರ್ಷದ್ ವಾರ್ಶಿಕೋತ್ಸವದ ಅಂಗವಾಗಿ ಘಟಪ್ರಭದಲ್ಲಿ ಚಾನಲ್ ರಾಜ್ಯ ಸಮಿತಿ ಪದಾಧಿಕಾರಿಗಳ ಆಯ್ಕೆ ಮತ್ತು 135ನೇ ಅಂಬೇಡಕರ್ ಜಯಂತಿ ಕಾರ್ಯಕ್ರಮ ಜೈಭೀಮ್ ನ್ಯೂಸ್ ಚಾನಲ್ ರಾಜ್ಯ ಸಮಿತಿಯಲ್ಲಿ ಜಾಕಿರಾ ಹುಸೇನ್ ಅಧ್ಯಕ್ಷರ ಮತ್ತು ಮಲ್ಲಿಕಾರ್ಜುನ ಛಲವಾದಿ ರಾಜಾನಕೊಲ್ಲೂರ್ ಇವರು ರಾಜ್ಯ ಕಾರ್ಯದರ್ಶಿ ಯಾಗಿ ಆಯ್ಕೆ ಮಾಡಲಾಯಿತು
    2
    ಜೈಭೀಮ್ ನ್ಯೂಸ್ 4ನೇ ವರ್ಷದ್ ವಾರ್ಶಿಕೋತ್ಸವದ ಅಂಗವಾಗಿ ಘಟಪ್ರಭದಲ್ಲಿ ಚಾನಲ್ ರಾಜ್ಯ ಸಮಿತಿ ಪದಾಧಿಕಾರಿಗಳ ಆಯ್ಕೆ ಮತ್ತು 135ನೇ ಅಂಬೇಡಕರ್ ಜಯಂತಿ ಕಾರ್ಯಕ್ರಮ 
ಜೈಭೀಮ್ ನ್ಯೂಸ್ ಚಾನಲ್ ರಾಜ್ಯ ಸಮಿತಿಯಲ್ಲಿ ಜಾಕಿರಾ ಹುಸೇನ್ ಅಧ್ಯಕ್ಷರ ಮತ್ತು ಮಲ್ಲಿಕಾರ್ಜುನ ಛಲವಾದಿ ರಾಜಾನಕೊಲ್ಲೂರ್ ಇವರು ರಾಜ್ಯ ಕಾರ್ಯದರ್ಶಿ ಯಾಗಿ ಆಯ್ಕೆ ಮಾಡಲಾಯಿತು
    user_ಮಲ್ಲಿಕಾರ್ಜುನ ಚಲವಾದಿ ರಾಜನಕೋಳೂರು
    ಮಲ್ಲಿಕಾರ್ಜುನ ಚಲವಾದಿ ರಾಜನಕೋಳೂರು
    Electrician ಹುಣಸಗಿ, ಯಾದಗಿರಿ, ಕರ್ನಾಟಕ•
    4 hrs ago
  • ಆರು ವರ್ಷಗಳ ಕಾಲ ಬಿಜೆಪಿಯಲ್ಲಿದ್ದ ಪ್ರಮುಖ ರಾಜಕಾರಣಿಯೊಬ್ಬರು ಮತ್ತೆ ಕಾಂಗ್ರೆಸ್‌ಗೆ ಸೇರಲು ನಿರ್ಧರಿಸಿದ್ದಾರೆ. ಅವರ ಈ ರಾಜಕೀಯ ಬದಲಾವಣೆಗೆ ಕಾರಣಗಳೇನು ಎಂಬುದರ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿದೆ.
    1
    ಆರು ವರ್ಷಗಳ ಕಾಲ ಬಿಜೆಪಿಯಲ್ಲಿದ್ದ ಪ್ರಮುಖ ರಾಜಕಾರಣಿಯೊಬ್ಬರು ಮತ್ತೆ ಕಾಂಗ್ರೆಸ್‌ಗೆ ಸೇರಲು ನಿರ್ಧರಿಸಿದ್ದಾರೆ. ಅವರ ಈ ರಾಜಕೀಯ ಬದಲಾವಣೆಗೆ ಕಾರಣಗಳೇನು ಎಂಬುದರ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿದೆ.
    user_Kalyan karanataka news channel
    Kalyan karanataka news channel
    Journalist Kalaburagi, Karnataka•
    9 hrs ago
  • ರಾಜಕೀಯ ಅಂದರೆ ಕೇವಲ ಭಾಷಣ ಅಲ್ಲ… ಮಾನವೀಯತೆಯೂ ಹೌದು!.......... ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿಗಳನ್ನು ತಮ್ಮ ಸ್ವಂತ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ತಕ್ಷಣ ಪ್ರಥಮ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಮೂಡಿಗೆರೆ ಜನಪ್ರಿಯ ಶಾಸಕಿ ನಯನ ಮೋಟಮ್ಮ. 🙏 ಸಂಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸಿದ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಇದು ನಿಜವಾದ ಉದಾಹರಣೆ.
    1
    ರಾಜಕೀಯ ಅಂದರೆ ಕೇವಲ ಭಾಷಣ ಅಲ್ಲ… ಮಾನವೀಯತೆಯೂ ಹೌದು!..........
ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿಗಳನ್ನು ತಮ್ಮ ಸ್ವಂತ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ತಕ್ಷಣ ಪ್ರಥಮ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಮೂಡಿಗೆರೆ ಜನಪ್ರಿಯ ಶಾಸಕಿ ನಯನ ಮೋಟಮ್ಮ. 🙏
ಸಂಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸಿದ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಇದು ನಿಜವಾದ ಉದಾಹರಣೆ.
    user_Raichur News
    Raichur News
    Local News Reporter ಮಾನ್ವಿ, ರಾಯಚೂರು, ಕರ್ನಾಟಕ•
    3 hrs ago
  • ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಸಂಗಾಪುರ ರಸ್ತೆಯು ಹದಗೆಟ್ಟಿದ್ದು, ಇಲ್ಲಿನ ಜನರಿಗೆ ತೀವ್ರ ತೊಂದರೆಯಾಗಿದೆ. ಈ ರಸ್ತೆ ಸಮಸ್ಯೆಯನ್ನು ಪರಿಹರಿಸಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    1
    ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಸಂಗಾಪುರ ರಸ್ತೆಯು ಹದಗೆಟ್ಟಿದ್ದು, ಇಲ್ಲಿನ ಜನರಿಗೆ ತೀವ್ರ ತೊಂದರೆಯಾಗಿದೆ. ಈ ರಸ್ತೆ ಸಮಸ್ಯೆಯನ್ನು ಪರಿಹರಿಸಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    user_Suresh
    Suresh
    Grain Distributor ಮಾನ್ವಿ, ರಾಯಚೂರು, ಕರ್ನಾಟಕ•
    6 hrs ago
  • ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ಸಚಿವ ಎನ್.ಎಸ್.ಬೋಸರಾಜು ಅವರು ಶ್ರೀಮಹರ್ಷಿ ವಾಲ್ಮೀಕಿ ವೃತ್ತವನ್ನು ಉದ್ಘಾಟಿಸಿದರು. ಈ ವೃತ್ತದ ಲೋಕಾರ್ಪಣೆಯು ಸ್ಥಳೀಯ ಸಮುದಾಯಕ್ಕೆ ಮಹತ್ವದ ಸಂಕೇತವಾಗಿದೆ.
    1
    ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ಸಚಿವ ಎನ್.ಎಸ್.ಬೋಸರಾಜು ಅವರು ಶ್ರೀಮಹರ್ಷಿ ವಾಲ್ಮೀಕಿ ವೃತ್ತವನ್ನು ಉದ್ಘಾಟಿಸಿದರು. ಈ ವೃತ್ತದ ಲೋಕಾರ್ಪಣೆಯು ಸ್ಥಳೀಯ ಸಮುದಾಯಕ್ಕೆ ಮಹತ್ವದ ಸಂಕೇತವಾಗಿದೆ.
    user_Shivakumar Sajjan
    Shivakumar Sajjan
    Local News Reporter ಮಾನ್ವಿ, ರಾಯಚೂರು, ಕರ್ನಾಟಕ•
    8 hrs ago
  • ಮದುವೆ ಮನೆಯವರ ವೈಯಕ್ತಿಕ ದ್ವೇಷದಿಂದ ವಿಜಯಪುರ ಜಿಲ್ಲೆಯ ಬಸ್ತಿಹಾಳದ ಬಸವೇಶ್ವರ ದೇವಸ್ಥಾನದ ಮುಖ್ಯ ಬಾಗಿಲನ್ನು ಲಾಕ್ ಮಾಡಲಾಗಿದೆ. ಇದರಿಂದಾಗಿ ಭಕ್ತರು ದೇವಸ್ಥಾನ ಪ್ರವೇಶಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.
    5
    ಮದುವೆ ಮನೆಯವರ ವೈಯಕ್ತಿಕ ದ್ವೇಷದಿಂದ ವಿಜಯಪುರ ಜಿಲ್ಲೆಯ ಬಸ್ತಿಹಾಳದ ಬಸವೇಶ್ವರ ದೇವಸ್ಥಾನದ ಮುಖ್ಯ ಬಾಗಿಲನ್ನು ಲಾಕ್ ಮಾಡಲಾಗಿದೆ. ಇದರಿಂದಾಗಿ ಭಕ್ತರು ದೇವಸ್ಥಾನ ಪ್ರವೇಶಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.
    user_Balappagoud patil Balappagoud patil
    Balappagoud patil Balappagoud patil
    ಸಿಂದಗಿ, ವಿಜಯಪುರ, ಕರ್ನಾಟಕ•
    13 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.