Shuru
Apke Nagar Ki App…
ಶ್ರೀ ಬ್ರಹ್ಮರ್ಷಿ ನಾರಾಯಣ ಗುರು, ಶ್ರೀ ನುಲಿಯ ಚಂದಯ್ಯ ಜಯಂತಿ ಆಚರಣೆ ಶಾಸಕರು, ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷರಾದ ಮಾನೆ ಶ್ರೀನಿವಾಸ ಅವರ ಹಾನಗಲ್ ಜನಸಂಪರ್ಕ ಕಚೇರಿಯಲ್ಲಿ ಇಂದು ಶ್ರೇಷ್ಠ ಸಮಾಜ ಸುಧಾರಕ, ತತ್ವಜ್ಞಾನಿ ಬ್ರಹ್ಮರ್ಷಿ ನಾರಾಯಣ ಗುರು ಹಾಗೂ ವಚನಕಾರ, ಕಾಯಕಯೋಗಿ ನುಲಿಯ ಚಂದಯ್ಯ ಜಯಂತಿ ಆಚರಿಸಲಾಯಿತು. ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದ ಮುಖಂಡರು ತತ್ವಾದರ್ಶ ಅಳವಡಿಸಿ ಮುನ್ನಡೆಯುವ ಮೂಲಕ ಜಯಂತಿ ಆಚರಣೆಗೆ ಅರ್ಥ ತಂದುಕೊಡುವ ಸಂಕಲ್ಪ ಮಾಡಬೇಕಿದೆ ಎಂದರು. ಕಾಂಗ್ರೆಸ್ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಸಮಾಜ ಬಾಂಧವರು ಇದ್ದರು...
ಸಂತೋಷ S H
ಶ್ರೀ ಬ್ರಹ್ಮರ್ಷಿ ನಾರಾಯಣ ಗುರು, ಶ್ರೀ ನುಲಿಯ ಚಂದಯ್ಯ ಜಯಂತಿ ಆಚರಣೆ ಶಾಸಕರು, ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷರಾದ ಮಾನೆ ಶ್ರೀನಿವಾಸ ಅವರ ಹಾನಗಲ್ ಜನಸಂಪರ್ಕ ಕಚೇರಿಯಲ್ಲಿ ಇಂದು ಶ್ರೇಷ್ಠ ಸಮಾಜ ಸುಧಾರಕ, ತತ್ವಜ್ಞಾನಿ ಬ್ರಹ್ಮರ್ಷಿ ನಾರಾಯಣ ಗುರು ಹಾಗೂ ವಚನಕಾರ, ಕಾಯಕಯೋಗಿ ನುಲಿಯ ಚಂದಯ್ಯ ಜಯಂತಿ ಆಚರಿಸಲಾಯಿತು. ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದ ಮುಖಂಡರು ತತ್ವಾದರ್ಶ ಅಳವಡಿಸಿ ಮುನ್ನಡೆಯುವ ಮೂಲಕ ಜಯಂತಿ ಆಚರಣೆಗೆ ಅರ್ಥ ತಂದುಕೊಡುವ ಸಂಕಲ್ಪ ಮಾಡಬೇಕಿದೆ ಎಂದರು. ಕಾಂಗ್ರೆಸ್ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಸಮಾಜ ಬಾಂಧವರು ಇದ್ದರು...
More news from ಕರ್ನಾಟಕ and nearby areas
- ರೈತರ ಧ್ವನಿ ಅಡಗುವುದಿಲ್ಲ… ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ! ಅಡಿಕೆ ಬೆಳೆಗಾರರ ನ್ಯಾಯಯುತ ಹೋರಾಟಕ್ಕೆ ನಮ್ಮ ಧ್ವನಿ ಇನ್ನಷ್ಟು ಗಟ್ಟಿಯಾಗಲಿ! ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಅಡಿಕೆ ಬೆಳೆಗಾರರ ಒಕ್ಕೂಟದ ವತಿಯಿಂದ ಅಡಿಕೆ ಬೆಳೆಗಾರರ ವಿವಿಧ ಬೇಡಿಕೆಗಳು, ಹೊನ್ನಾಳಿ–ನ್ಯಾಮತಿ ತಾಲ್ಲೂಕುಗಳ ಕೆರೆಗಳನ್ನು ತುಂಬಿಸುವ ಯೋಜನೆ ಹಾಗೂ ಭದ್ರಾ ಜಲಾಶಯದಿಂದ ಅಪ್ಪರ್ ಭದ್ರಾ ಯೋಜನೆಗೆ 3 ಟಿಎಂಸಿ ನೀರು ಬಿಡುವುದನ್ನು ಖಂಡಿಸಿ ಮೂರು ದಿನಗಳಿಂದ ಬೃಹತ್ ಪಾದಯಾತ್ರೆ ನಡೆಸಲಾಯಿತು. ಹೊನ್ನಾಳಿಯಿಂದ ಆರಂಭವಾದ ಈ ಪಾದಯಾತ್ರೆ ವಿವಿಧ ಗ್ರಾಮಗಳ ಮೂಲಕ ಸಾಗುತ್ತಾ, ರೈತರ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಇಂದು ದಾವಣಗೆರೆಗೆ ತಲುಪಿತು. ದಾವಣಗೆರೆ ಎಸಿ ಕಚೇರಿ ಎದುರು ಅಡಿಕೆ ಬೆಳೆಗಾರರ ಪ್ರತಿಭಟನಾ ಸಭೆ ನಡೆಸಲಾಯಿತು. ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ, ಹೊನ್ನಾಳಿ–ನ್ಯಾಮತಿ ತಾಲ್ಲೂಕುಗಳ ಕೆರೆಗಳಿಗೆ ನೀರು, ರೈತರ ಹಿತ ಕಾಪಾಡುವ ನೀರಾವರಿ ಯೋಜನೆಗಳು ಹಾಗೂ ಭದ್ರಾ ಜಲಾಶಯದ ನೀರಿನ ಸಮರ್ಪಕ ಬಳಕೆಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ರೈತರ ಧ್ವನಿ ಅಡಗುವುದಿಲ್ಲ… ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ!1
- ಗ್ರಾಮೀಣ ಭಾಗದಲ್ಲಿ ಹಂದಿಗಳ ಕಾಟ,ರೈತರ ಬೆಳೆಗಳ ನಾಶ: ಗ್ರಾಮಸ್ಥರ ಆಕ್ರೋಶ ಕಲಘಟಗಿ: ಗ್ರಾಮೀಣ ಭಾಗದಲ್ಲಿ ಹಂದಿಗಳ ಕಾಟ ಹೆಚ್ಚುತ್ತಿದ್ದೂ ರೈತರ ಬೆಳೆಗಳ ನಾಶ ಹಾಗೂ ಗ್ರಾಮದ ಮನೆ ಸುತ್ತ ಮುತ್ತಲಿನ ಪ್ರದೇಶದ ಸ್ವಚ್ಛತೆಗೆ ಕಂಟಕ್ಕೆ ತಂದೊಡ್ದುತ್ತಿವೆ ಎಂದು ಹಂದಿಗಳ ಮಾಲಕರ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ. ತಾಲ್ಲೂಕಿನಆಸ್ತಕಟ್ಟಿ, ತಬಕದಹೊನ್ನಳ್ಳಿ, ಪರಸಾಪುರ, ಸೋಲಾರಗೊಪ್ಪ ಹಾಗೂ ಇನ್ನಿತರ ಗ್ರಾಮಗಳಲ್ಲಿ ಹಂದಿಗಳ ಹಾವಳಿಗೆ ಜನರು ತತ್ತರಿಸಿ ಹೋಗಿದ್ದು ಅವುಗಳ ತಡೆಗಟ್ಟುವಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಆರೋಗ್ಯದ ಮೇಲೆ ಪರಿಣಾಮ: ಗ್ರಾಮದ ಓಣಿಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಂದಿಗಳು ಗುಂಪು ಗುಂಪಾಗಿ ಬಂದು ಅಶುಚಿತ್ವ ಹರಡುತ್ತಿವೆ ಇದರಿಂದ ಜನರಿಗೆ ಡೆಂಗ್ಯೂ, ಮಲೇರಿಯಾ, ಸೊಳ್ಳೆಗಳ ಕಾಟದಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ರೈತರ ಬೆಳೆ ನಾಶ: ಗ್ರಾಮದ ಸುತ್ತಮುತ್ತಲಿನ ಜಮೀನುಗಳಿಗೆ ಹಂದಿಗಳು ರೈತರು ಬೆಳೆದ ಬೆಳೆಗಳಾದ ಮೆಕ್ಕೆಜೋಳ, ಕಬ್ಬು ಬೆಳೆಗೆ ನುಗ್ಗಿ ಹಾನಿ ಮಾಡುತ್ತಿದ್ದು ರೈತರಿಗೆ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ದೂರಿದರು. ಸಾರ್ವಜನಿಕರಿಗೆ ತೊಂದರೆ: ರಸ್ತೆಗಳಲ್ಲಿ ಹಂದಿಗಳು ಇದ್ದಕ್ಕಿದ್ದಂತೆ ಅಡ್ಡ ಬರುವುದರಿಂದ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಘಟನೆಗಳು ಜರುಗಿವೆ. ಮನೆಯ ಹಿತ್ತಲಿನ ಜಾನುವಾರಗಳ ಮೇವಿನ ಬಣವಿಗಳಿಗೆ ನುಗ್ಗಿ ಹಾನಿ ಮಾಡುತ್ತಿದ್ದರಿಂದ ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಅಳಲು ತೋಡಿಕೊಂಡರು. ಗ್ರಾಮ ಪಂಚಾಯತಿ ಅಧಿಕಾರಿಗಳು ಹಂದಿಗಳ ಮಾಲೀಕರಿಗೆ ನೋಟೀಸ್ ಜಾರಿ ಮಾಡಿ ನಿರ್ಲಕ್ಷ ಮಾಡಿದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಿ ಹಂದಿಗಳ ಹಾವಳಿ ತಪ್ಪಿಸಬೇಕು ಎಂದು ತಾಲ್ಲೂಕಿನ ಆಸ್ತಕಟ್ಟಿ ಗ್ರಾಮದ ಸಂತ ಸೇವಾಲಾಲ ಗ್ರಾಮ ವಿಕಾಸ ಸಮಿತಿ ಸದಸ್ಯರು ಒತ್ತಾಯಿಸಿದ್ದಾರೆ. "ಹಂದಿಗಳ ಹಾವಳಿಯಿಂದ ಗ್ರಾಮದ ರೈತರಾದ ನಾನಪ್ಪ ಲಮಾಣಿ ಹಾಗೂ ಭಿಮ್ಲಪ್ಪ ಲಮಾಣಿ ಅವರ ವರ್ಷಪೂರ್ತಿ ಶ್ರಮವಹಿಸಿ ಬೆಳೆದ ಕಬ್ಬು,ಮೆಕ್ಕೆಜೋಳ ಬೆಳೆಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದ್ದು ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ನೀಡಬೇಕು ಎಂದು ಆಸ್ತಕಟ್ಟಿ ಗ್ರಾಮದ ಸ್ವಗ್ರಾಮ ಮಿತ್ರರಾದ ಉಮ್ಮೆಶ ಲಮಾಣಿ ತಿಳಿಸಿದರು. " "ಎರಡು ತಿಂಗಳಿಂದ 20 ಕ್ಕೂ ಹೆಚ್ಚು ಹಂದಿಗಳು ಬಿಡುಬಿಟ್ಟು ಮನೆಯ ಹಿತ್ತಲಿನಲ್ಲಿ ಬೆಳೆದಿರುವ ತರಕಾರಿ ಕೈತೋಟ, ರೈತರ ಕಬ್ಬು,ಸೋಯಾಬಿನ್, ಮೆಕ್ಕೆಜೋಳ ಬೆಳೆಗಳಿಗೆ ನುಗ್ಗಿ ಹಾನಿ ಮಾಡುತ್ತಿದ್ದು ಹಂದಿಗಳ ತಡೆಗಟ್ಟಲ್ಲು ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದರು ಗಮನಹರಿಸುತ್ತಿಲ್ಲ ಎಂದು ತಾಲ್ಲೂಕಿನ ಪರಸಾಪುರ ಗ್ರಾಮದ ಸ್ವಗ್ರಾಮ ಮಿತ್ರರಾದ ರೇಣುಕಾ ಸುಬ್ಬಣ್ಣವರ ಒತ್ತಾಯಿಸಿದರು."1
- ಈದ್ ಮಿಲಾದ್ ಪ್ರಯುಕ್ತ ಸೂಳೆಬೈಲ್‌ನಲ್ಲಿ ಧಾರ್ಮಿಕ ಕಾರ್ಯಕ್ರಮ: ಮಕ್ಕಳಿಂದ ಕುರಾನ್ ಪಠಣ ಎ.ಪಿ.ಜೆ. ಅಬ್ದುಲ್ ಕಲಾಂ ನಗರದಲ್ಲಿ ಈದ್ ಮಿಲಾದ್ ಸಂಭ್ರಮ: ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಭಾಗಿ1
- ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಬಾಲಕಿಯರ ರಕ್ಷಾಬಂಧನದ ಆತ್ಮೀಯ ಹಾಗೂ ಸ್ಮರಣೀಯ ಕ್ಷಣಗಳು ಪ್ರಧಾನಿ ಮೋದಿಯವರೊಂದಿಗೆ ಬಾಲಕಿಯರ ರಕ್ಷಾಬಂಧನದ ಆತ್ಮೀಯ ಹಾಗೂ ಸ್ಮರಣೀಯ ಕ್ಷಣಗಳು1
- ಭದ್ರಾವತಿ : ಲಾಠಿ ಹಿಡಿಯುತ್ತಿದ್ದ ಕೈ ತುಂಬಾ ರಾಖಿಪ್ರಾಂಶುಪಾಲೆ ರೇಷ್ಮಾ ನೇತೃತ್ವದಲ್ಲಿ ಹಬ್ಬ ಆರಕ್ಷಕರ ಪಾದ ಸ್ಪರ್ಶಿಸುವ ಮೂಲಕ ಗೌರವ ನೀಡಿದ ಮಕ್ಕಳು ....... ಖಾಕಿ ಜತೆ ಟೈಮ್ಸ್ ಮಕ್ಕಳ ರಾಖಿ ... ಹೈಲೈಟ್ಸ್ * ,* ಪೆರೆಡೇ ಗ್ರೌಂಡ್ ನಲ್ಲಿ ರಕ್ಷಾ ಬಂಧನ *ಡಿವೈಎಸ್ಪಿ ರಾಥೋಡ್ ಗೆ ರಾಖಿ ಕಟ್ಟುವ ಮೂಲಕ ಚಾಲನೆ ..... ನಂದೀಶ್ ಭದ್ರಾವತಿ, ಶಿವಮೊಗ್ಗ ಅಲ್ಲಿ ಖಾಕಿ ಪಡೆ ನೆರೆದಿತ್ತು, ಪುಟ್ಟ ಮಕ್ಕಳು ತಾವೇ ತಯಾರಿಸಿದ ರಾಖಿ ಕಟ್ಟಿ, ಪಾದ ಸ್ಪರ್ಶಿಸುವ ಮೂಲಕ ರಕ್ಷಾ ಬಂಧನ ಆಚರಿಸಿದರು. ಹೌದು..ನಗರದ ಮಿಲ್ಟ್ರೀ ಕ್ಯಾಂಪನ್ ಮಕ್ಕಳ ಜತೆ ಟೈಮ್ಸ್ ಶಾಲೆಯ ಮಕ್ಕಳು ಪ್ರಾಶುಂಪಾಲೆ ರೇಷ್ಮಾ ನೇತೃತ್ವದಲ್ಲಿ ನೆರೆದಿದ್ದವರಿಗೆ ರಾಖಿ ಕಟ್ಟಿದರು. ಡಿವೈಎಸ್ಪಿ ಪ್ರಕಾಶ್ ರಾಥೋಡ್ ಗೆ ಟೈಮ್ಸ್ ಶಾಲೆ ಮುಖ್ಯ ಶಿಕ್ಷಕಿ ರೇಷ್ಮಾ ಆರತಿ ಎತ್ತಿ ರಾಖಿ ಕಟ್ಟುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು. ನಂತರ ಮಕ್ಕಳು ಇತರೆ ಸಿಬ್ಬಂದಿಗಳಿಗೆ ರಾಖಿ ಕಟ್ಟಿ ಆರ್ಶೀವಾದ ಪಡೆದರು. ಪ್ರಾಂಶುಪಾಲೆ ರೇಷ್ಮಾ ಮಾತನಾಡಿ, ರಾಖಿ ಹಬ್ಬ ವಿಶೇಷವಾದದ್ದು. ಇದು ಸಹೋದರಿಯರು ತಮ್ಮ ಸಹೋದರರಿಂದ ರಕ್ಷಣೆ ಬಯಸುವಂತಹ ಅರ್ಥಪೂರ್ಣವಾದ ದಿನ. ಪ್ರತಿ ದಿನ ಪೊಲೀಸರು ಹಾಗೂ ಯೋಧರು ಕರ್ತವ್ಯದಲ್ಲಿರುತ್ತಾರೆ. ಅವರು ಸಮಾಜದ ಹಾಗೂ ನಮ್ಮ ರಕ್ಷಣೆಗಾಗಿ ತ್ಯಾಗ ಮಾಡುತ್ತಾರೆ. ಎಂತಹ ಕಷ್ಟದ ಸನ್ನಿವೇಶದಲ್ಲಿಯೂ ಅವರು ರಕ್ಷಣೆ ನೀಡುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ರಾಖಿ ಕಟ್ಟಿ ಸಹೋದರಿಯ ಪ್ರೀತಿಯನ್ನು ವ್ಯಕ್ತಪಡಿಸಿದ್ದೇವೆ. ಆ ಮೂಲಕ ಕರ್ತವ್ಯವನ್ನೂ ನೆನಪಿಸಿದ್ದೇವೆ. ಸಾರ್ವಜನಿಕರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಡುವವರ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಳವಾದ ಗೌರವವನ್ನು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. "ನಮ್ಮ ಪೊಲೀಸ್ ಅಧಿಕಾರಿಗಳಿಗೆ ರಾಖಿಗಳನ್ನು ಕಟ್ಟುವ ಮೂಲಕ, ಪ್ರತಿದಿನ ನಮಗೆ ಗುರಾಣಿಯಾಗಿ ನಿಲ್ಲುವ, ತಮ್ಮ ಜೀವವನ್ನು ಪಣಕ್ಕಿಡುವ ನಮ್ಮ ಸಮಾಜದ ರಕ್ಷಕರನ್ನು ನಾವು ಗೌರವಿಸುತ್ತಿದ್ದೇವೆ" ಎಂದು ಅವರು ಹೇಳಿದರು. ಡಿವೈಎಸ್ಪಿ ರಾಥೋಡ್ ಮಾತನಾಡಿ, ಟೈಮ್ಸ್ ಶಾಲೆ ಮಕ್ಕಳು ಈ ರೀತಿ ರಕ್ಷಾ ಬಂಧನವನ್ನು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಸಹೋದರ ಸಹೋದರಿಯರ ನಡುವೆ ಇರುವ ಸಂಬಂಧವನ್ನು ಈ ಹಬ್ಬ ಗಟ್ಟಿಗೊಳಿಸುತ್ತದೆ. ಒಂದು ಬಂಧವನ್ನು ರಾಖಿ ಬೆಸೆಯುತ್ತದೆ. ನಾವು ಆರಕ್ಷಕರಾಗಿದ್ದು, ಸಮಾಜದ ಎಲ್ಲ ಸಹೋದರಿಯರ ರಕ್ಷಣೆಗೆ ಕಟಿಬದ್ದವಾಗಿದ್ದೇವೆ ಎಂದು ಹೇಳಿದರು. ಒಟ್ಟಿನಲ್ಲಿ ರಾಖಿ ಹಬ್ಬ ಪೊಲೀಸರೊಂದಿಗೆ ಅರ್ಥಪೂರ್ಣವಾಗಿ ನಡೆಯಿತು. ... ಬಾಕ್ಸ್ ಮಕ್ಕಳೇ ತಯಾರಿಸಿದ ರಾಖಿ ರಕ್ಷಾ ಬಂಧನದ ನಿಮಿತ್ತ ಮಕ್ಕಳೇ ಮನೆಯಲ್ಲಿ ರಾಖಿ ತಯಾರಿ ಮಾಡಿದ್ದರು. ಪುಟ್ಟ ಕೈಗಳಿಂದ ಮಾಡಿದ ರಾಖಿ ಆರಕ್ಷಕರ ಕೈ ಸೇರಿದಾಗ ಮಕ್ಕಳ ಸಂತೋಷಕ್ಕೆ ಪಾರವೇ ಇರಲಿಲ್ಲ..ಇನ್ನು ಆಕ್ಷಕರು ಮಕ್ಕಳಿಗೆ ಸಿಹಿ ತಿನಿಸುವ ಮೂಲಕ ಒಂದಿಷ್ಟು ಸಂತೋಷ ಪಟ್ಟರು. ... ಕಾಲಿಗೆ ಬಿದ್ದ ಮಕ್ಕಳು ಮೊದಲಿಗೆ ಪ್ರಾಂಶುಪಾಲೆ ರೇಷ್ಮಾ ಡಿವೈಎಸ್ಪಿ ಪ್ರಕಾಶ್ ರಾಥೋಡ್ ಗೆ ರಾಖಿ ಕಟ್ಟಿ, ಕಾಲಿಗೆ ಬಿದ್ದರು. ನಂತರ ಮಕ್ಕಳು ಕೂಡ ಪೊಲೀಸರ ಕಾಲಿಗೆ ನಮಸ್ಕರಿಸಿ ಆರ್ಶೀವಾದ ಪಡೆದರು. .... ಮಕ್ಕಳಿಂದ ತುಂಬಿದ ಪೆರೇಡ್ ಮೈದಾನ ಇಡೀ ಮೈದಾನ ಮಕ್ಕಳಿಂದ ತುಂಬಿತ್ತು.. ಆರಕ್ಷಕರು ಅವರನ್ನು ಎತ್ತಿಕೊಂಡು ಮುದ್ದಾಡಿದರು..ಚೆನ್ನಾಗಿ ಓದಬೇಕು, ನಮ್ಮ ಪೊಲೀಸ್ ಆಗಬೇಕೆಂದು ಹಿತನುಡಿಗಳನ್ನಾಡಿದರು. ಕೆಲವರು ಸೆಲ್ಫಿ ತೆಗೆಸಿಕೊಂಡು ತಮ್ಮ ಡಿಪಿಗೆ ಹಾಕಿಕೊಂಡರು. ... ಮಹಿಳಾ ಪೊಲೀಸ್ ಗೂ ರಾಖಿ ಕಟ್ಟಿದ ಮಕ್ಕಳು ಪೆರೆಡ್ ಮೈದಾನದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದ್ದರೂ, ಮಕ್ಕಳು ಅವರಿಗೂ ರಾಖಿ ಕಟ್ಟಿದರು. ಅವರು ಕೂಡ ಮಕ್ಕಳಿಗೆ ಆರ್ಶೀವಾದ ನೀಡಿದರು.1
- ಕೊರಚರಹಟ್ಟಿಯಲ್ಲಿ ಶ್ರೀ ನೂಲಿ ಚಂದಯ್ಯ ಅವರ ಜಯಂತಿ ಅದ್ದೂರಿ ಆಚರಣೆ ಕೂಡ್ಲಿಗಿ: ತಾಲೂಕಿನ ಕೊರಚರಹಟ್ಟಿ ಗ್ರಾಮದಲ್ಲಿ ನೂಲಿ ಚಂದಯ್ಯ ಜಯಂತಿಯನ್ನು ಶುಕ್ರವಾರ ಅದ್ದೂರಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಜಯಂತಿ ಉತ್ಸವದ ಪ್ರಯುಕ್ತ ವಿವಿಧ ವಾದ್ಯ ಮೇಳಗಳೊಂದಿಗೆ ನಂದಿಕೋಲು ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಗ್ರಾಮದ ಪ್ರಮುಖ ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಉತ್ಸವದ ಸಂಭ್ರಮ ಮತ್ತಷ್ಟು ಕಳೆಗಟ್ಟಿತ್ತು. ವಾದ್ಯ ಮೇಳಗಳ ನಾದಕ್ಕೆ ನಂದಿಕೋಲು ಕುಣಿತ ಪ್ರದರ್ಶನ ಜನರ ಗಮನ ಸೆಳೆಯಿತು. ಗ್ರಾಮಸ್ಥರು ಹಾಗೂ ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನೂಲಿ ಚಂದಯ್ಯ ಅವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಿದರು.1
- ಕರ್ನಾಟಕ ರಾಜ್ಯ ರೈತ ಸಂಘಟನೆ ಹಾಗೂ ಹಸಿರು ಸೇನೆ ರಾಜ್ಯ ಮಹಿಳಾ ಅಧ್ಯಕ್ಷ ಸರೋಜಿನಿ ಅರಗೆ ಯವರು ರಾಜ್ಯ ಸರ್ಕಾರ ಬೆಳಗಾವಿ ಜಿಲ್ಲೆ ಹಾಗೂ ರಾಯಬಾಗ ತಾಲೂಕ ಬರಗಾಲ ಪೀಡಿತ ಘೋಷಣೆ ಮಾಡಬೇಕೆಂದು ಮಾಧ್ಯಮ ಮುಂದೆ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶಹರ ಹಾಕಿದರು #85newsboxkannad ಕರ್ನಾಟಕ ರಾಜ್ಯ ರೈತ ಸಂಘಟನೆ ಹಾಗೂ ಹಸಿರು ಸೇನೆ ರಾಜ್ಯ ಮಹಿಳಾ ಅಧ್ಯಕ್ಷ ಸರೋಜಿನಿ ಅರಗೆ ಯವರು ರಾಜ್ಯ ಸರ್ಕಾರ ಬೆಳಗಾವಿ ಜಿಲ್ಲೆ ಹಾಗೂ ರಾಯಬಾಗ ತಾಲೂಕ ಬರಗಾಲ ಪೀಡಿತ ಘೋಷಣೆ ಮಾಡಬೇಕೆಂದು ಮಾಧ್ಯಮ ಮುಂದೆ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶಹರ ಹಾಕಿದರು #85newsboxkannada #breakingnewskannada #belagavisuddi #vairalvideo #raibag1
- BNSS ಸೆಕ್ಷನ್ 35(3) ಅಡಿಯಲ್ಲಿ ನೋಟಿಸ್ ನೀಡಿ, ಬಂಧಿಸಿದ ಪೊಲೀಸರ ನಡೆಗೆ ಗರಂ ಆದ ನ್ಯಾಯಾಧೀಶರು. ಪೊಲೀಸರು BNSS ಸೆಕ್ಷನ್ 35(3) ಅಡಿಯಲ್ಲಿ ನೋಟಿಸ್ ನೀಡಿ, ಆಗಸ್ಟ್ 27ರಂದು ಹಾಜರಾಗುವಂತೆ ಸೂಚಿಸಿದ್ದರು. ಆದರೆ ಹಾಜರಾಗಬೇಕಾದ ದಿನಾಂಕಕ್ಕೂ ಎರಡು ದಿನ ಮುಂಚಿತವಾಗಿ, ಆಗಸ್ಟ್ 25ರಂದು ಅವರನ್ನು ಬಂಧಿಸಲಾಯಿತು.1