logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಇಮ್ಮಡಿ ರಾಜಧನ ವಸೂಲಿಗೆ ವಿರೋಧ,ಸೆ.18 ರಿಂದ ರಾಜ್ಯಾದ್ಯಂತ ಕ್ವಾರಿ, ಕ್ರಷರ್ ಬಂದ್ ಜಲ್ಲಿ, ಎಂ-ಸ್ಯಾಂಡ್ ಪೂರೈಕೆ ಸ್ಥಗಿತ ಮಂಡ್ಯ, ಸೆ.16:* ರಾಜಧನದ ಇಮ್ಮಡಿ ವಸೂಲಿ ವಿರೋಧಿಸಿ ಯೂನಿಯನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಸೆ.18 ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಈ ಕುರಿತು ಸಂಘಟನೆಯ ಅಧ್ಯಕ್ಷರು ಪ್ರಕಟಣೆ ನೀಡಿದ್ದು, ಸೆ.18 ರಿಂದ ರಾಜ್ಯದ ಎಲ್ಲಾ ಕ್ವಾರಿ ಮತ್ತು ಕ್ರಷರ್ ಘಟಕಗಳ ಉತ್ಪಾದನೆ, ಜಲ್ಲಿ, ಎಂ-ಸ್ಯಾಂಡ್ ಮತ್ತು ಕಲ್ಲು ಉತ್ಪನ್ನಗಳ ಲೋಡಿಂಗ್ ಮತ್ತು ಸಾಗಾಣಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಸರ್ಕಾರದೊಂದಿಗೆ ಮಾತುಕತೆ ನಡೆದು ಬೇಡಿಕೆ ಈಡೇರುವವರೆಗೂ ಮುಷ್ಕರ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ. *ಪ್ರಮುಖ ಬೇಡಿಕೆ ಏನು?* ಒಂದೇ ವಸ್ತುವಿಗೆ ಎರಡು ಬಾರಿ ರಾಜಧನ ವಸೂಲಿ ಮಾಡುವುದನ್ನು ಕೈಬಿಡಬೇಕು ಎಂಬುದು ಮಾಲೀಕರ ಪ್ರಮುಖ ಆಗ್ರಹವಾಗಿದೆ. ರಾಜ್ಯ ಸರ್ಕಾರವು ಲೋಕೋಪಯೋಗಿ, ಜಲಸಂಪನ್ಮೂಲ ಸೇರಿದಂತೆ ಇತರೆ ಸರ್ಕಾರಿ ಇಲಾಖೆಗಳ ಮೂಲಕವೇ ರಾಜಧನ ಕಡಿತ ಮಾಡಿಕೊಳ್ಳುತ್ತಿದೆ. ಅದೇ ವೇಳೆ ಕ್ವಾರಿ ಮತ್ತು ಕ್ರಷರ್ ಮಾಲೀಕರಿಂದಲೂ ಪ್ರತ್ಯೇಕವಾಗಿ ರಾಜಧನ ಸಂಗ್ರಹಿಸುತ್ತಿದೆ. ಇದು ಕಾನೂನುಬಾಹಿರ ಮತ್ತು ಅವೈಜ್ಞಾನಿಕ ಇಮ್ಮಡಿ ರಾಜಧನ (Dual Royalty Collection) ಪದ್ಧತಿಯಾಗಿದೆ ಎಂದು ಸಂಘಟನೆ ಆರೋಪಿಸಿದೆ. ಸರ್ಕಾರವು ಗಣಿ ಮಾಲೀಕರಿಂದಾಗಲಿ ಅಥವಾ ಅಂತಿಮ ಬಳಕೆದಾರರಿಂದಾಗಲಿ ಯಾವುದಾದರೂ ಒಂದೇ ಹಂತದಲ್ಲಿ ಮಾತ್ರ ರಾಜಧನ ಸಂಗ್ರಹಿಸಬೇಕು. ಏಕಮುಖ ರಾಜಧನ (Single Royalty) ಸಂಗ್ರಹ ವ್ಯವಸ್ಥೆ ಜಾರಿಗೆ ತಂದು, ಇಮ್ಮಡಿ ಸಂಗ್ರಹವನ್ನು ತಕ್ಷಣ ರದ್ದುಪಡಿಸಿ ಸ್ಪಷ್ಟ ನಿಯಮ ರೂಪಿಸಬೇಕು ಎಂದು ಒಕ್ಕೂಟ ಆಗ್ರಹಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಕ್ವಾರಿ ಮತ್ತು ಕ್ರಷರ್ ಮಾಲೀಕರು ಸ್ವಯಂಪ್ರೇರಿತವಾಗಿ ಮುಷ್ಕರದಲ್ಲಿ ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಮನವಿ ಮಾಡಲಾಗಿದೆ. ಮುಷ್ಕರದಿಂದಾಗಿ ರಾಜ್ಯದಲ್ಲಿ ಕಟ್ಟಡ ನಿರ್ಮಾಣ, ರಸ್ತೆ ಮತ್ತು ನೀರಾವರಿ ಕಾಮಗಾರಿಗಳಿಗೆ ಜಲ್ಲಿ ಮತ್ತು ಎಂ-ಸ್ಯಾಂಡ್ ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗುವ ಸಾಧ್ಯತೆ ಇದೆ.

1 day ago
user_Arunprasad G B
Arunprasad G B
Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
1 day ago
7cbd11bf-f2f2-4ba8-849c-6bfa7a4dd3df

ಇಮ್ಮಡಿ ರಾಜಧನ ವಸೂಲಿಗೆ ವಿರೋಧ,ಸೆ.18 ರಿಂದ ರಾಜ್ಯಾದ್ಯಂತ ಕ್ವಾರಿ, ಕ್ರಷರ್ ಬಂದ್ ಜಲ್ಲಿ, ಎಂ-ಸ್ಯಾಂಡ್ ಪೂರೈಕೆ ಸ್ಥಗಿತ ಮಂಡ್ಯ, ಸೆ.16:* ರಾಜಧನದ ಇಮ್ಮಡಿ ವಸೂಲಿ ವಿರೋಧಿಸಿ ಯೂನಿಯನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಸೆ.18 ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಈ ಕುರಿತು ಸಂಘಟನೆಯ ಅಧ್ಯಕ್ಷರು ಪ್ರಕಟಣೆ ನೀಡಿದ್ದು, ಸೆ.18 ರಿಂದ ರಾಜ್ಯದ ಎಲ್ಲಾ ಕ್ವಾರಿ ಮತ್ತು ಕ್ರಷರ್ ಘಟಕಗಳ ಉತ್ಪಾದನೆ, ಜಲ್ಲಿ, ಎಂ-ಸ್ಯಾಂಡ್ ಮತ್ತು ಕಲ್ಲು ಉತ್ಪನ್ನಗಳ ಲೋಡಿಂಗ್ ಮತ್ತು ಸಾಗಾಣಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಸರ್ಕಾರದೊಂದಿಗೆ ಮಾತುಕತೆ ನಡೆದು ಬೇಡಿಕೆ ಈಡೇರುವವರೆಗೂ ಮುಷ್ಕರ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ. *ಪ್ರಮುಖ ಬೇಡಿಕೆ ಏನು?* ಒಂದೇ ವಸ್ತುವಿಗೆ ಎರಡು ಬಾರಿ ರಾಜಧನ ವಸೂಲಿ ಮಾಡುವುದನ್ನು ಕೈಬಿಡಬೇಕು ಎಂಬುದು ಮಾಲೀಕರ ಪ್ರಮುಖ ಆಗ್ರಹವಾಗಿದೆ. ರಾಜ್ಯ ಸರ್ಕಾರವು ಲೋಕೋಪಯೋಗಿ, ಜಲಸಂಪನ್ಮೂಲ ಸೇರಿದಂತೆ ಇತರೆ ಸರ್ಕಾರಿ ಇಲಾಖೆಗಳ ಮೂಲಕವೇ ರಾಜಧನ ಕಡಿತ ಮಾಡಿಕೊಳ್ಳುತ್ತಿದೆ. ಅದೇ ವೇಳೆ ಕ್ವಾರಿ ಮತ್ತು ಕ್ರಷರ್ ಮಾಲೀಕರಿಂದಲೂ ಪ್ರತ್ಯೇಕವಾಗಿ ರಾಜಧನ ಸಂಗ್ರಹಿಸುತ್ತಿದೆ. ಇದು ಕಾನೂನುಬಾಹಿರ ಮತ್ತು ಅವೈಜ್ಞಾನಿಕ ಇಮ್ಮಡಿ ರಾಜಧನ (Dual Royalty Collection) ಪದ್ಧತಿಯಾಗಿದೆ ಎಂದು ಸಂಘಟನೆ ಆರೋಪಿಸಿದೆ. ಸರ್ಕಾರವು ಗಣಿ ಮಾಲೀಕರಿಂದಾಗಲಿ ಅಥವಾ ಅಂತಿಮ ಬಳಕೆದಾರರಿಂದಾಗಲಿ ಯಾವುದಾದರೂ ಒಂದೇ ಹಂತದಲ್ಲಿ ಮಾತ್ರ ರಾಜಧನ ಸಂಗ್ರಹಿಸಬೇಕು. ಏಕಮುಖ ರಾಜಧನ (Single Royalty) ಸಂಗ್ರಹ ವ್ಯವಸ್ಥೆ ಜಾರಿಗೆ ತಂದು, ಇಮ್ಮಡಿ ಸಂಗ್ರಹವನ್ನು ತಕ್ಷಣ ರದ್ದುಪಡಿಸಿ ಸ್ಪಷ್ಟ ನಿಯಮ ರೂಪಿಸಬೇಕು ಎಂದು ಒಕ್ಕೂಟ ಆಗ್ರಹಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಕ್ವಾರಿ ಮತ್ತು ಕ್ರಷರ್ ಮಾಲೀಕರು ಸ್ವಯಂಪ್ರೇರಿತವಾಗಿ ಮುಷ್ಕರದಲ್ಲಿ ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಮನವಿ ಮಾಡಲಾಗಿದೆ. ಮುಷ್ಕರದಿಂದಾಗಿ ರಾಜ್ಯದಲ್ಲಿ ಕಟ್ಟಡ ನಿರ್ಮಾಣ, ರಸ್ತೆ ಮತ್ತು ನೀರಾವರಿ ಕಾಮಗಾರಿಗಳಿಗೆ ಜಲ್ಲಿ ಮತ್ತು ಎಂ-ಸ್ಯಾಂಡ್ ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗುವ ಸಾಧ್ಯತೆ ಇದೆ.

More news from ಕರ್ನಾಟಕ and nearby areas
  • ಪ್ರಧಾನಿ ಮೋದಿ ದಣಿವರಿಯದ ವಿಶ್ವಶ್ರೇಷ್ಠ ನಾಯಕ, ಪಟ್ಟಣದಲ್ಲಿ ಬಿಜೆಪಿ ಮುಖಂಡ ಯಮದೂರು ಸಿದ್ದರಾಜು ಬಣ್ಣನೆ ಮಳವಳ್ಳಿ: ಜನ ಸೇವೆಗಾ ಗಿಯೇ ತಮ್ಮ ಜೀವನವನ್ನು ಮುಡಿಪಾಗಿಸಿರುವ ದಣಿವರಿ ಯದ ನಾಯಕ ಪ್ರಧಾನಿ ನರೇಂದ್ರ ಮೋದಿ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ ಯಮದೂರು ಸಿದ್ದರಾಜು ಬಣ್ಣಿಸಿದ್ದಾರೆ. ಗುರುವಾರ ಮಧ್ಯಾಹ್ನ 1.30 ರ ಸಮಯದಲ್ಲಿ ಮಳವಳ್ಳಿ ಪಟ್ಟಣದ ಸಾರ್ವ ಜನಿಕ ಆಸ್ಪತ್ರೆ ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ತಾಲೂಕು ಬಿಜೆಪಿ ಮಂಡಲದ ವತಿಯಿಂದ ರೋಗಿ ಗಳಿಗೆ ಹಣ್ಣು ಹಂಪಲು ವಿತರಿ ಸುವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು ಪ್ರಧಾನಿ ಮೋದಿ ಅವರು ಕಳೆದ 11 ವರ್ಷಗಳಿಂದ ದೇಶದ ಸರ್ವ ತೋಮುಖ ಅಭಿವೃದ್ಧಿಗೆ ಶ್ರಮಿ ಸುತ್ತಿದ್ದಾರೆ. ಬಡವರ, ರೈತರ, ಮಹಿಳೆಯರ, ಯುವಜನರ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ವಿಶ್ವದಲ್ಲೇ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ. ಅವರ ಜನ್ಮದಿನವನ್ನು ಸೇವಾ ದಿನವಾಗಿ ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು. ಬಿಜೆಪಿ ತಾಲ್ಲೂಕು ಅಧ್ಯಕ್ಷ ಮಧು ಗಂಗಾಧರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಸುರಕ್ಷಿತವಾಗಿದೆ, ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಹೇಳಿದರು. ಮೋದಿ ಅವರು ಹುಟ್ಟುಹಬ್ಬ ವನ್ನು ಅದ್ಧೂರಿಯಾಗಿ ಆಚರಿಸಿ ಕೊಳ್ಳದೆ, ಸೇವಾ ಕಾರ್ಯಗಳ ಮೂಲಕ ಆಚರಿಸಲು ಕರೆ ನೀಡಿದ್ದಾರೆ. ಅದರಂತೆ ಇಂದು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಗಿದೆ. ಮೋದಿ ಅವರ ಆರೋಗ್ಯ, ದೀರ್ಘಾಯುಷ್ಯ ಕ್ಕಾಗಿ ಪ್ರಾರ್ಥಿಸಿ ಮನೆಗಳಲ್ಲಿ ದೀಪ ಬೆಳಗುವಿಕೆ ದೇವಾಲಯ ಗಳಲ್ಲಿ ವಿಶೇಷ ಪೂಜೆ ಹಮ್ಮಿ ಕೊಳ್ಳಲಾಗಿದೆ ಎಂದು ತಿಳಿಸಿ ದರು. ಕಾರ್ಯಕ್ರಮದಲ್ಲಿ ವೈದ್ಯಾಧಿಕಾ ರಿಗಳಾದ ಡಾ. ಶಿವಸ್ವಾಮಿ ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ಹೆಬ್ಬಣಿ ಬಸವರಾಜು, ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ಚಿಕ್ಜಣ್ಣ, ಪ್ರಧಾನ ಕಾರ್ಯದರ್ಶಿ ಉಮೇಶ್, ಜೆಡಿಎಸ್ ಮುಖಂಡ ಕಂಬರಾಜು, ಮುಖಂಡರಾದ ಸಿದ್ದರಾಜು, ದೇವರಾಜು, ವಕ್ಕರಹಳ್ಳಿ ಬಸವರಾಜು, ಮಾದೇಶ, ಸೇರಿದಂತೆ ಇತರರು ಈ ವೇಳೆ ಹಾಜರಿದ್ದರು.
    1
    ಪ್ರಧಾನಿ ಮೋದಿ ದಣಿವರಿಯದ ವಿಶ್ವಶ್ರೇಷ್ಠ ನಾಯಕ, ಪಟ್ಟಣದಲ್ಲಿ ಬಿಜೆಪಿ ಮುಖಂಡ ಯಮದೂರು ಸಿದ್ದರಾಜು ಬಣ್ಣನೆ
ಮಳವಳ್ಳಿ: ಜನ ಸೇವೆಗಾ ಗಿಯೇ ತಮ್ಮ ಜೀವನವನ್ನು ಮುಡಿಪಾಗಿಸಿರುವ ದಣಿವರಿ ಯದ ನಾಯಕ ಪ್ರಧಾನಿ ನರೇಂದ್ರ ಮೋದಿ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ ಯಮದೂರು ಸಿದ್ದರಾಜು ಬಣ್ಣಿಸಿದ್ದಾರೆ.
ಗುರುವಾರ ಮಧ್ಯಾಹ್ನ 1.30 ರ ಸಮಯದಲ್ಲಿ ಮಳವಳ್ಳಿ ಪಟ್ಟಣದ ಸಾರ್ವ ಜನಿಕ ಆಸ್ಪತ್ರೆ ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ತಾಲೂಕು ಬಿಜೆಪಿ ಮಂಡಲದ ವತಿಯಿಂದ ರೋಗಿ ಗಳಿಗೆ ಹಣ್ಣು ಹಂಪಲು ವಿತರಿ ಸುವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು ಪ್ರಧಾನಿ ಮೋದಿ ಅವರು ಕಳೆದ 11 ವರ್ಷಗಳಿಂದ ದೇಶದ ಸರ್ವ ತೋಮುಖ ಅಭಿವೃದ್ಧಿಗೆ ಶ್ರಮಿ ಸುತ್ತಿದ್ದಾರೆ. ಬಡವರ, ರೈತರ, ಮಹಿಳೆಯರ, ಯುವಜನರ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ವಿಶ್ವದಲ್ಲೇ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ. ಅವರ ಜನ್ಮದಿನವನ್ನು ಸೇವಾ ದಿನವಾಗಿ ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಮಧು ಗಂಗಾಧರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಸುರಕ್ಷಿತವಾಗಿದೆ, ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಹೇಳಿದರು.
ಮೋದಿ ಅವರು ಹುಟ್ಟುಹಬ್ಬ ವನ್ನು ಅದ್ಧೂರಿಯಾಗಿ ಆಚರಿಸಿ ಕೊಳ್ಳದೆ, ಸೇವಾ ಕಾರ್ಯಗಳ ಮೂಲಕ ಆಚರಿಸಲು ಕರೆ ನೀಡಿದ್ದಾರೆ. ಅದರಂತೆ ಇಂದು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಗಿದೆ. ಮೋದಿ ಅವರ ಆರೋಗ್ಯ, ದೀರ್ಘಾಯುಷ್ಯ ಕ್ಕಾಗಿ ಪ್ರಾರ್ಥಿಸಿ ಮನೆಗಳಲ್ಲಿ ದೀಪ ಬೆಳಗುವಿಕೆ ದೇವಾಲಯ ಗಳಲ್ಲಿ  ವಿಶೇಷ ಪೂಜೆ ಹಮ್ಮಿ ಕೊಳ್ಳಲಾಗಿದೆ ಎಂದು ತಿಳಿಸಿ ದರು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾ ರಿಗಳಾದ ಡಾ. ಶಿವಸ್ವಾಮಿ ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ಹೆಬ್ಬಣಿ ಬಸವರಾಜು, ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ಚಿಕ್ಜಣ್ಣ, ಪ್ರಧಾನ ಕಾರ್ಯದರ್ಶಿ ಉಮೇಶ್, ಜೆಡಿಎಸ್ ಮುಖಂಡ ಕಂಬರಾಜು, ಮುಖಂಡರಾದ ಸಿದ್ದರಾಜು, ದೇವರಾಜು, ವಕ್ಕರಹಳ್ಳಿ ಬಸವರಾಜು, ಮಾದೇಶ,  ಸೇರಿದಂತೆ ಇತರರು ಈ ವೇಳೆ ಹಾಜರಿದ್ದರು.
    user_B mallikarjunaswamy
    B mallikarjunaswamy
    ಮಳವಳ್ಳಿ, ಮಂಡ್ಯ, ಕರ್ನಾಟಕ•
    2 hrs ago
  • ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಪ್ರಧಾನಿ ಮೋದಿ ಜನ್ಮ ದಿನಾಚರಣೆ ಆಚರಿಸಿದ ಬಿಜೆಪಿ ಕಾರ್ಯಕರ್ತರು ಮಳವಳ್ಳಿ: ಪ್ರಧಾನಿ ನರೇಂದ್ರಮೋದಿ ರವರ 76 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಪಕ್ಷದ ವತಿಯಿಂದ ಮಳವಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಯಮದೂರು ಸಿದ್ದರಾಜು ನೇತೃತ್ವದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಯಮದೂರು ಸಿದ್ದರಾಜು ಮಾತನಾಡಿ, ಮೋದಿರವರು ರೈತರಪರ, ದಲಿತರಪರ, ಯುವಕರಪರ ಇರುವ ವಿಶ್ವನಾಯಕರು, ಶೃಂಗ ಸಭೆಯಲ್ಲಿ ಮೋದಿರವರು ಮೆಚ್ಚಿಗೆ ಗಳಿಸಿದ್ದಾರೆ. ಇಂದಿನಿಂದ ಒಂದು ತಿಂಗಳ ಕಾಲ ಸೇವಾ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಈ ವೇಳೆ ಬಿಜೆಪಿ ತಾಲ್ಲೂಕು ಅಧ್ಯಕ್ಷ ಮಧುಗಂಗಾಧರ್ ಮಾತನಾಡಿ, ಇಂದು ಸಂಜೆ ಮನೆಮನೆಗೂ ದೀಪ ಹಚ್ಚಿ ಮೋದಿರವರ ಹುಟ್ಟಹಬ್ಬವನ್ನು ಆಚರಿಸಲಾಗುತ್ತದೆ. ಸತತ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಈ ತಿಂಗಳು 17 ನೇ ತಾರೀಖಿನಿಂದ ಮುಂದಿನ ತಿಂಗಳು 17 ರವರಗೆ ಚುಟುವಟಿಕೆಗಳನ್ನು ಹಮ್ಮಿಕೊಂಡಿದ್ಧೇವೆ ಎಂದರು. ಈ ವೇಳೆ ಬಿಜೆಪಿ ಅಧ್ಯಕ್ಷ ಮಧುಗಂಗಾಧರ್, ಹೆಬ್ಬಣ್ಞಿಬಸವರಾಜು,ಚಿಕ್ಕಣ್ಞ, ದೇವರಾಜು,ತಮ್ಮಡಹಳ್ಳಿ ಮಾದೇಶ ಸೇರಿದಂತೆ ಹಲವರು ಇದ್ದರು.
    1
    ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ  ಪ್ರಧಾನಿ ಮೋದಿ ಜನ್ಮ ದಿನಾಚರಣೆ ಆಚರಿಸಿದ ಬಿಜೆಪಿ ಕಾರ್ಯಕರ್ತರು
ಮಳವಳ್ಳಿ: ಪ್ರಧಾನಿ ನರೇಂದ್ರಮೋದಿ ರವರ 76 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ  ಬಿಜೆಪಿ ಪಕ್ಷದ ವತಿಯಿಂದ  ಮಳವಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಯಮದೂರು ಸಿದ್ದರಾಜು  ನೇತೃತ್ವದಲ್ಲಿ   ಪಟ್ಟಣದ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಯಮದೂರು ಸಿದ್ದರಾಜು ಮಾತನಾಡಿ, ಮೋದಿರವರು ರೈತರಪರ, ದಲಿತರಪರ, ಯುವಕರಪರ ಇರುವ ವಿಶ್ವನಾಯಕರು, ಶೃಂಗ ಸಭೆಯಲ್ಲಿ  ಮೋದಿರವರು ಮೆಚ್ಚಿಗೆ ಗಳಿಸಿದ್ದಾರೆ.
ಇಂದಿನಿಂದ ಒಂದು ತಿಂಗಳ ಕಾಲ ಸೇವಾ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ವೇಳೆ  ಬಿಜೆಪಿ ತಾಲ್ಲೂಕು ಅಧ್ಯಕ್ಷ  ಮಧುಗಂಗಾಧರ್  ಮಾತನಾಡಿ, ಇಂದು ಸಂಜೆ ಮನೆಮನೆಗೂ ದೀಪ ಹಚ್ಚಿ ಮೋದಿರವರ ಹುಟ್ಟಹಬ್ಬವನ್ನು ಆಚರಿಸಲಾಗುತ್ತದೆ.
ಸತತ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು,  ಈ ತಿಂಗಳು 17 ನೇ ತಾರೀಖಿನಿಂದ  ಮುಂದಿನ ತಿಂಗಳು 17 ರವರಗೆ  ಚುಟುವಟಿಕೆಗಳನ್ನು ಹಮ್ಮಿಕೊಂಡಿದ್ಧೇವೆ  ಎಂದರು.
ಈ ವೇಳೆ  ಬಿಜೆಪಿ ಅಧ್ಯಕ್ಷ ಮಧುಗಂಗಾಧರ್,  ಹೆಬ್ಬಣ್ಞಿಬಸವರಾಜು,ಚಿಕ್ಕಣ್ಞ, ದೇವರಾಜು,ತಮ್ಮಡಹಳ್ಳಿ ಮಾದೇಶ ಸೇರಿದಂತೆ ಹಲವರು ಇದ್ದರು.
    user_ಸುಮಿತ್ರ‌ ಹೆಚ್‌ ಪಿ
    ಸುಮಿತ್ರ‌ ಹೆಚ್‌ ಪಿ
    ವರದಿಗಾರರು ಮಳವಳ್ಳಿ, ಮಂಡ್ಯ, ಕರ್ನಾಟಕ•
    5 hrs ago
  • All About,Irregularities/Misuse of #WaqfProperties related with #JamiaNizamia *ಭಾರತ ನಲ್ಲಿ ವೈರಲ್*
    1
    All About,Irregularities/Misuse of #WaqfProperties related with #JamiaNizamia 
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    16 min ago
  • ಮುಂದಿನ ವಿಧಾನ ಸಭಾ ಚುನಾವಣೆಗೆ ರಾಮನಗರ ಕ್ಷೇತ್ರದಿಂದಲೇ ಸ್ಪರ್ದೆ - ನಿಖಿಲ್ ಕುಮಾರಸ್ವಾಮಿ ರಾಮನಗರ -- ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದಲೇ ಸ್ಪರ್ದೆ ಮಾಡುವುದಾಗಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಮ್ಮ ಮನದ ಇಂಗಿತ ವ್ಯಕ್ತಪಡಿಸಿದ್ದಾರೆ. ಅವರು ಇಂದು ನಗರದ ಜಿಲ್ಲಾ ಜೆಡಿಎಸ್ ಕಛೇರಿಗೆ ಬೇಟಿ ನೀಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ರಾಮನಗರ ದಿಂದ ಸ್ಪರ್ಧೆ ವಿಚಾರವಾಗಿ ಈಗಾಗಲೇ  ಸ್ಪಷ್ಟವಾಗಿ ಹೇಳಿದ್ದೀನಿ, ಅದರಲ್ಲಿ ಅನುಮಾನ ಇಲ್ಲ.‌ ಇಲ್ಲಿನ ಜನರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಕಳೆದ ಚುನಾವಣೆಯ ಕಹಿ ನೆನಪುಗಳು ಕಾರ್ಯಕರ್ತರ ಮನಸ್ಸಿನಿಂದ ಮಾಸಿಲ್ಲ.ಅದಕ್ಕೆ ಒಂದು ಒಳ್ಳೆ ಫಲಿತಾಂಶದ ಮೂಲಕ ಅವರಿಗೆ ಉತ್ಸಾಹ ತುಂಬುವ ಮೂಲ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ನಮ್ಮ ಶಾಸಕರ ಆಯ್ಕೆಯಾಗಬೇಕು ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ಸದ್ಯ ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಕಾರ್ಯಕರ್ತರಿಗೆ ಶಕ್ತಿ ತುಂಬಬೇಕು. ಅವರಿಗೆ ಶಕ್ತಿ ತುಂಬಿದಾಗ ಮಾತ್ರ ವಿಧಾನಾಸಭೆ ಹಾಗೂ ಲೋಕಸಭೆ ಚುನಾವಣೆಗೆ ಅವರು ಪ್ರಾಮಾಣಿಕವಾಗಿ ಕೆಲಸ ಮಾಡ್ತಾರೆ. ಕೆಲವೊಂದು ಕಡೆ ಜೆಡಿಎಸ್ ಗೆ ಹಿನ್ನಲೆ ಆಗಿದೆ.ಆದ್ರೆ ಹಿನ್ನಡೆ-ಮುನ್ನಡೆ ಯಾವುದು ಶಾಶ್ವತ ಅಲ್ಲ. ಅದು ಕೇವಲ ತಾತ್ಕಾಲಿಕ, ಬದಲಾವಣೆ ಜೊತೆ ನಾವು ಮತ್ತೆ ಪ್ರಯತ್ನ ಮಾಡಬೇಕು. ರಾಜ್ಯದಲ್ಲಿ ಜೆಡಿಎಸ್ ಸಂಘಟನೆಗೆ ಒತ್ತು ನೀಡುವ ನಿಟ್ಟಿನಲ್ಲಿ  ರಾಜ್ಯ ಪ್ರವಾಸ ಮಾಡುವ ತೀರ್ಮಾನ ತೆಗೆದುಕೊಂಡಿದ್ದೆನೆ ಶೀಘ್ರದಲ್ಲೇ ಈ ಬಗ್ಗೆ ತೀರ್ಮಾನ ಮಾಡ್ತೀನಿ. ಸರ್ಕಾರ ಬಂದು 3 ವರ್ಷ ಆಗಿದೆ. ರೈತರ ಸಮಸ್ಯೆಗಳಿಗೆ ಪರಿಹಾರ ಸಿಗ್ತಿಲ್ಲ. ಸಿಎಂ ಮತ್ತೆ ಮೂರು ದಿನಗಳ ಕಾಲ ವಿಶೇಷ ಅಧಿವೇಶನ ಕರೆದಿದ್ದಾರೆ.ಅದರಲ್ಲಿ ರೈತರ ಸಮಸ್ಯೆ ಬಗ್ಗೆ ಚರ್ಚೆ ಮಾಡ್ತೀನಿ ಅಂತ ಹೇಳಿದ್ದಾರೆ. ಆದರೆ ರಾಜ್ಯದಲ್ಲಿ ಕೇವಲ 102 ತಾಲೂಕುಗಳನ್ನ ಮಾತ್ರ ಬರಪಿಡಿತ ಅಂತ ಘೋಷಣೆ ಮಾಡಿದ್ದಾರೆ. ಉಳಿದ ತಾಲೂಕುಗಳಲ್ಲಿ ಬರ ಇಲ್ವಾ.? ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣ ಹೆಚ್ಚಾಗಿದೆ. ಹಾಗಾಗಿ ಹಲವು ಜಿಲ್ಲೆಗಳಿಗೆ ಪ್ರವಾಸ ಮಾಡಿ ರೈತರ ಸಮಸ್ಯೆ ಆಲಿಸುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು‌
    1
    ಮುಂದಿನ ವಿಧಾನ ಸಭಾ ಚುನಾವಣೆಗೆ ರಾಮನಗರ ಕ್ಷೇತ್ರದಿಂದಲೇ ಸ್ಪರ್ದೆ - ನಿಖಿಲ್ ಕುಮಾರಸ್ವಾಮಿ 
ರಾಮನಗರ -- ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದಲೇ ಸ್ಪರ್ದೆ ಮಾಡುವುದಾಗಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಮ್ಮ ಮನದ ಇಂಗಿತ ವ್ಯಕ್ತಪಡಿಸಿದ್ದಾರೆ.
ಅವರು ಇಂದು ನಗರದ ಜಿಲ್ಲಾ ಜೆಡಿಎಸ್ ಕಛೇರಿಗೆ ಬೇಟಿ ನೀಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ರಾಮನಗರ ದಿಂದ ಸ್ಪರ್ಧೆ ವಿಚಾರವಾಗಿ ಈಗಾಗಲೇ  ಸ್ಪಷ್ಟವಾಗಿ ಹೇಳಿದ್ದೀನಿ, ಅದರಲ್ಲಿ ಅನುಮಾನ ಇಲ್ಲ.‌ ಇಲ್ಲಿನ ಜನರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಕಳೆದ ಚುನಾವಣೆಯ ಕಹಿ ನೆನಪುಗಳು ಕಾರ್ಯಕರ್ತರ ಮನಸ್ಸಿನಿಂದ ಮಾಸಿಲ್ಲ.ಅದಕ್ಕೆ ಒಂದು ಒಳ್ಳೆ ಫಲಿತಾಂಶದ ಮೂಲಕ ಅವರಿಗೆ ಉತ್ಸಾಹ ತುಂಬುವ ಮೂಲ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ನಮ್ಮ ಶಾಸಕರ ಆಯ್ಕೆಯಾಗಬೇಕು ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಸದ್ಯ ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಕಾರ್ಯಕರ್ತರಿಗೆ ಶಕ್ತಿ ತುಂಬಬೇಕು. ಅವರಿಗೆ ಶಕ್ತಿ ತುಂಬಿದಾಗ ಮಾತ್ರ ವಿಧಾನಾಸಭೆ ಹಾಗೂ ಲೋಕಸಭೆ ಚುನಾವಣೆಗೆ ಅವರು ಪ್ರಾಮಾಣಿಕವಾಗಿ ಕೆಲಸ ಮಾಡ್ತಾರೆ. ಕೆಲವೊಂದು ಕಡೆ ಜೆಡಿಎಸ್ ಗೆ ಹಿನ್ನಲೆ ಆಗಿದೆ.ಆದ್ರೆ ಹಿನ್ನಡೆ-ಮುನ್ನಡೆ ಯಾವುದು ಶಾಶ್ವತ ಅಲ್ಲ. ಅದು ಕೇವಲ ತಾತ್ಕಾಲಿಕ, ಬದಲಾವಣೆ ಜೊತೆ ನಾವು ಮತ್ತೆ ಪ್ರಯತ್ನ ಮಾಡಬೇಕು.
ರಾಜ್ಯದಲ್ಲಿ ಜೆಡಿಎಸ್ ಸಂಘಟನೆಗೆ ಒತ್ತು ನೀಡುವ ನಿಟ್ಟಿನಲ್ಲಿ  ರಾಜ್ಯ ಪ್ರವಾಸ ಮಾಡುವ ತೀರ್ಮಾನ ತೆಗೆದುಕೊಂಡಿದ್ದೆನೆ ಶೀಘ್ರದಲ್ಲೇ ಈ ಬಗ್ಗೆ ತೀರ್ಮಾನ ಮಾಡ್ತೀನಿ. ಸರ್ಕಾರ ಬಂದು 3 ವರ್ಷ ಆಗಿದೆ. ರೈತರ ಸಮಸ್ಯೆಗಳಿಗೆ ಪರಿಹಾರ ಸಿಗ್ತಿಲ್ಲ. ಸಿಎಂ ಮತ್ತೆ ಮೂರು ದಿನಗಳ ಕಾಲ ವಿಶೇಷ ಅಧಿವೇಶನ ಕರೆದಿದ್ದಾರೆ.ಅದರಲ್ಲಿ ರೈತರ ಸಮಸ್ಯೆ ಬಗ್ಗೆ ಚರ್ಚೆ ಮಾಡ್ತೀನಿ ಅಂತ ಹೇಳಿದ್ದಾರೆ. ಆದರೆ ರಾಜ್ಯದಲ್ಲಿ ಕೇವಲ 102 ತಾಲೂಕುಗಳನ್ನ ಮಾತ್ರ ಬರಪಿಡಿತ ಅಂತ ಘೋಷಣೆ ಮಾಡಿದ್ದಾರೆ. ಉಳಿದ ತಾಲೂಕುಗಳಲ್ಲಿ ಬರ ಇಲ್ವಾ.? ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣ ಹೆಚ್ಚಾಗಿದೆ. ಹಾಗಾಗಿ ಹಲವು ಜಿಲ್ಲೆಗಳಿಗೆ ಪ್ರವಾಸ ಮಾಡಿ ರೈತರ ಸಮಸ್ಯೆ ಆಲಿಸುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು‌
    user_ರಮೇಶ್.ಆರ್
    ರಮೇಶ್.ಆರ್
    ಚನ್ನಪಟ್ಟಣ, ರಾಮನಗರ, ಕರ್ನಾಟಕ•
    26 min ago
  • ಜೆಸ್ಕಾಂ ಕಚೇರಿ ಮುಂದೆ ಕೃಷಿಕಂಸೆಟ್ಗಳಿಗೆ ಸಮರ್ಪಕ ವಿದ್ಯುತ್ ನೀಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ ಟಿ. ನರಸೀಪುರ ಅಸಮರ್ಪಕ ವಿದ್ಯುತ್ ಪೂರೈಕೆ: ರೈತರು ಸಂಕಷ್ಟದಲ್ಲಿ. ಟಿ. ನರಸೀಪುರ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯುತ್ ಪೂರೈಕೆಯಲ್ಲಿ ಪದೇಪದೇ ವ್ಯತ್ಯಯ ಉಂಟಾಗುತ್ತಿರುವುದರಿಂದ ನೀರಾವರಿ ವ್ಯವಸ್ಥೆಗೆ ತೊಂದರೆಯಾಗಿದ್ದು, ಹೊಲಗಳಲ್ಲಿ ಬೆಳೆದಿರುವ ಬೆಳೆಗಳು ನೀರಿನ ಕೊರತೆಯಿಂದ ಒಣಗುವ ಆತಂಕ ಎದುರಾಗಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಸಮಯದಲ್ಲಿ ಸಮರ್ಪಕ ವೋಲ್ಟೇಜ್‌ನೊಂದಿಗೆ ವಿದ್ಯುತ್ ಪೂರೈಕೆ ಮಾಡದಿರುವುದರಿಂದ ಮೋಟಾರ್‌ಗಳನ್ನು ಚಾಲನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಈಗಾಗಲೇ ಬೆಳೆಗಳಿಗೆ ಸಾಕಷ್ಟು ಖರ್ಚು ಮಾಡಿರುವ ರೈತರಿಗೆ ವಿದ್ಯುತ್ ಸಮಸ್ಯೆ ಮತ್ತಷ್ಟು ಆರ್ಥಿಕ ಹೊರೆ ತಂದಿದೆ. ವಿದ್ಯುತ್ ಸಮಸ್ಯೆಯಿಂದ ಬೆಳೆ ಹಾನಿಯಾದರೆ ರೈತರ ಪರಿಸ್ಥಿತಿ ಮತ್ತಷ್ಟು ದುಸ್ತರವಾಗಲಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಸಮಯದಲ್ಲಿ ನಿರಂತರ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ವಿದ್ಯುತ್ ಲೈನ್‌ಗಳು, ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ಇತರೆ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣವೇ ಸರಿಪಡಿಸಿ ರೈತರ ಬೆಳೆಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಸಂಬಂಧಪಟ್ಟ ವಿದ್ಯುತ್ ಇಲಾಖೆ ಅಧಿಕಾರಿಗಳು ತುರ್ತಾಗಿ ಸಮಸ್ಯೆ ಪರಿಹರಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂಬುದು ರೈತರ ಆಗ್ರಹವಾಗಿದೆ. ರೈತರ ಬೆಳೆ ಉಳಿಸಲು ವಿದ್ಯುತ್ ಪೂರೈಕೆ ಸಮರ್ಪಕವಾಗಲಿಯಂದು ರೈತರ ಒತ್ತಾಯ . ಈ ಪ್ರತಿಭಟನೆಯಲ್ಲಿ ಕಿರಗುಸೂರು ಶಂಕರ್ ಕೆಜಿ ಗುರುಸ್ವಾಮಿ ಕುರುಬುರ್ ಗೌರಿಶಂಕರ್ ವಾಚ್ ಕುಮಾರ್ ಆದಿ ಬೆಟ್ಟಳ್ಳಿ ನಂಜುಂಡಸ್ವಾಮಿ ಅಪ್ಪಣ್ಣ ಕುರುಬೂರು ಸಿದ್ದೇಶ್, ಬಿಪಿ ಪರಶಿವಮೂರ್ತಿ, ಕರುವಟಿ ಉಮೇಶ್ ಕುರುಬೂರ ಪ್ರದೀಪ್ ಸೋಮಶೇಖರ್ ಬನ್ನಳ್ಳಿ ಹುಂಡಿ ರಾಜೇಂದ್ರ ನಿಲ್ಸೋಗೆ ಉಮೇಶ್ ಪ್ರತಾಪ್, ಕುಮಾರ್ ಕೆ ಎಂ, ವಾಟಾಳ್ ಪುರ ಸತೀಶ್ ಕುಮಾರ್ ಹೊಸಪುರ ನಾಗರಾಜು ಮಾದೇಶ್ ಮಾದೇವಮೂರ್ತಿ ಬಸವರಾಜು ಎಸ್ ಕೆಬ್ಬೆ ಹುಂಡಿ, ಮಾದೇವಸ್ವಾಮಿ ಮಾವ್ನಹಳ್ಳಿ, ತರಕಾರಿ ನಿಂಗರಾಜು ಬನ್ನಳ್ಳಿ ಶಾಂತರಾಜು ಆದಿ ಬೆಟ್ಟಳ್ಳಿ ಮಹೇಶ ಕನ್ನಳ್ಳಿ ಮೊಳೆ ಮಣಿಕಂಠ ಲೋಕೇಶ್ ರವೀಂದ್ರ ಮಾದೇಶ್ ನಿಲ್ಸೋಗೆ ನಾಗರಾಜು ಚಿನ್ನಸ್ವಾಮಿ ಕುರುಬೂರು ಶಿವಪ್ರಸಾದ್ ವೀರೇಶ್ ಎಲ್ ಐ ಸಿ ಪ್ರದೀಪ್ ಎಬಿ ಮಂಜುನಾಥ್ ನವೀನ ತೊಟ್ಟುವಾಡಿ ಇನ್ನು ಮುಂತಾದ ರೈತರು ಭಾಗವಹಿಸಿದ್ದರು
    1
    ಜೆಸ್ಕಾಂ ಕಚೇರಿ ಮುಂದೆ ಕೃಷಿಕಂಸೆಟ್ಗಳಿಗೆ ಸಮರ್ಪಕ ವಿದ್ಯುತ್ ನೀಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ 
ಟಿ. ನರಸೀಪುರ ಅಸಮರ್ಪಕ ವಿದ್ಯುತ್ ಪೂರೈಕೆ: ರೈತರು ಸಂಕಷ್ಟದಲ್ಲಿ.
ಟಿ. ನರಸೀಪುರ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯುತ್ ಪೂರೈಕೆಯಲ್ಲಿ ಪದೇಪದೇ ವ್ಯತ್ಯಯ ಉಂಟಾಗುತ್ತಿರುವುದರಿಂದ ನೀರಾವರಿ ವ್ಯವಸ್ಥೆಗೆ ತೊಂದರೆಯಾಗಿದ್ದು, ಹೊಲಗಳಲ್ಲಿ ಬೆಳೆದಿರುವ ಬೆಳೆಗಳು ನೀರಿನ ಕೊರತೆಯಿಂದ ಒಣಗುವ ಆತಂಕ ಎದುರಾಗಿದೆ.
ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಸಮಯದಲ್ಲಿ ಸಮರ್ಪಕ ವೋಲ್ಟೇಜ್‌ನೊಂದಿಗೆ ವಿದ್ಯುತ್ ಪೂರೈಕೆ ಮಾಡದಿರುವುದರಿಂದ ಮೋಟಾರ್‌ಗಳನ್ನು ಚಾಲನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಈಗಾಗಲೇ ಬೆಳೆಗಳಿಗೆ ಸಾಕಷ್ಟು ಖರ್ಚು ಮಾಡಿರುವ ರೈತರಿಗೆ ವಿದ್ಯುತ್ ಸಮಸ್ಯೆ ಮತ್ತಷ್ಟು ಆರ್ಥಿಕ ಹೊರೆ ತಂದಿದೆ. ವಿದ್ಯುತ್ ಸಮಸ್ಯೆಯಿಂದ ಬೆಳೆ ಹಾನಿಯಾದರೆ ರೈತರ ಪರಿಸ್ಥಿತಿ ಮತ್ತಷ್ಟು ದುಸ್ತರವಾಗಲಿದೆ.
ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಸಮಯದಲ್ಲಿ ನಿರಂತರ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ವಿದ್ಯುತ್ ಲೈನ್‌ಗಳು, ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ಇತರೆ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣವೇ ಸರಿಪಡಿಸಿ ರೈತರ ಬೆಳೆಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಸಂಬಂಧಪಟ್ಟ ವಿದ್ಯುತ್ ಇಲಾಖೆ ಅಧಿಕಾರಿಗಳು ತುರ್ತಾಗಿ ಸಮಸ್ಯೆ ಪರಿಹರಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂಬುದು ರೈತರ ಆಗ್ರಹವಾಗಿದೆ.
ರೈತರ ಬೆಳೆ ಉಳಿಸಲು ವಿದ್ಯುತ್ ಪೂರೈಕೆ ಸಮರ್ಪಕವಾಗಲಿಯಂದು ರೈತರ ಒತ್ತಾಯ
. ಈ ಪ್ರತಿಭಟನೆಯಲ್ಲಿ ಕಿರಗುಸೂರು  ಶಂಕರ್ ಕೆಜಿ ಗುರುಸ್ವಾಮಿ ಕುರುಬುರ್ ಗೌರಿಶಂಕರ್ ವಾಚ್ ಕುಮಾರ್ ಆದಿ ಬೆಟ್ಟಳ್ಳಿ ನಂಜುಂಡಸ್ವಾಮಿ ಅಪ್ಪಣ್ಣ ಕುರುಬೂರು ಸಿದ್ದೇಶ್,
ಬಿಪಿ ಪರಶಿವಮೂರ್ತಿ, ಕರುವಟಿ ಉಮೇಶ್ ಕುರುಬೂರ ಪ್ರದೀಪ್ 
ಸೋಮಶೇಖರ್ 
ಬನ್ನಳ್ಳಿ ಹುಂಡಿ ರಾಜೇಂದ್ರ 
ನಿಲ್ಸೋಗೆ ಉಮೇಶ್ 
ಪ್ರತಾಪ್, ಕುಮಾರ್ ಕೆ ಎಂ,
ವಾಟಾಳ್ ಪುರ ಸತೀಶ್ ಕುಮಾರ್ 
ಹೊಸಪುರ ನಾಗರಾಜು ಮಾದೇಶ್ ಮಾದೇವಮೂರ್ತಿ 
ಬಸವರಾಜು ಎಸ್ ಕೆಬ್ಬೆ ಹುಂಡಿ, ಮಾದೇವಸ್ವಾಮಿ ಮಾವ್ನಹಳ್ಳಿ,
ತರಕಾರಿ ನಿಂಗರಾಜು ಬನ್ನಳ್ಳಿ ಶಾಂತರಾಜು ಆದಿ ಬೆಟ್ಟಳ್ಳಿ ಮಹೇಶ ಕನ್ನಳ್ಳಿ ಮೊಳೆ ಮಣಿಕಂಠ ಲೋಕೇಶ್ ರವೀಂದ್ರ ಮಾದೇಶ್ ನಿಲ್ಸೋಗೆ ನಾಗರಾಜು ಚಿನ್ನಸ್ವಾಮಿ ಕುರುಬೂರು ಶಿವಪ್ರಸಾದ್ ವೀರೇಶ್ ಎಲ್ ಐ ಸಿ ಪ್ರದೀಪ್ ಎಬಿ ಮಂಜುನಾಥ್ ನವೀನ ತೊಟ್ಟುವಾಡಿ ಇನ್ನು ಮುಂತಾದ ರೈತರು ಭಾಗವಹಿಸಿದ್ದರು
    user_ಪ್ರದೀಪ್ ಎಂ ಕುರುಬೂರು
    ಪ್ರದೀಪ್ ಎಂ ಕುರುಬೂರು
    ತಿರುಮಕೂಡಲು - ನರಸಿಪುರ, ಮೈಸೂರು, ಕರ್ನಾಟಕ•
    12 hrs ago
  • ರಾಮನಗರದ ಜನರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ : ನಿಖಿಲ್ ಕುಮಾರಸ್ವಾಮಿ ರಾಮನಗರ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದಲೇ ಸ್ಪರ್ದಿಸಲಿದ್ದೇನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾದ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸ್ಪಷ್ಟವಾಗಿ ಹೇಳಿದ್ದೇನೆ, ಅದರಲ್ಲಿ ಯಾವುದೇ ಅನುಮಾನವಿಲ್ಲ. ರಾಮನಗರದ ಜನರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಕಳೆದ ಚುನಾವಣೆಯ ಕಹಿ ನೆನಪು ಕಾರ್ಯಕರ್ತರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಅದನ್ನು ಉತ್ತಮ ಫಲಿತಾಂಶದ ಮೂಲಕ ಹೋಗಲಾಡಿಸಿ ಕಾರ್ಯಕರ್ತರಲ್ಲಿ ನೂತನ ಉತ್ಸಾಹ ತುಂಬಬೇಕಿದೆ. ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರನ್ನು ನೋಡುವ ಗುರಿ ನಮ್ಮದಾಗಿದೆ ಎಂದರು. ಕೆಲವು ಕಡೆ ಜೆಡಿಎಸ್‌ಗೆ ಹಿನ್ನಡೆಯಾಗಿದೆ ನಿಜ, ಆದರೆ ರಾಜಕೀಯದಲ್ಲಿ ಹಿನ್ನಡೆ-ಮುನ್ನಡೆ ಶಾಶ್ವತವಲ್ಲ, ಅದು ತಾತ್ಕಾಲಿಕ. ಬದಲಾವಣೆಯೊಂದಿಗೆ ನಾವು ಮತ್ತೆ ಸಂಘಟಿತ ಪ್ರಯತ್ನ ಮಾಡುತ್ತೇವೆ. ಸದ್ಯ ಸ್ಥಳೀಯ ಚುನಾವಣೆಗೆ ಕಾರ್ಯಕರ್ತರಿಗೆ ಶಕ್ತಿ ತುಂಬುವುದು ಮುಖ್ಯ, ಅವರಿಗೆ ಶಕ್ತಿ ತುಂಬಿದಾಗ ಮಾತ್ರ ಅವರು ಎಂಎಲ್‌ಎ, ಎಂಪಿ ಚುನಾವಣೆಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂದರು.
    1
    ರಾಮನಗರದ ಜನರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ : ನಿಖಿಲ್ ಕುಮಾರಸ್ವಾಮಿ
ರಾಮನಗರ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದಲೇ ಸ್ಪರ್ದಿಸಲಿದ್ದೇನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾದ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸ್ಪಷ್ಟವಾಗಿ ಹೇಳಿದ್ದೇನೆ, ಅದರಲ್ಲಿ ಯಾವುದೇ ಅನುಮಾನವಿಲ್ಲ. ರಾಮನಗರದ ಜನರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಕಳೆದ ಚುನಾವಣೆಯ ಕಹಿ ನೆನಪು ಕಾರ್ಯಕರ್ತರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಅದನ್ನು ಉತ್ತಮ ಫಲಿತಾಂಶದ ಮೂಲಕ ಹೋಗಲಾಡಿಸಿ ಕಾರ್ಯಕರ್ತರಲ್ಲಿ ನೂತನ ಉತ್ಸಾಹ ತುಂಬಬೇಕಿದೆ. ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರನ್ನು ನೋಡುವ ಗುರಿ ನಮ್ಮದಾಗಿದೆ ಎಂದರು.
ಕೆಲವು ಕಡೆ ಜೆಡಿಎಸ್‌ಗೆ ಹಿನ್ನಡೆಯಾಗಿದೆ ನಿಜ, ಆದರೆ ರಾಜಕೀಯದಲ್ಲಿ ಹಿನ್ನಡೆ-ಮುನ್ನಡೆ ಶಾಶ್ವತವಲ್ಲ, ಅದು ತಾತ್ಕಾಲಿಕ. ಬದಲಾವಣೆಯೊಂದಿಗೆ ನಾವು ಮತ್ತೆ ಸಂಘಟಿತ ಪ್ರಯತ್ನ ಮಾಡುತ್ತೇವೆ. ಸದ್ಯ ಸ್ಥಳೀಯ ಚುನಾವಣೆಗೆ ಕಾರ್ಯಕರ್ತರಿಗೆ ಶಕ್ತಿ ತುಂಬುವುದು ಮುಖ್ಯ, ಅವರಿಗೆ ಶಕ್ತಿ ತುಂಬಿದಾಗ ಮಾತ್ರ ಅವರು ಎಂಎಲ್‌ಎ, ಎಂಪಿ ಚುನಾವಣೆಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂದರು.
    user_Ramanagsra News
    Ramanagsra News
    Photographer ರಾಮನಗರ, ರಾಮನಗರ, ಕರ್ನಾಟಕ•
    30 min ago
  • ನಂಜನಗೂಡಿನ ಸರಕಾರಿ ಹಿರಿಯ ದಳವಾಯಿ ಪ್ರಾಥಮಿಕ ಶಾಲೆಯಲ್ಲಿ ಎಲ್ಕೆಜಿ ಮಕ್ಕಳಿಂದ ಚದ್ಮವೇಷ ಸ್ಪರ್ಧೆ. ನಂಜನಗೂಡು ತಾಲೂಕಿನ : ಪಟ್ಟಣದ ಅತಿ ದೊಡ್ಡ ದಳವಾಯಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗಿನ ಪ್ರಾರ್ಥನಾ ಸಮಯದಲ್ಲಿ ಎಲ್ಕೆಜಿ ಮಕ್ಕಳಿಂದ ಚದ್ಮ ವೇಷ ಸ್ಪರ್ಧೆ ನಡೆಯಿತು . ಮಕ್ಕಳು ಹಣ್ಣಿನ ಹಾಗೂ ತರಕಾರಿ ವಿವಿಧ ವೇಷಗಳನ್ನು ಧರಿಸಿ ಪ್ರದರ್ಶನ ನೀಡಿದರು. ಈಸ್ಪರ್ಧೆಯನ್ನು ಉದ್ದೇಶಿಸಿ ಸಹ ಶಿಕ್ಷಕಿಯಾದ ಮಮತಾ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ನಾಗೇಶ್ ಸಿಬ್ಬಂದಿ ವರ್ಗ ಹಾಜರಿದ್ದರು. ಎಲ್ಲಾ ಶಿಕ್ಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈ ಪ್ರದರ್ಶನದಲ್ಲಿ ಮಾರ್ಗದರ್ಶಿ ಶಿಕ್ಷಕಿಯಾಗಿ ಶಿಲ್ಪಾ ಅವರು ಭಾಗವಹಿಸಿದ್ದರು. ಶಿಲ್ಪ ಅವರು ಎಲ್ಲ ಶಿಕ್ಷಕರಿಗೆ ಅಭಿನಂದನೆಯನ್ನು ಸಲ್ಲಿಸಿದರು.
    4
    ನಂಜನಗೂಡಿನ ಸರಕಾರಿ ಹಿರಿಯ ದಳವಾಯಿ ಪ್ರಾಥಮಿಕ ಶಾಲೆಯಲ್ಲಿ ಎಲ್ಕೆಜಿ ಮಕ್ಕಳಿಂದ ಚದ್ಮವೇಷ ಸ್ಪರ್ಧೆ.
ನಂಜನಗೂಡು ತಾಲೂಕಿನ : ಪಟ್ಟಣದ ಅತಿ ದೊಡ್ಡ ದಳವಾಯಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗಿನ ಪ್ರಾರ್ಥನಾ ಸಮಯದಲ್ಲಿ ಎಲ್ಕೆಜಿ ಮಕ್ಕಳಿಂದ ಚದ್ಮ  ವೇಷ  ಸ್ಪರ್ಧೆ ನಡೆಯಿತು . ಮಕ್ಕಳು ಹಣ್ಣಿನ ಹಾಗೂ ತರಕಾರಿ ವಿವಿಧ ವೇಷಗಳನ್ನು ಧರಿಸಿ ಪ್ರದರ್ಶನ ನೀಡಿದರು.  ಈಸ್ಪರ್ಧೆಯನ್ನು ಉದ್ದೇಶಿಸಿ ಸಹ ಶಿಕ್ಷಕಿಯಾದ ಮಮತಾ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ನಾಗೇಶ್ ಸಿಬ್ಬಂದಿ ವರ್ಗ ಹಾಜರಿದ್ದರು. ಎಲ್ಲಾ ಶಿಕ್ಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈ ಪ್ರದರ್ಶನದಲ್ಲಿ ಮಾರ್ಗದರ್ಶಿ ಶಿಕ್ಷಕಿಯಾಗಿ ಶಿಲ್ಪಾ ಅವರು ಭಾಗವಹಿಸಿದ್ದರು. ಶಿಲ್ಪ ಅವರು ಎಲ್ಲ ಶಿಕ್ಷಕರಿಗೆ ಅಭಿನಂದನೆಯನ್ನು ಸಲ್ಲಿಸಿದರು.
    user_ಹೆಚ ಟಿ ಸತ್ಯನಾರಾಯಣ ಪ್ರಸಾದ್
    ಹೆಚ ಟಿ ಸತ್ಯನಾರಾಯಣ ಪ್ರಸಾದ್
    Teacher ನಂಜನಗೂಡು, ಮೈಸೂರು, ಕರ್ನಾಟಕ•
    1 hr ago
  • ಪಟ್ಟಣದಲ್ಲಿ ಚೆಸ್ಕಾಂ ಪ್ರಕಟಣೆ, ಕಿರುಗಾವಲು ವಿ ವಿ ಕೇಂದ್ರ ವ್ಯಾಪ್ತಿಯ ಗ್ರಾಮಗಳ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಎಂದಿರುವ ಇಇ ಮಳವಳ್ಳಿ : ತಾಲ್ಲೂಕಿನ‌ ಕಿರುಗಾವಲು ವಿದ್ಯುತ್ ವಿತರಣಾ ಕೇಂದ್ರದಲ್ಲಿ 2ನೇ ತ್ರೈಮಾಸಿಕ ನಿರ್ವಹಣೆ ಕಾರ್ಯ ವಿರುವುದರಿಂದ ಸೆಪ್ಟಂಬರ್ 18 ರಂದು ಈ ಕೇಂದ್ರ ವ್ಯಾಪ್ತಿ ಯ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ. 18 ರಂದು ಬೆಳಿಗ್ಗೆ 9. ರಿಂದ ಸಾಯಂಕಾಲ 5 ರ ವರೆಗೆ 66/11 ಕೆ ವಿ ಕಿರುಗಾವಲು ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಕಿರುಗಾಬಲು, ದೊಡ್ಡೇಗೌಡನಕೊಪ್ಪಲು, ಚಿಕ್ಕಮಾಳಿಗೆ ಕೊಪ್ಪಲು, ನೇಣನೂರು, ಸಂಶೆಟ್ಟಿಪುರ, ಚಿಕ್ಕಮುಲಗೂಡು, ಮಿಕ್ಕರೆ, ಕಲ್ಕುಣಿ, ಡೋರನಹಳ್ಳಿ, ಹೆಚ್ ಹೆಚ್ ಕೊಪ್ಪಲು, ಭೀಮನಹಳ್ಳಿ, ಬಂಡೂರು, ಆಲದಹಳ್ಳಿ, ಮೂಗನಕೊಪ್ಪಲು, ಹೂವಿನ ಕೊಪ್ಪಲು, ಹಾಗೂ ಸುತ್ತಮು ತ್ತಲ ಗ್ರಾಮಗಳ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದ್ದು ಗ್ರಾಹಕರು ಸಹಕರಿಸಬೇಕೆಂದು ಪಟ್ಟಣ ದಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಚೆಸ್ಕಾಂನ ಕಾರ್ಯಪಾಲಕ ಇಂಜೀನಿಯರ್ ಟಿ ಪುಟ್ಟಸ್ವಾಮಿ ಅವರು ನೀಡಿ ರುವ ಪ್ರಕಟಣೆಯಲ್ಲಿ ತಿಳಿಸಿ ದ್ದಾರೆ.
    1
    ಪಟ್ಟಣದಲ್ಲಿ ಚೆಸ್ಕಾಂ ಪ್ರಕಟಣೆ, ಕಿರುಗಾವಲು ವಿ ವಿ ಕೇಂದ್ರ ವ್ಯಾಪ್ತಿಯ ಗ್ರಾಮಗಳ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಎಂದಿರುವ ಇಇ
ಮಳವಳ್ಳಿ : ತಾಲ್ಲೂಕಿನ‌ ಕಿರುಗಾವಲು ವಿದ್ಯುತ್ ವಿತರಣಾ ಕೇಂದ್ರದಲ್ಲಿ 2ನೇ ತ್ರೈಮಾಸಿಕ ನಿರ್ವಹಣೆ ಕಾರ್ಯ ವಿರುವುದರಿಂದ   ಸೆಪ್ಟಂಬರ್ 18 ರಂದು  ಈ ಕೇಂದ್ರ ವ್ಯಾಪ್ತಿ ಯ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ.  18 ರಂದು ಬೆಳಿಗ್ಗೆ 9. ರಿಂದ ಸಾಯಂಕಾಲ 5 ರ ವರೆಗೆ 66/11 ಕೆ ವಿ ಕಿರುಗಾವಲು ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಕಿರುಗಾಬಲು, ದೊಡ್ಡೇಗೌಡನಕೊಪ್ಪಲು, ಚಿಕ್ಕಮಾಳಿಗೆ ಕೊಪ್ಪಲು, ನೇಣನೂರು, ಸಂಶೆಟ್ಟಿಪುರ, ಚಿಕ್ಕಮುಲಗೂಡು, ಮಿಕ್ಕರೆ, ಕಲ್ಕುಣಿ, ಡೋರನಹಳ್ಳಿ, ಹೆಚ್ ಹೆಚ್ ಕೊಪ್ಪಲು, ಭೀಮನಹಳ್ಳಿ, ಬಂಡೂರು, ಆಲದಹಳ್ಳಿ, ಮೂಗನಕೊಪ್ಪಲು, ಹೂವಿನ ಕೊಪ್ಪಲು, ಹಾಗೂ ಸುತ್ತಮು ತ್ತಲ ಗ್ರಾಮಗಳ ವಿದ್ಯುತ್  ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದ್ದು ಗ್ರಾಹಕರು  ಸಹಕರಿಸಬೇಕೆಂದು ಪಟ್ಟಣ ದಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಚೆಸ್ಕಾಂನ ಕಾರ್ಯಪಾಲಕ ಇಂಜೀನಿಯರ್ ಟಿ ಪುಟ್ಟಸ್ವಾಮಿ ಅವರು ನೀಡಿ ರುವ ಪ್ರಕಟಣೆಯಲ್ಲಿ ತಿಳಿಸಿ ದ್ದಾರೆ.
    user_B mallikarjunaswamy
    B mallikarjunaswamy
    ಮಳವಳ್ಳಿ, ಮಂಡ್ಯ, ಕರ್ನಾಟಕ•
    4 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.