logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮಾನ್ವಿಯ ಲೊಯೋಲ ಶಿಕ್ಷಣ ಸಂಸ್ಥೆಯಲ್ಲಿ ಸಂತ ಇಗ್ನೇಷಿಯಸ್ ಲೊಯೋಲಾ ಹಬ್ಬ ಆಚರಣೆ ಮಾನ್ವಿ ಪಟ್ಟಣದ ಲೊಯೋಲ ಶಿಕ್ಷಣ ಸಂಸ್ಥೆಯಲ್ಲಿ ಸಂತ ಇಗ್ನೇಷಿಯಸ್ ಲೊಯೋಲಾ ಅವರ ಹಬ್ಬವನ್ನು ಶುಕ್ರವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಅರುಪೆ ಹಾಲ್‌ನಲ್ಲಿ ಬೆಳಿಗ್ಗೆ 9 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉತ್ಸಾಹದಿಂದ ಭಾಗವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಫಾ. ಜೆಸನ್ ರಾಯ್, OFM Cap. ಸ್ನೇಹಜ್ಯೋತಿ ಶಾಲೆ ಪೋತ್ನಾಳ ಅವರು ಸಂತ ಇಗ್ನೇಷಿಯಸ್ ಅವರ ಜೀವನ ಆದರ್ಶಗಳು, ಸೇವಾ ಮನೋಭಾವ ಹಾಗೂ ಸಮಾಜಮುಖಿ ಚಿಂತನೆಗಳ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಂತ ಇಗ್ನೇಷಿಯಸ್ ಅವರ ಜೀವನ ಸಂದೇಶಗಳು ಮಾರ್ಗದರ್ಶಿಯಾಗುತ್ತವೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೊಯೋಲಾ ಸಂಸ್ಥೆಗಳ ಸುಪೀರಿಯರ್ ಫಾ. ಸಿಪ್ರಿಯನ್ ಟೆಲ್ಲಿಸ್ SJ ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಜೀವನವನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಈ ಸಂದರ್ಭದಲ್ಲಿ ಲೊಯೋಲಾ ಕಾಲೇಜಿನ ಪ್ರಾಂಶುಪಾಲರು ಹಾಗೂ ನಿರ್ದೇಶಕರಾದ ಫಾ. ವಿನೋದ್ ಪಾಲ್ SJ, ಕ್ಸೇವಿಯರ್ ಶಾಲೆಯ ಪ್ರಾಂಶುಪಾಲರಾದ ಫಾ. ವಿಲ್ಸನ್ ಬೆನ್ನಿಸ್ SJ, ಲೊಯೋಲಾ ಶಾಲೆಯ ನಿರ್ದೇಶಕರಾದ ಫಾ. ಸಿರಿಲ್ ರಾಜ್ SJ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. “ಸಂತ ಇಗ್ನೇಷಿಯಸ್ ಹೆಜ್ಜೆಗುರುತುಗಳಲ್ಲಿ ಸಾಗೋಣ” ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಈ ಹಬ್ಬವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ನಾಯಕತ್ವ ಗುಣಗಳು ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಸಂದೇಶವನ್ನು ನೀಡಿತು. ಕಾರ್ಯಕ್ರಮವು ಪ್ರಾರ್ಥನೆ, ಶುಭಾಶಯ ಭಾಷಣಗಳು ಹಾಗೂ ಕೃತಜ್ಞತಾ ಸಮರ್ಪಣೆಯೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

3 hrs ago
user_ಬಸವರಾಜ ಭೋಗಾವತಿ
ಬಸವರಾಜ ಭೋಗಾವತಿ
Local News Reporter ಮಾನ್ವಿ, ರಾಯಚೂರು, ಕರ್ನಾಟಕ•
3 hrs ago
969c3e1e-e1ab-499c-af95-00cc7606d044

ಮಾನ್ವಿಯ ಲೊಯೋಲ ಶಿಕ್ಷಣ ಸಂಸ್ಥೆಯಲ್ಲಿ ಸಂತ ಇಗ್ನೇಷಿಯಸ್ ಲೊಯೋಲಾ ಹಬ್ಬ ಆಚರಣೆ ಮಾನ್ವಿ ಪಟ್ಟಣದ ಲೊಯೋಲ ಶಿಕ್ಷಣ ಸಂಸ್ಥೆಯಲ್ಲಿ ಸಂತ ಇಗ್ನೇಷಿಯಸ್ ಲೊಯೋಲಾ ಅವರ ಹಬ್ಬವನ್ನು ಶುಕ್ರವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಅರುಪೆ ಹಾಲ್‌ನಲ್ಲಿ ಬೆಳಿಗ್ಗೆ 9 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉತ್ಸಾಹದಿಂದ ಭಾಗವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಫಾ. ಜೆಸನ್ ರಾಯ್, OFM Cap. ಸ್ನೇಹಜ್ಯೋತಿ ಶಾಲೆ ಪೋತ್ನಾಳ ಅವರು ಸಂತ ಇಗ್ನೇಷಿಯಸ್ ಅವರ ಜೀವನ ಆದರ್ಶಗಳು, ಸೇವಾ ಮನೋಭಾವ ಹಾಗೂ ಸಮಾಜಮುಖಿ ಚಿಂತನೆಗಳ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಂತ ಇಗ್ನೇಷಿಯಸ್ ಅವರ ಜೀವನ ಸಂದೇಶಗಳು ಮಾರ್ಗದರ್ಶಿಯಾಗುತ್ತವೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೊಯೋಲಾ ಸಂಸ್ಥೆಗಳ ಸುಪೀರಿಯರ್ ಫಾ. ಸಿಪ್ರಿಯನ್ ಟೆಲ್ಲಿಸ್ SJ ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಜೀವನವನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಈ ಸಂದರ್ಭದಲ್ಲಿ ಲೊಯೋಲಾ ಕಾಲೇಜಿನ ಪ್ರಾಂಶುಪಾಲರು ಹಾಗೂ ನಿರ್ದೇಶಕರಾದ ಫಾ. ವಿನೋದ್ ಪಾಲ್ SJ, ಕ್ಸೇವಿಯರ್ ಶಾಲೆಯ ಪ್ರಾಂಶುಪಾಲರಾದ ಫಾ. ವಿಲ್ಸನ್ ಬೆನ್ನಿಸ್ SJ, ಲೊಯೋಲಾ ಶಾಲೆಯ ನಿರ್ದೇಶಕರಾದ ಫಾ. ಸಿರಿಲ್ ರಾಜ್ SJ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. “ಸಂತ ಇಗ್ನೇಷಿಯಸ್ ಹೆಜ್ಜೆಗುರುತುಗಳಲ್ಲಿ ಸಾಗೋಣ” ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಈ ಹಬ್ಬವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ನಾಯಕತ್ವ ಗುಣಗಳು ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಸಂದೇಶವನ್ನು ನೀಡಿತು. ಕಾರ್ಯಕ್ರಮವು ಪ್ರಾರ್ಥನೆ, ಶುಭಾಶಯ ಭಾಷಣಗಳು ಹಾಗೂ ಕೃತಜ್ಞತಾ ಸಮರ್ಪಣೆಯೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

More news from ಕರ್ನಾಟಕ and nearby areas
  • ಜನಪ್ರತಿನಿಧಿಗಳ ನಿರ್ದೇಶನ ಜಾರಿಗೆ ಒತ್ತಾಯ: ಮಾನ್ವಿ ನಾಗರಿಕ ವೇದಿಕೆ ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ಮಾನ್ವಿ ಪಟ್ಟಣದಲ್ಲಿ ವತಿಯಿಂದ ನಡೆಯುತ್ತಿರುವ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಬಂಧಿತ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಮಾನ್ವಿ ನಾಗರಿಕ ಹಿತ ರಕ್ಷಣಾ ವೇದಿಕೆ ಆರೋಪಿಸಿದೆ. ಸಭೆಯಲ್ಲಿ ನಿರ್ದೇಶನ, ಆದರೆ ಜಾರಿಯಿಲ್ಲ : ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯ ರಾದ ಎನ್. ಎಸ್. ಬೋಸರಾಜು ಮತ್ತು ಮಾನ್ಸಿ ಶಾಸಕರಾದ ಶ್ರೀ ಜಿ. ಹಂಪಯ್ಯ ನಾಯಕ ಸಾಹುಕಾರ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ 8 ಪ್ರಮುಖ ಬೇಡಿಕೆಗಳ ಕುರಿತು ಚರ್ಚಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾ ಗಿತ್ತು. ಆದರೆ ಆ ನಿರ್ದೇಶನಗಳು ಇದುವರೆಗೆ ಜಾರಿಯಾಗಿಲ್ಲ ಎಂದು ವೇದಿಕೆ ತಿಳಿಸಿದೆ. ಆಟೋ ನಗರದಿಂದ ಹೌಸಿಂಗ್ ಬೋರ್ಡ್ ವರೆಗೆ 2002ರಲ್ಲಿ ಭೂಸ್ವಾ ಧೀನ ಮಾಡಿಕೊಂಡ ಜಾಗದಲ್ಲಿ ತಕ್ಷಣ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸರ್ವೇ ನಡೆಸಬೇಕು. ರಸ್ತೆ ಮಧ್ಯದಲ್ಲಿರುವ ಅಪಾಯಕಾರಿ ಹಾಗೂ ವಿಷಕಾರಿ ಮರಗಳನ್ನು ತೆರವುಗೊಳಿಸಬೇಕು. ರಸ್ತೆ ಅಗಲೀಕರಣ ಕಡಿಮೆ ಮಾಡಿರುವ ಸ್ಥಳಗಳನ್ನು ಮರುಪರಿಶೀಲಿಸಿ ಸರಿಪಡಿಸಬೇಕು. ಬಸವೇಶ್ವರ, ಅಂಬೇಡ್ಕರ್, ಗಾಂಧಿ ಜಿ, ವಾಲ್ಮೀಕಿ, ಮೇಜರ್ ಶಾನವಾ ಜ್ ಖಾನ್ ವೃತ್ತಗಳ ಅಗಲೀಕರಣ ಮತ್ತು ಸುಂದರೀಕರಣ ಕಾಮಗಾರಿ ಆರಂಭಿಸಬೇಕು. ವೈಜ್ಞಾನಿಕ ಡೈನೇ ಜ್ ವ್ಯವಸ್ಥೆ ನಿರ್ಮಿಸಿ ಮಳೆ ನೀರು ಸರಾಗವಾಗಿ ಮಾಡಬೇಕು. ಹರಿಯುವಂತೆ ಸಿಂಧನೂರು ಮಾದರಿಯಲ್ಲಿ ಭೂಗತ ವಿದ್ಯುತ್ ಕೇಬಲ್ ಅಳವಡಿಸಿ, ತೂಗು ತಂತಿ ತೆರವುಗೊಳಿಸಬೇಕು. ಕಾಮಗಾರಿಯ ಪ್ರತಿ ಹಂತದಲ್ಲೂ ನಾಗರಿಕ ವೇದಿಕೆಯೊಂದಿಗೆ ಸಮನ್ವಯ ಸಾಧಿಸಬೇಕು. 8. ವರದಿ: ನೀಡಿದ ನಿರ್ದೇಶನಗಳ ಅನುಷ್ಠಾನದ ಕುರಿತು ಲಿಖಿತ ಮಾಹಿತಿ ನೀಡಬೇಕು. ಸಭೆಯಲ್ಲಿ ಭರವಸೆಗಳು ಹಾಗೂ ನಿರ್ದೇ ಶನಗಳನ್ನು ನಿಗದಿತ ಕಾಲಮಿತಿಯಲ್ಲಿ ನೀಡಿದ ಅನುಷ್ಠಾನಗೊಳಿಸದಿದ್ದರೆ, ಒಂದು ವಾರದ ನಂತರ ಮಾನ್ವಿ ಜನತೆಯೊಂ ದಿಗೆ ಸೇರಿ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಉಗ್ರ ಹೋರಾಟ ಹಮ್ಮಿ ಕೊಳ್ಳಲಾಗುವುದು ಎಂದು ಮಾನ್ವಿನಾಗರಿಕ ಹಿತ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ. ಈ ಕುರಿತು ತಹಸೀಲ್ದಾರರಿಗೆ ಲಿಖಿತ ಮನವಿಯನ್ನು ಸಲ್ಲಿಸಲಾಗಿದೆ. ಈ ವಿಳಂಬದಿಂದ ಉಂಟಾಗುವ ಎಲ್ಲಾ ಬೆಳವಣಿಗೆಗಳಿಗೆ ಆಡಳಿತ ವರ್ಗ ಹಾಗೂ ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರರಾ ಗಿರುತ್ತಾರೆ ಎಂದು ವೇದಿಕೆ ತಿಳಿಸಿದೆ.
    3
    ಜನಪ್ರತಿನಿಧಿಗಳ ನಿರ್ದೇಶನ ಜಾರಿಗೆ ಒತ್ತಾಯ: ಮಾನ್ವಿ ನಾಗರಿಕ ವೇದಿಕೆ ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
ಮಾನ್ವಿ ಪಟ್ಟಣದಲ್ಲಿ ವತಿಯಿಂದ ನಡೆಯುತ್ತಿರುವ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಬಂಧಿತ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಮಾನ್ವಿ ನಾಗರಿಕ ಹಿತ ರಕ್ಷಣಾ ವೇದಿಕೆ ಆರೋಪಿಸಿದೆ.
ಸಭೆಯಲ್ಲಿ ನಿರ್ದೇಶನ, ಆದರೆ ಜಾರಿಯಿಲ್ಲ : ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯ
ರಾದ ಎನ್. ಎಸ್. ಬೋಸರಾಜು ಮತ್ತು ಮಾನ್ಸಿ ಶಾಸಕರಾದ ಶ್ರೀ ಜಿ. ಹಂಪಯ್ಯ ನಾಯಕ ಸಾಹುಕಾರ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ 8 ಪ್ರಮುಖ ಬೇಡಿಕೆಗಳ ಕುರಿತು ಚರ್ಚಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾ ಗಿತ್ತು. ಆದರೆ ಆ ನಿರ್ದೇಶನಗಳು ಇದುವರೆಗೆ ಜಾರಿಯಾಗಿಲ್ಲ ಎಂದು ವೇದಿಕೆ ತಿಳಿಸಿದೆ.
ಆಟೋ ನಗರದಿಂದ ಹೌಸಿಂಗ್ ಬೋರ್ಡ್ ವರೆಗೆ 2002ರಲ್ಲಿ ಭೂಸ್ವಾ ಧೀನ ಮಾಡಿಕೊಂಡ
ಜಾಗದಲ್ಲಿ ತಕ್ಷಣ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸರ್ವೇ ನಡೆಸಬೇಕು. ರಸ್ತೆ ಮಧ್ಯದಲ್ಲಿರುವ ಅಪಾಯಕಾರಿ ಹಾಗೂ ವಿಷಕಾರಿ ಮರಗಳನ್ನು ತೆರವುಗೊಳಿಸಬೇಕು.
ರಸ್ತೆ ಅಗಲೀಕರಣ ಕಡಿಮೆ ಮಾಡಿರುವ ಸ್ಥಳಗಳನ್ನು ಮರುಪರಿಶೀಲಿಸಿ ಸರಿಪಡಿಸಬೇಕು. ಬಸವೇಶ್ವರ, ಅಂಬೇಡ್ಕರ್, ಗಾಂಧಿ ಜಿ, ವಾಲ್ಮೀಕಿ, ಮೇಜರ್ ಶಾನವಾ ಜ್ ಖಾನ್ ವೃತ್ತಗಳ ಅಗಲೀಕರಣ ಮತ್ತು ಸುಂದರೀಕರಣ ಕಾಮಗಾರಿ ಆರಂಭಿಸಬೇಕು. ವೈಜ್ಞಾನಿಕ ಡೈನೇ ಜ್ ವ್ಯವಸ್ಥೆ ನಿರ್ಮಿಸಿ ಮಳೆ ನೀರು
ಸರಾಗವಾಗಿ ಮಾಡಬೇಕು. ಹರಿಯುವಂತೆ
ಸಿಂಧನೂರು ಮಾದರಿಯಲ್ಲಿ ಭೂಗತ ವಿದ್ಯುತ್ ಕೇಬಲ್ ಅಳವಡಿಸಿ, ತೂಗು ತಂತಿ ತೆರವುಗೊಳಿಸಬೇಕು. ಕಾಮಗಾರಿಯ ಪ್ರತಿ ಹಂತದಲ್ಲೂ ನಾಗರಿಕ ವೇದಿಕೆಯೊಂದಿಗೆ ಸಮನ್ವಯ ಸಾಧಿಸಬೇಕು. 8. ವರದಿ: ನೀಡಿದ ನಿರ್ದೇಶನಗಳ ಅನುಷ್ಠಾನದ ಕುರಿತು ಲಿಖಿತ ಮಾಹಿತಿ ನೀಡಬೇಕು.
ಸಭೆಯಲ್ಲಿ ಭರವಸೆಗಳು ಹಾಗೂ ನಿರ್ದೇ ಶನಗಳನ್ನು ನಿಗದಿತ ಕಾಲಮಿತಿಯಲ್ಲಿ ನೀಡಿದ
ಅನುಷ್ಠಾನಗೊಳಿಸದಿದ್ದರೆ, ಒಂದು ವಾರದ ನಂತರ ಮಾನ್ವಿ ಜನತೆಯೊಂ ದಿಗೆ ಸೇರಿ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಉಗ್ರ ಹೋರಾಟ ಹಮ್ಮಿ ಕೊಳ್ಳಲಾಗುವುದು ಎಂದು ಮಾನ್ವಿನಾಗರಿಕ ಹಿತ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
ಈ ಕುರಿತು ತಹಸೀಲ್ದಾರರಿಗೆ ಲಿಖಿತ ಮನವಿಯನ್ನು ಸಲ್ಲಿಸಲಾಗಿದೆ. ಈ ವಿಳಂಬದಿಂದ ಉಂಟಾಗುವ ಎಲ್ಲಾ ಬೆಳವಣಿಗೆಗಳಿಗೆ ಆಡಳಿತ ವರ್ಗ ಹಾಗೂ ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರರಾ ಗಿರುತ್ತಾರೆ ಎಂದು ವೇದಿಕೆ ತಿಳಿಸಿದೆ.
    user_Shivakumar Sajjan
    Shivakumar Sajjan
    Local News Reporter ಮಾನ್ವಿ, ರಾಯಚೂರು, ಕರ್ನಾಟಕ•
    1 hr ago
  • ಅಕ್ರಮ ವಿದ್ಯುತ್ ಸಂಪರ್ಕ ನೀಡಿದ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆರೋಪ ರಾಯಚೂರು, ಜು.31: ಹಜರತ್ ಸೈಯದ್ ಶಾ ಶಮ್ಸ್ ಆಲಂ ಹುಸೈನಿ ದರ್ಗಾ ಉರ್ಸ್–2026ಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡುವಲ್ಲಿ ಜೆಸ್ಕಾಂ ಅಧಿಕಾರಿಗಳು ಇಲಾಖೆಯ ಮೇಲಾಧಿಕಾರಿಗಳ ಲಿಖಿತ ಆದೇಶಗಳನ್ನು ಉಲ್ಲಂಘಿಸಿ ಅಕ್ರಮವಾಗಿ ನಡೆದುಕೊಂಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಅಂಬಾಜಿ ರಾವು ಗಂಭೀರ ಆರೋಪ ಮಾಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದರ್ಗಾದ ಅಧಿಕೃತ ಮುತ್ತವಲಿಯವರ ಅನುಮತಿ ಪತ್ರ (ಎನ್‌ಒಸಿ) ಪಡೆಯದೆ ಯಾವುದೇ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಬಾರದು ಎಂದು ಮುಖ್ಯ ಅಭಿಯಂತರರು ಹಾಗೂ ಕಾರ್ಯನಿರ್ವಾಹಕ ಅಭಿಯಂತರರು ಸ್ಪಷ್ಟ ನಿರ್ದೇಶನ ನೀಡಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಧಿಕ್ಕರಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ ಎಂದು ದೂರಿದರು. ಈ ಕುರಿತು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳಿಗೆ ಲಿಖಿತ ದೂರು ಮತ್ತು ಇ-ಮೇಲ್ ಮೂಲಕ ಮಾಹಿತಿ ನೀಡಿದ್ದರೂ, ಯಾವುದೇ ಕ್ರಮ ಕೈಗೊಳ್ಳದೇ ಸಂಬಂಧಪಟ್ಟ ಅಧಿಕಾರಿಗಳ ಪರ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಉರ್ಸ್ ಸಂದರ್ಭದಲ್ಲಿ ಯಾವುದೇ ಇಲಾಖೆಯ ಅನುಮತಿ ಪಡೆಯದೆ ಜೂಲಾಗಳು ಹಾಗೂ ವ್ಯಾಪಾರ ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದವು. ಆರಂಭದಲ್ಲಿ ಎಲ್ಲಾ ಅಗತ್ಯ ಅನುಮತಿಗಳು ಪಡೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಆದರೆ ನಂತರ ವಿವಿಧ ಇಲಾಖೆಗಳ ಮಾಹಿತಿಯನ್ನು ಸಂಗ್ರಹಿಸಿದಾಗ ಯಾವುದೇ ಅನುಮತಿ ನೀಡಿಲ್ಲ ಹಾಗೂ ಸರ್ಕಾರದ ಖಜಾನೆಗೆ ನಿಗದಿತ ಶುಲ್ಕವೂ ಪಾವತಿಯಾಗಿಲ್ಲ ಎಂಬುದು ಬಹಿರಂಗಗೊಂಡ ಹಿನ್ನೆಲೆಯಲ್ಲಿ ರಾತ್ರಿ ಅಕ್ರಮ ವ್ಯಾಪಾರ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಯಿತು ಎಂದು ತಿಳಿಸಿದರು. ಭ್ರಷ್ಟಾಚಾರದ ಆರೋಪ ಎದುರಿಸಿದ್ದ ಅಧಿಕಾರಿಗೆ ಮತ್ತೆ ರಾಯಚೂರಿನಲ್ಲೇ ಪದೋನ್ನತಿಯೊಂದಿಗೆ ನೇಮಕ ನೀಡಿರುವುದು ಸಾರ್ವಜನಿಕರ ದುರಾದೃಷ್ಟಕರ ಸಂಗತಿಯಾಗಿದೆ ಎಂದು ಆರೋಪಿಸಿದ ಅವರು, ಇಂತಹ ಅಧಿಕಾರಿಗಳನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು. ಪ್ರಕರಣವನ್ನು ಸ್ವತಂತ್ರ ಹಾಗೂ ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ, ಮೇಲಾಧಿಕಾರಿಗಳ ಆದೇಶ ಉಲ್ಲಂಘಿಸಿದ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಇಲಾಖಾ ಹಾಗೂ ಕಾನೂನು ಕ್ರಮ ಜರುಗಿಸಬೇಕು. ಅನುಮತಿ ಇಲ್ಲದೆ ವ್ಯಾಪಾರ ನಡೆಸಲು ಅವಕಾಶ ನೀಡಿದ ಅಧಿಕಾರಿಗಳ ಪಾತ್ರವನ್ನೂ ತನಿಖೆ ನಡೆಸಿ, ಕರ್ತವ್ಯಲೋಪ ಎಸಗಿದ ಎಲ್ಲ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಸೂದ್ ಅಲಿ, ಮೊಹಮ್ಮದ್ ಅಲೀಂ ಹಾಗೂ ರಘು ನನ್ನೋರೆ ಉಪಸ್ಥಿತರಿದ್ದರು.
    1
    ಅಕ್ರಮ ವಿದ್ಯುತ್ ಸಂಪರ್ಕ ನೀಡಿದ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆರೋಪ
ರಾಯಚೂರು, ಜು.31: ಹಜರತ್ ಸೈಯದ್ ಶಾ ಶಮ್ಸ್ ಆಲಂ ಹುಸೈನಿ ದರ್ಗಾ ಉರ್ಸ್–2026ಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡುವಲ್ಲಿ ಜೆಸ್ಕಾಂ ಅಧಿಕಾರಿಗಳು ಇಲಾಖೆಯ ಮೇಲಾಧಿಕಾರಿಗಳ ಲಿಖಿತ ಆದೇಶಗಳನ್ನು ಉಲ್ಲಂಘಿಸಿ ಅಕ್ರಮವಾಗಿ ನಡೆದುಕೊಂಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಅಂಬಾಜಿ ರಾವು ಗಂಭೀರ ಆರೋಪ ಮಾಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದರ್ಗಾದ ಅಧಿಕೃತ ಮುತ್ತವಲಿಯವರ ಅನುಮತಿ ಪತ್ರ (ಎನ್‌ಒಸಿ) ಪಡೆಯದೆ ಯಾವುದೇ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಬಾರದು ಎಂದು ಮುಖ್ಯ ಅಭಿಯಂತರರು ಹಾಗೂ ಕಾರ್ಯನಿರ್ವಾಹಕ ಅಭಿಯಂತರರು ಸ್ಪಷ್ಟ ನಿರ್ದೇಶನ ನೀಡಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಧಿಕ್ಕರಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ ಎಂದು ದೂರಿದರು.
ಈ ಕುರಿತು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳಿಗೆ ಲಿಖಿತ ದೂರು ಮತ್ತು ಇ-ಮೇಲ್ ಮೂಲಕ ಮಾಹಿತಿ ನೀಡಿದ್ದರೂ, ಯಾವುದೇ ಕ್ರಮ ಕೈಗೊಳ್ಳದೇ ಸಂಬಂಧಪಟ್ಟ ಅಧಿಕಾರಿಗಳ ಪರ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉರ್ಸ್ ಸಂದರ್ಭದಲ್ಲಿ ಯಾವುದೇ ಇಲಾಖೆಯ ಅನುಮತಿ ಪಡೆಯದೆ ಜೂಲಾಗಳು ಹಾಗೂ ವ್ಯಾಪಾರ ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದವು. ಆರಂಭದಲ್ಲಿ ಎಲ್ಲಾ ಅಗತ್ಯ ಅನುಮತಿಗಳು ಪಡೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಆದರೆ ನಂತರ ವಿವಿಧ ಇಲಾಖೆಗಳ ಮಾಹಿತಿಯನ್ನು ಸಂಗ್ರಹಿಸಿದಾಗ ಯಾವುದೇ ಅನುಮತಿ ನೀಡಿಲ್ಲ ಹಾಗೂ ಸರ್ಕಾರದ ಖಜಾನೆಗೆ ನಿಗದಿತ ಶುಲ್ಕವೂ ಪಾವತಿಯಾಗಿಲ್ಲ ಎಂಬುದು ಬಹಿರಂಗಗೊಂಡ ಹಿನ್ನೆಲೆಯಲ್ಲಿ ರಾತ್ರಿ ಅಕ್ರಮ ವ್ಯಾಪಾರ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಯಿತು ಎಂದು ತಿಳಿಸಿದರು.
ಭ್ರಷ್ಟಾಚಾರದ ಆರೋಪ ಎದುರಿಸಿದ್ದ ಅಧಿಕಾರಿಗೆ ಮತ್ತೆ ರಾಯಚೂರಿನಲ್ಲೇ ಪದೋನ್ನತಿಯೊಂದಿಗೆ ನೇಮಕ ನೀಡಿರುವುದು ಸಾರ್ವಜನಿಕರ ದುರಾದೃಷ್ಟಕರ ಸಂಗತಿಯಾಗಿದೆ ಎಂದು ಆರೋಪಿಸಿದ ಅವರು, ಇಂತಹ ಅಧಿಕಾರಿಗಳನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರಕರಣವನ್ನು ಸ್ವತಂತ್ರ ಹಾಗೂ ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ, ಮೇಲಾಧಿಕಾರಿಗಳ ಆದೇಶ ಉಲ್ಲಂಘಿಸಿದ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಇಲಾಖಾ ಹಾಗೂ ಕಾನೂನು ಕ್ರಮ ಜರುಗಿಸಬೇಕು. ಅನುಮತಿ ಇಲ್ಲದೆ ವ್ಯಾಪಾರ ನಡೆಸಲು ಅವಕಾಶ ನೀಡಿದ ಅಧಿಕಾರಿಗಳ ಪಾತ್ರವನ್ನೂ ತನಿಖೆ ನಡೆಸಿ, ಕರ್ತವ್ಯಲೋಪ ಎಸಗಿದ ಎಲ್ಲ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಸೂದ್ ಅಲಿ, ಮೊಹಮ್ಮದ್ ಅಲೀಂ ಹಾಗೂ ರಘು ನನ್ನೋರೆ ಉಪಸ್ಥಿತರಿದ್ದರು.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    15 hrs ago
  • ಕೃಷ್ಣಾ ನದಿಗೆ 1.20 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ! ನದಿ ಪಾತ್ರದ ಜನರಿಗೆ ತುರ್ತು ಎಚ್ಚರಿಕೆ 🌊 ಕೃಷ್ಣಾ ನದಿಯಲ್ಲಿ ಭಾರೀ ಪ್ರವಾಹದ ಆತಂಕ! ಸುರಪುರ ಪೊಲೀಸರು ನೀಡಿದ ಎಚ್ಚರಿಕೆ ⚠️ ನದಿಗೆ ಇಳಿಯಬೇಡಿ! ಕೃಷ್ಣಾ ನದಿಗೆ ಅಪಾರ ನೀರು ಬಿಡುಗಡೆ 🚨 ಲಿಂಗದಹಳ್ಳಿ-ತಿಂಥಣಿ ಸೇರಿ ಹಲವು ಗ್ರಾಮಗಳಿಗೆ ಅಲರ್ಟ್! ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಏರಿಕೆ ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 1,20,000 ಕ್ಯೂಸೆಕ್‌ಗಿಂತ ಹೆಚ್ಚು ನೀರನ್ನು ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸುರಪುರ ಪೊಲೀಸ್ ಠಾಣೆ ವತಿಯಿಂದ ನದಿ ಪಾತ್ರದ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ ಎಚ್ಚರಿಕೆ ನೀಡಲಾಗಿದೆ. ಲಿಂಗದಹಳ್ಳಿ, ಬಂಡೊಳ್ಳಿ, ದಾದಲಾಪುರ, ತಿಂಥಣಿ, ದೇವಾಪುರ, ಮುಷ್ಟಹಳ್ಳಿ, ಶೆಳ್ಳಿ, ಅಡ್ಡೊಡಿ, ಹೆಮ್ಮಡಿ, ಕರ್ನಾಳ, ಬೇವಿನಹಾಳ ಹಾಗೂ ಯಮನೂರು ಸೇರಿದಂತೆ ಹಲವು ಗ್ರಾಮಗಳ ಜನರು ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ. ನದಿಯಲ್ಲಿ ಈಜುವುದು, ಸ್ನಾನ ಮಾಡುವುದು, ಮೀನುಗಾರಿಕೆ ನಡೆಸುವುದು ಹಾಗೂ ಸೆಲ್ಫಿ ತೆಗೆಯಲು ನದಿ ದಂಡೆಗೆ ತೆರಳುವುದನ್ನು ತಪ್ಪಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಇಂತಹ ತಾಜಾ ಹಾಗೂ ನಿಖರ ಸುದ್ದಿಗಳಿಗಾಗಿ ASN News24 Kannada ಅನ್ನು ಫಾಲೋ ಮಾಡಿ. 🏷️ #KrishnaRiver #FloodAlert #KarnatakaNews #Surpur #Yadgir #NarayanpurDam #BasavaSagara #BreakingNews #KannadaNews #FloodWarning #KrishnaFlood #ASNNews24Kannada #Karnataka #ViralNews #LatestNews
    1
    ಕೃಷ್ಣಾ ನದಿಗೆ 1.20 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ! ನದಿ ಪಾತ್ರದ ಜನರಿಗೆ ತುರ್ತು ಎಚ್ಚರಿಕೆ
🌊 ಕೃಷ್ಣಾ ನದಿಯಲ್ಲಿ ಭಾರೀ ಪ್ರವಾಹದ ಆತಂಕ! ಸುರಪುರ ಪೊಲೀಸರು ನೀಡಿದ ಎಚ್ಚರಿಕೆ
⚠️ ನದಿಗೆ ಇಳಿಯಬೇಡಿ! ಕೃಷ್ಣಾ ನದಿಗೆ ಅಪಾರ ನೀರು ಬಿಡುಗಡೆ
🚨 ಲಿಂಗದಹಳ್ಳಿ-ತಿಂಥಣಿ ಸೇರಿ ಹಲವು ಗ್ರಾಮಗಳಿಗೆ ಅಲರ್ಟ್! ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಏರಿಕೆ
ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 1,20,000 ಕ್ಯೂಸೆಕ್‌ಗಿಂತ ಹೆಚ್ಚು ನೀರನ್ನು ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸುರಪುರ ಪೊಲೀಸ್ ಠಾಣೆ ವತಿಯಿಂದ ನದಿ ಪಾತ್ರದ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ ಎಚ್ಚರಿಕೆ ನೀಡಲಾಗಿದೆ.
ಲಿಂಗದಹಳ್ಳಿ, ಬಂಡೊಳ್ಳಿ, ದಾದಲಾಪುರ, ತಿಂಥಣಿ, ದೇವಾಪುರ, ಮುಷ್ಟಹಳ್ಳಿ, ಶೆಳ್ಳಿ, ಅಡ್ಡೊಡಿ, ಹೆಮ್ಮಡಿ, ಕರ್ನಾಳ, ಬೇವಿನಹಾಳ ಹಾಗೂ ಯಮನೂರು ಸೇರಿದಂತೆ ಹಲವು ಗ್ರಾಮಗಳ ಜನರು ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.
ನದಿಯಲ್ಲಿ ಈಜುವುದು, ಸ್ನಾನ ಮಾಡುವುದು, ಮೀನುಗಾರಿಕೆ ನಡೆಸುವುದು ಹಾಗೂ ಸೆಲ್ಫಿ ತೆಗೆಯಲು ನದಿ ದಂಡೆಗೆ ತೆರಳುವುದನ್ನು ತಪ್ಪಿಸುವಂತೆ ಪೊಲೀಸರು ಸೂಚಿಸಿದ್ದಾರೆ.
ಇಂತಹ ತಾಜಾ ಹಾಗೂ ನಿಖರ ಸುದ್ದಿಗಳಿಗಾಗಿ ASN News24 Kannada ಅನ್ನು ಫಾಲೋ ಮಾಡಿ.
🏷️
#KrishnaRiver #FloodAlert #KarnatakaNews #Surpur #Yadgir #NarayanpurDam #BasavaSagara #BreakingNews #KannadaNews #FloodWarning #KrishnaFlood #ASNNews24Kannada #Karnataka #ViralNews #LatestNews
    user_AsnNews24Kannada
    AsnNews24Kannada
    Local News Reporter Shorapur, Yadgir•
    22 hrs ago
  • ಕುರುಕುಂದದ ಆಗ್ರೋ ಕೇಂದ್ರ ವಿರುದ್ಧ ಕ್ರಮಕ್ಕೆ ರೈತ ಸಂಘ ಆಗ್ರಹ ಯಾದಗಿರಿ, ಆ. 1: ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಕುರುಕುಂದ ಗ್ರಾಮದ ದಂಡಗುಂಡ ಬಸವೇಶ್ವರ ಆಗ್ರೋ ಕೇಂದ್ರದ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘದ ಯಾದಗಿರಿ ಜಿಲ್ಲಾ ಸಮಿತಿಯು ಶಿಸ್ತು ಕ್ರಮ ಕೈಗೊಂಡು ಅಂಗಡಿ ಪರವಾನಗಿಯನ್ನು (ಲೈಸೆನ್ಸ್) ರದ್ದುಪಡಿಸುವಂತೆ ಸಂಬಂಧಿತ ಅಧಿಕಾರಿಗಳನ್ನು ಒತ್ತಾಯಿಸಿದೆ. ಆಗ್ರೋ ಕೇಂದ್ರದಲ್ಲಿ ಕೃಷಿ ಉತ್ಪನ್ನಗಳನ್ನು ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ)ಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಸಂಘ ಆರೋಪಿಸಿದೆ. ಅಲ್ಲದೆ, "ಬೇಕಿದ್ದರೆ ಖರೀದಿಸಿ, ಇಲ್ಲದಿದ್ದರೆ ಹೋಗಿ" ಎಂದು ಹೇಳುತ್ತಾ ಕೃತಕ ಅಭಾವ ಸೃಷ್ಟಿಸಿ ರೈತರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ದೂರಿದೆ. ಈ ಕುರಿತು ಸಹಾಯಕ ಕೃಷಿ ನಿರ್ದೇಶಕರು, ಶಹಾಪುರ ಅವರು ತಕ್ಷಣ ಮಧ್ಯಪ್ರವೇಶಿಸಿ ಪ್ರಕರಣದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಬೇಕು ಎಂದು ಸಂಘದ ಜಿಲ್ಲಾ ಸಮಿತಿ ಆಗ್ರಹಿಸಿದೆ. ಒಂದು ವೇಳೆ ಅಧಿಕಾರಿಗಳು ಈ ವಿಷಯವನ್ನು ನಿರ್ಲಕ್ಷಿಸಿದರೆ ದಿಢೀರ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಯಾದಗಿರಿ ಜಿಲ್ಲಾ ಕಾರ್ಯದರ್ಶಿ ಭೀಮರಾಯ ಪೂಜಾರಿ ಎಚ್ಚರಿಕೆ ನೀಡಿದ್ದಾರೆ. ಕುರುಕುಂದದ ಆಗ್ರೋ ಕೇಂದ್ರ ವಿರುದ್ಧ ಕ್ರಮಕ್ಕೆ ರೈತ ಸಂಘ ಆಗ್ರಹ ಯಾದಗಿರಿ, ಆ. 1: ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಕುರುಕುಂದ ಗ್ರಾಮದ ದಂಡಗುಂಡ ಬಸವೇಶ್ವರ ಆಗ್ರೋ ಕೇಂದ್ರದ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘದ ಯಾದಗಿರಿ ಜಿಲ್ಲಾ ಸಮಿತಿಯು ಶಿಸ್ತು ಕ್ರಮ ಕೈಗೊಂಡು ಅಂಗಡಿ ಪರವಾನಗಿಯನ್ನು (ಲೈಸೆನ್ಸ್) ರದ್ದುಪಡಿಸುವಂತೆ ಸಂಬಂಧಿತ ಅಧಿಕಾರಿಗಳನ್ನು ಒತ್ತಾಯಿಸಿದೆ. ಆಗ್ರೋ ಕೇಂದ್ರದಲ್ಲಿ ಕೃಷಿ ಉತ್ಪನ್ನಗಳನ್ನು ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ)ಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಸಂಘ ಆರೋಪಿಸಿದೆ. ಅಲ್ಲದೆ, "ಬೇಕಿದ್ದರೆ ಖರೀದಿಸಿ, ಇಲ್ಲದಿದ್ದರೆ ಹೋಗಿ" ಎಂದು ಹೇಳುತ್ತಾ ಕೃತಕ ಅಭಾವ ಸೃಷ್ಟಿಸಿ ರೈತರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ದೂರಿದೆ. ಈ ಕುರಿತು ಸಹಾಯಕ ಕೃಷಿ ನಿರ್ದೇಶಕರು, ಶಹಾಪುರ ಅವರು ತಕ್ಷಣ ಮಧ್ಯಪ್ರವೇಶಿಸಿ ಪ್ರಕರಣದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಬೇಕು ಎಂದು ಸಂಘದ ಜಿಲ್ಲಾ ಸಮಿತಿ ಆಗ್ರಹಿಸಿದೆ. ಒಂದು ವೇಳೆ ಅಧಿಕಾರಿಗಳು ಈ ವಿಷಯವನ್ನು ನಿರ್ಲಕ್ಷಿಸಿದರೆ ದಿಢೀರ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಯಾದಗಿರಿ ಜಿಲ್ಲಾ ಕಾರ್ಯದರ್ಶಿ ಭೀಮರಾಯ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.
    1
    ಕುರುಕುಂದದ ಆಗ್ರೋ ಕೇಂದ್ರ ವಿರುದ್ಧ ಕ್ರಮಕ್ಕೆ ರೈತ ಸಂಘ ಆಗ್ರಹ

ಯಾದಗಿರಿ, ಆ. 1: ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಕುರುಕುಂದ ಗ್ರಾಮದ ದಂಡಗುಂಡ ಬಸವೇಶ್ವರ ಆಗ್ರೋ ಕೇಂದ್ರದ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘದ ಯಾದಗಿರಿ ಜಿಲ್ಲಾ ಸಮಿತಿಯು ಶಿಸ್ತು ಕ್ರಮ ಕೈಗೊಂಡು ಅಂಗಡಿ ಪರವಾನಗಿಯನ್ನು (ಲೈಸೆನ್ಸ್) ರದ್ದುಪಡಿಸುವಂತೆ ಸಂಬಂಧಿತ ಅಧಿಕಾರಿಗಳನ್ನು ಒತ್ತಾಯಿಸಿದೆ.

ಆಗ್ರೋ ಕೇಂದ್ರದಲ್ಲಿ ಕೃಷಿ ಉತ್ಪನ್ನಗಳನ್ನು ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ)ಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಸಂಘ ಆರೋಪಿಸಿದೆ. ಅಲ್ಲದೆ, "ಬೇಕಿದ್ದರೆ ಖರೀದಿಸಿ, ಇಲ್ಲದಿದ್ದರೆ ಹೋಗಿ" ಎಂದು ಹೇಳುತ್ತಾ ಕೃತಕ ಅಭಾವ ಸೃಷ್ಟಿಸಿ ರೈತರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ದೂರಿದೆ.

ಈ ಕುರಿತು ಸಹಾಯಕ ಕೃಷಿ ನಿರ್ದೇಶಕರು, ಶಹಾಪುರ ಅವರು ತಕ್ಷಣ ಮಧ್ಯಪ್ರವೇಶಿಸಿ ಪ್ರಕರಣದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಬೇಕು ಎಂದು ಸಂಘದ ಜಿಲ್ಲಾ ಸಮಿತಿ ಆಗ್ರಹಿಸಿದೆ.

ಒಂದು ವೇಳೆ ಅಧಿಕಾರಿಗಳು ಈ ವಿಷಯವನ್ನು ನಿರ್ಲಕ್ಷಿಸಿದರೆ ದಿಢೀರ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಯಾದಗಿರಿ ಜಿಲ್ಲಾ ಕಾರ್ಯದರ್ಶಿ ಭೀಮರಾಯ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.


ಕುರುಕುಂದದ ಆಗ್ರೋ ಕೇಂದ್ರ ವಿರುದ್ಧ ಕ್ರಮಕ್ಕೆ ರೈತ ಸಂಘ ಆಗ್ರಹ
ಯಾದಗಿರಿ, ಆ. 1: ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಕುರುಕುಂದ ಗ್ರಾಮದ ದಂಡಗುಂಡ ಬಸವೇಶ್ವರ ಆಗ್ರೋ ಕೇಂದ್ರದ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘದ ಯಾದಗಿರಿ ಜಿಲ್ಲಾ ಸಮಿತಿಯು ಶಿಸ್ತು ಕ್ರಮ ಕೈಗೊಂಡು ಅಂಗಡಿ ಪರವಾನಗಿಯನ್ನು (ಲೈಸೆನ್ಸ್) ರದ್ದುಪಡಿಸುವಂತೆ ಸಂಬಂಧಿತ ಅಧಿಕಾರಿಗಳನ್ನು ಒತ್ತಾಯಿಸಿದೆ.
ಆಗ್ರೋ ಕೇಂದ್ರದಲ್ಲಿ ಕೃಷಿ ಉತ್ಪನ್ನಗಳನ್ನು ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ)ಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಸಂಘ ಆರೋಪಿಸಿದೆ. ಅಲ್ಲದೆ, "ಬೇಕಿದ್ದರೆ ಖರೀದಿಸಿ, ಇಲ್ಲದಿದ್ದರೆ ಹೋಗಿ" ಎಂದು ಹೇಳುತ್ತಾ ಕೃತಕ ಅಭಾವ ಸೃಷ್ಟಿಸಿ ರೈತರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ದೂರಿದೆ.
ಈ ಕುರಿತು ಸಹಾಯಕ ಕೃಷಿ ನಿರ್ದೇಶಕರು, ಶಹಾಪುರ ಅವರು ತಕ್ಷಣ ಮಧ್ಯಪ್ರವೇಶಿಸಿ ಪ್ರಕರಣದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಬೇಕು ಎಂದು ಸಂಘದ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಒಂದು ವೇಳೆ ಅಧಿಕಾರಿಗಳು ಈ ವಿಷಯವನ್ನು ನಿರ್ಲಕ್ಷಿಸಿದರೆ ದಿಢೀರ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಯಾದಗಿರಿ ಜಿಲ್ಲಾ ಕಾರ್ಯದರ್ಶಿ ಭೀಮರಾಯ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.
    user_YADGIR NEWS
    YADGIR NEWS
    Video Creator ಯಾದಗಿರಿ, ಯಾದಗಿರಿ, ಕರ್ನಾಟಕ•
    18 min ago
  • ಕಲ್ಯಾಣ ವಾರ್ತೆ - "ನೀರಿನ ಹರಿವು ಹೆಚ್ಚುತ್ತಿರುವದರಿಂದ ನದಿ ತೀರಕ್ಕೆ ತೆರಳದಂತೆ ಸಾರ್ವಜನಿಕರಿಗೆ ಮುದ್ನಾಳ ಮನವಿ" 'ಭೀಮಾನದಿ ತೀರಕ್ಕೆ ಉಮೇಶ್ ಮುದ್ನಾಳ ಭೇಟಿ' ಕಲ್ಯಾಣ ವಾರ್ತೆ -ಯಾದಗಿರಿ ಮಹಾರಾಷ್ಟ್ರದಪಶ್ಚೀಮ ಘಟ್ಟಗಳ ಪ್ರದೇಶದಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿರುವ ಪರಿಣಾಮ ಭೀಮಾನದಿಗೆ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದ್ದು ನದಿ ತೀರಕ್ಕೆ ಶುಕ್ರವಾರ ಸಾಮಾಜಿಕ ಕಾರ್ಯಕರ್ತ ಉಮೇಶ್ ಮುದ್ನಾಳ ಅವರು ಭೇಟಿ ನೀಡಿದರು. ಭೀಮಾನದಿ ಹಾಗೂ ಕೃಷ್ಣಾ ನದಿಗೆ ಹೆಚ್ಚಿನ ನೀರು ಹರಿದು ಬರುತ್ತಿದೆ.ಜಿಲ್ಲಾಡಳಿತ ನದಿ ತೀರದ ಗ್ರಾಮದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.ಮೀನುಗಾರರು,ಸೇರಿ ಯಾರು ನದಿ ತೀರಕ್ಕೆ ತೆರಳಬಾದರೆಂದು ಮುದ್ನಾಳ ಮನವಿ ಮಾಡಿದ್ದಾರೆ.
    1
    ಕಲ್ಯಾಣ ವಾರ್ತೆ -
"ನೀರಿನ ಹರಿವು ಹೆಚ್ಚುತ್ತಿರುವದರಿಂದ ನದಿ ತೀರಕ್ಕೆ ತೆರಳದಂತೆ  ಸಾರ್ವಜನಿಕರಿಗೆ ಮುದ್ನಾಳ ಮನವಿ"
'ಭೀಮಾನದಿ ತೀರಕ್ಕೆ ಉಮೇಶ್ ಮುದ್ನಾಳ ಭೇಟಿ'
ಕಲ್ಯಾಣ ವಾರ್ತೆ -ಯಾದಗಿರಿ
ಮಹಾರಾಷ್ಟ್ರದಪಶ್ಚೀಮ ಘಟ್ಟಗಳ ಪ್ರದೇಶದಲ್ಲಿ  ಭಾರೀ ಪ್ರಮಾಣದ ಮಳೆಯಾಗುತ್ತಿರುವ ಪರಿಣಾಮ ಭೀಮಾನದಿಗೆ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದ್ದು ನದಿ ತೀರಕ್ಕೆ ಶುಕ್ರವಾರ  ಸಾಮಾಜಿಕ ಕಾರ್ಯಕರ್ತ ಉಮೇಶ್ ಮುದ್ನಾಳ ಅವರು  ಭೇಟಿ ನೀಡಿದರು.
ಭೀಮಾನದಿ ಹಾಗೂ ಕೃಷ್ಣಾ ನದಿಗೆ ಹೆಚ್ಚಿನ ನೀರು ಹರಿದು ಬರುತ್ತಿದೆ.ಜಿಲ್ಲಾಡಳಿತ ನದಿ ತೀರದ ಗ್ರಾಮದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.ಮೀನುಗಾರರು,ಸೇರಿ ಯಾರು ನದಿ ತೀರಕ್ಕೆ ತೆರಳಬಾದರೆಂದು ಮುದ್ನಾಳ ಮನವಿ ಮಾಡಿದ್ದಾರೆ.
    user_DR. S.S. NAYAK
    DR. S.S. NAYAK
    Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
    16 hrs ago
  • ರಾಜ್ಯ ಬಿಜೆಪಿ ತಂಡದಿಂದ ಬರ ವೀಕ್ಷಣೆ. ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೈ ಕೊಟ್ಟದ್ದರಿಂದ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿ ರೈತಾಪಿ ಜನರು ಸಂಕಷ್ಟದಲ್ಲಿ ಇರುವುದರಿಂದ ಅವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ದೃಷ್ಟಿಯಿಂದ ರಾಜ್ಯ ಬಿಜೆಪಿ ಪಕ್ಷವು ಮುಖಂಡರ ವಿವಿಧ ತಂಡಗಳನ್ನು ರಚಿಸಿ , ಬರ ವೀಕ್ಷಣೆ ಹಾಗೂ ರೈತರಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ನಿಮಿತ್ಯವಾಗಿ ಗುರುವಾರ ವಿಧಾನ ಪರಿಷತ್ತಿನ ಸದಸ್ಯರಾದ ಎನ್ ರವಿಕುಮಾರ, ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾದ ಎ ಎಸ್ ಪಾಟೀಲ್ ನಡಹಳ್ಳಿ ಅವರು ಪಕ್ಷದ ಮುಖಂಡರೊಂದಿಗೆ ತಾಳಿಕೋಟಿ ತಾಲೂಕಿನ ಮೂಕಿಹಾಳ ಹಾಗೂ ಮಿಣಜಗಿ ಗ್ರಾಮಗಳಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ಅವರೊಂದಿಗೆ ಸಂವಾದ ನಡೆಸಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿ ಅವರಲ್ಲಿ ಧೈರ್ಯ ತುಂಬಿದರು. ರಾಜ್ಯ ಬಿಜೆಪಿ ತಂಡದಿಂದ ಬರ ವೀಕ್ಷಣೆ. ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೈ ಕೊಟ್ಟದ್ದರಿಂದ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿ ರೈತಾಪಿ ಜನರು ಸಂಕಷ್ಟದಲ್ಲಿ ಇರುವುದರಿಂದ ಅವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ದೃಷ್ಟಿಯಿಂದ ರಾಜ್ಯ ಬಿಜೆಪಿ ಪಕ್ಷವು ಮುಖಂಡರ ವಿವಿಧ ತಂಡಗಳನ್ನು ರಚಿಸಿ , ಬರ ವೀಕ್ಷಣೆ ಹಾಗೂ ರೈತರಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ನಿಮಿತ್ಯವಾಗಿ ಗುರುವಾರ ವಿಧಾನ ಪರಿಷತ್ತಿನ ಸದಸ್ಯರಾದ ಎನ್ ರವಿಕುಮಾರ, ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾದ ಎ ಎಸ್ ಪಾಟೀಲ್ ನಡಹಳ್ಳಿ ಅವರು ಪಕ್ಷದ ಮುಖಂಡರೊಂದಿಗೆ ತಾಳಿಕೋಟಿ ತಾಲೂಕಿನ ಮೂಕಿಹಾಳ ಹಾಗೂ ಮಿಣಜಗಿ ಗ್ರಾಮಗಳಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ಅವರೊಂದಿಗೆ ಸಂವಾದ ನಡೆಸಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿ ಅವರಲ್ಲಿ ಧೈರ್ಯ ತುಂಬಿದರು. ನಂತರ ಪಕ್ಷದ ಮುಖಂಡರ ತಂಡವು ತಾಳಿಕೋಟಿ ಮಾರ್ಗವಾಗಿ ದೇವರ ಹಿಪ್ಪರಗಿ ಮತಕ್ಷೇತ್ರದ ಗ್ರಾಮಗಳಿಗೆ ತೆರಳುವ ಸಂದರ್ಭದಲ್ಲಿ ತಾಳಿಕೋಟಿ ಪಟ್ಟಣದ ಶ್ರೀ ಬಸವೇಶ್ವರ ವೃತ್ತದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಮಯದಲ್ಲಿ ಪಕ್ಷದ ಮುಖಂಡರಾದ ಕಾಶಿನಾಥ್ ಮುರಾಳ, ಎಂ.ಎಸ್.ಸರಶಟ್ಟಿ, ವಾಸುದೇವ ಹೆಬಸೂರ, ಮಾನಸಿಂಗ್ ಕೊಕಟನೂರ, ಶಿವಶಂಕರ ಹಿರೇಮಠ, ಪರಶುರಾಮ ಕಟ್ಟಿಮನಿ, ರಾಘವೇಂದ್ರ ಮಾನೆ ಹಾಗೂ ರೈತರು ಇದ್ದರು.
    1
    ರಾಜ್ಯ ಬಿಜೆಪಿ ತಂಡದಿಂದ ಬರ ವೀಕ್ಷಣೆ. ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೈ ಕೊಟ್ಟದ್ದರಿಂದ  ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿ ರೈತಾಪಿ ಜನರು ಸಂಕಷ್ಟದಲ್ಲಿ ಇರುವುದರಿಂದ  ಅವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ದೃಷ್ಟಿಯಿಂದ ರಾಜ್ಯ ಬಿಜೆಪಿ ಪಕ್ಷವು ಮುಖಂಡರ ವಿವಿಧ ತಂಡಗಳನ್ನು ರಚಿಸಿ , ಬರ ವೀಕ್ಷಣೆ ಹಾಗೂ ರೈತರಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ನಿಮಿತ್ಯವಾಗಿ ಗುರುವಾರ ವಿಧಾನ ಪರಿಷತ್ತಿನ ಸದಸ್ಯರಾದ ಎನ್ ರವಿಕುಮಾರ, ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾದ ಎ ಎಸ್ ಪಾಟೀಲ್ ನಡಹಳ್ಳಿ  ಅವರು ಪಕ್ಷದ ಮುಖಂಡರೊಂದಿಗೆ ತಾಳಿಕೋಟಿ ತಾಲೂಕಿನ ಮೂಕಿಹಾಳ  ಹಾಗೂ ಮಿಣಜಗಿ ಗ್ರಾಮಗಳಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ಅವರೊಂದಿಗೆ ಸಂವಾದ ನಡೆಸಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿ ಅವರಲ್ಲಿ ಧೈರ್ಯ ತುಂಬಿದರು. 
ರಾಜ್ಯ ಬಿಜೆಪಿ ತಂಡದಿಂದ ಬರ ವೀಕ್ಷಣೆ. ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೈ ಕೊಟ್ಟದ್ದರಿಂದ  ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿ ರೈತಾಪಿ ಜನರು ಸಂಕಷ್ಟದಲ್ಲಿ ಇರುವುದರಿಂದ  ಅವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ದೃಷ್ಟಿಯಿಂದ ರಾಜ್ಯ ಬಿಜೆಪಿ ಪಕ್ಷವು ಮುಖಂಡರ ವಿವಿಧ ತಂಡಗಳನ್ನು ರಚಿಸಿ , ಬರ ವೀಕ್ಷಣೆ ಹಾಗೂ ರೈತರಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ನಿಮಿತ್ಯವಾಗಿ ಗುರುವಾರ ವಿಧಾನ ಪರಿಷತ್ತಿನ ಸದಸ್ಯರಾದ ಎನ್ ರವಿಕುಮಾರ, ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾದ ಎ ಎಸ್ ಪಾಟೀಲ್ ನಡಹಳ್ಳಿ  ಅವರು ಪಕ್ಷದ ಮುಖಂಡರೊಂದಿಗೆ ತಾಳಿಕೋಟಿ ತಾಲೂಕಿನ ಮೂಕಿಹಾಳ  ಹಾಗೂ ಮಿಣಜಗಿ ಗ್ರಾಮಗಳಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ಅವರೊಂದಿಗೆ ಸಂವಾದ ನಡೆಸಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿ ಅವರಲ್ಲಿ ಧೈರ್ಯ ತುಂಬಿದರು. ನಂತರ ಪಕ್ಷದ ಮುಖಂಡರ ತಂಡವು  ತಾಳಿಕೋಟಿ ಮಾರ್ಗವಾಗಿ ದೇವರ ಹಿಪ್ಪರಗಿ ಮತಕ್ಷೇತ್ರದ ಗ್ರಾಮಗಳಿಗೆ ತೆರಳುವ ಸಂದರ್ಭದಲ್ಲಿ ತಾಳಿಕೋಟಿ  ಪಟ್ಟಣದ ಶ್ರೀ ಬಸವೇಶ್ವರ ವೃತ್ತದಲ್ಲಿ  ಪಕ್ಷದ ಮುಖಂಡರು ಕಾರ್ಯಕರ್ತರು ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಮಯದಲ್ಲಿ ಪಕ್ಷದ ಮುಖಂಡರಾದ ಕಾಶಿನಾಥ್ ಮುರಾಳ, ಎಂ.ಎಸ್.ಸರಶಟ್ಟಿ, ವಾಸುದೇವ ಹೆಬಸೂರ, ಮಾನಸಿಂಗ್ ಕೊಕಟನೂರ, ಶಿವಶಂಕರ ಹಿರೇಮಠ, ಪರಶುರಾಮ ಕಟ್ಟಿಮನಿ, ರಾಘವೇಂದ್ರ ಮಾನೆ ಹಾಗೂ ರೈತರು ಇದ್ದರು.
    user_ಸಮೃದ್ಧ ಕರ್ನಾಟಕ ನ್ಯೂಸ್
    ಸಮೃದ್ಧ ಕರ್ನಾಟಕ ನ್ಯೂಸ್
    Voice of people ತಾಳಿಕೋಟಿ, ವಿಜಯಪುರ, ಕರ್ನಾಟಕ•
    17 hrs ago
  • ಸೂಮವಾರ ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಶಿವಲಿಂಗೇಗೌಡ ಹೇಳಿಕೆ
    1
    ಸೂಮವಾರ ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಶಿವಲಿಂಗೇಗೌಡ ಹೇಳಿಕೆ
    user_Sharanugouda Patil
    Sharanugouda Patil
    Muddebihal, Vijayapura•
    12 hrs ago
  • ರಾಯಚೂರು ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ರೈತರು ಪತ್ರಿಕಾ ಭವನದಲ್ಲಿ ಆಗ್ರಹ ರಾಯಚೂರು, ಜು.31: ಮುಂಗಾರು ವೈಫಲ್ಯದಿಂದ ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರ ಹಿತದೃಷ್ಟಿಯಿಂದ ರಾಯಚೂರು ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಜಿಲ್ಲೆ ಎಂದು ಘೋಷಿಸಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತ ಹೋರಾಟಗಾರ ಹಾಗೂ ಸಂಯುಕ್ತ ಕಿಸಾನ್ ಪಾರ್ಟಿ ರಾಜ್ಯಾಧ್ಯಕ್ಷ ಚಾಮರಾಸ ಮಾಲಿಪಾಟೀಲ್ ಒತ್ತಾಯಿಸಿದರು. ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಹಲವು ತಾಲೂಕುಗಳಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ತೀವ್ರ ಹಿನ್ನಡೆಯಾಗಿವೆ. ಜಿಲ್ಲೆಯಲ್ಲಿ ಶೇ.38ರಷ್ಟು ಮಾತ್ರ ಬಿತ್ತನೆ ನಡೆದಿದ್ದು, ಅದರಲ್ಲಿ ಶೇ.19ರಷ್ಟು ಬೆಳೆ ನಷ್ಟವಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ ರೈತರು ಬೆಳೆ ಒಣಗುತ್ತಿರುವುದರಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮೀಣ ಕೂಲಿ ಕಾರ್ಮಿಕರು ಸಹ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು. ಹತ್ತಿ ಸೇರಿದಂತೆ ಅಲ್ಪಾವಧಿ ಬೆಳೆಗಳು ಒಣಗುತ್ತಿದ್ದು, ಜಲಾಶಯಗಳಲ್ಲೂ ನೀರಿನ ಸಂಗ್ರಹಣೆ ಕುಸಿದಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ರೈತರಿಗೆ ರಸಗೊಬ್ಬರ ವಿತರಣೆಯಲ್ಲಿ ಅವ್ಯವಹಾರ ನಡೆಯುತ್ತಿದೆಯಾದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹಲವು ಬಾರಿ ಹೋರಾಟ ಹಾಗೂ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಜೆಸ್ಕಾಂ ಮುಖ್ಯ ಇಂಜಿನಿಯರ್ ರೈತರ ಸಮಸ್ಯೆಗಳ ಕುರಿತು ಬೇಜವಾಬ್ದಾರಿಯುತ ಹೇಳಿಕೆ ನೀಡಿರುವುದನ್ನು ತೀವ್ರವಾಗಿ ಖಂಡಿಸಿದ ಅವರು, ರೈತರ ಮನವಿಗಳಿಗೆ ಯಾವುದೇ ಬೆಲೆ ನೀಡದ ಅಧಿಕಾರಿಗಳ ವರ್ತನೆ ಖಂಡನೀಯವಾಗಿದೆ. ಜನರ ತೆರಿಗೆ ಹಣದಿಂದ ವೇತನ ಪಡೆಯುವ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಭೂಪಾಲ್‌ನಲ್ಲಿ ಅಲ್ಲಾಪ್ರಭು ಸೇರಿದಂತೆ ಆರು ರೈತರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿದ ಅವರು, ನೀಟ್ ಅಕ್ರಮ ಸೇರಿದಂತೆ ದೇಶದ ಹಲವು ಗಂಭೀರ ಸಮಸ್ಯೆಗಳ ಬಗ್ಗೆ ಸರ್ಕಾರಗಳು ತಕ್ಷಣ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಗಾಂಧೀಜಿ ನೀಡಿದ್ದ "ಭಾರತ ಬಿಟ್ಟು ತೊಲಗಿ" ಘೋಷಣೆಯ ಮಾದರಿಯಲ್ಲಿ "ಭ್ರಷ್ಟ ಅಧಿಕಾರಿಗಳೇ, ಬಹುರಾಷ್ಟ್ರೀಯ ಕಂಪನಿಗಳೇ, ಭಾರತ ಬಿಟ್ಟು ತೊಲಗಿ" ಎಂಬ ಘೋಷಣೆಯೊಂದಿಗೆ ಆಗಸ್ಟ್ 10ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಂಯುಕ್ತ ಕಿಸಾನ್ ಪಾರ್ಟಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಘೋಷಿಸಿದರು. ಸುದ್ದಿಗೋಷ್ಠಿಯಲ್ಲಿ ಮಲ್ಲಣ್ಣ ದಿನ್ನಿ, ಮಲ್ಲಯ್ಯ ಚಂದ್ರಬಂಡ, ಬೂದೆಯ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    1
    ರಾಯಚೂರು ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ರೈತರು ಪತ್ರಿಕಾ ಭವನದಲ್ಲಿ ಆಗ್ರಹ
ರಾಯಚೂರು, ಜು.31: ಮುಂಗಾರು ವೈಫಲ್ಯದಿಂದ ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರ ಹಿತದೃಷ್ಟಿಯಿಂದ ರಾಯಚೂರು ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಜಿಲ್ಲೆ ಎಂದು ಘೋಷಿಸಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತ ಹೋರಾಟಗಾರ ಹಾಗೂ ಸಂಯುಕ್ತ ಕಿಸಾನ್ ಪಾರ್ಟಿ ರಾಜ್ಯಾಧ್ಯಕ್ಷ ಚಾಮರಾಸ ಮಾಲಿಪಾಟೀಲ್ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಹಲವು ತಾಲೂಕುಗಳಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ತೀವ್ರ ಹಿನ್ನಡೆಯಾಗಿವೆ. ಜಿಲ್ಲೆಯಲ್ಲಿ ಶೇ.38ರಷ್ಟು ಮಾತ್ರ ಬಿತ್ತನೆ ನಡೆದಿದ್ದು, ಅದರಲ್ಲಿ ಶೇ.19ರಷ್ಟು ಬೆಳೆ ನಷ್ಟವಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ ರೈತರು ಬೆಳೆ ಒಣಗುತ್ತಿರುವುದರಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮೀಣ ಕೂಲಿ ಕಾರ್ಮಿಕರು ಸಹ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಹತ್ತಿ ಸೇರಿದಂತೆ ಅಲ್ಪಾವಧಿ ಬೆಳೆಗಳು ಒಣಗುತ್ತಿದ್ದು, ಜಲಾಶಯಗಳಲ್ಲೂ ನೀರಿನ ಸಂಗ್ರಹಣೆ ಕುಸಿದಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತರಿಗೆ ರಸಗೊಬ್ಬರ ವಿತರಣೆಯಲ್ಲಿ ಅವ್ಯವಹಾರ ನಡೆಯುತ್ತಿದೆಯಾದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹಲವು ಬಾರಿ ಹೋರಾಟ ಹಾಗೂ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಜೆಸ್ಕಾಂ ಮುಖ್ಯ ಇಂಜಿನಿಯರ್ ರೈತರ ಸಮಸ್ಯೆಗಳ ಕುರಿತು ಬೇಜವಾಬ್ದಾರಿಯುತ ಹೇಳಿಕೆ ನೀಡಿರುವುದನ್ನು ತೀವ್ರವಾಗಿ ಖಂಡಿಸಿದ ಅವರು, ರೈತರ ಮನವಿಗಳಿಗೆ ಯಾವುದೇ ಬೆಲೆ ನೀಡದ ಅಧಿಕಾರಿಗಳ ವರ್ತನೆ ಖಂಡನೀಯವಾಗಿದೆ. ಜನರ ತೆರಿಗೆ ಹಣದಿಂದ ವೇತನ ಪಡೆಯುವ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಭೂಪಾಲ್‌ನಲ್ಲಿ ಅಲ್ಲಾಪ್ರಭು ಸೇರಿದಂತೆ ಆರು ರೈತರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿದ ಅವರು, ನೀಟ್ ಅಕ್ರಮ ಸೇರಿದಂತೆ ದೇಶದ ಹಲವು ಗಂಭೀರ ಸಮಸ್ಯೆಗಳ ಬಗ್ಗೆ ಸರ್ಕಾರಗಳು ತಕ್ಷಣ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಗಾಂಧೀಜಿ ನೀಡಿದ್ದ "ಭಾರತ ಬಿಟ್ಟು ತೊಲಗಿ" ಘೋಷಣೆಯ ಮಾದರಿಯಲ್ಲಿ "ಭ್ರಷ್ಟ ಅಧಿಕಾರಿಗಳೇ, ಬಹುರಾಷ್ಟ್ರೀಯ ಕಂಪನಿಗಳೇ, ಭಾರತ ಬಿಟ್ಟು ತೊಲಗಿ" ಎಂಬ ಘೋಷಣೆಯೊಂದಿಗೆ ಆಗಸ್ಟ್ 10ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಂಯುಕ್ತ ಕಿಸಾನ್ ಪಾರ್ಟಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಘೋಷಿಸಿದರು.
ಸುದ್ದಿಗೋಷ್ಠಿಯಲ್ಲಿ ಮಲ್ಲಣ್ಣ ದಿನ್ನಿ, ಮಲ್ಲಯ್ಯ ಚಂದ್ರಬಂಡ, ಬೂದೆಯ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    16 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.