ಜನಪ್ರತಿನಿಧಿಗಳ ನಿರ್ದೇಶನ ಜಾರಿಗೆ ಒತ್ತಾಯ: ಮಾನ್ವಿ ನಾಗರಿಕ ವೇದಿಕೆ ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ಮಾನ್ವಿ ಪಟ್ಟಣದಲ್ಲಿ ವತಿಯಿಂದ ನಡೆಯುತ್ತಿರುವ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಬಂಧಿತ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಮಾನ್ವಿ ನಾಗರಿಕ ಹಿತ ರಕ್ಷಣಾ ವೇದಿಕೆ ಆರೋಪಿಸಿದೆ. ಸಭೆಯಲ್ಲಿ ನಿರ್ದೇಶನ, ಆದರೆ ಜಾರಿಯಿಲ್ಲ : ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯ ರಾದ ಎನ್. ಎಸ್. ಬೋಸರಾಜು ಮತ್ತು ಮಾನ್ಸಿ ಶಾಸಕರಾದ ಶ್ರೀ ಜಿ. ಹಂಪಯ್ಯ ನಾಯಕ ಸಾಹುಕಾರ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ 8 ಪ್ರಮುಖ ಬೇಡಿಕೆಗಳ ಕುರಿತು ಚರ್ಚಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾ ಗಿತ್ತು. ಆದರೆ ಆ ನಿರ್ದೇಶನಗಳು ಇದುವರೆಗೆ ಜಾರಿಯಾಗಿಲ್ಲ ಎಂದು ವೇದಿಕೆ ತಿಳಿಸಿದೆ. ಆಟೋ ನಗರದಿಂದ ಹೌಸಿಂಗ್ ಬೋರ್ಡ್ ವರೆಗೆ 2002ರಲ್ಲಿ ಭೂಸ್ವಾ ಧೀನ ಮಾಡಿಕೊಂಡ ಜಾಗದಲ್ಲಿ ತಕ್ಷಣ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸರ್ವೇ ನಡೆಸಬೇಕು. ರಸ್ತೆ ಮಧ್ಯದಲ್ಲಿರುವ ಅಪಾಯಕಾರಿ ಹಾಗೂ ವಿಷಕಾರಿ ಮರಗಳನ್ನು ತೆರವುಗೊಳಿಸಬೇಕು. ರಸ್ತೆ ಅಗಲೀಕರಣ ಕಡಿಮೆ ಮಾಡಿರುವ ಸ್ಥಳಗಳನ್ನು ಮರುಪರಿಶೀಲಿಸಿ ಸರಿಪಡಿಸಬೇಕು. ಬಸವೇಶ್ವರ, ಅಂಬೇಡ್ಕರ್, ಗಾಂಧಿ ಜಿ, ವಾಲ್ಮೀಕಿ, ಮೇಜರ್ ಶಾನವಾ ಜ್ ಖಾನ್ ವೃತ್ತಗಳ ಅಗಲೀಕರಣ ಮತ್ತು ಸುಂದರೀಕರಣ ಕಾಮಗಾರಿ ಆರಂಭಿಸಬೇಕು. ವೈಜ್ಞಾನಿಕ ಡೈನೇ ಜ್ ವ್ಯವಸ್ಥೆ ನಿರ್ಮಿಸಿ ಮಳೆ ನೀರು ಸರಾಗವಾಗಿ ಮಾಡಬೇಕು. ಹರಿಯುವಂತೆ ಸಿಂಧನೂರು ಮಾದರಿಯಲ್ಲಿ ಭೂಗತ ವಿದ್ಯುತ್ ಕೇಬಲ್ ಅಳವಡಿಸಿ, ತೂಗು ತಂತಿ ತೆರವುಗೊಳಿಸಬೇಕು. ಕಾಮಗಾರಿಯ ಪ್ರತಿ ಹಂತದಲ್ಲೂ ನಾಗರಿಕ ವೇದಿಕೆಯೊಂದಿಗೆ ಸಮನ್ವಯ ಸಾಧಿಸಬೇಕು. 8. ವರದಿ: ನೀಡಿದ ನಿರ್ದೇಶನಗಳ ಅನುಷ್ಠಾನದ ಕುರಿತು ಲಿಖಿತ ಮಾಹಿತಿ ನೀಡಬೇಕು. ಸಭೆಯಲ್ಲಿ ಭರವಸೆಗಳು ಹಾಗೂ ನಿರ್ದೇ ಶನಗಳನ್ನು ನಿಗದಿತ ಕಾಲಮಿತಿಯಲ್ಲಿ ನೀಡಿದ ಅನುಷ್ಠಾನಗೊಳಿಸದಿದ್ದರೆ, ಒಂದು ವಾರದ ನಂತರ ಮಾನ್ವಿ ಜನತೆಯೊಂ ದಿಗೆ ಸೇರಿ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಉಗ್ರ ಹೋರಾಟ ಹಮ್ಮಿ ಕೊಳ್ಳಲಾಗುವುದು ಎಂದು ಮಾನ್ವಿನಾಗರಿಕ ಹಿತ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ. ಈ ಕುರಿತು ತಹಸೀಲ್ದಾರರಿಗೆ ಲಿಖಿತ ಮನವಿಯನ್ನು ಸಲ್ಲಿಸಲಾಗಿದೆ. ಈ ವಿಳಂಬದಿಂದ ಉಂಟಾಗುವ ಎಲ್ಲಾ ಬೆಳವಣಿಗೆಗಳಿಗೆ ಆಡಳಿತ ವರ್ಗ ಹಾಗೂ ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರರಾ ಗಿರುತ್ತಾರೆ ಎಂದು ವೇದಿಕೆ ತಿಳಿಸಿದೆ.
ಜನಪ್ರತಿನಿಧಿಗಳ ನಿರ್ದೇಶನ ಜಾರಿಗೆ ಒತ್ತಾಯ: ಮಾನ್ವಿ ನಾಗರಿಕ ವೇದಿಕೆ ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ಮಾನ್ವಿ ಪಟ್ಟಣದಲ್ಲಿ ವತಿಯಿಂದ ನಡೆಯುತ್ತಿರುವ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಬಂಧಿತ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಮಾನ್ವಿ ನಾಗರಿಕ ಹಿತ ರಕ್ಷಣಾ ವೇದಿಕೆ ಆರೋಪಿಸಿದೆ. ಸಭೆಯಲ್ಲಿ ನಿರ್ದೇಶನ, ಆದರೆ ಜಾರಿಯಿಲ್ಲ : ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯ ರಾದ ಎನ್. ಎಸ್. ಬೋಸರಾಜು ಮತ್ತು ಮಾನ್ಸಿ ಶಾಸಕರಾದ ಶ್ರೀ ಜಿ. ಹಂಪಯ್ಯ ನಾಯಕ ಸಾಹುಕಾರ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ 8 ಪ್ರಮುಖ ಬೇಡಿಕೆಗಳ
ಕುರಿತು ಚರ್ಚಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾ ಗಿತ್ತು. ಆದರೆ ಆ ನಿರ್ದೇಶನಗಳು ಇದುವರೆಗೆ ಜಾರಿಯಾಗಿಲ್ಲ ಎಂದು ವೇದಿಕೆ ತಿಳಿಸಿದೆ. ಆಟೋ ನಗರದಿಂದ ಹೌಸಿಂಗ್ ಬೋರ್ಡ್ ವರೆಗೆ 2002ರಲ್ಲಿ ಭೂಸ್ವಾ ಧೀನ ಮಾಡಿಕೊಂಡ ಜಾಗದಲ್ಲಿ ತಕ್ಷಣ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸರ್ವೇ ನಡೆಸಬೇಕು. ರಸ್ತೆ ಮಧ್ಯದಲ್ಲಿರುವ ಅಪಾಯಕಾರಿ ಹಾಗೂ ವಿಷಕಾರಿ ಮರಗಳನ್ನು ತೆರವುಗೊಳಿಸಬೇಕು. ರಸ್ತೆ ಅಗಲೀಕರಣ ಕಡಿಮೆ ಮಾಡಿರುವ ಸ್ಥಳಗಳನ್ನು ಮರುಪರಿಶೀಲಿಸಿ ಸರಿಪಡಿಸಬೇಕು. ಬಸವೇಶ್ವರ, ಅಂಬೇಡ್ಕರ್, ಗಾಂಧಿ ಜಿ, ವಾಲ್ಮೀಕಿ, ಮೇಜರ್ ಶಾನವಾ ಜ್ ಖಾನ್ ವೃತ್ತಗಳ ಅಗಲೀಕರಣ ಮತ್ತು ಸುಂದರೀಕರಣ ಕಾಮಗಾರಿ ಆರಂಭಿಸಬೇಕು. ವೈಜ್ಞಾನಿಕ ಡೈನೇ ಜ್ ವ್ಯವಸ್ಥೆ ನಿರ್ಮಿಸಿ ಮಳೆ ನೀರು ಸರಾಗವಾಗಿ ಮಾಡಬೇಕು. ಹರಿಯುವಂತೆ ಸಿಂಧನೂರು ಮಾದರಿಯಲ್ಲಿ ಭೂಗತ ವಿದ್ಯುತ್
ಕೇಬಲ್ ಅಳವಡಿಸಿ, ತೂಗು ತಂತಿ ತೆರವುಗೊಳಿಸಬೇಕು. ಕಾಮಗಾರಿಯ ಪ್ರತಿ ಹಂತದಲ್ಲೂ ನಾಗರಿಕ ವೇದಿಕೆಯೊಂದಿಗೆ ಸಮನ್ವಯ ಸಾಧಿಸಬೇಕು. 8. ವರದಿ: ನೀಡಿದ ನಿರ್ದೇಶನಗಳ ಅನುಷ್ಠಾನದ ಕುರಿತು ಲಿಖಿತ ಮಾಹಿತಿ ನೀಡಬೇಕು. ಸಭೆಯಲ್ಲಿ ಭರವಸೆಗಳು ಹಾಗೂ ನಿರ್ದೇ ಶನಗಳನ್ನು ನಿಗದಿತ ಕಾಲಮಿತಿಯಲ್ಲಿ ನೀಡಿದ ಅನುಷ್ಠಾನಗೊಳಿಸದಿದ್ದರೆ, ಒಂದು ವಾರದ ನಂತರ ಮಾನ್ವಿ ಜನತೆಯೊಂ ದಿಗೆ ಸೇರಿ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಉಗ್ರ ಹೋರಾಟ ಹಮ್ಮಿ ಕೊಳ್ಳಲಾಗುವುದು ಎಂದು ಮಾನ್ವಿನಾಗರಿಕ ಹಿತ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ. ಈ ಕುರಿತು ತಹಸೀಲ್ದಾರರಿಗೆ ಲಿಖಿತ ಮನವಿಯನ್ನು ಸಲ್ಲಿಸಲಾಗಿದೆ. ಈ ವಿಳಂಬದಿಂದ ಉಂಟಾಗುವ ಎಲ್ಲಾ ಬೆಳವಣಿಗೆಗಳಿಗೆ ಆಡಳಿತ ವರ್ಗ ಹಾಗೂ ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರರಾ ಗಿರುತ್ತಾರೆ ಎಂದು ವೇದಿಕೆ ತಿಳಿಸಿದೆ.
- User8263Basavakalyan, Bidar💣4 hrs ago
- ಜನಪ್ರತಿನಿಧಿಗಳ ನಿರ್ದೇಶನ ಜಾರಿಗೆ ಒತ್ತಾಯ: ಮಾನ್ವಿ ನಾಗರಿಕ ವೇದಿಕೆ ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ಮಾನ್ವಿ ಪಟ್ಟಣದಲ್ಲಿ ವತಿಯಿಂದ ನಡೆಯುತ್ತಿರುವ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಬಂಧಿತ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಮಾನ್ವಿ ನಾಗರಿಕ ಹಿತ ರಕ್ಷಣಾ ವೇದಿಕೆ ಆರೋಪಿಸಿದೆ. ಸಭೆಯಲ್ಲಿ ನಿರ್ದೇಶನ, ಆದರೆ ಜಾರಿಯಿಲ್ಲ : ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯ ರಾದ ಎನ್. ಎಸ್. ಬೋಸರಾಜು ಮತ್ತು ಮಾನ್ಸಿ ಶಾಸಕರಾದ ಶ್ರೀ ಜಿ. ಹಂಪಯ್ಯ ನಾಯಕ ಸಾಹುಕಾರ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ 8 ಪ್ರಮುಖ ಬೇಡಿಕೆಗಳ ಕುರಿತು ಚರ್ಚಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾ ಗಿತ್ತು. ಆದರೆ ಆ ನಿರ್ದೇಶನಗಳು ಇದುವರೆಗೆ ಜಾರಿಯಾಗಿಲ್ಲ ಎಂದು ವೇದಿಕೆ ತಿಳಿಸಿದೆ. ಆಟೋ ನಗರದಿಂದ ಹೌಸಿಂಗ್ ಬೋರ್ಡ್ ವರೆಗೆ 2002ರಲ್ಲಿ ಭೂಸ್ವಾ ಧೀನ ಮಾಡಿಕೊಂಡ ಜಾಗದಲ್ಲಿ ತಕ್ಷಣ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸರ್ವೇ ನಡೆಸಬೇಕು. ರಸ್ತೆ ಮಧ್ಯದಲ್ಲಿರುವ ಅಪಾಯಕಾರಿ ಹಾಗೂ ವಿಷಕಾರಿ ಮರಗಳನ್ನು ತೆರವುಗೊಳಿಸಬೇಕು. ರಸ್ತೆ ಅಗಲೀಕರಣ ಕಡಿಮೆ ಮಾಡಿರುವ ಸ್ಥಳಗಳನ್ನು ಮರುಪರಿಶೀಲಿಸಿ ಸರಿಪಡಿಸಬೇಕು. ಬಸವೇಶ್ವರ, ಅಂಬೇಡ್ಕರ್, ಗಾಂಧಿ ಜಿ, ವಾಲ್ಮೀಕಿ, ಮೇಜರ್ ಶಾನವಾ ಜ್ ಖಾನ್ ವೃತ್ತಗಳ ಅಗಲೀಕರಣ ಮತ್ತು ಸುಂದರೀಕರಣ ಕಾಮಗಾರಿ ಆರಂಭಿಸಬೇಕು. ವೈಜ್ಞಾನಿಕ ಡೈನೇ ಜ್ ವ್ಯವಸ್ಥೆ ನಿರ್ಮಿಸಿ ಮಳೆ ನೀರು ಸರಾಗವಾಗಿ ಮಾಡಬೇಕು. ಹರಿಯುವಂತೆ ಸಿಂಧನೂರು ಮಾದರಿಯಲ್ಲಿ ಭೂಗತ ವಿದ್ಯುತ್ ಕೇಬಲ್ ಅಳವಡಿಸಿ, ತೂಗು ತಂತಿ ತೆರವುಗೊಳಿಸಬೇಕು. ಕಾಮಗಾರಿಯ ಪ್ರತಿ ಹಂತದಲ್ಲೂ ನಾಗರಿಕ ವೇದಿಕೆಯೊಂದಿಗೆ ಸಮನ್ವಯ ಸಾಧಿಸಬೇಕು. 8. ವರದಿ: ನೀಡಿದ ನಿರ್ದೇಶನಗಳ ಅನುಷ್ಠಾನದ ಕುರಿತು ಲಿಖಿತ ಮಾಹಿತಿ ನೀಡಬೇಕು. ಸಭೆಯಲ್ಲಿ ಭರವಸೆಗಳು ಹಾಗೂ ನಿರ್ದೇ ಶನಗಳನ್ನು ನಿಗದಿತ ಕಾಲಮಿತಿಯಲ್ಲಿ ನೀಡಿದ ಅನುಷ್ಠಾನಗೊಳಿಸದಿದ್ದರೆ, ಒಂದು ವಾರದ ನಂತರ ಮಾನ್ವಿ ಜನತೆಯೊಂ ದಿಗೆ ಸೇರಿ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಉಗ್ರ ಹೋರಾಟ ಹಮ್ಮಿ ಕೊಳ್ಳಲಾಗುವುದು ಎಂದು ಮಾನ್ವಿನಾಗರಿಕ ಹಿತ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ. ಈ ಕುರಿತು ತಹಸೀಲ್ದಾರರಿಗೆ ಲಿಖಿತ ಮನವಿಯನ್ನು ಸಲ್ಲಿಸಲಾಗಿದೆ. ಈ ವಿಳಂಬದಿಂದ ಉಂಟಾಗುವ ಎಲ್ಲಾ ಬೆಳವಣಿಗೆಗಳಿಗೆ ಆಡಳಿತ ವರ್ಗ ಹಾಗೂ ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರರಾ ಗಿರುತ್ತಾರೆ ಎಂದು ವೇದಿಕೆ ತಿಳಿಸಿದೆ.3
- ದೇವದುರ್ಗದಲ್ಲಿ ಮತ್ತೆ ಚಿರತೆ ಆತಂಕ: ಶಿಕ್ಷಣಾಧಿಕಾರಿ ಕಚೇರಿ ಹಿಂಭಾಗದ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ? ದೇವದುರ್ಗದಲ್ಲಿ ಮತ್ತೆ ಚಿರತೆ ಆತಂಕ: ಶಿಕ್ಷಣಾಧಿಕಾರಿ ಕಚೇರಿ ಹಿಂಭಾಗದ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ? ದೇವದುರ್ಗ: ತಾಲೂಕಿನ ನಗರಗುಂಡ ಗ್ರಾಮದಲ್ಲಿ ಇತ್ತೀಚೆಗೆ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಬೆನ್ನಲ್ಲೇ, ಇದೀಗ ದೇವದುರ್ಗ ಪಟ್ಟಣದ ಶಿಕ್ಷಣಾಧಿಕಾರಿಗಳ ಕಚೇರಿ ಹಿಂಭಾಗದಲ್ಲಿರುವ ಗುಡ್ಡ ಪ್ರದೇಶದಲ್ಲಿ ಮತ್ತೊಂದು ಚಿರತೆ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ. ಕಳೆದ ಕೆಲ ದಿನಗಳಿಂದ ತಾಲೂಕಿನ ವಿವಿಧೆಡೆ ಚಿರತೆಗಳ ಓಡಾಟದ ಕುರಿತು ವರದಿಯಾಗುತ್ತಿದ್ದು, ಇದೀಗ ಪಟ್ಟಣದ ಸಮೀಪದಲ್ಲೇ ಚಿರತೆ ಕಾಣಿಸಿಕೊಂಡಿರುವುದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಚಿರತೆ ಕಾಣಿಸಿಕೊಂಡಿರುವ ಕುರಿತು ಮಾಹಿತಿ ದೊರೆತ ತಕ್ಷಣ ಅರಣ್ಯ ಇಲಾಖೆ ವಲಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಚಿರತೆಯ ಚಲನವಲನ ಹಾಗೂ ಜಾಡು ಪತ್ತೆಹಚ್ಚಲು ಅರಣ್ಯ ಇಲಾಖೆ ಸಿಬ್ಬಂದಿ ಡ್ರೋನ್ ಮೂಲಕ ನಿಗಾ ವಹಿಸುತ್ತಿದ್ದು, ಗುಡ್ಡ ಪ್ರದೇಶದಲ್ಲಿ ಚಿರತೆಯ ಇರುವಿಕೆಯನ್ನು ಖಚಿತಪಡಿಸಿಕೊಳ್ಳಲು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿ, ತಾಲೂಕಿನ ವಿವಿಧೆಡೆ ಕಾಣಿಸಿಕೊಳ್ಳುತ್ತಿರುವ ಚಿರತೆಗಳು ವಲಸೆ ಬಂದಿರುವ ಚಿರತೆಗಳಾಗಿದ್ದು, ಅವುಗಳ ಚಲನವಲನದ ಮೇಲೆ ನಿಗಾ ಇಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪಟ್ಟಣದ ಸಮೀಪದಲ್ಲೇ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು, ವಿಶೇಷವಾಗಿ ಗುಡ್ಡ ಹಾಗೂ ಅರಣ್ಯ ಪ್ರದೇಶದ ಸುತ್ತಮುತ್ತಲಿನ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ. ಚಿರತೆ ಕಂಡುಬಂದಲ್ಲಿ ಅದರ ಸಮೀಪಕ್ಕೆ ತೆರಳದೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.2
- ಬಂಗಿಕುಂಟಾ ರಸ್ತೆಯಲ್ಲಿ ಪೂಜಾ ಸಾಮಗ್ರಿ ಅಂಗಡಿಗೆ ಬೆಂಕಿ., ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ.. ರಾಯಚೂರು ನಗರದ ಬಂಗಿಕುಂಟಾ ಪ್ರದೇಶದಲ್ಲಿ ಪೂಜಾ ಸಾಮಗ್ರಿಗಳ ಅಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾದ ಘಟನೆ ನಡೆದಿದೆ. ಬಂಗಿಕುಂಟಾದಲ್ಲಿ ತಾಯಣ್ಣ ಎಂಬುವವರಿಗೆ ಸೇರಿದ ಟಿನ್ ಶಡ್‌ನಲ್ಲಿದ್ದ ಅಂಗಡಿಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿಯ ತೀವ್ರತೆಗೆ ಅಂಗಡಿಯಲ್ಲಿದ್ದ ಪೂಜಾ ಸಾಮಗ್ರಿಗಳು ಸೇರಿದಂತೆ ಬಹುತೇಕ ಎಲ್ಲಾ ವಸ್ತುಗಳು ಸುಟ್ಟು ಭಸ್ಮವಾಗಿವೆ. ಘಟನೆಯಿಂದಾಗಿ ಅಂಗಡಿ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ. ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ತಾಯಣ್ಣ ಅವರು ಹೆಚ್ಚಿನ ಪ್ರಮಾಣದಲ್ಲಿ ಪೂಜಾ ಸಾಮಗ್ರಿಗಳನ್ನು ಖರೀದಿಸಿ ಅಂಗಡಿಯಲ್ಲಿ ಸ್ಟಾಕ್ ಇಟ್ಟುಕೊಂಡಿದ್ದರು. ಆದರೆ, ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಹಬ್ಬದ ವ್ಯಾಪಾರಕ್ಕಾಗಿ ಸಂಗ್ರಹಿಸಿಟ್ಟಿದ್ದ ವಸ್ತುಗಳೆಲ್ಲವೂ ಬೆಂಕಿಗಾಹುತಿಯಾಗಿವೆ. ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಸಂಭವಿಸಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದ್ದು, ಘಟನೆಗೆ ನಿಖರ ಕಾರಣ ತನಿಖೆಯ ಬಳಿಕ ತಿಳಿದುಬರಬೇಕಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಬೆಂಕಿ ಮತ್ತಷ್ಟು ವ್ಯಾಪಿಸದಂತೆ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಿದರು. ಘಟನೆ ಕುರಿತು ಸದರ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣದ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಅಗ್ನಿ ಅವಘಡದ ಕಾರಣ ಹಾಗೂ ನಷ್ಟದ ಪ್ರಮಾಣದ ಕುರಿತು ಪರಿಶೀಲನೆ ಮುಂದುವರಿದಿದೆ.2
- ಜಾಲಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಅದ್ದೂರಿ ಸ್ವಾಗತ ಸಮಾರಂಭ ದಿನಾಂಕ: 31-07-2026 ಸ್ಥಳ: ಜಾಲಹಳ್ಳಿ, ದೇವದುರ್ಗ ತಾಲೂಕು, ರಾಯಚೂರು ಜಿಲ್ಲೆ ಜಾಲಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು (RR-141)ಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ನೂತನ ವಿದ್ಯಾರ್ಥಿಗಳಿಗಾಗಿ "ವೆಲ್ಕಮ್ ಪಾರ್ಟಿ–2026" ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ಸಂಭ್ರಮದಿಂದ ಆಯೋಜಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಾಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಹನುಮಂತಿ ಶಿವಬಸಪ್ಪ ರಾಮ್ ಪಾಳಿ ಭಾಗವಹಿಸಿ, ಪೂಜ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನೂತನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. 📰 ಜಾಲಹಳ್ಳಿ–ದೇವದುರ್ಗ ಬ್ರೇಕಿಂಗ್ ನ್ಯೂಸ್ ಜಾಲಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಅದ್ದೂರಿ ಸ್ವಾಗತ ಸಮಾರಂಭ ದಿನಾಂಕ: 31-07-2026 ಸ್ಥಳ: ಜಾಲಹಳ್ಳಿ, ದೇವದುರ್ಗ ತಾಲೂಕು, ರಾಯಚೂರು ಜಿಲ್ಲೆ ಜಾಲಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು (RR-141)ಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ನೂತನ ವಿದ್ಯಾರ್ಥಿಗಳಿಗಾಗಿ "ವೆಲ್ಕಮ್ ಪಾರ್ಟಿ–2026" ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ಸಂಭ್ರಮದಿಂದ ಆಯೋಜಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಾಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಹನುಮಂತಿ ಶಿವಬಸಪ್ಪ ರಾಮ್ ಪಾಳಿ ಭಾಗವಹಿಸಿ, ಪೂಜ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನೂತನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಿಕ್ಷಣವೇ ಭವಿಷ್ಯದ ಬುನಾದಿ ವಿಶೇಷ ಉಪನ್ಯಾಸ ನೀಡಿದ ಜಾಲಹಳ್ಳಿ ಪದವಿ ಕಾಲೇಜಿನ ಪ್ರಾಚಾರ್ಯ ಶ್ರೀ ಪ್ರಭುಲಿಂಗ ಸಪಲಿ ಅವರು, "ಪದವಿ ಪೂರ್ವ ಶಿಕ್ಷಣವು ವಿದ್ಯಾರ್ಥಿಗಳ ಜೀವನದ ಅತ್ಯಂತ ಮಹತ್ವದ ಘಟ್ಟವಾಗಿದೆ. ಸಮಯದ ಸದ್ಬಳಕೆ ಮಾಡಿಕೊಂಡು ಶ್ರದ್ಧೆಯಿಂದ ವ್ಯಾಸಂಗ ಮಾಡಿದರೆ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಕಾಲೇಜು, ಪೋಷಕರು ಹಾಗೂ ಸಮಾಜಕ್ಕೆ ಕೀರ್ತಿ ತರಬೇಕು" ಎಂದು ಕರೆ ನೀಡಿದರು ಮುಖ್ಯ ಅತಿಥಿಗಳಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಶ್ರೀ ಸಿದ್ದನಗೌಡ ಮಾಲಿ ಪಾಟೀಲ (ಬಾಗೂರು) ಅವರು ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಅತ್ಯಗತ್ಯ. ಪೋಷಕರು ಕಷ್ಟಪಟ್ಟು ಮಕ್ಕಳನ್ನು ಓದಿಸುತ್ತಿದ್ದು, ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡಿ ಅವರ ಹೆಸರು ತರಬೇಕು ಎಂದರು. ನಿವೃತ್ತ ಪ್ರಾಚಾರ್ಯ ಶ್ರೀ ಉಮೇಶ್ ಹೆಸರೂರು ಅವರು, ಮಾತನಾಡಿ ಕಠಿಣ ಪರಿಶ್ರಮ ಮತ್ತು ಗುರಿಯೊಂದಿಗೆ ವ್ಯಾಸಂಗ ಮಾಡಿದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ತಿಳಿಸಿದರು. --_----------------- ಬಾಕ್ಸ್ ನಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಶಿವಪ್ರಕಾಶ್ ಅವರು, ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅವರು ಹೇಳಿದ ಸಂದೇಶ ಎಲ್ಲರ ಗಮನ ಸೆಳೆಯಿತು: «"ಮೊಬೈಲ್ ಹೇಳುತ್ತದೆ – ನನ್ನನ್ನು ತಲೆ ತಗ್ಗಿಸಿ ನೋಡು, ನಾನು ನಿನಗೆ ತಲೆ ತಗ್ಗಿಸುವಂತೆ ಮಾಡುತ್ತೇನೆ. ಪುಸ್ತಕ ಹೇಳುತ್ತದೆ – ನನ್ನನ್ನು ತಲೆ ತಗ್ಗಿಸಿ ಓದು, ನಾನು ನಿನಗೆ ತಲೆ ಎತ್ತುವಂತೆ ಮಾಡುತ್ತೇನೆ."»ಪುಸ್ತಕ ಓದುವದು ಕಡೆ ಹೆಚ್ಚು ಗಮನ ಹರಿಸಿ ಎಂದು ಹೇಳಿದರು ----------------===- ಬಾಕ್ಸ್ ನಲ್ಲಿ ಅಧ್ಯಕ್ಷೀಯ ಭಾಷಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ಸುರೇಶ್ ವಿಭೂತಿ ಅವರು ಮಾತನಾಡಿ, ಜಾಲಹಳ್ಳಿ ಕಾಲೇಜು ಇಂದು ಉತ್ತಮ ಮಟ್ಟಕ್ಕೆ ಬೆಳೆಯಲು ನಿವೃತ್ತ ಪ್ರಾಂಶುಪಾಲ ಉಮೇಶ್ ಹೆಸರೂರು ಅವರ ಸೇವೆ ಮತ್ತು ದೂರದೃಷ್ಟಿಯೇ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು. 2006ರಲ್ಲಿ ಆರಂಭವಾದ ಕಾಲೇಜಿನ ಬೆಳವಣಿಗೆಯಲ್ಲಿ ಅವರ ಕೊಡುಗೆಯನ್ನು ಸ್ಮರಿಸಿದರು. ------------------- ಅತಿಥಿಗಳಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಸಿಡಿಎಂಸಿ ಉಪಾಧ್ಯಕ್ಷ ಶ್ರೀ ಗುರು ತೋಟದ ಅವರು, ಮಾತನಾಡಿ ಜಾಲಹಳ್ಳಿ ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಅಧಿಕಾರಿಗಳಾಗಿದ್ದಾರೆ. ನೂತನ ವಿದ್ಯಾರ್ಥಿಗಳು ಕೂಡ ಅದೇ ರೀತಿಯಲ್ಲಿ ಸಾಧನೆ ಮಾಡಬೇಕು ಎಂದು ಪ್ರೋತ್ಸಾಹಿಸಿದರು. ಪತ್ರಕರ್ತ ಶ್ರೀ ಮೌನೇಶ್ ಜಾಲಹಳ್ಳಿ ಅವರು ಮಾತನಾಡಿ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ ಕಾಲೇಜಿಗೆ ಉತ್ತಮ ಹೆಸರು ತರಬೇಕು ಎಂದು ಕರೆ ನೀಡಿದರು. ಭೂದಾನಿಗಳು ಹಾಗೂ ಸಾಧಕರಿಗೆ ಸನ್ಮಾನ ಕಾಲೇಜಿಗೆ ಜಾಗವನ್ನು ದಾನವಾಗಿ ನೀಡಿದ ಉದಾರ ಮನಸ್ಸಿನ ಶ್ರೀ ಅಮರೇಶ ತಂದೆ ನೀಲಕಂಠಪ್ಪ ಮೆಣಸಿನಕಾಯಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಇದೆ ವೇಳೆ ಜಾಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಹನುಮಂತಿ ಶಿವಬಸಪ್ಪ ರಾಮ್ ಪಾಳಿ ಅವರಿಗೆ ಸನ್ಮಾನ ಮಾಡಲಾಯಿತು, ಜಾಲಹಳ್ಳಿ ಪದವಿ ಕಾಲೇಜಿನ ಪ್ರಾಚಾರ್ಯ ಶ್ರೀ ಪ್ರಭುಲಿಂಗ ಸಪಲಿ, ಶ್ರೀಸಿದ್ದನಗೌಡ ಮಾಲಿ ಪಾಟೀಲ (ಬಾಗೂರು)ನೈಜ ದೆಸೆ ಕನ್ನಡ ದಿನಪತ್ರಿಕೆಯ ಪತ್ರಕರ್ತ ಖಾಜಾ ಹುಸೇನ್ ಬಾಬಾ ಜಾಲಹಳ್ಳಿ, ಹಾಗೂ ದುರ್ಗಶ್ರೀ ಪ್ರಶಸ್ತಿ ಪುರಸ್ಕೃತರಾದ ಪತ್ರಕರ್ತ ಮೌನೇಶ್ ಜಾಲಹಳ್ಳಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ 2025–26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ನಗದು ಬಹುಮಾನ ವಿತರಿಸಲಾಯಿತು. - ಶ್ರೀದೇವಿ ಶರಣಪ್ಪ (ಜಾಲಹಳ್ಳಿ) – 564 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ. ರಾಜ್ಯಶಾಸ್ತ್ರದಲ್ಲಿ 99/100 ಹಾಗೂ ಸಮಾಜಶಾಸ್ತ್ರದಲ್ಲಿ 99/100 ಅಂಕ ಗಳಿಸಿದ್ದರು. ಕಾಲೇಜಿನಿಂದ ₹1,500 ಹಾಗೂ ನಿವೃತ್ತ ಪ್ರಾಂಶುಪಾಲರಾಧ ಉಮೇಶ್ ಹೆಸರೂರು ಅವರಿಂದ ₹3,000 ನಗದು ಬಹುಮಾನ ನೀಡಿ ಗೌರವಿಸಲಾಯಿತು. - ಪವಿತ್ರಾ ಬಸವರಾಜ್ ಬಂಡಿ (ಜಾಲಹಳ್ಳಿ) – ಕಾಲೇಜಿಗೆ ದ್ವಿತೀಯ ಸ್ಥಾನ. ಕನ್ನಡ ವಿಷಯದಲ್ಲಿ 100/100 ಅಂಕ ಗಳಿಸಿದ್ದು, ಕಾಲೇಜು ಹಾಗೂ ನಿವೃತ್ತಪ್ರಾಂಶುಪಾಲರಾಧ ಉಮೇಶ್ ಹೆಸರೂರು ಅವರಿಂದ ₹2,000 ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. - ಪೂರ್ಣಿಮಾ (ಜಾಲಹಳ್ಳಿ) – 544 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದು ಕಾಲೇಜಿನ ವತಿಯಿಂದ ಗೌರವಿಸಲಾಯಿತು. ಇದರ ಜೊತೆಗೆ ಸಂಸ್ಕೃತ ವಿಭಾಗ ಹಾಗೂ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ನೃತ್ಯ, ನಾಟಕ, ಗಾಯನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನೂತನ ವಿದ್ಯಾರ್ಥಿಗಳು ಮತ್ತು ಹಿರಿಯ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು. ಉಪಸ್ಥಿತಿ ಕಾರ್ಯಕ್ರಮದಲ್ಲಿಜಾಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಹನುಮಂತಿ ಶಿವಬಸಪ್ಪ ರಾಮ್ ಪಾಳಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ಸುರೇಶ್ ವಿಭೂತಿ ಅವರು ಜಾಲಹಳ್ಳಿ ಪದವಿ ಕಾಲೇಜಿನ ಪ್ರಾಚಾರ್ಯ ಶ್ರೀ ಪ್ರಭುಲಿಂಗ ಸಪಲಿ, ನಿವೃತ್ತ ಪ್ರಾಂಶುಪಾಲ ಉಮೇಶ್ ಹೆಸರೂರು,ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಶಿವಪ್ರಕಾಶ್, ಶ್ರೀಸಿದ್ದನಗೌಡ ಮಾಲಿ ಪಾಟೀಲ (ಬಾಗೂರು) ನೈಜ ದೆಸೆ ಕನ್ನಡ ದಿನಪತ್ರಿಕೆಯ ಪತ್ರಕರ್ತ ಖಾಜಾ ಹುಸೇನ್ ಬಾಬಾ ಜಾಲಹಳ್ಳಿ, ಹಾಗೂ ದುರ್ಗಶ್ರೀ ಪ್ರಶಸ್ತಿ ಪುರಸ್ಕೃತರಾದ ಪತ್ರಕರ್ತ ಮೌನೇಶ್ ಜಾಲಹಳ್ಳಿ . ಸರ್ಕಾರಿ ಬಾಲಕರ ಪ್ರೌಢಶಾಲೆಯ ಮುಖ್ಯಗುರು ನಿಂಗಪ್ಪ, ಇಂಗ್ಲಿಷ್ ಉಪನ್ಯಾಸಕ ಶೇಖರ್, ಸಿಡಿಎಂಸಿ ಉಪಾಧ್ಯಕ್ಷ ಶ್ರೀ ಗುರು ತೋಟದ ಬಾಬುಮಿಯಾ ಟೇಲರ್, ಹಿರಿಯ ಉಪನ್ಯಾಸಕರಾದ ವಿರೂಪಣ್ಣ, ಬಸವರಾಜ್, ಪ್ರಕಾಶ್, ಚನ್ನಬಸವ, ಬಸವರಾಜ್ ಸೋಮನಂಬರಡಿ, ಹನುಮೇಶ್, ಪೂರ್ಣಿಮಾ ಮೇಡಂ ಸೇರಿದಂತೆ ಉಪನ್ಯಾಸಕ ವೃಂದ, ಸಿಬ್ಬಂದಿ, ಗಣ್ಯರು, ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಉಪನ್ಯಾಸಕ ಬಸವರಾಜ್ ರಸ್ತಾಪುರ್ ಅವರು ನೆರವೇರಿಸಿದರು. ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ4
- ಬಾಡಿಯಾಳ ಹಳ್ಳಕ್ಕೆ ಕಡೇಚೂರ ಕೈಗಾರಿಕ ಪ್ರದೇಶದಿಂದ ವಿಷಪೂರಿತ ದ್ರವದಿಂದ ಹಳ್ಳದ ನೀರಲ್ಲಿ ಮೀನು-ಜಲಚರ ಮಾರಣಹೋಮ ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆರೋಪ ಜನ ಜಾನುವಾರುಗಳಿಗೆ ಈ ಹಳ್ಳದ ನೀರು ಬಳಕೆ ಆಗುವಂತೆ ಮಾಡಲು ಬ್ರಿಜ್ ಕಂ ಬ್ಯಾರೇಜ್ ಮೇಲೆ ಕುಳಿತು ರೈತರ ಸಮ್ಮುಖದಲ್ಲೇ ದೀಢಿರ್ ಪ್ರತಿಭಟನೆ ಮೂಲಕ ಜಿಲ್ಲಾಡಳಿತಕ್ಕೆ ವಾರದ ಗಡುವು ನೀಡಿದ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ! ಸೈದಾಪೂರ : ಯಾದಗಿರಿ ತಾಲೂಕಿನ ಕಡೇಚೂರ ಕೈಗಾರಿಕ ಪ್ರದೇಶದಲ್ಲಿರುವ ಕೆಮಿಕಲ್ ಫ್ಯಾಕ್ಟರ್‌ಗಳಿಂದ ವಿಷಕಾರಿತ ದ್ರವ ಪದಾರ್ಥಗಳು ಚರಂಡಿ ಮುಖಾಂತರ ಹರಿದು ಬಂದು ಬಾಡಿಯಾಳ ಗ್ರಾಮದ ಹಳ್ಳದದಿಂದ ಗೂಡೂರ ಹಳ್ಳದ ಮುಖಾಂತರ ಭೀಮಾನದಿಗೆ ಸೇರುವ ಈ ಹಳ್ಳದಲ್ಲಿ ವಾರದಿಂದೇ ಮೀನುಗಳ ಸತ್ತು ಗಬ್ಬೆದ್ದು ನಾರುತ್ತಿದ್ದು ಈ ದುರವಾಸನೆ ದಿಂದ ಗ್ರಾಮಸ್ಥರು ಸಾಂಕ್ರಾಮಿಕ ರೋಗದ ಬೀತಿಯಲ್ಲಿ ಜನ ಜಾನುವಾರು ಬದುಕುವ ಪರಸ್ಥಿತಿ ನಿರ್ಮಾಣವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಅವರು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಂದು ಶನಿವಾರ ಬೆಳಿಗ್ಗೆ ಬಾಡಿಯಾಳ ಗ್ರಾಮಸ್ಥರು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಅವರಿಗೆ ದೂರವಾಣಿ ಮುಖಾಂತರ ಕರೆ ಮಾಡಿ ತಿಳಿಸಿದಾಗ ತಕ್ಷಣ ಸ್ಪಂದಿಸಿ ಬಾಡಿಯಾಳ ಗ್ರಾಮಕ್ಕೆ ಧಾವಿಸಿ ಗ್ರಾಮಸ್ಥರೊಂದಿಗೆ ಕಾಲ್ನೆಡಿಗೆ ಮುಖಾಂತರ ಹಳ್ಳದ ಕಡೆ ಸಂಚಾರ ಮಾಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು ವಾರದಿಂದೆ ಈ ಹಳ್ಳದಲ್ಲಿ ಮೀನು ಮತ್ತು ಜಲಚರಗಳು ಸತ್ತು ಕೊಳೆತು ದುರಗಂಧದ ವಾಸನೆ ಹೆಚ್ಚಾದರು ಸಂಬAಧಪಟ್ಟ ಅಧಿಕಾರಿಗಳು ಇಲ್ಲಿ ವರೆಗೆ ಸ್ಥಳಕ್ಕೆ ಬೇಟಿ ನೀಡುವುದಾಗÀಲಿ ಸಮಸ್ಯೆ ಬಗ್ಗೆ ಗ್ರಾಮಸ್ಥರ ಬಗ್ಗೆ ಚರ್ಚಿಸುದಾಗಲಿ ಜನ ಜಾನುವಾರಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಾಗಲಿ ಮಾಡದಿರುವುದು ದುರದುಷ್ಟಕರ ಸಂಗತಿ ಎಂದು ದೂರರಿದ್ದರು. ಈ ಹಳ್ಳದ ನೀರು ಜನ ಜಾನುವಾರುಗಳಿಗೆ ದಿನ ನಿತ್ಯ ಕುಡಿಯಲು ಮತ್ತು ಜಮೀನಲ್ಲಿ ಬೆಳೆಗಳಿಗೆ ನೀರು ಉಣಿಸಲು ಈ ಹಳ್ಳದ ನೀರನ್ನೆ ಬಳಕೆ ಮಾಡುತ್ತಿದ್ದರು. ಆದರೆ ಕಡೇಚೂರ ಫ್ಯಾಕ್ಟರ್ ಪ್ರಾರಂಭವಾದದಿAದ ಮಳೆ ಬಂದರೆ ಸಾಕು ಚರಂಡಿ ಮುಖಾಂತರ ದ್ರವ ಪದಾರ್ಥಗಳು ಹರಿದು ಬಂದು ಈ ಹಳ್ಳಕ್ಕೆ ಸೇರಿ ವಿಷಪೂರಿತ ನೀರಾಗಿ ಮಾರ್ಪಟ್ಟು ಜನ ಜಾನುವಾರು ಕುಡಿಯಲು ಆಗದೆ ಈ ಹಳ್ಳ ಇದ್ದರು ಇಲ್ಲದಂತಾಗಿದೆ ಆದ ಕಾರಣ ಸ್ಥಳದಲ್ಲೇ ಮಿನಿ ಬ್ರಿಜ್ ಕಂ ಬ್ಯಾರೇಜಿನ ಮೇಲೆ ದೀಢೀರ್ ರೈತರ ಸಮ್ಮುಖದಲ್ಲೇ ಪ್ರತಿಭಟನೆ ನಡೆಸಿ ಜಿಲ್ಲಾಡತಕ್ಕೆ ವಾರದ ಗಡವು ನೀಡಿ ಯಾದಗಿರಿ ರಾಯಚೂರು ಮುಖ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದರು. ಕೊಟ್ : ಬಾಡಿಯಾಳ ಗ್ರಾಮದ ಹಳ್ಳಕ್ಕೆ 2013ರಲ್ಲಿ ಅಡಲಾಗಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಿದ ನಂತರ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಅದನ್ನು ನಿರ್ವಹಣೆ ಮಾಡದೇ ದಿವ್ಯ ನಿರ್ಲಕ್ಷವಹಿಸಿ ಸ್ಥಳಕ್ಕೆ ಬೇಟಿ ನೀಡಿದೇ ರೈತರಿಗೆ ಜಾಗೃತಿ ಮೂಡಿಸಿದೇ ಕಳ್ಳಾಟ ಆಡುತ್ತಿರುವ ಅಧಿಕಾರಿ ಸಿಬ್ಬಂದಿಗಳಿಗೆ ಮೇಲೆ ಜಿಲ್ಲಾಧಿಕಾರಿಗಳು ಕಾನೂನಿನ ಕಠಿಣ ಕ್ರಮ ಜರುಗಿಸಿ ಈ ಭಾಗದ ರೈತರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಇದೇ ಸಂಧರ್ಬದಲ್ಲಿ ವಿಶ್ವನಾಥ್ ಗಂಟೆ ಬಾಡಿಯಲ್ . ಮಲ್ಲೇಶಿ, ಗೋವಿಂದ ಡಾಕ್ಟರ್ ಶಾಂತವೀರ ಮಕ್ಥಲ್. ವೆಂಕಟೇಶ್ ಕಾವಲಿ ತಿಮ್ಮಾಜಿ .ಬಸವರಾಜ್ ಚನ್ನು ಕಳೂರ್. ಕೊತ್ತಪಲ್ಲಿ ಶಿವು ಬಾಯ್ಲ್. ದೇವೋಗಂಟಿ .ದೇವಪುತ್ರ ತಿಮ್ಮೊಜಿ. ಶರಣಪ್ಪ ಜಿನ್ಕೆರಿ ಹಣಮಂತರಾಯ ತಿಮ್ಮಾಜಿ ಶಿವಶಂಕರ ತಿಮೋಜಿ ಕಾವಲಿ ಎಲ್ಲಪ್ಪ . ರಾಮಣ್ಣ ಗೂಡೂರ್. ಶಿವಪುತ್ರ ತಿಮೋಜಿ .ಕಾಶೀನಾಥ್. ದೇವು ಚಂದಾಪುರ್ ರಾಮಣ್ಣ .ಸೂಗಪ್ಪ ಬೈನ್ ಯಂಕಪ್ಪ ತಿಮ್ಮ ಜಿ. ಯಂಕಪ್ಪ ಚಂದಾಪುರ್ ಸಿದ್ದಪ್ಪ ಶಿವಪುರ ಬನ್ನಪಾನೂರ್. ಅಶೋಕ್ ಗಣಪುರ್. ಮಂಜುನಾಥ್ ಕಾವಲಿ. ಬಸವರಾಜ್ ಕವಲಿ. ಭೀಮು ಗುಡೇಬಲ್ಲೂರ್ ಅಯ್ಯಪ್ಪ ಇರ್ಜನ್ ಬಸವರಾಜ ಇರ್ಜನ್ ಬನ್ನಪ್ಪ ನೀಡುಗುಂದಿ ಖಾಜಾ ಹುಸೇನ್ ಪೊಂಗಲ್. ಚಂದ್ರಮಣ್ಣ. ದೇವಪ್ಪ. ಬಸಪ್ಪ ಜಾನಕಿ ಗಟ್ಟಿಗರ್ ಮಲ್ಲಪ್ಪ ಜಾನಕ. ಮಲ್ಲೇಶ್ ಗಡಾದ್.ರಾಮಣ್ಣ ಅಂಗಡಿ. ಗೋಪಾಲ ಹೊಸ್ಮನಿ. ದೇವಪುತ್ರ ಗುಡೇಬಲ್ಲೂರು . ಹಣಮಂತ ಹಿರಿಜನ್ ಸೇರಿದಂತೆ ಅನೇಕ ರೈತರು ಇದ್ದರು4
- ಆಸ್ಪತ್ರೆ ಆರಂಭವಾಗಿ 15 ದಿನಗಳ ಒಳಗಡೆಯೇ 27 ಕೋಟಿ ರೂಪಾಯಿಯ ತಾಯಿ-ಮಕ್ಕಳ ಆಸ್ಪತ್ರೆ ಅವ್ಯವಸ್ಥೆ. ವರದಿ:- ಪವಾಡೆಪ್ಪ ಚೌಡ್ಕಿ ಕುಷ್ಟಗಿ:- ಪಟ್ಟಣದಲ್ಲಿ ನೂತನವಾಗಿ ಆರಂಭವಾಗಿರುವ ಸುಮಾರು 27 ಕೋಟಿ ರೂಪಾಯಿ ವೆಚ್ಚದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆ ಅಡಿಯಲ್ಲಿ 100 ಹಾಸಿಗೆಯ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಬೇಕಾದ ಮೂಲಭೂತ ಸೌಕರ್ಯಗಳು ಇದ್ದರು ಸಹ ಎಲ್ಲವು ಇಲ್ಲದಂತೆ ಆಗಿದೆ ಕೆಲವು ಇನ್ನು ಸೌಲಭ್ಯಗಳು ಸರಿಯಾಗಿ ಇಲ್ಲದ ಕಾರಣ ಈ ಆಸ್ಪತ್ರೆಯನ್ನು ತರಾತುರಿಯಲ್ಲಿ ಆರಂಭ ಮಾಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. *ಅವ್ಯವಸ್ಥೆಗಳ ನಡುವೆಯೇ ಹೆರಿಗೆ ಸೇವೆ ಆರಂಭ ಸಾರ್ವಜನಿಕರ ಆಕ್ರೋಶ* ಚಿಕ್ಕಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಹಾಗೂ ಜನತೆಗೆ ಬೇಕಾಗುವ ಗುಣಮಟ್ಟದ ಆರೋಗ್ಯ ಸೇವೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಬಾಣಂತಿರಿಗೆ ಬೇಕಾದ ಬಿಸಿನೀರಿನ ವ್ಯವಸ್ಥೆ ಸರಿಯಾಗಿ ಇಲ್ಲದೆ ಆಸ್ಪತ್ರೆಗೆ ಅಳವಡಿಸಿರುವ ಸೋಲಾರ್ ವಾಟರ್ ಇಟರ್ ಟುಬೂಗಳು ಹೊಡೆದು ಹಾಳಾಗಿ ಹೋಗಿವೆ. ಈ ಎಲ್ಲಾ ಸೋಲಾರ್ ಟುಬೂಗಳು ಅವ್ಯವಸ್ಥೆಯಿಂದ ಕೆಲ ವಸ್ತುಗಳು ಆಸ್ಪತ್ರೆ ಆರಂಭವಾಗಿ 15 ದಿನಗಳ ಒಳಗಡೆಯೇ ಹಾಳಾಗಿ ಒಡೆದು ಹೋಗಿವೆ. ಈ ಆಸ್ಪತ್ರೆಯ ಸ್ಥಿತ ಇದೇ ರೀತಿಯಾಗಿ ಮುಂದುವರೆದರೆ ಇದರಿಂದ ಸಾರ್ವಜನಿಕರು ಮತ್ತು ಗರ್ಭಿಣಿಯರು ಹಾಗೂ ಬಾಣಂತಿಯರು ಮತ್ತು ಚಿಕ್ಕ ಮಕ್ಕಳು ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. *ಆಸ್ಪತ್ರೆಯಲ್ಲಿ ಕೆಲ ವಿದ್ಯುತ್ ಲೈಟ್ ಗಳು ಮತ್ತು ಪ್ಯಾನ್ ಗಳು ಬಂದ್.* ಆಸ್ಪತ್ರೆಯಲ್ಲಿ ಸಮರ್ಪಕ ಕುಡಿಯುವ ನೀರು, ಬಿಸಿನೀರಿನ ವ್ಯವಸ್ಥೆ, ನಿರಂತರ ವಿದ್ಯುತ್ ಪೂರೈಕೆ, ಸೇರಿದಂತೆ ಹಲವು ಅಗತ್ಯ ಸೌಲಭ್ಯಗಳು ಪೂರ್ಣ ಪ್ರಮಾಣದಲ್ಲಿ ಲಭ್ಯವಿಲ್ಲದೆ ಎಲ್ಲವು ಅವ್ಯವಸ್ಥೆಯಾಗಿ ಕೂಡಿದ್ದು ಎಲ್ಲವು ಬಂದ್ ಆಗಿರುವಂತದ್ದು ಕಂಡು ಬಂದಿದೆ. *ವೈದ್ಯರ ಕೊರತೆ ಮತ್ತು ಸಿಬ್ಬಂದಿಗಳ ಕೊರತೆ ಎದುರುಸುತ್ತಿರುವ ಆಸ್ಪತ್ರೆ* ಆಸ್ಪತ್ರೆಗೆ ತಕ್ಕಂತೆ ಬೇಕಾಗುವ ವೈದ್ಯಕೀಯ ಸೇವೆಗೆ ಅಗತ್ಯವಿರುವ ಸಿಬ್ಬಂದಿಯ ಕೊರತೆಯೂ ಆಸ್ಪತ್ರೆಯಲ್ಲಿ ಇಲ್ಲದ ಕಾರಣ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಮತ್ತು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು ಪ್ರತಿನಿತ್ಯ ಕಾರ್ಯನಿರ್ವಹಣೆಯ ಮೇಲೆ ಮತ್ತು ರೋಗಿಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದರೆ ತಪ್ಪಾಗಲಾರದು. *ಕೇಂದ್ರ ಬಸ್ ನಿಲ್ದಾಣದಿಂದ 2–3 ಕಿಲೋಮೀಟರ್ ದೂರದಲ್ಲಿರುವ ಆಸ್ಪತ್ರೆಗೆ ಸಾರಿಗೆ ವ್ಯವಸ್ಥೆಗೆ ಆಗ್ರಹ.* ಪಟ್ಟಣದ ಬಸ್ ನಿಲ್ದಾಣದಿಂದ ಸರಿ ಸುಮಾರು ಎರಡು ಮೂರು ಕಿ.ಮಿ. ದೂರವಿದ್ದು ಗರ್ಭಿಣಿಯರಿಗೆ ಮತ್ತು ಸಾರ್ವಜನಿಕರಿಗೆ ನಡೆದುಕೊಂಡು ಹೋಗಲು ಬಹಳ ಕಷ್ಟವಾಗುತ್ತಿದ್ದು ಬಸ್ ನಿಲ್ದಾಣದಿಂದ ಬಸ್ ಸೌಕರ್ಯ ಇಲ್ಲದೆ ಬರಿ ಆಟೋಗಳನ್ನು ನೆಚ್ಚಿಕೊಂಡು ಆಸ್ಪತ್ರೆ ತೆರಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆಟೋ ಚಾಲಕರು ತಮಗೆ ಮನಬಂದಂತೆ ಆಟೋ ಬಾಡಿಗೆ ಏರಿಗೆ ಮಾಡುತ್ತಿದ್ದಾರೆ. ಆದ್ದರಿಂದ ಕೇಂದ್ರೀಯ ಬಸ್ ನಿಲ್ದಾಣದಿಂದ ಆಸ್ಪತ್ರೆಯ ವರಗೆ ಬಸ್ ಬೀಡಬೇಕು ಎಂದು ಸಾರ್ವಜನಿಕರು ಆಗ್ರಹವಾಗಿದೆ. *ಆಸ್ಪತ್ರೆಯಲ್ಲಿ ಮಾರ್ಗ ಸೂಚಿಸುವ ನಾಮ ಫಲಕಗಳು ಇಲ್ಲ.* ಆಸ್ಪತ್ರೆಯ ಒಳಗಡೆ ಹೆರಿಗೆ ಕೊಠಡಿ ಮತ್ತು ರೋಗಿಗಳ ಹತ್ತಿರ ತರಳಬೇಕು ಎಂದರೆ ಸರಿಯಾದ ಮಾರ್ಗವನ್ನು ಸೂಚಿಸುವ ದಿಕ್ಕು ಸೂಚನಾ ಫಲಕಗಳು ಇಲ್ಲದೆ ಆಸ್ಪತ್ರೆಗೆ ಬರುವ ಸಾರ್ವಜನಿಕರು ಕೊರತೆಯನ್ನು ಎದುರಿಸಬೇಕಾಗಿದೆ. ಮತ್ತು ಗ್ರಾಮೀಣ ಪ್ರದೇಶಗಳಿಂದ ಬರುವ ಗರ್ಭಿಣಿಯರು ಹಾಗೂ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಆಸ್ಪತ್ರೆಗೆ ಬಂದ ರೋಗಿಗಳು ಅವಳನ್ನು ತೊಂಡಿಕೊಂಡಿದ್ದಾರೆ. *ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ಹದೆಗೆಟ್ಟ ಮಾರ್ಗದ ರಸ್ತೆ.* ತಹಶೀಲ್ದಾರ ಕಚೇರಿಯಿಂದ ವಣಗೇರಾ ಹಳೆ ರಸ್ತೆ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ಈ ರಸ್ತೆಯು ಹದಗೆಟ್ಟಿದ್ದು, ಸುತ್ತಮುತ್ತಲಿನ ಮೂಲಸೌಕರ್ಯಗಳ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕೆಲವು ಕಡೆ ವಿದ್ಯುತ್ ವ್ಯವಸ್ಥೆಯೂ ಸಮರ್ಪಕವಾಗಿಲ್ಲ ಮತ್ತು ವಿದ್ಯುತ್ ಕಂಬಗಳು ರಸ್ತೆಯ ಪಕ್ಕದಲ್ಲಿ ಇದ್ದು ಯಾವುದೇ ಎರಡು ಗಾಡಿಗಳು ಬಂದರೆ ಸಾಕು ಅದಲು ಬದಲು ಆದಲು ಮತ್ತು ಹೋಗಲು ಮತ್ತು ಬರಲು ಸರಿಯಾದ ರಸ್ತೆ ಇಲ್ಲದೆ ರಸ್ತೆಯ ಅಕ್ಕ ಪಕ್ಕದಲ್ಲಿ ತೆಗ್ಗು ದಿನ್ನೆಗಳು ಇವೆ ಈ ರಸ್ತೆ ಬಹಳ ಇರ್ಕಟ್ಟಾಗಿದ್ದು ಎದ್ದು ಕಾಣುತ್ತಿದೆ ಎಂಬ ಆರೋಪಗಳಿವೆ. ಕೂಡಲೇ ಸರಿ ಪಡಿಸಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೇ ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಸ್ತ್ರೀರೋಗ ಚಿಕಿತ್ಸಾ ಸೇವೆಗಳು ಆರಂಭಗೊಂಡಿರುವುದು ಪ್ರಶ್ನೆಗೆ ಎಡೆಮಾಡಿಕೊಟ್ಟಿದೆ. ರೋಗಿಗಳ ಸುರಕ್ಷತೆ ಹಾಗೂ ಆರೋಗ್ಯ ಸೇವೆಯ ಗುಣಮಟ್ಟದ ದೃಷ್ಟಿಯಿಂದ ಅಗತ್ಯ ಮೂಲಸೌಲಭ್ಯಗಳನ್ನು ತುರ್ತಾಗಿ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ, ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಎಲ್ಲಾ ಮೂಲಸೌಲಭ್ಯಗಳನ್ನು ಒದಗಿಸುವ ಮೂಲಕ ಜನರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಆಸ್ಪತ್ರೆಯಿಂದ ಬಾಡಿಯಲ್ಲಿ ಅಳವಡಿಸಲಾಗಿರುವ ಸೋಲಾರ್ ಟುಬೂಗಳು ಹೊಡೆದು ಆಹಾಳಾಗಿ ನುಚ್ಚುನುರಾಗಿದ್ದು ಕಂಡು ಬಂದಿದೆ ನೀರಿನ ಶುದ್ದ ಕುಡಿಯುವ ನೀರಿನ ಘಟದ ಕೋಣಿಯ ಎರಡು ಘಟಕದ ಬಾಗಿಲು ಸಂಪೂರ್ಣ ಕಿತ್ತು ಹೋಗಿವೆ ಘಟಕದ ಮಿಷನ್ ಗಳು ಸುರಕ್ಷೆತೆ ಇಲ್ಲ. ಅವುಗಳನ್ನು ಸುಸಜ್ಜಿತವಾಗಿ ಇಡಬೇಕಾಗಿದೆ ಆಸ್ಪತ್ರೆ ಕಟ್ಟಿದಕ್ಕೆ ಸರಕಾರದ ಹಣ ನಷ್ಟವಾಗದಂತೆ ಮತ್ತು ಯಾವುದೇ ಕಾರಣಕ್ಕು ಆಸ್ಪತ್ರೆಯನ್ನು ಆಳಾಗಲು ಬೀಡಬಾರದು ಎಂಬುವದೆ ಸಾರ್ವಜನಿಕರ ಆಸೆಯಾಗಿದೆ ಎಂದು ಹೇಳಬಹುದು. ಬೈಟ್:- ಆಸ್ಪತ್ರೆಯನ್ನು ಸಂಪೂರ್ಣ ಆಗುವವರೆಗೂ ಹಸ್ತಾಂತರ ಜವಾಬ್ದಾರಿ ತೆಗೆದುಕೊಳ್ಳಬೇಡಿ ಎಂದು ತಾಲೂಕ ವೈದ್ಯಾಧಿಕಾರಿ ತಿಳಿಸಿದ್ದೆ ಆದರೆ ತರಾತೂರಿಯಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರಿಂದ ಕೊಪ್ಪಳದಲ್ಲಿ ಉದ್ಘಾಟನೆ ಮಾಡಿದರು. ಕಾಮಗಾರಿಯನ್ನು ಪೂರ್ಣ ಪ್ರಮಾಣದಲ್ಲಿ ಸರಿಯಾಗಿ ನಿರ್ವಹಿಸದ ಸಂಬಂಧಪಟ್ಟ ಏಜೆನ್ಸಿ ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. *ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ* -------------------------------- ಹೌದು ಆಸ್ಪತ್ರೆಯಲ್ಲಿ ಕೆಲ ಕೊಠಡಿಯಲ್ಲಿ ವಿದ್ಯುತ್ ಲೈಟ್ ಮತ್ತು ಪ್ಯಾನ್ ಇಲ್ಲ ಇದ್ದರು ಸರಿಯಾಗಿ ಕಾರ್ಯನಿರ್ವಸುತ್ತಿಲ್ಲ ಆದರೆ ಈ ಆಸ್ಪತ್ರೆ ಆರಂಭವಾಗಿದ್ದರು ಸಂಬಂಧಿಸಿದ ಏಜೆನ್ಸಿ ಯವರು ಸಹ ನಮಗೆ ಇನ್ನು ಹಸ್ತಾಂತರ ಮಾಡಿಲ್ಲ ಸಂಪೂರ್ಣ ಆಗುವವರೆಗೂ ಜವಾಬ್ದಾರಿ ತೆಗೆದುಕೊಳ್ಳುವದಿಲ್ಲ ಇನ್ನು ಸ್ವಲ್ಪ ಆಸ್ಪತ್ರೆಯಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಇವೆ ಸರಿ ಮಾಡಬೇಕಾಗಿದೆ. *ಡಾ.ಚಂದ್ರಕಲಾ ತಾಲೂಕು ವೈದ್ಯಾಧಿಕಾರಿ.*2
- ರಾಯಚೂರಿನಲ್ಲಿ ಆ.4 ರಂದು ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ: ಭಾವಚಿತ್ರ ಮೆರವಣಿಗೆ ರಾಯಚೂರು: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಾಯಚೂರು ಜಿಲ್ಲಾ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜ ಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಆಗಸ್ಟ್ 4 ರಂದು ಆಚರಿಸಲಾಗುತ್ತದೆ ಎಂದು ಜಿಲ್ಲಾ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಹರವಿ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9.30ಕ್ಕೆ ಬಸವ ವೃತ್ತದಿಂದ ಜಂಬಲದಿನ್ನಿ ರಂಗಮಂದಿರದವರೆಗೆ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ. ಬಳಿಕ ಬೆಳಿಗ್ಗೆ 11 ಗಂಟೆಗೆ ಜಂಬಲದಿನ್ನಿ ರಂಗಮಂದಿರದಲ್ಲಿ ಜಯಂತಿ ಅಂಗವಾಗಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಮಠಾಧೀಶರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸಮಾಜದ ಬಂಧುಗಳು, ಹಿತೈಷಿಗಳು, ಸಾರ್ವಜನಿಕರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು. ಸುದ್ದಿಗೊಷ್ಟಿಯಲ್ಲಿ ಗದೆಪ್ಪ ಎಂ, ಬಸವರಾಜ್, ಬಸವಂತ ರಾಯ, ಅಮರಪ್ಪ, ದೇವೇಂದ್ರಪ್ಪ ಸೇರಿದಂತೆ ಇತರರು ಇದ್ದರು.1
- ಕೆಎಸ್ಆರ್‌ಟಿಸಿ ಕಂಡಕ್ಟರ್ ಮೇಲೆ ಹಲ್ಲೆ: ಸಿಂದಗಿ ಬಳಿ ರಸ್ತೆ ತಡೆದು ಪುಂಡಾಟಿಕೆ, ಪ್ರಯಾಣಿಕರಲ್ಲಿ ಆತಂಕ! ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಾಳಹಳ್ಳಿ ಗ್ರಾಮದ ಬಳಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್‌ಟಿಸಿ) ಬಸ್ ತಡೆದು, ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಪ್ರಯಾಣಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಒಂದು ದಿನದ ಹಿಂದೆ ಮಾದರಿ ಗ್ರಾಮದ ಬಳಿ ನಡೆದ ರಸ್ತೆ ಜಗಳವೇ (ರೋಡ್-ರೇಜ್) ಈ ಘಟನೆಗೆ ಮುಖ್ಯ ಕಾರಣ ಎನ್ನಲಾಗಿದೆ. ಬಸ್‌ಗೆ ದಾರಿ ಬಿಡುವ ವಿಷಯಕ್ಕೆ ಸಂಬಂಧಿಸಿದಂತೆ ಬಸ್ ಕಂಡಕ್ಟರ್ ಹಾಗೂ ಆಟೋ ಚಾಲಕನ ನಡುವೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಈ ಗಲಾಟೆಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಆಟೋ ಚಾಲಕ, ಮರುದಿನ ಕಾಳಹಳ್ಳಿ ಗ್ರಾಮದ ಬಳಿ ಬಸ್ ತಡೆದು ಕಂಡಕ್ಟರ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕ ಸಾರಿಗೆ ನೌಕರನ ಮೇಲೆ ನಡೆದ ಈ ದಿಢೀರ್ ದಾಳಿಯಿಂದಾಗಿ ಬಸ್‌ನಲ್ಲಿದ್ದ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. ಕರ್ತವ್ಯದಲ್ಲಿದ್ದ ಸಾರಿಗೆ ಸಿಬ್ಬಂದಿ ಮೇಲಿನ ಈ ಹಲ್ಲೆಯನ್ನು ಸ್ಥಳೀಯ ನಿವಾಸಿಗಳು ತೀವ್ರವಾಗಿ ಖಂಡಿಸಿದ್ದಾರೆ. ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಹಾಗೂ ಪ್ರಯಾಣಿಕರು ಪೊಲೀಸರು ಮತ್ತು ಸಾರಿಗೆ ಇಲಾಖೆಯ ಉನ್ನತಾಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಕೆಎಸ್ಆರ್‌ಟಿಸಿ ಕಂಡಕ್ಟರ್ ಮೇಲೆ ಹಲ್ಲೆ: ಸಿಂದಗಿ ಬಳಿ ರಸ್ತೆ ತಡೆದು ಪುಂಡಾಟಿಕೆ, ಪ್ರಯಾಣಿಕರಲ್ಲಿ ಆತಂಕ! ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಾಳಹಳ್ಳಿ ಗ್ರಾಮದ ಬಳಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್‌ಟಿಸಿ) ಬಸ್ ತಡೆದು, ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಪ್ರಯಾಣಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಒಂದು ದಿನದ ಹಿಂದೆ ಮಾದರಿ ಗ್ರಾಮದ ಬಳಿ ನಡೆದ ರಸ್ತೆ ಜಗಳವೇ (ರೋಡ್-ರೇಜ್) ಈ ಘಟನೆಗೆ ಮುಖ್ಯ ಕಾರಣ ಎನ್ನಲಾಗಿದೆ. ಬಸ್‌ಗೆ ದಾರಿ ಬಿಡುವ ವಿಷಯಕ್ಕೆ ಸಂಬಂಧಿಸಿದಂತೆ ಬಸ್ ಕಂಡಕ್ಟರ್ ಹಾಗೂ ಆಟೋ ಚಾಲಕನ ನಡುವೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಈ ಗಲಾಟೆಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಆಟೋ ಚಾಲಕ, ಮರುದಿನ ಕಾಳಹಳ್ಳಿ ಗ್ರಾಮದ ಬಳಿ ಬಸ್ ತಡೆದು ಕಂಡಕ್ಟರ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕ ಸಾರಿಗೆ ನೌಕರನ ಮೇಲೆ ನಡೆದ ಈ ದಿಢೀರ್ ದಾಳಿಯಿಂದಾಗಿ ಬಸ್‌ನಲ್ಲಿದ್ದ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. ಕರ್ತವ್ಯದಲ್ಲಿದ್ದ ಸಾರಿಗೆ ಸಿಬ್ಬಂದಿ ಮೇಲಿನ ಈ ಹಲ್ಲೆಯನ್ನು ಸ್ಥಳೀಯ ನಿವಾಸಿಗಳು ತೀವ್ರವಾಗಿ ಖಂಡಿಸಿದ್ದಾರೆ. ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಹಾಗೂ ಪ್ರಯಾಣಿಕರು ಪೊಲೀಸರು ಮತ್ತು ಸಾರಿಗೆ ಇಲಾಖೆಯ ಉನ್ನತಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.1