ಮಳವಳ್ಳಿ ತಾಲೂಕಿನ ಹಲಗೂರು ಸಮೀಪ ನಂಜಾಪುರ ಗ್ರಾಮದಲ್ಲಿ 8 ಅಡಿ, 30 ಕೆಜಿ ತೂಕದ ಹೆಬ್ಬಾವು ಪತ್ತೆ. ಹಲಗೂರು:- ಗೊಲ್ಲರಹಳ್ಳಿ ಗ್ರಾಮದ ಸಮೀಪ ಇರುವ ನಂಜಾಪುರ ಗ್ರಾಮದ ಮಹದೇವು ಎಂಬುವರ ಜಮೀನಿನಲ್ಲಿ ಬುಧವಾರ ರಾತ್ರಿ ಸುಮಾರು ಎಂಟು ಅಡಿ ಉದ್ದದ 30 ಕೆಜಿ ತೂಕದ ಹೆಬ್ಬಾವು ಪತ್ತೆಯಾಗಿದ್ದು ವಿಷಯ ತಿಳಿದು ಸ್ಥಳಕ್ಕೆ ಬಂದ ಉರಗ ತಜ್ಞರಾದ ಜಗದೀಶ ಮತ್ತು ಕೃಷ್ಣ ಹೆಬ್ಬಾವನ್ನು ಹಿಡಿದು ಸುರಕ್ಷಿತವಾಗಿ ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಬಿಟ್ಟಿರುತ್ತಾರೆ. ನಂಜಾಪುರ ಗ್ರಾಮದ ಮಹಾದೇವ ಎಂಬುವರ ಜಮೀನಿನಲ್ಲಿ ಬುಧವಾರ ರಾತ್ರಿ ಭಾರಿ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡ ತಕ್ಷಣ ಅವರು ಅರಣ್ಯ ಇಲಾಖೆಯವರಿಗೂ ಮತ್ತು ಉರಗ ತಜ್ಞರಿಗೆ ವಿಷಯ ತಿಳಿಸಿದ ಮೇರೆಗೆ ಸ್ಥಳಕ್ಕೆ ತಕ್ಷಣ ಬಂದ ಉರಗ ತಜ್ಞರಾದ ಜಗದೀಶ ಮತ್ತು ಕೃಷ್ಣ ಸುರಕ್ಷಿತವಾಗಿ ಅದನ್ನು ಹಿಡಿದು ಮುತ್ತತ್ತಿ ಅರಣ್ಯಪ್ರದೇಶಕ್ಕೆ ಸುರಕ್ಷಿತವಾಗಿ ಹೆಬ್ಬಾವನ್ನು ಬಿಟ್ಟು, ನಂತರ ಜಗದೀಶ್ ಮಾತನಾಡುತ್ತಾ ನಮ್ಮ ಹಲಗೂರು ಹೋಬಳಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಹೆಚ್ಚಾಗಿ ಹೆಬ್ಬಾವುಗಳು ಕಾಣಿಸಿಕೊಳ್ಳುತ್ತಿದ್ದು, ಅವುಗಳು ರೈತರು ಸಾಕಿದ ಆಡು ,ಕುರಿ, ಮೇಕೆ ಮತ್ತು ಇತರೆ ಪ್ರಾಣಿಗಳನ್ನು ಮೊದಲು ಕಾಲನ್ನು ಹಿಡಿದು ನಂತರ ಅದನ್ನು ಸುತ್ತಿಕೊಂಡು ಅದರ ಪ್ರಾಣ ಹೋದ ನಂತರ ನುಂಗುತ್ತದೆ ,ಆಹಾರದ ಕೊರತೆಯಿಂದ ಅವುಗಳು ಜಮೀನಿನ ಹತ್ತಿರ ಹೆಚ್ಚು ಓಡಾಡುತ್ತಿವೆ ಇದುವರೆಗೂ 12 ರಿಂದ 13 ಹೆಬ್ಬಾವುಗಳನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಯವರ ಸಮ್ಮುಖದಲ್ಲಿ ಅರಣ್ಯ ಪ್ರದೇಶಕ್ಕೆ ಬಿಟ್ಟಿರುತ್ತೇನೆ ಮತ್ತು ನಾಗರಹಾವು, ಕೇರೆ ಹಾವು ಅಥವಾ ಇನ್ಯಾವುದೇ ತರದ ಹಾವುಗಳು ಇದ್ದರೂ ಸಹ ಅವುಗಳನ್ನು ಸಾಯಿಸಲು ಹೋಗಬೇಡಿ ,ನಮಗೆ ವಿಷಯ ತಿಳಿಸಿದ ತಕ್ಷಣ ನಾವು ಬಂದು ಯಾವುದೇ ಸಂಭಾವನೆ ಪಡೆಯದೆ ಸುರಕ್ಷಿತವಾಗಿ ನಾನಾಗಲೇ ಅಥವಾ ನನ್ನ ಸಹಪಾಠಿ ಕೃಷ್ಣನಾಗಲಿ ಬಂದು ಅವನ್ನು ಹಿಡಿದು ಕಾಡಿಗೆ ಬಿಡುತ್ತೇವೆ .ನಮಗೆ ದೂರವಾಣಿ ಕರೆ ಮಾಡಿದರೆ ಸಾಕು ನಾವೇ ಬರುತ್ತೇವೆ ನಮ್ಮ ದೂರವಾಣಿ ಸಂಖ್ಯೆ 8431500189 ಜಗದೀಶ.9686955795 ಕೃಷ್ಣ ಆಗಿರುತ್ತದೆ ಕರೆ ಮಾಡುವಂತೆ ಮನವಿ ಮಾಡಿದರು. ಜಮೀನಿನ ಮಾಲೀಕರಾದ ಮಹಾದೇವ ಮಾತನಾಡಿ, ನಾವು ರಾತ್ರಿ ಹಗಲುಎನ್ನದೆ ಜಮೀನಿನಲ್ಲಿ ನೀರು ಹಾಯಿಸಿಕೊಂಡು ವ್ಯವಸಾಯ ಮಾಡಿಕೊಂಡು ಜೀವನ ನಡೆಸುತಿದ್ದೇವೆ .ಎಂದಿನಂತೆ ಬುಧವಾರ ರಾತ್ರಿ ಜಮೀನಿಗೆ ನೀರು ಹಾಯಿಸಲು ಬಂದಾಗ ಹೆಬ್ಬಾವುಕಂಡು ತುಂಬಾ ಭಯಪಟ್ಟಿದ್ದೇನೆ, ಮತ್ತು ಇತ್ತೀಚೆಗೆ ಚಿರತೆ ಹಾವಳಿಯು ಸಹ ಇದೆ ಎಂದರು . ಹಲಗೂರು ಸಮೀಪ ಹೆಬ್ಬಾವು ಪತ್ತೆ ,ಉರಗ ತಜ್ಞರು ಹೆಬ್ಬಾವನ್ನು ಹಿಡಿದಿರುವ ಚಿತ್ರ.

- ಹನೂರು: ತಾಲೂಕಿನ ಬೂದಿಪಡಗ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ಉಂಟಾಗಿ, ಪೊಲೀಸ್ ಪೇದೆಯೊಬ್ಬರ ಪುತ್ರನಿಂದ ಜಿಲ್ಲಾ ಬುಡಕಟ್ಟು ಗಿರಿಜನ ಸಂಘದ ಅಧ್ಯಕ್ಷ ರಂಗೇಗೌಡ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾದ ಘಟನೆ ಖಂಡಿಸಿ, ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಡಕಟ್ಟು ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಲೋಕನಹಳ್ಳಿ ಹೋಬಳಿಯ ಬೂದಿಪಡಗ ಗ್ರಾಮದಲ್ಲಿ ಕಳೆದ ಎರಡು–ಮೂರು ವರ್ಷಗಳಿಂದ ಅಕ್ರಮವಾಗಿ ಸಾರಾಯಿ ಮಾರಾಟ ನಡೆಯುತ್ತಿದೆ ಎನ್ನಲಾಗಿದ್ದು, ಇದರಿಂದ ಗ್ರಾಮದಲ್ಲಿ ಅಹಿತಕರ ಘಟನೆಗಳು ಹೆಚ್ಚಾಗುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಹಾಗೂ ವಿವಿಧ ಸಮುದಾಯದ ಯಜಮಾನರು ಸಭೆ ನಡೆಸಿ, ಅಕ್ರಮ ಮದ್ಯ ಮಾರಾಟ ಮಾಡುವವರಿಗೆ ಎಚ್ಚರಿಕೆ ನೀಡಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ತೀಟೆ ಜಗಳದ ವೇಳೆ, ಬೂದಿಪಡಗ ಗ್ರಾಮದ ಪೊಲೀಸ್ ಪೇದೆಯೊಬ್ಬರ ಪುತ್ರ ಕಿಶೋರ್ ಎಂಬಾತನು, ಗ್ರಾಮದ ಮುಖಂಡ, ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಜಿಲ್ಲಾ ಬುಡಕಟ್ಟು ಗಿರಿಜನ ಸಂಘದ ಅಧ್ಯಕ್ಷ ರಂಗೇಗೌಡ ಅವರ ಮನೆಗೆ ನುಗ್ಗಿ ಗಲಾಟೆ ನಡೆಸಿ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಯ ನಂತರ ರಂಗೇಗೌಡ ಅವರು ಹನೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದ್ದರು. ಆದರೆ ಆರೋಪಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆ ಬೇಸತ್ತ ಬುಡಕಟ್ಟು ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಬುಡಕಟ್ಟು ಕಾರ್ಯದರ್ಶಿ ಮಾದೇಗೌಡ, ಆಧಿವಾಡಿ ಪೋಡುಗಳಲ್ಲಿ ಅಕ್ರಮ ಮದ್ಯ ಮಾರಾಟವನ್ನು ತಕ್ಷಣ ನಿಲ್ಲಿಸಿ, ನಮ್ಮ ಅದ್ಯಕ್ಷರ ಮೇಲೆ ಹಲ್ಲೆ ನಡೆಸಿದ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರ ಕುಟುಂಬದವರಿಂದಲೇ ಕಾನೂನು ಉಲ್ಲಂಘನೆ ನಡೆಯುತ್ತಿರುವುದು ಖಂಡನೀಯ ಎಂದು ಹೇಳಿದರು.1
- *ಭಾರತ ನಲ್ಲಿ ವೈರಲ್*1
- ಸ್ಮಶಾನಕ್ಕೆ ರಸ್ತೆ ಕಲ್ಪಿಸಿ ಕೊಡದಿದ್ದರೆ ಉಗ್ರ ಹೋರಾಟ - ಗ್ರಾಮರಸ್ಥರು ಎಚ್ಚರಿಕೆ. ಹನೂರು: ತಾಲೂಕಿನ ಭೈರನತ್ತ ಗ್ರಾಮದ ಪರಿಶಿಷ್ಟ ಜಾತಿ ಮಾದಿಗ ಸಮುದಾಯಕ್ಕೆ ಸೇರಿದ ಸ್ಮಶಾನಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಖಾಸಗಿ ವ್ಯಕ್ತಿ ಒತ್ತುವರಿ ಮಾಡಿಕೊಂಡಿರುವ ರಸ್ತೆ ತೆರವು ಮಾಡದಿದ್ದರೆ ತಾಲೂಕು ಮಾದಿಗ ಸಮುದಾಯದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಮುದಾಯದ ಮುಖಂಡರು ಎಚ್ಚರಿಕೆ ನೀಡಿದರು. ತಾಲ್ಲೂಕಿನ ಭೈರನತ್ತ ಗ್ರಾಮದ ಪರಿಶಿಷ್ಟ ಜಾತಿ ಮಾದಿಗ ಸಮುದಾಯದ ಸ್ಮಶಾನಕ್ಕೆ ತೆರಳುವ ರಸ್ತೆಯನ್ನು ಇದೇ ಗ್ರಾಮದ ಲೋಕೇಶ್ ಎಂಬವರು ಒತ್ತುವರಿ ಮಾಡಿಕೊಂಡಿದ್ದರು. ಈ ಸಂಬಂಧ ಒತ್ತುವರಿಯನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಈ ಸಂಬಂಧ ತಹಶೀಲ್ದಾರ್ ಕೆಎಸ್ ಚೈತ್ರ ರವರ ಸಮ್ಮುಖದಲ್ಲಿ ಸರ್ವೆ ಅಧಿಕಾರಿಗಳು ಸ್ಥಳಕ್ಕೆ ಬಂದು ಸರ್ವೆಮಾಡಿದರು. ಆ ಪ್ರಕಾರ ಹಿಂದೆ ಇದ್ದ ರೂಢಿಗತ ದಾರಿಯು ಖಾಸಗಿ ವ್ಯಕ್ತಿಗೆ ಸೇರಿದ ಪಟ್ಟಾ ಭೂಮಿಯಾಗಿದೆ. ಅದರ ಪಕ್ಕದಲ್ಲಿರುವ ಹಳ್ಳದಲ್ಲಿ ನಿಮಗೆ ದಾರಿ ಬಿಡಿಸಬೇಕು ಎಂದು ಭೂಮಾಪನ ಇಲಾಖೆ ಅಧಿಕಾರಿ ನಟರಾಜು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ಅರಿತ ತಹಶೀಲ್ದಾರ್ ರವರು ಗ್ರಾಮಸ್ಥರು ಧೃತಿಗೆಡಬೇಡಿ. ನಿಮಗೆ ರಸ್ತೆ ಕಲ್ಪಿಸಿಕೊಡುವ ಜವಾಬ್ದಾರಿ ನಮ್ಮದು. ಒಂದು ವಾರ ಗಡುವು ನೀಡಿ, ಜಮೀನು ಮಾಲೀಕರ ಜೊತೆ ಮಾತನಾಡಿ ರಸ್ತೆಗೆ ಅಗತ್ಯವಾಗಿರುವ ಜಾಗ ಬಿಡಿಸಲು ಮನವೊಲಿಸಲಾಗುವುದು ಎಂದು ಭರವಸೆ ನೀಡಿದರು.4
- ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೋಲೀಸ್ ಠಾಣೆಯ ಪಿಎಸ್ಐ ಶ್ಯಾಮಲಾ ರವರಿಂದ ಪತ್ರಕರ್ತರಿಗೆ ಹೆಲ್ಮೆಟ್ ವಿತರಣೆ1
- ವಿಬಿ-ಜಿ ರಾಮ್ ಜಿ ಮಸೂದೆ ಕೇಂದ್ರ ಸರಕಾರ ಹಿಂದಕ್ಕೆ ಪಡೆಯದಿದ್ದರೆ ಪ್ರಬಲ ಹೋರಾಟ: ಸಚಿವ ದಿನೇಶ್ ಗುಂಡೂರಾವ್ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ 'ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ' (ನರೇಗಾ) ಹೆಸರಿನಲ್ಲಿ ಗಾಂಧಿ ಹೆಸರನ್ನು ಕೈಬಿಟ್ಟು 'ವಿಕಸಿತ ಭಾರತ- ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಮಸೂದೆ, 2025'ಯನ್ನು ಮಂಡಿಸುವ ಮೊದಲು ಯಾವುದೇ ಚರ್ಚೆಯನ್ನು ನಡೆಸದೇ ತನ್ನ ಬುಲ್ಡೋಜರ್ ಸರ್ವಾಧಿಕಾರ ನೀತಿಯಿಂದ ಮಸೂದೆಯನ್ನು ಪಾಸ್ ಮಾಡಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ಅವರು ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಮಸೂದೆಯಿಂದ ಗಾಂಧಿ ಹೆಸರನ್ನು ತೆಗೆದು ಹಾಕುವ ಹುನ್ನಾರವನ್ನು ಸರಕಾರ ಮಾಡುತ್ತಾ ಇದೆ. ಜನರು ಇದನ್ನು ಒಪ್ಪುವುದಿಲ್ಲ ಎಂದು ಗೊತ್ತಿದ್ದರೂ ಸಹ ಈ ಮಸೂದೆಯನ್ನು ಜಾರಿಗೆ ತರಲಾಗುತ್ತಿದೆ. ಈ ಮೊದಲಿದ್ದ ಉದ್ಯೋಗ ಖಾತರಿ ಯೋಜನೆಯನ್ನು ಹೊಸ ಕಾನೂನಿನ ಮೂಲಕ ದುರ್ಬಲ ಮಾಡಲಾಗಿದೆ . ಆರ್ ಎಸ್ ಎಸ್, ಬಿಜೆಪಿಗರಿಗೆ ದೇಶದ ಅಭಿವೃದ್ಧಿಗೆ ಮಹತ್ವವನ್ನು ನೀಡುವ ಬದಲು ಈ ಮೊದಲು ಜನರ ಕಲ್ಯಾಣವನ್ನು ಮಾಡುತ್ತಿದ್ದ ಯೋಜನೆಯನ್ನು ನಿಷ್ತ್ರೀಯ ಮಾಡುವ ಉದ್ದೇಶವನ್ನು ಹೊಂದಿದ್ದಾರೆ. ಈ ಕ್ರಮಕ್ಕೆ ಕಾಂಗ್ರೆಸ್ ತೀವ್ರವಾಗಿ ಖಂಡನೆಯನ್ನು ವ್ಯಕ್ತಪಡಿಸುತ್ತಿದೆ. ನರೇಗಾ ಹೋಗಿ ವಿಬಿ-ಜಿ ರಾಮ್ ಜಿ ಎಂದು ಮಾಡಲಾಗಿದ್ದು ಇದರಲ್ಲಿ ರಾಮನ ಹೆಸರನ್ನು ಯಾಕೆ ಸೇರಿಸಲಾಗಿದೆಯೋ ತಿಳಿಯದು ಎಂದು ಪ್ರಶ್ನೆ ಮಾಡಿದರು. ವಿಬಿ-ಜಿ ರಾಮ್ ಜಿ ಯೋಜನೆ ಕೇಂದ್ರ ಸರಕಾರದ್ದು ಆದರೆ ಅದರಲ್ಲಿ ರಾಜ್ಯ ಸರಕಾರದ ಪಾಲು ಹೆಚ್ಚಿಗೆ ಇದೆ. ಆರ್ಥಿಕವಾಗಿ ಬಡವಾದ ದೇಶಗಳಿಗೆ ಅವುಗಳನ್ನು ಭರಿಸುವ ಶಕ್ತಿ ಇದೆಯೇ? ಇದು ಉದ್ಯೋಗ ಗ್ಯಾರಂಟಿ ಯೋಜನೆಯಲ್ಲ ಇದು ಉದ್ಯೋಗ ಬೋಗಸ್ ಯೋಜನೆ ಎಂದು ಅವರು ಕಿಡಿಕಾರಿದರು. ಉತ್ತಮ ಕಾನೂನನ್ನು ಯಾಕೆ ವಿಸರ್ಜನೆ ಮಾಡಲಾಗಿದೆ ಎಂಬುದೇ ತಿಳಿತಾ ಇಲ್ಲ. ಇದು ಪಂಚಾಯತ್ ರಾಜ್ ವ್ಯವಸ್ಥೆಯ ಮೇಲೆ ಚಪ್ಪಡಿ ಕಲ್ಲುಹಾಕಿದ ಹಾಗೆ ಆಗಿದೆ. ಇದರಿಂದ ವಿಕೇಂದ್ರೀಕರಣ ಆಡಳಿತ ಸಂಪೂರ್ಣವಾಗಿ ಹದಗೆಟ್ಟು ಕೇಂದ್ರೀಕರಣ ನೀತಿಗೆ ಅಡಿಪಾಯ ಹಾಕಲಿದೆ ಎಂದರು. ಈ ಮಸೂದೆಯನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಇಲ್ಲದಿದ್ದರೆ ಕಾಂಗ್ರೆಸ್ ಸರಕಾರ ದೊಡ್ಡ ಮಟ್ಟದ ಹೋರಾಟವನ್ನು ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು . ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾ, ಪಕ್ಷದ ಮುಖಂಡರಾದ ಪದ್ಮರಾಜ್ ಪೂಜಾರಿ, ವಿಶ್ವಾಸ್ ಕುಮಾರ್, ವಿನಯ್ ರಾಜ್, ಶುಭೋದಯ ಆಳ್ವ , ಲಾವಣ್ಯ ಬಲ್ಲಾಳ್ ಸಹಿತ ಮುಂತಾದವರು ಉಪಸ್ಥಿತರಿದ್ದರು. ವರದಿ: ಶಂಶೀರ್ ಬುಡೋಳಿ1
- ಭೀಕರ ಅಪಘಾತ: ಬಾಲಕಿ ಸೇರಿ ನಾಲ್ವರು ಸ್ವಾಮಿ ಅಯ್ಯಪ್ಪ ಭಕ್ತರು ಸಾವು ತುಮಕೂರಿನ :ಜಿಲ್ಲೆಯ ಕೋರ ಬಳಿ ಶುಕ್ರವಾರ ಬೆಳಗಿನ ವೇಳೆ ಲಾರಿಗೆ ಕ್ರೂಸರ್ ವಾಹನ ಡಿಕ್ಕಿಯಾಗಿ ಬಾಲಕಿ ಸೇರಿ ನಾಲ್ವರು ಅಯ್ಯಪ್ಪ ಭಕ್ತರು ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಕೊಪ್ಪಳ ಜಿಲ್ಲೆ ಕುಕನೂರು ತಾಲ್ಲೂಕಿನ ಸಾಕ್ಷಿ (7), ಮಾರುತಪ್ಪ, (45), ವೆಂಕಟೇಶ (30), ಗವಿಸಿದ್ದಪ್ಪ (28)ಮೃತರು. ಅಯ್ಯಪ್ಪಸ್ವಾಮಿ ದರ್ಶನ ಮುಗಿಸಿಕೊಂಡು ವಾಪಸ್ ತೆರಳುವಾಗ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.1
- ಹೊಳಲ್ಕೆರೆ ಪಟ್ಟಣದಲ್ಲಿ ಇದೇ ಜನವರಿ 14 ರಂದು ಸಿದ್ದರಾಮೇಶ್ವರರ 853 ನೇ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾಗಿ ಶಾಸಕ ಎಂ ಚಂದ್ರಪ್ಪ ತಿಳಿಸಿದ್ದಾರೆ. ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಂ ಚಂದ್ರಪ್ಪ ಅವರು ಮಾತನಾಡಿದ್ದು ಇದೇ 14 ರಂದು ಹೊಳಲ್ಕೆರೆ ಪಟ್ಟಣದ ವಾಲ್ಮೀಕಿ ಮೈದಾನದಲ್ಲಿ ಶ್ರೀ ಗುರು ಸಿದ್ದರಾಮೇಶ್ವರರ 853 ನೇ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎರಡು ದಿನಗಳ ಕಾಲ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದ್ದಾರೆ1
- ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಏಳು ಅಂಗಡಿಗಳು ಸಂಪೂರ್ಣವಾಗಿ ಭಸ್ಮವಾಗಿವೆ. ಯಳಂದೂರು ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಕ್ಷೇತ್ರವಾಗಿರುವ ಬಿಳಿಗಿರಿರಂಗನ ಬೆಟ್ಟದಲ್ಲಿ ಶುಕ್ರವಾರ ಬೆಳಗಿನ ಜಾವ ಸುಮಾರು 3.30ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಬಿಳಿಗಿರಿರಂಗನ ಬೆಟ್ಟದ ಸರ್ಕಲ್ ಪ್ರದೇಶದಲ್ಲಿರುವ ಅಂಗಡಿಗಳಿಗೆ ಈ ಬೆಂಕಿ ವ್ಯಾಪಿಸಿದ್ದು, ಏಳು ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಅಂಗಡಿಗಳಲ್ಲಿ ಅನಿಲ ಸಿಲಿಂಡರ್‌ಗಳು ಇದ್ದ ಕಾರಣ ಬೆಂಕಿಯನ್ನು ತಕ್ಷಣ ನಂದಿಸಲು ಸಾಧ್ಯವಾಗಲಿಲ್ಲ. ಜೊತೆಗೆ ರಾತ್ರಿ ಸಮಯದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧವಿದ್ದರಿಂದ ನೀರು ತರಲು ಸಾಧ್ಯವಾಗದೆ, ಬೆಂಕಿ ಇನ್ನಷ್ಟು ವ್ಯಾಪಿಸಲು ಕಾರಣವಾಯಿತು. ಬೆಂಕಿಯ ಕೆನ್ನಾಲಿಗೆಗೆ ಅಂಗಡಿಗಳಲ್ಲಿದ್ದ ಎಲ್ಲಾ ವಸ್ತುಗಳು ನಾಶವಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅದೃಷ್ಟವಶಾತ್ ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.2