logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

KSRTC ಬಸ್–ಬೈಕ್ ಭೀಕರ ಅಪಘಾತ; ಮೂವರ ಸಾವು ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಹೊರವಲಯದಲ್ಲಿ KSRTC ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ದುರಂತ ಘಟನೆ ನಡೆದಿದೆ. ಸವದತ್ತಿಯಿಂದ ಧಾರವಾಡದ ಕಡೆಗೆ KSRTC ಬಸ್ ತೆರಳುತ್ತಿದ್ದ ವೇಳೆ, ಧಾರವಾಡದಿಂದ ಸವದತ್ತಿ ಕಡೆಗೆ ಬರುತ್ತಿದ್ದ ಬೈಕ್‌ಗೆ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ವಿನೋದ ಹೊಗೆನ್ನವರ, ಆಕಾಶ್ ಜಾಧವ್ ಹಾಗೂ ರವಿ ಕುರುಬರ ಎಂದು ಗುರುತಿಸಲಾಗಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸವದತ್ತಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಘಟನೆಯಿಂದ ಸವದತ್ತಿ–ಧಾರವಾಡ ಮಾರ್ಗದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

1 hr ago
user_ಜನತಾ ಕ್ರಾಂತಿ ನ್ಯೂಸ್
ಜನತಾ ಕ್ರಾಂತಿ ನ್ಯೂಸ್
ಬೆಳಗಾವಿ, ಬೆಳಗಾವಿ, ಕರ್ನಾಟಕ•
1 hr ago
96be99c9-5802-42ba-b391-2ec0b2c07f47
c4fc6cc2-6905-4091-8956-ffaacf335093
15eb321d-18fc-48da-8bd4-951438b6c9c9

KSRTC ಬಸ್–ಬೈಕ್ ಭೀಕರ ಅಪಘಾತ; ಮೂವರ ಸಾವು ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಹೊರವಲಯದಲ್ಲಿ KSRTC ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ದುರಂತ ಘಟನೆ ನಡೆದಿದೆ. ಸವದತ್ತಿಯಿಂದ ಧಾರವಾಡದ ಕಡೆಗೆ KSRTC ಬಸ್ ತೆರಳುತ್ತಿದ್ದ ವೇಳೆ, ಧಾರವಾಡದಿಂದ ಸವದತ್ತಿ ಕಡೆಗೆ ಬರುತ್ತಿದ್ದ ಬೈಕ್‌ಗೆ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ವಿನೋದ ಹೊಗೆನ್ನವರ, ಆಕಾಶ್ ಜಾಧವ್ ಹಾಗೂ ರವಿ ಕುರುಬರ ಎಂದು ಗುರುತಿಸಲಾಗಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸವದತ್ತಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಘಟನೆಯಿಂದ ಸವದತ್ತಿ–ಧಾರವಾಡ ಮಾರ್ಗದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

More news from ಕರ್ನಾಟಕ and nearby areas
  • ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ತಹಶೀಲ್ದಾರ್ ಗೆ ರೈತರ ಮನವಿ ಮುಧೋಳ : ಅಸಮರ್ಪಕ ಹಾಗೂ ಗುಣಮಟ್ಟವಿಲ್ಲದ ವಿದ್ಯುತ್ ಪೂರೈಕೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿ ಪಂಪ್‌ಸೆಟ್‌ಗಳು, ಮೋಟಾರ್‌ಗಳು ಹಾಗೂ ವಿದ್ಯುತ್ ಬೋರ್ಡ್‌ಗಳು ಪದೇಪದೇ ಸುಟ್ಟುಹೋಗುತ್ತಿವೆ. ಕೂಡಲೇ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಆಗ್ರಹಿಸಿ ರೈತರು ತಹಶೀಲ್ದಾರ್ ಅವರ ಮುಖಾಂತರ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಇಂಧನ ಸಚಿವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಸುಭಾಷ್ ಸಿರಬೂರ, ಬಸವಂತಪ್ಪ ಕಾಂಬಳೆ, ಮುತ್ತಪ್ಪ ಕೋಮಾರ , ದುಡ್ಡಪ್ಪ ಯರಗಟ್ಟಿ, ಮನುನಾಥ ಚಿಕ್ಕೂರ, ಮಂಜುನಾಥ ಅರಕೇರಿ ಹಾಗೂ ಮಂಜುನಾಥ ಲಕ್ಕಂ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.
    1
    ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ತಹಶೀಲ್ದಾರ್ ಗೆ ರೈತರ ಮನವಿ
ಮುಧೋಳ : ಅಸಮರ್ಪಕ ಹಾಗೂ ಗುಣಮಟ್ಟವಿಲ್ಲದ ವಿದ್ಯುತ್ ಪೂರೈಕೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿ ಪಂಪ್‌ಸೆಟ್‌ಗಳು, ಮೋಟಾರ್‌ಗಳು ಹಾಗೂ ವಿದ್ಯುತ್ ಬೋರ್ಡ್‌ಗಳು ಪದೇಪದೇ ಸುಟ್ಟುಹೋಗುತ್ತಿವೆ. ಕೂಡಲೇ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಆಗ್ರಹಿಸಿ ರೈತರು ತಹಶೀಲ್ದಾರ್ ಅವರ ಮುಖಾಂತರ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಇಂಧನ ಸಚಿವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಸುಭಾಷ್ ಸಿರಬೂರ, ಬಸವಂತಪ್ಪ ಕಾಂಬಳೆ, ಮುತ್ತಪ್ಪ ಕೋಮಾರ , ದುಡ್ಡಪ್ಪ ಯರಗಟ್ಟಿ, ಮನುನಾಥ ಚಿಕ್ಕೂರ, ಮಂಜುನಾಥ ಅರಕೇರಿ ಹಾಗೂ ಮಂಜುನಾಥ ಲಕ್ಕಂ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.
    user_ಗೋವಿಂದಪ್ಪ ತಳವಾರ
    ಗೋವಿಂದಪ್ಪ ತಳವಾರ
    ಮುಧೋಳ, ಬಾಗಲಕೋಟೆ, ಕರ್ನಾಟಕ•
    18 hrs ago
  • ಅದ್ದೂರಿಯಾಗಿ ಜರುಗಿದ ಹಲ್ಯಾಳ ಶ್ರೀ ಶಿವರಾಯ ಮುತ್ಯಾ ಜಾತ್ರಾ ಮಹೋತ್ಸವ ​ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಕ್ಷೇತ್ರ ಹಲ್ಯಾಳ ಗ್ರಾಮದ ಆರಾಧ್ಯ ದೈವ ಶ್ರೀ ಶಿವರಾಯ ಮುತ್ಯಾ ಜಾತ್ರಾ ಮಹೋತ್ಸವವು ಅತ್ಯಂತ ಸಂಭ್ರಮ, ಸಡಗರ ಹಾಗೂ ಭಕ್ತಿಭಾವದಿಂದ ಅದ್ದೂರಿಯಾಗಿ ಜರುಗಿತು. ​ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳು ​ಪ್ರವಚನ ಕಾರ್ಯಕ್ರಮ: ಜಾತ್ರಾ ಮಹೋತ್ಸವದ ಅಂಗವಾಗಿ ಸಿದ್ದೇಶ್ವರ ಸ್ವಾಮೀಜಿ ಅವರಿಂದ ಘತರಗಿ ಭಾಗ್ಯವತಿ ದೇವಿಯ ಜೀವನ ಚರಿತ್ರೆ ಕುರಿತು ಪ್ರವಚನ ಜರುಗಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರವಚನ ಆಲಿಸಿದರು. ​ಕುಂಭಮೇಳ: ಜಾತ್ರೆಯ ಪೂರ್ವಭಾವಿಯಾಗಿ ಕೃಷ್ಣಾ ನದಿಯಿಂದ ಹಲ್ಯಾಳ ಗ್ರಾಮದವರೆಗೆ ಮುತ್ತೈದೆಯರಿಂದ ವಿಜೃಂಭಣೆಯ ಕುಂಭಮೇಳ ನಡೆಯಿತು. ಮಹಿಳೆಯರು ಕುಂಭ ಹೊತ್ತು ಭಕ್ತಿಭಾವದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡರು. ​ವಿಶೇಷ ಪೂಜೆ ಮತ್ತು ಮಹಾಭಿಷೇಕ: ಜಾತ್ರೆಯ ದಿನ ಮುಂಜಾನೆ ಶ್ರೀ ಶಿವರಾಯ ಮುತ್ಯಾ ದೇವಸ್ಥಾನದ ಪೂಜಾರಿ ಸೋಮಣ್ಣ ಪೂಜಾರಿ ಅವರ ನೇತೃತ್ವದಲ್ಲಿ ದೇವಸ್ಥಾನದ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಮಹಾಭಿಷೇಕ ನೆರವೇರಿಸಲಾಯಿತು. ​ಪಲ್ಲಕ್ಕಿ ಉತ್ಸವ: ಶ್ರೀ ಶಿವರಾಯ ಮುತ್ಯಾ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಡೊಳ್ಳಿನ ಮೇಳದ ತಂಡಗಳು ಜಾತ್ರೆಗೆ ವಿಶೇಷ ಮೆರುಗು ನೀಡಿದವು. ಭಕ್ತರು ಭಕ್ತಿಗೀತೆ ಹಾಗೂ ಘೋಷಣೆಗಳೊಂದಿಗೆ ಪಾಲ್ಗೊಂಡು ಸಂಭ್ರಮಿಸಿದರು. ​ವಿಶೇಷ ಆಚರಣೆಗಳು ಮತ್ತು ಪ್ರಸಾದ ವಿನಿಯೋಗ ​ಗ್ರಾಮದ ಹೃದಯಭಾಗದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಪೂಜಾರಿಗಳಿಂದ ಅಲಗ ಹಾಯುವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು. ಈ ವೇಳೆ ದೇವರಲ್ಲಿ ಹರಕೆ ಹೊತ್ತ ಭಕ್ತರು ಶಿವರಾಯ ಮುತ್ಯಾ ಮೂರ್ತಿಗೆ ಭಂಡಾರ ಅರ್ಪಿಸಿ ತಮ್ಮ ಹರಕೆ ತೀರಿಸಿದರು. ನಂತರ ಆಗಮಿಸಿದ್ದ ಸಮಸ್ತ ಭಕ್ತರು ವಿಶೇಷ ಪ್ರಸಾದ ಸ್ವೀಕರಿಸಿ ಶ್ರೀ ಶಿವರಾಯ ಮುತ್ಯಾ ಆಶೀರ್ವಾದಕ್ಕೆ ಪಾತ್ರರಾದರು. ​ಗಣ್ಯರ ಉಪಸ್ಥಿತಿ ​ಈ ಜಾತ್ರಾ ಮಹೋತ್ಸವದಲ್ಲಿ ಗುಂಡು ಹಿರೇಕುರುಬರ, ಮುತ್ತಣ್ಣ ಸನದಿ, ಮುದುಕಣ್ಣ ಶೇಗುಣಸಿ, ಕಾಕಾಸಾಹೇಬ್ ಪಾಟೀಲ, ಚಂದ್ರಕಾಂತ ಕಾಗವಾಡ, ಸಿದ್ದಪ್ಪ ಲೋಕರ, ಕಾಂತೇಶ ಬಾಗಿ, ರಾಯಪ್ಪ ಬಾಗಿ, ಅಣ್ಣಪ್ಪ ಬಾಗಿ, ಗುಳ್ಳಪ್ಪ ನಾಯಿಕ, ಸಿದ್ದು ಮಗದುಮ, ಆಕಾಶ ಬಾಗಿ, ಪರಶುರಾಮ ಡಂಗಿ ಹಾಗೂ ಸಚಿನ್ ಮೆಂಡಿಗೇರಿ ಸೇರಿದಂತೆ ಗ್ರಾಮದ ಗಣ್ಯರು, ಹಲ್ಯಾಳ ಹಾಗೂ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡು ಯಶಸ್ವಿಗೊಳಿಸಿದರು.
    4
    ಅದ್ದೂರಿಯಾಗಿ ಜರುಗಿದ ಹಲ್ಯಾಳ ಶ್ರೀ ಶಿವರಾಯ ಮುತ್ಯಾ ಜಾತ್ರಾ ಮಹೋತ್ಸವ
​ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಕ್ಷೇತ್ರ ಹಲ್ಯಾಳ ಗ್ರಾಮದ ಆರಾಧ್ಯ ದೈವ ಶ್ರೀ ಶಿವರಾಯ ಮುತ್ಯಾ ಜಾತ್ರಾ ಮಹೋತ್ಸವವು ಅತ್ಯಂತ ಸಂಭ್ರಮ, ಸಡಗರ ಹಾಗೂ ಭಕ್ತಿಭಾವದಿಂದ ಅದ್ದೂರಿಯಾಗಿ ಜರುಗಿತು.
​ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳು
​ಪ್ರವಚನ ಕಾರ್ಯಕ್ರಮ: ಜಾತ್ರಾ ಮಹೋತ್ಸವದ ಅಂಗವಾಗಿ ಸಿದ್ದೇಶ್ವರ ಸ್ವಾಮೀಜಿ ಅವರಿಂದ ಘತರಗಿ ಭಾಗ್ಯವತಿ ದೇವಿಯ ಜೀವನ ಚರಿತ್ರೆ ಕುರಿತು ಪ್ರವಚನ ಜರುಗಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರವಚನ ಆಲಿಸಿದರು.
​ಕುಂಭಮೇಳ: ಜಾತ್ರೆಯ ಪೂರ್ವಭಾವಿಯಾಗಿ ಕೃಷ್ಣಾ ನದಿಯಿಂದ ಹಲ್ಯಾಳ ಗ್ರಾಮದವರೆಗೆ ಮುತ್ತೈದೆಯರಿಂದ ವಿಜೃಂಭಣೆಯ ಕುಂಭಮೇಳ ನಡೆಯಿತು. ಮಹಿಳೆಯರು ಕುಂಭ ಹೊತ್ತು ಭಕ್ತಿಭಾವದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡರು.
​ವಿಶೇಷ ಪೂಜೆ ಮತ್ತು ಮಹಾಭಿಷೇಕ: ಜಾತ್ರೆಯ ದಿನ ಮುಂಜಾನೆ ಶ್ರೀ ಶಿವರಾಯ ಮುತ್ಯಾ ದೇವಸ್ಥಾನದ ಪೂಜಾರಿ ಸೋಮಣ್ಣ ಪೂಜಾರಿ ಅವರ ನೇತೃತ್ವದಲ್ಲಿ ದೇವಸ್ಥಾನದ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಮಹಾಭಿಷೇಕ ನೆರವೇರಿಸಲಾಯಿತು.
​ಪಲ್ಲಕ್ಕಿ ಉತ್ಸವ: ಶ್ರೀ ಶಿವರಾಯ ಮುತ್ಯಾ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಡೊಳ್ಳಿನ ಮೇಳದ ತಂಡಗಳು ಜಾತ್ರೆಗೆ ವಿಶೇಷ ಮೆರುಗು ನೀಡಿದವು. ಭಕ್ತರು ಭಕ್ತಿಗೀತೆ ಹಾಗೂ ಘೋಷಣೆಗಳೊಂದಿಗೆ ಪಾಲ್ಗೊಂಡು ಸಂಭ್ರಮಿಸಿದರು.
​ವಿಶೇಷ ಆಚರಣೆಗಳು ಮತ್ತು ಪ್ರಸಾದ ವಿನಿಯೋಗ
​ಗ್ರಾಮದ ಹೃದಯಭಾಗದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಪೂಜಾರಿಗಳಿಂದ ಅಲಗ ಹಾಯುವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು. ಈ ವೇಳೆ ದೇವರಲ್ಲಿ ಹರಕೆ ಹೊತ್ತ ಭಕ್ತರು ಶಿವರಾಯ ಮುತ್ಯಾ ಮೂರ್ತಿಗೆ ಭಂಡಾರ ಅರ್ಪಿಸಿ ತಮ್ಮ ಹರಕೆ ತೀರಿಸಿದರು. ನಂತರ ಆಗಮಿಸಿದ್ದ ಸಮಸ್ತ ಭಕ್ತರು ವಿಶೇಷ ಪ್ರಸಾದ ಸ್ವೀಕರಿಸಿ ಶ್ರೀ ಶಿವರಾಯ ಮುತ್ಯಾ ಆಶೀರ್ವಾದಕ್ಕೆ ಪಾತ್ರರಾದರು.
​ಗಣ್ಯರ ಉಪಸ್ಥಿತಿ
​ಈ ಜಾತ್ರಾ ಮಹೋತ್ಸವದಲ್ಲಿ ಗುಂಡು ಹಿರೇಕುರುಬರ, ಮುತ್ತಣ್ಣ ಸನದಿ, ಮುದುಕಣ್ಣ ಶೇಗುಣಸಿ, ಕಾಕಾಸಾಹೇಬ್ ಪಾಟೀಲ, ಚಂದ್ರಕಾಂತ ಕಾಗವಾಡ, ಸಿದ್ದಪ್ಪ ಲೋಕರ, ಕಾಂತೇಶ ಬಾಗಿ, ರಾಯಪ್ಪ ಬಾಗಿ, ಅಣ್ಣಪ್ಪ ಬಾಗಿ, ಗುಳ್ಳಪ್ಪ ನಾಯಿಕ, ಸಿದ್ದು ಮಗದುಮ, ಆಕಾಶ ಬಾಗಿ, ಪರಶುರಾಮ ಡಂಗಿ ಹಾಗೂ ಸಚಿನ್ ಮೆಂಡಿಗೇರಿ ಸೇರಿದಂತೆ ಗ್ರಾಮದ ಗಣ್ಯರು, ಹಲ್ಯಾಳ ಹಾಗೂ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡು ಯಶಸ್ವಿಗೊಳಿಸಿದರು.
    user_Dr RAMANNA.S.D
    Dr RAMANNA.S.D
    Journalist ಅಥಣಿ, ಬೆಳಗಾವಿ, ಕರ್ನಾಟಕ•
    21 hrs ago
  • ಸೆಕ್ಯೂರಿಟಿ, ಕಾರು, ದುಬಾರಿ ವಸ್ತುಗಳನ್ನೆಲ್ಲ ಬದಿಗಿಟ್ಟು ಭಿಕ್ಷುಕನ ವೇಷ ತೊಟ್ಟ ಬಿಜೆಪಿ ಶಾಸಕ ಅವರ ಆಜ್ಞೆಯಂತೆ ಎಲ್ಲವನ್ನು ಮಾಡಿದ್ದೇನೆ: ಸೆಕ್ಯೂರಿಟಿ, ಕಾರು, ದುಬಾರಿ ವಸ್ತುಗಳನ್ನೆಲ್ಲ ಬದಿಗಿಟ್ಟು ಭಿಕ್ಷುಕನ ವೇಷ ತೊಟ್ಟ ಬಿಜೆಪಿ ಶಾಸಕ
    1
    ಸೆಕ್ಯೂರಿಟಿ, ಕಾರು, ದುಬಾರಿ ವಸ್ತುಗಳನ್ನೆಲ್ಲ ಬದಿಗಿಟ್ಟು ಭಿಕ್ಷುಕನ ವೇಷ ತೊಟ್ಟ ಬಿಜೆಪಿ ಶಾಸಕ
ಅವರ ಆಜ್ಞೆಯಂತೆ ಎಲ್ಲವನ್ನು ಮಾಡಿದ್ದೇನೆ: ಸೆಕ್ಯೂರಿಟಿ, ಕಾರು, ದುಬಾರಿ ವಸ್ತುಗಳನ್ನೆಲ್ಲ ಬದಿಗಿಟ್ಟು ಭಿಕ್ಷುಕನ ವೇಷ ತೊಟ್ಟ ಬಿಜೆಪಿ ಶಾಸಕ
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    7 hrs ago
  • ಬಾಗಲಕೋಟೆ: ಸಾಲ ಸೌಲಭ್ಯಕ್ಕಾಗಿ ಕುರಿಗಳೊಂದಿಗೆ ಬ್ಯಾಂಕ್‌ ಎದುರು ಪ್ರತಿಭಟನೆ
    1
    ಬಾಗಲಕೋಟೆ: ಸಾಲ ಸೌಲಭ್ಯಕ್ಕಾಗಿ ಕುರಿಗಳೊಂದಿಗೆ ಬ್ಯಾಂಕ್‌ ಎದುರು ಪ್ರತಿಭಟನೆ
    user_Shabbir Bijapur
    Shabbir Bijapur
    Photographer ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    17 hrs ago
  • ಶ್ರೀ ಮಾರುತೇಶ್ವರ ಭಜನಾ ಮಹಾ ಮಂಗಲ ನಿಮಿತ್ಯ ಭರ್ಜರಿ ತಯಾರಿ. ವಿದ್ಯುತ್ ದೀಪಾಲಂಕಾರದ ಜೊತೆಗೆ ಬಣ್ಣ ಬಣ್ಣದ ರಂಗೋಲಿ ಅದ್ದೂರಿ ಸ್ವಾಗತ. ಶ್ರೀ ಮಾರುತೇಶ್ವರ ಭಜನಾ ಮಹಾ ಮಂಗಲ ನಿಮಿತ್ಯ ಭರ್ಜರಿ ತಯಾರಿ. ವಿದ್ಯುತ್ ದೀಪಾಲಂಕಾರದ ಜೊತೆಗೆ ಬಣ್ಣ ಬಣ್ಣದ ರಂಗೋಲಿ ಅದ್ದೂರಿ ಸ್ವಾಗತ. ಗದಗ : ಪವಿತ್ರ ಶ್ರಾವಣ ಮಾಸದ ನಿಮಿತ್ಯ ತಿಂಗಳ ಪರ್ಯಂತ ಆರಂಭವಾದ ಪುರಾಣ ಪ್ರವಚನ,ಭಜನೆಗಳು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಭಕ್ತಿಯ ಪರಾಕಾಷ್ಠೆ ಮೆರೆಯುವುದು ಸರ್ವೇ ಸಾಮಾನ್ಯವಾಗಿ ನಡೆಯುತ್ತಿರುವುದು ಕಂಡು ಬರುತ್ತವೆ ಅದರಂತೆ ಶ್ರೀ ಮಾರುತೇಶ್ವರ ಭಜನಾ ಮುಕ್ತಾಯದ ಮಹಾ ಮಂಗಲ ನಿಮಿತ್ಯವಾಗಿ ಭರ್ಜರಿ ತಯಾರಿ ನಡೆಸಿರುವ ದೃಶ್ಯಗಳು ನೋಡುಗರ ಕಣ್ಮಣ ಸೆಳೆಯಿತು. ತಾಲೂಕಿನ ಕದಡಿ ಗ್ರಾಮದ ಶ್ರೀ ಮಾರುತೇಶ್ವರ ಭಜನಾ ಮುಕ್ತಾಯದ ಅಂಗವಾಗಿ ಮಹಾ ಮಂಗಲವು ಬುಧವಾರ ಜರುಗಿವುದರ ಪೂರ್ವದಲ್ಲಿ ಮಂಗಳವಾರ ರಾತ್ರಿ ಸಂಪೂರ್ಣ ಸಪ್ತಾಹ ಕಾರ್ಯಕ್ರಮ ನೆರವೇರಸಲಾಗುವುದು,ಅದರ ಪ್ರಯುಕ್ತ ಗ್ರಾಮದ ಶ್ರೀ ಮಾರುತಿ ಮಂದಿರವನ್ನೊಳಗೊಂಡು ಗ್ರಾಮ ಪಂಚಾಯತ ಮುಂದಿನ ಆವರಣದಲ್ಲಿ ಮಹಿಳೆಯರು ಸೇರಿ ರಂಗೋಲಿ ಬಿಡಿಸುತ್ತಿರುವುದು ಹಾಗೂ ದಾರಿ ಉದ್ದಕ್ಕೂ ವಿದ್ಯುತ್ ದೀಪಾಲಂಕಾರ ಅಳವಡಿಸಿರಿ ಶೃಂಗರಿಸಿರುವುದು ಬಹು ಸುಂದರವಾಗಿ ಕಂಗೊಳಿಸುತ್ತಿರುವುದು. ನೋಡುಗರ ಕಣ್ಮಣಿ ಸೆಳೆಯಿತು. ಸಂಘದ ಸಮಿತ್ರರು ಮಾಸ ಪರ್ಯಂತ ಗ್ರಾಮದಲ್ಲಿ ಭಜನೆ ಮಾಡುತ್ತಾ ಭಕ್ತಿಯ ಪದಗಳನ್ನು ಪಠಿಸುತ್ತಾ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಗ್ರಾಮದ ಅದಿದೇವ ದೇವತೆಗಳಿಗೆ ಕಾಯಿ ಕರ್ಪುರ ದೀಪಗಳ ಬೆಳಗುತ್ತಾ ಭಕ್ತಿಯ ಗಾನ ಸುಧೆಗಳನ್ನು ಪ್ರತಿ ದಿನ ಬೆಳಗಿನ ಜಾವ ಮೊಳಗಿಸುತ್ತಿರುವುದು ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತಿದ್ದವು.. ಶ್ರಾವಣ ಮಾಸದ ಕೊನೆಯ ದಿವಸ ಭಜನಾ ಮುಕ್ತಾಯದ ಹಿಂದಿನ ದಿನ ಭರ್ಜರಿ ತಯಾರಿ ನಡೆಸಿರುವುದು ಗ್ರಾಮದ ತುಂಬೆಲ್ಲಾ ಹಬ್ಬದ ಸಂಭ್ರಮದ ವಾತಾವರಣ ಆವರಿಸಿತ್ತು...
    2
    ಶ್ರೀ ಮಾರುತೇಶ್ವರ ಭಜನಾ ಮಹಾ ಮಂಗಲ ನಿಮಿತ್ಯ ಭರ್ಜರಿ ತಯಾರಿ.
ವಿದ್ಯುತ್ ದೀಪಾಲಂಕಾರದ ಜೊತೆಗೆ ಬಣ್ಣ ಬಣ್ಣದ ರಂಗೋಲಿ ಅದ್ದೂರಿ ಸ್ವಾಗತ.
ಶ್ರೀ ಮಾರುತೇಶ್ವರ ಭಜನಾ ಮಹಾ ಮಂಗಲ ನಿಮಿತ್ಯ ಭರ್ಜರಿ ತಯಾರಿ.
ವಿದ್ಯುತ್ ದೀಪಾಲಂಕಾರದ ಜೊತೆಗೆ ಬಣ್ಣ ಬಣ್ಣದ ರಂಗೋಲಿ ಅದ್ದೂರಿ ಸ್ವಾಗತ.
ಗದಗ : ಪವಿತ್ರ ಶ್ರಾವಣ ಮಾಸದ ನಿಮಿತ್ಯ ತಿಂಗಳ ಪರ್ಯಂತ ಆರಂಭವಾದ ಪುರಾಣ ಪ್ರವಚನ,ಭಜನೆಗಳು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಭಕ್ತಿಯ ಪರಾಕಾಷ್ಠೆ ಮೆರೆಯುವುದು ಸರ್ವೇ ಸಾಮಾನ್ಯವಾಗಿ ನಡೆಯುತ್ತಿರುವುದು ಕಂಡು ಬರುತ್ತವೆ ಅದರಂತೆ ಶ್ರೀ ಮಾರುತೇಶ್ವರ ಭಜನಾ ಮುಕ್ತಾಯದ ಮಹಾ ಮಂಗಲ ನಿಮಿತ್ಯವಾಗಿ ಭರ್ಜರಿ ತಯಾರಿ ನಡೆಸಿರುವ ದೃಶ್ಯಗಳು ನೋಡುಗರ ಕಣ್ಮಣ ಸೆಳೆಯಿತು.
ತಾಲೂಕಿನ ಕದಡಿ ಗ್ರಾಮದ ಶ್ರೀ ಮಾರುತೇಶ್ವರ ಭಜನಾ  ಮುಕ್ತಾಯದ ಅಂಗವಾಗಿ ಮಹಾ ಮಂಗಲವು ಬುಧವಾರ ಜರುಗಿವುದರ ಪೂರ್ವದಲ್ಲಿ ಮಂಗಳವಾರ ರಾತ್ರಿ ಸಂಪೂರ್ಣ ಸಪ್ತಾಹ ಕಾರ್ಯಕ್ರಮ ನೆರವೇರಸಲಾಗುವುದು,ಅದರ ಪ್ರಯುಕ್ತ ಗ್ರಾಮದ ಶ್ರೀ ಮಾರುತಿ ಮಂದಿರವನ್ನೊಳಗೊಂಡು ಗ್ರಾಮ ಪಂಚಾಯತ ಮುಂದಿನ ಆವರಣದಲ್ಲಿ ಮಹಿಳೆಯರು ಸೇರಿ ರಂಗೋಲಿ ಬಿಡಿಸುತ್ತಿರುವುದು ಹಾಗೂ ದಾರಿ ಉದ್ದಕ್ಕೂ ವಿದ್ಯುತ್ ದೀಪಾಲಂಕಾರ ಅಳವಡಿಸಿರಿ ಶೃಂಗರಿಸಿರುವುದು ಬಹು ಸುಂದರವಾಗಿ ಕಂಗೊಳಿಸುತ್ತಿರುವುದು. ನೋಡುಗರ ಕಣ್ಮಣಿ ಸೆಳೆಯಿತು.
ಸಂಘದ ಸಮಿತ್ರರು ಮಾಸ ಪರ್ಯಂತ ಗ್ರಾಮದಲ್ಲಿ ಭಜನೆ ಮಾಡುತ್ತಾ ಭಕ್ತಿಯ ಪದಗಳನ್ನು ಪಠಿಸುತ್ತಾ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಗ್ರಾಮದ ಅದಿದೇವ ದೇವತೆಗಳಿಗೆ ಕಾಯಿ ಕರ್ಪುರ ದೀಪಗಳ ಬೆಳಗುತ್ತಾ ಭಕ್ತಿಯ ಗಾನ ಸುಧೆಗಳನ್ನು ಪ್ರತಿ ದಿನ ಬೆಳಗಿನ ಜಾವ ಮೊಳಗಿಸುತ್ತಿರುವುದು ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತಿದ್ದವು..
ಶ್ರಾವಣ ಮಾಸದ ಕೊನೆಯ ದಿವಸ ಭಜನಾ ಮುಕ್ತಾಯದ ಹಿಂದಿನ ದಿನ ಭರ್ಜರಿ ತಯಾರಿ ನಡೆಸಿರುವುದು ಗ್ರಾಮದ ತುಂಬೆಲ್ಲಾ ಹಬ್ಬದ ಸಂಭ್ರಮದ ವಾತಾವರಣ ಆವರಿಸಿತ್ತು...
    user_ಪ್ರಕಾಶ ಗುದ್ನೇಪ್ಪನವರ.
    ಪ್ರಕಾಶ ಗುದ್ನೇಪ್ಪನವರ.
    Local News Reporter ಗದಗ, ಗದಗ, ಕರ್ನಾಟಕ•
    18 hrs ago
  • ಹಾವೇರಿ: ವಂದೇ ಮಾತರಂನ ಕೇವಲ 2 ಚರಣಗಳನ್ನು ಮಾತ್ರ ಹಾಡುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಬಿಜೆಪಿ ಹಾವೇರಿ ನಗರ ಮಂಡಲ ತೀವ್ರವಾಗಿ ಖಂಡಿಸಿದೆ. 1937ರಲ್ಲಿ ಕಾಂಗ್ರೆಸ್ ಮುಸ್ಲಿಂ ಲೀಗ್ ಒತ್ತಡಕ್ಕೆ ಮಣಿದು ವಂದೇ ಮಾತರಂಗೆ 2 ಚರಣಗಳಿಗೆ ಕತ್ತರಿ ಹಾಕಿತ್ತು. ಇದು ಸಂವಿಧಾನದ ತೀರ್ಮಾನವಲ್ಲ, ಕಾಂಗ್ರೆಸ್‌ನ ರಾಜಕೀಯ ನಿರ್ಧಾರ. 24 ಜನವರಿ 1950ರಲ್ಲಿ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಜನಗಣಮನ ಮತ್ತು ವಂದೇ ಮಾತರಂ ಎರಡಕ್ಕೂ ಸಮಾನ ಗೌರವ ನೀಡಬೇಕು ಎಂದು ಅಧಿಕೃತವಾಗಿ ಹೇಳಿದ್ದರು. ತುಷ್ಟೀಕರಣ ರಾಜಕಾರಣಕ್ಕಾಗಿ ಕಾಂಗ್ರೆಸ್ ಇಂದು ಮತ್ತೆ ವಂದೇ ಮಾತರಂಗೆ ಕತ್ತರಿ ಹಾಕಿದೆ. ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಇಂದು ವಂದೇ ಮಾತರಂಗೆ ಕತ್ತರಿ ಹಾಕುವವರು ನಾಳೆ ಕುವೆಂಪು ರಚಿತ ನಾಡಗೀತೆಗೆ ಕತ್ತರಿ ಹಾಕುತ್ತಾರಾ? ಎಂದು ಪ್ರಶ್ನಿಸಿದೆ. ನೇಣುಗಂಬ ಏರಿದರೂ ವಂದೇ ಮಾತರಂ ಹಾಡುತ್ತೇವೆ ಎಂದಿದ್ದ ಕಾಂಗ್ರೆಸ್, ಈಗ ನೇಣುಗಂಬಕ್ಕೆ ಏರಿಸಿದರೂ ಹಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿರುವುದು ಖಂಡನೀಯ ಎಂದು ಹಾವೇರಿ ವಿಧಾನಸಭಾ ಕೊಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ್, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷರದ ಸಿದ್ದರಾಜು ಕಲಕೋಟಿ, ನಗರ ಮಂಡಲ ಅಧ್ಯಕ್ಷ *ಕಿರಣ್ ಚನಬಸಪ್ಪ ಕೊಳ್ಳಿ ಈರಣ್ಣ ಹೇರೂರು, ಅಲ್ಲಾಬಾಕ್ಸ್ ತಿಮ್ಮಾಪುರ, ನಿರಂಜನ್ ಹೇರೂರು ನಗರ ಮಂಡಲದ ಎಸ್‌ಸಿ ಮೋರ್ಚಾ ಅಧ್ಯಕ್ಷರಾದ ಸುನಿಲ್ ಲಕ್ಷ್ಮಣ ಬೆಟಗೇರಿ, ಮಾರುತಿ ಸವಣುರ ಗಿರೀಶ್ ಶೆಟ್ಟಿ, ಹೊನ್ನಪ್ಪ ಮಾಳಗಿ ಹಾಗೂ ಬಿಜೆಪಿ ಕಾರ್ಯಕರ್ತರು ಮುಖಂಡರು ಸೇರಿ ಭಾಗವಹಿಸಿದ್ದರು *
    1
    ಹಾವೇರಿ: ವಂದೇ ಮಾತರಂನ ಕೇವಲ 2 ಚರಣಗಳನ್ನು ಮಾತ್ರ ಹಾಡುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಬಿಜೆಪಿ ಹಾವೇರಿ ನಗರ ಮಂಡಲ ತೀವ್ರವಾಗಿ ಖಂಡಿಸಿದೆ.

1937ರಲ್ಲಿ ಕಾಂಗ್ರೆಸ್ ಮುಸ್ಲಿಂ ಲೀಗ್ ಒತ್ತಡಕ್ಕೆ ಮಣಿದು ವಂದೇ ಮಾತರಂಗೆ 2 ಚರಣಗಳಿಗೆ ಕತ್ತರಿ ಹಾಕಿತ್ತು. ಇದು ಸಂವಿಧಾನದ ತೀರ್ಮಾನವಲ್ಲ, ಕಾಂಗ್ರೆಸ್‌ನ ರಾಜಕೀಯ ನಿರ್ಧಾರ. 24 ಜನವರಿ 1950ರಲ್ಲಿ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಜನಗಣಮನ ಮತ್ತು ವಂದೇ ಮಾತರಂ ಎರಡಕ್ಕೂ ಸಮಾನ ಗೌರವ ನೀಡಬೇಕು ಎಂದು ಅಧಿಕೃತವಾಗಿ ಹೇಳಿದ್ದರು.
ತುಷ್ಟೀಕರಣ ರಾಜಕಾರಣಕ್ಕಾಗಿ ಕಾಂಗ್ರೆಸ್ ಇಂದು ಮತ್ತೆ ವಂದೇ ಮಾತರಂಗೆ ಕತ್ತರಿ ಹಾಕಿದೆ. ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಇಂದು ವಂದೇ ಮಾತರಂಗೆ ಕತ್ತರಿ ಹಾಕುವವರು ನಾಳೆ ಕುವೆಂಪು ರಚಿತ ನಾಡಗೀತೆಗೆ ಕತ್ತರಿ ಹಾಕುತ್ತಾರಾ? ಎಂದು ಪ್ರಶ್ನಿಸಿದೆ.
ನೇಣುಗಂಬ ಏರಿದರೂ ವಂದೇ ಮಾತರಂ ಹಾಡುತ್ತೇವೆ ಎಂದಿದ್ದ ಕಾಂಗ್ರೆಸ್, ಈಗ ನೇಣುಗಂಬಕ್ಕೆ ಏರಿಸಿದರೂ ಹಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿರುವುದು ಖಂಡನೀಯ ಎಂದು ಹಾವೇರಿ ವಿಧಾನಸಭಾ ಕೊಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ್, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷರದ ಸಿದ್ದರಾಜು ಕಲಕೋಟಿ, ನಗರ ಮಂಡಲ ಅಧ್ಯಕ್ಷ *ಕಿರಣ್ ಚನಬಸಪ್ಪ  ಕೊಳ್ಳಿ ಈರಣ್ಣ ಹೇರೂರು, ಅಲ್ಲಾಬಾಕ್ಸ್ ತಿಮ್ಮಾಪುರ, ನಿರಂಜನ್ ಹೇರೂರು  ನಗರ ಮಂಡಲದ ಎಸ್‌ಸಿ ಮೋರ್ಚಾ ಅಧ್ಯಕ್ಷರಾದ ಸುನಿಲ್ ಲಕ್ಷ್ಮಣ ಬೆಟಗೇರಿ, ಮಾರುತಿ ಸವಣುರ ಗಿರೀಶ್ ಶೆಟ್ಟಿ, ಹೊನ್ನಪ್ಪ ಮಾಳಗಿ ಹಾಗೂ ಬಿಜೆಪಿ ಕಾರ್ಯಕರ್ತರು ಮುಖಂಡರು ಸೇರಿ ಭಾಗವಹಿಸಿದ್ದರು *
    user_ಸುನೀಲ್ ಲ್ ಬೆಟಗೇರಿ
    ಸುನೀಲ್ ಲ್ ಬೆಟಗೇರಿ
    Spa ಹಾವೇರಿ, ಹಾವೇರಿ, ಕರ್ನಾಟಕ•
    1 hr ago
  • "ಗ್ರಾನೈಟ್ ಕಲ್ಲುಗಳಿಂದ ನಿರ್ಮಿಸಲಾದ ಈ ಮಸೀದಿಯ ವಿಶೇಷತೆ ಏನು? "
    1
    "ಗ್ರಾನೈಟ್ ಕಲ್ಲುಗಳಿಂದ ನಿರ್ಮಿಸಲಾದ ಈ ಮಸೀದಿಯ ವಿಶೇಷತೆ ಏನು? "
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    19 hrs ago
  • 🌾ಗಜೇಂದ್ರಗಡ ನಗರ ಹಾಗೂ ಗ್ರಾಮೀಣ ಅಭಿವೃದ್ಧಿಗಾಗಿ ನಿರಂತರ ಶ್ರಮ… ನನ್ನನ್ನು ಕೆಲವರು ವಿರೋಧಿಸಿದ್ದು ನನ್ನ ವ್ಯಕ್ತಿತ್ವವನ್ನಲ್ಲ… ನನ್ನ ಸಾಮರ್ಥ್ಯವನ್ನು. ಅವರಲ್ಲಿ ಕೆಲವರು ನನ್ನಿಂದ ಅಧಿಕಾರದ ಲಾಭ ಪಡೆದವರೇ ಆಗಿದ್ದರು. “ಸ್ವತಂತ್ರವಾಗಿ ಇದ್ದು ಕೆಲಸ ಮಾಡಿ ತೋರಿಸು” ಎಂದು ನನಗೆ ಸವಾಲು. ಹಾಕಿದವರೂ ಇದ್ದಾರೆ. ನನ್ನಿಂದ ಉಚಿತವಾಗಿ ಸೇವೆ ಪಡೆದವರೂ ಇದ್ದಾರೆ. ನಾನು ಸಲ್ಲಿಸಿದ ಮನವಿಗಳನ್ನು “ಕಸದ ಬುಟ್ಟಿಗೆ ಹಾಕುತ್ತಾರೆ” ಎಂದು ವ್ಯಂಗ್ಯವಾಡಿದವರೂ ಇದ್ದಾರೆ. ಆದರೆ ಇಂದು ಅದೇ ಮನವಿಗಳು ಅಭಿವೃದ್ಧಿಯ ದಿಕ್ಕಿನಲ್ಲಿ ಹಾರುವ ಗಾಳಿಪಟಗಳಾಗಿವೆ. 🪁 ನನಗೆ ಸಾಕಷ್ಟು ತೊಂದರೆ, ಅವಮಾನ, ಅಪಮಾನಗಳನ್ನು ಎದುರಿಸಬೇಕಾಯಿತು. ಆದರೂ ಯಾವುದಕ್ಕೂ ಕುಗ್ಗದೆ, ಯಾರ ಮೇಲೂ ಅವಲಂಬಿತನಾಗದೆ, ನಿಷ್ಠೆಯಿಂದ… ಪ್ರಾಮಾಣಿಕವಾಗಿ…24 ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡಿದೆ. ಇಂದು ನನ್ನ ಮಾತಿಗಿಂತ ನನ್ನ ಕೆಲಸಗಳೇ ಉತ್ತರ ನೀಡುತ್ತಿವೆ. ಜನರ ಸಮಸ್ಯೆಗಳನ್ನು ಹೇಳುವುದು ಮಾತ್ರ ನನ್ನ ಕೆಲಸವಲ್ಲ; ಪರಿಹಾರ ಸಿಗುವವರೆಗೂ ಹೋರಾಡುವುದು ನನ್ನ ಜವಾಬ್ದಾರಿ. 🔥ನನ್ನನ್ನು ಎಷ್ಟೇ ತುಳಿದರೂ, ನನ್ನ ಶ್ರಮವನ್ನು ತಡೆಯಲು ಸಾಧ್ಯವಾಗಲಿಲ್ಲ. ಮಾತಿಗಿಂತ ಕೆಲಸವೇ ಮುಖ್ಯ — ಅದನ್ನು ನನ್ನ ಕಾರ್ಯಗಳ ಮೂಲಕ ತೋರಿಸುತ್ತಿದ್ದೇನೆ. — @Anil Karne Gajendragad
    1
    🌾ಗಜೇಂದ್ರಗಡ ನಗರ ಹಾಗೂ ಗ್ರಾಮೀಣ ಅಭಿವೃದ್ಧಿಗಾಗಿ ನಿರಂತರ ಶ್ರಮ…

ನನ್ನನ್ನು ಕೆಲವರು ವಿರೋಧಿಸಿದ್ದು ನನ್ನ ವ್ಯಕ್ತಿತ್ವವನ್ನಲ್ಲ… ನನ್ನ ಸಾಮರ್ಥ್ಯವನ್ನು.

ಅವರಲ್ಲಿ ಕೆಲವರು ನನ್ನಿಂದ ಅಧಿಕಾರದ ಲಾಭ ಪಡೆದವರೇ ಆಗಿದ್ದರು.

“ಸ್ವತಂತ್ರವಾಗಿ ಇದ್ದು ಕೆಲಸ ಮಾಡಿ ತೋರಿಸು” ಎಂದು ನನಗೆ ಸವಾಲು. ಹಾಕಿದವರೂ ಇದ್ದಾರೆ.

ನನ್ನಿಂದ ಉಚಿತವಾಗಿ ಸೇವೆ ಪಡೆದವರೂ ಇದ್ದಾರೆ.

ನಾನು ಸಲ್ಲಿಸಿದ ಮನವಿಗಳನ್ನು “ಕಸದ ಬುಟ್ಟಿಗೆ ಹಾಕುತ್ತಾರೆ” ಎಂದು ವ್ಯಂಗ್ಯವಾಡಿದವರೂ ಇದ್ದಾರೆ.

ಆದರೆ ಇಂದು ಅದೇ ಮನವಿಗಳು ಅಭಿವೃದ್ಧಿಯ ದಿಕ್ಕಿನಲ್ಲಿ ಹಾರುವ ಗಾಳಿಪಟಗಳಾಗಿವೆ. 🪁

ನನಗೆ ಸಾಕಷ್ಟು ತೊಂದರೆ, ಅವಮಾನ, ಅಪಮಾನಗಳನ್ನು ಎದುರಿಸಬೇಕಾಯಿತು.
ಆದರೂ ಯಾವುದಕ್ಕೂ ಕುಗ್ಗದೆ, ಯಾರ ಮೇಲೂ ಅವಲಂಬಿತನಾಗದೆ,

ನಿಷ್ಠೆಯಿಂದ… ಪ್ರಾಮಾಣಿಕವಾಗಿ…24 ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡಿದೆ.

ಇಂದು ನನ್ನ ಮಾತಿಗಿಂತ ನನ್ನ ಕೆಲಸಗಳೇ ಉತ್ತರ ನೀಡುತ್ತಿವೆ.

ಜನರ ಸಮಸ್ಯೆಗಳನ್ನು ಹೇಳುವುದು ಮಾತ್ರ ನನ್ನ ಕೆಲಸವಲ್ಲ;

ಪರಿಹಾರ ಸಿಗುವವರೆಗೂ ಹೋರಾಡುವುದು ನನ್ನ ಜವಾಬ್ದಾರಿ.

🔥ನನ್ನನ್ನು ಎಷ್ಟೇ ತುಳಿದರೂ, ನನ್ನ ಶ್ರಮವನ್ನು ತಡೆಯಲು ಸಾಧ್ಯವಾಗಲಿಲ್ಲ.

ಮಾತಿಗಿಂತ ಕೆಲಸವೇ ಮುಖ್ಯ — ಅದನ್ನು ನನ್ನ ಕಾರ್ಯಗಳ ಮೂಲಕ ತೋರಿಸುತ್ತಿದ್ದೇನೆ.

— @Anil Karne Gajendragad
    user_Praveen Karne Gajendragad
    Praveen Karne Gajendragad
    Farmer ಗಜೇಂದ್ರಗಡ, ಗದಗ, ಕರ್ನಾಟಕ•
    6 hrs ago
  • ಹುಕ್ಕೇರಿ ತಾಲೂಕಿನಲ್ಲಿ ಗಣೇಶ ಮೆರವಣಿಗೆಯಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಹುಕ್ಕೇರಿ ತಾಲೂಕಿನ ಬಾಡ ಗ್ರಾಮದಲ್ಲಿ ಗಣೇಶ ಮೆರವಣಿಗೆ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ಎರಡೂ ಗುಂಪುಗಳ ನಡುವೆ ಗಲಾಟೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ . . .. ... .. . . .. . . . .. . .. . . . .. . .. .. .. . . . .
    1
    ಹುಕ್ಕೇರಿ ತಾಲೂಕಿನಲ್ಲಿ ಗಣೇಶ ಮೆರವಣಿಗೆಯಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ 
ಹುಕ್ಕೇರಿ ತಾಲೂಕಿನ ಬಾಡ ಗ್ರಾಮದಲ್ಲಿ ಗಣೇಶ ಮೆರವಣಿಗೆ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ಎರಡೂ ಗುಂಪುಗಳ ನಡುವೆ ಗಲಾಟೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ 
.
.
..
...
..
.
.
..
.
.
.
..
.
..
.
.
.
..
.
..
..
..
.
.
.
.
    user_Ramesh Biradi
    Ramesh Biradi
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    4 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.