Shuru
Apke Nagar Ki App…
ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ತಹಶೀಲ್ದಾರ್ ಗೆ ರೈತರ ಮನವಿ ಮುಧೋಳ : ಅಸಮರ್ಪಕ ಹಾಗೂ ಗುಣಮಟ್ಟವಿಲ್ಲದ ವಿದ್ಯುತ್ ಪೂರೈಕೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿ ಪಂಪ್‌ಸೆಟ್‌ಗಳು, ಮೋಟಾರ್‌ಗಳು ಹಾಗೂ ವಿದ್ಯುತ್ ಬೋರ್ಡ್‌ಗಳು ಪದೇಪದೇ ಸುಟ್ಟುಹೋಗುತ್ತಿವೆ. ಕೂಡಲೇ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಆಗ್ರಹಿಸಿ ರೈತರು ತಹಶೀಲ್ದಾರ್ ಅವರ ಮುಖಾಂತರ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಇಂಧನ ಸಚಿವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಸುಭಾಷ್ ಸಿರಬೂರ, ಬಸವಂತಪ್ಪ ಕಾಂಬಳೆ, ಮುತ್ತಪ್ಪ ಕೋಮಾರ , ದುಡ್ಡಪ್ಪ ಯರಗಟ್ಟಿ, ಮನುನಾಥ ಚಿಕ್ಕೂರ, ಮಂಜುನಾಥ ಅರಕೇರಿ ಹಾಗೂ ಮಂಜುನಾಥ ಲಕ್ಕಂ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.
ಗೋವಿಂದಪ್ಪ ತಳವಾರ
ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ತಹಶೀಲ್ದಾರ್ ಗೆ ರೈತರ ಮನವಿ ಮುಧೋಳ : ಅಸಮರ್ಪಕ ಹಾಗೂ ಗುಣಮಟ್ಟವಿಲ್ಲದ ವಿದ್ಯುತ್ ಪೂರೈಕೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿ ಪಂಪ್‌ಸೆಟ್‌ಗಳು, ಮೋಟಾರ್‌ಗಳು ಹಾಗೂ ವಿದ್ಯುತ್ ಬೋರ್ಡ್‌ಗಳು ಪದೇಪದೇ ಸುಟ್ಟುಹೋಗುತ್ತಿವೆ. ಕೂಡಲೇ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಆಗ್ರಹಿಸಿ ರೈತರು ತಹಶೀಲ್ದಾರ್ ಅವರ ಮುಖಾಂತರ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಇಂಧನ ಸಚಿವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಸುಭಾಷ್ ಸಿರಬೂರ, ಬಸವಂತಪ್ಪ ಕಾಂಬಳೆ, ಮುತ್ತಪ್ಪ ಕೋಮಾರ , ದುಡ್ಡಪ್ಪ ಯರಗಟ್ಟಿ, ಮನುನಾಥ ಚಿಕ್ಕೂರ, ಮಂಜುನಾಥ ಅರಕೇರಿ ಹಾಗೂ ಮಂಜುನಾಥ ಲಕ್ಕಂ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.
More news from ಕರ್ನಾಟಕ and nearby areas
- ಮುಧೋಳ ನಗರದಲ್ಲಿ ಗಣೇಶೋತ್ಸವ ಸಂಭ್ರಮದಲ್ಲಿ ಮಿಂದೆದ್ದ ಅಸಂಖ್ಯ ಭಕ್ತಗಣ ಮುಧೋಳ : ಗಣೇಶೋತ್ಸವ ಹಿನ್ನೆಲೆ ನಗರದಾದ್ಯಂತ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಅಸಂಖ್ಯ ಭಕ್ತಗಣದ ಮಧ್ಯೆ ಅದ್ದೂರಿಯಾಗಿ ಜರುಗಿತು. ನಗರದ ಶಿವಾಜಿ ವೃತ್ತ, ಗಾಂಧಿ ವೃತ್ತ, ಜೈ ಭಾರತ ಸರ್ಕಲ್, ಜನತಾ ಪ್ಲಾಟ್ ಸೇರಿದಂತೆ ಹಲವಾರು ಭಾಗದಲ್ಲಿ ಪ್ರತಿಷ್ಠಾಪನೆಗೊಂಡ ಗಣೇಶ ಮೂರ್ತಿಗಳ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ಪಂಢರಪುರದ ದಿಂಡೆ ರೂಪಕ, ಮಹಾರಾಷ್ಟ್ರದ ಡೋಲ್ ತಾಷ್, ಡಿಜೆ, ಡಾಲ್ಬಿ ಸದ್ದಿಗೆ ಸಾವಿರಾರು ಯುವಕರು ಹೆಜ್ಜೆ ಹಾಕಿದರು. ಮಹಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಜೈ ಭಾರತ ವೃತ್ತದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ ವೀಕ್ಷಣೆಗೆ ಸಾವಿರಾರು ಜನರು ನೆರದಿದ್ದರು. ಭಕ್ತಿಭಾವದಿಂದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಯಿತು.4
- ಬನಹಟ್ಟಿ ಸತ್ಯಾಗ್ರಹ ಸ್ಥಳಕ್ಕೆ ಪೊಲೀಸರ ಭೇಟಿ - ಪ್ರತಿಭಟನಾಕಾರರ ಮನವೊಲಿಕೆಗೆ ಯತ್ನ ಪ್ರಜಾಸೌಧ ಕುರಿತು ಬನಹಟ್ಟಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದವರ ಆರೋಗ್ಯದಲ್ಲಿ ಏರುಪೇರಾಗಿದ್ದು ವೈದ್ಯಕೀಯ ಶಿಪಾರಸ್ಸು ಮೇರೆಗೆ ಅವರನ್ನು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತು1
- ಬಾಗಲಕೋಟೆ: ಸಾಲ ಸೌಲಭ್ಯಕ್ಕಾಗಿ ಕುರಿಗಳೊಂದಿಗೆ ಬ್ಯಾಂಕ್ ಎದುರು ಪ್ರತಿಭಟನೆ1
- ಅಥಣಿ ಪಟ್ಟಣದಲ್ಲಿ ಗಣೇಶ ಉತ್ಸವದಲ್ಲಿ ಅಭಿಮಾನಿಗಳೊಂದಿಗೆ ಸಖತ್ ಸ್ಟೆಪ್ ಹಾಕಿದ ಸಚಿವ ಲಕ್ಷ್ಮಣ ಸವದಿ. ಅಥಣಿ : ಕರ್ನಾಟಕ ಸರ್ಕಾರದ ಸಹಕಾರ ಸಚಿವ ಗಣೇಶ ಆಗಮನದ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಸಖತ್ ಸ್ಟೆಪ್ ಹಾಕುವ ಮೂಲಕ ಅಭಿಮಾನಿಗಳಲ್ಲಿ ಸಂತಸ ಸಂಭ್ರಮ ಮೂಡಿಸಿದರು. ಈ ವೇಳೆ ಅಭಿಮಾನಿಗಳು ಸೌದಿ ಅವರೊಂದಿಗೆ ಸ್ಟೆಪ್ ಹಾಕುವ ಮೂಲಕ ಸಂಭ್ರಮಿಸಿದರು.1
- ಗರಸು ತುಂಬಿದ ಟ್ರ್ಯಾಕ್ಟರ್‌ಗಳ ರೋಚಕ ಸ್ಪರ್ಧೆ, ಹಳ್ಳದ ಗೆಣ್ಣೂರಿನಲ್ಲಿ ಹಳ್ಳದ ಗೆಣ್ಣೂರಿನಲ್ಲಿ ಶ್ರೀ ಗಜಾನನ ಯುವಕ ಮಂಡಳಿಯಿಂದ ಆಯೋಜನೆ ಹಳ್ಳದ ಗೆಣ್ಣೂರು: ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಹಳ್ಳದ ಗೆಣ್ಣೂರು ಗ್ರಾಮದ ವಾಟರ್ ಟ್ಯಾಂಕ್ ಸಮೀಪ ಶ್ರೀ ಗಜಾನನ ಯುವಕ ಮಂಡಳಿಯ ವತಿಯಿಂದ ನಾಲ್ಕು ಟೈಲರ್‌ಗಳ ಗರಸು ತುಂಬಿದ ಟ್ರ್ಯಾಕ್ಟರ್‌ಗಳ ಸ್ಪರ್ಧೆಯನ್ನು ಮಂಗಳವಾರ ಸಂಜೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಟ್ರ್ಯಾಕ್ಟರ್‌ಗಳ ಸಾಮರ್ಥ್ಯ ಹಾಗೂ ಚಾಲಕರ ಕೌಶಲ್ಯ ಗಮನ ಸೆಳೆಯಿತು. ರೋಚಕ ಸ್ಪರ್ಧೆಯನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಗ್ರಾಮಗಳ ಯುವಕರು ಹಾಗೂ ಟ್ರ್ಯಾಕ್ಟರ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಸ್ಪರ್ಧೆಯಲ್ಲಿ ಶಿವು ವಿ. ಬೆಳ್ಳುಬ್ಬಿ ಪ್ರಥಮ ಬಹುಮಾನ, ರೇವಣಸಿದ್ಧ ಪಡಸಲಗಿ ದ್ವಿತೀಯ ಬಹುಮಾನ ಹಾಗೂ ಅಬ್ದುಲ್ ನದಾಫ್ ತೃತೀಯ ಬಹುಮಾನ ಪಡೆದುಕೊಂಡರು ಎಂದು ಶ್ರೀ ಗಜಾನನ ಯುವಕ ಮಂಡಳಿಯ ಪದಾಧಿಕಾರಿಗಳು ತಿಳಿಸಿದ್ದಾರೆ. ಸ್ಪರ್ಧೆಯು ಯುವಕರಲ್ಲಿ ಉತ್ಸಾಹ ಮೂಡಿಸುವುದರೊಂದಿಗೆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಿಸಿತು.1
- ಶಾಸಕ ಯತ್ನಾಳ ಸಿಎಂ ಆಗುವುದು ಹಗಲುಗನಸು: ಸಚಿವ ವಿಜಯಾನಂದ ಕಾಶಪ್ಪನವರ ಶಾಸಕ ಯತ್ನಾಳ ಸಿಎಂ ಆಗುವುದು ಹಗಲುಗನಸು: ಸಚಿವ ವಿಜಯಾನಂದ ಕಾಶಪ್ಪನವರ1
- *ಹಿಂದೂ ಮಹಾಗಣಪತಿ , ತಾಳಿಕೋಟೆ 🕉* *ಮೊದಲ ಭವ್ಯ ದರ್ಶನ ಸಂಜೆ 7 ಘಂಟೆಗೆ* 🌺 ಭಕ್ತಿಭಾವದಿಂದ ಪ್ರತಿಷ್ಠಾಪಿಸಲಾದ ಶ್ರೀ ಮಹಾಗಣಪತಿಯ ದಿವ್ಯ ದರ್ಶನ ಪಡೆಯಲು ತಾಳಿಕೋಟೆಯ ಸಮಸ್ತ ಭಕ್ತಾದಿಗಳಿಗೆ ಆತ್ಮೀಯ ಆಹ್ವಾನ. *🙏 ತಾವೆಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ, ತಮ್ಮ ಬಂಧು-ಬಳಗ ಹಾಗೂ ಸ್ನೇಹಿತರನ್ನೂ ಕರೆತಂದು ಶ್ರೀ ಮಹಾಗಣಪತಿಯ ದಿವ್ಯ ದರ್ಶನ ಪಡೆದು ಕೃಪೆಗೆ ಪಾತ್ರರಾಗಿ.* ತಾಳಿಕೋಟಿ: ಪಟ್ಟಣದಲ್ಲಿ ಭಕ್ತಿಭಾವದಿಂದ ಪ್ರತಿಷ್ಠಾಪಿಸಲಾದ ಶ್ರೀ ಹಿಂದೂ ಮಹಾಗಣಪತಿಯ ಮೊದಲ ಭವ್ಯ ದರ್ಶನ ಸಂಜೆ 7 ಗಂಟೆಗೆ ನೆರವೇರಿತು. ಶ್ರೀ ಹಿಂದೂ ಮಹಾಗಣಪತಿಯ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ತಾಳಿಕೋಟೆಯ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಗಣಪತಿ ಬಪ್ಪನ ದಿವ್ಯ ದರ್ಶನ ಪಡೆದು ಕೃಪೆಗೆ ಪಾತ್ರರಾದರು. ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ನಡುವೆ ಮಹಾಗಣಪತಿಯ ದರ್ಶನಕ್ಕೆ ಭಕ್ತರಲ್ಲಿ ಅಪಾರ ಉತ್ಸಾಹ ಕಂಡುಬಂದಿತು. ಭಕ್ತರು ಶ್ರದ್ಧಾ–ಭಕ್ತಿಯಿಂದ ಪೂಜೆ ಸಲ್ಲಿಸಿ, ಶ್ರೀ ಹಿಂದೂ ಮಹಾಗಣಪತಿಯ ಆಶೀರ್ವಾದ ಪಡೆದು ತಮ್ಮ ಕುಟುಂಬಕ್ಕೆ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿ ಕರುಣಿಸಲಿ ಎಂದು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ತಾಳಿಕೋಟೆ ಪಟ್ಟಣದ ವಿವಿಧ ಭಾಗಗಳಿಂದ ಭಕ್ತರು ಭಾಗವಹಿಸಿ ಗಣಪತಿ ಬಪ್ಪನ ದರ್ಶನ ಪಡೆದರು. ಗಣಪತಿ ಬಪ್ಪಾ ಮೋರಯಾ… ಮಂಗಳಮೂರ್ತಿ ಮೋರಯಾ…! ವರದಿ: ಸಂಗನಗೌಡ ಗಬಸಾವಳಗಿ SCN TV NEWS – ತಾಳಿಕೋಟಿ1
- ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ತಹಶೀಲ್ದಾರ್ ಗೆ ರೈತರ ಮನವಿ ಮುಧೋಳ : ಅಸಮರ್ಪಕ ಹಾಗೂ ಗುಣಮಟ್ಟವಿಲ್ಲದ ವಿದ್ಯುತ್ ಪೂರೈಕೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿ ಪಂಪ್‌ಸೆಟ್‌ಗಳು, ಮೋಟಾರ್‌ಗಳು ಹಾಗೂ ವಿದ್ಯುತ್ ಬೋರ್ಡ್‌ಗಳು ಪದೇಪದೇ ಸುಟ್ಟುಹೋಗುತ್ತಿವೆ. ಕೂಡಲೇ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಆಗ್ರಹಿಸಿ ರೈತರು ತಹಶೀಲ್ದಾರ್ ಅವರ ಮುಖಾಂತರ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಇಂಧನ ಸಚಿವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಸುಭಾಷ್ ಸಿರಬೂರ, ಬಸವಂತಪ್ಪ ಕಾಂಬಳೆ, ಮುತ್ತಪ್ಪ ಕೋಮಾರ , ದುಡ್ಡಪ್ಪ ಯರಗಟ್ಟಿ, ಮನುನಾಥ ಚಿಕ್ಕೂರ, ಮಂಜುನಾಥ ಅರಕೇರಿ ಹಾಗೂ ಮಂಜುನಾಥ ಲಕ್ಕಂ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.1