Shuru
Apke Nagar Ki App…
ಹೆಲ್ಮೆಟ್ ಧರಿಸದ ಸವಾರರ ತಪಾಸಣೆ ವೇಳೆ ವಾಗ್ವಾದ ಪೊಲೀಸರ ವರ್ತನೆಗೆ ಸ್ಥಳೀಯರಿಂದ ತೀವ್ರ ಆಕ್ಷೇಪ.. *ಚಿಂತಾಮಣಿ:-ಹೆಲ್ಮೆಟ್ ವಿಚಾರಕ್ಕೆ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿ*
Arunkumar H M
ಹೆಲ್ಮೆಟ್ ಧರಿಸದ ಸವಾರರ ತಪಾಸಣೆ ವೇಳೆ ವಾಗ್ವಾದ ಪೊಲೀಸರ ವರ್ತನೆಗೆ ಸ್ಥಳೀಯರಿಂದ ತೀವ್ರ ಆಕ್ಷೇಪ.. *ಚಿಂತಾಮಣಿ:-ಹೆಲ್ಮೆಟ್ ವಿಚಾರಕ್ಕೆ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿ*
More news from ಕರ್ನಾಟಕ and nearby areas
- *ಚಿಂತಾಮಣಿ:-ಹೆಲ್ಮೆಟ್ ವಿಚಾರಕ್ಕೆ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿ*1
- *ಚಿಂತಾಮಣಿ:-ಹೆಲ್ಮೆಟ್ ವಿಚಾರಕ್ಕೆ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿ* *ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ* ಚಿಂತಾಮಣಿ ನಗರದ ಹೃದಯಭಾಗದಲ್ಲಿರುವ ಪಿ.ಸಿ.ಆರ್ ಕಾಂಪ್ಲೆಕ್ಸ್ ಬಳಿ ಹೆಲ್ಮೆಟ್ ಧರಿಸದ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ತೀವ್ರ ವಾಗ್ವಾದ ನಡೆದಿದೆ. ನಗರದ ಸಂಚಾರಿ ನಿಯಮಗಳ ಪಾಲನೆಗಾಗಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.ಹೆಲ್ಮೆಟ್ ಧರಿಸದ ಸವಾರರನ್ನು ತಡೆದ ಪೊಲೀಸರು ದಂಡ ವಿಧಿಸಲು ಮುಂದಾದಾಗ,ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಪೊಲೀಸರು ಏಕವಚನದಲ್ಲಿ ಮಾತನಾಡುತ್ತಿದ್ದಾರೆ ಮತ್ತು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಸುರಕ್ಷತೆ ಮತ್ತು ನಿಯಮಗಳ ಪಾಲನೆಗಾಗಿ ತಪಾಸಣೆ ನಡೆಸಲಾಗುತ್ತಿದೆ.ಸಾರ್ವಜನಿಕರು ಸಹಕರಿಸುವ ಬದಲು ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂಬುದು ಪೊಲೀಸರ ವಾದವಾಗಿದೆ. ಘಟನೆಯ ವೇಳೆ ಅಲ್ಲಿದ್ದವರು ತಮ್ಮ ಮೊಬೈಲ್‌ನಲ್ಲಿ ದೃಶ್ಯಗಳನ್ನು ಸೆರೆಹಿಡಿದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಪೊಲೀಸರು ಮತ್ತು ಯುವಕರ ನಡುವೆ ತೀವ್ರ ಸ್ವರೂಪದ ಮಾತಿನ ಚಕಮಕಿ ನಡೆಯುತ್ತಿರುವುದು ಕಂಡುಬಂದಿದೆ. ವರದಿ:-ಸೀನ. ಟಿ ಚಿಂತಾಮಣಿ3
- KOLAR KI.AWAAZ KOUSAR NEWS1
- ನಾರಿಶಕ್ತಿ ವಂದನಾ ಮಸೂದೆ ಮಂಡನೆ ವಿರುದ್ಧ ಮತ ಚಲಾಯಿಸಿದ ಕಾಂಗ್ರೇಸ್ ಮಿತ್ರ ಪಕ್ಷಗಳ ನಡೆ ಖಂಡಿಸಿಬೃಹತ್ ಪ್ರತಿಭಟನೆ1
- ಕೋಲಾರ :ಮಹಿಳಾ ಮೀಸಲಾತಿ ಎಂಬುದು ದೇಶದ ಮಹಿಳೆಯರ ರಾಜಕೀಯ ಸಬಲೀಕರಣಕ್ಕೆ ಅತ್ಯಂತ ಅಗತ್ಯವಾದ ಕ್ರಮವಾಗಿದ್ದು, ಈ ಮಹತ್ವದ ಮಸೂದೆಯನ್ನು ವಿರೋಧಿಸುವ ಮೂಲಕ ಮೇಲ್ಕಂಡ ಪಕ್ಷಗಳು ಮಹಿಳೆಯರ ಹಕ್ಕುಗಳಿಗೆ ವಿರುದ್ಧವಾಗಿ ನಡೆದುಕೊಂಡಿವೆ ಎಂದು ಆರೋಪಿಸಲಾಯಿತು ಈ ಹಿನ್ನೆಲೆಯಲ್ಲಿ ಕೋಲಾರ ನಗರದ ಬಸ್ ನಿಲ್ದಾಣದ ಸಮೀಪದ ಸಿಗ್ನಲ್ ವೃತ್ತದಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸುವಲ್ಲಿ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಮಹಿಳೆಯರು ತಕ್ಕ ಪಾಠ ಕಳಿಸುತ್ತೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಭಾರತದ ಪ್ರಧಾನ ಮಂತ್ರಿಗಳಾದ Narendra Modi ಅವರ ಮಹತ್ವಾಕಾಂಕ್ಷೆಯಾದ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜನಗಣತಿ ಹಾಗೂ ಕ್ಷೇತ್ರ ಪುನರ್ವಿಂಗಡನೆ (ಡಿಲಿಮಿಟೇಶನ್) ಪ್ರಕ್ರಿಯೆಗಳೊಂದಿಗೆ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸಲಾಯಿತು. ಹಾಗೆಯೇ, ವಿರೋಧ ವ್ಯಕ್ತಪಡಿಸಿದ ಮೈತ್ರಿಕೂಟದ ನಿಲುವು ಸರಿಯಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸುವುದಾಗಿ ತಿಳಿಸಲಾಯಿತು1
- ಕೋಲಾರ:- ಕೇಂದ್ರದ ಮೋದಿ ನೇತೃತ್ವದ ಸರ್ಕಾರ ಸಂಸತ್ ಇ ನಲ್ಲಿ ಮಂಡಿಸಿದ್ದ 'ನಾರಿಶಕ್ತಿ ವಂದನ್'ಮಸೂದೆಗೆ ಅಡ್ಡಿಪಡಿ - ಸುವ ಮೂಲಕ ದೇಶದ ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ - ತಂದು ಮಹಾದ್ರೋಹ ಬಗೆದಿರುವ ಭ್ರಷ್ಟ ಕಾಂಗ್ರೆಸ್ ಮತ್ತವರ ಬೆಂಬಲಿಗ ಪಕ್ಷಗಳನ್ನು ಚುನಾವಣೆಯಲ್ಲಿ ಬಹಿಷ್ಕರಿಸಲು ಬಿಜೆಪಿ ಮುಖಂಡರು ಕರೆ ನೀಡಿದರು.ನಗರದ ಬಸ್‌ನಿಲ್ದಾಣ ವೃತ್ತದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ,ಮಾಜಿ ಸಂಸದ ಎಸ್. ಮುನಿಸ್ವಾಮಿ ಅವರ ಪತ್ನಿ ಶೈಲಜ ಮುನಿಸ್ವಾಮಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅರುಣಮ್ಮ, ಮಾಲಾ ವೆಂಕಟೇಶ್, ಮತ್ತಿತರರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಭಾಗವಹಿಸಿ ಮಾನವ ಸರಪಳಿ ನಿರ್ಮಿಸಿದ್ದಲ್ಲದೇ ರಾಹುಲ್ ಗಾಂಧಿ,ಸಿದ್ದರಾಮಯ್ಯ, ಮಲ್ಲಿ - ಕಾರ್ಜುನ ಖರ್ಗೆ ವಿರುದ್ಧ ಘೋಷಣೆ ಕೂಗಿದರು. ಮಾಜಿ ಸಚಿವ ವರ್ತೂರು ಪ್ರಕಾಶ್ ಮಾತನಾಡಿ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ವಿಧೇಯಕ ಮಂಡಿ - ಸಲಾಗಿದ್ದು ಈ ವಿಧೇಯಕ ಸೋಲಿಗೆ ಪ್ರಮುಖ ಪಾತ್ರ ವಹಿಸಿ ” ರುವ ಕಾಂಗ್ರೆಸ್ ಪಕ್ಷದ ವಿರುದ್ದ ಮಹಿಳೆಯರು ಹೋರಾಟ - ನಡೆಸುವುದು ಮಾತ್ರವಲ್ಲ ಮುಂದಿನ ಚುನಾವಣೆಯಲ್ಲಿ ಬಹಿ ಷ್ಕರಿಸಬೇಕು ಎಂದು ಕರೆ ನೀಡಿದರು. ಪ್ರತಿಭಟನೆಯಲ್ಲಿ ಬಿಜೆಪಿ - ಮಹಿಳಾ ಮೋರ್ಚಾದ ಮಮತಮ್ಮ,ಅಶ್ವಿನಿ,ಗೀತಾ,ಶ್ವೇತಾ, ನಗರಸಭೆ ಮಾಜಿ ಸದಸ್ಯ ಪ್ರವೀಣ್ ಗೌಡ, ಬಿಜೆಪಿ ಮುಖಂಡ - ರಾದ ವಿಜಯಕುಮಾರ್, ವೇಮಗಲ್ ಪಪಂ ಉಪಾಧ್ಯಕ್ಷ ಸಿ.ಎಸ್.ವೆಂಕಟೇಶ್, ಬಂಕ್ ಮಂಜು, ಎಂಪಿ.ನಾರಾಯಣ - ಸ್ವಾಮಿ, ಅಪ್ಪಿನಾರಾಯಣಸ್ವಾಮಿ, ಕೆಂಬೋಡಿ ನಾರಾಯಣ ಸ್ವಾಮಿ,ಒಬಿಸಿ ಮೋರ್ಚಾಬಾಲಾಜಿ,ತಿಮ್ಮರಾಯಪ್ಪ, ಮಾಲೂರು - ಕೃಷ್ಣಪ್ಪ, ಮುಳಬಾಗಿಲು ಮಂಜುನಾಥಗೌಡ, ಶಿವಣ್ಣ, ಲಕ್ಷ್ಮಣ - ಗೌಡ, ಸುರೇಶ್, ಕಿರಣ್, ಬಂಗಾರಪೇಟೆ ಮಹೇಶ್, ಕಾಡುಗುರು ನಾಗಭೂಷಣ್, ಮಾಲೂರು ಅಪ್ಪಿರಾಜು, ಸಾ.ಮಾ. ಅನಿಲ್ ಬಾಬು ಸೇರಿದಂತೆ ನೂರಾರು ಮಹಿಳೆಯರು ಮತ್ತಿತರರಿದ್ದರು.1
- Post by Venu Gopal2
- KOLAR KI.AWAAZ1