Shuru
Apke Nagar Ki App…
ದಾವಣಗೆರೆಯಲ್ಲಿ ಮಾಜಿ ಮೇಯರ್ ಡ್ಯಾನ್ಸ್ ಹೇಗಿರಬಹುದು! ಗೊತ್ತಾ?. ದಾವಣಗೆರೆ : ದಾವಣಗೆರೆಯಲ್ಲಿ ಹೋಳಿ ಹಬ್ಬ ಭರ್ಜರಿಯಾಗಿ ನಡೆಯುತ್ತಿದ್ದು, ಮಾಜಿ ಮೇಯರ್ ಬಿ.ಜೆ.ಅಜೇಯ್ ಕುಮಾರ್ ಸಖತ್ ಸ್ಟೇಪ್ ಹಾಕಿದರು.
Nandheesh kumar ac
ದಾವಣಗೆರೆಯಲ್ಲಿ ಮಾಜಿ ಮೇಯರ್ ಡ್ಯಾನ್ಸ್ ಹೇಗಿರಬಹುದು! ಗೊತ್ತಾ?. ದಾವಣಗೆರೆ : ದಾವಣಗೆರೆಯಲ್ಲಿ ಹೋಳಿ ಹಬ್ಬ ಭರ್ಜರಿಯಾಗಿ ನಡೆಯುತ್ತಿದ್ದು, ಮಾಜಿ ಮೇಯರ್ ಬಿ.ಜೆ.ಅಜೇಯ್ ಕುಮಾರ್ ಸಖತ್ ಸ್ಟೇಪ್ ಹಾಕಿದರು.
More news from ಕರ್ನಾಟಕ and nearby areas
- ದಾವಣಗೆರೆ : ದಾವಣಗೆರೆಯಲ್ಲಿ ಹೋಳಿ ಹಬ್ಬ ಭರ್ಜರಿಯಾಗಿ ನಡೆಯುತ್ತಿದ್ದು, ಮಾಜಿ ಮೇಯರ್ ಬಿ.ಜೆ.ಅಜೇಯ್ ಕುಮಾರ್ ಸಖತ್ ಸ್ಟೇಪ್ ಹಾಕಿದರು.1
- Post by ALTAF,❤️🙏1
- ಭದ್ರ ಮೇಲ್ದಂಡೆ ಯೋಜನೆ ಕಾಮಗಾರಿಗೆ 5300 ಕೋಟಿ ಹಣ ನೀಡದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಬೇಡರಹಳ್ಳಿ ಬಸವ ರೆಡ್ಡಿ ಒತ್ತಾಯಿಸಿದರು. ನಗರದ ತಾಲೂಕು ಕಚೇರಿ ಮುಂದೆ ಪ್ರತಿಭಟನೆಯನ್ನು ನಡೆಸಿ ನಂತರ ಉಪತಾಶಿಲ್ದಾರ್ ಮುನಿ ವೆಂಕಟಪ್ಪ ಇವರಿಗೆ ಮನವಿ ಪತ್ರ ನೀಡಿ ಮಾತನಾಡಿದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯುವರು ಚಿತ್ರದುರ್ಗದಲ್ಲಿ ಘೋಷಣೆ ಮಾಡಿರುವ ಭದ್ರಾಮಲ್ದಂಡೆ ಯೋಜನೆಗೆ 5300 ಕೋಟಿ ನೀಡುವುದಾಗ ಹಾಗೂ ಯೋಜನೆಯಯನ್ನ ರಾಷ್ಟ್ರೀಯ ಯೋಜನೆಯನ್ನಾಗಿ ಸೇರ್ಪಡೆ ಮಾಡುವುದಾಗಿ ಹೇಳಿ ಈವರೆಗೂ ಒಂದು ನಯಾಪೈಸೆ ಬಿಡುಗಡೆ ಮಾಡದೆ ಕುಂಟು ನೆಪ ಹೇಳುತ್ತಾ ರಾಜಕಾರಣ ಮಾಡುತ್ತಾ ಬೊಗಳೆ ಭಾಷಣ ಮಾಡುತ್ತಿದ್ದಾರೆ. ಬಿಜೆಪಿ ವಿರೋಧ ಪಕ್ಷದ ನಾಯಕ ಆರ್ ಅಶೋಕ, ಚಲವಾದಿ ನಾರಾಯಣಸ್ವಾಮಿ ಬಿಜೆಪಿ ಪಕ್ಷದ ಅಧ್ಯಕ್ಷ ವಿಜಯೇಂದ್ರ ಇವರು ಮೋದಿ ಮಾತು ತಪ್ಪಿವಚನ ಭ್ರಷ್ಟರಾಗಿದ್ದು ಮೋದಿ ರಾಜೀನಾಮೆ ನೀಡಬೇಕು ಇಲ್ಲವೇ ಪ್ರತಿ ಹಂತದಲ್ಲೂ ರಾಜ್ಯ ಸರ್ಕಾರವನ್ನು ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂದು ಹೇಳುವ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಪ್ರತಿ ಹಂತದಲ್ಲೂ ರಾಜೀನಾಮೆ ಕೇಳುತ್ತಿದ್ದು ಇವರಿಗೆ ನೈತಿಕತೆ ಇದ್ದರೆ ಇವರ ಪಕ್ಷದ ಪ್ರಧಾನಿ ಅಥವಾ ವಿರೋಧ ಪಕ್ಷದ ನಾಯಕರೆಲ್ಲ ಮಾತಿಗೆ ತಪ್ಪಿದ್ದು ಜನರನ್ನ ಕ್ಷಮೆ ಕೇಳಿ ರಾಜೀನಾಮೆ ನೀಡಬೇಕು. ಇಲ್ಲವೇ ಕೊಟ್ಟ ಮಾತಿನಂತೆ ಕೇಂದ್ರದ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಕಾಮಗಾರಿಗೆ ಮೀಸಲಿಟ್ಟ 5300 ಕೋಟಿ ಹಣ ಬಿಡುಗಡೆ ಮಾಡುವಂತೆ ಒತ್ತಡ ಹೇರಿ ಹಣ ಕೊಡುವಂತೆ ಕೇಂದ್ರದ ಮೇಲೆ ಒತ್ತಡ ತರುವ ಮೂಲಕ ಮಾತು ಉಳಿಸಿಕೊಳ್ಳಬೇಕು ಇಲ್ಲವಾದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಉಗ್ರ ಹೋರಾಟ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು.. ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ರೈತರು ಇದ್ದರು.1
- ಚಳ್ಳಕೆರೆ ನಗರದ ಹೊರಹೊಲಯದ ಹಿರಿಯೂರು ರಸ್ತೆಯ ನಿಸರ್ಗ ಡಾಬಾದ ಬೆಲಿಗ ಆಕಸ್ಮಿಕ ಬೆಂಕಿ ಬಿದ್ದು ನಿಸರ್ಗ ಡಬಾದ 8 ತೆಂಗಿನ ಗರಿಗಳಿಂದ ನಿರ್ಮಾಣ ಮಾಡಲಾಗಿದ್ದ ಶೆಡ್ ಗಳು ಸುಟ್ಟಿದ್ದು ಶೆಡ್ ನಲ್ಲಿ ಇದ್ದಂತಹ ಕುರ್ಚಿ ಹಾಗೂ ಚೇರುಗಳು ಸುಟ್ಟು ಸುಮಾರು ಒಂದುವರೆ ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ..1
- ಹಾವೇರಿ ತಾಲೂಕಿನ ನೆಗಳೂರ ಗ್ರಾಮದಲ್ಲಿ ಬುಧವಾರ ಸಂಭ್ರಮ ಸಡಗರದಿಂದ ಹೋಳಿ ಹಬ್ಬ ಆಚರಣೆಗೆ ಚಾಲನೆ ನೀಡಲಾಯಿತು. ಬೆಳಗಿನ ಜಾವ ಗ್ರಾಮದ ಆಂಜನೇಯ ದೇವಾಲಯದ ಮುಂಭಾಗದಲ್ಲಿ ಗ್ರಾಮಸ್ಥರು ಕಾಮದಹನ ಮಾಡುವುದರ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು. ಇನ್ನೂ ಕಾಮದಹನ ಅಗ್ನಿಯ ಕೆಂಡವನ್ನು ಮನೆಗೆ ತಂದು ಕಡಲೆಕಾಳುಗಳನ್ನು ಅದರಲ್ಲಿ ಹುರಿದುಕೊಂಡು ತಿನ್ನುವುದು ಸಂಪ್ರದಾಯವಿದೆ. ಇನ್ನೂ ರೖತಾಪಿ ವರ್ಗದವರು ಕುಸುಬಿ ಗಿಡವನ್ನು ಸುಟ್ಟು ಮನೆಯಲ್ಲಿ ಕಟ್ಟುವರು ಇದರಿಂದ ಮನೆಗೆ ಹಾಗೂ ಪಶುಗಳಿಗೆ ಯಾವದೇ ತರಹದ ದೃಷ್ಟಿ ಹಾಗೂ ಅನಾರೋಗ್ಯದ ಸಮಸ್ಯೆಗಳು ಆಗದು ಎಂಬ ನಂಬಿಕೆಯಿದೆ. ಗ್ರಾಮದ ಕಾಮನಕಟ್ಟೆ ಎಂಬಲ್ಲಿ ಶತಮಾನಗಳಿಂದ ರತಿಮನ್ಮಥರ ಪ್ರತಿಷ್ಠಾಪನೆ ಮಾಡುತ್ತಾ ಬಂದಿದ್ದು. ನಂತರ ಬಂಡಿ ಉತ್ಸವದ ಮೂಲಕ ರತಿಮನ್ಮಥರ ಮೇರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಾಮನಕಟ್ಟೆಗೆ ತಲುಪಿ ಕಾಮದಹನ ಮಾಡಲಾಗುತ್ತದೆ. ಕಾಮದಹನ ವೇಳೆ ಕಾಮನ ಭಾವಚಿತ್ರದ ಕಾಗದಕ್ಕೆ ಆಗ್ನಿ ಸ್ಪರ್ಶ ಮಾಡಿದಾಗ ಅದು ಯಾವ ದಿಕ್ಕಿನ ಕಡೆಗೆ ಕಾಗದ ತುಂಡು ಬೀಳುತ್ತೂ ಆಕಡೆಗೆ ಹೆಚ್ಚು ಮಳೆ ಬೆಳೆ ಸಮೃದ್ಧಿ ಯಾಗುವುದು ಎಂಬದು ರೖತಾಪಿವರ್ಗದ ನಂಬುಗೆಯಾಗಿದೆ. ಒಟ್ಟಾರೆಯಾಗಿ ನೆಗಳೂರಿನಲ್ಲಿ ಹೋಳಿ ಹಬ್ಬ ಸಂಭ್ರಮವೂ ಮನೆ ಮನೆಗಳಲ್ಲಿ ತುಂಬಿದೆ. ಇನ್ನೂ ಮನೆಗಳಲ್ಲಿ ಹಬ್ಬದ ನಿಮಿತ್ಯ ಸಿಹಿ ಖಾದ್ಯಗಳ ತಯಾರಿಯಲ್ಲಿ ಮಹಿಳೆಯರು ಮಗ್ನರಾಗಿದ್ದಾರೆ.10
- ಶಿವಮೊಗ್ಗ: ಭದ್ರಾವತಿ ನಗರದ ನ್ಯೂಟೌನ್ ಮೆಸ್ ರಸ್ತೆಯ ಸುರಕ್ಷಾ ಜೀವನ ಸೇವಾ ಟ್ರಸ್ಟ್ ವತಿಯಿಂದ ಸುರಕ್ಷಾ ಜೀವನ ವೃದ್ಧಾಶ್ರಮ ಮತ್ತು ಅನಾಥಾಶ್ರಮ ದ 5 ನೇ ವಾರ್ಷಿಕೋತ್ಸವ ಮಾ.4 ರ ನಾಳೆ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷೆ ಡಾ:ಜ್ಯೋತಿ ಸೋಮಶೇಖರ್ ತಿಳಿಸಿದರು. ಅವರು ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕಳೆದ 5 ವರ್ಷಗಳಿಂದ ಟ್ರಸ್ಟ್ ವತಿಯಿಂದ ವೃದ್ಧಾಶ್ರಮ ಮತ್ತು ಅನಾಥಾಶ್ರಮ ಯಶಸ್ವಿಯಾಗಿ ನಡೆಸಿ ಕೊಂಡು ಬರಲಾಗುತ್ತಿದೆ ಎಂದರು. ಆಶ್ರಮದಲ್ಲಿ ವಯೋವೃದ್ಧರು ಹಾಗು ಅನಾಥರ ಬಗ್ಗೆ ಆಶ್ರಮದಲ್ಲಿ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಟ್ರಸ್ಟ್ ಪದಾಧಿಕಾರಿಗಳು ಹಾಗು ಸೇವಾ ಮನೋಭಾವ ಹೊಂದಿ ರುವ ಕಾರ್ಯಕರ್ತರು ಯಾವುದೇ ಫಲಾಫೇಕ್ಷೆ ಇಲ್ಲದೆ ಕುಟುಂಬ ಸದಸ್ಯರಂತೆ ಒಗ್ಗಟ್ಟಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಟ್ರಸ್ಟ್ ಅಗತ್ಯ ವಿರುವ ಸೌಕರ್ಯಗಳನ್ನು ಹೊಂದಿದೆ. ಜನಪ್ರತಿನಿಧಿಗಳು, ದಾನಿಗಳು ಸೇರಿದಂತೆ ಸಮಾಜದ ಪ್ರತಿ ಯೊಬ್ಬರು ಹೆಚ್ಚಿನ ಸಹಕಾರ ನೀಡುವ ಮೂಲಕ ವೃದ್ದರು, ಅನಾಥರ ನೆರವಿಗೆ ಮುಂದಾಗ ಬೇಕೆಂದು ಮನವಿ ಮಾಡಿದರು. ಶಾಸಕ ಬಿ.ಕೆ ಸಂಗಮೇಶ್ವರ್ ವಾರ್ಷಿಕೋತ್ಸವ ಸಮಾರಂಭ ವನ್ನು ಉದ್ಘಾಟಿಸುವರು. ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿ ದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಟ್ರಸ್ಟ್ ಖಜಾಂಚಿ ಸೋಮಶೇಖರ್, ಪ್ರಮುಖರಾದ ಶಾರದ ಕುಮಾರಿ, ಶಕುಂತಲಾ ಪ್ರದೀಪ್, ಜಾಹ್ನವಿ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿದ್ದರು.1
- ಕೋಟೆನಾಡು ಚಿತ್ರದುರ್ಗ ನಗರದ ಮಾರ್ವಾಡಿ ಗಲ್ಲಿಯಲ್ಲಿ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಸೋನಿ ಸಮಾಜದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಬಣ್ಣಗಳ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಭಾರೀ ಶಾಮಿಯಾನ ಹಾಕಿ ಮಹಿಳೆಯರು, ಯುವಕರು, ಯುವತಿಯರು ಹಾಗೂ ಪುಟಾಣಿ ಮಕ್ಕಳು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಯುವತಿಯರು ಮತ್ತು ಮಹಿಳೆಯರು ನೀರಿನಲ್ಲಿ ಮಿಂದೆದ್ದು ಪರಸ್ಪರ ಬಣ್ಣ ಹಚ್ಚಿಕೊಂಡು ಹಬ್ಬದ ಖುಷಿಯನ್ನು ಹಂಚಿಕೊಂಡರು. ಒಟ್ಟಾರೆ ಮಾರ್ವಾಡಿ ಗಲ್ಲಿಯಲ್ಲಿ ಬಣ್ಣಗಳ ಜಾತ್ರೆ ನಡೆಯುತ್ತಿದ್ದಂತೆ ಕಂಡುಬಂದಿದ್ದು, ಎಲ್ಲೆಡೆ ಹೋಳಿ ಹಬ್ಬದ ಉಲ್ಲಾಸ ಕಂಗೊಳಿಸಿತು.1
- ದಾವಣಗೆರೆ : ನಗರದ ರಾಮ್ ಆ್ಯಂಡ್ ಕೋ ವೃತ್ತದಲ್ಲಿ ಹೋಳಿ ಹಬ್ಬದ ನಿಮಿತ್ತ ಯುವತಿಯರು ಡಿಜೆ ಸದ್ದಿಗೆ ಭರ್ಜರಿ ಡ್ಯಾನ್ಸ್ ಮಾಡಿದರು. ಇವರ ಜತೆ ಮಕ್ಕಳು ಸಹ ಹೆಜ್ಜೆ ಹಾಕಿದರು.1