logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶಿವಮೊಗ್ಗ-ಬಸ್‌ ಸ್ಟ್ಯಾಂಡ್‌ ಬಳಿ ಕಾರು ಬಸ್ ನಡುವೆ ಸಿಲುಕಿದ ಆಟೋ ನಜ್ಜಗುಜ್ಜು? ಶಿವಮೊಗ್ಗ: ನಗರದ ಬಸ್ ನಿಲ್ದಾಣದ ಬಳಿ ಅಶೋಕ ವೃತ್ತದಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಕೆಎಸ್’ಆರ್’ಟಿಸಿ ಬಸ್’ವೊಂದು ವೇಗವಾಗಿ ಆಟೋಗೆ ಡಿಕ್ಕಿ ಹೊಡೆದು, ನಂತರ ಕಿಯಾ ಕಾರು ಹಾಗೂ ಶಾಲಾ ಬಸ್’ಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಆಟೋ ಚಾಲಕ ರಾಜು ಎನ್ನುವವರಿಗೆ ಗಂಭೀರ ಗಾಯಗಳಾಗಿದೆ. ಎಡಗೈ, ಎಡ ಗಾಲು, ಸೊಂಟ ಹಾಗೂ ಎದೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಿಎಚ್ ರಸ್ತೆಯ ಅಶೋಕ ವೃತ್ತದಲ್ಲಿ ರೆಡ್ ಸಿಗ್ನಲ್ ಇದ್ದುದ ರಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಈ ವೇಳೆ ಎಎ ವೃತ್ತದ ಕಡೆಯಿಂದ ವೇಗವಾಗಿ ಬಂದ ಕೆಎಸ್’ಆರ್’ಟಿಸಿ ಬಸ್ ಮೊದಲು ಆಟೋಗೆ ಡಿಕ್ಕಿ ಹೊಡೆದಿದೆ. ನಂತರ ಆಟೋವನ್ನು ತಳ್ಳಿಕೊಂಡು ಕಿಯಾ ಕಾರು, ನಂತರ ಶಾಲಾ ಬಸ್’ಗೆ ಡಿಕ್ಕಿ ಹೊಡೆದಿದೆ. ಅತಿ ವೇಗದಿಂದ ಬಸ್ ಡಿಕ್ಕಿ ಹೊಡೆದು ಕಾರು ಹಾಗೂ ಬಸ್ ನಡುವೆ ಸಿಲುಕಿದ ಪರಿಣಾಮ ಆಟೋ ಸಂಪೂರ್ಣ ನಜ್ಜುಗುಜ್ಜಾ ಗಿದ್ದು, ಕಿಯಾ ಕಾರು ಸಹ ಬಹಳಷ್ಟು ಹಾನಿಯಾಗಿದೆ. ನಂತರ ಮುಂದಿದ್ದ ಶಾಲಾ ಬಸ್’ಗೆ ಡಿಕ್ಕಿ ಹೊಡೆದಿದೆ. ಘಟನೆ ಸಂಭವಿಸಿದ ತಕ್ಷಣ ಸ್ಪಂದಿಸಿದ ಸಾರ್ವಜನಿಕರು, ಕಿಯಾ ಕಾರು ಚಾಲಕ ಸುದೀಪ್ ಶೆಟ್ಟಿ, ಶಾಲಾ ಬಸ್ ಚಾಲಕ ಖಾಸಿಂ ಷರೀಫ್ ಹಾಗೂ ಕೆಎಸ್’ಆರ್’ಟಿಸಿ ಬಸ್ ಕಂಡಕ್ಟರ್ ಕರಿಬಸಪ್ಪ ಅವರು ಆಟೋದಲ್ಲಿ ಸಿಲುಕಿದ್ದ ಚಾಲಕನನ್ನು ಹೊರಕ್ಕೆ ತೆಗೆದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಎಸ್’ಆರ್’ಟಿಸಿ ಬಸ್ ಚಾಲಕರ ಅತಿ ವೇಗ ಹಾಗೂ ನಿರ್ಲಕ್ಷತನದ ಚಾಲನೆಯೇ ಘಟನೆಗೆ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

3 hrs ago
user_ಆರ್.ವಿ.ಕೃಷ್ಣ
ಆರ್.ವಿ.ಕೃಷ್ಣ
Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
3 hrs ago
96cacf54-3c28-43c5-95ba-1dda9be23c31

ಶಿವಮೊಗ್ಗ-ಬಸ್‌ ಸ್ಟ್ಯಾಂಡ್‌ ಬಳಿ ಕಾರು ಬಸ್ ನಡುವೆ ಸಿಲುಕಿದ ಆಟೋ ನಜ್ಜಗುಜ್ಜು? ಶಿವಮೊಗ್ಗ: ನಗರದ ಬಸ್ ನಿಲ್ದಾಣದ ಬಳಿ ಅಶೋಕ ವೃತ್ತದಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಕೆಎಸ್’ಆರ್’ಟಿಸಿ ಬಸ್’ವೊಂದು ವೇಗವಾಗಿ ಆಟೋಗೆ ಡಿಕ್ಕಿ ಹೊಡೆದು, ನಂತರ ಕಿಯಾ ಕಾರು ಹಾಗೂ ಶಾಲಾ ಬಸ್’ಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಆಟೋ ಚಾಲಕ ರಾಜು ಎನ್ನುವವರಿಗೆ ಗಂಭೀರ ಗಾಯಗಳಾಗಿದೆ. ಎಡಗೈ, ಎಡ ಗಾಲು, ಸೊಂಟ ಹಾಗೂ ಎದೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಿಎಚ್ ರಸ್ತೆಯ ಅಶೋಕ ವೃತ್ತದಲ್ಲಿ ರೆಡ್ ಸಿಗ್ನಲ್ ಇದ್ದುದ ರಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಈ ವೇಳೆ ಎಎ ವೃತ್ತದ ಕಡೆಯಿಂದ ವೇಗವಾಗಿ ಬಂದ ಕೆಎಸ್’ಆರ್’ಟಿಸಿ ಬಸ್ ಮೊದಲು ಆಟೋಗೆ ಡಿಕ್ಕಿ ಹೊಡೆದಿದೆ. ನಂತರ ಆಟೋವನ್ನು ತಳ್ಳಿಕೊಂಡು ಕಿಯಾ ಕಾರು, ನಂತರ ಶಾಲಾ ಬಸ್’ಗೆ ಡಿಕ್ಕಿ ಹೊಡೆದಿದೆ. ಅತಿ ವೇಗದಿಂದ ಬಸ್ ಡಿಕ್ಕಿ ಹೊಡೆದು ಕಾರು ಹಾಗೂ ಬಸ್ ನಡುವೆ ಸಿಲುಕಿದ ಪರಿಣಾಮ ಆಟೋ ಸಂಪೂರ್ಣ ನಜ್ಜುಗುಜ್ಜಾ ಗಿದ್ದು, ಕಿಯಾ ಕಾರು ಸಹ ಬಹಳಷ್ಟು ಹಾನಿಯಾಗಿದೆ. ನಂತರ ಮುಂದಿದ್ದ ಶಾಲಾ ಬಸ್’ಗೆ ಡಿಕ್ಕಿ ಹೊಡೆದಿದೆ. ಘಟನೆ ಸಂಭವಿಸಿದ ತಕ್ಷಣ ಸ್ಪಂದಿಸಿದ ಸಾರ್ವಜನಿಕರು, ಕಿಯಾ ಕಾರು ಚಾಲಕ ಸುದೀಪ್ ಶೆಟ್ಟಿ, ಶಾಲಾ ಬಸ್ ಚಾಲಕ ಖಾಸಿಂ ಷರೀಫ್ ಹಾಗೂ ಕೆಎಸ್’ಆರ್’ಟಿಸಿ ಬಸ್ ಕಂಡಕ್ಟರ್ ಕರಿಬಸಪ್ಪ ಅವರು ಆಟೋದಲ್ಲಿ ಸಿಲುಕಿದ್ದ ಚಾಲಕನನ್ನು ಹೊರಕ್ಕೆ ತೆಗೆದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಎಸ್’ಆರ್’ಟಿಸಿ ಬಸ್ ಚಾಲಕರ ಅತಿ ವೇಗ ಹಾಗೂ ನಿರ್ಲಕ್ಷತನದ ಚಾಲನೆಯೇ ಘಟನೆಗೆ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More news from ಕರ್ನಾಟಕ and nearby areas
  • ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾನದಿಗೆ ಸೇತುವೆಗಳ ಮೇಲಿಂದ ಕಸ ಎಸೆಯುತ್ತಿದ್ದು ಅವರುಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭದ್ರಾನದಿ ಸಂರಕ್ಷಣಾ ಪಡೆ ವತಿಯಿಂದ ನಗರಸಭೆ ಪೌರಾಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.ಪವಿತ್ರ ನದಿಗೆ ಕೆಲ ಅನಾಗರಿಕ ಸಾರ್ವಜನಿಕರು ಎರಡು ಸೇತುವೆಗಳ ಮೇಲಿಂದ ಕಸ,ಪ್ಲಾಸ್ಟಿಕ್ ಬ್ಯಾಗ್ ಎಸೆದು ಮಲೀನ ಮಾಡುತ್ತಿದ್ದು, ಇದರಿಂದ ನದಿ ಹಾಗೂ ಜಲಚರಗಳಿಗೆ ಕುತ್ತು ತರುತ್ತಿದೆ. 1974 ಜಾಲಮಾಲಿನ್ಯ ಕಾಯ್ದೆ ತಡೆಗಟ್ಟುವ ಸೆಕ್ಷನ್ 24 ರ ಅನ್ವಯ ಅಪರಾಧವಾಗಿದೆ. ಈ ಹಿನ್ನಲೆಯಲ್ಲಿ 41 ಮತ್ತು 45 ರ ಸೆಕ್ಷನ್ ಅನ್ವಯ ದಂಡನೆಯನ್ನು ವಿಧಿಸಬಹು ದಾಗಿದೆ. ಘನ ತ್ಯಾಜ್ಯ ನಿರ್ವಹಣೆ 2016 ರ ಕಾಯ್ದೆ ಅನ್ವಯ ಯಾವುದೇ ನದಿ ಪಾತ್ರ ಗಳಲ್ಲಿ ಕಸ ಎಸೆಯುವುದು, ಘನತ್ಯಾಜ್ಯ ನಿರ್ಬಂಧವಿದ್ದರೂ ಆದೇಶ ಗಾಳಿಗೆ ತೂರಿದಂತಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹಲವು ನಗರಸಭೆಗಳ ಮೇಲೆ ಪರಿಸರ ಪರಿಹಾರ ವಿಧಿಸಿದ್ದು ಓಡಿಶಾ ರಾಜ್ಯದ ಕೇಂದ್ರಪುರ ಮುನಿಸಿಪಾಲಿಟಿ, ಚಂಬಲ್ ನದಿ ಪ್ರಕರಣ, ಗೊರಕ್ ಪುರ ಕೊಳಚೆ ನೀರು ಪ್ರಕರಣಗಳನ್ನು ಗಮನಿಸಿ ಕೂಡಲೇ ಭದ್ರಾ ನದಿಯ ಮಾಲಿನ್ಯ ತಡೆಗೆ ಮುಂದಾಗುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಭದ್ರಾ ನದಿ ಸಂರಕ್ಷಣಾ ಪಡೆಯ ಸಿ.ತೀರ್ಥೇಶ್,ಡಿಎಸ್ಎಸ್ ಮುಖಂಡ ದಾಸರಕಲ್ಲಳ್ಳಿ ನಾಗರಾಜ್, ಹರೀಶ್, ಹಿರಿಯ ಹೋರಾಟಗಾರ ಜಯಣ್ಣ, ಗಣೇಶ್, ರೈತ ಮುಖಂಡ ಇಮ್ರಾನ್ ಪಾಷಾ, ಭದ್ರಾನದಿ ಸಂರಕ್ಷಣಪಡೆಯ ಮುಖ್ಯಸ್ಥ ರಾದ ಕಾರ್ತಿಕ್ ಕಿದ್ಮಯ್ ಉಪಸ್ಥಿತರಿದ್ದರು.
    1
    ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾನದಿಗೆ ಸೇತುವೆಗಳ ಮೇಲಿಂದ ಕಸ ಎಸೆಯುತ್ತಿದ್ದು ಅವರುಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭದ್ರಾನದಿ ಸಂರಕ್ಷಣಾ ಪಡೆ ವತಿಯಿಂದ ನಗರಸಭೆ ಪೌರಾಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.ಪವಿತ್ರ ನದಿಗೆ ಕೆಲ ಅನಾಗರಿಕ ಸಾರ್ವಜನಿಕರು ಎರಡು ಸೇತುವೆಗಳ ಮೇಲಿಂದ ಕಸ,ಪ್ಲಾಸ್ಟಿಕ್ ಬ್ಯಾಗ್ ಎಸೆದು ಮಲೀನ ಮಾಡುತ್ತಿದ್ದು, ಇದರಿಂದ ನದಿ ಹಾಗೂ ಜಲಚರಗಳಿಗೆ ಕುತ್ತು ತರುತ್ತಿದೆ. 
1974 ಜಾಲಮಾಲಿನ್ಯ ಕಾಯ್ದೆ ತಡೆಗಟ್ಟುವ ಸೆಕ್ಷನ್ 24 ರ ಅನ್ವಯ ಅಪರಾಧವಾಗಿದೆ. ಈ ಹಿನ್ನಲೆಯಲ್ಲಿ 41 ಮತ್ತು 45 ರ ಸೆಕ್ಷನ್ ಅನ್ವಯ ದಂಡನೆಯನ್ನು ವಿಧಿಸಬಹು ದಾಗಿದೆ. ಘನ ತ್ಯಾಜ್ಯ ನಿರ್ವಹಣೆ 2016 ರ ಕಾಯ್ದೆ ಅನ್ವಯ ಯಾವುದೇ ನದಿ ಪಾತ್ರ ಗಳಲ್ಲಿ ಕಸ ಎಸೆಯುವುದು, ಘನತ್ಯಾಜ್ಯ ನಿರ್ಬಂಧವಿದ್ದರೂ ಆದೇಶ ಗಾಳಿಗೆ ತೂರಿದಂತಾಗಿದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹಲವು ನಗರಸಭೆಗಳ ಮೇಲೆ ಪರಿಸರ ಪರಿಹಾರ ವಿಧಿಸಿದ್ದು ಓಡಿಶಾ ರಾಜ್ಯದ ಕೇಂದ್ರಪುರ ಮುನಿಸಿಪಾಲಿಟಿ, ಚಂಬಲ್ ನದಿ ಪ್ರಕರಣ, ಗೊರಕ್ ಪುರ ಕೊಳಚೆ ನೀರು ಪ್ರಕರಣಗಳನ್ನು ಗಮನಿಸಿ ಕೂಡಲೇ ಭದ್ರಾ ನದಿಯ ಮಾಲಿನ್ಯ ತಡೆಗೆ ಮುಂದಾಗುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಭದ್ರಾ ನದಿ ಸಂರಕ್ಷಣಾ ಪಡೆಯ ಸಿ.ತೀರ್ಥೇಶ್,ಡಿಎಸ್ಎಸ್ ಮುಖಂಡ ದಾಸರಕಲ್ಲಳ್ಳಿ ನಾಗರಾಜ್, ಹರೀಶ್, ಹಿರಿಯ ಹೋರಾಟಗಾರ ಜಯಣ್ಣ, ಗಣೇಶ್, ರೈತ ಮುಖಂಡ ಇಮ್ರಾನ್ ಪಾಷಾ, ಭದ್ರಾನದಿ ಸಂರಕ್ಷಣಪಡೆಯ ಮುಖ್ಯಸ್ಥ ರಾದ ಕಾರ್ತಿಕ್ ಕಿದ್ಮಯ್ ಉಪಸ್ಥಿತರಿದ್ದರು.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    3 hrs ago
  • ಕಡೂರು : ಸುಮಾರು ಎರಡು ಎಕರೆ ಪ್ರದೇಶದ ತೋಟದಲ್ಲಿ ಫಸಲು ಬಂದಿದ್ದ ಸುಮಾರು 20ಲಕ್ಷ ಮೌಲ್ಯದ ಬಾಳೆಗಿಡಗಳನ್ನು ಕಿಡಿಗೇಡಿಗಳು ಕಡಿದು ಹಾಕಿರುವ ಘಟನೆ ತಾಲ್ಲೂಕಿನ ಅಂಚೇಚೋಮನಹಳ್ಳಿ ಗ್ರಾಮದ ಬಳಿ ಸೋಮವಾರ ತಡರಾತ್ರಿ ನಡೆದಿದೆ. ಡಿ.ಕಾರೇಹಳ್ಳಿ ಗ್ರಾಮದ ರೈತ ಚಂದ್ರಪ್ಪ‌ ಎಂಬುವವರಿಗೆ ಸೇರಿದ ಜಮೀನನಲ್ಲಿ ಕಿಡಿಗೇಡಿಗಳು ಸೋಮವಾರ ತಡರಾತ್ರಿ ಬಾಳೆಗೊನೆ ಬಿಟ್ಟಿದ್ದ ಸುಮಾರು 1500 ಬಾಳೆಗಿಡಗಳನ್ನು ಕಡಿದು ಹಾಕಿದ್ದಾರೆ. ಬಾಳೆಗಿಡಗಳ ಬೆಳೆಗಾಗಿ ಸಂಘ, ಬ್ಯಾಂಕ್ ಹಾಗೂ ಕೈಗಡ ಸೇರಿ ಸುಮಾರು 5ಲಕ್ಷ ಸಾಲ ಮಾಡಲಾಗಿದೆ. ಬಾಳೆಗಿಡದ ಬೆಳೆಯನ್ನು ನಂಬಿಕೊಂಡು ಜೀವನ ನಡೆಸುತ್ತಾ ಬರಲಾಗಿದೆ. ಸುಮಾರು 20ಲಕ್ಷ ಮೌಲ್ಯದ ಬಾಳೆಗಿಡಗಳನ್ನು ಕಡಿದು ಹಾಕಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚುವಂತೆ ರೈತ ಚಂದ್ರಪ್ಪ ದೂರು ನೀಡಿದ್ದಾರೆ. ಮಂಗಳವಾರ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕೃತ್ಯ ವೆಸಗಿದ ಕಿಡಿಗೇಡಿಗಳ ಪತ್ತೆಗಾಗಿ ದೂರು ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ. ಈ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    3
    ಕಡೂರು : ಸುಮಾರು ಎರಡು ಎಕರೆ ಪ್ರದೇಶದ ತೋಟದಲ್ಲಿ ಫಸಲು ಬಂದಿದ್ದ ಸುಮಾರು 20ಲಕ್ಷ ಮೌಲ್ಯದ ಬಾಳೆಗಿಡಗಳನ್ನು ಕಿಡಿಗೇಡಿಗಳು ಕಡಿದು ಹಾಕಿರುವ ಘಟನೆ ತಾಲ್ಲೂಕಿನ ಅಂಚೇಚೋಮನಹಳ್ಳಿ ಗ್ರಾಮದ ಬಳಿ ಸೋಮವಾರ ತಡರಾತ್ರಿ ನಡೆದಿದೆ.
ಡಿ.ಕಾರೇಹಳ್ಳಿ ಗ್ರಾಮದ ರೈತ ಚಂದ್ರಪ್ಪ‌ ಎಂಬುವವರಿಗೆ ಸೇರಿದ ಜಮೀನನಲ್ಲಿ ಕಿಡಿಗೇಡಿಗಳು ಸೋಮವಾರ ತಡರಾತ್ರಿ ಬಾಳೆಗೊನೆ ಬಿಟ್ಟಿದ್ದ ಸುಮಾರು 1500 ಬಾಳೆಗಿಡಗಳನ್ನು ಕಡಿದು ಹಾಕಿದ್ದಾರೆ.
ಬಾಳೆಗಿಡಗಳ ಬೆಳೆಗಾಗಿ ಸಂಘ, ಬ್ಯಾಂಕ್ ಹಾಗೂ ಕೈಗಡ ಸೇರಿ ಸುಮಾರು 5ಲಕ್ಷ ಸಾಲ ಮಾಡಲಾಗಿದೆ. ಬಾಳೆಗಿಡದ ಬೆಳೆಯನ್ನು ನಂಬಿಕೊಂಡು ಜೀವನ ನಡೆಸುತ್ತಾ ಬರಲಾಗಿದೆ. ಸುಮಾರು 20ಲಕ್ಷ ಮೌಲ್ಯದ ಬಾಳೆಗಿಡಗಳನ್ನು ಕಡಿದು ಹಾಕಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚುವಂತೆ ರೈತ ಚಂದ್ರಪ್ಪ ದೂರು ನೀಡಿದ್ದಾರೆ.
ಮಂಗಳವಾರ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕೃತ್ಯ ವೆಸಗಿದ ಕಿಡಿಗೇಡಿಗಳ ಪತ್ತೆಗಾಗಿ ದೂರು ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ. ಈ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    user_Kadur News
    Kadur News
    ಪತ್ರಕರ್ತ Kadur, Chikkamagaluru•
    4 hrs ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    6 hrs ago
  • ಚಪ್ಪಲಿ ಪೊರಕೆ ತೋರಿಸುವುದು ಬಿಜೆಪಿ ಸಂಸ್ಕೃತಿ ಎಂದು ಚಿತ್ರದುರ್ಗದಲ್ಲಿ ಯೋಗೀಶ್ ಬಾಬು ತಿಳಿಸಿದ್ದಾರೆ. ಚಿತ್ರದುರ್ಗದಲ್ಲಿ ದ್ರಾಕ್ಷ ರಸ ಮಂಡಳಿ ಅಧ್ಯಕ್ಷರಾದ ಯೋಗೀಶ್ ಬಾಬು ಅವರು ಮಾತನಾಡಿದ್ದು ಯಾರಿಗೂ ಕೂಡ ಅಲ್ಲಿಗೆ ಬರ್ರಿ ಇಲ್ಲಿಗೆ ಬರ್ರಿ ಎಂದು ಸವಾಲ್ ಹಾಕುವುದು ಸರಿಯಲ್ಲ, ಎಲ್ಲರಿಗೂ ಕೂಡ ವಾಕ್ ಸ್ವಾತಂತ್ರ್ಯ ಇರುತ್ತದೆ‌. ದಾವಣಗೆರೆಗೆ ಬನ್ನಿ ಎಂದು ಹೇಳುವುದು ತಪ್ಪು ಎಂದು ಟಾಂಗ್ ಕೊಟ್ಟಿದ್ದಾರೆ
    1
    ಚಪ್ಪಲಿ ಪೊರಕೆ ತೋರಿಸುವುದು ಬಿಜೆಪಿ ಸಂಸ್ಕೃತಿ ಎಂದು ಚಿತ್ರದುರ್ಗದಲ್ಲಿ ಯೋಗೀಶ್ ಬಾಬು ತಿಳಿಸಿದ್ದಾರೆ. ಚಿತ್ರದುರ್ಗದಲ್ಲಿ ದ್ರಾಕ್ಷ ರಸ ಮಂಡಳಿ ಅಧ್ಯಕ್ಷರಾದ ಯೋಗೀಶ್ ಬಾಬು ಅವರು ಮಾತನಾಡಿದ್ದು ಯಾರಿಗೂ ಕೂಡ ಅಲ್ಲಿಗೆ ಬರ್ರಿ ಇಲ್ಲಿಗೆ ಬರ್ರಿ ಎಂದು ಸವಾಲ್ ಹಾಕುವುದು ಸರಿಯಲ್ಲ, ಎಲ್ಲರಿಗೂ ಕೂಡ ವಾಕ್ ಸ್ವಾತಂತ್ರ್ಯ ಇರುತ್ತದೆ‌. ದಾವಣಗೆರೆಗೆ ಬನ್ನಿ ಎಂದು ಹೇಳುವುದು ತಪ್ಪು ಎಂದು ಟಾಂಗ್ ಕೊಟ್ಟಿದ್ದಾರೆ
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    8 hrs ago
  • ಶಿಗ್ಗಾವ್ ಸವಣೂರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಾಸೀರ್ ಖಾನ್ ಪಠಾಣ ಅವರು ದಾವಣಗೆರೆಯ ಉಪಚುನಾವಣೆ ಕಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಇವರ ಪರ ಪ್ರಚಾರ ಕೈಗೊಳ್ಳಲು ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದರು,
    1
    ಶಿಗ್ಗಾವ್ ಸವಣೂರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಾಸೀರ್ ಖಾನ್ ಪಠಾಣ ಅವರು ದಾವಣಗೆರೆಯ ಉಪಚುನಾವಣೆ ಕಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಇವರ ಪರ ಪ್ರಚಾರ ಕೈಗೊಳ್ಳಲು ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದರು,
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    9 hrs ago
  • ಚಳ್ಳಕೆರೆ ನಗರದಲ್ಲಿ ನಗರಸಭೆ ವಾಣಿಜ್ಯ ಮಳಿಗೆಗಳ ತೆರವು ಕಾರ್ಯಾಚರಣೆ ಇಂದು ಮಂಗಳವಾರ ಬೆಳ್ಳಂ ಬೆಳಗ್ಗೆ ಜೋರಾಗಿ ಆರಂಭವಾಗಿದೆ. ಜೆಸಿಬಿ ಯಂತ್ರಗಳ ಸದ್ದು ಮಧ್ಯೆ ಕಾರ್ಯಾಚರಣೆ ಮುಂದುವರಿದಿದ್ದು, ನಗರದಲ್ಲಿ ಚಟುವಟಿಕೆ ಹೆಚ್ಚಾಗಿದೆ. ಚಳ್ಳಕೆರೆ ನಗರಸಭೆಗೆ ಸೇರಿದ ನೆಹರು ಬೆಂಗಳೂರು ರಸ್ತೆ, ಪಾವಗಡ ರಸ್ತೆ ಹಾಗೂ ಮಹದೇವಿ ರಸ್ತೆಯಲ್ಲಿರುವ ಶಿಥಿಲಗೊಂಡ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಲು ಬಹುಕಾಲದಿಂದ ನಿರೀಕ್ಷಿಸಿದ್ದ ಕ್ರಮ ಇದೀಗ ಕೈಗೆತ್ತಿಕೊಳ್ಳಲಾಗಿದೆ. ಈ ಕಾರ್ಯಾಚರಣೆಗೆ ದಿಟ್ಟ ಮಹಿಳಾ ಪೌರಾಕ್ತೆ ನಾಗವೇಣಿ ಮುಂದಾಳತ್ವ ವಹಿಸಿದ್ದು, ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪೋಲಿಸ್ ಇಲಾಖೆಯ ಬಿಗಿ ಬಂದೋಬಸ್ತಿನೊಂದಿಗೆ ಕಾರ್ಯಾಚರಣೆ ನಡೆಯುತ್ತಿದ್ದು, ಯಾವುದೇ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ನಗರಸಭೆ ಆಸ್ತಿಗಳ ಮೇಲೆ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರಲ್ಲಿ ಈ ಕ್ರಮದಿಂದ ನಡುಕ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
    1
    ಚಳ್ಳಕೆರೆ ನಗರದಲ್ಲಿ ನಗರಸಭೆ ವಾಣಿಜ್ಯ ಮಳಿಗೆಗಳ ತೆರವು ಕಾರ್ಯಾಚರಣೆ ಇಂದು ಮಂಗಳವಾರ ಬೆಳ್ಳಂ ಬೆಳಗ್ಗೆ ಜೋರಾಗಿ ಆರಂಭವಾಗಿದೆ. ಜೆಸಿಬಿ ಯಂತ್ರಗಳ ಸದ್ದು ಮಧ್ಯೆ ಕಾರ್ಯಾಚರಣೆ ಮುಂದುವರಿದಿದ್ದು, ನಗರದಲ್ಲಿ ಚಟುವಟಿಕೆ ಹೆಚ್ಚಾಗಿದೆ.
ಚಳ್ಳಕೆರೆ ನಗರಸಭೆಗೆ ಸೇರಿದ ನೆಹರು ಬೆಂಗಳೂರು ರಸ್ತೆ, ಪಾವಗಡ ರಸ್ತೆ ಹಾಗೂ ಮಹದೇವಿ ರಸ್ತೆಯಲ್ಲಿರುವ ಶಿಥಿಲಗೊಂಡ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಲು ಬಹುಕಾಲದಿಂದ ನಿರೀಕ್ಷಿಸಿದ್ದ ಕ್ರಮ ಇದೀಗ ಕೈಗೆತ್ತಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಗೆ ದಿಟ್ಟ ಮಹಿಳಾ ಪೌರಾಕ್ತೆ ನಾಗವೇಣಿ ಮುಂದಾಳತ್ವ ವಹಿಸಿದ್ದು, ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪೋಲಿಸ್ ಇಲಾಖೆಯ ಬಿಗಿ ಬಂದೋಬಸ್ತಿನೊಂದಿಗೆ ಕಾರ್ಯಾಚರಣೆ ನಡೆಯುತ್ತಿದ್ದು, ಯಾವುದೇ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ನಗರಸಭೆ ಆಸ್ತಿಗಳ ಮೇಲೆ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರಲ್ಲಿ ಈ ಕ್ರಮದಿಂದ ನಡುಕ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
    user_ಗೋಪನಹಳ್ಳಿಶಿವಣ್ಣ
    ಗೋಪನಹಳ್ಳಿಶಿವಣ್ಣ
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    15 hrs ago
  • ಮಂಗಳೂರಿನ ಮೀನುಗಾರಿಕಾ ಧಕ್ಕೆಯಲ್ಲಿರುವ ಸಂದೇಶ್ ಎಂಬವರ ಮಾಲಿಕತ್ವದ 'ಗುರುರಾಜ್’  ಎಂಬ ಆಳಸಮುದ್ರ  ಮೀನುಗಾರಿಕಾ ಬೋಟ್‍ನಲ್ಲಿ ಗೋಬಿಂದ ದಾಸ್(42)  ಎಂಬವರು  ಮಾರ್ಚ್ 6 ರಂದು  ರಾತ್ರಿ ಒಟ್ಟು 9 ಜನ  ಮೀನುಗಾರರೊಂದಿಗೆ ಮೀನುಗಾರಿಕೆಗೆ ತೆರಳಿರುತ್ತಾರೆ. ಮೀನುಹಿಡಿಯುವ ಸಲುವಾಗಿ ಬಲೆ ಬೀಸಲು ತೊಡಗಿದಾಗ  ಗೋಬಿಂದ ದಾಸ್ ಬೋಟ್‍ನಲ್ಲಿ ಇರದೇ ಕಾಣೆಯಾಗಿದ್ದಾರೆ. ಅಥವಾ ರಾತ್ರಿ ಸಮಯ ಗೋಬಿಂದ ದಾಸ್ ಆಕಸ್ಮಿಕವಾಗಿ ಬೋಟ್‍ನಿಂದ ಜಾರಿ  ಆಳ ಸಮುದ್ರ ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ದಕ್ಷಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದವರ ಚಹರೆ: ಎತ್ತರ 5 ಅಡಿ, ಗೋಧಿ ಮೈ ಬಣ್ಣ, ಸಾಧಾರಣ ಶರೀರ, ಕಪ್ಪು ಬಿಳಿ ಮಿಶ್ರಿತ ಕೂದಲು,  ಹಿಂದಿ, ಬೆಂಗಾಳಿ ಭಾಷೆ ಮಾತನಾಡುತ್ತಾರೆ. ನೀಲಿ ಬಣ್ಣದ ಟೀಶರ್ಟ್,ಮತ್ತು ಕಪ್ಪು ಬಣ್ಣದ ಬರ್ಮುಡಾ ಚಡ್ಡಿ  ಧರಿಸಿದ್ದರು. ಕಾಣೆಯಾದವರ  ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ದಕ್ಷಿಣ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    1
    ಮಂಗಳೂರಿನ ಮೀನುಗಾರಿಕಾ ಧಕ್ಕೆಯಲ್ಲಿರುವ ಸಂದೇಶ್ ಎಂಬವರ ಮಾಲಿಕತ್ವದ 'ಗುರುರಾಜ್’  ಎಂಬ ಆಳಸಮುದ್ರ  ಮೀನುಗಾರಿಕಾ ಬೋಟ್‍ನಲ್ಲಿ ಗೋಬಿಂದ ದಾಸ್(42)  ಎಂಬವರು  ಮಾರ್ಚ್ 6 ರಂದು  ರಾತ್ರಿ ಒಟ್ಟು 9 ಜನ  ಮೀನುಗಾರರೊಂದಿಗೆ ಮೀನುಗಾರಿಕೆಗೆ ತೆರಳಿರುತ್ತಾರೆ. ಮೀನುಹಿಡಿಯುವ ಸಲುವಾಗಿ ಬಲೆ ಬೀಸಲು ತೊಡಗಿದಾಗ  ಗೋಬಿಂದ ದಾಸ್ ಬೋಟ್‍ನಲ್ಲಿ ಇರದೇ ಕಾಣೆಯಾಗಿದ್ದಾರೆ. ಅಥವಾ ರಾತ್ರಿ ಸಮಯ ಗೋಬಿಂದ ದಾಸ್ ಆಕಸ್ಮಿಕವಾಗಿ ಬೋಟ್‍ನಿಂದ ಜಾರಿ  ಆಳ ಸಮುದ್ರ ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ದಕ್ಷಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಚಹರೆ: ಎತ್ತರ 5 ಅಡಿ, ಗೋಧಿ ಮೈ ಬಣ್ಣ, ಸಾಧಾರಣ ಶರೀರ, ಕಪ್ಪು ಬಿಳಿ ಮಿಶ್ರಿತ ಕೂದಲು,  ಹಿಂದಿ, ಬೆಂಗಾಳಿ ಭಾಷೆ ಮಾತನಾಡುತ್ತಾರೆ. ನೀಲಿ ಬಣ್ಣದ ಟೀಶರ್ಟ್,ಮತ್ತು ಕಪ್ಪು ಬಣ್ಣದ ಬರ್ಮುಡಾ ಚಡ್ಡಿ  ಧರಿಸಿದ್ದರು. ಕಾಣೆಯಾದವರ  ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ದಕ್ಷಿಣ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    4 hrs ago
  • ಶಿವಮೊಗ್ಗ: ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿ ರುವ ಜಿಲ್ಲೆಯ ಶಂಕರ ಘಟ್ಟದ ನಮ್ಮ ದೀನಬಂಧು ಸೇವಾ ಟ್ರಸ್ಟ್ ಸಾರ್ಥಕವಾದ 25 ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿ ಕೊಳ್ಳುತ್ತಿದೆ. ಸಮಾಜದ ಋಣವನ್ನು ತೀರಿಸಲು ವಿಶೇಷವಾಗಿ ದೀನ ದಲಿತರ ಮತ್ತು ಸಮಾಜದ ಶೋಷಿತ ವರ್ಗದವರ ಸೇವೆಗಾಗಿ ಕಟಿಬದ್ಧರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಶಂಕರಘಟ್ಟದಿಂದ ಪಾದಯಾತ್ರೆ ಮೂಲಕ ತೆರಳಿ, ಧರ್ಮಾಧಿಕಾರಿಗಳಾದ ಡಾ: ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ, ದಿನಾಂಕ 2.10.1999 ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನ ದಂದು ದೀನಬಂಧು ಸೇವಾ ಟ್ರಸ್ಟ್‍ನ್ನು ಸ್ಥಾಪಿಸಲಾಯಿತು. ದೀನಬಂಧು, ದೀನರ, ವೃದ್ಧರ ಹಾಗೂ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕ ವಾದ ಹಾಗೂ ಅವರ ಸಂಕಷ್ಟ ಗಳಿಗೆ ನೆರವಾಗುತ್ತಾ, ಪ್ರೋತ್ಸಾಹಿ ಸುತ್ತಾ, ಅನೇಕ ಸಮಾಜ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ರಚನಾತ್ಮಕ ಕಾರ್ಯ ಗಳನ್ನು ನಡೆಸುವ ಉದ್ದೇಶದ ಹಿನ್ನೆಲೆಯಲ್ಲಿ ಈ ದೀನಬಂಧು ಸೇವಾ ಟ್ರಸ್ಟ್(ರಿ)ನ್ನು ಸ್ಥಾಪಿಸ ಲಾಗಿತ್ತು. ಈಗ ಟ್ರಸ್ಟ್ ಗೆ 25 ವರ್ಷಗಳು ತುಂಬಿದೆ. ಬೆಳ್ಳಿಹಬ್ಬದ ಅಂಗವಾಗಿ ಇಂದು ಸಂಜೆ 4.00 ಘಂಟೆಗೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದ್ದು, ಉಡುಪಿಯ ಡಾ.ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ.ಜಿ. ಶಂಕರ್ ಇವರಿಗೆ ದೀನಬಂಧು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ರೂ.1 ಲಕ್ಷ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿ ರುತ್ತದೆ. ರಾಜ್ಯದಲ್ಲಿ ಸಮಾಜಸೇವೆ ಯಲ್ಲಿ ತೊಡಗಿರುವ ಸಮಾಜ ಸೇವಕರೊಬ್ಬರನ್ನು ಆಯ್ಕೆ ಮಾಡುವ ಸಲುವಾಗಿ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಗಳಾದ ಪ್ರೊ.ಎಂ.ವೆಂಕಟೇಶ್ವರಲು ಇವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಆ ಸಮಿತಿಯ ಸದಸ್ಯ ರನ್ನಾಗಿ ಬೆಂಗಳೂರು ವಿಶ್ವವಿದ್ಯಾ ನಿಲಯದ ಕುಲಪತಿಗಳಾದ ಪ್ರೊ.ಬಿ.ರಮೇಶ್, ಕುವೆಂಪು ವಿಶ್ವವಿದ್ಯಾ ಲಯದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಜಿ.ಪ್ರಶಾಂತ ನಾಯಕ್ ಹಾಗೂ ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಪಕರಾದ ಪ್ರೊ.ಪ್ರಭಾಕರ್ ಇವರನ್ನು ನೇಮಿಸಲಾಗಿತ್ತು. ಆ ಸಮಿತಿಯ ಶಿಫಾರಸ್ಸಿನ ಮೇರೆಗೆ ಡಾ.ಜಿ. ಶಂಕರ್ ಇವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸ ಲಾಗುತ್ತಿದೆ. ಇದೇ ಸಂದರ್ಭದಲ್ಲಿ ಮಾಜಿ ಸಭಾಪತಿ ಗಳಾದ ಡಿ.ಎಚ್.ಶಂಕರ ಮೂರ್ತಿ ಯವರನ್ನು, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ರಾದ ಡಾ.ಬೋಜ್ಯಾ ನಾಯಕ್ ಹಾಗೂ ಶಿಕ್ಷಣತಜ್ಞರಾದ ಪ್ರೊ. ಜೆ.ಎಲ್. ಪದ್ಮನಾಭ್ ಇವರನ್ನು ಕೂಡ ಸನ್ಮಾನಿಸಲಾಗುವುದು. ಈ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲ ನಂದನಾಥ ಮಹಾಸ್ವಾಮೀಜಿಯವರು, ಸಾಣೇಹಳ್ಳಿಯ ಶ್ರೀ ಡಾ.ಪಂಡಿತಾ ರಾಧ್ಯ ಶಿವಾಚಾರ್ಯ ಸ್ವಾಮಿಗಳು, ಆದಿಚುಂಚನ ಗಿರಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಬಾರ್ಕೂರು ಮಹಾಸಂಸ್ಥಾನದ ಡಾ.ವಿಶ್ವಸಂತೋಷ ಭಾರತಿ ಶ್ರೀ ಪಾದಂಗಳು ಹಾಗೂ ಕೊಪ್ಪದ ಗೌರಿಗದ್ದೆಯ ಸ್ವರ್ಣಪೀಠಿಕಾಪುರ ದತ್ತಾಶ್ರಮದ ಅವಧೂತರಾದ ಶ್ರೀ ವಿನಯ್ ಗುರೂಜಿಯವರು ವಹಿಸಲ್ಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖಾ ಸಚಿವರಾದ ಮಧುಬಂಗಾರಪ್ಪ ನೆರವೇರಿಸಲ್ಲಿದ್ದಾರೆ. ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ, ಶಾಸಕರುಗಳಾದ ಬಿ.ಕೆ. ಸಂಗಮೇಶ್ವರ್, ಗೋಪಾಲಕೃಷ್ಣ ಬೇಳೂರು, ಎಸ್.ಎನ್. ಚನ್ನಬಸಪ್ಪ, ವಿಧಾನಪರಿಷತ್ ಶಾಸಕರುಗಳಾದಡಾ.ಮಂಜುನಾಥ ಭಂಡಾರಿ, ಬಲ್ಕೀಶ್‍ಬಾನು, ಡಾ.ಧನಂಜಯ ಸರ್ಜಿ, ಡಿ.ಎಸ್. ಅರುಣ್, ಆಯನೂರು ಮಂಜುನಾಥ್, ಸುಧಾಕರ ಎಸ್ ಶೆಟ್ಟಿ, ಸಿ.ಎಸ್. ಚಂದ್ರಭೂಪಾಲ್, ಎಸ್. ರುದ್ರೇಗೌಡರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಾಕ್ಷರಿಯವರು, ಎಂ.ಶ್ರೀಕಾಂತ್, ಆರ್. ಪ್ರಸನ್ನ ಕುಮಾರ್, ಹೆಚ್.ಎನ್. ವಿದ್ಯಾದರ್, ಕೆ.ಮರಿಯಪ್ಪ, ಎಸ್. ಓಂಕಾರಪ್ಪ, ಎನ್. ರಮೇಶ್ ಹಾಗೂ ಎಸ್ ಪಿ ದಿನೇಶ್ ಭಾಗವಹಿಸಲ್ಲಿದ್ದಾರೆ. ಸರಿಗಮಪ ಗಾಯಕರಿಂದ ಗಾನಸಂಜೆ ಹಾಗೂ ಯಕ್ಷಗಾನ ನಾಟ್ಯ ವೈಭವ: ಕಾರ್ಯಕ್ರಮವು ನಿಗದಿತ ಸಮಯದಲ್ಲಿ ಸಂಜೆ 4.00 ಘಂಟೆಗೆ ಆರಂಭವಾಗಲ್ಲಿದ್ದು, ಸರಿಗಮಪ ಖ್ಯಾತಿಯ ಕಾರ್ತಿಕ್ ನಾಗಲಪುರ, ಸವಿಶ್ರೀ ಕುಂದಾಪುರ, ಆಮೀಶ್ ಕುಮಾರ್ ಇನ್ನಿತರ ಗಾಯಕ-ಗಾಯಕಿಯರಿಂದ ಗಾನಸಂಜೆ, 5.00 ಘಂಟೆಗೆ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರಿಂದ ಯಕ್ಷಗಾನ ನೃತ್ಯ ವೈಭವ ಹಾಗೂ ಇನ್ನಿತರ ಸಾಂಸ್ಕøತಿಕ ಕಾರ್ಯಕ್ರಮಗಳು ಇರುತ್ತವೆ. ಈ ಕಾರ್ಯಕ್ರಮದಲ್ಲಿ ಟ್ರಸ್ಟ್ ಸದಸ್ಯರು ಗಳಾದ ಡಾ. ಶೇಖರ್, ಡಾ. ಹಸೀನಾ, ಜಿ.ಡಿ. ಮಂಜು ನಾಥ್, ಯು ಶಿವಾನಂದ, ಜಿತೇಂದ್ರ, ಎಂ ಎಂ ಸ್ವಾಮಿ, ಪ್ರಸನ್ನ, ಎಂ ಸಿದ್ದರಾಮು, ಮಂಜುನಾಥ್ ಇರಲಿದ್ದಾರೆ.
    1
    ಶಿವಮೊಗ್ಗ: ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿ ರುವ ಜಿಲ್ಲೆಯ ಶಂಕರ ಘಟ್ಟದ ನಮ್ಮ ದೀನಬಂಧು ಸೇವಾ ಟ್ರಸ್ಟ್ ಸಾರ್ಥಕವಾದ 25 ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿ ಕೊಳ್ಳುತ್ತಿದೆ.
ಸಮಾಜದ ಋಣವನ್ನು ತೀರಿಸಲು ವಿಶೇಷವಾಗಿ ದೀನ ದಲಿತರ ಮತ್ತು ಸಮಾಜದ ಶೋಷಿತ ವರ್ಗದವರ ಸೇವೆಗಾಗಿ ಕಟಿಬದ್ಧರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಶಂಕರಘಟ್ಟದಿಂದ ಪಾದಯಾತ್ರೆ ಮೂಲಕ ತೆರಳಿ, ಧರ್ಮಾಧಿಕಾರಿಗಳಾದ ಡಾ: ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ, ದಿನಾಂಕ 2.10.1999 ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನ ದಂದು ದೀನಬಂಧು ಸೇವಾ ಟ್ರಸ್ಟ್‍ನ್ನು  ಸ್ಥಾಪಿಸಲಾಯಿತು.
ದೀನಬಂಧು, ದೀನರ, ವೃದ್ಧರ ಹಾಗೂ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕ ವಾದ ಹಾಗೂ ಅವರ ಸಂಕಷ್ಟ ಗಳಿಗೆ ನೆರವಾಗುತ್ತಾ, ಪ್ರೋತ್ಸಾಹಿ ಸುತ್ತಾ, ಅನೇಕ ಸಮಾಜ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ರಚನಾತ್ಮಕ ಕಾರ್ಯ ಗಳನ್ನು ನಡೆಸುವ ಉದ್ದೇಶದ ಹಿನ್ನೆಲೆಯಲ್ಲಿ ಈ ದೀನಬಂಧು ಸೇವಾ ಟ್ರಸ್ಟ್(ರಿ)ನ್ನು ಸ್ಥಾಪಿಸ ಲಾಗಿತ್ತು. ಈಗ ಟ್ರಸ್ಟ್ ಗೆ 25 ವರ್ಷಗಳು ತುಂಬಿದೆ.
ಬೆಳ್ಳಿಹಬ್ಬದ ಅಂಗವಾಗಿ ಇಂದು ಸಂಜೆ 4.00 ಘಂಟೆಗೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದ್ದು, ಉಡುಪಿಯ ಡಾ.ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ.ಜಿ. ಶಂಕರ್ ಇವರಿಗೆ ದೀನಬಂಧು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ರೂ.1 ಲಕ್ಷ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿ ರುತ್ತದೆ. ರಾಜ್ಯದಲ್ಲಿ ಸಮಾಜಸೇವೆ ಯಲ್ಲಿ ತೊಡಗಿರುವ ಸಮಾಜ ಸೇವಕರೊಬ್ಬರನ್ನು ಆಯ್ಕೆ ಮಾಡುವ ಸಲುವಾಗಿ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಗಳಾದ ಪ್ರೊ.ಎಂ.ವೆಂಕಟೇಶ್ವರಲು ಇವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಆ ಸಮಿತಿಯ ಸದಸ್ಯ ರನ್ನಾಗಿ ಬೆಂಗಳೂರು ವಿಶ್ವವಿದ್ಯಾ ನಿಲಯದ ಕುಲಪತಿಗಳಾದ ಪ್ರೊ.ಬಿ.ರಮೇಶ್, ಕುವೆಂಪು ವಿಶ್ವವಿದ್ಯಾ ಲಯದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಜಿ.ಪ್ರಶಾಂತ ನಾಯಕ್ ಹಾಗೂ ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಪಕರಾದ ಪ್ರೊ.ಪ್ರಭಾಕರ್ ಇವರನ್ನು ನೇಮಿಸಲಾಗಿತ್ತು. ಆ ಸಮಿತಿಯ ಶಿಫಾರಸ್ಸಿನ ಮೇರೆಗೆ ಡಾ.ಜಿ. ಶಂಕರ್ ಇವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸ ಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಮಾಜಿ ಸಭಾಪತಿ ಗಳಾದ ಡಿ.ಎಚ್.ಶಂಕರ ಮೂರ್ತಿ ಯವರನ್ನು, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ರಾದ ಡಾ.ಬೋಜ್ಯಾ ನಾಯಕ್ ಹಾಗೂ ಶಿಕ್ಷಣತಜ್ಞರಾದ ಪ್ರೊ. ಜೆ.ಎಲ್. ಪದ್ಮನಾಭ್ ಇವರನ್ನು ಕೂಡ ಸನ್ಮಾನಿಸಲಾಗುವುದು.
ಈ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲ ನಂದನಾಥ ಮಹಾಸ್ವಾಮೀಜಿಯವರು, ಸಾಣೇಹಳ್ಳಿಯ ಶ್ರೀ ಡಾ.ಪಂಡಿತಾ ರಾಧ್ಯ ಶಿವಾಚಾರ್ಯ ಸ್ವಾಮಿಗಳು, ಆದಿಚುಂಚನ ಗಿರಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ
ಶ್ರೀ ಪ್ರಸನ್ನನಾಥ ಸ್ವಾಮೀಜಿ, ಬಾರ್ಕೂರು ಮಹಾಸಂಸ್ಥಾನದ ಡಾ.ವಿಶ್ವಸಂತೋಷ ಭಾರತಿ ಶ್ರೀ ಪಾದಂಗಳು ಹಾಗೂ ಕೊಪ್ಪದ ಗೌರಿಗದ್ದೆಯ ಸ್ವರ್ಣಪೀಠಿಕಾಪುರ ದತ್ತಾಶ್ರಮದ ಅವಧೂತರಾದ ಶ್ರೀ ವಿನಯ್ ಗುರೂಜಿಯವರು ವಹಿಸಲ್ಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖಾ ಸಚಿವರಾದ ಮಧುಬಂಗಾರಪ್ಪ ನೆರವೇರಿಸಲ್ಲಿದ್ದಾರೆ. ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ, ಶಾಸಕರುಗಳಾದ ಬಿ.ಕೆ. ಸಂಗಮೇಶ್ವರ್, ಗೋಪಾಲಕೃಷ್ಣ ಬೇಳೂರು, ಎಸ್.ಎನ್. ಚನ್ನಬಸಪ್ಪ, ವಿಧಾನಪರಿಷತ್ ಶಾಸಕರುಗಳಾದಡಾ.ಮಂಜುನಾಥ ಭಂಡಾರಿ, ಬಲ್ಕೀಶ್‍ಬಾನು, ಡಾ.ಧನಂಜಯ ಸರ್ಜಿ,  ಡಿ.ಎಸ್. ಅರುಣ್, ಆಯನೂರು ಮಂಜುನಾಥ್, ಸುಧಾಕರ ಎಸ್ ಶೆಟ್ಟಿ, ಸಿ.ಎಸ್. ಚಂದ್ರಭೂಪಾಲ್, ಎಸ್. ರುದ್ರೇಗೌಡರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಾಕ್ಷರಿಯವರು, ಎಂ.ಶ್ರೀಕಾಂತ್, ಆರ್. ಪ್ರಸನ್ನ ಕುಮಾರ್, ಹೆಚ್.ಎನ್. ವಿದ್ಯಾದರ್, ಕೆ.ಮರಿಯಪ್ಪ, ಎಸ್. ಓಂಕಾರಪ್ಪ, ಎನ್. ರಮೇಶ್ ಹಾಗೂ ಎಸ್ ಪಿ ದಿನೇಶ್ ಭಾಗವಹಿಸಲ್ಲಿದ್ದಾರೆ.
ಸರಿಗಮಪ ಗಾಯಕರಿಂದ ಗಾನಸಂಜೆ ಹಾಗೂ ಯಕ್ಷಗಾನ ನಾಟ್ಯ ವೈಭವ:
ಕಾರ್ಯಕ್ರಮವು ನಿಗದಿತ ಸಮಯದಲ್ಲಿ ಸಂಜೆ 4.00 ಘಂಟೆಗೆ ಆರಂಭವಾಗಲ್ಲಿದ್ದು,  ಸರಿಗಮಪ ಖ್ಯಾತಿಯ ಕಾರ್ತಿಕ್ ನಾಗಲಪುರ, ಸವಿಶ್ರೀ ಕುಂದಾಪುರ, ಆಮೀಶ್ ಕುಮಾರ್ ಇನ್ನಿತರ ಗಾಯಕ-ಗಾಯಕಿಯರಿಂದ ಗಾನಸಂಜೆ, 5.00 ಘಂಟೆಗೆ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರಿಂದ ಯಕ್ಷಗಾನ ನೃತ್ಯ ವೈಭವ ಹಾಗೂ ಇನ್ನಿತರ ಸಾಂಸ್ಕøತಿಕ ಕಾರ್ಯಕ್ರಮಗಳು ಇರುತ್ತವೆ.
ಈ ಕಾರ್ಯಕ್ರಮದಲ್ಲಿ ಟ್ರಸ್ಟ್ ಸದಸ್ಯರು ಗಳಾದ  ಡಾ. ಶೇಖರ್, ಡಾ. ಹಸೀನಾ, ಜಿ.ಡಿ. ಮಂಜು ನಾಥ್, ಯು ಶಿವಾನಂದ, ಜಿತೇಂದ್ರ, ಎಂ ಎಂ ಸ್ವಾಮಿ,  ಪ್ರಸನ್ನ, ಎಂ ಸಿದ್ದರಾಮು, ಮಂಜುನಾಥ್ ಇರಲಿದ್ದಾರೆ.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    11 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.