ಶಿವಮೊಗ್ಗ-ಪಿಂಚಣಿ ಅದಾಲತ್ ಶಿವಮೊಗ್ಗ: ಜಿಲ್ಲಾ ಪಂಚಾಯತ್ ನ ಕೊಡಚಾದ್ರಿ ಸಭಾಂಗಣದಲ್ಲಿ ಮಹಾಲೇಖ ಪಾಲರ ಕಛೇರಿ, ಬೆಂಗಳೂರು ಮತ್ತು ಶಿವಮೊಗ್ಗ ಜಿಲ್ಲಾ ಖಜಾನೆ ಇವರ ಸಹಭಾಗಿತ್ವದಲ್ಲಿ ಪಿಂಚಣಿ ಅದಾಲತ್ ಯಶಸ್ವಿಯಾಗಿ ನಡೆಸಲಾಯಿತು. ಕಾರ್ಯಕ್ರಮದ ಮುಖ್ಯ ಉದ್ದೇಶವು ನಿವೃತ್ತ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ಎದುರಿಸಿತ್ತಿರುವ ಪಿಂಚಣಿ ಸಂಬಂಧಿತ ಸಮಸ್ಯೆಗಳು, ಬಾಕಿ ಪಿಂಚಣಿ, ಪರಿಷ್ಕರಣೆ, ಕುಟುಂಬ ಪಿಂಚಣಿ ಸೌಲಭ್ಯಗಳು ಹಾಗೂ ಇತರೆ ಕುಂದುಕೊರತೆಗಳನ್ನು ಆಲಿಸಿ, ಸಾಧ್ಯವಾದಷ್ಟು ಪರಿಹರಿಸುವುದಾಗಿತ್ತು. ಅದಾಲತ್‌ನಲ್ಲಿ ಪಿಂಚಣಿದಾರರು ತಮ್ಮ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳ ಗಮನಕ್ಕೆ ತಂದರು. ವಿವಿಧ ಇಲಾಖೆಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ, ಅಗತ್ಯ ದಾಖಲೆ ಗಳು ಮತ್ತು ನಿಯಮಾವಳಿಗಳ ಆಧಾರದ ಮೇಲೆ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಂಡರು. ಕೆಲವು ಪ್ರಕರಣಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗಿದ್ದು, ಇನ್ನುಳಿದ ಪ್ರಕರಣಗಳನ್ನು ಸಂಬಂಧಿಸಿದ ಕಚೇರಿಗಳಿಗೆ ಕಳುಹಿಸಿ ನಿಗದಿತ ಅವಧಿ ಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. ಪಿಂಚಣಿದಾರರಿಗೆ ಪಿಂಚಣಿ ಸಂಬಂಧಿತ ವಿಷಯಗಳಲ್ಲಿ ಅಗತ್ಯ ಮಾರ್ಗದರ್ಶನ ನೀಡುವುದರ ಜೊತೆಗೆ, ದಾಖಲೆಗಳ ನಿರ್ವಹಣೆ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಬಾಕಿ ಇರುವ ಪ್ರಕರಣಗಳ ಕುರಿತು ಮಾಹಿತಿ ನೀಡಲಾಯಿತು. ಬೆಂಗಳೂರು ಮಹಾಲೇಖಪಾಲರು (ಎ & ಇ) ರಾಜೀವ್ ಕುಮಾರ್ ಸಿಂಗ್ ಇವರು ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಉಪಮಹಾಲೇಖಪಾಲರಾದ ಸಚಿನ್ ಕೃಷ್ಣ ಕೌಶಿಕ್, ಎ ಜಿ ಕಛೇರಿಯ ನಾಗಸೇನಾ ಟಿ.ವಿ, ಹಾಜರಿದ್ದರು. ಜಿಲ್ಲಾ ಖಜಾನೆ ಉಪನಿರ್ದೇಶಕಿ ಸಾವಿತ್ರಿ ಹೆಚ್ ಎಸ್ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿ ಪಂ ಮುಖ್ಯಲೆಕ್ಕಾಧಿಕಾರಿ ಶ್ರೀಕಾಂತ್ ಉಪಸ್ಥಿತರಿದ್ದರು. ಪಿಂಚಣಿದಾರರು, ಡಿಡಿಓಗಳು, ಸಿಬ್ಬಂದಿಗಳು, ಖಜಾನೆ ಸಿಬ್ಬಂದಿಗಳು, ನಿವೃತ್ತರ ಸಂಘದ ಪದಾಧಿಕಾರಿಗಳು, ಬ್ಯಾಂಕ್ ವ್ಯವಸ್ಥಾಪಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಖಜಾನೆಯ ಅಧಿಕಾರಿ ಅನಿತಾ ಕೆ.ಎಂ. ಸ್ವಾಗತಿಸಿದರು, ಲಕ್ಷ್ಮೀಶ್ ಕಾರ್ಯಕ್ರಮ ನಿರೂಪಿಸಿದರು.

- ಈದ್ ಮಿಲಾದ್‌ಗೆ ಶಿವಮೊಗ್ಗ ಸಜ್ಜು: ಹಸಿರು ಬಾವುಟಗಳಿಂದ ಕಂಗೊಳಿಸಿದ ನಗರ ಪ್ರವಾದಿ ಮೊಹಮ್ಮದ್ ಜನ್ಮದಿನಾಚರಣೆಗೆ ಶಿವಮೊಗ್ಗದಲ್ಲಿ ಭರ್ಜರಿ ಸಿದ್ಧತೆ1
- ಶಿವಮೊಗ್ಗ-ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ರತ್ನಕುಮಾರಿಗೆ ಅಭಿನಂದನೆಗಳ ಮಹಾಪುರ ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕು ಹುಂಚ ಹೋಬಳಿಯ ಸಮಟಗಾರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರತ್ನಕುಮಾರಿ ಅವರಿಗೆ 2026ನೇ ಸಾಲಿನ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ, ಹೊಸನಗರದ ರಾಜರತ್ನ ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು. ಅಭಿಮಾನಿ ಬಳಗದವರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಸಮಟಗಾರು ಶಾಲೆಗೆ ತೆರಳಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ರತ್ನಕುಮಾರಿ ಅವರನ್ನು ಅವರ ಸಹೋದ್ಯೋಗಿಗಳು ಹಾಗೂ ಶಾಲೆಯ ಮಕ್ಕಳ ಸಮ್ಮುಖದಲ್ಲಿ ಸನ್ಮಾನಿಸಿ ಅಭಿನಂದಿಸಿದರು. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿರುವ ರತ್ನಕುಮಾರಿ ಅವರ ಸೇವೆ, ಕರ್ತವ್ಯನಿಷ್ಠೆ ಹಾಗೂ ದೂರದೃಷ್ಟಿಯನ್ನು ಗಣ್ಯರು ಶ್ಲಾಘಿಸಿದರು. ದೇಶದ 48 ಉತ್ತಮ ಶಿಕ್ಷಕರಲ್ಲಿ ಒಬ್ಬರಾಗಿ ಆಯ್ಕೆಯಾಗಿರುವುದು ಶಿವಮೊಗ್ಗ ಜಿಲ್ಲೆ ಹಾಗೂ ಹೊಸನಗರ ತಾಲೂಕಿಗೆ ಹೆಮ್ಮೆಯ ಸಂಗತಿ ಎಂದು ಅಭಿನಂದನಾ ಸಮಾರಂಭ ದಲ್ಲಿ ಮೆಚ್ಚುಗೆ ವ್ಯಕ್ತವಾಯಿತು.1
- ಚಳ್ಳಕೆರೆ ತಾಲೂಕು ಕಚೇರಿಯಲ್ಲಿ ಶಿರಸ್ತೆದಾರ್ ಸದಾಶಿವಪ್ಪ ಅವರಿಗೆ ಬೀಳ್ಕೊಡುಗೆ ಚಳ್ಳಕೆರೆ ನಗರದ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿರಸ್ತೆದಾರ್ ಸದಾಶಿವಪ್ಪ ಅವರು ಹೊಳಲ್ಕೆರೆ ತಾಲೂಕು ಕಚೇರಿಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ, ತಾಲೂಕು ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ತಹಶೀಲ್ದಾರ್ ರೇಹಾನ್ ಪಾಷ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಸದಾಶಿವಪ್ಪ ಅವರನ್ನು ಸನ್ಮಾನಿಸಿ ಗೌರವದಿಂದ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ವರ್ಗಾವಣೆಗೊಂಡ ಶಿರಸ್ತೆದಾರ್ ಸದಾಶಿವಪ್ಪ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಮಾತನಾಡಿ, ಸದಾಶಿವಪ್ಪ ಅವರ ಸೇವಾ ಅವಧಿಯ ಕರ್ತವ್ಯನಿಷ್ಠೆ ಹಾಗೂ ಸಹಕಾರವನ್ನು ಸ್ಮರಿಸಿದರು. ಸಹೋದ್ಯೋಗಿಗಳು ಶುಭ ಹಾರೈಸಿ, ಹೊಳಲ್ಕೆರೆ ತಾಲೂಕು ಕಚೇರಿಯಲ್ಲಿಯೂ ಉತ್ತಮ ಸೇವೆ ಸಲ್ಲಿಸುವಂತೆ ಹಾರೈಸಿದರು.4
- ಚಿತ್ರದುರ್ಗದ ಪ್ರವಾದಿ ಮಹಮ್ಮದ್ ರವರ 1500ನೇ ಜನ್ಮದಿನದ ಆಚರಣೆ ಹಿನ್ನೆಲೆ 12 ದಿನಗಳ ಕಾಲ ಸೀರತ್ ಅಭಿಯಾನದ ಅಂಗವಾಗಿ ಕ್ರಾಂತಿಯ ಜ್ಯೋತಿ ಕಾರ್ಯಕ್ರಮ ಚಿತ್ರದುರ್ಗದ ಪ್ರವಾದಿ ಮಹಮ್ಮದ್ ರವರ 1500ನೇ ಜನ್ಮದಿನದ ಆಚರಣೆ ಕುರಿತು ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಇನ್ನೂ ಈ ವೇಳೆ ಜಮಾತೆ ಇಸ್ಲಾಮೀ ಹಿಂದ್‌ನ ಸಂಚಾಲಕರಾದ ಷಫೀವುಲ್ಲಾ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದು ಪ್ರವಾದಿ ಮಹಮ್ಮದ್ ರವರ 1500ನೇ ಜನ್ಮದಿನದ ಅಂಗವಾಗಿ ಆಗಸ್ಟ್-26 ರಿಂದ ಸೆಪ್ಟೆಂಬರ್-06 ರವರೆಗೆ 12 ದಿನಗಳ ಕಾಲ ಸೀರತ್ ಅಭಿಯಾನದ ಅಂಗವಾಗಿ ಕ್ರಾಂತಿಯ ಜ್ಯೋತಿ ಕಾರ್ಯಕ್ರಮವನ್ನು ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಷಫೀವುಲ್ಲಾ ತಿಳಿಸಿದ್ದಾರೆ. ಈ ಅಭಿಯಾನದಲ್ಲಿ ಪ್ರವಾದಿ ಮಹಮ್ಮದ್ ಜನತೆಗೆ ನೀಡಿದಂತಹ ವಿವಿಧ ನೀತಿಯ ಸಂದೇಶಗಳನ್ನು ಜನತೆಗೆ ಮುಟ್ಟಿಸುವುದು ಅಲ್ಲದೇ ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ಕಾರ್ಯವನ್ನು ಮಾಡಲಾಗುವುದು.ಪ್ರವಾದಿ ಮಹಮ್ಮದ್ ರವರು ಕೇವಲ ರಾಜಕೀಯವಾಗಿ ಇರದೇ ಆಧ್ಯಾತ್ಮಿಕ, ಬೌದ್ಧಿಕ, ನೈತಿಕ, ಸಾಮಾಜಿಕ, ಆರ್ಥಿಕ ಕ್ರಾಂತಿಯಾಗಿದ್ದರು. ಇದೊಂದು ಅಪ್ಪಟ ಮಾನವೀಯ ಕ್ರಾಂತಿಯಾಗಿದೆ.ಅವರ ಸಂದೇಶಗಳನ್ನು ನಮ್ಮ ಜೀವನದಲ್ಲಿ ಸಾಧ್ಯವಾದಷ್ಟು ಅಳವಡಿಕೆ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕಿದೆ... ಈ ವಿಷಯವನ್ನು ಸಮುದಾಯಕ್ಕೆ ತಿಳಿಸಲು 06 ಜನರ ಸಮಿತಿ ಒಂದನ್ನು ರಚನೆ ಮಾಡಿ ಪ್ರತಿ ತಾಲ್ಲೂಕು, ಗ್ರಾಮ, ಹೋಬಳಿಗಳಿಗೆ ಹೋಗುವುದರ ಮೂಲಕ ಅಲ್ಲಿನ ಜನತೆಗೆ ತಿಳಿಸುವ ಕೆಲಸ ಮಾಡಲಾಗುವುದು ಎಂದರು. ಗೋಷ್ಟಿಯಲ್ಲಿಜುಬೇದಾಅನ್ಸರಿರಹಮತ್‌ವುಲ್ಲಾ,ಸಿರಾಜ್‌ವು ದ್ದೀನ್,ಮುಸ್ತಾಕ್‌ಅಹಮದ್ ಭಾಗವಹಿಸಿದ್ದರು1
- ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪೋಲೀಸ್ ಪಥಸಂಚಲನ. ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ನಗರದಲ್ಲಿ ಡಿವೈಎಸ್ ಪಿ ಸತ್ಯನಾರಾಯಣ ರಾವ್ ಇವರ ನೇತೃತ್ವದಲ್ಲಿ ಪೊಲೀಸರು ಪರೇಡ್ ಹಾಗೂ ಪಥಸಂಚಲನ ನಡೆಸಲಾಯಿತು.. ನಗರದ ಪೋಲೀಸ್ ಠಾಣೆಯಿಂದ ಹೊರಟ ಪೋಲೀಸ್ ಪಥ ಸಂಚಲನ ಅಂಬೇಡ್ಕರ್ ಸರ್ಕಲ್, ನೆಹರು ವೃತ್ತ, ದಿಂದ ಬಳ್ಖಾರಿ ಮುಖ್ಯರಸ್ತೆಯಿಂದ ಪಾವಗಡ ರಸ್ತೆ,ಮಹದೇವಿ ರಸ್ತೆ ಹಿರಿಯೂರು ಚಿತ್ರದುರ್ಗ ಮುಖ್ಯ ರಸ್ತೆಗೆ ತಲುಪಿ ಮತ್ತೆ ಸಂಗೊಳ್ಳಿ ರಾಯಣ್ಣ ರಸ್ತೆಯಿಂದ ಗಾಂಧಿ ನಗರದ ಮುಖ್ಯ ರಸ್ತೆಯಿಂದ ಸೋಮುಗುದ್ದು ರಸ್ತೆಯವರಗೆ ಸಂಚರಿಸಿ ನಂತರ ಪೊಲೀಸ್ ಠಾಣೆವರ್ಗೂ ಪಥ ಸಂಚಲನ ನಡೆಸಲಾಯಿತು.ಈ ಸಂದರ್ಭದಲ್ಲಿ ಡಿವೈಎಸ್ ಪಿ ಎಂಜೆ.ಸತ್ಯನಾರಾಯಣ ರಾವ್.ಪೋಲೀಸ್ ಇನ್ಸ್ಪೆಕ್ಟರ್ ಕೆ.ಕುಮಾರ್ ಪಿಎಸ್ಐ ಶಿವರಾಜ್ ಹಾಗೂ ಕೆ.ಎಸ್ ಆರ್ ಪಿ ತುಕ್ಕಡ್ಡಿ,.ಪೋಲೀಸ್ ಸಿಬ್ಬಂದಿಗಳು ಮತ್ತು ಹೊಂಗಾಡ್ಸ ಗಳು ಪಥಸಂಚಲ ಇದ್ದರು1
- ಹಾನಗಲ್...ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ ಆರೋಪ. ಚಿಕಿತ್ಸೆ ವಿಳಂಬದಿಂದ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರ ಆರೋಪ ಆಸ್ಪತ್ರೆ ಎದುರು ಪ್ರತಿಭಟನೆ ಮಂಗಳವಾರ ಪಟ್ಟಣದ ತಾಲೂಕು ಆಸ್ಪತ್ರೆಯ ಎದುರು ಮಗುವಿನ ಶವವಿಟ್ಟು ಪ್ರತಿಭಟಿಸಿದ ಕುಟುಂಬಸ್ಥರು. ಸ್ಥಳಕ್ಕೆ ಮೆಲ್ಮಟ್ಟದ ಅಧಿಕಾರಿಗಳು ಸ್ಥಳಕ್ಕೆ1
- ಹಿರಿಯೂರು ತಾಲ್ಲೂಕು ಆಸ್ಪತ್ರೆಯಲ್ಲಿ ಮೊಬೈಲ್ ಕಳವು: ಸಿಸಿಟಿವಿಯಲ್ಲಿ ದೃಶ್ಯ ಸೆರೆ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಸಂಬಂಧಿಕರ ಮೊಬೈಲ್ ಫೋನನ್ನು ಕಳ್ಳನೊಬ್ಬ ಎಗರಿಸಿ ಪರಾರಿಯಾದ ಘಟನೆ ಹಿರಿಯೂರು ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಚಿಕಿತ್ಸೆಗೆಂದು ರೋಗಿಯೊಬ್ಬರು ದಾಖಲಾಗಿದ್ರು. ರೋಗಿಯ ಸಂಬಂಧಿಗಳು ರಾತ್ರಿ ವೇಳೆ ನಿದ್ರೆಗೆ ಜಾರಿದ್ದ ವೇಳೆ ಖದೀಮ ತನ್ನ ಕೈಚಳಕ ತೋರಿದ್ದು, ಮೆಲ್ಲನೇ ಮೊಬೈಲ್ ಫೋನನ್ನ ಎತ್ತಿಕೊಂಡು ಪರಾರಿಯಾಗಿದ್ದಾನೆ. ಇನ್ನು ಕಳ್ಳನ ಖರಾಮತ್ತು ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಿರಿಯೂರು ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಎಷ್ಟು ಸುರಕ್ಷಿತ ಎನ್ನುವ ಚರ್ಚೆಗಳು ಪ್ರಾರಂಬವಾಗಿದ್ದು, ಸಧ್ಯ ಕಳ್ಳತನ ಘಟನೆಗಳಿಗೆ ಬ್ರೇಕ್ ಹಾಕುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಫ್ಲೋ......1
- ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ತಡರಾತ್ರಿ ರೋಗಿಯೊಬ್ಬರ ಜೇಬಿನಲ್ಲಿದ್ದ ಮೊಬೈಲ್ ಫೋನ್ ಅನ್ನ ಕಳ್ಳನೊಬ್ಬ ಕಳ್ಳತನ ಮಾಡಿದ್ದು ಸಿಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿದೆ ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ತಡರಾತ್ರಿ ರೋಗಿಯೊಬ್ಬರ ಜೇಬಿನಲ್ಲಿದ್ದ ಮೊಬೈಲ್ ಫೋನ್ ಅನ್ನ ಕಳ್ಳನೊಬ್ಬ ಕಳ್ಳತನ ಮಾಡಿದ್ದು ಸಿಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಇನ್ನೂ ಕಳೆದ ಮೂರು ದಿನಗಳ ಹಿಂದೆ ಚಿಕಿತ್ಸೆಗೆಂದು ರೋಗಿಯೊಬ್ಬರು ಧಾಖಲಾಗಿದ್ದು ಈ ವೇಳೆ ರೋಗಿಯ ಸಂಬಂದಿಕರೊಬ್ಬರು ನೆನ್ನೆ ತಡರಾತ್ರಿ ನಿದ್ರೆಗೆ ಜಾರಿದ್ದು ಈ ವೇಳೆ ಕಳ್ಳನೊಬ್ಬ ಆಸ್ಪತ್ರೆ ವಾರ್ಡ್ ಗೆ ಬಂದಿದ್ದು ಮಲಗಿದ್ದ ರೋಗಿಯ ಸಂಬಂದಿ ಕದುರಪ್ಪ ಎಂಬುವವರ ಜೇಬಿನಲ್ಲಿದ್ದ ಮೊಬೈಲ್ ಫೋನ್ ಅನ್ನ ಕದ್ದು ಪರಾರಿಯಾಗಿದ್ದು ಈ ಒಂದು ದೃಶ್ಯಗಳು ಆಸ್ಪತ್ರೆಯಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಹಾಗೂ ಸಂಬಂದಿಕರು ಎಷ್ಟು ಸೇಫ್ ಎಂಬುದು ಸಾರ್ವಜನಿಕರಲ್ಲಿ ಪ್ರಷ್ನೆ ಮೂಡಿಸಿದೆ. ಇನ್ನೂ ಈ ಸಂಬಂದ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಖರಣ ಧಾಖಲಾಗಿದ್ದು ಪೊಲೀಸರು ಕಳ್ಳನ ಪತ್ತೆಗಾಗಿ ಬಲೆ ಬೀಸಿದ್ದಾರೆ.1