logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಚಳ್ಳಕೆರೆ ತಾಲೂಕು ಕಚೇರಿಯಲ್ಲಿ ಶಿರಸ್ತೆದಾರ್ ಸದಾಶಿವಪ್ಪ ಅವರಿಗೆ ಬೀಳ್ಕೊಡುಗೆ ಚಳ್ಳಕೆರೆ ನಗರದ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿರಸ್ತೆದಾರ್ ಸದಾಶಿವಪ್ಪ ಅವರು ಹೊಳಲ್ಕೆರೆ ತಾಲೂಕು ಕಚೇರಿಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ, ತಾಲೂಕು ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ತಹಶೀಲ್ದಾರ್ ರೇಹಾನ್ ಪಾಷ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಸದಾಶಿವಪ್ಪ ಅವರನ್ನು ಸನ್ಮಾನಿಸಿ ಗೌರವದಿಂದ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ವರ್ಗಾವಣೆಗೊಂಡ ಶಿರಸ್ತೆದಾರ್ ಸದಾಶಿವಪ್ಪ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಮಾತನಾಡಿ, ಸದಾಶಿವಪ್ಪ ಅವರ ಸೇವಾ ಅವಧಿಯ ಕರ್ತವ್ಯನಿಷ್ಠೆ ಹಾಗೂ ಸಹಕಾರವನ್ನು ಸ್ಮರಿಸಿದರು. ಸಹೋದ್ಯೋಗಿಗಳು ಶುಭ ಹಾರೈಸಿ, ಹೊಳಲ್ಕೆರೆ ತಾಲೂಕು ಕಚೇರಿಯಲ್ಲಿಯೂ ಉತ್ತಮ ಸೇವೆ ಸಲ್ಲಿಸುವಂತೆ ಹಾರೈಸಿದರು.

1 day ago
user_ಗೋಪನಹಳ್ಳಿಶಿವಣ್ಣ
ಗೋಪನಹಳ್ಳಿಶಿವಣ್ಣ
Local News Reporter ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
1 day ago

ಚಳ್ಳಕೆರೆ ತಾಲೂಕು ಕಚೇರಿಯಲ್ಲಿ ಶಿರಸ್ತೆದಾರ್ ಸದಾಶಿವಪ್ಪ ಅವರಿಗೆ ಬೀಳ್ಕೊಡುಗೆ ಚಳ್ಳಕೆರೆ ನಗರದ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿರಸ್ತೆದಾರ್ ಸದಾಶಿವಪ್ಪ ಅವರು ಹೊಳಲ್ಕೆರೆ ತಾಲೂಕು ಕಚೇರಿಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ, ತಾಲೂಕು ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ತಹಶೀಲ್ದಾರ್ ರೇಹಾನ್ ಪಾಷ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಸದಾಶಿವಪ್ಪ ಅವರನ್ನು ಸನ್ಮಾನಿಸಿ ಗೌರವದಿಂದ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ವರ್ಗಾವಣೆಗೊಂಡ ಶಿರಸ್ತೆದಾರ್ ಸದಾಶಿವಪ್ಪ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಮಾತನಾಡಿ, ಸದಾಶಿವಪ್ಪ ಅವರ ಸೇವಾ ಅವಧಿಯ ಕರ್ತವ್ಯನಿಷ್ಠೆ ಹಾಗೂ ಸಹಕಾರವನ್ನು ಸ್ಮರಿಸಿದರು. ಸಹೋದ್ಯೋಗಿಗಳು ಶುಭ ಹಾರೈಸಿ, ಹೊಳಲ್ಕೆರೆ ತಾಲೂಕು ಕಚೇರಿಯಲ್ಲಿಯೂ ಉತ್ತಮ ಸೇವೆ ಸಲ್ಲಿಸುವಂತೆ ಹಾರೈಸಿದರು.

More news from ಕರ್ನಾಟಕ and nearby areas
  • ಕೋಟೆ ನಾಡು ಚಿತ್ರದುರ್ಗದಲ್ಲಿ ರಾಕಿಂಗ್ ಸ್ಟಾರ್ ಯಶು ಅಭಿಮಾನಿಗಳ ಸಂಭ್ರಮ
    1
    ಕೋಟೆ ನಾಡು ಚಿತ್ರದುರ್ಗದಲ್ಲಿ ರಾಕಿಂಗ್ ಸ್ಟಾರ್ ಯಶು ಅಭಿಮಾನಿಗಳ ಸಂಭ್ರಮ
    user_Suresh Belagere
    Suresh Belagere
    Photographer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    6 hrs ago
  • ಗುಟ್ಕಾ ನಿಷೇಧ ತಡೆಯಲು ಚನ್ನಗಿರಿ ಯಿಂದ ದಾವಣಗೆರೆ ಗೆ ದಿನಾಂಕ 26/8/2026 ರಿಂದ 28/8/2026 ರಾ ವರೆಗೆ ಬೃಹತ್ ಪಾದ ಯಾತ್ರೆ ಮಾಡುತ್ತಿರುವ ಮಾಡಳ್ ಮಲ್ಲಿಕಾರ್ಜುನ ರವರು ಮತ್ತು ರೈತರು
    1
    ಗುಟ್ಕಾ ನಿಷೇಧ ತಡೆಯಲು ಚನ್ನಗಿರಿ ಯಿಂದ ದಾವಣಗೆರೆ ಗೆ ದಿನಾಂಕ 26/8/2026 ರಿಂದ 28/8/2026 ರಾ ವರೆಗೆ ಬೃಹತ್ ಪಾದ ಯಾತ್ರೆ ಮಾಡುತ್ತಿರುವ ಮಾಡಳ್ ಮಲ್ಲಿಕಾರ್ಜುನ ರವರು ಮತ್ತು ರೈತರು
    user_ಸುರೇಶ್ ಕೆ ಆರ್
    ಸುರೇಶ್ ಕೆ ಆರ್
    Farmer ಚನ್ನಗಿರಿ, ದಾವಣಗೆರೆ, ಕರ್ನಾಟಕ•
    12 hrs ago
  • *ಕೂಡ್ಲಿಗಿ : SFI ಸಮಾವೇಶ - ಸಮಘ್ರ ಶೈಕ್ಷಣಿಕ ಪ್ರಗತಿಗೆ ಎಲ್ಲರೂ ಪ್ರಯತ್ನಿಸೋಣ - ಗುನ್ನಳ್ಳಿ ರಾಘವೇಂದ್ರ ಕರೆ- *ಕೂಡ್ಲಿಗಿ : SFI ಸಮಾವೇಶ - ಸಮಘ್ರ ಶೈಕ್ಷಣಿಕ ಪ್ರಗತಿಗೆ ಎಲ್ಲರೂ ಪ್ರಯತ್ನಿಸೋಣ - ಗುನ್ನಳ್ಳಿ ರಾಘವೇಂದ್ರ ಕರೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಕ್ಷೇತ್ರದ ಸಮಘ್ರ ಶೈಕ್ಷಣಿಕ ಅಭಿವೃದ್ಧಿಗಾಗಿ , ಎಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನಿಸೋಣ ಎಂದು ಮುಖಂಡ ಗುನ್ನಳ್ಳಿ ರಾಘವೇಂದ್ರ ಕರೆನೀಡಿದರು. ಅವರು ಆ 27ರಂದು ಪಟ್ಟಣದ ಪಟ್ಟಣದ ಪ್ರವಾಸಿ ಮಂದಿರದಲ್ಲಿ , ಭಾರತ ವಿದ್ಯಾರ್ಥಿ ಪೆಡರೇಷನ್ ವತಿಯಿಂದ ಜರುಗಿದ ತಾಲೂಕು ಸಮಾವೇಶದಲ್ಲಿ ಮಾತನಾಡಿದರು. ವೇದಿಕೆಯಲ್ಲಿ ಎಸ್ಎಫ್ಐ ರಾಜ್ಯ ಉಪದಾಧ್ಯಕ್ಷರಾದ ಬಸವರಾಜ ಗುಳೆದಾಳ್ ಮುಖಂಡರಾದ ಆನಂದರಾಜ್ , ಜಿಲ್ಲಾ ಮುಖಂಡರಾದ ಸುಷ್ಮಿತ ಪವನಕುಮಾರ್ , ಪತ್ರಕರ್ತರಾರ ಭೀಮಣ್ಣ ಗಜಾಪುರ , ರಾಜ್ಯ ಉಪದಾಧ್ಯಕ್ಷರಾದ ಬಸವರಾಜ ಗುಳೆದಾಳ್ ಆನಂದರಾಜ್ , ಸುಸ್ಮಿತ ಸಮಾಜ ಸೇವಕ ಅಬ್ದುಲ್ ರಹೆಮ‍ಾನ್ , ತಾಲೂಕಾಧ್ಯಕ್ಷರಾದ ಟಿ. ಭಾಗ್ಯಮ್ಮ , ಭೀಮಣ್ಣ ಗಜಾಪುರ , ಬಿಟಿಗುದ್ದಿ ಚಂದ್ರು ವೇದಿಕೆಯಲ್ಲಿದ್ದರು. ಜಿಲ್ಲಾ ಕಾರ್ಯದರ್ಶಿ ಶಿವರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ✍ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    4
    *ಕೂಡ್ಲಿಗಿ : SFI ಸಮಾವೇಶ - ಸಮಘ್ರ ಶೈಕ್ಷಣಿಕ ಪ್ರಗತಿಗೆ ಎಲ್ಲರೂ ಪ್ರಯತ್ನಿಸೋಣ - ಗುನ್ನಳ್ಳಿ ರಾಘವೇಂದ್ರ ಕರೆ-
*ಕೂಡ್ಲಿಗಿ : SFI ಸಮಾವೇಶ - ಸಮಘ್ರ ಶೈಕ್ಷಣಿಕ ಪ್ರಗತಿಗೆ ಎಲ್ಲರೂ ಪ್ರಯತ್ನಿಸೋಣ - ಗುನ್ನಳ್ಳಿ ರಾಘವೇಂದ್ರ ಕರೆ*-ವಿಜಯನಗರ ಜಿಲ್ಲೆ  ಕೂಡ್ಲಿಗಿ : ಕ್ಷೇತ್ರದ ಸಮಘ್ರ ಶೈಕ್ಷಣಿಕ ಅಭಿವೃದ್ಧಿಗಾಗಿ , ಎಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನಿಸೋಣ ಎಂದು ಮುಖಂಡ ಗುನ್ನಳ್ಳಿ ರಾಘವೇಂದ್ರ ಕರೆನೀಡಿದರು. ಅವರು ಆ 27ರಂದು ಪಟ್ಟಣದ ಪಟ್ಟಣದ ಪ್ರವಾಸಿ ಮಂದಿರದಲ್ಲಿ , ಭಾರತ ವಿದ್ಯಾರ್ಥಿ ಪೆಡರೇಷನ್ ವತಿಯಿಂದ ಜರುಗಿದ ತಾಲೂಕು ಸಮಾವೇಶದಲ್ಲಿ ಮಾತನಾಡಿದರು. ವೇದಿಕೆಯಲ್ಲಿ ಎಸ್ಎಫ್ಐ  ರಾಜ್ಯ ಉಪದಾಧ್ಯಕ್ಷರಾದ ಬಸವರಾಜ ಗುಳೆದಾಳ್ ಮುಖಂಡರಾದ ಆನಂದರಾಜ್ , ಜಿಲ್ಲಾ ಮುಖಂಡರಾದ ಸುಷ್ಮಿತ ಪವನಕುಮಾರ್ , ಪತ್ರಕರ್ತರಾರ ಭೀಮಣ್ಣ ಗಜಾಪುರ , ರಾಜ್ಯ ಉಪದಾಧ್ಯಕ್ಷರಾದ ಬಸವರಾಜ ಗುಳೆದಾಳ್  ಆನಂದರಾಜ್ , ಸುಸ್ಮಿತ  
ಸಮಾಜ ಸೇವಕ ಅಬ್ದುಲ್ ರಹೆಮ‍ಾನ್ , ತಾಲೂಕಾಧ್ಯಕ್ಷರಾದ ಟಿ. ಭಾಗ್ಯಮ್ಮ , ಭೀಮಣ್ಣ ಗಜಾಪುರ , ಬಿಟಿಗುದ್ದಿ ಚಂದ್ರು  ವೇದಿಕೆಯಲ್ಲಿದ್ದರು. ಜಿಲ್ಲಾ ಕಾರ್ಯದರ್ಶಿ ಶಿವರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ✍ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    6 hrs ago
  • ಕಳಪೆ ಸಿಸಿ ರಸ್ತೆ ಕಾಮಗಾರಿ ತಡೆಗೆ ಆಗ್ರಹಿಸಿ ರೈತ ಸಂಘದಿಂದ ಕೆ.ಆರ್.ಐ.ಡಿ ಎಲ್ ಅಧಿಕಾರಿಗೆ ಮನವಿ ಕೂಡ್ಲಿಗಿ: ತಾಲೂಕಿನ ಈಚಲಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟದ ಆರೋಪ ಕೇಳಿಬಂದಿದ್ದು, ಕಾಮಗಾರಿ ತಡೆದು ಗುಣಮಟ್ಟ ಪರಿಶೀಲನೆ ಹಾಗೂ ಸಮಗ್ರ ತನಿಖೆ ನಡೆಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಕೂಡ್ಲಿಗಿ ತಾಲೂಕು ಹಾಗೂ ಜಿಲ್ಲಾ ಘಟಕದ ವತಿಯಿಂದ ಕೆ.ಆರ್.ಐ.ಡಿ.ಎಲ್ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು. ಗ್ರಾಮದಲ್ಲಿ ಹಳೆಯ ರಸ್ತೆಯ ಮೇಲೆಯೇ ಹೊಸ ಸಿಸಿ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ರೈತ ಸಂಘದ ಪದಾಧಿಕಾರಿಗಳು ಆರೋಪಿಸಿದರು. ಕಾಮಗಾರಿಯಲ್ಲಿ ನಿಯಮಾನುಸಾರ ಗುಣಮಟ್ಟದ ಸಾಮಗ್ರಿಗಳನ್ನು ಬಳಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು ಹಾಗೂ ಕಾಮಗಾರಿಯ ಸಂಪೂರ್ಣ ಗುಣಮಟ್ಟ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು. ಕಾಮಗಾರಿಯಲ್ಲಿ ಕಳಪೆ ಗುಣಮಟ್ಟ ಅಥವಾ ಯಾವುದೇ ಅಕ್ರಮ ಕಂಡುಬಂದಲ್ಲಿ, ಸಂಬಂಧಿಸಿದ ಗುತ್ತಿಗೆದಾರರು ಹಾಗೂ ಕಾಮಗಾರಿಗೆ ಹೊಣೆಗಾರ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಅಲ್ಲದೆ, ಕಾಮಗಾರಿಗೆ ಸಂಬಂಧಿಸಿದ ದಾಖಲೆಗಳು, ಅಂದಾಜು, ಬಳಸಲಾಗುತ್ತಿರುವ ಸಾಮಗ್ರಿಗಳ ಗುಣಮಟ್ಟ ಹಾಗೂ ಸ್ಥಳದಲ್ಲಿನ ಕಾಮಗಾರಿಯನ್ನು ಪರಿಶೀಲಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ಮುಖಂಡರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕೂಡ್ಲಿಗಿ ತಾಲೂಕು ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
    1
    ಕಳಪೆ ಸಿಸಿ ರಸ್ತೆ ಕಾಮಗಾರಿ ತಡೆಗೆ ಆಗ್ರಹಿಸಿ ರೈತ ಸಂಘದಿಂದ ಕೆ.ಆರ್.ಐ.ಡಿ ಎಲ್ ಅಧಿಕಾರಿಗೆ ಮನವಿ

ಕೂಡ್ಲಿಗಿ: ತಾಲೂಕಿನ ಈಚಲಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟದ ಆರೋಪ ಕೇಳಿಬಂದಿದ್ದು, ಕಾಮಗಾರಿ ತಡೆದು ಗುಣಮಟ್ಟ ಪರಿಶೀಲನೆ ಹಾಗೂ ಸಮಗ್ರ ತನಿಖೆ ನಡೆಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಕೂಡ್ಲಿಗಿ ತಾಲೂಕು ಹಾಗೂ ಜಿಲ್ಲಾ ಘಟಕದ ವತಿಯಿಂದ ಕೆ.ಆರ್.ಐ.ಡಿ.ಎಲ್ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು. ಗ್ರಾಮದಲ್ಲಿ ಹಳೆಯ ರಸ್ತೆಯ ಮೇಲೆಯೇ ಹೊಸ ಸಿಸಿ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ರೈತ ಸಂಘದ ಪದಾಧಿಕಾರಿಗಳು ಆರೋಪಿಸಿದರು. ಕಾಮಗಾರಿಯಲ್ಲಿ ನಿಯಮಾನುಸಾರ ಗುಣಮಟ್ಟದ ಸಾಮಗ್ರಿಗಳನ್ನು ಬಳಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು ಹಾಗೂ ಕಾಮಗಾರಿಯ ಸಂಪೂರ್ಣ ಗುಣಮಟ್ಟ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು. ಕಾಮಗಾರಿಯಲ್ಲಿ ಕಳಪೆ ಗುಣಮಟ್ಟ ಅಥವಾ ಯಾವುದೇ ಅಕ್ರಮ ಕಂಡುಬಂದಲ್ಲಿ, ಸಂಬಂಧಿಸಿದ ಗುತ್ತಿಗೆದಾರರು ಹಾಗೂ ಕಾಮಗಾರಿಗೆ ಹೊಣೆಗಾರ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಅಲ್ಲದೆ, ಕಾಮಗಾರಿಗೆ ಸಂಬಂಧಿಸಿದ ದಾಖಲೆಗಳು, ಅಂದಾಜು, ಬಳಸಲಾಗುತ್ತಿರುವ ಸಾಮಗ್ರಿಗಳ ಗುಣಮಟ್ಟ ಹಾಗೂ ಸ್ಥಳದಲ್ಲಿನ ಕಾಮಗಾರಿಯನ್ನು ಪರಿಶೀಲಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ಮುಖಂಡರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕೂಡ್ಲಿಗಿ ತಾಲೂಕು ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
    user_ಹೂಡೇಂ ಮಂಜುನಾಥ
    ಹೂಡೇಂ ಮಂಜುನಾಥ
    Local News Reporter ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    9 hrs ago
  • ಗಾಣದಾಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರತಿದಿನ ಪಡಿತರ (ರೇಷನ್) ಪಡೆಯಲು ಆಗಮಿಸುವ ಬಡ ರೈತರು ಮತ್ತು ಸಾರ್ವಜನಿಕರು ಎದುರಿಸುತ್ತಿರುವ ನೈಜ ನರಕಯಾತನೆ. ​ಪ್ರತಿದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಗದ್ದೆ-ಪೊಲಗಳಲ್ಲಿ ಬೆವರು ಹರಿಸಿ ದುಡಿಯುವ ರೈತರು, ರಾತ್ರಿ 8:30 ರಿಂದ 9:00 ಗಂಟೆಯಾದರೂ ಪಡಿತರ ಕೇಂದ್ರದ ಮುಂದೆ ಸರದಿಯಲ್ಲಿ ಕಾಯುತ್ತಾ ನಿಲ್ಲುವಂತಾಗಿದೆ. ಹಗಲಿನಲ್ಲಿ ಸರ್ವರ್ ಸಿಗುವುದಿಲ್ಲ ಎಂಬ ಒಂದೇ ಕಾರಣಕ್ಕೆ ರಾತ್ರಿ ವೇಳೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಆದರೆ, ಈ ಕತ್ತಲಲ್ಲಿ ಪಡಿತರ ವಿತರಿಸುವ ಸ್ಥಳದಲ್ಲಿ ಕನಿಷ್ಠ ಒಂದು ಸರಿಯಾದ ಬೆಳಕಿನ (ಲೈಟ್) ವ್ಯವಸ್ಥೆಯೂ ಇಲ್ಲದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
    1
    ಗಾಣದಾಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರತಿದಿನ ಪಡಿತರ (ರೇಷನ್) ಪಡೆಯಲು ಆಗಮಿಸುವ ಬಡ ರೈತರು ಮತ್ತು ಸಾರ್ವಜನಿಕರು ಎದುರಿಸುತ್ತಿರುವ ನೈಜ ನರಕಯಾತನೆ.
​ಪ್ರತಿದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಗದ್ದೆ-ಪೊಲಗಳಲ್ಲಿ ಬೆವರು ಹರಿಸಿ ದುಡಿಯುವ ರೈತರು, ರಾತ್ರಿ 8:30 ರಿಂದ 9:00 ಗಂಟೆಯಾದರೂ ಪಡಿತರ ಕೇಂದ್ರದ ಮುಂದೆ ಸರದಿಯಲ್ಲಿ ಕಾಯುತ್ತಾ ನಿಲ್ಲುವಂತಾಗಿದೆ. ಹಗಲಿನಲ್ಲಿ ಸರ್ವರ್ ಸಿಗುವುದಿಲ್ಲ ಎಂಬ ಒಂದೇ ಕಾರಣಕ್ಕೆ ರಾತ್ರಿ ವೇಳೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಆದರೆ, ಈ ಕತ್ತಲಲ್ಲಿ ಪಡಿತರ ವಿತರಿಸುವ ಸ್ಥಳದಲ್ಲಿ ಕನಿಷ್ಠ ಒಂದು ಸರಿಯಾದ ಬೆಳಕಿನ (ಲೈಟ್) ವ್ಯವಸ್ಥೆಯೂ ಇಲ್ಲದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    2 hrs ago
  • ಆಗಸ್ಟ್ 31 ನೇ ತಾರೀಖಿನವರಗೆ ಬೆಳೆ ವಿಮೆ ಪಾವತಿಗೆ ಅವಕಾಶ. ರೈತರು ಇದರ ಸದುಪಯೋಗಪಡಿಸಿಕೊಳ್ಳಿ. ಚಳ್ಳಕೆರೆ :ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಮುದುವರಿಕೆ ಸಾಲಗಾರಿಗೆ ಅನ್ವಯ.. ಚಳ್ಳಕೆರೆ ತಾಲ್ಲೂಕಿನಲ್ಲಿ ನಾಯಕನಹಟ್ಟಿಯ ಭಾಗದ ಮಳೆಯಾಶ್ರಿತ ರಾಗಿ ಬೆಳೆಗೆ ವಿಮೆ ಪಾವತಿಗೆ ಅವಕಾಶವಿದ್ದು ಕಸಬ ಮತ್ತು ಪರಶುರಾಮಪುರ ,ತಳಕು ವ್ಯಾಪ್ತಿಯ ನೀರಾವರಿ ಸೌಲಭ್ಯ ಹೊಂದಿದ ಭತ್ತ,. ನಾಟಿ ಮಾಡಿದ ರೈತರಿಗೆ ವಿಮೆ ಅನ್ವಯವಾಗುತ್ತದೆ.. ಈಗಾಗಲೆ ಬ್ಯಾಂಕ್ ಗಳಲ್ಲಿ ಸಾಲ ಮಾಡಿದರ ರೈತರ ಆಯಾ ಬ್ಯಾಂಕ್ ಗಳಲ್ಲಿ ಬೆಳೆವಿಮೆಯನ್ನ ಪಾಲಿಸಬಹುದಾಗಿದೆ.ಆಸಕ್ತ ರೈತರು ಇದೆ ತಿಂಗಳು 31 ನೇ ತಾರೀಖಿನವರಗೆ ಬೆಳೆ ವಿಮೆ ಪಾವತಿಗೆ ಅವಕಾಶ ಇದ್ದ ಇದರಸದೂಪಯೋಗ ಪಡಿಸಿಕೊಳ್ಳಿ ಎಂದು ಕೃಷಿ ಸಹಾಯಕ ನಿರ್ದೇಶ ಡಾ.ಎಸ್ ಟಿ.ರಮೇಶ ರೈತರಿಗೆ ತಿಳಿಸಿದ್ದಾರೆ.
    1
    ಆಗಸ್ಟ್ 31 ನೇ ತಾರೀಖಿನವರಗೆ ಬೆಳೆ  ವಿಮೆ ಪಾವತಿಗೆ ಅವಕಾಶ. ರೈತರು ಇದರ ಸದುಪಯೋಗಪಡಿಸಿಕೊಳ್ಳಿ.
ಚಳ್ಳಕೆರೆ :ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಮುದುವರಿಕೆ ಸಾಲಗಾರಿಗೆ  ಅನ್ವಯ..
ಚಳ್ಳಕೆರೆ ತಾಲ್ಲೂಕಿನಲ್ಲಿ ನಾಯಕನಹಟ್ಟಿಯ ಭಾಗದ  ಮಳೆಯಾಶ್ರಿತ ರಾಗಿ ಬೆಳೆಗೆ 
ವಿಮೆ ಪಾವತಿಗೆ  ಅವಕಾಶವಿದ್ದು ಕಸಬ ಮತ್ತು ಪರಶುರಾಮಪುರ ,ತಳಕು ವ್ಯಾಪ್ತಿಯ  ನೀರಾವರಿ ಸೌಲಭ್ಯ ಹೊಂದಿದ 
ಭತ್ತ,. ನಾಟಿ ಮಾಡಿದ ರೈತರಿಗೆ   ವಿಮೆ  ಅನ್ವಯವಾಗುತ್ತದೆ..
ಈಗಾಗಲೆ ಬ್ಯಾಂಕ್ ಗಳಲ್ಲಿ ಸಾಲ ಮಾಡಿದರ ರೈತರ ಆಯಾ ಬ್ಯಾಂಕ್ ಗಳಲ್ಲಿ  ಬೆಳೆವಿಮೆಯನ್ನ ಪಾಲಿಸಬಹುದಾಗಿದೆ.ಆಸಕ್ತ ರೈತರು
ಇದೆ ತಿಂಗಳು 31 ನೇ ತಾರೀಖಿನವರಗೆ ಬೆಳೆ  ವಿಮೆ ಪಾವತಿಗೆ ಅವಕಾಶ ಇದ್ದ ಇದರಸದೂಪಯೋಗ  ಪಡಿಸಿಕೊಳ್ಳಿ ಎಂದು ಕೃಷಿ ಸಹಾಯಕ  ನಿರ್ದೇಶ ಡಾ.ಎಸ್ ಟಿ.ರಮೇಶ ರೈತರಿಗೆ  ತಿಳಿಸಿದ್ದಾರೆ.
    user_Suresh Belagere
    Suresh Belagere
    Photographer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    6 hrs ago
  • ಚಿಕ್ಕಜಾಜೂರು ಗ್ರಾಮದ ರೈಲ್ವೆ ಅಂಡರ್ ಪಾಸ್ ನಲ್ಲಿ ಮಳೆ ನೀರು ನಿಂತು ವಾಹನ ಸವಾರರು ಹೈರಾಣಾಗಿದ್ದಾರೆ. ಚಿಕ್ಕಜಾಜೂರು ಗ್ರಾಮದ ರೈಲ್ವೆ ಅಂಡರ್ ಪಾಸ್ ನಲ್ಲಿ ಮಳೆ ನೀರು ನಿಂತು ವಾಹನ ಸವಾರರು ಹೈರಾಣಾಗಿದ್ದಾರೆ. ‌ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಗ್ರಾಮದ ರೈಲ್ವೇ ಅಂಡರ್ ಪಾಸ್ ನಲ್ಲಿ ದೃಶ್ಯ ಬೆಳಕಿಗೆ ಬಂದಿದೆ. ಇನ್ನೂ ಹೊಳಲ್ಕೆರೆ ಬಾಗದಿಂದ ಚಿಕ್ಕಜಾಜೂರಿನಿಂದ ಹತ್ತಾರು ಗ್ರಾಮಗಳಿಗೆ ಸಂಪರ್ಕಿಸುವ ಈ ರೈಲ್ವೇ ಅಂಡರ್ ಪಾಸ್ ನಲ್ಲಿ ಪ್ರತಿ ಬಾರಿಯೂ ಮಳೆ ಬಂದಾಗಲೂ ಕೂಡ ಇದೇ ಪರಿಸ್ಥಿತಿ ಉಂಟಾಗುತ್ತದೆ. ರೈಲ್ವೇ ಅಂಡರ್ ಪಾಸ್ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದು ಮಳೆ ಬಂದಾಗ ಬಾರಿ ಪ್ರಮಾಣದಲ್ಲಿ ಮಳೆ ನೀರು ನಿಂತು ಶಾಲಾ ವಾಹನಗಳು ಕಾರು ಬೈಕ್ ಗಳು ಸ್ಥಳೀಯ ನಿವಾಸಿಗಳು ಸಂಚರಿಸಲು ಸಮಸ್ಯೆ ಉಂಟಾಗುತ್ತಿದ್ದು ಹಲವು ಅಪಘಾತಗಳು ಸಹ ಸಂಬವಿಸಿದ್ದಾಗಿ ಸ್ಥಳೀಯ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಇದೇ ಅಂಡರ್ ಪಾಸ್ ನಲ್ಲಿ ದೊಡ್ಡ ದೊಡ್ಡ ಗುಂಡಿಗಳು ಸಹ ಇದ್ದು ಮಳೆ ನೀರು ನಿಂತು ವಾಹನಗಳು ಸಂಚರಿಸಲು ಸಮಸ್ಯೆ ತಂದೊಡ್ಡಿದ್ದು ಆದಷ್ಟು ಬೇಗ ಸಂಬಂದಪಟ್ಟ ಇಲಾಖೆ ಈ ಬಗ್ಗೆ ಗಮನ ಹರಿಸುವಂತೆ ಸ್ಥಳೀಯ ನಿವಾಸಿಗಳು ಆಗ್ರಹ ಮಾಡಿದ್ದಾರೆ.
    1
    ಚಿಕ್ಕಜಾಜೂರು ಗ್ರಾಮದ ರೈಲ್ವೆ ಅಂಡರ್ ಪಾಸ್ ನಲ್ಲಿ ಮಳೆ ನೀರು ನಿಂತು ವಾಹನ ಸವಾರರು ಹೈರಾಣಾಗಿದ್ದಾರೆ.
ಚಿಕ್ಕಜಾಜೂರು ಗ್ರಾಮದ ರೈಲ್ವೆ ಅಂಡರ್ ಪಾಸ್ ನಲ್ಲಿ ಮಳೆ ನೀರು ನಿಂತು ವಾಹನ ಸವಾರರು ಹೈರಾಣಾಗಿದ್ದಾರೆ. ‌ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಗ್ರಾಮದ ರೈಲ್ವೇ ಅಂಡರ್ ಪಾಸ್ ನಲ್ಲಿ ದೃಶ್ಯ ಬೆಳಕಿಗೆ ಬಂದಿದೆ. ಇನ್ನೂ ಹೊಳಲ್ಕೆರೆ ಬಾಗದಿಂದ ಚಿಕ್ಕಜಾಜೂರಿನಿಂದ ಹತ್ತಾರು ಗ್ರಾಮಗಳಿಗೆ ಸಂಪರ್ಕಿಸುವ ಈ ರೈಲ್ವೇ ಅಂಡರ್ ಪಾಸ್ ನಲ್ಲಿ ಪ್ರತಿ ಬಾರಿಯೂ ಮಳೆ ಬಂದಾಗಲೂ ಕೂಡ ಇದೇ ಪರಿಸ್ಥಿತಿ ಉಂಟಾಗುತ್ತದೆ. ರೈಲ್ವೇ ಅಂಡರ್ ಪಾಸ್ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದು ಮಳೆ ಬಂದಾಗ ಬಾರಿ ಪ್ರಮಾಣದಲ್ಲಿ ಮಳೆ ನೀರು ನಿಂತು ಶಾಲಾ ವಾಹನಗಳು ಕಾರು ಬೈಕ್ ಗಳು ಸ್ಥಳೀಯ ನಿವಾಸಿಗಳು ಸಂಚರಿಸಲು ಸಮಸ್ಯೆ ಉಂಟಾಗುತ್ತಿದ್ದು ಹಲವು ಅಪಘಾತಗಳು ಸಹ ಸಂಬವಿಸಿದ್ದಾಗಿ ಸ್ಥಳೀಯ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಇದೇ ಅಂಡರ್ ಪಾಸ್ ನಲ್ಲಿ ದೊಡ್ಡ ದೊಡ್ಡ ಗುಂಡಿಗಳು ಸಹ ಇದ್ದು ಮಳೆ ನೀರು ನಿಂತು ವಾಹನಗಳು ಸಂಚರಿಸಲು ಸಮಸ್ಯೆ ತಂದೊಡ್ಡಿದ್ದು ಆದಷ್ಟು ಬೇಗ ಸಂಬಂದಪಟ್ಟ ಇಲಾಖೆ ಈ ಬಗ್ಗೆ ಗಮನ ಹರಿಸುವಂತೆ ಸ್ಥಳೀಯ ನಿವಾಸಿಗಳು ಆಗ್ರಹ ಮಾಡಿದ್ದಾರೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    6 hrs ago
  • ಹುಳಿಯಾರಿನಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನೆಲೆ ಪೊಲೀಸರಿಂದ ಪಥಸಂಚಲನ -------------------- ಈದ್ ಮಿಲಾದ್ ಹಬ್ಬದ ಹಿನ್ನೆಲೆ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸರು ಹುಳಿಯಾರ್ನ ಪ್ರಮುಖ ರಸ್ತೆಗಳಲ್ಲಿ ಗುರುವಾರ ಪಥಸಂಚಲನ ನಡೆಸಿದರು. ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಪ್ರಮುಖ ಪ್ರದೇಶಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಭದ್ರತೆಯ ಭಾವನೆ ಮೂಡಿಸಿದರು. ಎಲ್ಲಾ ಸಮುದಾಯದವರು ಪರಸ್ಪರ ಸೌಹಾರ್ದ ಮತ್ತು ಸಹಬಾಳ್ವೆಯಿಂದ ಹಬ್ಬ ಆಚರಿಸಬೇಕೆಂದು ಪೊಲೀಸರು ಮನವಿ ಮಾಡಿದರು.
    1
    ಹುಳಿಯಾರಿನಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನೆಲೆ ಪೊಲೀಸರಿಂದ ಪಥಸಂಚಲನ
--------------------
           ಈದ್ ಮಿಲಾದ್ ಹಬ್ಬದ ಹಿನ್ನೆಲೆ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸರು ಹುಳಿಯಾರ್ನ ಪ್ರಮುಖ ರಸ್ತೆಗಳಲ್ಲಿ ಗುರುವಾರ  ಪಥಸಂಚಲನ ನಡೆಸಿದರು.
            ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಪ್ರಮುಖ ಪ್ರದೇಶಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಭದ್ರತೆಯ ಭಾವನೆ ಮೂಡಿಸಿದರು. 
             ಎಲ್ಲಾ ಸಮುದಾಯದವರು ಪರಸ್ಪರ ಸೌಹಾರ್ದ ಮತ್ತು ಸಹಬಾಳ್ವೆಯಿಂದ ಹಬ್ಬ ಆಚರಿಸಬೇಕೆಂದು ಪೊಲೀಸರು ಮನವಿ ಮಾಡಿದರು.
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    3 hrs ago
  • ನೇಪಾಳದಲ್ಲಿ ಭೀಕರ ಪ್ರವಾಹ: ಕ್ಷಣಾರ್ಧದಲ್ಲೇ ಕೊಚ್ಚಿಹೋದ ಮನೆ, ವಾಹನಗಳು
    1
    ನೇಪಾಳದಲ್ಲಿ ಭೀಕರ ಪ್ರವಾಹ: ಕ್ಷಣಾರ್ಧದಲ್ಲೇ ಕೊಚ್ಚಿಹೋದ ಮನೆ, ವಾಹನಗಳು
    user_Lavanya
    Lavanya
    Local News Reporter ಪಾವಗಡ, ತುಮಕೂರು, ಕರ್ನಾಟಕ•
    7 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.