Shuru
Apke Nagar Ki App…
ಬೆಳಗಾವಿ ಬ್ರೇಕಿಂಗ್ ಚಂದ್ರ ಗ್ರಹಣ ಆರಂಭ ಹಿನ್ನೆಲೆ. ಬೆಳಗಾವಿ ಕಪಿಲೇಶ್ವರ ದೇವಾಲಯದಲ್ಲಿ ಭಿನ್ನ ಆಚರಣೆ. ಗ್ರಹಣ ಕಾಲದಲ್ಲಿ ದೇವಾಲಯದಲ್ಲಿ ಮೃತ್ಯುಂಜಯ ಹೋಮ. ತಾಮ್ರದ ಪಾತ್ರೆಯಲ್ಲಿ ಒಣಕೆ ನಿಲ್ಲಿಸಿದ ದೇವಾಲಯದ ಅರ್ಚಕರು. ದೇವಾಲಯದ ಆವರಣದಲ್ಲಿ ಪಾತ್ರೆಯಲ್ಲಿ ಒಣಕೆ. ಗ್ರಹಣ ಮೋಕ್ಷ ಕಾಲದಲ್ಲಿ ಹಲವು ಧಾರ್ಮಿಕ ವಿಧಿ ವಿಧಾನ. ಸಂಜೆ ಜಲಾಭಿಷೇಕ ಸೇರಿ ಹಲವು ಕಾರ್ಯಕ್ರಮ
SIDDU PATIL
ಬೆಳಗಾವಿ ಬ್ರೇಕಿಂಗ್ ಚಂದ್ರ ಗ್ರಹಣ ಆರಂಭ ಹಿನ್ನೆಲೆ. ಬೆಳಗಾವಿ ಕಪಿಲೇಶ್ವರ ದೇವಾಲಯದಲ್ಲಿ ಭಿನ್ನ ಆಚರಣೆ. ಗ್ರಹಣ ಕಾಲದಲ್ಲಿ ದೇವಾಲಯದಲ್ಲಿ ಮೃತ್ಯುಂಜಯ ಹೋಮ. ತಾಮ್ರದ ಪಾತ್ರೆಯಲ್ಲಿ ಒಣಕೆ ನಿಲ್ಲಿಸಿದ ದೇವಾಲಯದ ಅರ್ಚಕರು. ದೇವಾಲಯದ ಆವರಣದಲ್ಲಿ ಪಾತ್ರೆಯಲ್ಲಿ ಒಣಕೆ. ಗ್ರಹಣ ಮೋಕ್ಷ ಕಾಲದಲ್ಲಿ ಹಲವು ಧಾರ್ಮಿಕ ವಿಧಿ ವಿಧಾನ. ಸಂಜೆ ಜಲಾಭಿಷೇಕ ಸೇರಿ ಹಲವು ಕಾರ್ಯಕ್ರಮ
More news from ಕರ್ನಾಟಕ and nearby areas
- ಬೆಳಗಾವಿ ಬ್ರೇಕಿಂಗ್ ಬೆಳಗಾವಿಯಲ್ಲಿ ಹೋಳಿ ಹಬ್ಬದ ಸಂಭ್ರಮಾಚರಣೆ. ಶಾಸಕ ಅಭಯ ಪಾಟೀಲ್ ನೇತೃತ್ವದಲ್ಲಿ ಹೋಳಿ ಆಚರಣೆ. ಲೀಲೆ ಮೈದಾನದಲ್ಲಿ ಕುಣಿದು ಎಂಜಾಯ್ ಮಾಡಿದ ಯುವ ಸಮೂಹ. ಬಣ್ಣ ಆಡಲು ಮಹಿಳೆಯರು, ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ. ಕನ್ನಡ, ಹಿಂದಿ ಹಾಡುಗಳಿಗೆ ಕುಣಿದ ಯುವ ಸಮೂಹ.2
- *ಉತ್ತರ ಕರ್ನಾಟಕದ ರೈಲ್ವೆ ಯೋಜನೆಗಳ ಕುರಿತು ರೈಲು ಹೋರಾಟ ಸಮಿತಿ ಮನವಿ.! ರೈಲ್ವೆ ಅಧಿಕಾರಿಗಳ ನಡೆಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಬೇಸರ* *ಬಾಗಲಕೋಟೆ* : ಹುಬ್ಬಳ್ಳಿ ನಗರದಲ್ಲಿರುವ ಚಾಲುಕ್ಯ ರೈಲ್ವೆ ಇನಸ್ಟಿಟ್ಯೂಟ್ ಸಭಾಭವನದಲ್ಲಿ ಮಂಗಳವಾರ ಸೌತ್ ವೆಸ್ಟರ್ನ್ ರೈಲ್ವೆಸ್ ನ 25ನೇ ವಲಯ ರೈಲ್ವೆ ಬಳಕೆದಾರರ ಸಮಿತಿ ಸಭೆ ಹಮ್ಮಿಕೊಳ್ಳಲಾಗಿತ್ತು . ಈ ಸಭೆಯಲ್ಲಿ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಧ್ಯಕ್ಷರಾದ ಕುತ್ಬುದ್ದಿನ್ ಕಾಜಿಯವರು ಪಾಲ್ಗೊಂಡು ಉತ್ತರ ಕರ್ನಾಟಕದ ವಿವಿಧ ರೈಲ್ವೆ ಬೇಡಿಕೆ ಹಾಗೂ ನೂತನ ರೈಲ್ವೆ ಮಾರ್ಗಗಳ ಕುರಿತು ಮಾನ್ಯ ಮಹಾ ವ್ಯವಸ್ಥಾಪಕರಾದ ಪಿ ಅನಂತ ಅವರಿಗೆ ಮನವಿ ಸಲ್ಲಿಸಿದರು. ಬಹು ದಿನಗಳ ಬೇಡಿಕೆಯಾದ ಲೋಕಾಪೂರದಿಂದ ರಾಮದುರ್ಗ ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ ನೂತನ ರೈಲ್ವೆ ಮಾರ್ಗ ಅನುಷ್ಠಾನಗೊಳಿಸಬೇಕು, ಬಸವ ಎಕ್ಸಪ್ರೆಸ್ ರೈಲನ್ನು ಲೋಕಾಪೂರವರೆಗೆ ವಿಸ್ತರಿಸಬೇಕು , ವಿಜಯಪುರ- ಬಾಗಲಕೋಟೆ ಮಾರ್ಗದಲ್ಲಿ ತಿರುಪತಿಗೆ ನೂತನ ರೈಲು ಪ್ರಾರಂಭಿಸಬೇಕು, ವಿಜಯಪುರದಿಂದ ಬಾಗಲಕೋಟೆ ಗದಗ ಹೊಸಪೇಠ ಬಳ್ಳಾರಿ ಮಾರ್ಗವಾಗಿ ಗುಂಠಕಲ್ಲವರೆಗೆ ನೂತನ ಪ್ಯಾಸೆಂಜರ್ ರೈಲು ಪ್ರಾರಂಭಿಸಬೇಕು, ಹುಬ್ಬಳ್ಳಿ - ಹ.ನಿಜಾಮುದ್ದೀನ್ ಎಕ್ಸಪ್ರೆಸ್, ಮೈಸೂರು-ಸಾಯಿನಗರ (ಶಿರಡಿ) , ಯಶ್ವಂತಪುರ - ಬಿಕಾನೇರ ಈ ರೈಲುಗಳನ್ನು ದಿನನಿತ್ಯ ಸಂಚರಿಸುವಂತೆ ಮಾಡಬೇಕು, ರಾಯಚೂರು - ವಿಜಯಪುರ ರೈಲನ್ನು ಗದಗ ವರೆಗೆ ವಿಸ್ತರಿಸಬೇಕು, ಹೈದರಾಬಾದ್-ವಿಜಯಪುರ ರೈಲನ್ನು ಗದಗ ವರೆಗೆ ವಿಸ್ತರಿಸಬೇಕು, ಮುಂಬೈ - ಬೆಂಗಳೂರು ಸೂಪರ್ ಫಾಸ್ಟ್ ರೈಲನ್ನು ವಿಜಯಪುರ-ಬಾಗಲಕೋಟೆ ಮಾರ್ಗದಲ್ಲಿ ಸಂಚರಿಸುವಂತೆ ಮಾಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ ಬಾಗಲಕೋಟೆ-ಕುಡಚಿ ಕಾಮಗಾರಿಯು ಲೋಕಾಪೂರವರೆಗೆ ಮುಕ್ತಾಯವಾಗಿದ್ದು ಭದ್ರತಾ ಸಮೀಕ್ಷೆಯು ಸಹ ಆಗಿದೆ. ಆದರೆ ಇಲ್ಲಿ ರೈಲುಗಳ ಸಂಚಾರವಿಲ್ಲದೆ ನಿಲ್ದಾಣಗಳು ಹಾಳಾಗುತ್ತಿರುವುದರಿಂದ ಬಾಗಲಕೋಟೆ-ಲೋಕಾಪೂರ ವರೆಗೆ ಪ್ಯಾಸೆಂಜರ್ ರೈಲನ್ನು ಪ್ರಾರಂಭಿಸಬೇಕೆಂದು ಕುತ್ಬುದ್ದಿನ್ ಕಾಜಿಯವರು ರೈಲ್ವೆ ಅಧಿಕಾರಿಗಳಿಗೆ ಒತ್ತಾಯಿಸಿದಾಗ ಅಧಿಕಾರಿಗಳು ಅಲ್ಲಿನ ಜನರು ರೈಲು ಹತ್ತಲ್ಲವೆಂದು ಹಾರಿಕೆ ಉತ್ತರ ನೀಡಿ ಜಾರಿಕೊಳ್ಳಲು ಪ್ರಯತ್ನಿಸಿದಾಗ ಮಾನ್ಯ ಸಂಸದೆ ಪ್ರಿಯಾಂಕಾ ಜಾರಕಿಹೊಳಿಯವರು ರೈಲ್ವೆ ಅಧಿಕಾರಿಗಳ ನಡೆಗೆ ಗರಂ ಆಗಿ ನೀವು ಆ ಭಾಗದಲ್ಲಿ ಇನ್ನೂ ರೈಲು ಪ್ರಾರಂಭಿಸಿಯೇ ಇಲ್ಲ. ಮತ್ತೆ ಜನರು ರೈಲು ಹತ್ತಲ್ಲವೆಂದು ಹೇಗೆ ಹೇಳುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಧ್ಯಕ್ಷರಾದ ಕುತ್ಬುದ್ದಿನ್ ಕಾಜಿ, ಧಾರವಾಡ ಜಿಲ್ಲಾ ಅಧ್ಯಕ್ಷರಾದ ಬಾಬಾಜಾನ್ ಮುಧೋಳ್, ಮಹೇಂದ್ರ ಸಿಂಗವಿ , ಸುಭಾಸ ಶಿರ್ಬುರ, ರಾಜಶೇಖರ ಮೇಣಶಿನಕಾಯಿ, ಮೈನುದ್ದಿನ್ ಖಾಜಿ, ಎಂ ಕೆ ಯಾದವಾಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.2
- ರಬಕವಿ: ಹನಗಂಡಿ ಗ್ರಾಮದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ದೇವರಿಗೆ ಪ್ರತಿಷ್ಠಾಪಿಸಲು 150 ಕೆಜಿ ಪಂಚಲೋಹ ಗಂಟೆ ತಯಾರಿಸಲಾಗಿದೆ. ನಾಳೆ ಬೆಳಿಗ್ಗೆ 11–12 ಗಂಟೆ ನಡುವೆ ಪಾದಯಾತ್ರೆಯ ಮೂಲಕ ಬಾಗಲಕೋಟೆ ಗದ್ದನಕೇರಿ ಕ್ರಾಸ್ ಪ್ರವೇಶಿಸಿ, ವಿದ್ಯಾಗಿರಿ ಮಾರ್ಗವಾಗಿ ತೆಗ್ಗಿ ಬಡಾವಣೆಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತರಲಾಗುತ್ತದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆರತಿಯೊಂದಿಗೆ ಸ್ವಾಗತಿಸಬೇಕೆಂದು ಕೋರಲಾಗಿದೆ.1
- ಗುಳೇದಗುಡ್ಡ: ಗುಳೇದಗುಡ್ಡ ಪಟ್ಟಣದಲ್ಲಿ ಹೋಳಿ ಹಬ್ಬದ ಅಂಗವಾಗಿ ಮಂಗಳವಾರ ಅರಳಿಕಟ್ಟಿಯ ಹತ್ತಿರದ ಬಸವಣ್ಣನ ದೇವಸ್ಥಾನದಲ್ಲಿ ಗುಡಿ ಮ್ಯಾಳದವರು ಪ್ರತಿಷ್ಠಾಪನೆ ಮಾಡಿರುವ ಸಂಪ್ರದಾಯಿಕ ರತಿ ಮನ್ಮಥ ಮೂರ್ತಿ ನೋಡುಗರನ್ನು ಸೆಳೆಯಿತು.1
- ಮಂಗಳೂರು ಬಸ್ ನಿಲ್ದಾಣ1
- ವಿಜಯಪುರ: ಶಾಸಕ ಯತ್ನಾಳ್ ವಿರುದ್ಧ ಭ್ರಷ್ಟಾಚಾರ ಆರೋಪಿಸಿದ ಗಿರೀಶ್ ವಿಜಯಪುರದಲ್ಲಿ ಮಂಗಳವಾರದಂದು ಕಾಂಗ್ರೆಸ್ ಮುಖಂಡ ಗಿರೀಶ್ ಇಟ್ಟಂಗಿಹಾಳ ಅವರು, ಮಹಾನಗರ ಪಾಲಿಕೆಯ ಸದಸ್ಯ ಪ್ರೇಮಾನಂದ ಬಿರಾದಾರ್ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ರವರು ನಗರದ ಮುಖ್ಯ ರಸ್ತೆಯ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಕಳೆದ ವರ್ಷ ಉದ್ಘಾಟನೆಯಾಗಿದ್ದ ಕೋರ್ಟ್ ಸರ್ಕಲ್‌ನಿಂದ ಬಿಡಿ ಕಚೇರಿಯವರೆಗಿನ ರಸ್ತೆ ಸಂಪೂರ್ಣವಾಗಿ ಕಿತ್ತು ಹೋಗಿದ್ದು, ಇದರಲ್ಲಿ ಶಾಸಕರು ಹಾಗೂ ಪಾಲಿಕೆ ಸದಸ್ಯರು ಭ್ರಷ್ಟಾಚಾರ ಎಸಗಿದ್ದಾರೆ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.1
- ಬೆಳಗಾವಿ ಬ್ರೇಕಿಂಗ್ ಬೆಳಗಾವಿ ಜಿಲ್ಲಾ ಕೋರ್ಟ್ ಗೆ ಬಾಂಬ್ ಬೆದರಿಕೆ ಬೆಳಗಾವಿ ಡಿಸಿಪಿ ನಾರಾಯಣ್ ಭರಮನಿ ಹೇಳಿಕೆ ಡಿಸ್ಟ್ರಿಕ್ಟ್ ಕೋರ್ಟ್ ಗೆ ಬಾಂಬ್ ಕರೆ ಬಂದಿರೋದು ನಿಜ ಇಮೇಲ್ ಮೂಲಕ ಬಾಂಬ್ ಕರೆ ಬಂದಿದೆ ನಮ್ಮ ಸಿಬ್ಬಂದಿಗಳು ಈಗಾಗಲೇ ಭೇಟಿ, ನೀಡಿ ಪರಿಶೀಲನೆ ಮಾಡ್ತಿದ್ದಾರೆ ಯಾರು ಮಾಡಿದ್ದಾರೆ ಅನೋದರ ಬಗ್ಗೆ ಪರಿಶೀಲನೆ ಮಾಡುತ್ತೇವೆ3
- ಬಾಗಲಕೋಟೆಯಲ್ಲಿ ಅಮಾಯಕ ಹಿಂದೂ ಕಾರ್ಯಕರ್ತರನ್ನು ಬಂಧಿಸಿದರೆ ಬಾಗಲಕೋಟ ಪ್ರವೇಶ ಮಾಡಬೇಕಾಗುತ್ತದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಾಜಿ ಮೆರವಣಿಗೆ ವೇಳೆ ಕಲ್ಲು ಹಾಗೂ ಚಪ್ಪಲಿ ಎಸೆದವರನ್ನು ಬಂಧಿಸದೇ, ಕೇವಲ ನಾಮಕಾವಸ್ಥೆಗೆ ಕೆಲವರನ್ನು ಬಂಧಿಸಿರುವುದು ಸರಿಯಲ್ಲ ಎಂದು ಆರೋಪಿಸಿದರು. ನಿಜವಾದ ತಪ್ಪಿತಸ್ಥರನ್ನು ಬಿಟ್ಟು ಸುಖಾಸುಮ್ಮನೆ ಹಿಂದೂ ಕಾರ್ಯಕರ್ತರನ್ನು ಬಂಧಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.1
- ಬಾಗೇವಾಡಿ: ನರೇಗಾ ಉಳಿಸಿ ಕಾರ್ಯಕ್ರಮ ಉದ್ಘಾಟಿಸಿದ ಶಿವಾನಂದ ಪಾಟೀಲ್ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹಡಗಲಿ ಗ್ರಾಮದಲ್ಲಿ ಸೋಮವಾರ 'ನರೇಗಾ ಉಳಿಸಿ ಬಡವರ ಬದುಕು ರಕ್ಷಿಸಿ' ಕಾರ್ಯಕ್ರಮವನ್ನು ಜವಳಿ ಸಚಿವ ಶಿವಾನಂದ ಪಾಟೀಲ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಬಡವರು ಮತ್ತು ಕೂಲಿಕಾರರ ಆಶಾಕಿರಣವಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (#MGNREGA) ಯೋಜನೆಯನ್ನು ಹಂತ ಹಂತವಾಗಿ ದುರ್ಬಲಗೊಳಿಸುತ್ತಿರುವ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದರು. ನರೇಗಾ ಕೇವಲ ಒಂದು ಯೋಜನೆಯಲ್ಲ, ಇದು ಗ್ರಾಮೀಣ ಭಾರತದ ಬಡವರಿಗೆ ಸಂವಿಧಾನಬದ್ಧವಾಗಿ ಸಿಕ್ಕಿರುವ 'ಕೆಲಸದ ಹಕ್ಕು' ಎಂದು ಹೇಳಿದ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದ ಈ ಯೋಜನೆಯು ಕೋಟ್ಯಂತರ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡಿದೆ ಎಂದರು.1