Shuru
Apke Nagar Ki App…
ಗುಳೇದಗುಡ್ಡ: ಹೋಳಿ ಹಬ್ಬದ ಅಂಗವಾಗಿ ರತಿಮನ್ಮಥ ಮೂರ್ತಿ ಪ್ರತಿಷ್ಠಾಪನೆ ಗುಳೇದಗುಡ್ಡ: ಗುಳೇದಗುಡ್ಡ ಪಟ್ಟಣದಲ್ಲಿ ಹೋಳಿ ಹಬ್ಬದ ಅಂಗವಾಗಿ ಮಂಗಳವಾರ ಅರಳಿಕಟ್ಟಿಯ ಹತ್ತಿರದ ಬಸವಣ್ಣನ ದೇವಸ್ಥಾನದಲ್ಲಿ ಗುಡಿ ಮ್ಯಾಳದವರು ಪ್ರತಿಷ್ಠಾಪನೆ ಮಾಡಿರುವ ಸಂಪ್ರದಾಯಿಕ ರತಿ ಮನ್ಮಥ ಮೂರ್ತಿ ನೋಡುಗರನ್ನು ಸೆಳೆಯಿತು.
ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
ಗುಳೇದಗುಡ್ಡ: ಹೋಳಿ ಹಬ್ಬದ ಅಂಗವಾಗಿ ರತಿಮನ್ಮಥ ಮೂರ್ತಿ ಪ್ರತಿಷ್ಠಾಪನೆ ಗುಳೇದಗುಡ್ಡ: ಗುಳೇದಗುಡ್ಡ ಪಟ್ಟಣದಲ್ಲಿ ಹೋಳಿ ಹಬ್ಬದ ಅಂಗವಾಗಿ ಮಂಗಳವಾರ ಅರಳಿಕಟ್ಟಿಯ ಹತ್ತಿರದ ಬಸವಣ್ಣನ ದೇವಸ್ಥಾನದಲ್ಲಿ ಗುಡಿ ಮ್ಯಾಳದವರು ಪ್ರತಿಷ್ಠಾಪನೆ ಮಾಡಿರುವ ಸಂಪ್ರದಾಯಿಕ ರತಿ ಮನ್ಮಥ ಮೂರ್ತಿ ನೋಡುಗರನ್ನು ಸೆಳೆಯಿತು.
More news from ಕರ್ನಾಟಕ and nearby areas
- ಗುಳೇದಗುಡ್ಡ: ಗುಳೇದಗುಡ್ಡ ಪಟ್ಟಣದಲ್ಲಿ ಹೋಳಿ ಹಬ್ಬದ ಅಂಗವಾಗಿ ಮಂಗಳವಾರ ಅರಳಿಕಟ್ಟಿಯ ಹತ್ತಿರದ ಬಸವಣ್ಣನ ದೇವಸ್ಥಾನದಲ್ಲಿ ಗುಡಿ ಮ್ಯಾಳದವರು ಪ್ರತಿಷ್ಠಾಪನೆ ಮಾಡಿರುವ ಸಂಪ್ರದಾಯಿಕ ರತಿ ಮನ್ಮಥ ಮೂರ್ತಿ ನೋಡುಗರನ್ನು ಸೆಳೆಯಿತು.1
- ಮಹಾಲಿಂಗಪುರ ಪಟ್ಟಣದಿಂದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಮಲ್ಲಯ್ಯನ ಕಂಬಿ ಹೊತ್ತುಕೊಂಡು ಭಕ್ತರು ಮಂಗಳವಾರ ಬೆಳಿಗ್ಗೆ ಪಾದಯಾತ್ರೆ ಮೂಲಕ ಹೊರಟರು. ಶಿವನ ನಾಮಸ್ಮರಣೆಗಳೊಂದಿಗೆ, ಭಜನೆ–ಕೀರ್ತನೆಗಳ ಮಧ್ಯೆ ಭಕ್ತರು ಭಕ್ತಿಭಾವದಿಂದ ಯಾತ್ರೆ ಆರಂಭಿಸಿದರು. ಯುವಕರು, ಹಿರಿಯರು ಸೇರಿದಂತೆ ಅನೇಕರು ಕುಟುಂಬ ಸಮೇತವಾಗಿ ಭಾಗವಹಿಸಿದ್ದು, ಯಾತ್ರೆಯು ಭಕ್ತಿಯ ಉತ್ಸಾಹದಿಂದ ಕಂಗೊಳಿಸಿತು. ಮಾರ್ಗ ಮಧ್ಯೆ ವಿವಿಧ ಗ್ರಾಮಗಳಲ್ಲಿ ಭಕ್ತರಿಗೆ ನೀರು, ಪ್ರಸಾದ ಹಾಗೂ ವಿಶ್ರಾಂತಿ ವ್ಯವಸ್ಥೆ ಕಲ್ಪಿಸಲಾಯಿತು. ಶ್ರೀಶೈಲ ತಲುಪಿ ಮಲ್ಲಿಕಾರ್ಜುನ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಸಂಕಲ್ಪದೊಂದಿಗೆ ಭಕ್ತರು ಪಾದಯಾತ್ರೆ ಮುಂದುವರಿಸಿದ್ದಾರೆ. ಈ ಪಾದಯಾತ್ರೆ ಶಿವಭಕ್ತರ ನಂಬಿಕೆ ಹಾಗೂ ಆಧ್ಯಾತ್ಮಿಕ ಶ್ರದ್ಧೆಯ ಪ್ರತೀಕವಾಗಿದೆ.1
- ಬಾಗಲಕೋಟೆ ನಗರದಲ್ಲಿ ಭೀಮ ಆರ್ಮಿ ಸಂಘಟನೆಯ ವತಿಯಿಂದ ಬಾಗಲಕೋಟೆ ಜಿಲ್ಲೆಯ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮವು ಜಿಲ್ಲಾಧ್ಯಕ್ಷರಾದ ಬಸವರಾಜ ನೀಲನಾಯಕ್ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿಯ ಪದಾಧಿಕಾರಿಗಳು, ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಹಾಗೂ ಸಂಘಟನೆಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಾಯಕರವರು ಸಂಘಟನೆಯ ಉದ್ದೇಶಗಳು ಹಾಗೂ ಭವಿಷ್ಯದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಜಿಲ್ಲೆಯಾದ್ಯಂತ ಸಂಘಟನೆಯನ್ನು ವಿಸ್ತರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಕಾರ್ಯಕ್ರಮವು ಉತ್ಸಾಹಭರಿತವಾಗಿ ನಡೆಯಿತು.1
- ಗಜೆಂದ್ರಗಡ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಗ್ರಾಮಸ್ಥರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ1
- Post by @april14news1
- ಮಂಗಳೂರು ಕರ್ನಾಟಕದ ಮಿನಿ ಬಾಂಬೆ1
- ವಿಜಯಪುರ: ಶಾಸಕ ಯತ್ನಾಳ್ ವಿರುದ್ಧ ಭ್ರಷ್ಟಾಚಾರ ಆರೋಪಿಸಿದ ಗಿರೀಶ್ ವಿಜಯಪುರದಲ್ಲಿ ಮಂಗಳವಾರದಂದು ಕಾಂಗ್ರೆಸ್ ಮುಖಂಡ ಗಿರೀಶ್ ಇಟ್ಟಂಗಿಹಾಳ ಅವರು, ಮಹಾನಗರ ಪಾಲಿಕೆಯ ಸದಸ್ಯ ಪ್ರೇಮಾನಂದ ಬಿರಾದಾರ್ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ರವರು ನಗರದ ಮುಖ್ಯ ರಸ್ತೆಯ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಕಳೆದ ವರ್ಷ ಉದ್ಘಾಟನೆಯಾಗಿದ್ದ ಕೋರ್ಟ್ ಸರ್ಕಲ್‌ನಿಂದ ಬಿಡಿ ಕಚೇರಿಯವರೆಗಿನ ರಸ್ತೆ ಸಂಪೂರ್ಣವಾಗಿ ಕಿತ್ತು ಹೋಗಿದ್ದು, ಇದರಲ್ಲಿ ಶಾಸಕರು ಹಾಗೂ ಪಾಲಿಕೆ ಸದಸ್ಯರು ಭ್ರಷ್ಟಾಚಾರ ಎಸಗಿದ್ದಾರೆ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.1
- ರಬಕವಿ: ಹನಗಂಡಿ ಗ್ರಾಮದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ದೇವರಿಗೆ ಪ್ರತಿಷ್ಠಾಪಿಸಲು 150 ಕೆಜಿ ಪಂಚಲೋಹ ಗಂಟೆ ತಯಾರಿಸಲಾಗಿದೆ. ನಾಳೆ ಬೆಳಿಗ್ಗೆ 11–12 ಗಂಟೆ ನಡುವೆ ಪಾದಯಾತ್ರೆಯ ಮೂಲಕ ಬಾಗಲಕೋಟೆ ಗದ್ದನಕೇರಿ ಕ್ರಾಸ್ ಪ್ರವೇಶಿಸಿ, ವಿದ್ಯಾಗಿರಿ ಮಾರ್ಗವಾಗಿ ತೆಗ್ಗಿ ಬಡಾವಣೆಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತರಲಾಗುತ್ತದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆರತಿಯೊಂದಿಗೆ ಸ್ವಾಗತಿಸಬೇಕೆಂದು ಕೋರಲಾಗಿದೆ.1