logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಡಾ. ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮ ಅಂಬೇಡ್ಕರ್ ಬದುಕು ಯುವಜನತೆಗೆ ಸ್ಫೂರ್ತಿ ಹುಣಸಗಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೋರಾಟದ ಬದುಕು ಯುವಜನತೆಗೆ ಸ್ಫೂರ್ತಿಯಾಗಿದ್ದು, ಅವರ ಸಾಧನೆ ಎಲ್ಲರಿಗೂ ಮಾದರಿಯಾಗಿದೆ ಎಂದು ಯುವ ಉಪನ್ಯಾಸಕ ಡಾ. ಎಂ.ಎ. ಪರಮೇಶ್ವರ್ ಹೇಳಿದರು. ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಾದಗಿರಿ ಹಾಗೂ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ನಿರಂತರ ಪರಿಶ್ರಮ, ಸತತ ಅಧ್ಯಯನ ಹಾಗೂ ಛಲದಿಂದ ಅಪಾರ ಜ್ಞಾನ ಸಂಪಾದಿಸಿದ ಅಂಬೇಡ್ಕರ್ ಅವರ ತತ್ವ–ಸಿದ್ಧಾಂತಗಳು ಅಜರಾಮರ. ಶೋಷಣೆಯ ವಿರುದ್ಧ ಧ್ವನಿ ಎತ್ತಿದ ಅವರು ತಮ್ಮ ಕೃತಿಗಳ ಮೂಲಕ ವಿಶ್ವಕ್ಕೆ ಹೊಸ ಜ್ಞಾನಧಾರೆಯನ್ನು ನೀಡಿದ ಮಹಾನ್ ಮೇಧಾವಿ. ಅವರ, ವಿಚಾರಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ತಾಲೂಕು ಕಸಾಪ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ವೆಂಕಟಗಿರಿ ದೇಶಪಾಂಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ತುಳಿತಕ್ಕೊಳಗಾದವರು, ಮಹಿಳೆಯರು ಹಾಗೂ ದುರ್ಬಲ ವರ್ಗದವರಿಗೆ ಸಾಮಾಜಿಕ ನ್ಯಾಯದ ದಾರಿ ತೋರಿಸಿದರು. ಸಮಾನತೆ, ಸ್ವಾತಂತ್ರ್ಯ ಮತ್ತು ಬಂಧುತ್ವದ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಓದು ಅಗತ್ಯ ಎಂದರು. ಭೀಮನಗೌಡ ಬಿರಾದಾರ ಕೊಡೇಕಲ್ ಮಾತನಾಡಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ನಂದಪ್ಪ ಜಾಧವ, ಸ್ವಾತಿ ಶಿವಣ್ಣ ಗದ್ದಗಿ, ಸುಕುಮಾರ ಶ್ರೀನಿವಾಸ, ಪ್ರಭು ಸಿ.ಎಸ್. ಹಾಗೂ ಮರೆಮ್ಮ ದೊರೆಗೋಳ ಅವರಿಗೆ ಪ್ರಮಾಣಪತ್ರ ಮತ್ತು ಬಹುಮಾನ ವಿತರಿಸಲಾಯಿತು. ಪ್ರಾಚಾರ್ಯ ಗುರಣ್ಣ ವಿ. ರಾರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಉತ್ತರಾದೇವಿ ಮಠಪತಿ, ಮಲ್ಲನಗೌಡ ಪಾಟೀಲ್, ಪ್ರೀತಾ ರಡ್ಡಿ, ಡಾ. ಸಂತೋಷ ರಾಠೋಡ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಸಮ್ಮ ಪ್ರಾರ್ಥಿಸಿದರು. ಡಾ. ಹನುಮಂತ ನಡುವಿನಕೇರಿ ನಿರೂಪಿಸಿದರು. ಶಿವಶರಣಪ್ಪ ಸ್ವಾಗತಿಸಿದರು. ಸುಷ್ಮಾ ಇಂಡಿ ವಂದಿಸಿದರು.

7 hrs ago
user_Balappa m kuppi
Balappa m kuppi
Local News Reporter ಹುಣಸಗಿ, ಯಾದಗಿರಿ, ಕರ್ನಾಟಕ•
7 hrs ago
28b9a2fe-f33a-4c54-a133-9a6bab1ed234

ಡಾ. ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮ ಅಂಬೇಡ್ಕರ್ ಬದುಕು ಯುವಜನತೆಗೆ ಸ್ಫೂರ್ತಿ ಹುಣಸಗಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೋರಾಟದ ಬದುಕು ಯುವಜನತೆಗೆ ಸ್ಫೂರ್ತಿಯಾಗಿದ್ದು, ಅವರ ಸಾಧನೆ ಎಲ್ಲರಿಗೂ ಮಾದರಿಯಾಗಿದೆ ಎಂದು ಯುವ ಉಪನ್ಯಾಸಕ ಡಾ. ಎಂ.ಎ. ಪರಮೇಶ್ವರ್ ಹೇಳಿದರು. ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಾದಗಿರಿ ಹಾಗೂ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ನಿರಂತರ ಪರಿಶ್ರಮ, ಸತತ ಅಧ್ಯಯನ ಹಾಗೂ ಛಲದಿಂದ ಅಪಾರ ಜ್ಞಾನ ಸಂಪಾದಿಸಿದ ಅಂಬೇಡ್ಕರ್ ಅವರ ತತ್ವ–ಸಿದ್ಧಾಂತಗಳು ಅಜರಾಮರ. ಶೋಷಣೆಯ ವಿರುದ್ಧ ಧ್ವನಿ ಎತ್ತಿದ ಅವರು ತಮ್ಮ ಕೃತಿಗಳ ಮೂಲಕ ವಿಶ್ವಕ್ಕೆ ಹೊಸ ಜ್ಞಾನಧಾರೆಯನ್ನು ನೀಡಿದ ಮಹಾನ್ ಮೇಧಾವಿ. ಅವರ, ವಿಚಾರಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ತಾಲೂಕು ಕಸಾಪ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ವೆಂಕಟಗಿರಿ ದೇಶಪಾಂಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ತುಳಿತಕ್ಕೊಳಗಾದವರು, ಮಹಿಳೆಯರು ಹಾಗೂ ದುರ್ಬಲ ವರ್ಗದವರಿಗೆ ಸಾಮಾಜಿಕ ನ್ಯಾಯದ ದಾರಿ ತೋರಿಸಿದರು. ಸಮಾನತೆ, ಸ್ವಾತಂತ್ರ್ಯ ಮತ್ತು ಬಂಧುತ್ವದ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಓದು ಅಗತ್ಯ ಎಂದರು. ಭೀಮನಗೌಡ ಬಿರಾದಾರ ಕೊಡೇಕಲ್ ಮಾತನಾಡಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ನಂದಪ್ಪ ಜಾಧವ, ಸ್ವಾತಿ ಶಿವಣ್ಣ ಗದ್ದಗಿ, ಸುಕುಮಾರ ಶ್ರೀನಿವಾಸ, ಪ್ರಭು ಸಿ.ಎಸ್. ಹಾಗೂ ಮರೆಮ್ಮ ದೊರೆಗೋಳ ಅವರಿಗೆ ಪ್ರಮಾಣಪತ್ರ ಮತ್ತು ಬಹುಮಾನ ವಿತರಿಸಲಾಯಿತು. ಪ್ರಾಚಾರ್ಯ ಗುರಣ್ಣ ವಿ. ರಾರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಉತ್ತರಾದೇವಿ ಮಠಪತಿ, ಮಲ್ಲನಗೌಡ ಪಾಟೀಲ್, ಪ್ರೀತಾ ರಡ್ಡಿ, ಡಾ. ಸಂತೋಷ ರಾಠೋಡ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಸಮ್ಮ ಪ್ರಾರ್ಥಿಸಿದರು. ಡಾ. ಹನುಮಂತ ನಡುವಿನಕೇರಿ ನಿರೂಪಿಸಿದರು. ಶಿವಶರಣಪ್ಪ ಸ್ವಾಗತಿಸಿದರು. ಸುಷ್ಮಾ ಇಂಡಿ ವಂದಿಸಿದರು.

More news from ಕರ್ನಾಟಕ and nearby areas
  • ಯಾದಗಿರಿ-ರಾಯಚೂರು ಹೆದ್ದಾರಿಯ ಅವೈಜ್ಞಾನಿಕ ಟೋಲ್‌ ತೆರವಿಗೆ ಉಮೇಶ್ ಕೆ. ಮುನ್ನಾಳ್ ಖಡಕ್ ಆಗ್ರಹ ಯಾದಗಿರಿ-ರಾಯಚೂರು ಹೆದ್ದಾರಿಯ ಆರ್. ಹೊಸಳ್ಳಿ-ನಾಗಲಾಪುರ ಮಧ್ಯದಲ್ಲಿರುವ ಟೋಲ್‌ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದ್ದು, ಸಮರ್ಪಕ ವಿದ್ಯುತ್ ದೀಪಗಳು ಹಾಗೂ ಸುರಕ್ಷತಾ ಸೂಚನೆಗಳ ಕೊರತೆಯಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುನ್ನಾಳ್‌ ಆರೋಪಿಸಿದರು. ಸ್ಥಳಕ್ಕೆ ಭೇಟಿ ನೀಡಿ ರೈತರು ಹಾಗೂ ವಾಹನ ಸವಾರರೊಂದಿಗೆ ಚರ್ಚಿಸಿದ ಅವರು, ಟೋಲ್ ಅನ್ನು ತಕ್ಷಣ ತೆರವುಗೊಳಿಸಿ ಮುಂದಿನ ಅವಘಡಗಳನ್ನು ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈಗಾಗಲೇ ಹಲವು ಜೀವಗಳು ಬಲಿಯಾಗಿವೆ ಎಂದು ಹೇಳಿದ ಅವರು, ಸರ್ಕಾರ ನಿರ್ಲಕ್ಷ್ಯ ಮುಂದುವರಿಸಿದರೆ ಇದೇ ಸ್ಥಳದಲ್ಲಿ ಮುಖ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
    1
    ಯಾದಗಿರಿ-ರಾಯಚೂರು ಹೆದ್ದಾರಿಯ ಅವೈಜ್ಞಾನಿಕ ಟೋಲ್‌ ತೆರವಿಗೆ ಉಮೇಶ್ ಕೆ. ಮುನ್ನಾಳ್ ಖಡಕ್ ಆಗ್ರಹ
ಯಾದಗಿರಿ-ರಾಯಚೂರು ಹೆದ್ದಾರಿಯ ಆರ್.
ಹೊಸಳ್ಳಿ-ನಾಗಲಾಪುರ ಮಧ್ಯದಲ್ಲಿರುವ ಟೋಲ್‌ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದ್ದು, ಸಮರ್ಪಕ ವಿದ್ಯುತ್ ದೀಪಗಳು ಹಾಗೂ ಸುರಕ್ಷತಾ ಸೂಚನೆಗಳ ಕೊರತೆಯಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುನ್ನಾಳ್‌ ಆರೋಪಿಸಿದರು. ಸ್ಥಳಕ್ಕೆ ಭೇಟಿ ನೀಡಿ ರೈತರು ಹಾಗೂ ವಾಹನ ಸವಾರರೊಂದಿಗೆ ಚರ್ಚಿಸಿದ ಅವರು, ಟೋಲ್ ಅನ್ನು ತಕ್ಷಣ ತೆರವುಗೊಳಿಸಿ ಮುಂದಿನ ಅವಘಡಗಳನ್ನು ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈಗಾಗಲೇ ಹಲವು ಜೀವಗಳು ಬಲಿಯಾಗಿವೆ ಎಂದು ಹೇಳಿದ ಅವರು, ಸರ್ಕಾರ ನಿರ್ಲಕ್ಷ್ಯ ಮುಂದುವರಿಸಿದರೆ ಇದೇ ಸ್ಥಳದಲ್ಲಿ ಮುಖ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    ಶೋರಾಪುರ, ಯಾದಗಿರಿ, ಕರ್ನಾಟಕ•
    5 hrs ago
  • ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ತಾಳಿಕೋಟಿ ಹಾಗೂ ದೇವರಹಿಪ್ಪರಗಿ ತಾಲೂಕನ್ನು ಒಳಗೊಂಡು ಇಡೀ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಮಾಡಲು ತೀವ್ರವಾದ ಹೋರಾಟವನ್ನು ನಡೆಸಲು ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ನಡಹಳ್ಳಿ ಅವರ ನೇತೃತ್ವದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ರೈತ ಮುಖಂಡರ ಪೂರ್ವಭಾವಿ ಸಭೆ ನಡೆಯಿತು. ತಾಳಿಕೋಟಿ ವರದಿ ತಾಳಿಕೋಟೆಯಲ್ಲಿ ಬೃಹತ್ ಧರಣಿ ಸತ್ಯಾಗ್ರಹ ಹೋರಾಟದ ಕುರಿತು ಪೂರ್ವಭಾವಿ ಸಭೆ. ಸಭೆಯಲ್ಲಿ ಭಾಗವಹಿಸಿದ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ ಎಸ್ ಪಾಟೀಲ ನಡಹಳ್ಳಿ, ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಮಾಜಿ ಶಾಸಕ ಸೋಮನಗೌಡ ಪಾಟೀಲ ಅವರು ಮಾತನಾಡಿ ಸರ್ಕಾರದ ನಿರ್ಲಕ್ಷ ಕುರಿತು ಖಂಡಿಸಿ ಸಪ್ಟಂಬರ್ 17 ರಿಂದ ಮೂರು ದಿನಗಳ ಕಾಲ ತಾಳಿಕೋಟಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಧರಣೀ ಸತ್ಯಾಗ್ರಹ ನಡೆಸಿ ಸಪ್ಟೆಂಬರ್ 21ರಂದು ತಾಳಿಕೋಟಿ ಪಟ್ಟಣ ಸಂಪೂರ್ಣ ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿ ಸದರಿ ಹೋರಾಟಕ್ಕೆ ಎಲ್ಲ ಗ್ರಾಮಗಳ ರೈತರು ಸಹಕಾರ ನೀಡಬೇಕೆಂದು ಕೇಳಿಕೊಂಡರು. ಪೂರ್ವಭಾವಿ ಸಭೆಯಲ್ಲಿ ಮುಖಂಡರಾದ ಮುನ್ನಾದಣಿ ನಾಡಗೌಡ, ಬಸನಗೌಡ ಮಾಡಗಿ, ಮಡುಸೌಕಾರ ಬಿರಾದಾರ, ಸಿದ್ದು ಬುಳ್ಳಾ, ಬಸನಗೌಡ ವಣಿಕ್ಯಾಳ ಕಾರ್ಯಕ್ರಮದ ಯಶಸ್ವಿಗೆ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಭಾಗವಹಿಸಿದ ವಿವಿಧ ಗ್ರಾಮಗಳ ರೈತರ ಪ್ರತಿನಿಧಿಗಳು, ತಾಳಿಕೋಟಿ ಪಟ್ಟಣದ ಗಣ್ಯ ವರ್ತಕರು, ವಿವಿಧ ಪಕ್ಷಗಳ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರು ಧರಣಿಯ ಯಶಸ್ವಿಗೆ ಎಲ್ಲಾ ರೀತಿಯಿಂದಲೂ ಸಹಕರಿಸು ದಾಗಿ ತಿಳಿಸಿದರು.
    1
    ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ತಾಳಿಕೋಟಿ ಹಾಗೂ ದೇವರಹಿಪ್ಪರಗಿ ತಾಲೂಕನ್ನು ಒಳಗೊಂಡು ಇಡೀ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಮಾಡಲು ತೀವ್ರವಾದ ಹೋರಾಟವನ್ನು ನಡೆಸಲು ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ನಡಹಳ್ಳಿ ಅವರ ನೇತೃತ್ವದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ರೈತ ಮುಖಂಡರ ಪೂರ್ವಭಾವಿ ಸಭೆ ನಡೆಯಿತು.

ತಾಳಿಕೋಟಿ ವರದಿ 
ತಾಳಿಕೋಟೆಯಲ್ಲಿ ಬೃಹತ್ ಧರಣಿ ಸತ್ಯಾಗ್ರಹ ಹೋರಾಟದ ಕುರಿತು  ಪೂರ್ವಭಾವಿ ಸಭೆ.
ಸಭೆಯಲ್ಲಿ ಭಾಗವಹಿಸಿದ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ ಎಸ್ ಪಾಟೀಲ ನಡಹಳ್ಳಿ, ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಮಾಜಿ ಶಾಸಕ ಸೋಮನಗೌಡ ಪಾಟೀಲ ಅವರು ಮಾತನಾಡಿ ಸರ್ಕಾರದ ನಿರ್ಲಕ್ಷ ಕುರಿತು ಖಂಡಿಸಿ ಸಪ್ಟಂಬರ್ 17 ರಿಂದ ಮೂರು ದಿನಗಳ ಕಾಲ ತಾಳಿಕೋಟಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಧರಣೀ ಸತ್ಯಾಗ್ರಹ ನಡೆಸಿ ಸಪ್ಟೆಂಬರ್ 21ರಂದು ತಾಳಿಕೋಟಿ ಪಟ್ಟಣ ಸಂಪೂರ್ಣ ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿ ಸದರಿ ಹೋರಾಟಕ್ಕೆ ಎಲ್ಲ ಗ್ರಾಮಗಳ ರೈತರು ಸಹಕಾರ ನೀಡಬೇಕೆಂದು ಕೇಳಿಕೊಂಡರು.
ಪೂರ್ವಭಾವಿ ಸಭೆಯಲ್ಲಿ ಮುಖಂಡರಾದ ಮುನ್ನಾದಣಿ ನಾಡಗೌಡ, ಬಸನಗೌಡ ಮಾಡಗಿ, ಮಡುಸೌಕಾರ ಬಿರಾದಾರ, ಸಿದ್ದು ಬುಳ್ಳಾ, ಬಸನಗೌಡ ವಣಿಕ್ಯಾಳ ಕಾರ್ಯಕ್ರಮದ ಯಶಸ್ವಿಗೆ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು. 
ಸಭೆಯಲ್ಲಿ ಭಾಗವಹಿಸಿದ ವಿವಿಧ ಗ್ರಾಮಗಳ ರೈತರ ಪ್ರತಿನಿಧಿಗಳು, ತಾಳಿಕೋಟಿ ಪಟ್ಟಣದ ಗಣ್ಯ ವರ್ತಕರು, ವಿವಿಧ ಪಕ್ಷಗಳ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರು ಧರಣಿಯ ಯಶಸ್ವಿಗೆ ಎಲ್ಲಾ ರೀತಿಯಿಂದಲೂ ಸಹಕರಿಸು ದಾಗಿ ತಿಳಿಸಿದರು.
    user_ಸಮೃದ್ಧ ಕರ್ನಾಟಕ ನ್ಯೂಸ್
    ಸಮೃದ್ಧ ಕರ್ನಾಟಕ ನ್ಯೂಸ್
    Voice of people ತಾಳಿಕೋಟಿ, ವಿಜಯಪುರ, ಕರ್ನಾಟಕ•
    14 hrs ago
  • ಲಿಂಗಸುಗೂರು ಪಟ್ಟಣದ ವಾರ್ಡ್ ನಂಬರ್ 7ರ ಏಕದಂತ ಗಜಾನನ ಮಂಡಳಿ ವತಿಯಿಂದ 8ನೇ ವರ್ಷದ ಮಹೋತ್ಸವ: ಅದ್ಧೂರಿ ಗಣೇಶೋತ್ಸವಕ್ಕೆ ಚಾಲನೆ ಲಿಂಗಸುಗೂರು: ಪಟ್ಟಣದ ವಾಡಿ–7ರ ಏಕದಂತ ಗಣೇಶನ ಮಂಟಪದಲ್ಲಿ 8ನೇ ವರ್ಷದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಲಿಂಗಸುಗೂರು ಪಟ್ಟಣದ ವಾಡಿ–7ರ ಏಕದಂತ ಗಜಾನನ ಮಂಡಳಿ ವತಿಯಿಂದ 8ನೇ ವರ್ಷದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಸಂಭ್ರಮದಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ಗಳು ಹಾಗೂ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು ನಡೆಸಲಾಯಿತು. ನಂತರ ವಿಜೇತರಾದ ಕ್ರೀಡಾಪಟುಗಳಿಗೆ ಏಕದಂತ ಗಜಾನನ ಮಂಡಳಿ ವತಿಯಿಂದ ಬಹುಮಾನ ವಿತರಣೆ ಮಾಡಲಾಯಿತು. ಹಾಗೂ ಮೂರನೆ ದಿನ ಸಂಜೆ ಬಾಜಾ ಬಜಂತ್ರಿ ಯೊಂದಿಗೆ ನೃತ್ಯದೊಂದಿಗೆ ಅದ್ದೂರಿಯಾಗಿ ವಿಸರ್ಜನೆ ಕೈಗೊಳ್ಳಲಾಯಿತು.
    4
    ಲಿಂಗಸುಗೂರು ಪಟ್ಟಣದ ವಾರ್ಡ್ ನಂಬರ್ 7ರ ಏಕದಂತ ಗಜಾನನ ಮಂಡಳಿ ವತಿಯಿಂದ  8ನೇ ವರ್ಷದ ಮಹೋತ್ಸವ: ಅದ್ಧೂರಿ ಗಣೇಶೋತ್ಸವಕ್ಕೆ ಚಾಲನೆ
ಲಿಂಗಸುಗೂರು: ಪಟ್ಟಣದ ವಾಡಿ–7ರ ಏಕದಂತ ಗಣೇಶನ ಮಂಟಪದಲ್ಲಿ 8ನೇ ವರ್ಷದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. 

ಲಿಂಗಸುಗೂರು ಪಟ್ಟಣದ ವಾಡಿ–7ರ ಏಕದಂತ ಗಜಾನನ ಮಂಡಳಿ ವತಿಯಿಂದ 8ನೇ ವರ್ಷದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಸಂಭ್ರಮದಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ಗಳು ಹಾಗೂ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು  ನಡೆಸಲಾಯಿತು. ನಂತರ ವಿಜೇತರಾದ ಕ್ರೀಡಾಪಟುಗಳಿಗೆ ಏಕದಂತ ಗಜಾನನ ಮಂಡಳಿ ವತಿಯಿಂದ ಬಹುಮಾನ ವಿತರಣೆ ಮಾಡಲಾಯಿತು. ಹಾಗೂ ಮೂರನೆ ದಿನ ಸಂಜೆ ಬಾಜಾ ಬಜಂತ್ರಿ ಯೊಂದಿಗೆ ನೃತ್ಯದೊಂದಿಗೆ ಅದ್ದೂರಿಯಾಗಿ ವಿಸರ್ಜನೆ ಕೈಗೊಳ್ಳಲಾಯಿತು.
    user_ಸಿದ್ದನಗೌಡ ಪಾಟೀಲ್
    ಸಿದ್ದನಗೌಡ ಪಾಟೀಲ್
    Lingsugur, Raichur•
    2 hrs ago
  • ಕಾಗಿನೆಲೆ ಶ್ರೀ ಕನಕ ಗಿರುಪೀಠ ಹೊಸಕೋಟೆಯ ಶ್ರೀ ಈಶ್ವರನಂದಪುರಿ ಸ್ವಾಮಿಜಿಗಳು ಗಣೇಶ ವಿಗ್ರಹಕ್ಕೆ ಆರತಿ ಮಾಡಿದರು. ಲಿಂಗಸುಗೂರು : ಕಾಗಿನೆಲೆ ಶ್ರೀ ಕನಕ ಗಿರುಪೀಠ ಹೊಸಕೋಟೆಯ ಪರಮ ಪೂಜ್ಯ ಶ್ರೀ ಈಶ್ವರನಂದಪುರಿ ಸ್ವಾಮಿಜಿಗಳು ಗಣೇಶ ಚತುರ್ಥಿ ದಿನದ ಹಂಗವಾಗಿ ವಿಘ್ನವಿನಾಶಕ ಶ್ರೀ ವಿನಾಯಕನ ವಿಗ್ರಹಕ್ಕೆ ಸಾಂಪ್ರದಾಯಕ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿದರು.
    1
    ಕಾಗಿನೆಲೆ ಶ್ರೀ ಕನಕ ಗಿರುಪೀಠ ಹೊಸಕೋಟೆಯ ಶ್ರೀ ಈಶ್ವರನಂದಪುರಿ ಸ್ವಾಮಿಜಿಗಳು ಗಣೇಶ ವಿಗ್ರಹಕ್ಕೆ ಆರತಿ ಮಾಡಿದರು.
ಲಿಂಗಸುಗೂರು :
ಕಾಗಿನೆಲೆ ಶ್ರೀ ಕನಕ ಗಿರುಪೀಠ ಹೊಸಕೋಟೆಯ ಪರಮ ಪೂಜ್ಯ ಶ್ರೀ ಈಶ್ವರನಂದಪುರಿ ಸ್ವಾಮಿಜಿಗಳು ಗಣೇಶ ಚತುರ್ಥಿ ದಿನದ ಹಂಗವಾಗಿ ವಿಘ್ನವಿನಾಶಕ ಶ್ರೀ ವಿನಾಯಕನ ವಿಗ್ರಹಕ್ಕೆ ಸಾಂಪ್ರದಾಯಕ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿದರು.
    user_ಎಸ್.ಬಿ. ಒಡೆಯರ್ ಮುದಗಲ್
    ಎಸ್.ಬಿ. ಒಡೆಯರ್ ಮುದಗಲ್
    ಲಿಂಗಸುಗೂರು, ರಾಯಚೂರು, ಕರ್ನಾಟಕ•
    17 hrs ago
  • ಮಸ್ಕಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಯುವ ಸಂಪತ್ತು ಸಭೆಗೆ ಚಾಲನೆ ಮಸ್ಕಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಯುವ ಸಂಪತ್ತು ಸಭೆಗೆ ಚಾಲನೆ ಮಸ್ಕಿ: ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಯುವ ಸಂಪತ್ತು ಸಭೆಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಮಸ್ಕಿ ಶಾಸಕ **ಆರ್. ಬಸನಗೌಡ ತುರುವಿಹಾಳ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಂವಿಧಾನದ ಆಶಯಗಳನ್ನು ಯುವಜನರಿಗೆ ಪರಿಚಯಿಸುವುದು ಅಗತ್ಯವಾಗಿದ್ದು, ಯುವಕರು ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು. ಯುವಜನರಲ್ಲಿ ನಾಯಕತ್ವ ಗುಣ, ಸಾಮಾಜಿಕ ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಯುವಕರು ಹಾಗೂ ಸಾರ್ವಜನಿಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    1
    ಮಸ್ಕಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಯುವ ಸಂಪತ್ತು ಸಭೆಗೆ ಚಾಲನೆ
ಮಸ್ಕಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಯುವ ಸಂಪತ್ತು ಸಭೆಗೆ ಚಾಲನೆ
ಮಸ್ಕಿ: ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಯುವ ಸಂಪತ್ತು ಸಭೆಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಮಸ್ಕಿ ಶಾಸಕ **ಆರ್. ಬಸನಗೌಡ ತುರುವಿಹಾಳ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಂವಿಧಾನದ ಆಶಯಗಳನ್ನು ಯುವಜನರಿಗೆ ಪರಿಚಯಿಸುವುದು ಅಗತ್ಯವಾಗಿದ್ದು, ಯುವಕರು ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಯುವಜನರಲ್ಲಿ ನಾಯಕತ್ವ ಗುಣ, ಸಾಮಾಜಿಕ ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಯುವಕರು ಹಾಗೂ ಸಾರ್ವಜನಿಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    user_ಹನುಮೇಶ ನಾಯಕ್
    ಹನುಮೇಶ ನಾಯಕ್
    ಮಾಸ್ಕಿ, ರಾಯಚೂರು, ಕರ್ನಾಟಕ•
    12 hrs ago
  • ಯಾದಗಿರಿ ತಾಲೂಕಿನ ತಹಸಿಲ್ ಕಚೇರಿಯಲ್ಲಿ ಆಧಾರ್ ಕಾರ್ಡ್ ಅಪ್ಲೋಡ್ ಮತ್ತು ರೇಷನ್ ಕಾರ್ಡ್ ಕೆವೈಸಿ ಮಾಡಲು ಬೆಂಗಳೂರಿನಿಂದ ಆಗಮಿಸಿ ಒಳಗಡೆ ಕರ್ನಾಟಕ 1 ನಲ್ಲಿ ಬೆಳಗ್ಗೆ 3:00 ಯಿಂದ ಯಾದಗಿರಿಯ ತಾಲೂಕಿನ ಕಚೇರಿಯ ಒಳಗಡೆ ಜನ ಜಾತ್ರೆ ಆಗಿದೆ ಬೆಂಗಳೂರಿನಲ್ಲಿ ಬಂದು ಲೈನ್ ಅಲ್ಲಿ ನಿಂತುಕೊಂಡು ಆದರೂ ಕೂಡ ಸರಿಯಾಗಿ ನೆಟ್ವರ್ಕ್ ಇಲ್ಲ ಮತ್ತು ಜನರು ಕಿತ್ತಿ ಹಾಡುತ್ತಿದ್ದರೆ ಜಿಲ್ಲೆಯ 16 ವರ್ಷ ಆದರೂ ಕೂಡ ಜಿಲ್ಲಾ ಆಡಳಿತ ಇದನ್ನು ಗಮನಿಸಿ ಸರಿಪಡಿಸಬೇಕು ಈಗಾಗಲೇ ಯಾತಗಿರಿ ಜಿಲ್ಲೆಯ ಬರಗಲ ಆಗಿದೆ ಬೆಳೆ ಇಲ್ಲದ ಕಾರಣ ರೈತರು ಸಾಲ ಮಾಡಿ ಬೆಂಗಳೂರಿನಲ್ಲಿ ದುಡಿ ದುಡಿಯುತ್ತಾ ಇದ್ದರೂ ಕೂಡ ಈ ಕೆವೈಸಿ ರೇಷನ್ ಕಾರ್ಡ್ ಸಲುವಾಗಿ ಜಿಲ್ಲೆಗೆ ಆಗಮಿಸಿ ತಿದ್ದು ಇದನ್ನು ಬಹಳ ರೈತರು ಕೂಲಿ ಕಾರ್ಮಿಕರು ಕೆಲಸ ಬಿಟ್ಟು ಬೆಳಗ್ಗೆ ಮೂರು ಗಂಟೆಯಿಂದ ಸಾಲಗಿ ನಿಲ್ಲುತ್ತದೆ ಇದು ಯಾವ ಶಾಪ ರೈತರ ಗೋಳು ವರು ಯಾರು ಇಲ್ಲ ಸರ್ಕಾರವೇ ಕಣ್ಣು ಮುಚ್ಚಿ ಕುಂತಿದೆ ಜನ ಆಕ್ರೋಶ
    1
    ಯಾದಗಿರಿ ತಾಲೂಕಿನ ತಹಸಿಲ್ ಕಚೇರಿಯಲ್ಲಿ ಆಧಾರ್ ಕಾರ್ಡ್ ಅಪ್ಲೋಡ್ ಮತ್ತು ರೇಷನ್ ಕಾರ್ಡ್ ಕೆವೈಸಿ ಮಾಡಲು ಬೆಂಗಳೂರಿನಿಂದ ಆಗಮಿಸಿ ಒಳಗಡೆ ಕರ್ನಾಟಕ 1 ನಲ್ಲಿ ಬೆಳಗ್ಗೆ 3:00 ಯಿಂದ ಯಾದಗಿರಿಯ ತಾಲೂಕಿನ ಕಚೇರಿಯ ಒಳಗಡೆ ಜನ ಜಾತ್ರೆ ಆಗಿದೆ ಬೆಂಗಳೂರಿನಲ್ಲಿ ಬಂದು ಲೈನ್ ಅಲ್ಲಿ ನಿಂತುಕೊಂಡು ಆದರೂ ಕೂಡ ಸರಿಯಾಗಿ ನೆಟ್ವರ್ಕ್ ಇಲ್ಲ ಮತ್ತು ಜನರು ಕಿತ್ತಿ ಹಾಡುತ್ತಿದ್ದರೆ ಜಿಲ್ಲೆಯ 16 ವರ್ಷ ಆದರೂ ಕೂಡ ಜಿಲ್ಲಾ ಆಡಳಿತ ಇದನ್ನು ಗಮನಿಸಿ ಸರಿಪಡಿಸಬೇಕು ಈಗಾಗಲೇ ಯಾತಗಿರಿ ಜಿಲ್ಲೆಯ ಬರಗಲ ಆಗಿದೆ ಬೆಳೆ ಇಲ್ಲದ ಕಾರಣ ರೈತರು ಸಾಲ ಮಾಡಿ ಬೆಂಗಳೂರಿನಲ್ಲಿ ದುಡಿ ದುಡಿಯುತ್ತಾ ಇದ್ದರೂ ಕೂಡ ಈ ಕೆವೈಸಿ ರೇಷನ್ ಕಾರ್ಡ್ ಸಲುವಾಗಿ ಜಿಲ್ಲೆಗೆ ಆಗಮಿಸಿ ತಿದ್ದು ಇದನ್ನು ಬಹಳ ರೈತರು ಕೂಲಿ ಕಾರ್ಮಿಕರು ಕೆಲಸ ಬಿಟ್ಟು ಬೆಳಗ್ಗೆ ಮೂರು ಗಂಟೆಯಿಂದ ಸಾಲಗಿ ನಿಲ್ಲುತ್ತದೆ ಇದು ಯಾವ ಶಾಪ ರೈತರ ಗೋಳು ವರು ಯಾರು ಇಲ್ಲ ಸರ್ಕಾರವೇ ಕಣ್ಣು ಮುಚ್ಚಿ ಕುಂತಿದೆ ಜನ ಆಕ್ರೋಶ
    user_Ramesh Vishwakarma
    Ramesh Vishwakarma
    Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
    1 hr ago
  • YADGIR NEWS||ನೀರು ಬೇಕಾಗಿದೆ, ನೀರು ಬಿಡಿ||ಅನ್ನದಾತರ ಭಜನೆ ಮುಖಾಂತರ|| ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಹೋರಾಟ..! ಯಾದಗಿರಿ: ರಾಜ್ಯದಲ್ಲಿ ಆವರಿಸಿರುವ ಭೀಕರ ಬರದ ಹಿನ್ನೆಲೆಯಲ್ಲಿ ಬತ್ತಿಹೋದ ಕೆರೆಗಳಿಗೆ ನೀರು ಹರಿಸಿ ಭರ್ತಿ ಮಾಡುವಂತೆ ಆಗ್ರಹಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಹೋರಾಟ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಂಬಲದೊಂದಿಗೆ ನಡೆದ ಪ್ರತಿಭಟನೆಯಲ್ಲಿ ರೈತರು ಭಜನೆ ಮಾಡುವ ಮೂಲಕ ವಿನೂತನವಾಗಿ ಆಕ್ರೋಶ ವ್ಯಕ್ತಪಡಿಸಿದರು. ಬದ್ದೆಪಲ್ಲಿ ಹಾಗೂ ಮಲ್ಕಪನಳ್ಳಿ ಕೆರೆಗಳಿಗೆ ಏತ ನೀರಾವರಿ ಯೋಜನೆಯ ಮೂಲಕ ನೀರು ಹರಿಸಿ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು. ಕೆಬಿಜೆಎನ್‌ಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆಗಳು ಸಮರ್ಪಕವಾಗಿ ತುಂಬಿಲ್ಲ ಎಂದು ಆರೋಪಿಸಿದರು. ಮಳೆ ಕೈಕೊಟ್ಟ ಪರಿಣಾಮ ಕೆರೆಗಳು ಸಂಪೂರ್ಣ ಬತ್ತಿಹೋಗಿದ್ದು, ಕೆರೆ ನೀರನ್ನು ನಂಬಿ ಬೆಳೆ ಹಾಕಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ಹಾಗೂ ಜಾನುವಾರುಗಳಿಗಾಗಿ ತಕ್ಷಣ ನೀರು ಹರಿಸಬೇಕು ಎಂದು ಆಗ್ರಹಿಸಿದ ರೈತರು, “ನೀರು ಬೇಕಾಗಿದೆ, ನೀರು ಬಿಡಿ” ಎಂದು ಭಜನೆ ಮಾಡಿ ಪ್ರತಿಭಟಿಸಿದರು. ಕೆರೆಗಳು ತುಂಬುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು.
    1
    YADGIR NEWS||ನೀರು ಬೇಕಾಗಿದೆ, ನೀರು ಬಿಡಿ||ಅನ್ನದಾತರ ಭಜನೆ ಮುಖಾಂತರ|| ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಹೋರಾಟ..!
ಯಾದಗಿರಿ: ರಾಜ್ಯದಲ್ಲಿ ಆವರಿಸಿರುವ ಭೀಕರ ಬರದ ಹಿನ್ನೆಲೆಯಲ್ಲಿ ಬತ್ತಿಹೋದ ಕೆರೆಗಳಿಗೆ ನೀರು ಹರಿಸಿ ಭರ್ತಿ ಮಾಡುವಂತೆ ಆಗ್ರಹಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಹೋರಾಟ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಂಬಲದೊಂದಿಗೆ ನಡೆದ ಪ್ರತಿಭಟನೆಯಲ್ಲಿ ರೈತರು ಭಜನೆ ಮಾಡುವ ಮೂಲಕ ವಿನೂತನವಾಗಿ ಆಕ್ರೋಶ ವ್ಯಕ್ತಪಡಿಸಿದರು. ಬದ್ದೆಪಲ್ಲಿ ಹಾಗೂ ಮಲ್ಕಪನಳ್ಳಿ ಕೆರೆಗಳಿಗೆ ಏತ ನೀರಾವರಿ ಯೋಜನೆಯ ಮೂಲಕ ನೀರು ಹರಿಸಿ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು. ಕೆಬಿಜೆಎನ್‌ಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆಗಳು ಸಮರ್ಪಕವಾಗಿ ತುಂಬಿಲ್ಲ ಎಂದು ಆರೋಪಿಸಿದರು. ಮಳೆ ಕೈಕೊಟ್ಟ ಪರಿಣಾಮ ಕೆರೆಗಳು ಸಂಪೂರ್ಣ ಬತ್ತಿಹೋಗಿದ್ದು, ಕೆರೆ ನೀರನ್ನು ನಂಬಿ ಬೆಳೆ ಹಾಕಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ಹಾಗೂ ಜಾನುವಾರುಗಳಿಗಾಗಿ ತಕ್ಷಣ ನೀರು ಹರಿಸಬೇಕು ಎಂದು ಆಗ್ರಹಿಸಿದ ರೈತರು, “ನೀರು ಬೇಕಾಗಿದೆ, ನೀರು ಬಿಡಿ” ಎಂದು ಭಜನೆ ಮಾಡಿ ಪ್ರತಿಭಟಿಸಿದರು. ಕೆರೆಗಳು ತುಂಬುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು.
    user_ಪೃಥ್ವಿ ಮಾಧ್ಯಮ
    ಪೃಥ್ವಿ ಮಾಧ್ಯಮ
    Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
    1 hr ago
  • ಬಸವೇಶ್ವರನಗರದಲ್ಲಿ ಗೌರಿ ಗಣೇಶ ಹಬ್ಬ: ಶಾಸಕ ಆರ್. ಬಸನಗೌಡ ತುರುವಿಹಾಳರಿಂದ ಗಣೇಶ ದರ್ಶನ ಬಸವೇಶ್ವರನಗರದಲ್ಲಿ ಗೌರಿ ಗಣೇಶ ಹಬ್ಬ: ಶಾಸಕ ಆರ್. ಬಸನಗೌಡ ತುರುವಿಹಾಳರಿಂದ ಗಣೇಶ ದರ್ಶನ ಮಸ್ಕಿ: ಪಟ್ಟಣದ ಬಸವೇಶ್ವರನಗರದಲ್ಲಿ ಗೌರಿ ಗಣೇಶ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಸ್ಕಿ ಶಾಸಕ ಆರ್. ಬಸನಗೌಡ ತುರುವಿಹಾಳ ಅವರು ಗಣೇಶ ಮೂರ್ತಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಶಾಸಕ ಆರ್. ಬಸನಗೌಡ ತುರುವಿಹಾಳ ಅವರು, ಗೌರಿ ಗಣೇಶ ಹಬ್ಬವು ಜನರಲ್ಲಿ ಭಕ್ತಿ, ಸೌಹಾರ್ದತೆ ಹಾಗೂ ಒಗ್ಗಟ್ಟಿನ ಭಾವನೆ ಮೂಡಿಸುವ ಪ್ರಮುಖ ಹಬ್ಬವಾಗಿದೆ. ಎಲ್ಲರೂ ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಬೇಕು ಎಂದು ಹೇಳಿದರು. ಬಸವೇಶ್ವರನಗರದ ಗಣೇಶೋತ್ಸವ ಸಮಿತಿ ವತಿಯಿಂದ ಹಬ್ಬದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣೇಶನ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ಸ್ಥಳೀಯ ಮುಖಂಡರು, ಸಾರ್ವಜನಿಕರು ಹಾಗೂ ಭಕ್ತರು ಉಪಸ್ಥಿತರಿದ್ದರು.
    1
    ಬಸವೇಶ್ವರನಗರದಲ್ಲಿ ಗೌರಿ ಗಣೇಶ ಹಬ್ಬ: ಶಾಸಕ ಆರ್. ಬಸನಗೌಡ ತುರುವಿಹಾಳರಿಂದ ಗಣೇಶ ದರ್ಶನ
ಬಸವೇಶ್ವರನಗರದಲ್ಲಿ ಗೌರಿ ಗಣೇಶ ಹಬ್ಬ: ಶಾಸಕ ಆರ್. ಬಸನಗೌಡ ತುರುವಿಹಾಳರಿಂದ ಗಣೇಶ ದರ್ಶನ
ಮಸ್ಕಿ: ಪಟ್ಟಣದ ಬಸವೇಶ್ವರನಗರದಲ್ಲಿ ಗೌರಿ ಗಣೇಶ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಸ್ಕಿ ಶಾಸಕ ಆರ್. ಬಸನಗೌಡ ತುರುವಿಹಾಳ ಅವರು ಗಣೇಶ ಮೂರ್ತಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಶಾಸಕ ಆರ್. ಬಸನಗೌಡ ತುರುವಿಹಾಳ ಅವರು, ಗೌರಿ ಗಣೇಶ ಹಬ್ಬವು ಜನರಲ್ಲಿ ಭಕ್ತಿ, ಸೌಹಾರ್ದತೆ ಹಾಗೂ ಒಗ್ಗಟ್ಟಿನ ಭಾವನೆ ಮೂಡಿಸುವ ಪ್ರಮುಖ ಹಬ್ಬವಾಗಿದೆ. ಎಲ್ಲರೂ ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಬೇಕು ಎಂದು ಹೇಳಿದರು.
ಬಸವೇಶ್ವರನಗರದ ಗಣೇಶೋತ್ಸವ ಸಮಿತಿ ವತಿಯಿಂದ ಹಬ್ಬದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣೇಶನ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ಸ್ಥಳೀಯ ಮುಖಂಡರು, ಸಾರ್ವಜನಿಕರು ಹಾಗೂ ಭಕ್ತರು ಉಪಸ್ಥಿತರಿದ್ದರು.
    user_ಹನುಮೇಶ ನಾಯಕ್
    ಹನುಮೇಶ ನಾಯಕ್
    ಮಾಸ್ಕಿ, ರಾಯಚೂರು, ಕರ್ನಾಟಕ•
    12 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.