logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಚಿತ್ರದುರ್ಗದ ರಾಂಪುರದಲ್ಲಿ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಅಪ್ಪಳಿಸಿದ ಪರಿಣಾಮ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಬಸ್ ಚಾಲಕ ಮೊಹಮ್ಮದ್ ಮತ್ತು ಬಸ್‌ನಲ್ಲಿದ್ದ ಓರ್ವ ಪ್ರಯಾಣಿಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಈ ಅಪಘಾತದಲ್ಲಿ ಬಸ್‌ನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಸ್ಥಳೀಯರು, ಗಾಯಾಳುಗಳನ್ನು ತಕ್ಷಣವೇ ರಾಂಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1 hr ago
user_Suresh Belagere
Suresh Belagere
Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
1 hr ago

ಚಿತ್ರದುರ್ಗದ ರಾಂಪುರದಲ್ಲಿ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಅಪ್ಪಳಿಸಿದ ಪರಿಣಾಮ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಬಸ್ ಚಾಲಕ ಮೊಹಮ್ಮದ್ ಮತ್ತು ಬಸ್‌ನಲ್ಲಿದ್ದ ಓರ್ವ ಪ್ರಯಾಣಿಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಈ ಅಪಘಾತದಲ್ಲಿ ಬಸ್‌ನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಸ್ಥಳೀಯರು, ಗಾಯಾಳುಗಳನ್ನು ತಕ್ಷಣವೇ ರಾಂಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More news from ಕರ್ನಾಟಕ and nearby areas
  • ಕಾಂಕ್ರೀಟ್ ಜಂಗಲ್‌ನ ಯಾಂತ್ರಿಕ ಬದುಕಿನ ಮಧ್ಯೆ ಸಿಲುಕಿ ಧೂಳು, ವಾಹನಗಳ ಕರ್ಕಶ ಸದ್ದಿನಿಂದ ಬೇಸತ್ತಿರುವ ಚಿತ್ರದುರ್ಗದ ನಗರವಾಸಿಗಳಿಗೆ ಅಲ್ಲಿನ ನಗರ ಪ್ರಾಧಿಕಾರವು 'ಆರೋಗ್ಯ ಭಾಗ್ಯ' ಕಲ್ಪಿಸಿದೆ. ಜನರ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯನ್ನೇ ಪ್ರಧಾನ ಆಶಯವಾಗಿಟ್ಟುಕೊಂಡು ನಗರದ ಪ್ರಮುಖ ವಲಯಗಳಲ್ಲಿ ಅತ್ಯಾಧುನಿಕ ಉದ್ಯಾನವನಗಳನ್ನು (High-Tech Parks) ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಪಾರ್ಕ್‌ಗಳು ಕೇವಲ ಹಸಿರು ಗಿಡ-ಮರಗಳ ತಾಣವಾಗಿ ಉಳಿಯದೆ, ಸಾರ್ವಜನಿಕರಿಗೆ ಕೊಂಚ ನೆಮ್ಮದಿ ಮತ್ತು ಉಲ್ಲಾಸ ನೀಡುವ ನೆಚ್ಚಿನ ಆರೋಗ್ಯ ಕೇಂದ್ರಗಳಾಗಿ ಬದಲಾಗುತ್ತಿವೆ. ಪ್ರಾಧಿಕಾರವು ಜನರಿಲ್ಲದ ಯಾವುದೋ ಮೂಲೆಯಲ್ಲಿ ಪಾರ್ಕ್ ನಿರ್ಮಿಸುವ ಬದಲು, ನಿವಾಸಿಗಳಿಗೆ ತೀರಾ ಹತ್ತಿರವಾಗುವ ಹಾಗೂ ಸಂಜೆ ವೇಳೆ ಸುಲಭವಾಗಿ ಬಂದು ಹೋಗಬಹುದಾದ ಪ್ರಮುಖ ಬಡಾವಣೆಗಳ ಆಯಕಟ್ಟಿನ ಸ್ಥಳಗಳನ್ನು ಗುರುತಿಸಿ ಅಭಿವೃದ್ಧಿಪಡಿಸಿದೆ. ಇಲ್ಲಿ ಧೂಳು ಮತ್ತು ಕಿರಿಕಿರಿ ಮುಕ್ತ ಹೈಟೆಕ್ ವಾಕಿಂಗ್ ಪಾತ್, ಉಚಿತ ದೈಹಿಕ ಕಸರತ್ತಿಗೆ ಸುಸಜ್ಜಿತ 'ಓಪನ್ ಜಿಮ್', ಚಿಣ್ಣರ ಮನರಂಜನೆಗೆ ಬಣ್ಣ ಬಣ್ಣದ ಉಯ್ಯಾಲೆಗಳು ಹಾಗೂ ಹಿರಿಯ ನಾಗರಿಕರು ವಿಶ್ರಾಂತಿ ಪಡೆಯಲು ಆಕರ್ಷಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಜನನಿಬಿಡ ಪ್ರದೇಶಗಳ ಮಧ್ಯೆಯೇ ಇಂತಹ ಪ್ರಶಾಂತ ಹಸಿರು ದ್ವೀಪಗಳನ್ನು ನಿರ್ಮಿಸಿರುವುದು ನಗರವಾಸಿಗಳ ಸಂಜೆಯ ಹರಟೆ ಮತ್ತು ನಡಿಗೆಗೆ ಹೊಸ ಕಳೆಯನ್ನು ತಂದಿದೆ. ದುಬಾರಿ ಜಿಮ್‌ಗಳ ಶುಲ್ಕ ಭರಿಸಲು ಸಾಧ್ಯವಾಗದ ಮಧ್ಯಮ ವರ್ಗದ ಜನರಿಗೆ ಉದ್ಯಾನವನದಲ್ಲಿರುವ ಅತ್ಯಾಧುನಿಕ 'ಓಪನ್ ಜಿಮ್' ಉಪಕರಣಗಳು ವರದಾನವಾಗಿವೆ. ಬೆಳಿಗ್ಗೆ ಮತ್ತು ಸಂಜೆ ವೇಳೆ ಯುವಕ-ಯುವತಿಯರು ಹಾಗೂ ಹಿರಿಯ ನಾಗರಿಕರು ಪ್ರಕೃತಿಯ ಶುದ್ಧ ಗಾಳಿಯ ಮಧ್ಯೆ ಉಚಿತವಾಗಿ ವರ್ಕೌಟ್ ಮಾಡುತ್ತಿದ್ದಾರೆ. ಅಲ್ಲದೆ, ರಸ್ತೆ ಬದಿಯ ಧೂಳು ಮತ್ತು ವೇಗದ ವಾಹನಗಳ ಆತಂಕವಿಲ್ಲದೆ ಸುರಕ್ಷಿತವಾಗಿ ಹೆಜ್ಜೆ ಹಾಕಲು ಅನುಕೂಲಕರವಾದ ಪರಿಸರ ಸ್ನೇಹಿ ಹಾಗೂ ಉತ್ತಮ ಗ್ರಿಪ್ ಉಳ್ಳ 'ಹೈಟೆಕ್ ವಾಕಿಂಗ್ ಪಾತ್' ನಿರ್ಮಿಸಲಾಗಿದ್ದು, ಮಂಡಿ ನೋವಿನ ಸಮಸ್ಯೆ ಇರುವ ಹಿರಿಯರಿಗೂ ಸಹ ಇದು ನಿರಾಳತೆ ನೀಡಿದೆ.
    1
    ಕಾಂಕ್ರೀಟ್ ಜಂಗಲ್‌ನ ಯಾಂತ್ರಿಕ ಬದುಕಿನ ಮಧ್ಯೆ ಸಿಲುಕಿ ಧೂಳು, ವಾಹನಗಳ ಕರ್ಕಶ ಸದ್ದಿನಿಂದ ಬೇಸತ್ತಿರುವ ಚಿತ್ರದುರ್ಗದ ನಗರವಾಸಿಗಳಿಗೆ ಅಲ್ಲಿನ ನಗರ ಪ್ರಾಧಿಕಾರವು 'ಆರೋಗ್ಯ ಭಾಗ್ಯ' ಕಲ್ಪಿಸಿದೆ. ಜನರ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯನ್ನೇ ಪ್ರಧಾನ ಆಶಯವಾಗಿಟ್ಟುಕೊಂಡು ನಗರದ ಪ್ರಮುಖ ವಲಯಗಳಲ್ಲಿ ಅತ್ಯಾಧುನಿಕ ಉದ್ಯಾನವನಗಳನ್ನು (High-Tech Parks) ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಪಾರ್ಕ್‌ಗಳು ಕೇವಲ ಹಸಿರು ಗಿಡ-ಮರಗಳ ತಾಣವಾಗಿ ಉಳಿಯದೆ, ಸಾರ್ವಜನಿಕರಿಗೆ ಕೊಂಚ ನೆಮ್ಮದಿ ಮತ್ತು ಉಲ್ಲಾಸ ನೀಡುವ ನೆಚ್ಚಿನ ಆರೋಗ್ಯ ಕೇಂದ್ರಗಳಾಗಿ ಬದಲಾಗುತ್ತಿವೆ.

ಪ್ರಾಧಿಕಾರವು ಜನರಿಲ್ಲದ ಯಾವುದೋ ಮೂಲೆಯಲ್ಲಿ ಪಾರ್ಕ್ ನಿರ್ಮಿಸುವ ಬದಲು, ನಿವಾಸಿಗಳಿಗೆ ತೀರಾ ಹತ್ತಿರವಾಗುವ ಹಾಗೂ ಸಂಜೆ ವೇಳೆ ಸುಲಭವಾಗಿ ಬಂದು ಹೋಗಬಹುದಾದ ಪ್ರಮುಖ ಬಡಾವಣೆಗಳ ಆಯಕಟ್ಟಿನ ಸ್ಥಳಗಳನ್ನು ಗುರುತಿಸಿ ಅಭಿವೃದ್ಧಿಪಡಿಸಿದೆ. ಇಲ್ಲಿ ಧೂಳು ಮತ್ತು ಕಿರಿಕಿರಿ ಮುಕ್ತ ಹೈಟೆಕ್ ವಾಕಿಂಗ್ ಪಾತ್, ಉಚಿತ ದೈಹಿಕ ಕಸರತ್ತಿಗೆ ಸುಸಜ್ಜಿತ 'ಓಪನ್ ಜಿಮ್', ಚಿಣ್ಣರ ಮನರಂಜನೆಗೆ ಬಣ್ಣ ಬಣ್ಣದ ಉಯ್ಯಾಲೆಗಳು ಹಾಗೂ ಹಿರಿಯ ನಾಗರಿಕರು ವಿಶ್ರಾಂತಿ ಪಡೆಯಲು ಆಕರ್ಷಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಜನನಿಬಿಡ ಪ್ರದೇಶಗಳ ಮಧ್ಯೆಯೇ ಇಂತಹ ಪ್ರಶಾಂತ ಹಸಿರು ದ್ವೀಪಗಳನ್ನು ನಿರ್ಮಿಸಿರುವುದು ನಗರವಾಸಿಗಳ ಸಂಜೆಯ ಹರಟೆ ಮತ್ತು ನಡಿಗೆಗೆ ಹೊಸ ಕಳೆಯನ್ನು ತಂದಿದೆ.

ದುಬಾರಿ ಜಿಮ್‌ಗಳ ಶುಲ್ಕ ಭರಿಸಲು ಸಾಧ್ಯವಾಗದ ಮಧ್ಯಮ ವರ್ಗದ ಜನರಿಗೆ ಉದ್ಯಾನವನದಲ್ಲಿರುವ ಅತ್ಯಾಧುನಿಕ 'ಓಪನ್ ಜಿಮ್' ಉಪಕರಣಗಳು ವರದಾನವಾಗಿವೆ. ಬೆಳಿಗ್ಗೆ ಮತ್ತು ಸಂಜೆ ವೇಳೆ ಯುವಕ-ಯುವತಿಯರು ಹಾಗೂ ಹಿರಿಯ ನಾಗರಿಕರು ಪ್ರಕೃತಿಯ ಶುದ್ಧ ಗಾಳಿಯ ಮಧ್ಯೆ ಉಚಿತವಾಗಿ ವರ್ಕೌಟ್ ಮಾಡುತ್ತಿದ್ದಾರೆ. ಅಲ್ಲದೆ, ರಸ್ತೆ ಬದಿಯ ಧೂಳು ಮತ್ತು ವೇಗದ ವಾಹನಗಳ ಆತಂಕವಿಲ್ಲದೆ ಸುರಕ್ಷಿತವಾಗಿ ಹೆಜ್ಜೆ ಹಾಕಲು ಅನುಕೂಲಕರವಾದ ಪರಿಸರ ಸ್ನೇಹಿ ಹಾಗೂ ಉತ್ತಮ ಗ್ರಿಪ್ ಉಳ್ಳ 'ಹೈಟೆಕ್ ವಾಕಿಂಗ್ ಪಾತ್' ನಿರ್ಮಿಸಲಾಗಿದ್ದು, ಮಂಡಿ ನೋವಿನ ಸಮಸ್ಯೆ ಇರುವ ಹಿರಿಯರಿಗೂ ಸಹ ಇದು ನಿರಾಳತೆ ನೀಡಿದೆ.
    user_Nagesh BR Durgavara
    Nagesh BR Durgavara
    Local News Reporter ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    55 min ago
  • ಚಿತ್ರದುರ್ಗದ ಹಿರಿಯ ರಾಜಕಾರಣಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯರಾದ ಹೆಚ್. ಹನುಮಂತಪ್ಪ ಅವರು ನಿನ್ನೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಾಜಿ ರಾಜ್ಯಸಭಾ ಸಂಸದರಾಗಿದ್ದ ಅವರು, ಶ್ರೀ ಎಸ್. ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ (ರಿ) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಮೃತರ ಅಂತ್ಯಕ್ರಿಯೆಯನ್ನು ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಸದ್ಯ ಹೊಳಲ್ಕೆರೆ ರಸ್ತೆಯ ನೆಹರು ನಗರದಲ್ಲಿರುವ ಮೃತರ ನಿವಾಸದ ಬಳಿ ಕುಟುಂಬಸ್ಥರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಜಮಾಯಿಸಿದ್ದು, ಅಂತಿಮ ದರ್ಶನ ಪಡೆಯುತ್ತಿದ್ದಾರೆ.
    1
    ಚಿತ್ರದುರ್ಗದ ಹಿರಿಯ ರಾಜಕಾರಣಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯರಾದ ಹೆಚ್. ಹನುಮಂತಪ್ಪ ಅವರು ನಿನ್ನೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಾಜಿ ರಾಜ್ಯಸಭಾ ಸಂಸದರಾಗಿದ್ದ ಅವರು, ಶ್ರೀ ಎಸ್. ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ (ರಿ) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು.

ಮೃತರ ಅಂತ್ಯಕ್ರಿಯೆಯನ್ನು ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಸದ್ಯ ಹೊಳಲ್ಕೆರೆ ರಸ್ತೆಯ ನೆಹರು ನಗರದಲ್ಲಿರುವ ಮೃತರ ನಿವಾಸದ ಬಳಿ ಕುಟುಂಬಸ್ಥರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಜಮಾಯಿಸಿದ್ದು, ಅಂತಿಮ ದರ್ಶನ ಪಡೆಯುತ್ತಿದ್ದಾರೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    1 hr ago
  • ಚಿತ್ರದುರ್ಗದ ಹಿರಿಯ ರಾಜಕಾರಣಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯರಾದ ಎಚ್. ಹನುಮಂತಪ್ಪ ಅವರು ನಿಧನರಾಗಿದ್ದಾರೆ. ಜನನಾಯಕ ಹನುಮಂತಪ್ಪ ಅವರ ಅಗಲಿಕೆ ರಾಜಕೀಯ ವಲಯಕ್ಕೆ ತೀವ್ರ ದುಃಖ ತಂದಿದ್ದು, ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ಅಂತಿಮ ನಮನಗಳನ್ನು ಸಲ್ಲಿಸಲಾಗುತ್ತಿದೆ.
    1
    ಚಿತ್ರದುರ್ಗದ ಹಿರಿಯ ರಾಜಕಾರಣಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯರಾದ ಎಚ್. ಹನುಮಂತಪ್ಪ ಅವರು ನಿಧನರಾಗಿದ್ದಾರೆ. ಜನನಾಯಕ ಹನುಮಂತಪ್ಪ ಅವರ ಅಗಲಿಕೆ ರಾಜಕೀಯ ವಲಯಕ್ಕೆ ತೀವ್ರ ದುಃಖ ತಂದಿದ್ದು, ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ಅಂತಿಮ ನಮನಗಳನ್ನು ಸಲ್ಲಿಸಲಾಗುತ್ತಿದೆ.
    user_Ctownnews16
    Ctownnews16
    Local News Reporter ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    10 hrs ago
  • ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಭದ್ರಾ ಮೇಲ್ದಂಡೆ ಯೋಜನೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂವಾದ ಕಾರ್ಯಕ್ರಮಕ್ಕೂ ಮುನ್ನ, ಕಲಾ ಸರಸ್ವತಿ ಗಾನಕೋಗಿಲೆ ಎಸ್ ಜಾನಕಿ ಅವರ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ, ಅಧಿಕಾರಿಗಳು, ರೈತ, ಕನ್ನಡ ಹಾಗೂ ಕಾರ್ಮಿಕ ಸಂಘಟನೆಗಳು ಮೌನಾಚರಣೆ ನಡೆಸುವ ಮೂಲಕ ತಮ್ಮ ಗೌರವವನ್ನು ಸೂಚಿಸಿದರು.
    1
    ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಭದ್ರಾ ಮೇಲ್ದಂಡೆ ಯೋಜನೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂವಾದ ಕಾರ್ಯಕ್ರಮಕ್ಕೂ ಮುನ್ನ, ಕಲಾ ಸರಸ್ವತಿ ಗಾನಕೋಗಿಲೆ ಎಸ್ ಜಾನಕಿ ಅವರ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ, ಅಧಿಕಾರಿಗಳು, ರೈತ, ಕನ್ನಡ ಹಾಗೂ ಕಾರ್ಮಿಕ ಸಂಘಟನೆಗಳು ಮೌನಾಚರಣೆ ನಡೆಸುವ ಮೂಲಕ ತಮ್ಮ ಗೌರವವನ್ನು ಸೂಚಿಸಿದರು.
    user_Kumara Swamy
    Kumara Swamy
    ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    23 hrs ago
  • ಬರಗಾಲದ ಹಣೆಪಟ್ಟಿ ಹೊತ್ತು, ಕೇವಲ ಮಳೆಯನ್ನೇ ನೆಚ್ಚಿಕೊಂಡಿರುವ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಈ ಬಾರಿಯೂ ಮತ್ತೆ ಬರಗಾಲ ಒಕ್ಕರಿಸಿಕೊಂಡಿದೆ. ಮುಂಗಾರು ಮಳೆಯ ವೈಫಲ್ಯದಿಂದಾಗಿ ಗ್ರಾಮೀಣ ಭಾಗದಲ್ಲಿ ಸೂರ್ಯಕಾಂತಿ ಹಾಗೂ ರಾಗಿ ಬೆಳೆಗಳು ಸಂಪೂರ್ಣವಾಗಿ ಒಣಗುತ್ತಿದ್ದು, ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ತಾಲೂಕಿನ ರೈತರು ತೀವ್ರ ಕಂಗಾಲಾಗಿದ್ದಾರೆ. ಮಳೆಯ ಕೊರತೆಯಿಂದಾಗಿ ಈಗಾಗಲೇ ಬಿತ್ತನೆಯಾಗಿರುವ ಬೆಳೆಗಳು ತೀವ್ರ ಬಿಸಿಲಿಗೆ ಒಣಗಿ ಹೋಗುತ್ತಿವೆ. ತಾಲೂಕಿನ ಕಾನ ಹೊಸಳ್ಳಿ ಹೋಬಳಿಯಲ್ಲಿ ಅಲ್ಪಸ್ವಲ್ಪ ಬಿದ್ದ ಮಳೆಗೆ ಸೂರ್ಯಕಾಂತಿ ಮತ್ತು ಶೇಂಗಾ ಬಿತ್ತನೆ ಮಾಡಲಾಗಿದ್ದರೂ, ಬೆಳೆ ಉಳಿಸಿಕೊಳ್ಳಲು ರೈತರು ಪ್ರತಿದಿನ ಆಕಾಶದ ಕಡೆಗೆ ಮುಖ ಮಾಡಿ ಕಾಯುವಂತಾಗಿದೆ. ಇತ್ತ ಗುಡೇಕೋಟೆ ಹೊಸಳ್ಳಿ ಹೋಬಳಿಯ ಪ್ರಮುಖ ಬೆಳೆಯಾದ ಶೇಂಗಾವನ್ನು ಬಿತ್ತನೆ ಮಾಡಲಾಗದ ಸ್ಥಿತಿಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವರುಣನ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರ ಕನಸುಗಳೆಲ್ಲ ನುಚ್ಚುನೂರಾಗಿದ್ದು, ರಾಜ್ಯ ಸರ್ಕಾರ ತಕ್ಷಣವೇ ತಾಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಿ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
    1
    ಬರಗಾಲದ ಹಣೆಪಟ್ಟಿ ಹೊತ್ತು, ಕೇವಲ ಮಳೆಯನ್ನೇ ನೆಚ್ಚಿಕೊಂಡಿರುವ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಈ ಬಾರಿಯೂ ಮತ್ತೆ ಬರಗಾಲ ಒಕ್ಕರಿಸಿಕೊಂಡಿದೆ. ಮುಂಗಾರು ಮಳೆಯ ವೈಫಲ್ಯದಿಂದಾಗಿ ಗ್ರಾಮೀಣ ಭಾಗದಲ್ಲಿ ಸೂರ್ಯಕಾಂತಿ ಹಾಗೂ ರಾಗಿ ಬೆಳೆಗಳು ಸಂಪೂರ್ಣವಾಗಿ ಒಣಗುತ್ತಿದ್ದು, ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ತಾಲೂಕಿನ ರೈತರು ತೀವ್ರ ಕಂಗಾಲಾಗಿದ್ದಾರೆ. ಮಳೆಯ ಕೊರತೆಯಿಂದಾಗಿ ಈಗಾಗಲೇ ಬಿತ್ತನೆಯಾಗಿರುವ ಬೆಳೆಗಳು ತೀವ್ರ ಬಿಸಿಲಿಗೆ ಒಣಗಿ ಹೋಗುತ್ತಿವೆ.

ತಾಲೂಕಿನ ಕಾನ ಹೊಸಳ್ಳಿ ಹೋಬಳಿಯಲ್ಲಿ ಅಲ್ಪಸ್ವಲ್ಪ ಬಿದ್ದ ಮಳೆಗೆ ಸೂರ್ಯಕಾಂತಿ ಮತ್ತು ಶೇಂಗಾ ಬಿತ್ತನೆ ಮಾಡಲಾಗಿದ್ದರೂ, ಬೆಳೆ ಉಳಿಸಿಕೊಳ್ಳಲು ರೈತರು ಪ್ರತಿದಿನ ಆಕಾಶದ ಕಡೆಗೆ ಮುಖ ಮಾಡಿ ಕಾಯುವಂತಾಗಿದೆ. ಇತ್ತ ಗುಡೇಕೋಟೆ ಹೊಸಳ್ಳಿ ಹೋಬಳಿಯ ಪ್ರಮುಖ ಬೆಳೆಯಾದ ಶೇಂಗಾವನ್ನು ಬಿತ್ತನೆ ಮಾಡಲಾಗದ ಸ್ಥಿತಿಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವರುಣನ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರ ಕನಸುಗಳೆಲ್ಲ ನುಚ್ಚುನೂರಾಗಿದ್ದು, ರಾಜ್ಯ ಸರ್ಕಾರ ತಕ್ಷಣವೇ ತಾಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಿ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
    user_ರಾಜಶೇಖರ್ GT
    ರಾಜಶೇಖರ್ GT
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    15 min ago
  • ಕೂಡ್ಲಿಗಿ ತಾಲೂಕಿನಲ್ಲಿ ಸೋಲಾರ್ ವಿಂಡೋ ಪವರ್ ಕಂಪನಿಗಳ ಹಾವಳಿ ಮಿತಿ ಮೀರಿದ್ದು, ಬಹುತೇಕ ಕಂಪನಿಗಳಿಂದ ಸರ್ಕಾರಕ್ಕೆ ಹಾಗೂ ಸ್ಥಳೀಯ ಆಡಳಿತಕ್ಕೆ ಕೋಟಿ ಕೋಟಿ ತೆರಿಗೆ ಹಣ ವಂಚನೆಯಾಗುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಜಿಲ್ಲಾಡಳಿತ, ಲೋಕಾಯುಕ್ತ ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಇಲಾಖೆಗಳಿಂದ ಸೂಕ್ತ ತನಿಖೆಯಾಗಬೇಕೆಂದು ಪ್ರವಾಸಿಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹೋರಾಟಗಾರರು ಆಗ್ರಹಿಸಿದ್ದಾರೆ. ಈ ವಿಷಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಕ್ಷೇತ್ರದಲ್ಲಿ ಅನೇಕ ಕಂಪನಿಗಳು ಅನಧಿಕೃತವಾಗಿ ತಲೆ ಎತ್ತಿದ್ದು, ಕಾನೂನು ನಿಯಮಗಳನ್ನು ಗಾಳಿಗೆ ತೂರಿ ನೂರಾರು ರೈತರಿಗೆ ಅನ್ಯಾಯ ಎಸಗಿವೆ. ಈ ಹಗರಣದಲ್ಲಿ ಅನೇಕ ಸ್ಥಳೀಯ ಆಡಳಿತದ ಅಧಿಕಾರಿಗಳು, ತಾಲೂಕಾಡಳಿತದ ಅಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ತಿನ್ನಬಾರದ ಹೇಸಿಗೆ ತಿಂದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಹೋರಾಟಗಾರರು ಗಂಭೀರ ಆರೋಪ ಮಾಡಿದ್ದಾರೆ. ರೈತರಿಗೆ ಅನ್ಯಾಯವಾಗುತ್ತಿದ್ದರೂ ತಾಲೂಕಾಡಳಿತ ಮೌನವಾಗಿರುವುದು ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ. ಆದ್ದರಿಂದ ಇಡಿ, ಲೋಕಾಯುಕ್ತ, ಸಿಬಿಐ, ಸಿಒಡಿ, ಎಸಿಬಿ ಮತ್ತು ಆದಾಯ ತೆರಿಗೆ ಇಲಾಖೆಗಳ ಉನ್ನತಾಧಿಕಾರಿಗಳು ಸ್ವಯಂ ದೂರು ದಾಖಲಿಸಿಕೊಂಡು, ಮೊದಲು ತಹಶೀಲ್ದಾರರು ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳ ಆದಾಯದ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ. ಒಂದು ವೇಳೆ ತನಿಖೆ ನಡೆಸದಿದ್ದರೆ ಅಗತ್ಯ ಸಾಕ್ಷ್ಯಾಧಾರಗಳ ಸಮೇತ ಕಾನೂನಾತ್ಮಕ ಹೋರಾಟ ನಡೆಸುವುದರ ಜೊತೆಗೆ ಎಲ್ಲಾ ಮಾಧ್ಯಮಗಳ ಹಾಗೂ ಪತ್ರಿಕೆಗಳ ಕೇಂದ್ರ ಕಚೇರಿಗಳಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಲಾಗಿದೆ. ಈ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ಹಾಗೂ ಸಾಮಾಜಿಕ ಹೋರಾಟಗಾರ ದಲಿತ ಮುಖಂಡ ಸಂತೋಷಕುಮಾರ, ವಕೀಲ ಹಾಗೂ ಹೋರಾಟಗಾರ ಸೂಲದಳ್ಳಿ ಬಸವರಾಜಪ್ಪ, ರೈತ ಸಂಘದ ಯುವ ಮುಖಂಡ ಬಾಣದ ಮಾರುತಿ ಮತ್ತು ವಿವಿಧ ಗ್ರಾಮಗಳ ಹೋರಾಟಗಾರರು, ರೈತರು ಉಪಸ್ಥಿತರಿದ್ದರು.
    1
    ಕೂಡ್ಲಿಗಿ ತಾಲೂಕಿನಲ್ಲಿ ಸೋಲಾರ್ ವಿಂಡೋ ಪವರ್ ಕಂಪನಿಗಳ ಹಾವಳಿ ಮಿತಿ ಮೀರಿದ್ದು, ಬಹುತೇಕ ಕಂಪನಿಗಳಿಂದ ಸರ್ಕಾರಕ್ಕೆ ಹಾಗೂ ಸ್ಥಳೀಯ ಆಡಳಿತಕ್ಕೆ ಕೋಟಿ ಕೋಟಿ ತೆರಿಗೆ ಹಣ ವಂಚನೆಯಾಗುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಜಿಲ್ಲಾಡಳಿತ, ಲೋಕಾಯುಕ್ತ ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಇಲಾಖೆಗಳಿಂದ ಸೂಕ್ತ ತನಿಖೆಯಾಗಬೇಕೆಂದು ಪ್ರವಾಸಿಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹೋರಾಟಗಾರರು ಆಗ್ರಹಿಸಿದ್ದಾರೆ. ಈ ವಿಷಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕ್ಷೇತ್ರದಲ್ಲಿ ಅನೇಕ ಕಂಪನಿಗಳು ಅನಧಿಕೃತವಾಗಿ ತಲೆ ಎತ್ತಿದ್ದು, ಕಾನೂನು ನಿಯಮಗಳನ್ನು ಗಾಳಿಗೆ ತೂರಿ ನೂರಾರು ರೈತರಿಗೆ ಅನ್ಯಾಯ ಎಸಗಿವೆ. ಈ ಹಗರಣದಲ್ಲಿ ಅನೇಕ ಸ್ಥಳೀಯ ಆಡಳಿತದ ಅಧಿಕಾರಿಗಳು, ತಾಲೂಕಾಡಳಿತದ ಅಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ತಿನ್ನಬಾರದ ಹೇಸಿಗೆ ತಿಂದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಹೋರಾಟಗಾರರು ಗಂಭೀರ ಆರೋಪ ಮಾಡಿದ್ದಾರೆ. ರೈತರಿಗೆ ಅನ್ಯಾಯವಾಗುತ್ತಿದ್ದರೂ ತಾಲೂಕಾಡಳಿತ ಮೌನವಾಗಿರುವುದು ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ. ಆದ್ದರಿಂದ ಇಡಿ, ಲೋಕಾಯುಕ್ತ, ಸಿಬಿಐ, ಸಿಒಡಿ, ಎಸಿಬಿ ಮತ್ತು ಆದಾಯ ತೆರಿಗೆ ಇಲಾಖೆಗಳ ಉನ್ನತಾಧಿಕಾರಿಗಳು ಸ್ವಯಂ ದೂರು ದಾಖಲಿಸಿಕೊಂಡು, ಮೊದಲು ತಹಶೀಲ್ದಾರರು ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳ ಆದಾಯದ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.

ಒಂದು ವೇಳೆ ತನಿಖೆ ನಡೆಸದಿದ್ದರೆ ಅಗತ್ಯ ಸಾಕ್ಷ್ಯಾಧಾರಗಳ ಸಮೇತ ಕಾನೂನಾತ್ಮಕ ಹೋರಾಟ ನಡೆಸುವುದರ ಜೊತೆಗೆ ಎಲ್ಲಾ ಮಾಧ್ಯಮಗಳ ಹಾಗೂ ಪತ್ರಿಕೆಗಳ ಕೇಂದ್ರ ಕಚೇರಿಗಳಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಲಾಗಿದೆ. ಈ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ಹಾಗೂ ಸಾಮಾಜಿಕ ಹೋರಾಟಗಾರ ದಲಿತ ಮುಖಂಡ ಸಂತೋಷಕುಮಾರ, ವಕೀಲ ಹಾಗೂ ಹೋರಾಟಗಾರ ಸೂಲದಳ್ಳಿ ಬಸವರಾಜಪ್ಪ, ರೈತ ಸಂಘದ ಯುವ ಮುಖಂಡ ಬಾಣದ ಮಾರುತಿ ಮತ್ತು ವಿವಿಧ ಗ್ರಾಮಗಳ ಹೋರಾಟಗಾರರು, ರೈತರು ಉಪಸ್ಥಿತರಿದ್ದರು.
    user_ಹೂಡೇಂ ಮಂಜುನಾಥ
    ಹೂಡೇಂ ಮಂಜುನಾಥ
    Local News Reporter ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    14 hrs ago
  • ಚಿತ್ರದುರ್ಗದ ರಾಂಪುರದಲ್ಲಿ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಅಪ್ಪಳಿಸಿದ ಪರಿಣಾಮ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಬಸ್ ಚಾಲಕ ಮೊಹಮ್ಮದ್ ಮತ್ತು ಬಸ್‌ನಲ್ಲಿದ್ದ ಓರ್ವ ಪ್ರಯಾಣಿಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಈ ಅಪಘಾತದಲ್ಲಿ ಬಸ್‌ನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಸ್ಥಳೀಯರು, ಗಾಯಾಳುಗಳನ್ನು ತಕ್ಷಣವೇ ರಾಂಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    1
    ಚಿತ್ರದುರ್ಗದ ರಾಂಪುರದಲ್ಲಿ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಅಪ್ಪಳಿಸಿದ ಪರಿಣಾಮ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಬಸ್ ಚಾಲಕ ಮೊಹಮ್ಮದ್ ಮತ್ತು ಬಸ್‌ನಲ್ಲಿದ್ದ ಓರ್ವ ಪ್ರಯಾಣಿಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಈ ಅಪಘಾತದಲ್ಲಿ ಬಸ್‌ನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಸ್ಥಳೀಯರು, ಗಾಯಾಳುಗಳನ್ನು ತಕ್ಷಣವೇ ರಾಂಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    1 hr ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.