ಶಿರಾಳಕೊಪ್ಪ. ಕನ್ನಡಪ್ರಭ ವರದಿಗಾರ ಬಿ.ವಿ. ಶೇಷಗಿರಿ ನಿಧನ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಶಿಕಾರಿಪುರ ತಾಲೂಕು ಘಟಕ ಸಂತಾಪ ಸೂಚಿಸಿದೆ. ಶಿರಾಳಕೊಪ್ಪ: ಶಿರಾಳಕೊಪ್ಪದ ಕನ್ನಡಪ್ರಭ ಪತ್ರಿಕೆಯ ವರದಿಗಾರರಾದ ಬಿ.ವಿ. ಶೇಷಗಿರಿ (69) ಅವರು ಅನಾರೋಗ್ಯದಿಂದ ಶುಕ್ರವಾರ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸುಮಾರು 40 ವರ್ಷಗಳ ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದ ಶೇಷಗಿರಿಯವರು ಪತ್ರಿಕಾ ಸಂಘದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಅಲ್ಲದೆ, ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ರೈತಪರ ಹೋರಾಟಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡು, ರೈತರ ಪರವಾಗಿ ಧ್ವನಿ ಎತ್ತಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು, ಬ್ರಾಹ್ಮಣ ಸಮಾಜದ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಮೃತರ ಅಂತ್ಯಕ್ರಿಯೆಯು ಶನಿವಾರ ಬೆಳಿಗ್ಗೆ ಶಿರಾಳಕೊಪ್ಪ ಪಟ್ಟಣದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಶಿಕಾರಿಪುರ ತಾಲೂಕು ಘಟಕ ಸಂತಾಪ ಸೂಚಿಸಿದೆ.
ಶಿರಾಳಕೊಪ್ಪ. ಕನ್ನಡಪ್ರಭ ವರದಿಗಾರ ಬಿ.ವಿ. ಶೇಷಗಿರಿ ನಿಧನ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಶಿಕಾರಿಪುರ ತಾಲೂಕು ಘಟಕ ಸಂತಾಪ ಸೂಚಿಸಿದೆ. ಶಿರಾಳಕೊಪ್ಪ: ಶಿರಾಳಕೊಪ್ಪದ ಕನ್ನಡಪ್ರಭ ಪತ್ರಿಕೆಯ ವರದಿಗಾರರಾದ ಬಿ.ವಿ. ಶೇಷಗಿರಿ (69) ಅವರು ಅನಾರೋಗ್ಯದಿಂದ ಶುಕ್ರವಾರ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು
ಪುತ್ರಿಯರನ್ನು ಅಗಲಿದ್ದಾರೆ. ಸುಮಾರು 40 ವರ್ಷಗಳ ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದ ಶೇಷಗಿರಿಯವರು ಪತ್ರಿಕಾ ಸಂಘದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಅಲ್ಲದೆ, ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ರೈತಪರ ಹೋರಾಟಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡು, ರೈತರ ಪರವಾಗಿ ಧ್ವನಿ ಎತ್ತಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ
ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು, ಬ್ರಾಹ್ಮಣ ಸಮಾಜದ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಮೃತರ ಅಂತ್ಯಕ್ರಿಯೆಯು ಶನಿವಾರ ಬೆಳಿಗ್ಗೆ ಶಿರಾಳಕೊಪ್ಪ ಪಟ್ಟಣದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಶಿಕಾರಿಪುರ ತಾಲೂಕು ಘಟಕ ಸಂತಾಪ ಸೂಚಿಸಿದೆ.
- ಈದ್ ಮಿಲಾದ್ ಪ್ರಯುಕ್ತ ಸೂಳೆಬೈಲ್‌ನಲ್ಲಿ ಧಾರ್ಮಿಕ ಕಾರ್ಯಕ್ರಮ: ಮಕ್ಕಳಿಂದ ಕುರಾನ್ ಪಠಣ ಎ.ಪಿ.ಜೆ. ಅಬ್ದುಲ್ ಕಲಾಂ ನಗರದಲ್ಲಿ ಈದ್ ಮಿಲಾದ್ ಸಂಭ್ರಮ: ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಭಾಗಿ1
- ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಬಾಲಕಿಯರ ರಕ್ಷಾಬಂಧನದ ಆತ್ಮೀಯ ಹಾಗೂ ಸ್ಮರಣೀಯ ಕ್ಷಣಗಳು ಪ್ರಧಾನಿ ಮೋದಿಯವರೊಂದಿಗೆ ಬಾಲಕಿಯರ ರಕ್ಷಾಬಂಧನದ ಆತ್ಮೀಯ ಹಾಗೂ ಸ್ಮರಣೀಯ ಕ್ಷಣಗಳು1
- ಭದ್ರಾವತಿ : ಲಾಠಿ ಹಿಡಿಯುತ್ತಿದ್ದ ಕೈ ತುಂಬಾ ರಾಖಿಪ್ರಾಂಶುಪಾಲೆ ರೇಷ್ಮಾ ನೇತೃತ್ವದಲ್ಲಿ ಹಬ್ಬ ಆರಕ್ಷಕರ ಪಾದ ಸ್ಪರ್ಶಿಸುವ ಮೂಲಕ ಗೌರವ ನೀಡಿದ ಮಕ್ಕಳು ....... ಖಾಕಿ ಜತೆ ಟೈಮ್ಸ್ ಮಕ್ಕಳ ರಾಖಿ ... ಹೈಲೈಟ್ಸ್ * ,* ಪೆರೆಡೇ ಗ್ರೌಂಡ್ ನಲ್ಲಿ ರಕ್ಷಾ ಬಂಧನ *ಡಿವೈಎಸ್ಪಿ ರಾಥೋಡ್ ಗೆ ರಾಖಿ ಕಟ್ಟುವ ಮೂಲಕ ಚಾಲನೆ ..... ನಂದೀಶ್ ಭದ್ರಾವತಿ, ಶಿವಮೊಗ್ಗ ಅಲ್ಲಿ ಖಾಕಿ ಪಡೆ ನೆರೆದಿತ್ತು, ಪುಟ್ಟ ಮಕ್ಕಳು ತಾವೇ ತಯಾರಿಸಿದ ರಾಖಿ ಕಟ್ಟಿ, ಪಾದ ಸ್ಪರ್ಶಿಸುವ ಮೂಲಕ ರಕ್ಷಾ ಬಂಧನ ಆಚರಿಸಿದರು. ಹೌದು..ನಗರದ ಮಿಲ್ಟ್ರೀ ಕ್ಯಾಂಪನ್ ಮಕ್ಕಳ ಜತೆ ಟೈಮ್ಸ್ ಶಾಲೆಯ ಮಕ್ಕಳು ಪ್ರಾಶುಂಪಾಲೆ ರೇಷ್ಮಾ ನೇತೃತ್ವದಲ್ಲಿ ನೆರೆದಿದ್ದವರಿಗೆ ರಾಖಿ ಕಟ್ಟಿದರು. ಡಿವೈಎಸ್ಪಿ ಪ್ರಕಾಶ್ ರಾಥೋಡ್ ಗೆ ಟೈಮ್ಸ್ ಶಾಲೆ ಮುಖ್ಯ ಶಿಕ್ಷಕಿ ರೇಷ್ಮಾ ಆರತಿ ಎತ್ತಿ ರಾಖಿ ಕಟ್ಟುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು. ನಂತರ ಮಕ್ಕಳು ಇತರೆ ಸಿಬ್ಬಂದಿಗಳಿಗೆ ರಾಖಿ ಕಟ್ಟಿ ಆರ್ಶೀವಾದ ಪಡೆದರು. ಪ್ರಾಂಶುಪಾಲೆ ರೇಷ್ಮಾ ಮಾತನಾಡಿ, ರಾಖಿ ಹಬ್ಬ ವಿಶೇಷವಾದದ್ದು. ಇದು ಸಹೋದರಿಯರು ತಮ್ಮ ಸಹೋದರರಿಂದ ರಕ್ಷಣೆ ಬಯಸುವಂತಹ ಅರ್ಥಪೂರ್ಣವಾದ ದಿನ. ಪ್ರತಿ ದಿನ ಪೊಲೀಸರು ಹಾಗೂ ಯೋಧರು ಕರ್ತವ್ಯದಲ್ಲಿರುತ್ತಾರೆ. ಅವರು ಸಮಾಜದ ಹಾಗೂ ನಮ್ಮ ರಕ್ಷಣೆಗಾಗಿ ತ್ಯಾಗ ಮಾಡುತ್ತಾರೆ. ಎಂತಹ ಕಷ್ಟದ ಸನ್ನಿವೇಶದಲ್ಲಿಯೂ ಅವರು ರಕ್ಷಣೆ ನೀಡುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ರಾಖಿ ಕಟ್ಟಿ ಸಹೋದರಿಯ ಪ್ರೀತಿಯನ್ನು ವ್ಯಕ್ತಪಡಿಸಿದ್ದೇವೆ. ಆ ಮೂಲಕ ಕರ್ತವ್ಯವನ್ನೂ ನೆನಪಿಸಿದ್ದೇವೆ. ಸಾರ್ವಜನಿಕರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಡುವವರ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಳವಾದ ಗೌರವವನ್ನು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. "ನಮ್ಮ ಪೊಲೀಸ್ ಅಧಿಕಾರಿಗಳಿಗೆ ರಾಖಿಗಳನ್ನು ಕಟ್ಟುವ ಮೂಲಕ, ಪ್ರತಿದಿನ ನಮಗೆ ಗುರಾಣಿಯಾಗಿ ನಿಲ್ಲುವ, ತಮ್ಮ ಜೀವವನ್ನು ಪಣಕ್ಕಿಡುವ ನಮ್ಮ ಸಮಾಜದ ರಕ್ಷಕರನ್ನು ನಾವು ಗೌರವಿಸುತ್ತಿದ್ದೇವೆ" ಎಂದು ಅವರು ಹೇಳಿದರು. ಡಿವೈಎಸ್ಪಿ ರಾಥೋಡ್ ಮಾತನಾಡಿ, ಟೈಮ್ಸ್ ಶಾಲೆ ಮಕ್ಕಳು ಈ ರೀತಿ ರಕ್ಷಾ ಬಂಧನವನ್ನು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಸಹೋದರ ಸಹೋದರಿಯರ ನಡುವೆ ಇರುವ ಸಂಬಂಧವನ್ನು ಈ ಹಬ್ಬ ಗಟ್ಟಿಗೊಳಿಸುತ್ತದೆ. ಒಂದು ಬಂಧವನ್ನು ರಾಖಿ ಬೆಸೆಯುತ್ತದೆ. ನಾವು ಆರಕ್ಷಕರಾಗಿದ್ದು, ಸಮಾಜದ ಎಲ್ಲ ಸಹೋದರಿಯರ ರಕ್ಷಣೆಗೆ ಕಟಿಬದ್ದವಾಗಿದ್ದೇವೆ ಎಂದು ಹೇಳಿದರು. ಒಟ್ಟಿನಲ್ಲಿ ರಾಖಿ ಹಬ್ಬ ಪೊಲೀಸರೊಂದಿಗೆ ಅರ್ಥಪೂರ್ಣವಾಗಿ ನಡೆಯಿತು. ... ಬಾಕ್ಸ್ ಮಕ್ಕಳೇ ತಯಾರಿಸಿದ ರಾಖಿ ರಕ್ಷಾ ಬಂಧನದ ನಿಮಿತ್ತ ಮಕ್ಕಳೇ ಮನೆಯಲ್ಲಿ ರಾಖಿ ತಯಾರಿ ಮಾಡಿದ್ದರು. ಪುಟ್ಟ ಕೈಗಳಿಂದ ಮಾಡಿದ ರಾಖಿ ಆರಕ್ಷಕರ ಕೈ ಸೇರಿದಾಗ ಮಕ್ಕಳ ಸಂತೋಷಕ್ಕೆ ಪಾರವೇ ಇರಲಿಲ್ಲ..ಇನ್ನು ಆಕ್ಷಕರು ಮಕ್ಕಳಿಗೆ ಸಿಹಿ ತಿನಿಸುವ ಮೂಲಕ ಒಂದಿಷ್ಟು ಸಂತೋಷ ಪಟ್ಟರು. ... ಕಾಲಿಗೆ ಬಿದ್ದ ಮಕ್ಕಳು ಮೊದಲಿಗೆ ಪ್ರಾಂಶುಪಾಲೆ ರೇಷ್ಮಾ ಡಿವೈಎಸ್ಪಿ ಪ್ರಕಾಶ್ ರಾಥೋಡ್ ಗೆ ರಾಖಿ ಕಟ್ಟಿ, ಕಾಲಿಗೆ ಬಿದ್ದರು. ನಂತರ ಮಕ್ಕಳು ಕೂಡ ಪೊಲೀಸರ ಕಾಲಿಗೆ ನಮಸ್ಕರಿಸಿ ಆರ್ಶೀವಾದ ಪಡೆದರು. .... ಮಕ್ಕಳಿಂದ ತುಂಬಿದ ಪೆರೇಡ್ ಮೈದಾನ ಇಡೀ ಮೈದಾನ ಮಕ್ಕಳಿಂದ ತುಂಬಿತ್ತು.. ಆರಕ್ಷಕರು ಅವರನ್ನು ಎತ್ತಿಕೊಂಡು ಮುದ್ದಾಡಿದರು..ಚೆನ್ನಾಗಿ ಓದಬೇಕು, ನಮ್ಮ ಪೊಲೀಸ್ ಆಗಬೇಕೆಂದು ಹಿತನುಡಿಗಳನ್ನಾಡಿದರು. ಕೆಲವರು ಸೆಲ್ಫಿ ತೆಗೆಸಿಕೊಂಡು ತಮ್ಮ ಡಿಪಿಗೆ ಹಾಕಿಕೊಂಡರು. ... ಮಹಿಳಾ ಪೊಲೀಸ್ ಗೂ ರಾಖಿ ಕಟ್ಟಿದ ಮಕ್ಕಳು ಪೆರೆಡ್ ಮೈದಾನದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದ್ದರೂ, ಮಕ್ಕಳು ಅವರಿಗೂ ರಾಖಿ ಕಟ್ಟಿದರು. ಅವರು ಕೂಡ ಮಕ್ಕಳಿಗೆ ಆರ್ಶೀವಾದ ನೀಡಿದರು.1
- ರೈತರ ಧ್ವನಿ ಅಡಗುವುದಿಲ್ಲ… ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ! ಅಡಿಕೆ ಬೆಳೆಗಾರರ ನ್ಯಾಯಯುತ ಹೋರಾಟಕ್ಕೆ ನಮ್ಮ ಧ್ವನಿ ಇನ್ನಷ್ಟು ಗಟ್ಟಿಯಾಗಲಿ! ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಅಡಿಕೆ ಬೆಳೆಗಾರರ ಒಕ್ಕೂಟದ ವತಿಯಿಂದ ಅಡಿಕೆ ಬೆಳೆಗಾರರ ವಿವಿಧ ಬೇಡಿಕೆಗಳು, ಹೊನ್ನಾಳಿ–ನ್ಯಾಮತಿ ತಾಲ್ಲೂಕುಗಳ ಕೆರೆಗಳನ್ನು ತುಂಬಿಸುವ ಯೋಜನೆ ಹಾಗೂ ಭದ್ರಾ ಜಲಾಶಯದಿಂದ ಅಪ್ಪರ್ ಭದ್ರಾ ಯೋಜನೆಗೆ 3 ಟಿಎಂಸಿ ನೀರು ಬಿಡುವುದನ್ನು ಖಂಡಿಸಿ ಮೂರು ದಿನಗಳಿಂದ ಬೃಹತ್ ಪಾದಯಾತ್ರೆ ನಡೆಸಲಾಯಿತು. ಹೊನ್ನಾಳಿಯಿಂದ ಆರಂಭವಾದ ಈ ಪಾದಯಾತ್ರೆ ವಿವಿಧ ಗ್ರಾಮಗಳ ಮೂಲಕ ಸಾಗುತ್ತಾ, ರೈತರ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಇಂದು ದಾವಣಗೆರೆಗೆ ತಲುಪಿತು. ದಾವಣಗೆರೆ ಎಸಿ ಕಚೇರಿ ಎದುರು ಅಡಿಕೆ ಬೆಳೆಗಾರರ ಪ್ರತಿಭಟನಾ ಸಭೆ ನಡೆಸಲಾಯಿತು. ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ, ಹೊನ್ನಾಳಿ–ನ್ಯಾಮತಿ ತಾಲ್ಲೂಕುಗಳ ಕೆರೆಗಳಿಗೆ ನೀರು, ರೈತರ ಹಿತ ಕಾಪಾಡುವ ನೀರಾವರಿ ಯೋಜನೆಗಳು ಹಾಗೂ ಭದ್ರಾ ಜಲಾಶಯದ ನೀರಿನ ಸಮರ್ಪಕ ಬಳಕೆಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ರೈತರ ಧ್ವನಿ ಅಡಗುವುದಿಲ್ಲ… ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ!1
- ಜಗಳೂರು ತಾಲ್ಲೂಕು ಬರಪಟ್ಟಿಗೆ ಸೇರಿಸಿ :ಬಿಜೆಪಿಯಿಂದ ಪ್ರತಿಭಟಿಸಿ ತಹಶಿಲ್ದಾರರಿಗೆ ಮನವಿ. ಜಗಳೂರು ತಾಲ್ಲೂಕು ಬರಪಟ್ಟಿಗೆ ಸೇರಿಸಿ : ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಸರಕಾರಕ್ಕೆ ಆಗ್ರಹ. ಜಗಳೂರು ತಾಲ್ಲೂಕು ಅತೀ ಹಿಂದುಳಿದ ಪ್ರದೇಶವೆಂದು ಡಾ.ನಂಜುಡಪ್ಪ ಅವರ ವರಧಿಯಲ್ಲಿ ಇದೇ ಇದನ್ನು ಅರಿತಾದರೂ ಸರಕಾರದ ಅಧಿಕಾರಿಗಳು ಸ್ಥಳೀಯ ಶಾಸಕರು ಮೊದಲನೇ ಪಟ್ಟಿಯಲ್ಲಿ ಜಗಳೂರು ಬರ ಪೀಡಿತ ತಾಲ್ಲೂಕು ಎಂದು ಘೋಷಣೆ ಯಾಗಬೇಕಾಗಿತ್ತು ಎಂದು ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಶಾಸಕರಿಗೆ ಆಗ್ರಹ ಮಾಡಿದರು. ಜಗಳೂರು ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಹೋರಾಟ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಮತ್ತು ಸ್ಥಳೀಯ ಶಾಸಕರ ವಿರುದ್ಧವಾಗಿ ಹೇಳಿಕೆಗಳನ್ನು ಕೂಗೂತ್ತಾ ಸಾಗಿದ ಪ್ರತಿಭಟನೆಕಾರಾರು ಮಹಾತ್ಮಗಾಂಧಿ ವೃತ್ತದಿಂದ ರಸ್ತೆಯ ಮೂಲಕ ಸರಕಾರ ವಿರುದ್ಧ ಮತ್ತು ಸಚಿವರ ವಿರುದ್ಧ ಘೋಷಣೆಕೂಗಿದ ಕಾರ್ಯಕರ್ತರು ಮಹಾತ್ಮಗಾಂಧಿ ಬಸ್ ನಿಲ್ದಾಣದ ಹತ್ತಿರ ಟೈರಿಗೆ ಬೆಂಕಿ ಹಚ್ವಿ ಆಕ್ರೋಶವನ್ನು ವ್ಯಕ್ತಪಡಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಸಾಗಿದ ಪ್ರತಿಭಟನಾ ಮೆರವಣಿಗೆ ನೇರವಾಗಿತಹಶೀಲ್ದಾರ್ ಕಛೇರಿಗೆ ತೆರಳಿ ಸರಕಾರದ ವಿರುದ್ಧ ಕೆಲಕಾಲ ಘೋಷಣೆ ಕೂಗಿದರು. ಪ್ರತಿಭಟನೆಯನ್ನು ಉದ್ದೇಶಿ ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಮಾತನಾಡಿ ದಾವಣಗೆರೆ ಜಿಲ್ಲೆಯಲ್ಲಿ ಅತೀ ಹಿಂದುಳಿದ ತಾಲ್ಲೂಕು ಎಂದರೆ ಪ್ರಥಮವಾಗಿ ಜಗಳೂರು ತಾಲ್ಲೂಕಿಗೆ ಮೊದಲ ಆಧ್ಯತೆಯನ್ನು ನೀಡಬೇಕಾಗಿತ್ತು ಆದರೆ ಇಲ್ಲಿ ಅಧಿಕಾರಿಗಳ ಬೇಜವಬ್ದಾರಿ ತನವೊ ಅಥಾವ ಶಾಸಕರಿಗೆ ಮಾಹಿತಿಯಿಲ್ಲದಿರುವುದೊ ಗೊತ್ತಿಲ್ಲ ನಮ್ಮ ತಾಲ್ಲೂಕು ಪ್ರಥಮ ಪಟ್ಟಿಯಲ್ಲಿ ಕೈ ಬಿಟ್ಟು ಹೋಗಿರುವುದು ದುರಂತವೇ ಸರಿ ಎಂದು ಅವರು ಅಸಮಧಾನ ವ್ಯಕ್ತಪಡಿಸಿದರು. ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ ರಾಜ್ಯ ವಿರೋಧ ಪಕ್ಷದ ನಾಯಕರನ್ನು ಕರೆಯಿಸಿ ಬರ ಅಧ್ಯಾಯನ ಮಾಡಿಸಿ ಶಾಸಕರು ಮಾಡುವ ಕೆಲಸ ವಿರೋಧ ಪಕ್ಷದವರು ಮಾಡಿದ್ದೇವೆ ಅಧಿಕಾರಿಗಳು ವರಧಿ ಕೊಡುವ ಮುಂಚೆಯೇ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರಾಜ್ಯ ಸರಕಾರಕ್ಕೆ ವರದಿ ನೀಡಿದ್ದರು ಎಂದರು. ರೈತ ಮುಖಂಡ ಸಿದ್ಧಯ್ಯನಕೋಟೆ ಭೀಮಣ್ಣ ಮಾತನಾಡಿ ರೈತರ ಬಗ್ಗೆ ಕಾಳಜಿ ಇರದ ತಹಶಿಲ್ದಾರರು ತಿಂಗಳಿಗೊಮ್ಮೆ ಸರಕಾರದ ಸಭೆಗೆ ಹಾಜರಾಗುತ್ತಿರಲ್ಲ ಅಂದು ಜಗಳೂರು ತಾಲ್ಲೂಕು ಮಳೆ ಮತ್ತುಬೆಳೆಯ ಬಗ್ಗೆ ವಿವರಣೆ ನೀಡುವುದಿಲ್ಲವೇ ಎಂದು ತಹಶಿಲ್ದಾರರ್ ರವರನ್ನು ಪ್ರಶ್ನೆಮಾಡಿದರು. ನಿಮ್ಮ ಕೆಳ ಹಂತದ ಅಧಿಕಾರಿಗಳು ಮತ್ತು ವಿ.ಎ.ಗಳು ಮತ್ತು ತೋಟಗಾರಿಕೆ,ಕೃಷಿ ಇಲಾಖೆ ಹಾಗೂ ಇನ್ನಿತರೆ ಮಳೆ ಮಾಪನ ಕೇಂದ್ರದವರು ಮಾಹಿತಿಯನ್ನು ನೀಡುವುದಿಲ್ಲವೇ ಎಂದು ಹೇರು ಧ್ವನಿಯಲ್ಲಿ ಪ್ರಶ್ನೆಮಾಡಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಂಡಲ ಅಧ್ಯಕ್ಷ ಎ.ಎಂ.ಮರುಳರಾಧ್ಯ ಮಾತನಾಡಿ ರಾಜ್ಯ ಸರಕಾರ ನಿನ್ನೆ ಬಿಡುಗಡೆ ಮಾಡಿದ ಬರಪೀಡಿತ ತಾಲ್ಲೂಕುಗಳ ಪಟ್ಟಿಯನ್ನು ನೋಡಿ ನಮ್ಮ ತಾಲ್ಲೂಕು ಪ್ರಥಮ ಪಟ್ಟಿಯಲ್ಲು ಇಲ್ಲ ಎಂದು ಅಸಮಧಾನ ಗೊಂಡು ದೂರವಾಣಿ ಮೂಲಕ ಮಾನ್ಯಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದಾಗ ಜಗಳೂರು ತಾಲ್ಲೂಕು ಬರಪಟ್ಟಿಯಲ್ಲಿ ಇಲ್ಲ ಎಂದು ಪ್ರಶ್ನೆ ಮಾಡಿದೆ ? ಅದಕ್ಕೆ ಬಂದ ಉತ್ತರ ನಿಮ್ಮ ತಾಲ್ಲೂಕಿನಲ್ಲಿ ತೇವಾಂಶ ಹೆಚ್ಚಾಗಿ ಕಂಡು ಬಂದಿದೆ ಇದು ನಾವು ಮಾಡಿದ್ದಲ್ಲ ಸೆಟುಲೈಟ್ ಆಧಾರವಾಗಿಟ್ಟು ಕೊಂಡು ವರದಿಯನ್ನು ತಯಾರಿಸಲಾಗಿದೆ ಎಂಬ ಉತ್ತರವನ್ನು ನೀಡಿದರು. ಜಗಳೂರು ತಹಸೀಲ್ದಾರ್ ರವರಿಗೆ ವಿಚಾರಣೆ ಮಾಡಿದಾಗ ಅದೇ ಉತ್ತರ ಮುಂದುವರೆದಿದ್ದು ಇದಕ್ಕೆ ಬೇಸರಗೊಂಡ ನಾನು ನಮ್ಮ ತಾಲ್ಲೂಕಿನಲ್ಲಿ ಸೇವೆ ಮಾಡುವುದಕ್ಕೆ ಇಷ್ಟವಿಲ್ಲವೆಂದು ಬೇರೆಕಡೆ ಹೋಗಿ ಎಂದು ದೂರವಾಣಿಯಲ್ಲೇ ಉತ್ತರಿಸಿದೆ ಎಂದು. ಈ ಪ್ರತಿಭಟನೆಯಲ್ಲಿ ಬಿಜೆಪಿ ಯುವ ಮುಖಂಡ ಬಿಸ್ತುವಳ್ಳಿಬಾಬು, ಬಿದರಕೆರೆ ರವಿ, ಜೆ.ವಿ.ನಾಗರಾಜ್, ಮರೇನಹಳ್ಳಿ ಕಾರ್ತಿಕ್, ರಘ ಜಾಗ್ವಾರ್ , ಲ್ಯಾಬ್ ಶಿವು, ಸೇರಿದಂತೆ ವಿವಿಧ ಘಟಕದ ಅಧ್ಯಕ್ಷರು,ಉಪಾಧ್ಯಕ್ಷರು ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.2
- ಗ್ರಾಮೀಣ ಭಾಗದಲ್ಲಿ ಹಂದಿಗಳ ಕಾಟ,ರೈತರ ಬೆಳೆಗಳ ನಾಶ: ಗ್ರಾಮಸ್ಥರ ಆಕ್ರೋಶ ಕಲಘಟಗಿ: ಗ್ರಾಮೀಣ ಭಾಗದಲ್ಲಿ ಹಂದಿಗಳ ಕಾಟ ಹೆಚ್ಚುತ್ತಿದ್ದೂ ರೈತರ ಬೆಳೆಗಳ ನಾಶ ಹಾಗೂ ಗ್ರಾಮದ ಮನೆ ಸುತ್ತ ಮುತ್ತಲಿನ ಪ್ರದೇಶದ ಸ್ವಚ್ಛತೆಗೆ ಕಂಟಕ್ಕೆ ತಂದೊಡ್ದುತ್ತಿವೆ ಎಂದು ಹಂದಿಗಳ ಮಾಲಕರ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ. ತಾಲ್ಲೂಕಿನಆಸ್ತಕಟ್ಟಿ, ತಬಕದಹೊನ್ನಳ್ಳಿ, ಪರಸಾಪುರ, ಸೋಲಾರಗೊಪ್ಪ ಹಾಗೂ ಇನ್ನಿತರ ಗ್ರಾಮಗಳಲ್ಲಿ ಹಂದಿಗಳ ಹಾವಳಿಗೆ ಜನರು ತತ್ತರಿಸಿ ಹೋಗಿದ್ದು ಅವುಗಳ ತಡೆಗಟ್ಟುವಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಆರೋಗ್ಯದ ಮೇಲೆ ಪರಿಣಾಮ: ಗ್ರಾಮದ ಓಣಿಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಂದಿಗಳು ಗುಂಪು ಗುಂಪಾಗಿ ಬಂದು ಅಶುಚಿತ್ವ ಹರಡುತ್ತಿವೆ ಇದರಿಂದ ಜನರಿಗೆ ಡೆಂಗ್ಯೂ, ಮಲೇರಿಯಾ, ಸೊಳ್ಳೆಗಳ ಕಾಟದಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ರೈತರ ಬೆಳೆ ನಾಶ: ಗ್ರಾಮದ ಸುತ್ತಮುತ್ತಲಿನ ಜಮೀನುಗಳಿಗೆ ಹಂದಿಗಳು ರೈತರು ಬೆಳೆದ ಬೆಳೆಗಳಾದ ಮೆಕ್ಕೆಜೋಳ, ಕಬ್ಬು ಬೆಳೆಗೆ ನುಗ್ಗಿ ಹಾನಿ ಮಾಡುತ್ತಿದ್ದು ರೈತರಿಗೆ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ದೂರಿದರು. ಸಾರ್ವಜನಿಕರಿಗೆ ತೊಂದರೆ: ರಸ್ತೆಗಳಲ್ಲಿ ಹಂದಿಗಳು ಇದ್ದಕ್ಕಿದ್ದಂತೆ ಅಡ್ಡ ಬರುವುದರಿಂದ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಘಟನೆಗಳು ಜರುಗಿವೆ. ಮನೆಯ ಹಿತ್ತಲಿನ ಜಾನುವಾರಗಳ ಮೇವಿನ ಬಣವಿಗಳಿಗೆ ನುಗ್ಗಿ ಹಾನಿ ಮಾಡುತ್ತಿದ್ದರಿಂದ ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಅಳಲು ತೋಡಿಕೊಂಡರು. ಗ್ರಾಮ ಪಂಚಾಯತಿ ಅಧಿಕಾರಿಗಳು ಹಂದಿಗಳ ಮಾಲೀಕರಿಗೆ ನೋಟೀಸ್ ಜಾರಿ ಮಾಡಿ ನಿರ್ಲಕ್ಷ ಮಾಡಿದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಿ ಹಂದಿಗಳ ಹಾವಳಿ ತಪ್ಪಿಸಬೇಕು ಎಂದು ತಾಲ್ಲೂಕಿನ ಆಸ್ತಕಟ್ಟಿ ಗ್ರಾಮದ ಸಂತ ಸೇವಾಲಾಲ ಗ್ರಾಮ ವಿಕಾಸ ಸಮಿತಿ ಸದಸ್ಯರು ಒತ್ತಾಯಿಸಿದ್ದಾರೆ. "ಹಂದಿಗಳ ಹಾವಳಿಯಿಂದ ಗ್ರಾಮದ ರೈತರಾದ ನಾನಪ್ಪ ಲಮಾಣಿ ಹಾಗೂ ಭಿಮ್ಲಪ್ಪ ಲಮಾಣಿ ಅವರ ವರ್ಷಪೂರ್ತಿ ಶ್ರಮವಹಿಸಿ ಬೆಳೆದ ಕಬ್ಬು,ಮೆಕ್ಕೆಜೋಳ ಬೆಳೆಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದ್ದು ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ನೀಡಬೇಕು ಎಂದು ಆಸ್ತಕಟ್ಟಿ ಗ್ರಾಮದ ಸ್ವಗ್ರಾಮ ಮಿತ್ರರಾದ ಉಮ್ಮೆಶ ಲಮಾಣಿ ತಿಳಿಸಿದರು. " "ಎರಡು ತಿಂಗಳಿಂದ 20 ಕ್ಕೂ ಹೆಚ್ಚು ಹಂದಿಗಳು ಬಿಡುಬಿಟ್ಟು ಮನೆಯ ಹಿತ್ತಲಿನಲ್ಲಿ ಬೆಳೆದಿರುವ ತರಕಾರಿ ಕೈತೋಟ, ರೈತರ ಕಬ್ಬು,ಸೋಯಾಬಿನ್, ಮೆಕ್ಕೆಜೋಳ ಬೆಳೆಗಳಿಗೆ ನುಗ್ಗಿ ಹಾನಿ ಮಾಡುತ್ತಿದ್ದು ಹಂದಿಗಳ ತಡೆಗಟ್ಟಲ್ಲು ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದರು ಗಮನಹರಿಸುತ್ತಿಲ್ಲ ಎಂದು ತಾಲ್ಲೂಕಿನ ಪರಸಾಪುರ ಗ್ರಾಮದ ಸ್ವಗ್ರಾಮ ಮಿತ್ರರಾದ ರೇಣುಕಾ ಸುಬ್ಬಣ್ಣವರ ಒತ್ತಾಯಿಸಿದರು."1
- ಮೊಳಕಾಲ್ಮೂರು ಶಾಸಕರ ವಿರುದ್ಧ ಮಾಜಿ ಶಾಸಕ ನೇರಲಗುಂಟೆ ತಿಪ್ಪೇಸ್ವಾಮಿ ವಾಗ್ದಾಳಿ ಮೊಳಕಾಲ್ಮೂರು ಶಾಸಕರ ವಿರುದ್ಧ ಮಾಜಿ ಶಾಸಕ ನೇರಲಗುಂಟೆ ತಿಪ್ಪೇಸ್ವಾಮಿ ಹರಿಹಾಯ್ದಿದ್ದಾರೆ. ನಾಯಕನಹಟ್ಟಿ ಪಟ್ಟಣದಲ್ಲಿ ಅವರು ಮಾತನಾಡಿದ್ದು ನಾಯಕನಹಟ್ಟಿ ಸಂಡೂರು, ಮೊಳಕಾಲ್ಮೂರು ,ಕೂಡ್ಲಿಗಿ, ಬರಪಿಡಿತ ಪ್ರದೇಶವೆಂದು ಘೋಷಣೆ ಮಾಡಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಮೀಸಲಿಡಿ ಹಾಗೂ ಎಲ್ಲಾ ಕೆರೆಗಳಿಗೆ ನೀರು ತರುವಂತಹ ಕೆಲಸ ಕೆಲಸ ಮಾಡಿ ಹಾಗೂ ದನ ಕರೆಗಳಿಗೆ ಮೇವು ಕೊಡುವಂತ ಕೆಲಸ ಮಾಡಿ ಮಾಜಿ ಶಾಸಕ ತಿಪ್ಪೇಸ್ವಾಮಿ ಆಗ್ರಹಿಸಿದ್ದಾರೆ. ಜಿಲ್ಲೆಯಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ಬರಗಾಲ ಪ್ರದೇಶವೆಂದು ಘೋಷಣೆ ಮಾಡಬಹುದಾಗಿತ್ತಲ್ಲ ಯಾಕೆ ಬರಪಿಡಿತ ಪ್ರದೇಶ ಒಂದು ಘೋಷಣೆ ಮಾಡಲಿಲ್ಲ ಕಾಂಗ್ರೆಸ್ನವರು ಕ್ಷೇತ್ರವನ್ನು ಕಡೆಗಣಿಸಿದ್ದಾರೆ ಎಂದು ಆರೋಪ ಮಾಡಿದರು. ಮೊಳಕಾಲ್ಮೂರು ಶಾಸಕ ಗೋಪಾಲಕೃಷ್ಣರವರೆ ರಾಜ್ಯದಲ್ಲಿ ನಿಮ್ಮ ಸರ್ಕಾರ ಇದೆ ಯಲ್ಲ ಯಾಕೆ ಬರಗಾಲ ಪ್ರದೇಶವೆಂದು ಘೋಷಣೆ ಮಾಡಲಿಲ್ಲ. ಮೊಳಕಾಲ್ಮೂರು ಕ್ಷೇತ್ರವನ್ನು ಬರಪಿಡಿತ ಪ್ರದೇಶ ಒಂದು ಘೋಷಣೆ ಮಾಡದೆ ಹೋದರೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ಅತ್ಯಂತ ಹಿಂದುಳಿದಂತ ಕ್ಷೇತ್ರವಾಗಿದೆ ರೈತರು ತೀರ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸಾಲ ಮಾಡಿ ಬಿತ್ತನೆ ಮಾಡಿದ್ದಾರೆ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಇದರಿಂದ ರೈತರ ಆರ್ಥಿಕ ಪರಿಸ್ಥಿತಿ ಅದೇಗೆಟ್ಟಿದೆ ಬೆಳೆ ಕೈಗೆ ಸಿಗುವುದು ಅನುಮಾನವಾಗಿದ್ದು ಈ ಹಿನ್ನೆಲೆ ಶಾಸಕರು ಆದಷ್ಟು ಬೇಗ ತಾಲ್ಲೂಕನ್ನ ಬರಪೀಡಿತ ಎಂದು ಘೋಷಣೆ ಮಾಡುವಂತೆ ಆಗ್ರಹ ಮಾಡಿದ್ದಾರೆ.1
- ಹಿಡಿಯಲು ಹರಸಾಹಸ, ಆದರೂ ಕೈಗೆ ಸಿಗದ ಮಂಗ!..., .................. ಬೈಕ್ ಸವಾರನಿಗೆ ಕಚ್ಚಿದ್ದ ಮಂಗನ ಅಟ್ಟಹಾಸ: ಹಳೆ ಮಂಡ್ಲಿಯಲ್ಲಿ ಮುಂದುವರಿದ ಆತಂಕ1