ರೈತ ಬಾಂಧವರಿಗೆ ಮತ್ತಷ್ಟು ಗುಣಮಟ್ಟದ ಹಾಗೂ ಪಾರದರ್ಶಕ ಸೇವೆ ಒದಗಿಸುವುದೇ ನಮ್ಮ ಸಂಘದ ಮುಖ್ಯ ಗುರಿ ಸೊರಬ: ತಾಲೂಕಿನ ಸಮಸ್ತ ರೈತ ಬಾಂಧವರಿಗೆ ಮತ್ತಷ್ಟು ಗುಣಮಟ್ಟದ ಹಾಗೂ ಪಾರದರ್ಶಕ ಸೇವೆ ಒದಗಿಸುವುದೇ ನಮ್ಮ ಸಂಘದ ಮುಖ್ಯ ಧ್ಯೇಯ ಎಂದು ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರು ಕೆ. ವಿ. ಗೌಡ ಹೇಳಿದರು. ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ನವೀಕರಣಗೊಂಡ ಕಟ್ಟಡದ ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ಸಂಘದ ಸದಸ್ಯರು ಮತ್ತು ಆಡಳಿತ ಮಂಡಳಿ ಸಹಕಾರ ನಿಯಮಗಳಿಗೆ ಬದ್ಧರಾಗಿ ಶಿಸ್ತಿನಿಂದ ಮುನ್ನಡೆದಾಗ ಮಾತ್ರ ಸಂಸ್ಥೆಯು ಸರ್ವಾಂಗೀಣ ಪ್ರಗತಿ ಸಾಧಿಸಲು ಸಾಧ್ಯ ಎಂದರು. ಸಂಘದ ಉಪಾಧ್ಯಕ್ಷ ರವಿಕುಮಾರ್, ನಿರ್ದೇಶಕರುಗಳಾದ ಕೀರ್ತಿರಾಜ್, ಕಲ್ಲಂಬಿ ಹಿರಿಯಣ್ಣ, ಪಾಣಿ ಡಾಕಪ್ಪ, ಪ್ರಭಾಕರ್ ಸಿಗ್ಗ, ನಿರಂಜನ ಮೂರ್ತಿ, ರಾಜೇಂದ್ರ ನಾಯ್ಕ, ಮೋಹನ್ ಗೌಡ್ರು, ಸುರೇಶ್, ಚಿತ್ರಮ್ಮ, ಯಶೋದಮ್ಮ, ಕೊಟ್ರೇಶ್ ಗೌಡ, ಭೈರಪ್ಪ, ಮೋಹನ, ಸಂಘದ ಕಾರ್ಯದರ್ಶಿ ಕೃಷ್ಣಪ್ಪ, ವನಜಾಕ್ಷಮ್ಮ, ಕುಮಾರ್, ವಿವೇಕಾನಂದ ಇದ್ದರು.
ರೈತ ಬಾಂಧವರಿಗೆ ಮತ್ತಷ್ಟು ಗುಣಮಟ್ಟದ ಹಾಗೂ ಪಾರದರ್ಶಕ ಸೇವೆ ಒದಗಿಸುವುದೇ ನಮ್ಮ ಸಂಘದ ಮುಖ್ಯ ಗುರಿ ಸೊರಬ: ತಾಲೂಕಿನ ಸಮಸ್ತ ರೈತ ಬಾಂಧವರಿಗೆ ಮತ್ತಷ್ಟು ಗುಣಮಟ್ಟದ ಹಾಗೂ ಪಾರದರ್ಶಕ ಸೇವೆ ಒದಗಿಸುವುದೇ ನಮ್ಮ ಸಂಘದ ಮುಖ್ಯ ಧ್ಯೇಯ ಎಂದು ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರು ಕೆ. ವಿ. ಗೌಡ ಹೇಳಿದರು. ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ನವೀಕರಣಗೊಂಡ ಕಟ್ಟಡದ ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ಸಂಘದ ಸದಸ್ಯರು ಮತ್ತು ಆಡಳಿತ ಮಂಡಳಿ ಸಹಕಾರ ನಿಯಮಗಳಿಗೆ ಬದ್ಧರಾಗಿ ಶಿಸ್ತಿನಿಂದ ಮುನ್ನಡೆದಾಗ ಮಾತ್ರ ಸಂಸ್ಥೆಯು ಸರ್ವಾಂಗೀಣ ಪ್ರಗತಿ ಸಾಧಿಸಲು ಸಾಧ್ಯ ಎಂದರು. ಸಂಘದ ಉಪಾಧ್ಯಕ್ಷ ರವಿಕುಮಾರ್, ನಿರ್ದೇಶಕರುಗಳಾದ ಕೀರ್ತಿರಾಜ್, ಕಲ್ಲಂಬಿ ಹಿರಿಯಣ್ಣ, ಪಾಣಿ ಡಾಕಪ್ಪ, ಪ್ರಭಾಕರ್ ಸಿಗ್ಗ, ನಿರಂಜನ ಮೂರ್ತಿ, ರಾಜೇಂದ್ರ ನಾಯ್ಕ, ಮೋಹನ್ ಗೌಡ್ರು, ಸುರೇಶ್, ಚಿತ್ರಮ್ಮ, ಯಶೋದಮ್ಮ, ಕೊಟ್ರೇಶ್ ಗೌಡ, ಭೈರಪ್ಪ, ಮೋಹನ, ಸಂಘದ ಕಾರ್ಯದರ್ಶಿ ಕೃಷ್ಣಪ್ಪ, ವನಜಾಕ್ಷಮ್ಮ, ಕುಮಾರ್, ವಿವೇಕಾನಂದ ಇದ್ದರು.
- ಈದ್ ಮಿಲಾದ್‌ಗೆ ಶಿವಮೊಗ್ಗ ಸಜ್ಜು: ಹಸಿರು ಬಾವುಟಗಳಿಂದ ಕಂಗೊಳಿಸಿದ ನಗರ ಪ್ರವಾದಿ ಮೊಹಮ್ಮದ್ ಜನ್ಮದಿನಾಚರಣೆಗೆ ಶಿವಮೊಗ್ಗದಲ್ಲಿ ಭರ್ಜರಿ ಸಿದ್ಧತೆ1
- ಶಿಕಾರಿಪುರ .ನಗರದ ಮನೆ ಮನಗಳಲ್ಲಿ ನಡೆಯುವ 16ನೇ ವರ್ಷದ ಶ್ರಾವಣದಲ್ಲಿ ಶ್ರಾವಣನುಭಾವ ಕಾರ್ಯಕ್ರಮ ಶ್ರೀ ಮ. ನಿ. ಪ್ರ. ಚನ್ನಬಸವ ಸ್ವಾಮಿಗಳು. ಶಿಕಾರಿಪುರ ನಗರದ ಮನೆ ಮನಗಳಲ್ಲಿ ನಡೆಯುವ 16ನೇ ವರ್ಷದ ಶ್ರಾವಣದಲ್ಲಿ ಶ್ರಾವಣ ಭಾವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ನಡೆಯಲಿದ್ದು. ಸಾನಿಧ್ಯ. ಶ್ರೀ ಮ. ನಿ. ಪ್ರ. ಗುರುಬಸವ ಮಹಾಸ್ವಾಮಿಗಳು ವಿರಕ್ತಮಠ ಪಾಂಡೋಮಟ್ಟಿ . ನೇತೃತ್ವ.. ಶ್ರೀ ಮ.ನಿ.ಪ್ರ ಚನ್ನಬಸವ ಸ್ವಾಮಿಗಳು ವಿರಕ್ತಮಠ ಶಿಕಾರಿಪುರ. ಸಮ್ಮುಖ. ಶ್ರೀ ಮ. ನಿ .ಪ್ರ. ಮಹಾಂತ ಮಹಾಸ್ವಾಮಿಗಳು ತಿಪ್ಪಾಯಿ ಕೊಪ್ಪ . ಮಾತೆ ಶರಣಾಂಭಿಕೆಯವರು, ಬಸವಾಶ್ರಮ ಶಿಕಾರಿಪುರ, ಉದ್ಘಾಟನೆ. ಶ್ರೀಯುತ ಬಿ ವೈ ರಾಘವೇಂದ್ರ ಲೋಕಸಭಾ ಸದಸ್ಯರು ಶಿವಮೊಗ್ಗ . ಅಧ್ಯಕ್ಷತೆ . ಶ್ರೀಮತಿ ಕಮಲಾಬಾಯಿ ಕೃಷ್ಣ ಸಿಂಗ್ ಶಿಕಾರಿಪುರ , ಪ್ರಾಸ್ತಾವಿಕ ನುಡಿ, ಶ್ರೀ ಸುಭಾಷ್ ಚಂದ್ರ ಸ್ಥಾನಿಕ್ ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯೋಪಾಧ್ಯಾಯರು ಶಿವಮೊಗ್ಗ , ಮುಖ್ಯ ಅತಿಥಿಗಳು. ಶ್ರೀ ಡಿ.ಜಿ. ಶಾಂತನಗೌಡ್ರು ಮಾನ್ಯ ಶಾಸಕರು ಹೊನ್ನಾಳಿ ಶ್ರೀ ನಗರದ ಮಹದೇವಪ್ಪನವರು ಅಧ್ಯಕ್ಷರು ಕರ್ನಾಟಕ ಪ್ರದೇಶ ಕೃಷಿ ಸಮಾಜ ಬೆಂಗಳೂರು, ಶ್ರೀ ಕೆ.ಎಸ್ ಗುರುಮೂರ್ತಿ ಅವರು ಮಾಜಿ ಅಧ್ಯಕ್ಷರು ಎ0. ಎ. ಡಿ. ಬಿ . ಶಿವಮೊಗ್ಗ , ಶ್ರೀ ಬಿ.ಡಿ. ಭೂಕಾಂತ್ , ಸಹಕಾರ ರತ್ನ ಪುರಸ್ಕೃತರು, ನಿರ್ದೇಶಕರು ರಾಜ್ಯ ಪತ್ತಿನ ಸಹಕಾರ ಮಹಾಮಂಡಳ ನಿ.,ಬೆಂಗಳೂರು, ಹಾಗೂ ಹಲವಾರು ಗಣ್ಯರು ಭಕ್ತಾದಿಗಳು ಉಪಸ್ಥಿತರಿರುವರು.1
- ಗ್ರಾಮ ಪಂಚಾಯತಿ ಜಾಬ್ ಕಾರ್ಡ್ ಕೂಲಿ ಕಾರ್ಮಿಕರಿಂದ ಬೆಳಗೆರೆ ಕೆರೆ ಹಳ್ಳಗಳ ಪುನರ್ ಚೇತನ ಕಾಮಗಾರಿ. ಚಳ್ಳಕೆರೆ ತಾಲೂಕಿನ ಬೆಳೆಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಏಳು ಹಳ್ಳಿಗಳಲ್ಲಿರುವ 1545 ಉದ್ಯೋಗ ಖಾತ್ರಿ ಕಾರ್ಮಿಕರ ಅನುಕೂಲಕ್ಕಾಗಿ ಬಿವಿ ಜೀ ರಾಮ್ ಜೀ ಯೋಜನೆಯಡಿ ವೈಯಕ್ತಿಕ ಮತ್ತು ಸಮುದಾಯದ ಕಾಮಗಾರಿಗಳನ್ನು ಕೈಗೊಂಡು ಸ್ಥಳೀಯವಾಗಿ ಕೂಲಿ ಕೆಲಸ ನೀಡಲಾಗಿದೆ. ಸಮೀಪದ ಹುಲಿಕುಂಟೆ ಸರ್ಕಾರಿ ಗೋಮಾಳ ಭೂಮಿಯಲ್ಲಿ ಸುಮಾರು 10 ಲಕ್ಷ ವೆಚ್ಚದ ಸಮುದಾಯ ಕಾಮಗಾರಿ ಆರಂಭಿಸಲಾಗಿದೆ. ಪ್ರತಿ ದಿನ 109 ಜನ ಕೂಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಪಂಚಾಯತಿ ವ್ಯಾಪ್ತಿಯ ಬೆಳೆಗೆರೆ, ನಾರಾಯಣಪುರ, ರಂಗನಾಥಪುರ, ಕಲಮರಹಳ್ಳಿ, ಹುಲಿಕುಂಟೆ, ಭೋವಿ ಕಾಲನಿ, ಕ್ಯಾತನಮಾಳೆ ಸೇರಿದ ಹಳ್ಳಿಗಳಲ್ಲಿ ಒಟ್ಟು 1,545 ಕೂಲಿ ಕಾರ್ಮಿಕರಿಗೆ ಜಾಬ್ ಕಾರ್ಡುಗಳನ್ನು ವಿತರಿಸಲಾಗಿದೆ. ಪ್ರಸ್ತುತ ಜಾಬ್ ಕಾರ್ಡುಗಳನ್ನು ನವೀಕರಣ ಮಾಡಿಕೊಂಡು, ವಿಬಿ ರಾಮ್ ಜೀ ಯೋಜನೆಯ 318 ವಿವಿಧ ಕಾಮಗಾರಿಗಳಲ್ಲಿ ದನ,ಕುರಿ,ಮೆಕೆಗಳ ಶೆಡ್ ನಿರ್ಮಾಣ ಸೇರಿ ಕೃಷಿ ಹೊಂಡ ಮತ್ತು ವೈಯಕ್ತಿಕ ರೈತರ ಜಮೀನ ಅಭಿವೃದ್ಧಿ ಕಾಮಗಾರಿ ಹಾಗೂ ಕೆರೆ,ಹಳ್ಳಗಳ ಪುನರ್ ಚೇತನ ಕಾಮಗಾರಿಗಳನ್ನು ಜಾರಿ ಮಾಡಲಾಗಿದೆ. ಪ್ರತಿ ದಿನ 120 ಕೂಲಿ ಕಾರ್ಮಿಕರಿಗೆ 382 ರೂ ದಿನದ ಕೂಲಿಯಂತೆ ಕೆಲಸ ನೀಡಲಾಗಿದೆ. ಈ ವರ್ಷ ಸಕಾಲಕ್ಕೆ ಮುಂಗಾರು ಮಳೆ ಇಲ್ಲ. ರೈತರ ಹೊಲಗಳಲ್ಲಿ ಕೆಲಸ ಇಲ್ಲದಾಗಿದೆ. ಇದರಿಂದ ಇತರೆ ವರ್ಗದ ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿ ಕೆಲಸ ಇಲ್ಲ. ವಲಸೆ ಹೋಗುವ ಪರಿಸ್ಥಿತಿಯಲ್ಲಿ ಸ್ಥಳೀಯ ಪಂಚಾಯತಿಯಿಂದ ದುಡಿಯುವ ಕೈಗಳಿಗೆ ಕೆಲಸ ಸಿಕ್ಕಿದೆ. ಅಂತರ್ಜಲಕ್ಕೆ ಒತ್ತು: ಕೆರೆಗಳ ಹೂಳು ಎತ್ತುವ ಮತ್ತು ಕೆರೆಗೆ ನೀರು ಹರಿದು ಬರುವ ಹಳ್ಳಗಳ ಪುನರ್ ಚೇತನ ಕಾಮಗಾರಿಗೆ ಮೊದಲ ಆದ್ಯತೆ ನೀಡಲಾಗಿದೆ. ಕೆರೆ,ಗೋಕಟ್ಟೆ ಅಭಿವೃದ್ಧಿಯಿಂದ ಹರಿಯುವ ಮಳೆ ನೀರು ತಡೆದು ನಿಲ್ಲಿಸುವ ಅನುಕೂಲ ಆಗುತ್ತದೆ. ಇದರಿಂದ ಅಡವಿಯಲ್ಲಿ ಜನ,ಜಾನುವಾರು ಸೇರಿ ಪ್ರಾಣಿ,ಪಕ್ಷಿಗಳಿಗೆ ಕುಡಿಯುವ ನೀರಿನ ಅನುಕೂಲ ಮತ್ತು ಅಂತರ್ಜಲ ವೃದ್ದಿಗೆ ಆಧಾರ ಆಗುತ್ತದೆ. ಬರಗಾಲ ಪರಿಸ್ಥಿತಿಗೆ ಕೆಲಸ ಹುಡುಕಿಕೊಂಡು ಬೇರೆ ಕಡೆ ಹೋಗದಂತೆ ಗ್ರಾಮ ಸಮೀಪ ಸಾಮೂಹಿಕವಾಗಿ ಮಾಡುವ ಸಮುದಾಯ ಕಾಮಗಾರಿ ಕೆಲಸ ನೀಡಲಾಗಿದೆ. ಕೆಲ ರೈತರು ವೈಯಕ್ತಿಕವಾಗಿಯೂ ತಮ್ಮ ಹೊಲಗಳಲ್ಲಿ ಅಭಿವೃದ್ಧಿ ಕೆಲಸ ಮಾಡಿಕೊಂಡರೂ ಕೂಲಿ ಸಿಗುತ್ತದೆ ಎನ್ನುತ್ತಾರೆ ಪಿಡಿಒ ಸಿ.ಎಂ. ದೇವೇಂದ್ರಪ್ಪ. ತಾಲೂಕಿನ 40 ಗ್ರಾಮ ಪಂಚಾಯತಿಗಳಲ್ಲಿ ವಿಬಿ ರಾಮ್ ಜೀ ಯೋಜನೆಯಡಿ ಒಟ್ಟು 8,026 ಕಾಮಗಾರಿಗಳ ಅನುಮೋದನೆ ಮಾಡಲಾಗಿದೆ. ಇದರಲ್ಲಿ 1626 ವೈಯಕ್ತಿಕ ಕಾಮಗಾರಿ ಸೇರಿ ಉಳಿದಂತೆ ಸಮೂಹ ಕಾಮಗಾರಿಗಳಿಗೆ ಅವಕಾಶ ಇದೆ. ಪ್ರತಿದಿನ ಸರಾಸರಿ 4 ಸಾವಿರ ಕಾರ್ಮಿಕರು ದುಡಿಯಲು ಅನುಕೂಲ ಮಾಡಲಾಗಿದೆ. ಕೆಲಸಕ್ಕಾಗಿ ಗೂಳೆ ಹೋಗದಂತೆ ಪಂಚಾಯತಿಯಲ್ಲಿ ಕೆಲಸ ಪಡೆಯುವ ಅವಕಾಶ ಇದೆ. ಕೆಲ ಗ್ರಾಮಗಳಲ್ಲಿ ಡಂಗೂರ ಸಾರಿ ಕಾರ್ಮಿಕರಿಗೆ ಸ್ಥಳೀಯ ಕೂಲಿ ಕೆಲಸದ ಬಗ್ಗೆ ಜಾಗೃತಿಗೆ ಕ್ರಮ ವಹಿಸಲಾಗಿದೆ_ ಎಚ್. ಶಶಿಧರ್, ತಾಪಂ, ಇಒ, ಚಳ್ಳಕೆರೆ.1
- ಕೋಟೆನಾಡು ಚಿತ್ರದುರ್ಗದಲ್ಲಿ ಯಶ್ ರ ಬಹೂ ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಗೆ ಅದ್ದೂರಿ ಸ್ವಾಗತ ಕೋಟೆನಾಡು ಚಿತ್ರದುರ್ಗದಲ್ಲಿ ಯಶ್ ರ ಬಹೂ ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಅದ್ದೂರಿಯಾಗಿ ತೆರೆಗೆ ಅಪ್ಪಳಿಸಿದೆ. ಇನ್ನೂ ರಾಕಿಂಗ್ ಸ್ಟಾರ್ ಯಶ್ ರ ಬಹೂ ನಿರೀಕ್ಷಿತ ಸಿನಿಮಾ ಟಾಕ್ಸಿ್ಕ ಎಲ್ಲೆಡೆ ಇಂದು ಅಬ್ಬರ ಆರಂಬಿಸಿದೆ. ಅದರಂತೆ ಕೋಟೆನಾಡು ಚಿತ್ರದುರ್ಗದ ಬಸವೇಶ್ವರ ಹಾಗೂ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಟಾಕ್ಸಿಕ್ ಸಿನಿಮಾ ಅದ್ದೂರಿಯಾಗಿ ತೆರೆಗೆ ಅಪ್ಪಳಿಸಿದೆ. ಇನ್ನೂ ಬೆಳಗ್ಗೆ 5.30 ಕ್ಕೆ ಟಾಕ್ಸಿಕ್ ಮೊದಲ ಶೋ ಪ್ರಾರಂಬವಾಗಿದ್ದು ಮೊದಲ ದಿನವೇ ಟಾಕ್ಸಿಕ್ ಕೆ ಬಿಗ್ ರೆಸ್ಪಾನ್ಸ್ ದೊರೆತಿದ್ದು ಥಿಯೇಟರ್ ಗಳು ಹೌಸ್ ಫುಲ್ ಆಗಿವೆ. ಅಷ್ಟೇ ಅಲ್ಲದೆ ಸಿನಿಮಾ ಬಿಡುಗಡೆ ಹಿನ್ನೆಲೆ ಥಿಯೇಟರ್ ಅನ್ನ ಮದುವಣಗಿತ್ತಿಯಂತೆ ಸಿಂಗರಿಸಿದ್ದು ಯಶ್ ಅಭಿಮಾನಿಗಳು ಸಿನಿ ಪ್ರಿಯರು ಬೆಳಗ್ಗೆಯೇ ಆಗಮಿಸಿದ್ದು ದೊಡ್ಡದಾದ ಯಶ್ ತ ಕಟೌಟ್ ಗೆ ದೊಡ್ಡದಾದ ಹೂಮಾಲೆ ಹಾಕಿ ಪುಷ್ಪವೃಷ್ಟಿ ಮಾಡಿದ್ದು ಟಾಕ್ಸಿಕ್ ಸಿನಿಮಾದ ಪರ ಘೋಷಣೆಗಳನ್ನ ಕೂಗಿದ್ದು ಕುಂಬಳಕಾಯಿ ಒಡೆದು ಕರ್ಪೂರ ಬೆಳಗಿ ಟಾಕ್ಸಿಕ್ ಗೆ ಶುಭಹಾರೈಸಿದ್ದು ಶತದಿನೋತ್ಸವ ಆಚರಿಸಲಿ ಎಂದು ಶುಭಕೋರಿದ್ದಾರೆ. ಇನ್ನೂ ಥಿಯೇಟರ್ ನಲ್ಲಿ ಸಿನಿಮಾ ಆರಂಬವಾಗುತ್ತಿದ್ದಂತೆ ಯಶ್ ಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಹೂಮಳೆ ಸುರಿಸಿ ಸ್ಟೆಪ್ ಹಾಕಿದ ಅಭಿಮಾನಿಗಳು ಟಾಕ್ಸಿಕ್ ಸಿನಿಮಾವನ್ನ ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ1
- ಚಳ್ಳಕೆರೆ ತಾಲೂಕು ಕಚೇರಿಯಲ್ಲಿ ಶಿರಸ್ತೆದಾರ್ ಸದಾಶಿವಪ್ಪ ಅವರಿಗೆ ಬೀಳ್ಕೊಡುಗೆ ಚಳ್ಳಕೆರೆ ನಗರದ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿರಸ್ತೆದಾರ್ ಸದಾಶಿವಪ್ಪ ಅವರು ಹೊಳಲ್ಕೆರೆ ತಾಲೂಕು ಕಚೇರಿಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ, ತಾಲೂಕು ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ತಹಶೀಲ್ದಾರ್ ರೇಹಾನ್ ಪಾಷ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಸದಾಶಿವಪ್ಪ ಅವರನ್ನು ಸನ್ಮಾನಿಸಿ ಗೌರವದಿಂದ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ವರ್ಗಾವಣೆಗೊಂಡ ಶಿರಸ್ತೆದಾರ್ ಸದಾಶಿವಪ್ಪ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಮಾತನಾಡಿ, ಸದಾಶಿವಪ್ಪ ಅವರ ಸೇವಾ ಅವಧಿಯ ಕರ್ತವ್ಯನಿಷ್ಠೆ ಹಾಗೂ ಸಹಕಾರವನ್ನು ಸ್ಮರಿಸಿದರು. ಸಹೋದ್ಯೋಗಿಗಳು ಶುಭ ಹಾರೈಸಿ, ಹೊಳಲ್ಕೆರೆ ತಾಲೂಕು ಕಚೇರಿಯಲ್ಲಿಯೂ ಉತ್ತಮ ಸೇವೆ ಸಲ್ಲಿಸುವಂತೆ ಹಾರೈಸಿದರು.4
- ಹಾನಗಲ್...ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ ಆರೋಪ. ಚಿಕಿತ್ಸೆ ವಿಳಂಬದಿಂದ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರ ಆರೋಪ ಆಸ್ಪತ್ರೆ ಎದುರು ಪ್ರತಿಭಟನೆ ಮಂಗಳವಾರ ಪಟ್ಟಣದ ತಾಲೂಕು ಆಸ್ಪತ್ರೆಯ ಎದುರು ಮಗುವಿನ ಶವವಿಟ್ಟು ಪ್ರತಿಭಟಿಸಿದ ಕುಟುಂಬಸ್ಥರು. ಸ್ಥಳಕ್ಕೆ ಮೆಲ್ಮಟ್ಟದ ಅಧಿಕಾರಿಗಳು ಸ್ಥಳಕ್ಕೆ1
- ಹಿರಿಯೂರು ತಾಲ್ಲೂಕು ಆಸ್ಪತ್ರೆಯಲ್ಲಿ ಮೊಬೈಲ್ ಕಳವು: ಸಿಸಿಟಿವಿಯಲ್ಲಿ ದೃಶ್ಯ ಸೆರೆ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಸಂಬಂಧಿಕರ ಮೊಬೈಲ್ ಫೋನನ್ನು ಕಳ್ಳನೊಬ್ಬ ಎಗರಿಸಿ ಪರಾರಿಯಾದ ಘಟನೆ ಹಿರಿಯೂರು ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಚಿಕಿತ್ಸೆಗೆಂದು ರೋಗಿಯೊಬ್ಬರು ದಾಖಲಾಗಿದ್ರು. ರೋಗಿಯ ಸಂಬಂಧಿಗಳು ರಾತ್ರಿ ವೇಳೆ ನಿದ್ರೆಗೆ ಜಾರಿದ್ದ ವೇಳೆ ಖದೀಮ ತನ್ನ ಕೈಚಳಕ ತೋರಿದ್ದು, ಮೆಲ್ಲನೇ ಮೊಬೈಲ್ ಫೋನನ್ನ ಎತ್ತಿಕೊಂಡು ಪರಾರಿಯಾಗಿದ್ದಾನೆ. ಇನ್ನು ಕಳ್ಳನ ಖರಾಮತ್ತು ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಿರಿಯೂರು ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಎಷ್ಟು ಸುರಕ್ಷಿತ ಎನ್ನುವ ಚರ್ಚೆಗಳು ಪ್ರಾರಂಬವಾಗಿದ್ದು, ಸಧ್ಯ ಕಳ್ಳತನ ಘಟನೆಗಳಿಗೆ ಬ್ರೇಕ್ ಹಾಕುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಫ್ಲೋ......1
- ಹಿರಿಯೂರು ತಾಲೂಕಿನ ರೈತರೊಂದಿಗೆ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ ಮಾಡಿದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಣ್ಣಚಿತ್ತಯ್ಯ.1