Shuru
Apke Nagar Ki App…
ಅಶೋಕ ಸ್ತಂಭ ನಿರ್ಮಾಣಕ್ಕೆ ಶಾಸಕ ಕಾಶಪ್ಪನವರ ಭೂಮಿ ಪೂಜೆ ಬಾಗಲಕೋಟ ಜಿಲ್ಲೆಯ ಇಳಕಲ್‌ದ ಪ್ರವಾಸಿ ಮಂದಿರ ಎದುರಿನ ಪ್ರಮುಖ ರಸ್ತೆಯಲ್ಲಿ ಅಶೋಕ ಸ್ತಂಭ ನಿರ್ಮಾಣಕ್ಕೆ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಬುಧವಾರ ಭೂಮಿ ಪೂಜೆಯನ್ನು ನೆರವೇರಿಸಿದರು. ಈ ಸಮಯದಲ್ಲಿ ನಗರಸಭೆ ಸದಸ್ಯರು ಹಾಗೂ ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ, ಗುತ್ತಿಗೆದಾರ ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.
Aaryan Ganiger
ಅಶೋಕ ಸ್ತಂಭ ನಿರ್ಮಾಣಕ್ಕೆ ಶಾಸಕ ಕಾಶಪ್ಪನವರ ಭೂಮಿ ಪೂಜೆ ಬಾಗಲಕೋಟ ಜಿಲ್ಲೆಯ ಇಳಕಲ್‌ದ ಪ್ರವಾಸಿ ಮಂದಿರ ಎದುರಿನ ಪ್ರಮುಖ ರಸ್ತೆಯಲ್ಲಿ ಅಶೋಕ ಸ್ತಂಭ ನಿರ್ಮಾಣಕ್ಕೆ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಬುಧವಾರ ಭೂಮಿ ಪೂಜೆಯನ್ನು ನೆರವೇರಿಸಿದರು. ಈ ಸಮಯದಲ್ಲಿ ನಗರಸಭೆ ಸದಸ್ಯರು ಹಾಗೂ ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ, ಗುತ್ತಿಗೆದಾರ ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.
More news from ಕರ್ನಾಟಕ and nearby areas
- ಮಾನ್ಯ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 5 ಕೋಟಿ ರೂ ವೆಚ್ಚದಲ್ಲಿ ಇಳಕಲ್ ನಗರದ ವಿವಿಧ ವಾರ್ಡಗಳಲ್ಲಿನ ಮೂಲಭೂತ ಸೌಕರ್ಯಗಳಾದ ರಸ್ತೆ ಕಾಮಗಾರಿ, ಸರ್ಕಲ್ ಅಭಿವೃದ್ಧಿ ಪಡಿಸುವ ಕಾಮಗಾರಿಗಳಿಗೆ ಶಾಸಕ ವಿಜಯಾನಂದ ಕಾಶಪ್ಪನವರ ಫೆ.18 ಬುಧವಾರ ಭೂಮಿ ಪೂಜೆಯನ್ನು ನೆರವೇರಿಸಿದರು. ಈ ಸಮಯದಲ್ಲಿ ನರಸಭೆ ಸದಸ್ಯರು ಹಾಗೂ ಪೌರಾಯುಕ್ತ ಶ್ರೀನಿವಾಸ ಜಾಧವ ಹಾಗೂ ಗುತ್ತಿಗೆದಾರರು, ಪಕ್ಷದ ಮುಖಂಡರು ಕಾರ್ಯಕರ್ತರು, ನಗರಸಭೆ ಸಿಬ್ಬಂದಿ ವರ್ಗದವರು ಇದ್ದರು.1
- ಗುಳೇದಗುಡ್ಡ : ಕೋಟೆಕಲ್ಲನ ಶ್ರೀ ಹೊಳೆಹುಚ್ಚೇಶ್ವರ ಸಂಸ್ಥಾನಮಠ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಸಾಣೆಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘದವರಿಂದ ಫೆ. 18ರಿಂದ 20ರವರೆಗೆ ನಿತ್ಯ ಸಂಜೆ 7 ಗಂಟೆಗೆ ಮೂರುದಿನ ಶಿವಸಂಚಾರ ನಾಟಕ ಪ್ರದರ್ಶನ ಸಮೀಪದ ಕೋಟೆಕಲ್ಲ ಗ್ರಾಮದ ಶ್ರೀ ಹೊಳೆಹುಚ್ಚೇಶ್ವರಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹನಮಂತ ಮಾವಿನಮರದ ಹೇಳಿದರು. ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿವರ್ಷ ಸಾಣೆಹಳ್ಳಿಯ ಕಲಾತಂಡದಿಂದ ಶಿವಸಂಚಾರ ನಾಟಕ ಪ್ರದರ್ಶನ ಕೋಟೆಕಲ್ಲ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿ ಫೆ. 18ರಂದು ಜಂಗಮದೆಡೆಗೆ, ಫೆ.19ರಂದು ಕಳ್ಳರ ಸಂತೆ, ಫೆ.20ರಂದು ಶಿವಯೋಗಿ ಸಿದ್ಧರಾಮೇಶ್ವರ ನಾಟಕವನ್ನು ಶ್ರೀ ಶಿವಕುಮಾರ ಕಲಾಸಂಘದವರು ಪ್ರದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಸಂಗಪ್ಪ ಹಡಪದ, ಲಕ್ಷ್ಮಣ ಹಾಲನ್ನವರ, ಸಂತೋಷ ತಿಪ್ಪಾ ಇದ್ದರು.1
- ಬಾಗಲಕೋಟೆ: ಜಿಲ್ಲೆಯ ತೇರದಾಳ ಪಟ್ಟಣದ ಲಿವಿಂಗ್ ಜೋಡಿಯೊಂದು ಲಾಡ್ಜ್‌ನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಆತಂಕ ಮೂಡಿಸಿದೆ. ಗಂಭೀರವಾಗಿ ಗಾಯಗೊಂಡಿರುವ ಜೋಡಿಯನ್ನು ಚಿಕಿತ್ಸೆಗಾಗಿ ವಿಜಯಪುರ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಜೋಡಿ ಸಾವು-ಬದುಕಿನ ನಡುವೆ ನರಳಾಡುತ್ತಿದೆ. 25 ವರ್ಷದ ಅಕ್ಷತಾ ಶ್ರೀಶೈಲ ಸತ್ತಿ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 45 ವರ್ಷದ ಗುರುಪಾದಯ್ಯ ಮಠಪತಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊದಲು ಗಾಯಾಳುಗಳನ್ನು ಜಮಖಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಅಕ್ಷತಾ ಅವರ ದೇಹದ ಸುಮಾರು 90 ಶೇಕಡಾ ಭಾಗ ಸುಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆತ್ಮಹತ್ಯೆ ಯತ್ನಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.1
- ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುವ ಪೊಲೀಸರ ಬಗ್ಗೆ ಸಮಾಜ ಕಾರ್ಯಕರ್ತೆ ಸಹನಾ ಅಂಗಡಿ ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪೊಲೀಸರ ಸಂಬಳ ಕಡಿಮೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ, ಯಾವುದೇ ಘಟನೆ ನಡೆದರೂ ಜನಪ್ರತಿನಿಧಿಗಳು ಪೊಲೀಸರನ್ನೇ ಗುರಿಯಾಗಿಸುತ್ತಾರೆ ಎಂಬ ಆಕ್ರೋಶವೂ ವ್ಯಕ್ತವಾಗಿದೆ.ಸಹನಾ ಅಂಗಡಿ ಅವರ ಮಾತಿನಂತೆ, ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು ದಿನರಾತ್ರಿ ಶ್ರಮಿಸುತ್ತಿದ್ದಾರೆ. ಹಬ್ಬ-ಹರಿದಿನ, ಕುಟುಂಬ ಸಮಾರಂಭಗಳನ್ನೂ ಬದಿಗಿರಿಸಿ ಸಮಾಜದ ಭದ್ರತೆಗೆ ಶ್ರಮಿಸುತ್ತಿದ್ದಾರೆ. ಆದರೆ ಅವರ ಶ್ರಮಕ್ಕೆ ತಕ್ಕ ಗೌರವ ಮತ್ತು ಸಂಬಳ ದೊರೆಯುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಬೇರೆ ರಾಜ್ಯಗಳಲ್ಲಿ ಪೊಲೀಸರಿಗೆ ಹೆಚ್ಚಿನ ವೇತನ ಮತ್ತು ಸೌಲಭ್ಯಗಳಿವೆ ಎಂಬ ಹೋಲಿಕೆ ಮಾಡುತ್ತಾ, ರಾಜ್ಯ ಸರ್ಕಾರ ಗಮನಹರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.“ರಾಜ್ಯದಲ್ಲಿ ಏನೇ ಸಮಸ್ಯೆ ಆದರೂ ಮೊದಲಿಗೆ ಪೊಲೀಸರನ್ನೇ ದೂರುತ್ತಾರೆ. ಆದರೆ ಜನಪ್ರತಿನಿಧಿಗಳ ಹಿಂದೆ ಮುಂದೆ, ಅವರ ಕುಟುಂಬದ ಭದ್ರತೆಗೆ ಪೊಲೀಸರು ಬೇಕು. ಹಾಗಾದರೆ ಪೊಲೀಸರ ಕುಟುಂಬದ ಭದ್ರತೆ ಯಾರು ನೋಡಿಕೊಳ್ಳಬೇಕು? ಅವರ ಸಂಕಷ್ಟಗಳಿಗೆ ಸ್ಪಂದಿಸುವವರು ಯಾರು?”ಸಹನಾ ಅಂಗಡಿ ಅವರು ಪೊಲೀಸರ ಕೆಲಸದ ಒತ್ತಡ, ಮಾನಸಿಕ ಆರೋಗ್ಯ ಸಮಸ್ಯೆಗಳು ಹಾಗೂ ಕುಟುಂಬ ಜೀವನದ ಮೇಲಿನ ಪರಿಣಾಮಗಳ ಕುರಿತು ಸರ್ಕಾರ ವಿಶೇಷ ಗಮನ ಹರಿಸಬೇಕು ಎಂದು ಹೇಳಿದ್ದಾರೆ.ಅವರ ಪ್ರಕಾರ, ಕೇವಲ ಕರ್ತವ್ಯ ನಿರ್ವಹಣೆ ಮಾತ್ರವಲ್ಲದೆ, ಪೊಲೀಸರ ಕಲ್ಯಾಣಕ್ಕಾಗಿ ಸಮಗ್ರ ಯೋಜನೆಗಳು ಅಗತ್ಯವೆಂದು ಅಭಿಪ್ರಾಯಪಟ್ಟಿದ್ದಾರೆ.ಪೊಲೀಸರ ಸೇವೆ ಮತ್ತು ಅವರ ಕಲ್ಯಾಣದ ಬಗ್ಗೆ ಉದ್ಭವಿಸಿರುವ ಈ ಪ್ರಶ್ನೆಗಳು ರಾಜ್ಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಸರ್ಕಾರ ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ1
- ಸಚಿವ ಶಿವರಾಜ್ ತಂಗಡಗಿ ಅವಚ್ಛ ಶಬ್ದ ವಿವಾದವೈರಲ್ ವಿಡಿಯೋಗೆ ರಾಜಕೀಯ ಕಿಡಿ #ಕೊಪ್ಪಳ #koppal #ಕಾರಟಗಿ #ಕನಕಗಿರಿ #ಶಿವರಾಜ್_ತಂಗಡಗಿ1
- ಮಂಗಳಮುಖಿ ಸುಹಾಸಿನಿ, ಯುವಕ ಶೇಖರ್ ಸಾವು ಆತ್ಮಹತ್ಯೆನಾ?ಪ್ರಕರಣ ಪೊಲೀಸ್ ತನಿಖೆ ಚುರುಕು ಮಂಗಳಮುಖಿ ಸುಹಾಸಿನಿ,ಯುವಕ ಶೇಖರ್ ಸಾವು ಆತ್ಮಹತ್ಯೆನಾ?ಪ್ರಕರಣ ಪೊಲೀಸ್ ತನಿಖೆ ಚುರುಕು1
- ರಾಜ್ ನಟನೆಯ ಮೊದಲನೇ ಚಿತ್ರ ಬೇಡರ ಕಣ್ಣಪ್ಪ ನಿರ್ಮಿಸಿದ ಗುಬ್ಬಿ ವೀರಣ್ಣ ರವರ ಇತಿಹಾಸ1
- ಬಾಗಲಕೋಟ ಜಿಲ್ಲೆಯ ಇಳಕಲ್‌ದ ಪ್ರವಾಸಿ ಮಂದಿರ ಎದುರಿನ ಪ್ರಮುಖ ರಸ್ತೆಯಲ್ಲಿ ಅಶೋಕ ಸ್ತಂಭ ನಿರ್ಮಾಣಕ್ಕೆ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಬುಧವಾರ ಭೂಮಿ ಪೂಜೆಯನ್ನು ನೆರವೇರಿಸಿದರು. ಈ ಸಮಯದಲ್ಲಿ ನಗರಸಭೆ ಸದಸ್ಯರು ಹಾಗೂ ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ, ಗುತ್ತಿಗೆದಾರ ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.1