Shuru
Apke Nagar Ki App…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲಿನ ತೀವ್ರತೆ: ಯಾವಾಗ ಮಳೆ ಬರುತ್ತೋ ಎಂದು ಕೇಳುತ್ತಿದ್ದಾರೆ ಜನರು! ಮಂಗಳೂರಿನಲ್ಲಿ ಸದ್ಯ ಅತಿಯಾದ ಬಿಸಿಲು ಮತ್ತು ಹೆಚ್ಚಿನ ಆರ್ದ್ರತೆಯಿಂದ (Humidity) ಜನಜೀವನ ಅಸ್ತವ್ಯಸ್ತಗೊಂಡಿದೆ. ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದ್ದು, ಮೈ ಸುಡುವ ಬಿಸಿಲು ಇರಲಿದೆ. ಮೇ 6-7ರ ಸುಮಾರಿಗೆ ತುಂತುರು ಮಳೆಯಾಗುವ ಸಾಧ್ಯತೆ ಇದೆ.
Shamsheer Budoli
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲಿನ ತೀವ್ರತೆ: ಯಾವಾಗ ಮಳೆ ಬರುತ್ತೋ ಎಂದು ಕೇಳುತ್ತಿದ್ದಾರೆ ಜನರು! ಮಂಗಳೂರಿನಲ್ಲಿ ಸದ್ಯ ಅತಿಯಾದ ಬಿಸಿಲು ಮತ್ತು ಹೆಚ್ಚಿನ ಆರ್ದ್ರತೆಯಿಂದ (Humidity) ಜನಜೀವನ ಅಸ್ತವ್ಯಸ್ತಗೊಂಡಿದೆ. ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದ್ದು, ಮೈ ಸುಡುವ ಬಿಸಿಲು ಇರಲಿದೆ. ಮೇ 6-7ರ ಸುಮಾರಿಗೆ ತುಂತುರು ಮಳೆಯಾಗುವ ಸಾಧ್ಯತೆ ಇದೆ.
More news from ಕರ್ನಾಟಕ and nearby areas
- ಮಂಗಳೂರಿನಲ್ಲಿ ಸದ್ಯ ಅತಿಯಾದ ಬಿಸಿಲು ಮತ್ತು ಹೆಚ್ಚಿನ ಆರ್ದ್ರತೆಯಿಂದ (Humidity) ಜನಜೀವನ ಅಸ್ತವ್ಯಸ್ತಗೊಂಡಿದೆ. ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದ್ದು, ಮೈ ಸುಡುವ ಬಿಸಿಲು ಇರಲಿದೆ. ಮೇ 6-7ರ ಸುಮಾರಿಗೆ ತುಂತುರು ಮಳೆಯಾಗುವ ಸಾಧ್ಯತೆ ಇದೆ.1
- ಕಡೂರು : ತಾಲ್ಲೂಕಿನಲ್ಲಿ ಸಮೃದ್ದಿ ಮಳೆಯಾಗಲೆಂದು ಪ್ರಾರ್ಥಿಸಿ ಮಳೆ ದೇವರೇಂದೆ ಖ್ಯಾತಿ ಪಡೆದಿರುವ ಶೃಂಗೇರಿ ತಾಲ್ಲೂಕಿನ ಕಿಗ್ಗಾದ ಋಷ್ಯಶೃಂಗೇಶ್ವರನಿಗೆ ತಾಲ್ಲೂಕಿನ ಚಿಕ್ಕಪಟ್ಟಣಗೆರೆ ಗ್ರಾಮಸ್ಥರು ಶನಿವಾರ ಶತಾರುದ್ರಾಭಿಷೇಕ ಪೂಜೆ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಈಗಾಗಲೇ ಸುಡುಬಿಸಿಲಿನಿಂದ ತತ್ತರಿಸುತ್ತಿರುವ ಜನತೆಗೆ ಮಳೆಗಾಗಿ ಕಾಯುತ್ತಿದ್ದು, ಕೆರೆಕಟ್ಟೆಗಳಲ್ಲಿನ ಅಂತರ್ಜಲ ಮಟ್ಟ ಕುಸಿಯುತ್ತಿದೆ. ರೈತಾಪಿ ವರ್ಗಕ್ಕೆ ಉತ್ತಮ ಮಳೆ-ಬೆಳೆ ಕರುಣಿಸುವಂತೆ ಪ್ರಾರ್ಥಿಸಲಾಗಿದೆ ಎಂದು ಗ್ರಾಮದ ಮುಖಂಡ ಚಿಕ್ಕಪಟ್ಟಣಗೆರೆ ನಾಗರಾಜ್ ತಿಳಿಸಿದರು. ಈ ಸಂದರ್ಭದಲ್ಲಿ ಶಿವಮೂರ್ತಿ,ಸಿ.ಎಸ್. ರಮೇಶ್, ಶ್ರೀಧರ್, ವಿಜಯ್‌ಕುಮಾರ್, ಜಗದೀಶ್ ಇದ್ದರು.1
- *ಭಾರತ ನಲ್ಲಿ ವೈರಲ್*1
- Post by Karibasava Balal1
- Post by ALTAF,❤️🙏1
- ಅದ್ದೂರಿಯಾಗಿ ಜರುಗಿದ ಶ್ರೀ ವೀರಭದ್ರ ಸ್ವಾಮಿ ಜಾತ್ರಾ ಮಹೋತ್ಸವ: ಮುಕ್ತಿ ಬಾವುಟ 9 ಲಕ್ಷಕ್ಕೆ ಹರಾಜು ಚಳ್ಳಕೆರೆ: ನಗರದ ಆರಾಧ್ಯ ದೈವವಾದ ಶ್ರೀ ವೀರಭದ್ರ ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ರಥೋತ್ಸವವು ಶನಿವಾರ ಸಂಜೆ 5.15ರ ವೇಳೆಗೆ ಅಪಾರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಹಾಗೂ ಶ್ರದ್ಧಾಭಕ್ತಿಯಿಂದ ಜರುಗಿತು. ವೀರಭದ್ರಸ್ವಾಮಿಗೆ ಬೃಹತ್ ಹೂವಿನ ಹಾರಗಳು, ಬಣ್ಣ ಬಣ್ಣದ ಬಾವುಟಗಳಿಂದ ಅಲಂಕರಿಸಲ್ಪಟ್ಟ ಭವ್ಯ ರಥದಲ್ಲಿ ದೇವರನ್ನು ಆಸೀನಗೊಳಿಸಿ ಪೂಜೆ ಸಲ್ಲಿಸಿದ ಬಳಿಕ ಜಯಘೋಷಗಳ ಮಧ್ಯೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ರಥವು ನಗರದ ತೇರು ಬೀದಿಯಲ್ಲಿ ಗಾಂಭೀರ್ಯದಿಂದ ಸಾಗಿತು. ಸಾವಿರಾರು ಭಕ್ತರು ಭಕ್ತಿಭಾವದಿಂದ ಭಾಗವಹಿಸಿದರು. ರಥೋತ್ಸವದ ಮುಂಭಾಗದಲ್ಲಿ ಮಂಗಳವಾದ್ಯಗಳು, ಕರಡಿ ಮಜಲು, ನಂದಿಕೋಲು, ಕೋಲಾಟ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ತಂದವು. ಭಕ್ತರು “ಸ್ವಾಮಿಗೆ ಜಯಕಾರ” ಕೂಗುತ್ತಾ ಸೂರುಬೆಲ್ಲ, ಮೆಣಸು, ಬಾಳೆಹಣ್ಣುಗಳನ್ನು ತೇರಿಗೆ ಎಸೆಯುವ ಮೂಲಕ ತಮ್ಮ ಹರಕೆಗಳನ್ನು ಸಲ್ಲಿಸಿ ಭಕ್ತಿ ಭಾವ ವ್ಯಕ್ತಪಡಿಸಿದರು. ಜಾತ್ರೆಯ ವಿಶೇಷ ಆಕರ್ಷಣೆಯಾಗಿರುವ “ಮುಕ್ತಿ ಬಾವುಟ” ಹರಾಜು ಪ್ರಕ್ರಿಯೆಯೂ ಭಾರೀ ಕುತೂಹಲಕ್ಕೆ ಕಾರಣವಾಯಿತು. ಈ ವೇಳೆ ನಗರದ ವಾಣಿಜ್ಯೋದ್ಯಮಿ ಎಸ್. ರುದ್ರಮನಿಯಪ್ಪ 9ಲಕ್ಷ ರೂಪಾಯಿಗೆ ಬಿಡ್ ಮಾಡುವ ಮೂಲಕ ಮುಕ್ತಿ ಬಾವುಟವನ್ನು ತಮ್ಮದಾಗಿಸಿಕೊಂಡರು. ಈ ಸಂದರ್ಭ ಭಕ್ತರು ಜಯಘೋಷಗಳ ಮೂಲಕ ಸಂಭ್ರಮ ವ್ಯಕ್ತಪಡಿಸಿದರು. ಜಾತ್ರಾ ಮಹೋತ್ಸವದ ಅಂಗವಾಗಿ ಮೇ 6ರಿಂದ ಸೂಜಿಮಲ್ಲೇಶ್ವರ ನಗರದಲ್ಲಿ ಒಂದು ವಾರದ ದನಗಳ ಜಾತ್ರೆ ನಡೆಯಲಿದೆ. ದನಗಳಿಗೆ ಕುಡಿಯುವ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡಲಾಗಿದ್ದು, ರೈತರು ತಮ್ಮ ದನಗಳೊಂದಿಗೆ ಮೇವು ತರಬೇಕೆಂದು ದೇವಸ್ಥಾನ ಸಮಿತಿ ಮನವಿ ಮಾಡಿದೆ. ಈ ಸಂದರ್ಭದಲ್ಲಿ ಶಾಸಕರಾದ ಟಿ ರಘುಮೂರ್ತಿ.ಕೆ.ಸಿ ವಿರೇಂದ್ರ ಪಪ್ಪಿ ವೀರಭದ್ರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.1
- ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮೀಜಿ ಕ್ರೀಡಾಂಗಣದಲ್ಲಿಂದು ಶ್ರೀ ರಾಘವೇಂದ್ರ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಘಟಿಕೋತ್ಸವ ಕಾರ್ಯಕ್ರಮವನ್ನು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನಗಳ ಖಾತೆಗಳ ಸಚಿವ ಪ್ರಹ್ಲಾದ್ ಜೋಷಿ ಉದ್ಘಾಟಿಸಿದರು. ಆಯುರ್ವೇದ ವೈದ್ಯಕೀಯ ಪದವಿ ಪೂರ್ಣಗೊಳಿಸಿದ ರ್‍ಯಾಂಕ್ ವಿಜೇತರು ಸೇರಿದಂತೆ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಶಿವಶರಣ ಮಾದರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ, ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಕುಲಪತಿ ಡಾ.ಬಿ.ಸಿ.ಭಗವಾನ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.1
- ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿ ನಿಜಾ ಕುಲಾಲ್ ಅವರು ಮರುಮೌಲ್ಯಮಾಪನ ಫಲಿತಾಂಶದಲ್ಲಿ 596 ಅಂಕಗಳನ್ನು ಪಡೆದು ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಮೊದಲು ಅವರು 593 ಅಂಕಗಳನ್ನು ಪಡೆದಿದ್ದರು. ಇಂಗ್ಲಿಷ್ ವಿಷಯದಲ್ಲಿ 3 ಹೆಚ್ಚುವರಿ ಅಂಕಗಳಿಸಿದ್ದು ಅವರು 596ಅಂಕಗಳೊಂದಿಗೆ ರಾಜ್ಯದಲ್ಲಿ ದ್ವಿತೀಯ ಸ್ಥಾನಿಯಾಗಿದ್ದಾರೆ. ನಿಜ ಕುಲಾಲ್ ಮೇಲಂತಬೆಟ್ಟು ಗ್ರಾಮದ ನಿವಾಸಿ ನಿಲೇಶ್ ಹೆಚ್ ಪೆರಿಂಜೆ ಮತ್ತು ಸುಶ್ರೂಷಕಿ ಜಯಲಕ್ಷ್ಮಿ ದಂಪತಿಗಳ ಮಗಳು.1