8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಎಸ್‌ಐಆರ್ ಪ್ರಕ್ರಿಯೆ ವಿಜಯಪುರ: ಜಿಲ್ಲೆಯಲ್ಲಿ ಕಳೆದ ಜೂನ್ 30ರಿಂದ ನಡೆದ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಮೊದಲ ಹಂತ ಮುಕ್ತಾಯಗೊಂಡಿದ್ದು, ಒಟ್ಟು 2,97,147 ಮತದಾರರ ಹೆಸರು ಪಟ್ಟಿಯಿಂದ ಹೊರಗುಳಿದಿರುವುದು ಗೊತ್ತಾಗಿದೆ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆದಿದ್ದು, ಒಟ್ಟು 19,82,114 ಒಟ್ಟು ಮತದಾರರಿಗೆ ಬಿಎಲ್‌ಒಗಳ ಮೂಲಕ 19,82,114 ಗಣತಿ ನಮೂನೆ (ಎನ್ಯೂಮರೇಷನ್ ಫಾರ್ಮ್) ಗಳನ್ನು ವಿತರಿಸಲಾಗಿತ್ತು. ಈ ಪೈಕಿ 16,84,968 ಮತದಾರರ ನಮೂನೆ ಡಿಜಿಟಲೀಕರಣಗೊಂಡಿದ್ದರೆ, 1,52,169 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. 30,692 ಮಂದಿಯ ಹೆಸರು ಎರಡು ಕಡೆ ಇರುವುದು ಪತ್ತೆಯಾಗಿದೆ. 525 ಮತದಾರರು ಗಣತಿ ನಮೂನೆಗೆ ಸಹಿ ಮಾಡಿ ವಾಪಸ್ ಸಲ್ಲಿಸಿಲ್ಲ. 59,093 ಮತದಾರರು ಗೈರು ಉಳಿದಿದ್ದಾರೆ. ಒಟ್ಟಾರೆ 2,97,147 ಮತದಾರರ ಹೆಸರು ಪಟ್ಟಿಯಿಂದ ಹೊರಗುಳಿದಿರುವುದು ಜಿಲ್ಲಾಡಳಿತದ ಮಾಹಿತಿಯಿಂದ ಬಹಿರಂಗಗೊಂಡಿದೆ. ಮತದಾರರ ಪಟ್ಟಿಯಲ್ಲಿ 30,692 ಮತದಾರರು ಡುಪ್ಲಿಕೇಟ್/ಡಬಲ್ (ಬೇರೆಡೆ ನೋಂದಣಿ) ಆಗಿರುವುದು ಕಂಡು ಬಂದಿದೆ. ಸ್ಥಳಾಂತರ ವಿಜಯಪುರದಲ್ಲಿ ಹೆಚ್ಚು ಶಾಶ್ವತವಾಗಿ ಸ್ಥಳಾಂತರಗೊಂಡ 1,52,169 ಮತದಾರರ ಪೈಕಿ ವಿಜಯಪುರ ನಗರ ಕ್ಷೇತ್ರದಲ್ಲಿ ಹೆಚ್ಚಿರುವುದು ಪತ್ತೆಯಾಗಿದೆ. ಈ ಕ್ಷೇತ್ರದಲ್ಲಿ 24,693 ಮತದಾರರು ಸ್ಥಳಾಂತರಗೊಂಡಿದ್ದರೆ, ನಂತರದಲ್ಲಿ ನಾಗಠಾಣ ಕ್ಷೇತ್ರದಲ್ಲಿ 22,521 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು ಗೊತ್ತಾಗಿದೆ. ಸ್ಥಳಾಂತರಗೊಂಡವರ ಪೈಕಿ ಹೆಚ್ಚಿನ ಮತದಾರರು ಹೊರರಾಜ್ಯಗಳಿಗೆ ವಲಸೆ ಹೋದವರಾಗಿದ್ದಾರೆ ಎಂದು ತಿಳಿದು ಬಂದಿದೆ. SIRಗೆ ಆಸಕ್ತಿ ತೋರದ ವಲಸಿಗರು ಜಿಲ್ಲೆಯ ಲಕ್ಷಾಂತರ ಮಂದಿ ಬದುಕು ಕಟ್ಟಿಕೊಳ್ಳಲು ಗೋವಾ, ಮಹಾರಾಷ್ಟ್ರ, ಕೇರಳ ಮತ್ತಿತರ ರಾಜ್ಯಗಳಿಗೆ ಗುಳೆ ಹೋಗಿದ್ದು, ಸರ್ಕಾರಿ ಸೌಲಭ್ಯ, ದಾಖಲೆ ಸೇರಿದಂತೆ ನಾನಾ ಕಾರಣಕ್ಕೆ ತಾವಿದ್ದಲ್ಲೇ ಮತದಾನದ ಹಕ್ಕು ಹೊಂದಲು ಆಸಕ್ತಿ ತೋರಿದ್ದರಿಂದ ತವರು ಜಿಲ್ಲೆಯಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. " ಎಸ್‌ಐಆರ್ ಪ್ರಕ್ರಿಯೆ ವೇಳೆ ತಪ್ಪುಗಳಿಂದಾಗಿ ಹೆಸರು ಬಿಟ್ಟು ಹೋಗಿದ್ದರೆ ಅಂಥವರು ಆತಂಕಗೊಳ್ಳುವುದು ಬೇಡ, ಸರಿಪಡಿಸಲು ಅವಕಾಶವಿದೆ. ಕರಡು ಮತದಾರರ ಪಟ್ಟಿ ಪ್ರಕಟಗೊಂಡ ನಂತರ ಅರ್ಹ ಮತದಾರರ ಹೆಸರು ಬಿಟ್ಟು ಹೋಗಿದ್ದರೆ 58 ದಿನಗಳೊಳಗೆ ಸೂಕ್ತ ದಾಖಲೆಗಳನ್ನು ಸಂಬಂಧಸಿದ ತಹಸೀಲ್ದಾರ್‌ಗೆ ಸಲ್ಲಿಸಿ ಸರಿಪಡಿಸಿಕೊಳ್ಳಬಹುದು. ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದರೆ ನಮೂನೆ 6ರಲ್ಲಿ ಅರ್ಜಿ ಸಲ್ಲಿಸಿ ಮತ್ತೆ ಸೇರಿಸಲು ಅವಕಾಶವಿರುತ್ತದೆ." -ಡಾ.ಆನಂದ್ ಕೆ. ಜಿಲ್ಲಾಧಿಕಾರಿ

- ಸ್ವ ಕ್ಷೇತ್ರದಲ್ಲೇ ಸಚಿವ ಡಾ. ಅಜಯ್ ಸಿಂಗ್ ವಿರುದ್ಧ ಧಿಕ್ಕಾರದ ಕೂಗು ಜೇವರ್ಗಿ: ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಚಿವ ಡಾ. ಅಜಯ್ ಸಿಂಗ್ ಅವರ ಸ್ವಕ್ಷೇತ್ರ ಜೇವರ್ಗಿಯಲ್ಲೇ ಕೆಲ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ. ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಂಘಟನೆಗಳ ಕಾರ್ಯಕರ್ತರು ಸಚಿವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸ್ವಕ್ಷೇತ್ರದಲ್ಲೇ ಸಚಿವರ ವಿರುದ್ಧ ಧಿಕ್ಕಾರದ ಕೂಗು ಕೇಳಿಬಂದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ತಮ್ಮ ಬೇಡಿಕೆಗಳನ್ನು ಸರ್ಕಾರ ಹಾಗೂ ಸಚಿವರು ಗಂಭೀರವಾಗಿ ಪರಿಗಣಿಸಬೇಕು ಎಂದು ಸಂಘಟನೆಗಳ ಮುಖಂಡರು ಆಗ್ರಹಿಸಿದರು. #ಜೇವರ್ಗಿ #ಅಜಯ್_ಸಿಂಗ್ #ಧಿಕ್ಕಾರದ_ಕೂಗು #ಆಕ್ರೋಶ #ಸಂಘಟನೆಗಳು1
- ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಭೀಮ್ ಆರ್ಮಿ ಬೃಹತ್ ಹೋರಾಟ ಮುಧೋಳ : ನಗರದ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ಹಾಗೂ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ಭೀಮ್ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ವತಿಯಿಂದ ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ಜರುಗಿತು. ಡಾ.ಅಂಬೇಡ್ಕರ್ ವೃತ್ತದಿಂದ ಸರ್ಕಾರಿ ಆಸ್ಪತ್ರೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಹೋರಾಟಗಾರರು ಮಾರ್ಗದುದ್ದಕ್ಕೂ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ಒದಗಿಸಬೇಕು, ಗುಣಮಟ್ಟದ ಚಿಕಿತ್ಸೆಗೆ ನೀಡಬೇಕು ಒತ್ತಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಆಸ್ಪತ್ರೆ ಆವರಣದಲ್ಲಿನ ಸಭೆಯಲ್ಲಿ ಮಾತನಾಡಿದ ಭೀಮ್ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಸುನೀಲ ಕಂಬೋಗಿ, ವಿವಿಧ ರೋಗಗಳಿಗೆ ಸಂಬಂಧಿಸಿದ ತಜ್ಞ ವೈದ್ಯರ ಕೊರತೆ, ವೈದ್ಯಕೀಯ ಸಿಬ್ಬಂದಿಯ ಅಸಮರ್ಪಕ ಲಭ್ಯತೆ, ಅಗತ್ಯ ಚಿಕಿತ್ಸೆಯಲ್ಲಿ ವಿಳಂಬ ಹಾಗೂ ಆಸ್ಪತ್ರೆಯ ಕೆಲ ವೈದ್ಯರನ್ನು ನಿಯೋಜನೆಯ ಮೇಲೆ ಬೇರೆ ಸರ್ಕಾರಿ ಆಸ್ಪತ್ರೆಗಳಿಗೆ ನಿಯೋಜಿಸಿರುವುದರಿಂದ ಬಡ ಮತ್ತು ಮಧ್ಯಮ ವರ್ಗದ ಜನರು ಬೇರೆ ಆಸ್ಪತ್ರೆಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕರಿಗೆ ಸೂಕ್ತ ಆರೋಗ್ಯ ಸೇವೆಗಳು ಸಿಗದೆ ಪರದಾಡುವಂತಾಗಿದೆ ಎಂದು ಹೇಳಿದರು. ನಗರದ ಸಾರ್ವಜನಿಕ ಆಸ್ಪತ್ರೆಯು ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರಿಗೆ ಪ್ರಮುಖ ಸರ್ಕಾರಿ ಆರೋಗ್ಯ ಸೇವಾ ಕೇಂದ್ರವಾಗಿದೆ. ಆದರೆ ಆಸ್ಪತ್ರೆಯಲ್ಲಿ ಅಗತ್ಯ ಪ್ರಮಾಣದ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಲಭ್ಯವಿಲ್ಲದಿರುವುದರಿಂದ ಸಾರ್ವಜನಿಕರು ಸೂಕ್ತ ಚಿಕಿತ್ಸೆ ಪಡೆಯಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕುರಿತು ಅಸಮಾಧಾನ ಹೊರಹಾಕಿದರು. ರಾಜ್ಯ ಸಂಚಾಲಕ ಅನಿಲ ಬರಗಿ ಮಾತನಾಡಿ, ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದೆ. ಮುಧೋಳ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯನ್ನು ಬೇರೆ ಆಸ್ಪತ್ರೆಗೆ ನಿಯೋಜನೆ ಮಾಡಿರುವ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ಖಾಲಿ ಇರುವ ವೈದ್ಯರನ್ನು ಮತ್ತು ಸಿಬ್ಬಂದಿಯನ್ನು ಭರ್ತಿ ಮಾಡಿ ಆಸ್ಪತ್ರೆಯ ಅವಶ್ಯಕತೆಯನ್ನು ಶೀಘ್ರದಲ್ಲಿಯೇ ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಸಾರ್ವಜನಿಕ ಆಸ್ಪತ್ರೆಯಲ್ಲಿ ಜನರಿಗೆ ಗುಣಮಟ್ಟದ ಮತ್ತು ಸಮಯೋಚಿತ ಚಿಕಿತ್ಸೆ ದೊರೆಯುವಂತೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಹಾಗೂ ಮುಧೋಳ ತಾಲ್ಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು. ಎಂದು ಆಗ್ರಹಿಸಿದರು. ರಾಜ್ಯ ಘಟಕದ ಅಧ್ಯಕ್ಷ ಲವಿತ ಮೇತ್ರಿ ಮಾತನಾಡಿ, ಸರ್ಕಾರಿ ಆಸ್ಪತ್ರೆಗೆ ಬರುವ ಬಡವರಿಗೆ ಗುಣಮಟ್ಟದ ಚಿಕಿತ್ಸೆ ಮರೀಚಿಕೆಯಾಗಿದೆ. ಕೂಡಲೇ ಅವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಮುಂದಿನ ದಿನಮಾನದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಡಿಎಚ್‍ಒ ಡಾ.ರಾಜಕುಮಾರ ಯರಗಲ್ ಮಾತನಾಡಿ, ಇಲ್ಲಿಂದ ನಿಯೋಜನೆಗೊಂಡ ನಾಲ್ಕು ವೈದ್ಯರ ನಿಯೋಜನೆ ಆದೇಶವನ್ನು ರದ್ದು ಮಾಡಲಾಗಿದೆ ಎಂದು ಪತ್ರಗಳನ್ನು ಪ್ರತಿಭಟನಾ ಕಾರರಿಗೆ ತೋರಿಸಿದರು. ತಹಶೀಲ್ದಾರ್ ಡಾ.ಚಿಕ್ಕಪ್ಪ ನಾಯಿಕ ಮನವಿ ಸ್ವೀಕರಿಸಿ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು. ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ ಮಲಘಾಣ, ಡಾ, ಅಶೋಕ ಸೂರ್ಯವಂಶಿ, ಮುಖಂಡರಾದ ಸದಾಶಿವ ಬಾಡಗಂಡಿ, ಸುಂದರ ದೊಡಮನಿ, ಪುಟ್ಟು ಮೇತ್ರಿ, ಮಹಾದೇವಿ ಅಮಲಝರಿ, ಗೀತಾ, ರವಿ ಬೆಳಗಲಿ, ಮಹಾದೇವ ಮೀಸಿ, ಭೀಮಸಿ ಭಜಂತ್ರಿ, ಶೇಖರ ಬಾಗಿ ಮುಂತಾದವರು ಇದ್ದರು.1
- ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಾಯಕರು ಬ್ಯಾರಿಕೇಡ್ ಮುರಿದು ಡಿಸಿ ಕಚೇರಿಗೆ ಮುತ್ತಿಗೆ ಹಾಕಿದರು.. ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಾಯಕರು ಬ್ಯಾರಿಕೇಡ್ ಮುರಿದು ಡಿಸಿ ಕಚೇರಿಗೆ ಮುತ್ತಿಗೆ ಹಾಕಿದರು..1
- ರೇವಣಸಿದ್ಧೇಶ್ವರ ಕೋರಿ ಮಠದಲ್ಲಿ ಗುಂಡಣ್ಣ ಡಿಗ್ಗಿ ಮಾತುಗಳಿಗೆ ಸಭಿಕರಿಂದ ಭರ್ಜರಿ ಚಪ್ಪಾಳೆ, ನಗೆ1
- ಭಿರಡಿ ಶ್ರೀ ಮಹಾದೇವ ಜಾತ್ರೆಗೆ ದೇಣಿಗೆಯ ನೀಡಿದ ಭಕ್ತರಿಗೆ ಸನ್ಮಾನ1
- ಇಳಕಲ್ ನಗರದಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಪೊಲೀಸರಿಂದ ಪಥಸಂಚಲನ ಇಳಕಲ್ಲ : ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆಯ ವತಿಯಿಂದ ಮಂಗಳವಾರ ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಯಿತು. ನಗರ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ಪಾಟೀಲ ಹಾಗೂ ಕ್ರೈಂ ಪಿಎಸ್‌ಐ ಸಿ. ಬಿ. ಕಿರಶ್ಯಾಳ ಅವರ ನೇತೃತ್ವದಲ್ಲಿ ಪಥಸಂಚಲನ ಜರುಗಿತು. ಪೊಲೀಸ್ ಠಾಣೆಯಿಂದ ಆರಂಭಗೊAಡ ಪಥಸಂಚಲನವು ಕಂಠಿ ವೃತ್ತ, ದ್ವಾರಕಾ ಲಾಡ್ಜ್, ಗ್ರಾಮ ಚಾವಡಿ, ಗಾಂಧಿ ಚೌಕ್, ಬಜಾರ್ ಬಸವಣ್ಣನ ಗುಡಿ, ಕೊಪ್ಪರದಪೇಟೆ ಹಾಗೂ ಪಶು ಆಸ್ಪತ್ರೆ ಮಾರ್ಗವಾಗಿ ಸಂಚರಿಸಿ ಪೊಲೀಸ್ ಬಯಲಿನಲ್ಲಿ ಮುಕ್ತಾಯಗೊಂಡಿತು. ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಸಾರ್ವಜನಿಕರಲ್ಲಿ ಸುರಕ್ಷತಾ ಭಾವ ಮೂಡಿಸಲು ಈ ಪಥಸಂಚಲನ ನಡೆಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.2
- ಈದ್ ಮಿಲಾದ್ ಹಿನ್ನೆಲೆ ಜಮಖಂಡಿಯಲ್ಲಿ ಪೊಲೀಸ್ ಪರೇಡ್ ! ಅಹಿತಕರ ಘಟನೆ ತಡೆಗೆ ಪೊಲೀಸರ ಕಟ್ಟೆಚ್ಚರ ! ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಪಡೆ ಬಲ ಪ್ರದರ್ಶನ ! ಡಿವೈಎಸ್‌ಪಿ ಸಯ್ಯದ ರೋಷನ್ ಜಮೀರ ಮಾರ್ಗದರ್ಶನದಲ್ಲಿ ಪರೇಡ್1
- ಉರ್ದು ಮಾಧ್ಯಮ ಶಾಲೆಗಳ ಖಾಲಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು TKS ಮನವಿ ಬೆಂಗಳೂರು: ಉರ್ದು ಮಾಧ್ಯಮ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಶೀಘ್ರವೇ ನೇಮಕಾತಿ ಆದೇಶ ಹೊರಡಿಸುವಂತೆ ಆಗ್ರಹಿಸಿ ಟಿಪ್ಪು ಕ್ರಾಂತಿ ಸೇನೆ (TKS) ವಿದ್ಯಾರ್ಥಿ ಘಟಕದ ವತಿಯಿಂದ ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು. ಉರ್ದು ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದ್ದು, ಖಾಲಿ ಇರುವ ಹುದ್ದೆಗಳಿಗೆ ಶೀಘ್ರ ನೇಮಕಾತಿ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು. ಸರ್ಕಾರವು 800 ಶಿಕ್ಷಕರ ನೇಮಕಾತಿಗೆ ಸೀಮಿತಗೊಳಿಸದೆ, ಉರ್ದು ಮಾಧ್ಯಮ ಶಾಲೆಗಳಲ್ಲಿ ಪ್ರಸ್ತುತ ಖಾಲಿ ಇರುವ ಸಂಪೂರ್ಣ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ TKS ವಿದ್ಯಾರ್ಥಿ ಘಟಕ (ಪುರುಷ) ರಾಜ್ಯ ಅಧ್ಯಕ್ಷ ಶಬ್ಬೀರ ಅಹ್ಮದ್ ಮುಜಾವಾರ, ಮುಜೀಬ್ ಅಫಜಲಪುರ ಬಂದೇನವಾಜ ಪುಣೆಕರ ಹಾಗೂ TKS ರಾಜ್ಯ ಮಹಿಳಾ ವಿದ್ಯಾರ್ಥಿ ಘಟಕದ ಅಧ್ಯಕ್ಷೆ ಆಯಿಷಾ ದೌಲತಕೋಟೆ ಉಪಸ್ಥಿತರಿದ್ದರು.1
- ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಜಿಲ್ಲೆ ಬಾಗಲಕೋಟೆ.. ಸಾಮಾನ್ಯ ಮಾಹಿತಿ ಬಾಗಲಕೋಟೆ ಜಿಲ್ಲೆ ಕರ್ನಾಟಕದ ಉತ್ತರ ಭಾಗದಲ್ಲಿರುವ ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿದೆ. ಜಿಲ್ಲೆ: ಬಾಗಲಕೋಟೆ ರಾಜ್ಯ: ಕರ್ನಾಟಕ ಜಿಲ್ಲಾ ಕೇಂದ್ರ: ಬಾಗಲಕೋಟೆ ಸ್ಥಾಪನೆ: 1997 (ವಿಜಯಪುರ ಜಿಲ್ಲೆಯಿಂದ ಪ್ರತ್ಯೇಕಿಸಲಾಯಿತು) ವಿಸ್ತೀರ್ಣ: ಸುಮಾರು 6,575 ಚದರ ಕಿ.ಮೀ. ಜನಸಂಖ್ಯೆ: ಸುಮಾರು 19 ಲಕ್ಷ (2011 ಜನಗಣತಿ) ಪ್ರಮುಖ ಭಾಷೆ: ಕನ್ನಡ ಪ್ರಮುಖ ಪ್ರವಾಸಿ ತಾಣಗಳು ಬಾದಾಮಿ ಗುಹಾ ದೇವಾಲಯಗಳು – ಚಾಲುಕ್ಯರ ಕಾಲದ ಪ್ರಸಿದ್ಧ ಶಿಲಾ ಗುಹೆಗಳು. ಐಹೊಳೆ – ಭಾರತೀಯ ದೇವಾಲಯ ವಾಸ್ತುಶಿಲ್ಪದ ತೊಟ್ಟಿಲು ಎಂದು ಕರೆಯಲಾಗುತ್ತದೆ. ಪಟ್ಟದಕಲ್ಲು – ಯುನೆಸ್ಕೋ ವಿಶ್ವ ಪರಂಪರೆಯ ತಾಣ. ಕುಡಲಸಂಗಮ – ಬಸವಣ್ಣನವರ ಐಕ್ಯಸ್ಥಳ. ನದಿಗಳು ಕೃಷ್ಣಾ ನದಿ ಘಟಪ್ರಭಾ ನದಿ ಮಲಪ್ರಭಾ ನದಿ ಕೃಷಿ ಬಾಗಲಕೋಟೆ ಜಿಲ್ಲೆಯ ಪ್ರಮುಖ ಬೆಳೆಗಳು: ಕಬ್ಬು ಜೋಳ ಹತ್ತಿ ದಾಳಿಂಬೆ ದ್ರಾಕ್ಷಿ ಮೆಣಸಿನಕಾಯಿ ತೊಗರಿ ಕೈಗಾರಿಕೆ ಸಿಮೆಂಟ್ ಕೈಗಾರಿಕೆ ಸಕ್ಕರೆ ಕಾರ್ಖಾನೆಗಳು ಕೃಷಿ ಆಧಾರಿತ ಕೈಗಾರಿಕೆಗಳು ವಿಶೇಷತೆಗಳು ಚಾಲುಕ್ಯರ ಐತಿಹಾಸಿಕ ಪರಂಪರೆಯ ಕೇಂದ್ರ. ಯುನೆಸ್ಕೋ ವಿಶ್ವ ಪರಂಪರೆ ತಾಣವಾದ ಪಟ್ಟದಕಲ್ಲು ಇಲ್ಲಿದೆ. ಬಸವಣ್ಣನವರೊಂದಿಗೆ ಸಂಬಂಧ ಹೊಂದಿರುವ ಕುಡಲಸಂಗಮ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ. ಕೃಷಿ ಹಾಗೂ ತೋಟಗಾರಿಕೆಯಲ್ಲಿ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿದೆ. 🖋️ ಯುವ ಜ್ಞಾನ ಕನ್ನಡ ದಿನ ಪತ್ರಿಕೆ ಬಾಗಲಕೋಟೆ2