ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಜಿಲ್ಲೆ ಬಾಗಲಕೋಟೆ.. ಸಾಮಾನ್ಯ ಮಾಹಿತಿ ಬಾಗಲಕೋಟೆ ಜಿಲ್ಲೆ ಕರ್ನಾಟಕದ ಉತ್ತರ ಭಾಗದಲ್ಲಿರುವ ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿದೆ. ಜಿಲ್ಲೆ: ಬಾಗಲಕೋಟೆ ರಾಜ್ಯ: ಕರ್ನಾಟಕ ಜಿಲ್ಲಾ ಕೇಂದ್ರ: ಬಾಗಲಕೋಟೆ ಸ್ಥಾಪನೆ: 1997 (ವಿಜಯಪುರ ಜಿಲ್ಲೆಯಿಂದ ಪ್ರತ್ಯೇಕಿಸಲಾಯಿತು) ವಿಸ್ತೀರ್ಣ: ಸುಮಾರು 6,575 ಚದರ ಕಿ.ಮೀ. ಜನಸಂಖ್ಯೆ: ಸುಮಾರು 19 ಲಕ್ಷ (2011 ಜನಗಣತಿ) ಪ್ರಮುಖ ಭಾಷೆ: ಕನ್ನಡ ಪ್ರಮುಖ ಪ್ರವಾಸಿ ತಾಣಗಳು ಬಾದಾಮಿ ಗುಹಾ ದೇವಾಲಯಗಳು – ಚಾಲುಕ್ಯರ ಕಾಲದ ಪ್ರಸಿದ್ಧ ಶಿಲಾ ಗುಹೆಗಳು. ಐಹೊಳೆ – ಭಾರತೀಯ ದೇವಾಲಯ ವಾಸ್ತುಶಿಲ್ಪದ ತೊಟ್ಟಿಲು ಎಂದು ಕರೆಯಲಾಗುತ್ತದೆ. ಪಟ್ಟದಕಲ್ಲು – ಯುನೆಸ್ಕೋ ವಿಶ್ವ ಪರಂಪರೆಯ ತಾಣ. ಕುಡಲಸಂಗಮ – ಬಸವಣ್ಣನವರ ಐಕ್ಯಸ್ಥಳ. ನದಿಗಳು ಕೃಷ್ಣಾ ನದಿ ಘಟಪ್ರಭಾ ನದಿ ಮಲಪ್ರಭಾ ನದಿ ಕೃಷಿ ಬಾಗಲಕೋಟೆ ಜಿಲ್ಲೆಯ ಪ್ರಮುಖ ಬೆಳೆಗಳು: ಕಬ್ಬು ಜೋಳ ಹತ್ತಿ ದಾಳಿಂಬೆ ದ್ರಾಕ್ಷಿ ಮೆಣಸಿನಕಾಯಿ ತೊಗರಿ ಕೈಗಾರಿಕೆ ಸಿಮೆಂಟ್ ಕೈಗಾರಿಕೆ ಸಕ್ಕರೆ ಕಾರ್ಖಾನೆಗಳು ಕೃಷಿ ಆಧಾರಿತ ಕೈಗಾರಿಕೆಗಳು ವಿಶೇಷತೆಗಳು ಚಾಲುಕ್ಯರ ಐತಿಹಾಸಿಕ ಪರಂಪರೆಯ ಕೇಂದ್ರ. ಯುನೆಸ್ಕೋ ವಿಶ್ವ ಪರಂಪರೆ ತಾಣವಾದ ಪಟ್ಟದಕಲ್ಲು ಇಲ್ಲಿದೆ. ಬಸವಣ್ಣನವರೊಂದಿಗೆ ಸಂಬಂಧ ಹೊಂದಿರುವ ಕುಡಲಸಂಗಮ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ. ಕೃಷಿ ಹಾಗೂ ತೋಟಗಾರಿಕೆಯಲ್ಲಿ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿದೆ. 🖋️ ಯುವ ಜ್ಞಾನ ಕನ್ನಡ ದಿನ ಪತ್ರಿಕೆ ಬಾಗಲಕೋಟೆ
ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಜಿಲ್ಲೆ ಬಾಗಲಕೋಟೆ.. ಸಾಮಾನ್ಯ ಮಾಹಿತಿ ಬಾಗಲಕೋಟೆ ಜಿಲ್ಲೆ ಕರ್ನಾಟಕದ ಉತ್ತರ ಭಾಗದಲ್ಲಿರುವ ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿದೆ. ಜಿಲ್ಲೆ: ಬಾಗಲಕೋಟೆ ರಾಜ್ಯ: ಕರ್ನಾಟಕ ಜಿಲ್ಲಾ ಕೇಂದ್ರ: ಬಾಗಲಕೋಟೆ ಸ್ಥಾಪನೆ: 1997 (ವಿಜಯಪುರ ಜಿಲ್ಲೆಯಿಂದ ಪ್ರತ್ಯೇಕಿಸಲಾಯಿತು) ವಿಸ್ತೀರ್ಣ: ಸುಮಾರು 6,575 ಚದರ ಕಿ.ಮೀ. ಜನಸಂಖ್ಯೆ: ಸುಮಾರು 19 ಲಕ್ಷ (2011 ಜನಗಣತಿ) ಪ್ರಮುಖ ಭಾಷೆ: ಕನ್ನಡ ಪ್ರಮುಖ ಪ್ರವಾಸಿ ತಾಣಗಳು ಬಾದಾಮಿ ಗುಹಾ ದೇವಾಲಯಗಳು – ಚಾಲುಕ್ಯರ ಕಾಲದ ಪ್ರಸಿದ್ಧ ಶಿಲಾ ಗುಹೆಗಳು. ಐಹೊಳೆ – ಭಾರತೀಯ ದೇವಾಲಯ
ವಾಸ್ತುಶಿಲ್ಪದ ತೊಟ್ಟಿಲು ಎಂದು ಕರೆಯಲಾಗುತ್ತದೆ. ಪಟ್ಟದಕಲ್ಲು – ಯುನೆಸ್ಕೋ ವಿಶ್ವ ಪರಂಪರೆಯ ತಾಣ. ಕುಡಲಸಂಗಮ – ಬಸವಣ್ಣನವರ ಐಕ್ಯಸ್ಥಳ. ನದಿಗಳು ಕೃಷ್ಣಾ ನದಿ ಘಟಪ್ರಭಾ ನದಿ ಮಲಪ್ರಭಾ ನದಿ ಕೃಷಿ ಬಾಗಲಕೋಟೆ ಜಿಲ್ಲೆಯ ಪ್ರಮುಖ ಬೆಳೆಗಳು: ಕಬ್ಬು ಜೋಳ ಹತ್ತಿ ದಾಳಿಂಬೆ ದ್ರಾಕ್ಷಿ ಮೆಣಸಿನಕಾಯಿ ತೊಗರಿ ಕೈಗಾರಿಕೆ ಸಿಮೆಂಟ್ ಕೈಗಾರಿಕೆ ಸಕ್ಕರೆ ಕಾರ್ಖಾನೆಗಳು ಕೃಷಿ ಆಧಾರಿತ ಕೈಗಾರಿಕೆಗಳು ವಿಶೇಷತೆಗಳು ಚಾಲುಕ್ಯರ ಐತಿಹಾಸಿಕ ಪರಂಪರೆಯ ಕೇಂದ್ರ. ಯುನೆಸ್ಕೋ ವಿಶ್ವ ಪರಂಪರೆ ತಾಣವಾದ ಪಟ್ಟದಕಲ್ಲು ಇಲ್ಲಿದೆ. ಬಸವಣ್ಣನವರೊಂದಿಗೆ ಸಂಬಂಧ ಹೊಂದಿರುವ ಕುಡಲಸಂಗಮ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ. ಕೃಷಿ ಹಾಗೂ ತೋಟಗಾರಿಕೆಯಲ್ಲಿ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿದೆ. 🖋️ ಯುವ ಜ್ಞಾನ ಕನ್ನಡ ದಿನ ಪತ್ರಿಕೆ ಬಾಗಲಕೋಟೆ
- ಬಾಗಲಕೋಟೆ ನಗರದಲ್ಲಿ ಸಡಗರ ಸಂಭ್ರಮದಿಂದ ಈದ್ ಮಿಲಾದ್ ಆಚರಿಸಲಾಯಿತು.1
- ಪ್ರತಿಭಟನಾ ಸ್ಥಳಕ್ಕೆ ಡಿಎಚ್ಒ ಯರಗಲ್ಲ ಭೇಟಿನೀಡಿ ಹೋರಾಟಗಾರರೊಂದಿಗೆ ಮಾತುಕಥೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಡಿಎಚ್ಒ ಯರಗಲ್ಲ ಭೇಟಿ ಮುಧೋಳ : ನಗರದಲ್ಲಿನ ತಾಲೂಕು ಸಾರ್ವಜನಿಕರ ಆಸ್ಪತ್ರೆಯಲ್ಲಿನ ಸಿಬ್ಬಂದಿ ಕೊರತೆ ಹಾಗೂ ಅವ್ಯವಸ್ಥೆ ವಿರುದ್ಧ ಭೀಮ್ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನಾ ಸ್ಥಳಕ್ಕೆ ಡಿಎಚ್ಒ ರಾಜಕುಮಾರ ಯರಗಲ್ಲ ಅವರು ಭೇಟಿ ನೀಡಿ ಹೋರಾಟಗಾರರೊಂದಿಗೆ ಮಾತುಕಥೆ ನಡೆಸಿದರು.1
- ಹಜರತ್ ಮಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ಅಂಗವಾಗಿ ಗುಳೇದಗುಡ್ಡ ಪಟ್ಟಣದಲ್ಲಿ ಸಂಭ್ರಮದ ಈದ್ ಮಿಲಾದ್ ಮೆರವಣಿಗೆ ಗುಳೇದಗುಡ್ಡ: ಪಟ್ಟಣದಲ್ಲಿ ಹಜರತ್ ಮಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ನಿಮಿತ್ತವಾಗಿ ಬುಧವಾರ ಪವಿತ್ರ ಈದ್ ಮಿಲಾದ್ ಹಬ್ಬದ ಅದ್ದೂರಿ ಮೆರವಣಿಗೆ ನಡೆಯಿತು. ಹಜರತ್ ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನಾಚರಣೆ ಅಂಗವಾಗಿ ಆಚರಿಸಲಾಗುವ ಈದ್ ಮಿಲಾದ್ ಹಬ್ಬದ ಸಂಭ್ರಮದ ಮೆರವಣಿಗೆ ಪಟ್ಟಣದ ಭಾಗವಾನ್ ಪೇಟೆಯಿಂದ ಆರಂಭವಾಗಿ ಪವಾರ್ ಕ್ರಾಸ್, ಪುರಸಭೆ, ಸರಾಫಬಜಾರ್, ಕಂಠಿಪೇಟೆ, ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ ಮೂಲಕ ಹಾಯ್ದು ಭಾಗವಾನ್ ಪೇಟೆಗೆ ತಲುಪಿತು. ಮೆರವಣಿಗೆಯಲ್ಲಿ ಸಮಾಜದ ಧರ್ಮ ಗುರುಗಳಾದ ಮುಪ್ತಿ ಸಕಾಫಿ ಅಬೂಬಕರ್ ಹಾಗೂ ಸಮಾಜದ ಮುಖಂಡರಾದ ಮುಬಾರಕ್ ಮಂಗಳೂರು, ಅಂಜುಮನ್ ಕಮೀಟಿ ಅಧ್ಯಕ್ಷ ರಜಾಕ್ ಕುದರಿ, ಸಾಧನಿ ಭಾಷಾ, ಮಶಾಕ್ ನಲವತ್ತವಾಡ, ಜಾವಿದ್ ಮೊಮಿನ್, ಜಿಲಾನಿ ಮುಜಾಹಿದ್, ರಫಿಕ್ ಕಲ್ಬುರ್ಗಿ, ದೇವರಾಜ ಕಟ್ಟಿಮನಿ, ಗೋವಿಂದ ರಾಠೋಡ, ರಫಿಕ್ ಮಕನದಾರ, ಮೋದಿನಸಾಬ್ ಸದರಿ, ರೀಯಾಜ್ ಚೊಳಚಗುಡ್ಡ, ಗುಲಾಮ್ ಹುಸೇನ್ ಇಲ್ಲಕಲ್, ಅಲ್ಲಾಸಾಬ ದೋಟೆಗಾರ ಸೇರಿದಂತೆ ಸಮಾಜದ ಮುಖಂಡರು ಇದ್ದರು. ಮೆರವಣಿಗೆಯಲ್ಲಿ ಸಮಾಜದ ಧರ್ಮ ಮುಖ್ಯಗುರುಗಳಾದ ಮುಪ್ತಿ ಸಕಾಫಿ ಅಬೂಬಕರ್ ಅವರಿಗೆ ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಮುಬಾರಕ್ ಮಂಗಳೂರ ಅವರು ಸನ್ಮಾನಿಸಿದರು.2
- ಮುಂದಿನ ತಿಂಗಳ ಮೊದಲ ಶನಿವಾರ ಲೋಕಾಪುರದಲ್ಲಿ ಪ್ರಜಾಸೇವಾ ಆಂದೋಲನ ಮುಧೋಳ : ಸರ್ಕಾರದ ಮಟ್ಟದಲ್ಲಿ ನೂತನವಾಗಿ ಕಾರ್ಯರಂಭಗೊಂಡಿರುವ ಪ್ರಜಾಸೇವಾ ಇಲಾಖೆಯಿಂದ ಸೆ.5ರಂದು ತಾಲೂಕಿನ ಲೋಕಾಪುರ ಪಟ್ಟಣದಲ್ಲಿ ಪ್ರಜಾಸೇವಾ ಆಂದೋಲನ ಆರಂಭಗೊಳ್ಳಲಿದೆ ಎಂದು ತಹಶಿಲ್ದಾರ್ ಡಾ.ಚಿಕ್ಕಪ್ಪ ನಾಯಕ ಹೇಳಿದರು. ನಗರದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಶನಿವಾರ ಆಯ್ದ ನಗರ, ಪಟ್ಟಣ ಹಾಗೂ ಗ್ರಾಮಗಳಲ್ಲಿ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಮೊದಲ ಹಾಗೂ ಎರಡನೇ ಶನಿವಾರ ಸಚಿವರು ಆಂದೋಲನ ಹಮ್ಮಿಕೊಳ್ಳುವ ಗ್ರಾಮವನ್ನು ಆಯ್ಕೆ ಮಾಡುತ್ತಾರೆ. ಎರಡು ಹಾಗೂ ಮೂರನೇ ಶನಿವಾರ ಶಾಸಕರಯ ಸ್ಥಳ ಆಯ್ಕೆ ಮಾಡಲಿದ್ದಾರೆ ಎಂದರು. ಆಂದೋಲನದ ವೇಳೆ ಸರ್ಕಾರವೇ ಜನರ ಬಳಿ ತೆರಳಿ ಅವರ ಕುಂದುಕೊರತೆ ಆಲಿಸಿ ಪರಿಹಾರ ಕಲ್ಪಿಸಲಿದೆ ಎಂದರು. ಮುಧೋಳ ತಾಲೂಕಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ಪ್ರಜಾ ಸೇವಾ ಆಂದೋಲನದ ಸ್ಥಳಗಳನ್ನು ನಿಗಿದಿ ಮಾಡಲಾಗಿದೆ ಎಂದು ತಿಳಿಸಿದ ಅವರು, ಮೊದಲ ಶನಿವಾರ ಲೋಕಾಪುರ, ಎರಡನೇ ಶನುವಾರ ಮುಧೋಳ, ಮೂರನೇ ಶನಿವಾರ ಬೆಳಗಲಿ ಹಾಗೂ ಕೊನೆಯ ಶನಿವಾರ ಮಂಟೂರ ಗ್ರಾಮದಲ್ಲಿ ಆಂದೋಲನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.1
- ಮುಧೋಳದಲ್ಲಿ ಈದ್ ಮಿಲಾದ್: ಶಾಂತಿ ಸುವ್ಯವಸ್ಥೆಗಾಗಿ ಪೊಲೀಸರ ಆಕರ್ಷಕ ಪಥಸಂಚಲನ ಮುಧೋಳ: ನಾಳೆಯ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮಂಗಳವಾರ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಪಥಸಂಚಲನ ನಡೆಸಿದರು. ನಗರದ ಪೊಲೀಸ್ ಠಾಣೆಯಿಂದ ಆರಂಭಗೊಂಡ ಈ ಪಥಸಂಚಲನವು ಶಿವಾಜಿ ವೃತ್ತ, ಬರಗಿ ಮಸೀದಿ, ಗಾಂಧಿ ಚೌಕ, ತಂಬಾಕ್ ಚೌಕ, ಜೈ ಭಾರತ ಸರ್ಕಲ್, ಜಡಗಣ್ಣ-ಬಾಲಣ್ಣ ವೃತ್ತ, ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ್ ವೃತ್ತ ಸೇರಿದಂತೆ ನಗರದ ಪ್ರಮುಖ ಬೀದಿಗಳ ಮೂಲಕ ಸಾಗಿತು. ಈ ವೇಳೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿ ಮಾತನಾಡಿದ ಸಿಪಿಐ ಎಂ. ನಾಗರಡ್ಡಿ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಹಬ್ಬದ ವಾತಾವರಣವನ್ನು ಕಾಪಾಡಬೇಕು ಎಂದು ಮನವಿ ಮಾಡಿದರು. ಪಥಸಂಚಲನದಲ್ಲಿ ಸಿಪಿಐ ಎಂ. ನಾಗರಡ್ಡಿ, ಮುಧೋಳ ಪಿಎಸ್‌ಐ ಅಜೀತಕುಮಾರ ಹೊಸಮನಿ, ಲೋಕಾಪುರ ಪಿಎಸ್‌ಐ ಕಾಡಪ್ಪ ಜಕ್ಕಣ್ಣವರ, ಕ್ರೈಂ ಪಿಎಸ್‌ಐ ಪ್ರಕಾಶ ಮುರನಾಳ ಹಾಗೂ ಇಲಾಖೆಯ ಸಿಬ್ಬಂದಿಯಾದ ವಸಂತ್ ಬೀಳಗಿ, ಮಲ್ಲು ವಗ್ಗೇನವರ, ಹಣಮಂತ ಮಾದರ, ಮನೋಹರ ಕುರಿ ಸೇರಿದಂತೆ ಗೃಹ ರಕ್ಷಕ ದಳದ ಸಿಬ್ಬಂದಿ ಒಟ್ಟು 180ಕ್ಕೂ ಹೆಚ್ಚು ಅಧಿಕ ಸಿಬ್ಬಂದಿ ಭಾಗವಹಿಸಿದ್ದರು.1
- ಈದ್ ಮಿಲಾದ ಹಬ್ಬ ; ನಾವೆಲ್ಲರೂ ಒಂದೇ ಎಂದು ಹೇಳಿದ ಸವಿತಾ ಅಶೋಕ ಚಲವಾದಿ ಇಳಕಲ್ ನಗರದಲ್ಲಿ ಈದ್ ಮಿಲಾದ್ ಹಬ್ಬದ ನಿಮಿತ್ಯವಾಗಿ ಮುಸ್ಲಿಂ ಬಾಂಧವರು ಮೆರವಣಿಗೆ ನಡೆಸಿದರು. ದಾರಿಯಲ್ಲಿ ತಂಪು ಪಾನೀಯವನ್ನು ವಿತರಿಸಿ ಮಾತನಾಡಿದ ಸಮಾಜ ಸೇವಕಿ ಸವಿತಾ ಅಶೋಕ್ ಚಲವಾದಿ ಮಾತನಾಡಿ ಹಿಂದೂ ಮುಸ್ಲಿಂ ಎಂಬ ಬೇಧ ಮಾಡದೆ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಇದ್ದೇವೆ. ಮುಂದು ಇರುತ್ತೇವೆ ಎಂಬ ಸಂದೇಶವನ್ನು ನೀಡಿದರು.1
- ವಿಜಯಪುರ ನಗರದಲ್ಲಿ ಮಂಗಳವಾರ ಈದ್ ಮಿಲಾದ ಅಂಗವಾಗಿ ಮುಸ್ಲೀಮ ಭಾಂದವರು ಭವ್ಯ ಮೆರೆವಣಿಗೆ ನಡೆಯತು1
- ಜಿಲ್ಲೆಯಲ್ಲಿ ಬಾಕಿರುವ ಬಿಲ್ಲನ್ನು ಶೀಘ್ರದಲ್ಲೇ ಪಾವತಿಸಲು ಸೂಚನೆ ನೀಡಲಾಗಿದೆ: ಡಿಸಿ ಸಂಗಪ್ಪ1