Shuru
Apke Nagar Ki App…
ಸರ್ಕಾರಿ ಬಸ್ ಡಿಕ್ಕಿ ಹೊಡೆದು ವಿಧ್ಯಾರ್ಥಿಗಳಿಗೆ ಗಾಯ ಚಿತ್ರದುರ್ಗದ ಕೆ ಎಸ್ ಆರ್ ಟಿ ಸಿ ಡಿಪೋ ಮುಂಬಾಗ ಬಸ್ ಮತ್ತು ಅಪ್ಪೇ ಆಟೋ ನಡುವೆ ಅಪಘಾತ ನಡೆದು ಶಾಲಾ ಮಕ್ಕಳು ಗಾಯಗೊಂಡ ಘಟನೆ ನಡೆದಿದೆ. ಚಿತ್ರದುರ್ಗ ನಗರದ ಮುಖ್ಯ ರಸ್ತೆಯ ಕೆ ಎಸ್ ಆರ್ ಟಿ ಸಿ ಡಿಪೋ ಮುಂಬಾಗ ಶನಿವಾರ ಬೆಳಗ್ಗೆ 8 ಗಂಟೆ ವೇಳೆ ಘಟನೆ ನಡೆದಿದ್ದು ಶರಣ ಬಸವೇಶ್ವರ ಶಾಲೆಯ ಏಳು ಮಂದಿ ವಿಧ್ಯಾರ್ಥಿಗಳು ಹಾಗೂ ಆಟೋ ಚಾಲಕ ಗಾಯಗೊಂಡಿದ್ದಾರೆ
Vinay P palekar
ಸರ್ಕಾರಿ ಬಸ್ ಡಿಕ್ಕಿ ಹೊಡೆದು ವಿಧ್ಯಾರ್ಥಿಗಳಿಗೆ ಗಾಯ ಚಿತ್ರದುರ್ಗದ ಕೆ ಎಸ್ ಆರ್ ಟಿ ಸಿ ಡಿಪೋ ಮುಂಬಾಗ ಬಸ್ ಮತ್ತು ಅಪ್ಪೇ ಆಟೋ ನಡುವೆ ಅಪಘಾತ ನಡೆದು ಶಾಲಾ ಮಕ್ಕಳು ಗಾಯಗೊಂಡ ಘಟನೆ ನಡೆದಿದೆ. ಚಿತ್ರದುರ್ಗ ನಗರದ ಮುಖ್ಯ ರಸ್ತೆಯ ಕೆ ಎಸ್ ಆರ್ ಟಿ ಸಿ ಡಿಪೋ ಮುಂಬಾಗ ಶನಿವಾರ ಬೆಳಗ್ಗೆ 8 ಗಂಟೆ ವೇಳೆ ಘಟನೆ ನಡೆದಿದ್ದು ಶರಣ ಬಸವೇಶ್ವರ ಶಾಲೆಯ ಏಳು ಮಂದಿ ವಿಧ್ಯಾರ್ಥಿಗಳು ಹಾಗೂ ಆಟೋ ಚಾಲಕ ಗಾಯಗೊಂಡಿದ್ದಾರೆ
More news from ಕರ್ನಾಟಕ and nearby areas
- ಚಿತ್ರದುರ್ಗದ ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿ ಮಾದಿಗ ಸಮುದಾಯದ ಮುಖಂಡರು ಫ್ಲೆಕ್ಸ್ ಗಳನ್ನ ಹರಿದು ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಚಿತ್ರದುರ್ಗದ ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿ ದಿಡೀರನೇ ಆಗಮಿಸಿದ ಮಾಧಿಗ ಸಮುದಾಯದ ಮುಖಂಡರು ಕೈನಲ್ಲಿ ಸಿ ಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಹಾಗೂ ಹೆಚ್ ಸಿ ಮಹದೇವಪ್ಪ ಅವರ ಭಾವಚಿತ್ರಗಳನ್ನ ಹಿಡಿದು ಒಳ ಮೀಸಲಾತಿ ಜಾರಿ ಮಾಡದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ1
- ಚಿತ್ರದುರ್ಗದಲ್ಲಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಮೂವರು ರೈತರು ತಡರಾತ್ರಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಭದ್ರಾ ಮೇಲ್ದಂಡೆ ಯೋಜನೆಗೆ ಶೀಘ್ರ ಹಣ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸತತ ಮೂರನೇ ದಿನವೂ ಉಪವಾಸ ಸತ್ಯಾಗ್ರಹ ಮುಂದುವರಿದಿತ್ತು. ತಡರಾತ್ರಿ ರೈತ ಮುಖಂಡ ಕೆ.ಟಿ. ತಿಪ್ಪೇಸ್ವಾಮಿ, ಸಣ್ಣ ತಿಮ್ಮಣ್ಣ ಹಾಗೂ ಜಿಲ್ಲಾ ಉಪಾಧ್ಯಕ್ಷ ಸಣ್ಣೀರಪ್ಪ ಅಸ್ವಸ್ಥಗೊಂಡಿದ್ದು, ತಕ್ಷಣ ಅಂಬುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮೂವರೂ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಮೂರು ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಸಮಸ್ಯೆ ಆಲಿಸಲು ಬರಲಿಲ್ಲವೆಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.1
- ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ರವರ ಜನ್ಮ ದಿನಾಚರಣೆಯನ್ನು ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರು, ಮುಖಂಡರು ಹಾಗೂ ಕಾರ್ಯಕರ್ತರೊಡನೆ ಪೌರಕಾರ್ಮಿಕರಿಗೆ ಕೇಕ್ ವಿತರಿಸುವ ಮೂಲಕ ಆಚರಿಸಿ ಸಂಭ್ರಮಿಸಿದರು.1
- Post by Sharanugouda Patil1
- Post by YSRmedia vijayanagaraupsates1
- ಹಾವೇರಿ ತಾಲೂಕಿನ ನೆಗಳೂರ ಗ್ರಾಮದಲ್ಲಿ ಬುಧವಾರ ಸಂಭ್ರಮ ಸಡಗರದಿಂದ ಹೋಳಿ ಹಬ್ಬ ಆಚರಣೆಗೆ ಚಾಲನೆ ನೀಡಲಾಯಿತು. ಬೆಳಗಿನ ಜಾವ ಗ್ರಾಮದ ಆಂಜನೇಯ ದೇವಾಲಯದ ಮುಂಭಾಗದಲ್ಲಿ ಗ್ರಾಮಸ್ಥರು ಕಾಮದಹನ ಮಾಡುವುದರ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು. ಇನ್ನೂ ಕಾಮದಹನ ಅಗ್ನಿಯ ಕೆಂಡವನ್ನು ಮನೆಗೆ ತಂದು ಕಡಲೆಕಾಳುಗಳನ್ನು ಅದರಲ್ಲಿ ಹುರಿದುಕೊಂಡು ತಿನ್ನುವುದು ಸಂಪ್ರದಾಯವಿದೆ. ಇನ್ನೂ ರೖತಾಪಿ ವರ್ಗದವರು ಕುಸುಬಿ ಗಿಡವನ್ನು ಸುಟ್ಟು ಮನೆಯಲ್ಲಿ ಕಟ್ಟುವರು ಇದರಿಂದ ಮನೆಗೆ ಹಾಗೂ ಪಶುಗಳಿಗೆ ಯಾವದೇ ತರಹದ ದೃಷ್ಟಿ ಹಾಗೂ ಅನಾರೋಗ್ಯದ ಸಮಸ್ಯೆಗಳು ಆಗದು ಎಂಬ ನಂಬಿಕೆಯಿದೆ. ಗ್ರಾಮದ ಕಾಮನಕಟ್ಟೆ ಎಂಬಲ್ಲಿ ಶತಮಾನಗಳಿಂದ ರತಿಮನ್ಮಥರ ಪ್ರತಿಷ್ಠಾಪನೆ ಮಾಡುತ್ತಾ ಬಂದಿದ್ದು. ನಂತರ ಬಂಡಿ ಉತ್ಸವದ ಮೂಲಕ ರತಿಮನ್ಮಥರ ಮೇರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಾಮನಕಟ್ಟೆಗೆ ತಲುಪಿ ಕಾಮದಹನ ಮಾಡಲಾಗುತ್ತದೆ. ಕಾಮದಹನ ವೇಳೆ ಕಾಮನ ಭಾವಚಿತ್ರದ ಕಾಗದಕ್ಕೆ ಆಗ್ನಿ ಸ್ಪರ್ಶ ಮಾಡಿದಾಗ ಅದು ಯಾವ ದಿಕ್ಕಿನ ಕಡೆಗೆ ಕಾಗದ ತುಂಡು ಬೀಳುತ್ತೂ ಆಕಡೆಗೆ ಹೆಚ್ಚು ಮಳೆ ಬೆಳೆ ಸಮೃದ್ಧಿ ಯಾಗುವುದು ಎಂಬದು ರೖತಾಪಿವರ್ಗದ ನಂಬುಗೆಯಾಗಿದೆ. ಒಟ್ಟಾರೆಯಾಗಿ ನೆಗಳೂರಿನಲ್ಲಿ ಹೋಳಿ ಹಬ್ಬ ಸಂಭ್ರಮವೂ ಮನೆ ಮನೆಗಳಲ್ಲಿ ತುಂಬಿದೆ. ಇನ್ನೂ ಮನೆಗಳಲ್ಲಿ ಹಬ್ಬದ ನಿಮಿತ್ಯ ಸಿಹಿ ಖಾದ್ಯಗಳ ತಯಾರಿಯಲ್ಲಿ ಮಹಿಳೆಯರು ಮಗ್ನರಾಗಿದ್ದಾರೆ.10
- ಚಿತ್ರದುರ್ಗದ ವಾಲ್ಮೀಕಿ ಭವನದಲ್ಲಿಶ್ರೀ ಯೋಗಿ ನಾರೇಯಣ ಯತೀಂದ್ರರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ನಗರದ ವಾಲ್ಮೀಕಿ ಭವನದಲ್ಲಿ ಆಯೋಜಿಸಲಾದ ಶ್ರೀ ಯೋಗಿ ನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.1
- ಲಕ್ಷ್ಮೀ ನರಸಿಂಹ ಸ್ವಾಮಿ ಜಾತ್ರೆಗೆ ತಟ್ಟಿದ ಕೇತಗ್ರಸ್ಥ ರಕ್ತ ಚಂದ್ರಗ್ರಹಣ.. ಚಿತ್ರದುರ್ಗ : ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೆಚ್ ಡಿ ಪುರದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ರಥೋತ್ಸವದ ಸಮಯವನ್ನು ಬದಲಾಯಿಸಲಾಗಿತ್ತು. ಸಮಯ ಬದಲಾದರೂ, ರಥೋತ್ಸವದ ವೇಳೆ ಗರುಡ ಪಕ್ಷಿ ಕಾಣಿಸಿಕೊಂಡಿದ್ದು, ಇದನ್ನು ಪವಾಡವೆಂದು ಭಾವಿಸಿದ ಸಾವಿರಾರು ಭಕ್ತರು ಸಂತಸ ವ್ಯಕ್ತಪಡಿಸಿದರು... ಇಂದು ಕೇತುಗ್ರಸ್ಥ ರಕ್ತ ಚಂದ್ರಗ್ರಹಣ ಹಿನ್ನೆಲೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹೊರಕೇರಿದೇವಪುರದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ರಥೋತ್ಸವ ಸಮಯ ಬದಲಾವಣೆ ಮಾಡಲಾಗಿತ್ತು. ಸಮಯ ಬದಲಾಗಿದ್ದರಿಂದ ಪ್ರತಿ ವರ್ಷ ಕಾಣುವ ಗರುಡ ಕಾಣಿಸುತ್ತಾ ಅನ್ನೋ ಆತಂಕ ಭಕ್ತರಲ್ಲಿ ಎದುರಾಗಿತ್ತು. ಸಮಯ ಬದಲಾದ್ರೂ ಗರುಡ ಕಾಣಿಸಿಕೊಂಡಿದ್ದಕ್ಕೆ ಭಕ್ತರು ಸಂತಸಗೊಂಡಿದ್ದಾರೆ.. ಸಾಮಾನ್ಯವಾಗಿ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ಮಧ್ಯಾಹ್ನ 3 ಗಂಟೆಗೆ ನಡೆಯುತ್ತಿತ್ತು. ಆದ್ರೆ ಇಂದು ಚಂದ್ರಗ್ರಹಣ ಮಧ್ಯಾಹ್ನ 3:20ಕ್ಕೆ ಆರಂಭವಾಗಿ ಸಂಜೆ 6:48ಕ್ಕೆ ಕೊನೆಗೊಳ್ಳುತ್ತದೆ. ಗ್ರಹಣದ ಸಮಯವನ್ನು ಸೂತಕ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಮತ್ತು ಧಾರ್ಮಿಕ ಕಾರ್ಯಗಳನ್ನು ಮಾಡಲ್ಲ. ಆದ್ದರಿಂದ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ಸಮಯ ಬದಲಾವಣೆ ಮಾಡಲಾಗಿತ್ತು...ಮಧ್ಯಾಹ್ನ 3 ಗಂಟೆ ಬದಲಾಗಿ 12 ಗಂಟೆಗೆಯೇ ರಥೋತ್ಸವ ಆರಂಭವಾಗಿತ್ತು. ವರ್ಷಕ್ಕೊಮ್ಮೆ ಹೋಳಿ ಹುಣ್ಣಿಮೆಯಂದು ನಡೆಯುವ ರಥೋತ್ಸವ ನೋಡಲು ಸಾವಿರಾರು ಭಕ್ತರು ಆಗಮಿಸಿದ್ದರು. ಆದ್ರೆ ಗರುಡ ಕಾಣಿಸುತ್ತಾ ಅಥವಾ ಇಲ್ಲವಾ ಎಂಬುದರ ಬಗ್ಗೆ ಭಕ್ತರಲ್ಲಿ ಆತಂಕ ಮನೆ ಮಾಡಿತ್ತು. ರಥೋತ್ಸವ ನಡೆಯುವ ಸರಿಯಾದ ಸಂದರ್ಭಕ್ಕೆ ಗರುಡ ಕಾಣಿಸಿಕೊಂಡಿದೆ. ನೆರೆದಿದ್ದ ಭಕ್ತರು ಗರುಡ ದರ್ಶನವನ್ನು ಪವಾಡ ಎಂದು ಉಲ್ಲೇಖಿಸುತ್ತಾರೆ. ರಥೋತ್ಸವಕ್ಕೆ ಹೆಚ್ ಡಿ ಪುರದ ಸುತ್ತಲಿನ ಗ್ರಾಮದ ಜನರು, ಅಕ್ಕ-ಪಕ್ಕದ ಜಿಲ್ಲೆಗಳಿಂದಲೂ ಭಕ್ತರು ಆಗಮಿಸುತ್ತಾರೆ. ಚಂದ್ರಗ್ರಹಣ ಆರಂಭಕ್ಕೂ ಮುನ್ನವೇ ಅದ್ಧೂರಿಯಾಗಿ ರಥೋತ್ಸವ ನಡೆದಿದೆ..1
- ಚಿತ್ರದುರ್ಗದ ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿ ಮಾದಿಗ ಸಮುದಾಯದ ಮುಖಂಡರು ಫ್ಲೆಕ್ಸ್ ಗಳನ್ನ ಹರಿದು ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಚಿತ್ರದುರ್ಗದ ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿ ದಿಡೀರನೇ ಆಗಮಿಸಿದ ಮಾಧಿಗ ಸಮುದಾಯದ ಮುಖಂಡರು ಕೈನಲ್ಲಿ ಸಿ ಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಹಾಗೂ ಹೆಚ್ ಸಿ ಮಹದೇವಪ್ಪ ಅವರ ಭಾವಚಿತ್ರಗಳನ್ನ ಹಿಡಿದು ಒಳ ಮೀಸಲಾತಿ ಜಾರಿ ಮಾಡದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದು ಕಾಂಗ್ರೆಸ್ ಕಚೇರಿ ಮುಂಬಾಗ ಹಾಕಲಾಗಿದ್ದ ಕಾಂಗ್ರೆಸ್ ಮುಖಂಡರ ಫ್ಲೆಕ್ಸ್ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಮಲ್ಲಿಕಾರ್ಜುನ ಖರ್ಗೆ, ಸಿ ಎಂ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಹಾಗೂ ಸಚಿವ ಹೆಚ್ ಸಿ ಮಹದೇವಪ್ಪ ಅವರ ಭಾವಚಿತ್ರ ಹರಿದು ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಭಾವಚಿತ್ರಕ್ಕೆ ಬೆಂಕಿ ಇಟ್ಟು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನ ಕೂಗಿಆಕ್ರೋಷವನ್ನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಕಾಂಗ್ರೆಸ್ ಸರ್ಕಾರ, ಸಿ ಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಡಿ ಕೆ ಶಿವಕುಮಾರ್ ಹಾಗೂ ಹೆಚ್ ಸಿ ಮಹದೇವಪ್ಪ ವಿರುದ್ಧ ಘೋಷಣೆಗಳನ್ನ ಕೂಗಿ ಪ್ರತಿಭಟನೆ ನಡೆಸಿ ಒಳ ಮೀಸಲಾತಿ ಜಾರಿ ಮಾಡದ ಹಿನ್ನೆಲೆ ಸರ್ಕಾರದ ವಿರುದ್ಧ ಮಾದಿಗ ಸಮುದಾಯದ ಮುಖಂಡರು ಆಕ್ರೋಷವನ್ನ ವ್ಯಕ್ತಪಡಿಸಿದ್ದಾರೆ.1