logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬೂದಿಕೋಟೆ ಎಂ.ಹೊಸಹಳ್ಳಿಯಲ್ಲಿ ವಿಜೃಂಭಣೆಯಿಂದ ವಿಶ್ವಕರ್ಮ ಜಯಂತಿ ಹೋಬಳಿಯ ಎಂ.ಹೊಸಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ಸರ್ಕಲ್‌ನಲ್ಲಿ ವಿಶ್ವಕರ್ಮ ಜಯಂತಿಯನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಜಯಂತಿ ಅಂಗವಾಗಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ದೇವಸ್ಥಾನದಲ್ಲಿ ವಿಶೇಷ ಪೂಜೆ, ಅರ್ಚನೆ ಹಾಗೂ ಅಭಿಷೇಕ ನೆರವೇರಿಸಿದ ಬಳಿಕ ದೇವಶಿಲ್ಪಿ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿಯನ್ನು ಆಚರಿಸಲಾಯಿತು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗ್ರಾಮಸ್ಥರು, ಭಕ್ತರು ಹಾಗೂ ವಿಶ್ವಕರ್ಮ ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಪಿಎನ್‌ಎಸ್ ಜುವೆಲ್ಲರಿ ಮಾಲೀಕ ಶ್ರೀನಿವಾಸ ಆಚಾರಿ ಮಾತನಾಡಿ, ವಿಶ್ವಕರ್ಮ ಜಯಂತಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ಆಚರಣೆಯಲ್ಲ. ಸೃಷ್ಟಿ, ಕಲೆ, ಕರಕುಶಲ ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ. ಅವರ ಕಲೆ, ಕೌಶಲ್ಯ ಮತ್ತು ಪರಂಪರೆಯನ್ನು ಸ್ಮರಿಸುವುದು ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ವಿಶ್ವಕರ್ಮ ಸಮುದಾಯವು ಹಲವು ತಲೆಮಾರುಗಳಿಂದ ತನ್ನ ಕಲೆ ಮತ್ತು ಕೌಶಲ್ಯದ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದೆ. ಆಧುನಿಕ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಸಾಂಪ್ರದಾಯಿಕ ವೃತ್ತಿಗಳನ್ನೂ ಬೆಳೆಸಿಕೊಂಡು ಯುವಜನತೆ ಸ್ವಾವಲಂಬಿಗಳಾಗಬೇಕು. ಸಮಾಜದಲ್ಲಿ ಪರಸ್ಪರ ಸಹಕಾರ, ಸೌಹಾರ್ದತೆ ಹಾಗೂ ಒಗ್ಗಟ್ಟಿನಿಂದ ಮುನ್ನಡೆಯುವ ಮೂಲಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.

3 hrs ago
user_Vishnu Press
Vishnu Press
Local News Reporter ಬಂಗಾರಪೇಟೆ, ಕೋಲಾರ, ಕರ್ನಾಟಕ•

More news from ಕರ್ನಾಟಕ and nearby areas
  • ಮುನಿಯಮ್ಮ ಲೇಔಟ್‌ನಲ್ಲಿ 30ನೇ ವರ್ಷದ ಗಣೇಶೋತ್ಸವ.ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿ ಆಚರಣೆ. ಬಂಗಾರಪೇಟೆ: ಪಟ್ಟಣದ ಮುನಿಯಮ್ಮ ಲೇಔಟ್‌ನಲ್ಲಿ ಶ್ರೀ ಮಹಾಗಣಪತಿ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ 30ನೇ ವರ್ಷದ ಗಣೇಶೋತ್ಸವವು ತಾಲೂಕಿನಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಪಟ್ಟಣದಲ್ಲಿ ಗಣೇಶೋತ್ಸವವು ಯಾವುದೇ ಒಂದು ವರ್ಗ ಅಥವಾ ಸಮುದಾಯಕ್ಕೆ ಸೀಮಿತವಾಗದೆ, ಎಲ್ಲರೂ ಒಗ್ಗೂಡಿ ಆಚರಿಸುವ ಊರ ಹಬ್ಬವಾಗಿ ರೂಪುಗೊಂಡಿದೆ. ಮುನಿಯಮ್ಮ ಲೇಔಟ್‌ನಲ್ಲಿ ಸುಮಾರು 13 ಅಡಿಗೂ ಹೆಚ್ಚು ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಗಣೇಶ ಚತುರ್ಥಿಯ ದಿನವಾದ ಸೆಪ್ಟೆಂಬರ್ 14ರಿಂದ ಸೆಪ್ಟೆಂಬರ್ 17ರವರೆಗೆ ಶ್ರದ್ಧಾಭಕ್ತಿಯಿಂದ ಹಬ್ಬವನ್ನು ಆಚರಿಸಲಾಗಿದ್ದು, ಪ್ರತಿದಿನ ಭಕ್ತರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು. ಗಣೇಶೋತ್ಸವದ ಅಂಗವಾಗಿ ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಉತ್ಸವದ ಅಂತಿಮ ದಿನವಾದ ಗುರುವಾರ ವೀಣಾ ವೆಂಕಟೇಶ್ ನೇತೃತ್ವದಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಮ್ಯೂಸಿಕಲ್ ಚೇರ್ ಹಾಗೂ ಯುವಕರಿಗೆ ಮಡಿಕೆ ಹೊಡೆಯುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ 10 ಗ್ರಾಂ ಬೆಳ್ಳಿ ಜ್ಯೋತಿ, ದ್ವಿತೀಯ ಬಹುಮಾನವಾಗಿ 8 ಗ್ರಾಂ ಬೆಳ್ಳಿ ಜ್ಯೋತಿ ಹಾಗೂ ತೃತೀಯ ಬಹುಮಾನವಾಗಿ 5 ಗ್ರಾಂ ಬೆಳ್ಳಿ ಜ್ಯೋತಿಯನ್ನು ವಿತರಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳೆಯರಿಗೂ ಸಮಾಧಾನಕರ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವೀಣಾ ವೆಂಕಟೇಶ್, “ಪ್ರತಿವರ್ಷ ಶ್ರೀ ಮಹಾಗಣಪತಿ ಸೇವಾ ಸಮಿತಿ ವತಿಯಿಂದ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಈ ವರ್ಷ 30ನೇ ವರ್ಷದ ಗಣೇಶೋತ್ಸವವನ್ನು ಆಚರಿಸಿರುವುದು ಸಂತಸ ತಂದಿದೆ. ಭಗವಂತ ಪ್ರತಿವರ್ಷ ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಎಲ್ಲರಿಗೂ ಆರೋಗ್ಯ ಮತ್ತು ಸುಖ-ಶಾಂತಿಯನ್ನು ಕರುಣಿಸಲಿ. ಅಂತಿಮ ದಿನದ ಅಂಗವಾಗಿ ಮಹಿಳೆಯರಿಗೆ ರಂಗೋಲಿ ಹಾಗೂ ಮ್ಯೂಸಿಕಲ್ ಚೇರ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಮೂವರಿಗೆ ಬೆಳ್ಳಿ ಜ್ಯೋತಿಗಳನ್ನು ಹಾಗೂ ಭಾಗವಹಿಸಿದ ಎಲ್ಲ ಮಹಿಳೆಯರಿಗೆ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಗಿದೆ” ಎಂದರು. ಈ ಸಂದರ್ಭದಲ್ಲಿ ಶ್ರೀ ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ನಂಜೇವಾಡೆಯರ್, ವೀಣಾ ವೆಂಕಟೇಶ್, ಅಂಜನ್, ಶಿವಕುಮಾರ್, ಜೀವನ್ ಬಾಬು, ಸಂತೋಷ್, ವಿಜಯ್ ಕುಮಾರ್, ಸೆಲ್ವಂ, ಪ್ರಸಾದ್ ಸೇರಿದಂತೆ ಮುನಿಯಮ್ಮ ಬಡಾವಣೆಯ ಯುವಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
    1
    ಮುನಿಯಮ್ಮ ಲೇಔಟ್‌ನಲ್ಲಿ 30ನೇ ವರ್ಷದ ಗಣೇಶೋತ್ಸವ.ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿ ಆಚರಣೆ.

ಬಂಗಾರಪೇಟೆ: ಪಟ್ಟಣದ ಮುನಿಯಮ್ಮ ಲೇಔಟ್‌ನಲ್ಲಿ ಶ್ರೀ ಮಹಾಗಣಪತಿ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ 30ನೇ ವರ್ಷದ ಗಣೇಶೋತ್ಸವವು ತಾಲೂಕಿನಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಪಟ್ಟಣದಲ್ಲಿ ಗಣೇಶೋತ್ಸವವು ಯಾವುದೇ ಒಂದು ವರ್ಗ ಅಥವಾ ಸಮುದಾಯಕ್ಕೆ ಸೀಮಿತವಾಗದೆ, ಎಲ್ಲರೂ ಒಗ್ಗೂಡಿ ಆಚರಿಸುವ ಊರ ಹಬ್ಬವಾಗಿ ರೂಪುಗೊಂಡಿದೆ. ಮುನಿಯಮ್ಮ ಲೇಔಟ್‌ನಲ್ಲಿ ಸುಮಾರು 13 ಅಡಿಗೂ ಹೆಚ್ಚು ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಗಣೇಶ ಚತುರ್ಥಿಯ ದಿನವಾದ ಸೆಪ್ಟೆಂಬರ್ 14ರಿಂದ ಸೆಪ್ಟೆಂಬರ್ 17ರವರೆಗೆ ಶ್ರದ್ಧಾಭಕ್ತಿಯಿಂದ ಹಬ್ಬವನ್ನು ಆಚರಿಸಲಾಗಿದ್ದು, ಪ್ರತಿದಿನ ಭಕ್ತರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.
ಗಣೇಶೋತ್ಸವದ ಅಂಗವಾಗಿ ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಉತ್ಸವದ ಅಂತಿಮ ದಿನವಾದ ಗುರುವಾರ ವೀಣಾ ವೆಂಕಟೇಶ್ ನೇತೃತ್ವದಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಮ್ಯೂಸಿಕಲ್ ಚೇರ್ ಹಾಗೂ ಯುವಕರಿಗೆ ಮಡಿಕೆ ಹೊಡೆಯುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ 10 ಗ್ರಾಂ ಬೆಳ್ಳಿ ಜ್ಯೋತಿ, ದ್ವಿತೀಯ ಬಹುಮಾನವಾಗಿ 8 ಗ್ರಾಂ ಬೆಳ್ಳಿ ಜ್ಯೋತಿ ಹಾಗೂ ತೃತೀಯ ಬಹುಮಾನವಾಗಿ 5 ಗ್ರಾಂ ಬೆಳ್ಳಿ ಜ್ಯೋತಿಯನ್ನು ವಿತರಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳೆಯರಿಗೂ ಸಮಾಧಾನಕರ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವೀಣಾ ವೆಂಕಟೇಶ್, “ಪ್ರತಿವರ್ಷ ಶ್ರೀ ಮಹಾಗಣಪತಿ ಸೇವಾ ಸಮಿತಿ ವತಿಯಿಂದ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಈ ವರ್ಷ 30ನೇ ವರ್ಷದ ಗಣೇಶೋತ್ಸವವನ್ನು ಆಚರಿಸಿರುವುದು ಸಂತಸ ತಂದಿದೆ. ಭಗವಂತ ಪ್ರತಿವರ್ಷ ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಎಲ್ಲರಿಗೂ ಆರೋಗ್ಯ ಮತ್ತು ಸುಖ-ಶಾಂತಿಯನ್ನು ಕರುಣಿಸಲಿ. ಅಂತಿಮ ದಿನದ ಅಂಗವಾಗಿ ಮಹಿಳೆಯರಿಗೆ ರಂಗೋಲಿ ಹಾಗೂ ಮ್ಯೂಸಿಕಲ್ ಚೇರ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಮೂವರಿಗೆ ಬೆಳ್ಳಿ ಜ್ಯೋತಿಗಳನ್ನು ಹಾಗೂ ಭಾಗವಹಿಸಿದ ಎಲ್ಲ ಮಹಿಳೆಯರಿಗೆ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಗಿದೆ” ಎಂದರು.
ಈ ಸಂದರ್ಭದಲ್ಲಿ ಶ್ರೀ ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ನಂಜೇವಾಡೆಯರ್, ವೀಣಾ ವೆಂಕಟೇಶ್, ಅಂಜನ್, ಶಿವಕುಮಾರ್, ಜೀವನ್ ಬಾಬು, ಸಂತೋಷ್, ವಿಜಯ್ ಕುಮಾರ್, ಸೆಲ್ವಂ, ಪ್ರಸಾದ್ ಸೇರಿದಂತೆ ಮುನಿಯಮ್ಮ ಬಡಾವಣೆಯ ಯುವಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
    user_Vishnu Press
    Vishnu Press
    Local News Reporter ಬಂಗಾರಪೇಟೆ, ಕೋಲಾರ, ಕರ್ನಾಟಕ•
    2 hrs ago
  • ರಂಗಮಂದಿರದಲ್ಲಿ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ. ಕೋಲಾರ : ನಗರದ ರಂಗಮಂದಿರದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಗವಾನ್ ಶ್ರೀ ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಿ ಸಿಹಿ ನೀಡುವ ಮುಖಾಂತರ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಆಚರಣೆ ಮಾಡಿದರು. ಕಾರ್ಯಕ್ರಮ ಉದ್ದೇಶಿಸಿ ಸಮುದಾಯದ ಮುಖಂಡರು ಮಾತನಾಡಿ ಭಗವಾನ್ ಶ್ರೀ ವಿಶ್ವಕರ್ಮರನ್ನು ಹಿಂದೂ ಪರಂಪರೆಯಲ್ಲಿ ದೇವತೆಗಳ ದಿವ್ಯ ಶಿಲ್ಪಿ ಮತ್ತು ನಿರ್ಮಾತೃ ಎಂದು ಪೂಜಿಸಲಾಗುತ್ತದೆ. ಶಿಲ್ಪಕಲೆ, ವಾಸ್ತುಶಿಲ್ಪ, ಕರಕುಶಲತೆ ಹಾಗೂ ನಿರ್ಮಾಣ ಕೌಶಲ್ಯದ ಪ್ರತೀಕವಾಗಿ ವಿಶ್ವಕರ್ಮರನ್ನು ಗೌರವಿಸಲಾಗುತ್ತದೆ. ಪ್ರತಿ ವರ್ಷ ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಬಡಗಿಗಳು, ಕಮ್ಮಾರರು, ಅಕ್ಕಸಾಲಿಗರು, ಕುಂಬಾರರು, ಶಿಲ್ಪಿಗಳು ಸೇರಿದಂತೆ ವಿವಿಧ ಸಾಂಪ್ರದಾಯಿಕ ಕುಶಲಕರ್ಮಿಗಳು ತಮ್ಮ ಉಪಕರಣಗಳು ಮತ್ತು ವೃತ್ತಿ ಸಾಧನಗಳಿಗೆ ಪೂಜೆ ಸಲ್ಲಿಸಿ ಭಗವಾನ್ ವಿಶ್ವಕರ್ಮರನ್ನು ಸ್ಮರಿಸುತ್ತಾರೆ. ವಿಶ್ವಕರ್ಮ ಜಯಂತಿಯು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಕೈಚಳಕ, ಕೌಶಲ್ಯ ಮತ್ತು ಪರಿಶ್ರಮದಿಂದ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ಕಾರ್ಮಿಕರು ಹಾಗೂ ಕುಶಲಕರ್ಮಿಗಳಿಗೆ ಗೌರವ ಸಲ್ಲಿಸುವ ದಿನವಾಗಿಯೂ ಪರಿಗಣಿಸಲಾಗುತ್ತದೆ. “ಕೌಶಲ್ಯವೇ ಶಕ್ತಿ, ಪರಿಶ್ರಮವೇ ಪ್ರಗತಿಯ ದಾರಿ” ಎಂಬ ಸಂದೇಶದೊಂದಿಗೆ ವಿಶ್ವಕರ್ಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ ಎಂದರು. ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಗೌರವಧನ ನೀಡಿದರು. ಈ ಸಂದರ್ಭದಲ್ಲಿ ಪ್ರಭಾಕಾರ್ ಚಾರಿ, ಪುರುಷೋತ್ತಮ್ ಚಾರಿ, ಜಗಧೀಶ್ವರ ಚಾರಿ, ಗೋಪಿಕೃಷ್ಣ, ಮುರಳಿ, ಸೋಮಶೇಖರ್ ಚಾರಿ, ಮಂಜುನಾಥ್ ಚಾರಿ, ನಗರತ್ನಮ್ಮ, ಮುರಳಿ ಮೋಹನ್, ಹರೀಶ್, ಸುಬ್ರಮಣ್ಯ ಚಾರಿ, ಚಲಪತಿ, ಸರ್ವಜ್ಞ ಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಲಕ್ಷ್ಮಿ ಸೇರಿದಂತೆ ಸಮುದಾಯದವರು ಇತರರು ಇದ್ದರು. ರಂಗಮಂದಿರದಲ್ಲಿ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ. ಕೋಲಾರ : ನಗರದ ರಂಗಮಂದಿರದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಗವಾನ್ ಶ್ರೀ ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಿ ಸಿಹಿ ನೀಡುವ ಮುಖಾಂತರ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಆಚರಣೆ ಮಾಡಿದರು. ಕಾರ್ಯಕ್ರಮ ಉದ್ದೇಶಿಸಿ ಸಮುದಾಯದ ಮುಖಂಡರು ಮಾತನಾಡಿ ಭಗವಾನ್ ಶ್ರೀ ವಿಶ್ವಕರ್ಮರನ್ನು ಹಿಂದೂ ಪರಂಪರೆಯಲ್ಲಿ ದೇವತೆಗಳ ದಿವ್ಯ ಶಿಲ್ಪಿ ಮತ್ತು ನಿರ್ಮಾತೃ ಎಂದು ಪೂಜಿಸಲಾಗುತ್ತದೆ. ಶಿಲ್ಪಕಲೆ, ವಾಸ್ತುಶಿಲ್ಪ, ಕರಕುಶಲತೆ ಹಾಗೂ ನಿರ್ಮಾಣ ಕೌಶಲ್ಯದ ಪ್ರತೀಕವಾಗಿ ವಿಶ್ವಕರ್ಮರನ್ನು ಗೌರವಿಸಲಾಗುತ್ತದೆ. ಪ್ರತಿ ವರ್ಷ ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಬಡಗಿಗಳು, ಕಮ್ಮಾರರು, ಅಕ್ಕಸಾಲಿಗರು, ಕುಂಬಾರರು, ಶಿಲ್ಪಿಗಳು ಸೇರಿದಂತೆ ವಿವಿಧ ಸಾಂಪ್ರದಾಯಿಕ ಕುಶಲಕರ್ಮಿಗಳು ತಮ್ಮ ಉಪಕರಣಗಳು ಮತ್ತು ವೃತ್ತಿ ಸಾಧನಗಳಿಗೆ ಪೂಜೆ ಸಲ್ಲಿಸಿ ಭಗವಾನ್ ವಿಶ್ವಕರ್ಮರನ್ನು ಸ್ಮರಿಸುತ್ತಾರೆ. ವಿಶ್ವಕರ್ಮ ಜಯಂತಿಯು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಕೈಚಳಕ, ಕೌಶಲ್ಯ ಮತ್ತು ಪರಿಶ್ರಮದಿಂದ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ಕಾರ್ಮಿಕರು ಹಾಗೂ ಕುಶಲಕರ್ಮಿಗಳಿಗೆ ಗೌರವ ಸಲ್ಲಿಸುವ ದಿನವಾಗಿಯೂ ಪರಿಗಣಿಸಲಾಗುತ್ತದೆ. “ಕೌಶಲ್ಯವೇ ಶಕ್ತಿ, ಪರಿಶ್ರಮವೇ ಪ್ರಗತಿಯ ದಾರಿ” ಎಂಬ ಸಂದೇಶದೊಂದಿಗೆ ವಿಶ್ವಕರ್ಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ ಎಂದರು. ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಗೌರವಧನ ನೀಡಿದರು. ಈ ಸಂದರ್ಭದಲ್ಲಿ ಪ್ರಭಾಕಾರ್ ಚಾರಿ, ಪುರುಷೋತ್ತಮ್ ಚಾರಿ, ಜಗಧೀಶ್ವರ ಚಾರಿ, ಗೋಪಿಕೃಷ್ಣ, ಮುರಳಿ, ಸೋಮಶೇಖರ್ ಚಾರಿ, ಮಂಜುನಾಥ್ ಚಾರಿ, ನಗರತ್ನಮ್ಮ, ಮುರಳಿ ಮೋಹನ್, ಹರೀಶ್, ಸುಬ್ರಮಣ್ಯ ಚಾರಿ, ಚಲಪತಿ, ಸರ್ವಜ್ಞ ಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಲಕ್ಷ್ಮಿ ಸೇರಿದಂತೆ ಸಮುದಾಯದವರು ಇತರರು ಇದ್ದರು.
    1
    ರಂಗಮಂದಿರದಲ್ಲಿ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ.

ಕೋಲಾರ : ನಗರದ ರಂಗಮಂದಿರದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಗವಾನ್ ಶ್ರೀ ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಿ ಸಿಹಿ ನೀಡುವ ಮುಖಾಂತರ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಆಚರಣೆ ಮಾಡಿದರು.

ಕಾರ್ಯಕ್ರಮ ಉದ್ದೇಶಿಸಿ ಸಮುದಾಯದ ಮುಖಂಡರು ಮಾತನಾಡಿ ಭಗವಾನ್ ಶ್ರೀ ವಿಶ್ವಕರ್ಮರನ್ನು ಹಿಂದೂ ಪರಂಪರೆಯಲ್ಲಿ ದೇವತೆಗಳ ದಿವ್ಯ ಶಿಲ್ಪಿ ಮತ್ತು ನಿರ್ಮಾತೃ ಎಂದು ಪೂಜಿಸಲಾಗುತ್ತದೆ. ಶಿಲ್ಪಕಲೆ, ವಾಸ್ತುಶಿಲ್ಪ, ಕರಕುಶಲತೆ ಹಾಗೂ ನಿರ್ಮಾಣ ಕೌಶಲ್ಯದ ಪ್ರತೀಕವಾಗಿ ವಿಶ್ವಕರ್ಮರನ್ನು ಗೌರವಿಸಲಾಗುತ್ತದೆ. 
ಪ್ರತಿ ವರ್ಷ ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಬಡಗಿಗಳು, ಕಮ್ಮಾರರು, ಅಕ್ಕಸಾಲಿಗರು, ಕುಂಬಾರರು, ಶಿಲ್ಪಿಗಳು ಸೇರಿದಂತೆ ವಿವಿಧ ಸಾಂಪ್ರದಾಯಿಕ ಕುಶಲಕರ್ಮಿಗಳು ತಮ್ಮ ಉಪಕರಣಗಳು ಮತ್ತು ವೃತ್ತಿ ಸಾಧನಗಳಿಗೆ ಪೂಜೆ ಸಲ್ಲಿಸಿ ಭಗವಾನ್ ವಿಶ್ವಕರ್ಮರನ್ನು ಸ್ಮರಿಸುತ್ತಾರೆ. 

ವಿಶ್ವಕರ್ಮ ಜಯಂತಿಯು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಕೈಚಳಕ, ಕೌಶಲ್ಯ ಮತ್ತು ಪರಿಶ್ರಮದಿಂದ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ಕಾರ್ಮಿಕರು ಹಾಗೂ ಕುಶಲಕರ್ಮಿಗಳಿಗೆ ಗೌರವ ಸಲ್ಲಿಸುವ ದಿನವಾಗಿಯೂ ಪರಿಗಣಿಸಲಾಗುತ್ತದೆ. 
“ಕೌಶಲ್ಯವೇ ಶಕ್ತಿ, ಪರಿಶ್ರಮವೇ ಪ್ರಗತಿಯ ದಾರಿ” ಎಂಬ ಸಂದೇಶದೊಂದಿಗೆ ವಿಶ್ವಕರ್ಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ ಎಂದರು.

ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಗೌರವಧನ ನೀಡಿದರು.

ಈ ಸಂದರ್ಭದಲ್ಲಿ ಪ್ರಭಾಕಾರ್ ಚಾರಿ, ಪುರುಷೋತ್ತಮ್ ಚಾರಿ, ಜಗಧೀಶ್ವರ ಚಾರಿ, ಗೋಪಿಕೃಷ್ಣ, ಮುರಳಿ, ಸೋಮಶೇಖರ್ ಚಾರಿ, ಮಂಜುನಾಥ್ ಚಾರಿ, ನಗರತ್ನಮ್ಮ, ಮುರಳಿ ಮೋಹನ್, ಹರೀಶ್, ಸುಬ್ರಮಣ್ಯ ಚಾರಿ, ಚಲಪತಿ, ಸರ್ವಜ್ಞ ಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಲಕ್ಷ್ಮಿ ಸೇರಿದಂತೆ ಸಮುದಾಯದವರು ಇತರರು ಇದ್ದರು.

    user_Kg. shivakumar
    Kg. shivakumar
    Local News Reporter ಕೋಲಾರ, ಕೋಲಾರ, ಕರ್ನಾಟಕ•
    4 hrs ago
  • * ಜಾಲಪ್ಪ ಆಸ್ಪತ್ರೆಯ ಕ್ಯಾಂಪಸ್ ನಲ್ಲಿ ಎಸ್.ಡಿ.ಯು.ಎಂ.ಸಿ ವಿನಾಯಕ ಮಕ್ಕಳ ಬಳಗದಿಂದ ಐದು ದಿನಗಳ ಗಣೇಶ ಹಬ್ಬ ಆಚರಣೆ * ಕೋಲಾರ : ನಗರ ಹೊರವಲಯದ ಟಮಕ ಬಳಿಯ ಆರ್ ಎಲ್ ಜಾಲಪ್ಪ ಆಸ್ಪತ್ರೆಯ ಕ್ಯಾಂಪಸ್ ನಲ್ಲಿ ಕಳೆದ 15 ವರ್ಷಗಳಿಂದ ಎಸ್.ಡಿ.ಯು.ಎಂ.ಸಿ. ವಿನಾಯಕ ಮಕ್ಕಳ ಬಳಗ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾ ಬರುತ್ತಿದೆ. ಕ್ಯಾಂಪಸ್ ನ ಕಾಂತರಾಜು ರವರು ಮಾತನಾಡಿ ಒಂದು ಅಡಿ ಗಣೇಶ ವಿಗ್ರಹ ಇಡುವ ಮೂಲಕ ಪ್ರಾರಂಭವಾದ ಗಣೇಶ ಹಬ್ಬದ ಆಚರಣೆ ಈ ಬಾರಿಯೂ ಮುಂದುವರೆದಿದ್ದು ಈ ಬಾರಿ 10 ಅಡಿಗಳ ಗಣೇಶ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ಐದು ದಿನಗಳ ಕಾಲ ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಕ್ಯಾಂಪಸ್ ನಲ್ಲಿರುವ ಮಕ್ಕಳೊಂದಿಗೆ   ಕುಟುಂಬದ ಸದಸ್ಯರುಗಳು ಸೇರಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಾ ಬರುತ್ತಿದ್ದು,ಪ್ರತಿದಿನ ಮಕ್ಕಳಿಗೆ ಮಕ್ಕಳಿಂದಲೇ ಮನರಂಜನೆ ಕಾರ್ಯಕ್ರಮಗಳನ್ನು ಹಾಗೂ ಕ್ರೀಡೆಗಳನ್ನು ಐದೂ ದಿನ ನಡೆಸಲಾಗುವುದು ಹಾಗೂ ಪ್ರತಿದಿನ ಪ್ರಸಾದ ಮತ್ತು ಅನ್ನಸಂತರ್ಪಣೆ ಏರ್ಪಡಿಸಲಾಗುತ್ತದೆ ಎಂದು ತಿಳಿಸಿದರು. ಮಕ್ಕಳಿಗೆ ನಮ್ಮ ಸಂಸ್ಕೃತಿ ಮತ್ತು ಆಚಾರ ವಿಚಾರಗಳನ್ನು ಚಿಕ್ಕಂದಿನಿಂದಲೇ ತಿಳಿಸುವ ಕೆಲಸ ಮಾಡುತ್ತಾ ಬರುತ್ತಿದ್ದೇವೆ ಮುಂದಿನ ವರ್ಷಗಳಲ್ಲಿ ಮಕ್ಕಳೇ ನಮ್ಮ ಧರ್ಮ ಉಳಿಸಿ ಬೆಳಸಲಿ ಹಾಗೂ ಗಣೇಶೋತ್ಸವನ್ನು ಇನ್ನೂ ಅದ್ದೂರಿಯಾಗಿ ಆಚರಣೆ ಮಾಡುವಂತಾಗಲಿ ಎಂದು ಆಶಿಸಿದರು. ಶುಕ್ರವಾರ ಸಂಜೆ ಗಣೇಶನ ವಿಸರ್ಜನೆ ಕಾರ್ಯಕ್ರಮ ಇದ್ದು ಅವತ್ತು ಅದ್ದೂರಿಯಾಗಿ ಮೆರವಣಿಗೆ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ಮಹಿಮಾ ಕೆಲ್,ರಮೇಶ್ ಕೆಲ್,ಹೀಮಂತ್, ಹೀತಾ,ಸಂಜಯ್,ಸುಮತಿ, ಯಶಸ್ಸು ಆರ್,ಪುನೀತ್,ಚೇತನ್, ಪ್ರಜ್ವಲ್ ,ರಾಜೇಂದ್ರ ಕುಮಾರ್, ತಲೀಶ್,ಚಿರಾಗ್,ಹರಿಶಿತಾ, ಹಾಗೂ ಕ್ಯಾಂಪಸ್ ನ ಮಕ್ಕಳು ಉಪಸ್ಥಿತರಿದ್ದರು.
    2
    * ಜಾಲಪ್ಪ ಆಸ್ಪತ್ರೆಯ ಕ್ಯಾಂಪಸ್ ನಲ್ಲಿ ಎಸ್.ಡಿ.ಯು.ಎಂ.ಸಿ ವಿನಾಯಕ ಮಕ್ಕಳ ಬಳಗದಿಂದ ಐದು ದಿನಗಳ ಗಣೇಶ ಹಬ್ಬ ಆಚರಣೆ *

ಕೋಲಾರ : ನಗರ ಹೊರವಲಯದ ಟಮಕ ಬಳಿಯ ಆರ್ ಎಲ್ ಜಾಲಪ್ಪ ಆಸ್ಪತ್ರೆಯ ಕ್ಯಾಂಪಸ್ ನಲ್ಲಿ ಕಳೆದ 15 ವರ್ಷಗಳಿಂದ ಎಸ್.ಡಿ.ಯು.ಎಂ.ಸಿ. ವಿನಾಯಕ ಮಕ್ಕಳ ಬಳಗ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾ ಬರುತ್ತಿದೆ.
ಕ್ಯಾಂಪಸ್ ನ ಕಾಂತರಾಜು ರವರು ಮಾತನಾಡಿ ಒಂದು ಅಡಿ ಗಣೇಶ ವಿಗ್ರಹ ಇಡುವ ಮೂಲಕ ಪ್ರಾರಂಭವಾದ ಗಣೇಶ ಹಬ್ಬದ ಆಚರಣೆ ಈ ಬಾರಿಯೂ ಮುಂದುವರೆದಿದ್ದು ಈ ಬಾರಿ 10 ಅಡಿಗಳ ಗಣೇಶ ವಿಗ್ರಹವನ್ನು ಪ್ರತಿಷ್ಠಾಪನೆ
ಮಾಡಿ ಐದು ದಿನಗಳ ಕಾಲ ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಕ್ಯಾಂಪಸ್ ನಲ್ಲಿರುವ ಮಕ್ಕಳೊಂದಿಗೆ  
ಕುಟುಂಬದ ಸದಸ್ಯರುಗಳು ಸೇರಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ
ಮಾಡುತ್ತಾ ಬರುತ್ತಿದ್ದು,ಪ್ರತಿದಿನ ಮಕ್ಕಳಿಗೆ
ಮಕ್ಕಳಿಂದಲೇ ಮನರಂಜನೆ ಕಾರ್ಯಕ್ರಮಗಳನ್ನು ಹಾಗೂ ಕ್ರೀಡೆಗಳನ್ನು ಐದೂ ದಿನ ನಡೆಸಲಾಗುವುದು ಹಾಗೂ ಪ್ರತಿದಿನ ಪ್ರಸಾದ ಮತ್ತು ಅನ್ನಸಂತರ್ಪಣೆ ಏರ್ಪಡಿಸಲಾಗುತ್ತದೆ
ಎಂದು ತಿಳಿಸಿದರು.
ಮಕ್ಕಳಿಗೆ ನಮ್ಮ ಸಂಸ್ಕೃತಿ ಮತ್ತು ಆಚಾರ ವಿಚಾರಗಳನ್ನು ಚಿಕ್ಕಂದಿನಿಂದಲೇ ತಿಳಿಸುವ ಕೆಲಸ ಮಾಡುತ್ತಾ ಬರುತ್ತಿದ್ದೇವೆ ಮುಂದಿನ ವರ್ಷಗಳಲ್ಲಿ ಮಕ್ಕಳೇ ನಮ್ಮ ಧರ್ಮ ಉಳಿಸಿ ಬೆಳಸಲಿ ಹಾಗೂ ಗಣೇಶೋತ್ಸವನ್ನು ಇನ್ನೂ
ಅದ್ದೂರಿಯಾಗಿ ಆಚರಣೆ ಮಾಡುವಂತಾಗಲಿ ಎಂದು ಆಶಿಸಿದರು.
ಶುಕ್ರವಾರ ಸಂಜೆ ಗಣೇಶನ ವಿಸರ್ಜನೆ ಕಾರ್ಯಕ್ರಮ ಇದ್ದು ಅವತ್ತು ಅದ್ದೂರಿಯಾಗಿ ಮೆರವಣಿಗೆ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಮಹಿಮಾ ಕೆಲ್,ರಮೇಶ್ ಕೆಲ್,ಹೀಮಂತ್,
ಹೀತಾ,ಸಂಜಯ್,ಸುಮತಿ,
ಯಶಸ್ಸು ಆರ್,ಪುನೀತ್,ಚೇತನ್,
ಪ್ರಜ್ವಲ್ ,ರಾಜೇಂದ್ರ ಕುಮಾರ್,
ತಲೀಶ್,ಚಿರಾಗ್,ಹರಿಶಿತಾ,
ಹಾಗೂ ಕ್ಯಾಂಪಸ್ ನ ಮಕ್ಕಳು ಉಪಸ್ಥಿತರಿದ್ದರು.
    user_ಎಸ್.ಎನ್.ಪ್ರಕಾಶ್
    ಎಸ್.ಎನ್.ಪ್ರಕಾಶ್
    ಕೋಲಾರ, ಕೋಲಾರ, ಕರ್ನಾಟಕ•
    10 hrs ago
  • ಅಂಬೇಡ್ಕರ್ ಪ್ರತಿಮೆ ಪೂಜೆಗಿಂತ ಅವರ ಆಶಯಗಳ ಅಳವಡಿಕೆಯೇ ನಿಜವಾದ ಗೌರವ:ಇಓ ಆನಂದ್ ​ಸಂವಿಧಾನದ ಮೂಲ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ:ಚಿಂತಾಮಣಿಯಲ್ಲಿ ಇಒ ಎಸ್.ಆನಂದ್ ಕರೆ ಚಿಂತಾಮಣಿ:ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನ ಹಕ್ಕು,ಸ್ವಾತಂತ್ರ್ಯ ಮತ್ತು ನ್ಯಾಯವನ್ನು ಒದಗಿಸಿದೆ.ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಪ್ರತಿಮೆಗಳಿಗೆ ಪೂಜೆ ಸಲ್ಲಿಸುವುದಕ್ಕಿಂತ,ಪ್ರತಿಪಾದಿಸಿದ ಸಮಾನತೆ,ಸಾಮಾಜಿಕ ನ್ಯಾಯ,ಸ್ವಾತಂತ್ರ್ಯ ಮತ್ತು ಸಹೋದರತ್ವದ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಆನಂದ್ ಹೇಳಿದರು. ನಗರದ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಂಡಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಮಾತನಾಡಿದರು. ಅಂಬೇಡ್ಕರ್ ಹೆಸರನ್ನು ಗೌರವದಿಂದ ಉಚ್ಚರಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದರೂ,ಅವರ ಚಿಂತನೆ,ಹೋರಾಟದ ಉದ್ದೇಶ ಮತ್ತು ಸಂವಿಧಾನದ ಮೂಲ ಆಶಯಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಕಡಿಮೆಯಾಗುತ್ತಿರುವುದು ಆತಂಕಕಾರಿ ಸಂಗತಿ ಎಂದರು ದೀರ್ಘ ಚರ್ಚೆ,ವಿಚಾರ–ವಿಮರ್ಶೆ ಮತ್ತು ತಿದ್ದುಪಡಿಗಳ ಬಳಿಕ ಸಂವಿಧಾನವನ್ನು ಅಂಗೀಕರಿಸಲಾಗಿದೆ.ಅದು ಯಾರೊಬ್ಬರ ಏಕಪಕ್ಷೀಯ ಪ್ರಯತ್ನದ ಫಲವಲ್ಲ.ಭಾರತದ ವೈವಿಧ್ಯತೆಯನ್ನು ಒಗ್ಗೂಡಿಸಿ,ಪ್ರತಿಯೊಬ್ಬ ನಾಗರಿಕನಿಗೂ ಹಕ್ಕು ಮತ್ತು ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಸಂವಿಧಾನವನ್ನು ರೂಪಿಸಲಾಗಿದೆ. ಸಂವಿಧಾನದ ಪೀಠಿಕೆಯಲ್ಲಿರುವ ಸಾರ್ವಭೌಮ, ಸಮಾಜವಾದಿ,ಸರ್ವಧರ್ಮ ಸಮಭಾವ,ಪ್ರಜಾಸತ್ತಾತ್ಮಕ ಗಣರಾಜ್ಯ ಹಾಗೂ ಸಾಮಾಜಿಕ,ಆರ್ಥಿಕ ಮತ್ತು ರಾಜಕೀಯ ನ್ಯಾಯದ ಆಶಯಗಳನ್ನು ವಿದ್ಯಾರ್ಥಿಗಳು ಅರಿತು, ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಜಾತಿ,ಧರ್ಮ ಸೇರಿದಂತೆ ಯಾವುದೇ ವಿಭಜನೆಗಳು ಸಮಾಜದ ಒಗ್ಗಟ್ಟಿಗೆ ಅಡ್ಡಿಯಾಗದಂತೆ ಸಮಾನತೆಯ ಮೌಲ್ಯಗಳನ್ನು ಬಲಪಡಿಸಬೇಕು ಎಂದು ಹೇಳಿದರು. ದೇಶದ ಎಲ್ಲಾ ನಾಗರಿಕರಿಗೂ ಮತದಾನದ ಹಕ್ಕು ದೊರಕಬೇಕೆಂಬ ಆಶಯಕ್ಕೆ ಅಂಬೇಡ್ಕರ್ ಬಲವಾದ ಧ್ವನಿಯಾಗಿದ್ದರು. ಮತದಾನದ ಹಕ್ಕು ಪ್ರಜಾಪ್ರಭುತ್ವದ ಶಕ್ತಿಶಾಲಿ ಸಾಧನವಾಗಿದ್ದು, ಅದನ್ನು ಜವಾಬ್ದಾರಿಯಿಂದ ಬಳಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಶಿಕ್ಷಣ, ಸಂವಿಧಾನ ಜ್ಞಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೈಗೂಡಿಸಿಕೊಂಡ ಯುವಜನತೆ ದೇಶದ ಭವಿಷ್ಯವನ್ನು ಸದೃಢಗೊಳಿಸಬೇಕು ಎಂದು ಮನವಿ ಮಾಡಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ನಾಯಕ್ ಮಾತನಾಡಿ,ನವೆಂಬರ್ 26ರಂದು ಸಂವಿಧಾನ ದಿನಾಚರಣೆಯ ಅಂಗವಾಗಿ ಯುವ ಸಂಸತ್ ಆಯೋಜಿಸಲಾಗುವುದು. ತಾಲ್ಲೂಕಿನ ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳು ಮತ್ತು ಪದವಿ ಕಾಲೇಜುಗಳಿಂದ 110 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ತಾಲ್ಲೂಕು ಮಟ್ಟದ ಕಾರ್ಯಕ್ರಮ ನಡೆಸಲಾಗುವುದು. ಅಲ್ಲಿಂದ 15 ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಯುವ ಸಂಸತ್ತಿನಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ.ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನೈಜ ವಿಧಾನಸಭೆ ಅಥವಾ ಸಂಸತ್ ಕಲಾಪದ ಮಾದರಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ತಾಲ್ಲೂಕಿನ ವಿದ್ಯಾರ್ಥಿಗಳು ಸಿದ್ಧತೆ ಮಾಡಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಬೇಕು ಎಂದರು. ತಹಶೀಲ್ದಾರ್ ಸುದರ್ಶನ್ ಯಾದವ್ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.ಡಾ.ಮುನಿರೆಡ್ಡಿ ಪ್ರಜಾಪ್ರಭುತ್ವ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಬಿಇಒ ಎ.ಸಿ.ನಾರಾಯಣಸ್ವಾಮಿ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ್ ರೆಡ್ಡಿ,ವಲಯ ಅರಣ್ಯಾಧಿಕಾರಿ ಪೂಜಾ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಹಾಗೂ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಂಬೇಡ್ಕರ್ ಪ್ರತಿಮೆ ಪೂಜೆಗಿಂತ ಅವರ ಆಶಯಗಳ ಅಳವಡಿಕೆಯೇ ನಿಜವಾದ ಗೌರವ:ಇಓ ಆನಂದ್ ​ಸಂವಿಧಾನದ ಮೂಲ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ:ಚಿಂತಾಮಣಿಯಲ್ಲಿ ಇಒ ಎಸ್.ಆನಂದ್ ಕರೆ ಚಿಂತಾಮಣಿ:ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನ ಹಕ್ಕು,ಸ್ವಾತಂತ್ರ್ಯ ಮತ್ತು ನ್ಯಾಯವನ್ನು ಒದಗಿಸಿದೆ.ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಪ್ರತಿಮೆಗಳಿಗೆ ಪೂಜೆ ಸಲ್ಲಿಸುವುದಕ್ಕಿಂತ,ಪ್ರತಿಪಾದಿಸಿದ ಸಮಾನತೆ,ಸಾಮಾಜಿಕ ನ್ಯಾಯ,ಸ್ವಾತಂತ್ರ್ಯ ಮತ್ತು ಸಹೋದರತ್ವದ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಆನಂದ್ ಹೇಳಿದರು. ನಗರದ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಂಡಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಮಾತನಾಡಿದರು. ಅಂಬೇಡ್ಕರ್ ಹೆಸರನ್ನು ಗೌರವದಿಂದ ಉಚ್ಚರಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದರೂ,ಅವರ ಚಿಂತನೆ,ಹೋರಾಟದ ಉದ್ದೇಶ ಮತ್ತು ಸಂವಿಧಾನದ ಮೂಲ ಆಶಯಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಕಡಿಮೆಯಾಗುತ್ತಿರುವುದು ಆತಂಕಕಾರಿ ಸಂಗತಿ ಎಂದರು ದೀರ್ಘ ಚರ್ಚೆ,ವಿಚಾರ–ವಿಮರ್ಶೆ ಮತ್ತು ತಿದ್ದುಪಡಿಗಳ ಬಳಿಕ ಸಂವಿಧಾನವನ್ನು ಅಂಗೀಕರಿಸಲಾಗಿದೆ.ಅದು ಯಾರೊಬ್ಬರ ಏಕಪಕ್ಷೀಯ ಪ್ರಯತ್ನದ ಫಲವಲ್ಲ.ಭಾರತದ ವೈವಿಧ್ಯತೆಯನ್ನು ಒಗ್ಗೂಡಿಸಿ,ಪ್ರತಿಯೊಬ್ಬ ನಾಗರಿಕನಿಗೂ ಹಕ್ಕು ಮತ್ತು ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಸಂವಿಧಾನವನ್ನು ರೂಪಿಸಲಾಗಿದೆ. ಸಂವಿಧಾನದ ಪೀಠಿಕೆಯಲ್ಲಿರುವ ಸಾರ್ವಭೌಮ, ಸಮಾಜವಾದಿ,ಸರ್ವಧರ್ಮ ಸಮಭಾವ,ಪ್ರಜಾಸತ್ತಾತ್ಮಕ ಗಣರಾಜ್ಯ ಹಾಗೂ ಸಾಮಾಜಿಕ,ಆರ್ಥಿಕ ಮತ್ತು ರಾಜಕೀಯ ನ್ಯಾಯದ ಆಶಯಗಳನ್ನು ವಿದ್ಯಾರ್ಥಿಗಳು ಅರಿತು, ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಜಾತಿ,ಧರ್ಮ ಸೇರಿದಂತೆ ಯಾವುದೇ ವಿಭಜನೆಗಳು ಸಮಾಜದ ಒಗ್ಗಟ್ಟಿಗೆ ಅಡ್ಡಿಯಾಗದಂತೆ ಸಮಾನತೆಯ ಮೌಲ್ಯಗಳನ್ನು ಬಲಪಡಿಸಬೇಕು ಎಂದು ಹೇಳಿದರು. ದೇಶದ ಎಲ್ಲಾ ನಾಗರಿಕರಿಗೂ ಮತದಾನದ ಹಕ್ಕು ದೊರಕಬೇಕೆಂಬ ಆಶಯಕ್ಕೆ ಅಂಬೇಡ್ಕರ್ ಬಲವಾದ ಧ್ವನಿಯಾಗಿದ್ದರು. ಮತದಾನದ ಹಕ್ಕು ಪ್ರಜಾಪ್ರಭುತ್ವದ ಶಕ್ತಿಶಾಲಿ ಸಾಧನವಾಗಿದ್ದು, ಅದನ್ನು ಜವಾಬ್ದಾರಿಯಿಂದ ಬಳಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಶಿಕ್ಷಣ, ಸಂವಿಧಾನ ಜ್ಞಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೈಗೂಡಿಸಿಕೊಂಡ ಯುವಜನತೆ ದೇಶದ ಭವಿಷ್ಯವನ್ನು ಸದೃಢಗೊಳಿಸಬೇಕು ಎಂದು ಮನವಿ ಮಾಡಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ನಾಯಕ್ ಮಾತನಾಡಿ,ನವೆಂಬರ್ 26ರಂದು ಸಂವಿಧಾನ ದಿನಾಚರಣೆಯ ಅಂಗವಾಗಿ ಯುವ ಸಂಸತ್ ಆಯೋಜಿಸಲಾಗುವುದು. ತಾಲ್ಲೂಕಿನ ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳು ಮತ್ತು ಪದವಿ ಕಾಲೇಜುಗಳಿಂದ 110 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ತಾಲ್ಲೂಕು ಮಟ್ಟದ ಕಾರ್ಯಕ್ರಮ ನಡೆಸಲಾಗುವುದು. ಅಲ್ಲಿಂದ 15 ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಯುವ ಸಂಸತ್ತಿನಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ.ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನೈಜ ವಿಧಾನಸಭೆ ಅಥವಾ ಸಂಸತ್ ಕಲಾಪದ ಮಾದರಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ತಾಲ್ಲೂಕಿನ ವಿದ್ಯಾರ್ಥಿಗಳು ಸಿದ್ಧತೆ ಮಾಡಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಬೇಕು ಎಂದರು. ತಹಶೀಲ್ದಾರ್ ಸುದರ್ಶನ್ ಯಾದವ್ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.ಡಾ.ಮುನಿರೆಡ್ಡಿ ಪ್ರಜಾಪ್ರಭುತ್ವ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಬಿಇಒ ಎ.ಸಿ.ನಾರಾಯಣಸ್ವಾಮಿ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ್ ರೆಡ್ಡಿ,ವಲಯ ಅರಣ್ಯಾಧಿಕಾರಿ ಪೂಜಾ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಹಾಗೂ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
    4
    ಅಂಬೇಡ್ಕರ್ ಪ್ರತಿಮೆ ಪೂಜೆಗಿಂತ ಅವರ ಆಶಯಗಳ ಅಳವಡಿಕೆಯೇ ನಿಜವಾದ ಗೌರವ:ಇಓ ಆನಂದ್

​ಸಂವಿಧಾನದ ಮೂಲ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ:ಚಿಂತಾಮಣಿಯಲ್ಲಿ ಇಒ ಎಸ್.ಆನಂದ್ ಕರೆ

ಚಿಂತಾಮಣಿ:ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನ ಹಕ್ಕು,ಸ್ವಾತಂತ್ರ್ಯ ಮತ್ತು ನ್ಯಾಯವನ್ನು ಒದಗಿಸಿದೆ.ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಪ್ರತಿಮೆಗಳಿಗೆ ಪೂಜೆ ಸಲ್ಲಿಸುವುದಕ್ಕಿಂತ,ಪ್ರತಿಪಾದಿಸಿದ ಸಮಾನತೆ,ಸಾಮಾಜಿಕ ನ್ಯಾಯ,ಸ್ವಾತಂತ್ರ್ಯ ಮತ್ತು ಸಹೋದರತ್ವದ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಆನಂದ್ ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಂಡಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಮಾತನಾಡಿದರು.
ಅಂಬೇಡ್ಕರ್ ಹೆಸರನ್ನು ಗೌರವದಿಂದ ಉಚ್ಚರಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದರೂ,ಅವರ ಚಿಂತನೆ,ಹೋರಾಟದ ಉದ್ದೇಶ ಮತ್ತು ಸಂವಿಧಾನದ ಮೂಲ ಆಶಯಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಕಡಿಮೆಯಾಗುತ್ತಿರುವುದು ಆತಂಕಕಾರಿ ಸಂಗತಿ ಎಂದರು

ದೀರ್ಘ ಚರ್ಚೆ,ವಿಚಾರ–ವಿಮರ್ಶೆ ಮತ್ತು ತಿದ್ದುಪಡಿಗಳ ಬಳಿಕ ಸಂವಿಧಾನವನ್ನು ಅಂಗೀಕರಿಸಲಾಗಿದೆ.ಅದು ಯಾರೊಬ್ಬರ ಏಕಪಕ್ಷೀಯ ಪ್ರಯತ್ನದ ಫಲವಲ್ಲ.ಭಾರತದ ವೈವಿಧ್ಯತೆಯನ್ನು ಒಗ್ಗೂಡಿಸಿ,ಪ್ರತಿಯೊಬ್ಬ ನಾಗರಿಕನಿಗೂ ಹಕ್ಕು ಮತ್ತು ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಸಂವಿಧಾನವನ್ನು ರೂಪಿಸಲಾಗಿದೆ.

ಸಂವಿಧಾನದ ಪೀಠಿಕೆಯಲ್ಲಿರುವ ಸಾರ್ವಭೌಮ, ಸಮಾಜವಾದಿ,ಸರ್ವಧರ್ಮ ಸಮಭಾವ,ಪ್ರಜಾಸತ್ತಾತ್ಮಕ ಗಣರಾಜ್ಯ ಹಾಗೂ ಸಾಮಾಜಿಕ,ಆರ್ಥಿಕ ಮತ್ತು ರಾಜಕೀಯ ನ್ಯಾಯದ ಆಶಯಗಳನ್ನು ವಿದ್ಯಾರ್ಥಿಗಳು ಅರಿತು, ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಜಾತಿ,ಧರ್ಮ ಸೇರಿದಂತೆ ಯಾವುದೇ ವಿಭಜನೆಗಳು ಸಮಾಜದ ಒಗ್ಗಟ್ಟಿಗೆ ಅಡ್ಡಿಯಾಗದಂತೆ ಸಮಾನತೆಯ ಮೌಲ್ಯಗಳನ್ನು ಬಲಪಡಿಸಬೇಕು ಎಂದು ಹೇಳಿದರು.
ದೇಶದ ಎಲ್ಲಾ ನಾಗರಿಕರಿಗೂ ಮತದಾನದ ಹಕ್ಕು ದೊರಕಬೇಕೆಂಬ ಆಶಯಕ್ಕೆ ಅಂಬೇಡ್ಕರ್ ಬಲವಾದ ಧ್ವನಿಯಾಗಿದ್ದರು. ಮತದಾನದ ಹಕ್ಕು ಪ್ರಜಾಪ್ರಭುತ್ವದ ಶಕ್ತಿಶಾಲಿ ಸಾಧನವಾಗಿದ್ದು, ಅದನ್ನು ಜವಾಬ್ದಾರಿಯಿಂದ ಬಳಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಶಿಕ್ಷಣ, ಸಂವಿಧಾನ ಜ್ಞಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೈಗೂಡಿಸಿಕೊಂಡ ಯುವಜನತೆ ದೇಶದ ಭವಿಷ್ಯವನ್ನು ಸದೃಢಗೊಳಿಸಬೇಕು ಎಂದು ಮನವಿ ಮಾಡಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ನಾಯಕ್ ಮಾತನಾಡಿ,ನವೆಂಬರ್ 26ರಂದು ಸಂವಿಧಾನ ದಿನಾಚರಣೆಯ ಅಂಗವಾಗಿ ಯುವ ಸಂಸತ್ ಆಯೋಜಿಸಲಾಗುವುದು. ತಾಲ್ಲೂಕಿನ ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳು ಮತ್ತು ಪದವಿ ಕಾಲೇಜುಗಳಿಂದ 110 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ತಾಲ್ಲೂಕು ಮಟ್ಟದ ಕಾರ್ಯಕ್ರಮ ನಡೆಸಲಾಗುವುದು. ಅಲ್ಲಿಂದ 15 ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು.

ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಯುವ ಸಂಸತ್ತಿನಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ.ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನೈಜ ವಿಧಾನಸಭೆ ಅಥವಾ ಸಂಸತ್ ಕಲಾಪದ ಮಾದರಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ತಾಲ್ಲೂಕಿನ ವಿದ್ಯಾರ್ಥಿಗಳು ಸಿದ್ಧತೆ ಮಾಡಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಬೇಕು ಎಂದರು.

ತಹಶೀಲ್ದಾರ್ ಸುದರ್ಶನ್ ಯಾದವ್ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.ಡಾ.ಮುನಿರೆಡ್ಡಿ ಪ್ರಜಾಪ್ರಭುತ್ವ ದಿನಾಚರಣೆಯ ಮಹತ್ವವನ್ನು ವಿವರಿಸಿದರು.
ಬಿಇಒ ಎ.ಸಿ.ನಾರಾಯಣಸ್ವಾಮಿ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ್ ರೆಡ್ಡಿ,ವಲಯ ಅರಣ್ಯಾಧಿಕಾರಿ ಪೂಜಾ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಹಾಗೂ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    user_Rownak Ali khan
    Rownak Ali khan
    Local News Reporter ಕೋಲಾರ, ಕೋಲಾರ, ಕರ್ನಾಟಕ•
    19 hrs ago
  • KOLAR KI.AWAAZ KOUSAR NEWS
    1
    KOLAR KI.AWAAZ KOUSAR NEWS
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    21 hrs ago
  • ಗಣಪತಿ ಮೆರವಣಿಗೆಯಲ್ಲಿ ಮಚ್ಚು, ಚಾಕು ಹಿಡಿದು ಯುವಕರ ಹುಚ್ಚಾಟ| Veega News Kannada ಗಣಪತಿ ಮೆರವಣಿಗೆಯಲ್ಲಿ ಮಚ್ಚು, ಚಾಕು ಹಿಡಿದು ಯುವಕರ ಹುಚ್ಚಾಟ
    1
    ಗಣಪತಿ ಮೆರವಣಿಗೆಯಲ್ಲಿ ಮಚ್ಚು, 
ಚಾಕು ಹಿಡಿದು ಯುವಕರ ಹುಚ್ಚಾಟ| Veega News Kannada 
ಗಣಪತಿ ಮೆರವಣಿಗೆಯಲ್ಲಿ ಮಚ್ಚು, 
ಚಾಕು ಹಿಡಿದು ಯುವಕರ ಹುಚ್ಚಾಟ
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    1 hr ago
  • ಮಹದೇವಪುರ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮದಿನಕ್ಕೆ ಸೇವಾಕಾರ್ಯ ಶಾಸಕಿ‌ ಮಂಜುಳಾ‌ ಲಿಂಬಾವಳಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತ್ರತ್ವದಲ್ಲಿ ಆಯೋಜನೆ ಕ್ಷೇತ್ರ ವ್ಯಾಪ್ತಿ ಸುಮಾರು 134ಕ್ಕೂ ಹೆಚ್ಚು ಕಡೆ ಸೇವಾಕಾರ್ಯ ಕೆರೆ , ದೇವಾಲಯ ,ಶಾಲೆ , ಸ್ಮಶಾನ ಆವರಣ ಸ್ವಚ್ಛತೆ , ಪೌರ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ರಕ್ತದಾನ ಶಿಬಿರ , ಆರೋಗ್ಯ ಶಿಬಿರ , ಗೋಶಾಲೆಗಳಲ್ಲಿ‌ ಸೇವಾಕಾರ್ಯ ಗಿಡ ನೆಡುವ ಜೊತೆ ಶಾಲಾ ಮಕ್ಕಳಿಗೆ ಪುಸ್ತಕ ಸಿಹಿ ವಿತರಣೆ ಪ್ರಧಾನಿ ಮೋದಿ ಅವರ ಹುಟ್ಟು ಹಬ್ಬ ಹಿನ್ನೆಲೆ ಇಡಿ‌ ತಿಂಗಳು ಸೇವಾಕಾರ್ಯ ಮಾಡಲು ಪಕ್ಷ ಕರೆ ನೀಡಿದೆ ಮಹದೇವಪುರ ಕ್ಷೇತ್ರದಲ್ಲಿ ‌ಒಂದೇ ದಿನ ನೂರಾರು ಸೇವಾಕಾರ್ಯ ಮಾಡಲಾಗಿದೆ ದೇಶದ ಅತ್ಯುತ್ತಮ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ದೇಶದ ಚಿತ್ರಣವನ್ನೇ ಪ್ರಧಾನ ಮಂತ್ರಿಗಳು ಬದಲಾಯಿಸುತ್ತಾರೆ ಎಂದು ಮಾಜಿ ಸಚಿವ ಲಿಂಬಾವಳಿ ಆಡಿ ಹೊಗಳಿದ್ದಾರೆ
    1
    ಮಹದೇವಪುರ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮದಿನಕ್ಕೆ ಸೇವಾಕಾರ್ಯ
ಶಾಸಕಿ‌ ಮಂಜುಳಾ‌ ಲಿಂಬಾವಳಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತ್ರತ್ವದಲ್ಲಿ ಆಯೋಜನೆ 
ಕ್ಷೇತ್ರ ವ್ಯಾಪ್ತಿ ಸುಮಾರು 134ಕ್ಕೂ ಹೆಚ್ಚು ಕಡೆ ಸೇವಾಕಾರ್ಯ   
ಕೆರೆ , ದೇವಾಲಯ ,ಶಾಲೆ , ಸ್ಮಶಾನ ಆವರಣ ಸ್ವಚ್ಛತೆ , ಪೌರ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ 
ರಕ್ತದಾನ ಶಿಬಿರ , ಆರೋಗ್ಯ ಶಿಬಿರ , ಗೋಶಾಲೆಗಳಲ್ಲಿ‌ ಸೇವಾಕಾರ್ಯ  
ಗಿಡ ನೆಡುವ ಜೊತೆ ಶಾಲಾ ಮಕ್ಕಳಿಗೆ ಪುಸ್ತಕ ಸಿಹಿ ವಿತರಣೆ  
ಪ್ರಧಾನಿ ಮೋದಿ ಅವರ ಹುಟ್ಟು ಹಬ್ಬ ಹಿನ್ನೆಲೆ ಇಡಿ‌ ತಿಂಗಳು ಸೇವಾಕಾರ್ಯ ಮಾಡಲು ಪಕ್ಷ ಕರೆ ನೀಡಿದೆ 
ಮಹದೇವಪುರ ಕ್ಷೇತ್ರದಲ್ಲಿ ‌ಒಂದೇ ದಿನ ನೂರಾರು ಸೇವಾಕಾರ್ಯ ಮಾಡಲಾಗಿದೆ  
ದೇಶದ  ಅತ್ಯುತ್ತಮ ಪ್ರಧಾನಿ ನರೇಂದ್ರ ಮೋದಿ ಅವರು
ನಮ್ಮ ದೇಶದ ಚಿತ್ರಣವನ್ನೇ ಪ್ರಧಾನ ಮಂತ್ರಿಗಳು ಬದಲಾಯಿಸುತ್ತಾರೆ ಎಂದು ಮಾಜಿ ಸಚಿವ ಲಿಂಬಾವಳಿ ಆಡಿ ಹೊಗಳಿದ್ದಾರೆ
    user_The Reporter
    The Reporter
    Local News Reporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    1 hr ago
  • ಬೂದಿಕೋಟೆ ಎಂ.ಹೊಸಹಳ್ಳಿಯಲ್ಲಿ ವಿಜೃಂಭಣೆಯಿಂದ ವಿಶ್ವಕರ್ಮ ಜಯಂತಿ ಹೋಬಳಿಯ ಎಂ.ಹೊಸಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ಸರ್ಕಲ್‌ನಲ್ಲಿ ವಿಶ್ವಕರ್ಮ ಜಯಂತಿಯನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಜಯಂತಿ ಅಂಗವಾಗಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ದೇವಸ್ಥಾನದಲ್ಲಿ ವಿಶೇಷ ಪೂಜೆ, ಅರ್ಚನೆ ಹಾಗೂ ಅಭಿಷೇಕ ನೆರವೇರಿಸಿದ ಬಳಿಕ ದೇವಶಿಲ್ಪಿ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿಯನ್ನು ಆಚರಿಸಲಾಯಿತು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗ್ರಾಮಸ್ಥರು, ಭಕ್ತರು ಹಾಗೂ ವಿಶ್ವಕರ್ಮ ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಪಿಎನ್‌ಎಸ್ ಜುವೆಲ್ಲರಿ ಮಾಲೀಕ ಶ್ರೀನಿವಾಸ ಆಚಾರಿ ಮಾತನಾಡಿ, ವಿಶ್ವಕರ್ಮ ಜಯಂತಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ಆಚರಣೆಯಲ್ಲ. ಸೃಷ್ಟಿ, ಕಲೆ, ಕರಕುಶಲ ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ. ಅವರ ಕಲೆ, ಕೌಶಲ್ಯ ಮತ್ತು ಪರಂಪರೆಯನ್ನು ಸ್ಮರಿಸುವುದು ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ವಿಶ್ವಕರ್ಮ ಸಮುದಾಯವು ಹಲವು ತಲೆಮಾರುಗಳಿಂದ ತನ್ನ ಕಲೆ ಮತ್ತು ಕೌಶಲ್ಯದ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದೆ. ಆಧುನಿಕ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಸಾಂಪ್ರದಾಯಿಕ ವೃತ್ತಿಗಳನ್ನೂ ಬೆಳೆಸಿಕೊಂಡು ಯುವಜನತೆ ಸ್ವಾವಲಂಬಿಗಳಾಗಬೇಕು. ಸಮಾಜದಲ್ಲಿ ಪರಸ್ಪರ ಸಹಕಾರ, ಸೌಹಾರ್ದತೆ ಹಾಗೂ ಒಗ್ಗಟ್ಟಿನಿಂದ ಮುನ್ನಡೆಯುವ ಮೂಲಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
    1
    ಬೂದಿಕೋಟೆ ಎಂ.ಹೊಸಹಳ್ಳಿಯಲ್ಲಿ ವಿಜೃಂಭಣೆಯಿಂದ ವಿಶ್ವಕರ್ಮ ಜಯಂತಿ

ಹೋಬಳಿಯ ಎಂ.ಹೊಸಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ಸರ್ಕಲ್‌ನಲ್ಲಿ ವಿಶ್ವಕರ್ಮ ಜಯಂತಿಯನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಜಯಂತಿ ಅಂಗವಾಗಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ದೇವಸ್ಥಾನದಲ್ಲಿ ವಿಶೇಷ ಪೂಜೆ, ಅರ್ಚನೆ ಹಾಗೂ ಅಭಿಷೇಕ ನೆರವೇರಿಸಿದ ಬಳಿಕ ದೇವಶಿಲ್ಪಿ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿಯನ್ನು ಆಚರಿಸಲಾಯಿತು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗ್ರಾಮಸ್ಥರು, ಭಕ್ತರು ಹಾಗೂ ವಿಶ್ವಕರ್ಮ ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಪಿಎನ್‌ಎಸ್ ಜುವೆಲ್ಲರಿ ಮಾಲೀಕ ಶ್ರೀನಿವಾಸ ಆಚಾರಿ ಮಾತನಾಡಿ, ವಿಶ್ವಕರ್ಮ ಜಯಂತಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ಆಚರಣೆಯಲ್ಲ. ಸೃಷ್ಟಿ, ಕಲೆ, ಕರಕುಶಲ ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ. ಅವರ ಕಲೆ, ಕೌಶಲ್ಯ ಮತ್ತು ಪರಂಪರೆಯನ್ನು ಸ್ಮರಿಸುವುದು ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ವಿಶ್ವಕರ್ಮ ಸಮುದಾಯವು ಹಲವು ತಲೆಮಾರುಗಳಿಂದ ತನ್ನ ಕಲೆ ಮತ್ತು ಕೌಶಲ್ಯದ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದೆ. ಆಧುನಿಕ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಸಾಂಪ್ರದಾಯಿಕ ವೃತ್ತಿಗಳನ್ನೂ ಬೆಳೆಸಿಕೊಂಡು ಯುವಜನತೆ ಸ್ವಾವಲಂಬಿಗಳಾಗಬೇಕು. ಸಮಾಜದಲ್ಲಿ ಪರಸ್ಪರ ಸಹಕಾರ, ಸೌಹಾರ್ದತೆ ಹಾಗೂ ಒಗ್ಗಟ್ಟಿನಿಂದ ಮುನ್ನಡೆಯುವ ಮೂಲಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
    user_Vishnu Press
    Vishnu Press
    Local News Reporter ಬಂಗಾರಪೇಟೆ, ಕೋಲಾರ, ಕರ್ನಾಟಕ•
    3 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.