Shuru
Apke Nagar Ki App…
ಅಂತರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ ಚಿನ್ನದ ಪದಕ ಗೆದ್ದ ಸಾನ್ವಿ ಜೋಯ್ಸ್‌ರವರ ಅಭಿಪ್ರಾಯ ತೀರ್ಥಹಳ್ಳಿ: ತಾಲೂಕಿನ ಪ್ರತಿಷ್ಠಿತ ಶಾಲೆಯಲ್ಲೊಂದಾದ ವಾಗ್ದೇವಿ ಶಾಲೆಯ ಸಾನ್ವಿ ಜೋಯ್ಸರವರು ಅಂತರರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ ಚಿನ್ನದ ಪದಕವನ್ನು ಗೆದ್ದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ರಶ್ಮಿ ಶ್ರೀಕಾಂತ್ ನಾಯಕ್
ಅಂತರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ ಚಿನ್ನದ ಪದಕ ಗೆದ್ದ ಸಾನ್ವಿ ಜೋಯ್ಸ್‌ರವರ ಅಭಿಪ್ರಾಯ ತೀರ್ಥಹಳ್ಳಿ: ತಾಲೂಕಿನ ಪ್ರತಿಷ್ಠಿತ ಶಾಲೆಯಲ್ಲೊಂದಾದ ವಾಗ್ದೇವಿ ಶಾಲೆಯ ಸಾನ್ವಿ ಜೋಯ್ಸರವರು ಅಂತರರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ ಚಿನ್ನದ ಪದಕವನ್ನು ಗೆದ್ದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
More news from ಕರ್ನಾಟಕ and nearby areas
- ತೀರ್ಥಹಳ್ಳಿ: ತಾಲೂಕಿನ ಪಟ್ಟಣದ ಆಗುಂಬೆ ಬಸ್ ನಿಲ್ದಾಣದ ಬಳಿ ಬೆಳಿಗ್ಗೆ ಅಪಘಾತವಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿರುವುದಿಲ್ಲ ಎಂಬುದು ತಿಳಿದು ಬಂದಿದೆ.1
- ಭದ್ರಾವತಿ: ಹಳೇ ನಗರದ ಬಿ.ಇ.ಒ ಕಛೇರಿ ಮತ್ತು ಡಾ|| ಬಿ.ಆರ್.ಅಂಬೇಡ್ಕರ್ ಭವನದ ಮಧ್ಯಭಾಗದಲ್ಲಿ ಇರುವ ಪ್ರಾಥಮಿಕ ಶಾಲೆಯ ಆವರಣದ ಖಾಲಿ ಜಾಗವನ್ನು ಶಾಲಾ ಮಕ್ಕಳಿಗಾಗಿ ಉದ್ಯಾನವನ ನಿರ್ಮಾಣ ಮಾಡಲು ಒತ್ತಾಯಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ, ದಲಿತ, ಕ್ರಿಶ್ಚಿಯನ್, ಮುಸ್ಲಿಂ ಸಂಘಟನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ದೇಶದ ಎಲ್ಲಾ ಪ್ರಜೆಗಳಿಗೂ ಉಚಿತ ಶಿಕ್ಷಣ ನೀಡಬೇಕೆಂದು ಸಂವಿಧಾನ ತಿಳಿಸಿದ್ದರು ಸಹ ಸರ್ಕಾರಿ ಶಾಲೆ, ಕಾಲೇಜುಗಳು ಕಸದ ಗುಂಡಿ ಯಂತೆ, ನಿರ್ಲಕ್ಷ್ಯತನದಿಂದ ಬಡ ಜನರು ವಿಧ್ಯಾಭ್ಯಾಸ ಮಾಡುತ್ತಿದ್ದು, ಸಮಾನ ಶಿಕ್ಷಣ ಎಂಬ ಕಾಯ್ದೆಯನ್ನು ಉಲ್ಲಂಘಿಸುತ್ತಿರುವ ಸರ್ಕಾರಗಳು ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಪ್ರತಿಭಟನಾ ಕಾರರು ಕಿಡಿಕಾರಿದರು. ಶಿಕ್ಷಣ ಸಚಿವರ ಜಿಲ್ಲೆಯಲ್ಲಿಯೇ ಸರ್ಕಾರಿ ಶಾಲೆಗಳು ಅದಪತನದತ್ತ ಸಾಗುತ್ತಿರುವುದು ಶೋಚನೀಯವಾಗಿದೆ. ಸರ್ಕಾರಿ ಶಾಲೆಗಳು ಕಸದ ಗುಂಡಿಯಾಗಿ ಪರಿವರ್ತನೆ ಗೊಂಡಿದೆ. ಶಿಕ್ಷಕರಿಲ್ಲದೆ. ಮೂಲಭೂತ ಸೌಕರ್ಯ ಗಳಾದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಕಟ್ಟಡದ ವ್ಯವಸ್ಥೆ ಇಲ್ಲದೆ ಹದಗೆಟ್ಟಿದ್ದು, ಸರ್ಕಾರಿ ಶಾಲೆಗೆ ಸೇರಿದ ಜಾಗಗಳನ್ನು ಕಬಳಿಸುವ ನಿಟ್ಟಿನಲ್ಲಿ ಖಾಸಗಿ ವ್ಯಕ್ತಿಗಳು ಕನ್ನ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪಕ್ಕದ ನಗರದ ಹೃದಯ ಭಾಗದಲ್ಲಿ ಇರುವ ಪ್ರಾಥಮಿಕ ಪಾಠಶಾಲೆಯ ಆವರಣದ ಜಾಗವನ್ನು ಕಬಳಿಸಲು ಖಾಸಗಿ ವ್ಯಕ್ತಿಗಳು ಸಂಚು ನಡೆಸುತ್ತಿದ್ದು ಆ ಜಾಗದಲ್ಲಿ ಕಳೆದ 20 ವರ್ಷಗಳಿಂದಲೂ ಕಸದ ಗುಂಡಿ ಯಂತಿತ್ತು. ಈ ಬಗ್ಗೆ ಎಚ್ಚರಿಸಿದ್ದರು ಸಹ ಸಂಬಂಧ ಪಟ್ಟ ಅಧಿಕಾರಿಗಳು ಸ್ವಚ್ಚಗೊಳಿ ಸದೆ ಕನಿಷ್ಟ ಶಾಲೆಯ ಜಾಗಕ್ಕೆ ಕಾಂಪೌಂಡ್ ನಿರ್ಮಿಸಿ , ಮಕ್ಕಳ ಆಟಿಕೆಗಳನ್ನು ಅಳವಡಿಸಿದ್ದಲ್ಲಿ ಸರ್ಕಾರಿ ಶಾಲೆಗೆ ಬರುವ ಬಡ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಅನುಕೂಲ ವಾಗಲಿದೆ ಈ ಹಿನ್ನಲೆಯಲ್ಲಿ ಒಂದು ವಾರದಲ್ಲಿ ಖಾಲಿ ಜಾಗಕ್ಕೆ ಬೇಲಿ ನಿರ್ಮಿಸಿ ಆಟಿಕೆ ಅಳವಡಿಸಲು ಒತ್ತಾಯಿಸಲಾಯಿತು. ನಂತರ ಬಿ ಇ ಓ ಹಾಗೂ ನಗರಸಭೆ ಆಯುಕ್ತರುಗಳ ಮೂಲಕ ಮುಖ್ಯಮಂತ್ರಿ ಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು,ಸಂಸದರು, ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು,ತಹಶೀಲ್ದಾರ್ ರವರುಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ನಗರಸಭೆ ಪೌರಾಯುಕ್ತರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ ಎನ್ ರಾಜು ಪ್ರತಿಭಟನೆ ನೇತೃತ್ವವಹಿಸಿದ್ದರು. ಡಿಸಿಎಂ ರಾಜ್ಯಾಧ್ಯಕ್ಷ ಪ್ರಮೋದ್ ಕುಮಾರ್, ಪ್ರಮುಖರಾದ ತೀರ್ಥೇಶ್, ಬ್ರಹ್ಮಲಿಂಗಯ್ಯ , ಸೋಮಣ್ಣ, ಚಂದ್ರಶೇಖರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.1
- ಸಮರ್ಥ ಶಿವಯೋಗಿ ಕಾಗಿನಲ್ಲಿ ಎಂಬ ಆರು ವರ್ಷದ ಬಾಲಕ ಗುತ್ತಲ ಪಟ್ಟಣದಿಂದ ಕುರವತ್ತಿ ಬಸವೇಶ್ವರ ರಥೋತ್ಸವಕ್ಕೆ ಬರಿಗಾಲಲ್ಲಿ ಪಾದಯಾತ್ರೆಯನ್ನು 2. ತಾಸು 30 ನಿಮಿಷ್ಯಕ್ಕೆ ಕುರವತ್ತಿ ತಲುಪಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.4
- "ಶ್ರೀಶಾರದಾಶ್ರಮದಿಂದ ಬುಡಗ ಜಂಗಮ ಅಲೆಮಾರಿ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ":- ಮಾತಾಜೀ ತ್ಯಾಗಮಯೀ. ಚಳ್ಳಕೆರೆ:-ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಿಂದ ಪ್ರತಿ ತಿಂಗಳು ಚಳ್ಳಕೆರೆ ತಾಲೂಕಿನ ಅಲೆಮಾರಿ ಕುಟುಂಬಗಳಿಗೆ ದಿನಬಳಕೆಯ ವಸ್ತುಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು. ನಗರದ ಹೊರವಲಯದ ಭರಮಸಾಗರ ರಸ್ತೆಯ ಮೈರಾಡ್ ಕಾಲೋನಿಯ ಬುಡಗ ಜಂಗಮ ಅಲೆಮಾರಿ ಕುಟುಂಬಗಳಿಗೆ ದಿನಸಿ ಕಿಟ್ ಮತ್ತು ಪಾತ್ರೆ-ತಟ್ಟೆ-ಲೋಟ ವಿತರಿಸಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಬುಡಗ ಜಂಗಮ ಅಲೆಮಾರಿಗಳ ಮುಖಂಡ ಬಲರಾಮ ಮಾತನಾಡಿ ದಾನದಿಂದ ಮನುಷ್ಯ ಧನ್ಯತೆಯನ್ನು ಪಡೆಯುತ್ತಾನೆ. ಇಂತಹ ಪವಿತ್ರವಾದ ಕಾರ್ಯಕ್ರಮವನ್ನು ನಗರದ ಶ್ರೀಶಾರದಾಶ್ರಮವು ಮಾಡುತ್ತಿರುವುದು ನಮ್ಮಂತಹ ಅಲೆಮಾರಿ ಕುಟುಂಬಗಳಿಗೆ ಉಪಯೋಗವಾಗುತ್ತಿದ್ದು ನೆಮ್ಮದಿಯ ಜೀವನ ನಡೆಸಲು ಸಹಾಯವಾಗುತ್ತಿದೆ ಎಂದು ಕೃತಜ್ಞತೆ ಸಲ್ಲಿಸಿದರು. ಸಮಾಜ ಸೇವಕ ಮತ್ತು ಶ್ರೀಶಾರದಾಶ್ರಮದ ಸದ್ಭಕ್ತ ಯತೀಶ್ ಎಂ ಸಿದ್ದಾಪುರ ಮಾತನಾಡಿ ಸ್ವಾಮಿ ವಿವೇಕಾನಂದರು ತಿಳಿಸಿದಂತೆ ಇಂದು ಬುಡಗ ಜಂಗಮ ಅಲೆಮಾರಿ ಕುಟುಂಬಗಳಿಗೆ ದಿನಬಳಕೆಯ ವಸ್ತುಗಳ ವಿತರಣೆಯ ಮೂಲಕ "ಜೀವ ಸೇವೆಯೇ ಈಶ ಸೇವೆ"ಯ ಸಿದ್ಧಾಂತವನ್ನು ಶ್ರೀಶಾರದಾಶ್ರಮವು ಅನುಸರಿಸಿ ಅನುಷ್ಠಾನಕ್ಕೆ ತರುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು. ದಿನಸಿ ಕಿಟ್ ಗಳ ವಿತರಣಾ ಸಮಾರಂಭದಲ್ಲಿ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ, ಎಂ ಗೀತಾ ನಾಗರಾಜ್,ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ,ಗೀತಾ ಪ್ರಕಾಶ್, ಅಂಬುಜಾ,ವಿದ್ಯಾ,ಕವಿತಾ, ಸರಸ್ವತಿ, ಸಂತೋಷ್, ಚೆನ್ನಕೇಶವ, ಹೃತಿಕ್,ಭಾವನಾ, ರಾಘವೇಂದ್ರ,ಡಾ.ಭೂಮಿಕ ಸೇರಿದಂತೆ ಬುಡಗ ಜಂಗಮ ನಿವಾಸಿಗಳು ಉಪಸ್ಥಿತರಿದ್ದರು.1
- ಕಲ್ಕುಂಟೆ ಗೇಟ್ ಬಳಿ ರಸ್ತೆ ಬದಿಯ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಚಿತ್ರದುರ್ಗ ತಾಲೂಕಿನ ಕಲ್ಕುಂಟೆ ಗೇಟ್ ಬಳಿ ಘಟನೆ ನಡೆದಿದ್ದು ಬೈ್ಕ ಸವಾರ ಗಂಬೀರವಾಗಿ ಗಾಯಗೊಂಡಿದ್ದು ಆತನನ್ನ ಚಿಕಿತ್ಸೆಗೆಂದು ಆಸ್ಪತ್ರೆಗೆ ಧಾಖಲಿಸಲಾಗಿದೆ1
- ಅರಕಲಗೂಡು: ಪಟ್ಟಣದ ಕೋಟೆ ಪುರಾಣ ಪ್ರಸಿದ್ದ ಅಮೃತೇಶ್ವರಸ್ವಾಮಿ ಮಹಾ ರಥೋತ್ಸವವು ಸೋಮವಾರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು. ಬೆಳಿಗ್ಗೆ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ಅಭಿಷೇಕ, ಪೂಜಾ ಕೈಂಕರ್ಯಗಳು ನೆರವೇರಿದವು. ಬಳಿಕ ಉತ್ಸವ ಮೂರ್ತಿಗಳನ್ನು ಅಲಂಕರಿಸಿ ಕೃಷ್ಣಗಂಧೋತ್ಸವ ನಡೆಸಲಾಯಿತು. ಉತ್ಸವದಲ್ಲಿ ಬಂದ ಮೂರ್ತಿಗಳನ್ನು ಅಲಂಕರಿಸಿದ ರಥದಲ್ಲಿ ಪ್ರತಿಷ್ಠಾಪಿಸಿ ಪೂಜಾವಿಧಿಗಳನ್ನು ನಡೆಸಲಾಯಿತು. ಅರೇಮಾದನಹಳ್ಳಿ ವಿಶ್ವಕರ್ಮ ಮೂಲ ಮಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ತಹಶೀಲ್ದಾರ್ ಕೆ.ಸಿ. ಸೌಮ್ಯ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ನೆರೆದಿದ್ದ ಭಕ್ತರು ಶಿವನಾಮ ಸ್ಮರಣೆ ಮಾಡುತ್ತಾ ರಥ ಬೀದಿಯಲ್ಲಿ ತೇರನ್ನು ಎಳೆದು ಸಂಭ್ರಮಿಸಿದರು. ನಾದಸ್ವರ, ತಮಟೆ ವಾದ್ಯಗಳು ರಥೋತ್ಸವಕ್ಕೆ ಮೆರಗು ನೀಡಿತು. ತಮಟೆ ವಾದ್ಯದ ಲಯಕ್ಕೆ ಯುವಕರು, ಚಿಣ್ಣರು, ಮಹಿಳೆಯರು ಹೆಜ್ಜೆಹಾಕಿದರು. ತೇರನ್ನು ಎಳೆಯುತ್ತಿದ್ದ ಭಕ್ತರಿಗೆ ಬಿಸಿಲಿನ ದಗೆ ನೀಗಿಸಲು ಮನೆ, ಮನೆಗಳಲ್ಲಿ ಮಜ್ಜಿಗೆ, ಪಾನಕ, ಮುಂತಾದ ತಂಪು ಪಾನಿಯಗಳನ್ನು ವಿತರಿಸಲಾಯಿತು. ರಥ ಸ್ವಸ್ಥಾನ ಸೇರಿದ ಬಳಿಕ ಪ್ರಸಾದ ವಿನಿಯೋಗ ನಡೆಸಲಾಯಿತು. ಪಪಂ ಮುಖ್ಯಧಿಕಾರಿ ಸಿ.ಡಿ. ನಾಗೇಂದ್ರಕುಮಾರ್, ಕಂದಾಯ ನಿರೀಕ್ಷಕ ಕೆ.ಸಿ. ಲೋಕೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪುಟ್ಟರಾಜ್, ಮುಖಂಡರಾದ ಮುತ್ತಿಗೆ ರಾಜೇಗೌಡ, ವಿ. ಎ. ನಂಜುಂಡಸ್ವಾಮಿ, ನರಸೇಗೌಡ, ವೆಂಕಟೇಶ್, ರಮೇಶ್ ವಾಟಾಳ್, ನಿತ್ಯಜ್ಯೋತಿ ನಾಗರಾಜ್, ಎ.ಎಸ್. ಹಿರಣ್ಣಯ್ಯ, ಎ.ಎನ್. ಗಣೇಶಮೂರ್ತಿ, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನರಸಿಂಹ ಮೂರ್ತಿ, ಕಾರ್ಯದರ್ಶಿ ರಮೇಶ್ ಉಪಸ್ಥಿತರಿದ್ದರು. ರಾತ್ರಿ ಶಾಂತೋತ್ಸವ ನಡೆಯಿತು.1
- Post by ಚಂದು ಕನ್ನಡಿಗ ಚಳ್ಳಕೆರೆ1
- ತೀರ್ಥಹಳ್ಳಿ: ತಾಲೂಕಿನ ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀ ಮಾರಿಕಾಂಬ ದೇವಿಯ ಜಾತ್ರೆಯು ಇಂದಿನಿಂದ ಪ್ರಾರಂಭವಾಗಿದ್ದು ಏನೆಲ್ಲಾ ವಿಶೇಷತೆ ಇರುತ್ತದೆ ಎಂಬುದನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ಐತಾಳ್‌ರವರು ತಿಳಿಸಿದ್ದಾರೆ.3