Shuru
Apke Nagar Ki App…
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಗುತ್ತಿ ಶತಮಾನೋತ್ತರ ಕಾಯ೯ಕ್ರಮ 05 ಮತ್ತು 06 ಎಪ್ರಿಲ್ 2026 ಶತಮಾನೋತ್ತರ ಕಾಯ೯ಕ್ರಮ ಸವ೯ರಿಗೂ ಸ್ವಾಗತ.05 ಮತ್ತು 06 ಎಪ್ರಿಲ್ 2026
Narayan P.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಗುತ್ತಿ ಶತಮಾನೋತ್ತರ ಕಾಯ೯ಕ್ರಮ 05 ಮತ್ತು 06 ಎಪ್ರಿಲ್ 2026 ಶತಮಾನೋತ್ತರ ಕಾಯ೯ಕ್ರಮ ಸವ೯ರಿಗೂ ಸ್ವಾಗತ.05 ಮತ್ತು 06 ಎಪ್ರಿಲ್ 2026
More news from Karnataka and nearby areas
- ಶತಮಾನೋತ್ತರ ಕಾಯ೯ಕ್ರಮ ಸವ೯ರಿಗೂ ಸ್ವಾಗತ.05 ಮತ್ತು 06 ಎಪ್ರಿಲ್ 20261
- Post by H M ಹರಕುಣಿ2
- ಕಾರು ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಗಂಭೀರ ಗಾಯಗೊಂಡ ಘಟನೆ ಸಜಿಪಮುನ್ನೂರು ಗ್ರಾಮದ ದಾಸರಗುಡ್ಡೆ ಎಂಬಲ್ಲಿನ ಗುಳಿಗಜ್ಜ ಕಟ್ಟೆ ಬಳಿ ಬುಧವಾರ ಸಂಭವಿಸಿದೆ. ಗಾಯಗೊಂಡ ಮಹಿಳೆಯನ್ನು ಉಳ್ಳಾಲ ತಾಲೂಕಿನ ಬೋಳಿಯಾರು ಗ್ರಾಮದ ಭಾರತಿ (48) ಎಂದು ಗುರುತಿಸಲಾಗಿದೆ. ಮೆಲ್ಕಾರ್-ಮುಡಿಪು ರಾಜ್ಯ ಹೆದ್ದಾರಿ ರಸ್ತೆಯನ್ನು ದಾಟಿ ಗುಳಿಗಜ್ಜ ಕಟ್ಟೆಗೆ ಹಣ ಹಾಕಲು ಹೆದ್ದಾರಿ ರಸ್ತೆಯ ಅಂಚಿಗೆ ತಲುಪಿದಾಗ ಮೆಲ್ಕಾರ್ ಕಡೆಯಿಂದ ಮುಡಿಪು ಕಡೆಗೆ ಕೃಷ್ಣ ಶ್ಯಾಮ್ ಎಂಬವರು ಚಲಾಯಿಸಿಕೊಂಡು ಬಂದ ಕಾರು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಗಾಯಾಳು ಮಹಿಳೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ1
- ನರಹರಿ ನಗರದ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯ ದೇವಸ್ಥಾನದಲ್ಲಿ ಮಂಡಲದ ಪೂಜೆ.. ಚಳ್ಳಕೆರೆ ನಗರದ ನರಹರಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಕರಿಬಸವೇಶ್ವರ ಅಜ್ಜಯ ದೇವಸ್ಥಾನದಲ್ಲಿ.. ದೇವಸ್ಥಾನ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ 48ನೇ ದಿನದ ಮಂಡಲ ಪೂಜೆ ಕಾರ್ಯಕ್ರಮವನ್ನ ಶ್ರದ್ಧಾ ಭಕ್ತಿಯಿಂದ ಹಮ್ಮಿಕೊಳ್ಳಲಾಯಿತು. ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ದೇವಾಲಯದಲ್ಲಿ ಪೆಬ್ರವರಿ 11ರಂದು ಶ್ರೀ ಕರಿಬಸವೇಶ್ವರ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕಳಸಸ್ಥಾಪನೆ ಮಾಡಲಾಗಿತ್ತು. ಅಂದಿನಿಂದ ಕರಿಬಸವೇಶ್ವರ ಗದ್ದಿಗೆಯಲ್ಲಿ ವಿಶೇಷ ಪೂಜೆ, ಭಜನೆ, ಕೀರ್ತನೆಗಳು ಜರಗಿದವು. ಕರಿಬಸವೇಶ್ವರ ದೇವಸ್ಥಾನ ನಿರ್ಮಾಣಗೊಂಡು ಇಲ್ಲಿಗೆ 48ನೇ ದಿನ ಆಗಿರುವುದರಿಂದ ದೇವಸ್ಥಾನದಲ್ಲಿ ಮಂಡಲ ಪೂಜೆ ಅಂಗವಾಗಿ ಬೆಳಗಿನಜಾವ ಮೂರು ಗಂಟೆಯಿಂದಲೇ ನವಗ್ರಹ ಪೋಜೆ ಅಷ್ಟಲಕ್ಷ್ಮಿ ಪೂಜೆ, ಪಾರ್ವತಿ, ಪರಮೇಶ್ವರ ವಿಘ್ನೇಶ್ವರ ಪೂಜೆ ,ಹೋಮ ಹವನ ಭಜನೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.. ಗುರು ಕರಿಬಸವೇಶ್ವರ ದೇವಸ್ಥಾನಕ್ಕೆ ಸಾಕಷ್ಟು ಭಕ್ತರು ಆಗಮಿಸಿ ಎಲ್ಲಾ ಪೂಜೆ ಕಾರ್ಯದಲ್ಲಿ ಭಾಗಿಯಾಗಿ ಅನ್ನದಾಸೋಹ ಪಾಲ್ಗೊಂಡರು ಗುರು ಕರಿಬಸವೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಗಳು ಜತೆಗೆ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಧಾನ ಅರ್ಚಕರು ಹಾಗೂ ಶ್ರೀ ಕರಿಬಸವೇಶ್ವರ ಸ್ವಾಮಿ ಟ್ರಸ್ಟ್ ನ ಅಧ್ಯಕ್ಷ ಟಿ. ವೀರಭದ್ರ ಸ್ವಾಮಿ ತಿಳಿಸಿದ್ದಾರೆ....1
- ದೊಡ್ಡ ಉಳ್ಳಾರ್ತಿ ಗ್ರಾಮದ ಗೋಮಾಳ ಜಾಗದಲ್ಲಿ ರಾತ್ರೋರಾತ್ರಿ ಕಿಡಿಗೇಡಿಗಳು ಯಾವುದೋ ಫ್ಯಾಕ್ಟರಿಯ ಕಲುಷಿತ ಕೆಮಿಕಲ್ ಆಯಿಲ್ ತಂದು ಸುರಿದು ಹೋದ ಘಟನೆ ಬೆಳಕಿಗೆ ಬಂದಿದೆ. ಈ ಕಲುಷಿತ ಆಯಿಲ್ ಗೋಮಾಳ ಜಾಗವನ್ನು ಸಂಪೂರ್ಣವಾಗಿ ಹಾನಿಗೊಳಪಡಿಸಿದೆ.1
- Post by Ramesh Belur1
- ಗುಳೇದಗುಡ್ಡ: ಶ್ರೀರಾಮನವಮಿಯು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಆಚರಿಸಲಾಗುತ್ತದೆ. ಈ ದಿನವನ್ನು ಶ್ರೀವಿಷ್ಣುವಿನ ಏಳನೇ ಅವತಾರವಾದ ಶ್ರೀರಾಮನ ಜನ್ಮದಿನವೆಂದು ಭಕ್ತರು ಪರಿಗಣಿಸುತ್ತಾರೆ. ರಾಮನು ಸತ್ಯ, ಧರ್ಮ, ಕರ್ತವ್ಯನಿಷ್ಠೆ ಮತ್ತು ಆದರ್ಶ ಜೀವನದ ಪ್ರತೀಕವಾಗಿದ್ದು, ರಾಮಾಯಣದಲ್ಲಿ ಶ್ರೀರಾಮನ ಜೀವನ ಮೌಲ್ಯಗಳ ಬಗ್ಗೆ ತಿಳಿಸಲಾಗಿದೆ. ರಾಮರಾಜ್ಯವು ನ್ಯಾಯ, ಸಮಾನತೆ ಮತ್ತು ಸುಖಶಾಂತಿಯ ಸಂಕೇತವಾಗಿದ್ದು, ಇಂತಹ ಆದರ್ಶ ಸಮಾಜ ನಿರ್ಮಾಣವಾಗಲು ಶ್ರೀ ರಾಮ ರಾಜ್ಯದಂತಹ ಹಿಂದೂ ರಾಷ್ಟ್ರ ಸ್ಥಾಪನೆಯಾಗಬೇಕಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಸುಜಾತಾ ಹುಳಿಪಲ್ಲೇದ ಹೇಳಿದರು. ಅವರು ಶ್ರೀರಾಮನವಮಿ ನಿಮಿತ್ತ ಹಿಂದೂ ಜನ ಜಾಗೃತಿ ಸಮಿತಿ ವತಿಯಿಂದ ಗುಳೇದಗುಡ್ಡದ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಒಂದು ವಾರಗಳ ಕಾಲ ಹಮ್ಮಿಕೊಂಡಿದ್ದ ಶ್ರೀರಾಮ ಜಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದೇ ರೀತಿ ರಾಘವೇಂದ್ರ ಮಠ, ಪಾಂಡುರಂಗ ದೇವಸ್ಥಾನ, ವಿಠ್ಠಲರುಕ್ಷ್ಮಿಣಿ ದೇವಸ್ಥಾನ, ನೀಲಕಂಠೇಶ್ವರ ದೇವಸ್ಥಾನ ಸೇರಿದಂತೆ ಪಟ್ಟಣದ ಹಲವು ದೇವಸ್ಥಾನಗಳಲ್ಲಿ ಶ್ರೀರಾಮ ನಾಮಜಪ, ಪ್ರಾರ್ಥನೆ ಹಾಗೂ ರಾಮರಾಜ್ಯ ಸ್ಥಾಪನೆಗಾಗಿ ಪ್ರತಿಜ್ಞೆ ಮಾಡಿ ಮಾಡಲಾಯಿತು. ಪಟ್ಟಣದ ವಾಸವಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುರೇಶ ಪರ್ವತಿಕರ್, ಅಂಜನಾ ಪರ್ವತಿಕರ್, ರಮೇಶ್ ಚಿಲ್ಲಾಪುರ, ರಜನಿ ಚಿಲ್ಲಾಪುರ, ದಾಮೋದರ ಆಚಾರ್ಯ, ಶ್ರೀಧರ ನರೇಗಲ್, ಅನುಪಮಾ ಧಾರವಾಡ, ಸುರೇಖಾ ಧಾರವಾಡ, ಅನಿತಾ ಬಿಜಾಪುರ, ಸುಜಾತಾ ಬೋನಗಿರಿ, ಸ್ನೇಹಾ ನರೆಗಲ್, ಸನಾತನ ಸಂಸ್ಥೆಯ ಲತಾ ಬನ್ನಿ, ರುದ್ರಮ್ಮ ಬಳಿಗೇರ್, ಸ್ಮಿತಾ ಬನ್ನಿ, ಸುವರ್ಣಾ ಬಳಿಗೇರ, ತ್ರಿವೇಣಿ ಬಳಿಗೇರ, ರಾಜೇಶ್ವರಿ ಬಳಿಗೇರ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಸೇರಿದಂತೆ 150 ಕ್ಕೂ ಅಧಿಕ ಜನರು ಉಪಸ್ಥಿತರಿದ್ದು, ಶ್ರೀರಾಮನ ನಾಮಜಪ ಮಾಡಿದರು. ಇದೇ ಸಂದರ್ಭದಲ್ಲಿ ರಾಮರಾಜ್ಯ ಸ್ಥಾಪನೆಗೆ ಸತ್ಸಂಕಲ್ಪಗಳನ್ನು ಪಾಲಿಸುವುದಾಗಿ ಪ್ರತಿಜ್ಞೆ ಮಾಡಲಾಯಿತು.3
- ಜನಗಣತಿಯ ಪೂರ್ವಭಾವಿಯಾಗಿ ಮನೆಗಣತಿ ಕಾರ್ಯಕ್ಕೆ ನಗರದಲ್ಲಿ ಇಂದು ಚಾಲನೆ ನೀಡಲಾಯಿತು. ನಗರದ ಬಾವುಟಗುಡ್ಡೆಯಲ್ಲಿರುವ ಸ್ಪೀಕರ್ ಯು ಟಿ ಖಾದರ್ ಅವರ ನಿವಾಸದಲ್ಲಿ ಮಂಗಳೂರು ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಮತ್ತು ಗಣತಿದಾರರು ಆಗಮಿಸಿ ಮಾಹಿತಿ ಪಡೆದರು. ಮನೆ ಮಾಹಿತಿಯನ್ನು ಸಂಪೂರ್ಣವಾಗಿ ಆನ್ ಲೈನ್ ನಲ್ಲಿ ದಾಖಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸ್ಪೀಕರ್ ಅವರು, ಜನಗಣತಿಯು ದೇಶದ ಅತಿ ದೊಡ್ಡ ಕಾರ್ಯಕ್ರಮವಾಗಿದ್ದು, ದೇಶದ ಪ್ರತಿಯೊಂದು ಮನೆ ಮತ್ತು ನಾಗರಿಕರ ಮಾಹಿತಿ ಒಳಗೊಳ್ಳಲಿದೆ. ದೇಶದ ಅಭಿವೃದ್ಧಿಗೆ ಈ ಮಾಹಿತಿ ಅತ್ಯಗತ್ಯವಾಗಿದೆ ಎಂದರು. ನಾಗರಿಕರು ಸ್ವಯಂ ಆಗಿ ಆನ್ ಲೈನ್ ನಲ್ಲಿ ತಮ್ಮ ಮನೆಯ ಮಾಹಿತಿ ದಾಖಲಿಸಬಹುದು ಅಥವಾ ಗಣತಿದಾರರು ಮನೆಗೆ ಬಂದಾಗ ಮಾಹಿತಿ ನೀಡಿ ಸಹಕರಿಸಬೇಕು ಎಂದು ಅವರು ತಿಳಿಸಿದರು.1