ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಳ್ನಾವರ (ಧಾರವಾಡ) :ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಮಹಿಳೆ ಯಾವ ರಂಗದಲ್ಲಿಯೂ ಹಿಂದೆ ಇಲ್ಲ. ಮಹಿಳಾ ಸಾಧಕೀಯರನ್ನು ಎಲ್ಲ ರಂಗದಲ್ಲಿಯೂ ನೋಡುತಿದ್ದೇವೆ ಎಂದು ಸಹ ಶಿಕ್ಷಕಿ ರಾಜಶ್ರೀ ಕೋರಿ ಹೇಳಿದರು. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ನಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಅವರು ಮಾತನಾಡಿ ಮಹಿಳೆ ತನಗಿರುವ ಹಕ್ಕು ಮತ್ತು ಕಾನೂನಿನ ಅರಿವನ್ನು ಪಡೆದಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ ಎಂದು ಹೇಳಿದರು. ವಿಶೇಷ ಆಹ್ವಾನಿತರಾದ ಪುರಸಭೆ ಹಸಿ ಮತ್ತು ಒಣ ತ್ಯಾಜ್ಯ ವಿಲೇವಾರಿ ವಾಹನದ ಚಾಲಕರಾದ ಶ್ರೀಮತಿ ವಿದ್ಯಾ ತಳವಾರ್ ಮತ್ತು ಸುನಿತಾ ಮಾದರ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶ್ರೀಮತಿ ಸುನಿತಾ ಮಾದರ್ ಮಾತನಾಡಿ ವಿದ್ಯಾರ್ಥಿನಿಯರು ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಶಿಕ್ಷಣದ ಮೂಲಕ ಸ್ವತಂತ್ರವಾಗಿ ಮುಂದುವರಿಯಬೇಕು. ಸ್ತ್ರೀ ಎಂದರೆ ಒಂದು ಶಕ್ತಿ ಎಂದು ತೋರಿಸುವ ಛಲ ನಿಮ್ಮದಾಗಬೇಕು ಎಂದು ಹೇಳಿದರು. ಪ್ರಾಂಶುಪಾಲರಾದ ಡಾ. ಉಮಾ ಪೂಜಾರ ಮಾತನಾಡಿದರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಸುರೇಶ್ ದೊಡಮನಿ ಅತಿಥಿಗಳನ್ನು ಸ್ವಾಗತಿಸಿದರು. ಡಾ.ಸುರೇಶ್ ಮಾದರ ಅತಿಥಿಗಳನ್ನು ಪರಿಚಯಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ದೇವೇಂದ್ರ ತಳವಾರ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು. ಮಹಿಳಾ ವೇದಿಕೆಯಿಂದ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಿ ಕಾರ್ಯಕ್ರಮವನ್ನು ಭರಮ ಪ್ಪ ಪೂಜಾರ ನಡೆಸಿದರು. ಆರಂಭದಲ್ಲಿ ಪರಶುರಾಮ ಮಿಸಾಳೆ ಪ್ರಾರ್ಥಿಸಿದರು. ಶ್ರೀ ಅನಿಲ ಖಾತೆದಾರ ನಿರೂಪಿಸಿದರು. ರಾಘವೇಂದ್ರ ತಳವಾರ್ ವಂದಿಸಿದರು. ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

- ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದ ಶಿಗ್ಗಾಂವಿ ಪ್ಲಾಟ್‌ನಲ್ಲಿ ಯುವತಿಯೊಬ್ಬಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಯುವಕನಿಗೆ ಮಹಿಳೆಯೊಬ್ಬರು ಸಾರ್ವಜನಿಕವಾಗಿ ಚಪ್ಪಲಿಯಿಂದ ಹೊಡೆದು ಬುದ್ಧಿ ಕಲಿಸಿದ ಘಟನೆ ಶನಿವಾರದಂದು ನಡೆದಿದೆ. ಸ್ಥಳೀಯ ಸಲೂನ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ, ಅದೇ ಬಡಾವಣೆಯ ಯುವತಿಗೆ ಸತತವಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಯುವತಿಯ ಪೋಷಕರು ಮತ್ತು ಓರ್ವ ಮಹಿಳೆ, ಆತನನ್ನು ರಸ್ತೆಗೆ ಎಳೆದು ತಂದು ಧರ್ಮದೇಟು ನೀಡಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ವಿದ್ಯಾನಗರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.1
- ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಚಿಗರಿ ಬಸ್ ಪ್ರಯಾಣಿಕರೇ ಎಚ್ಚರ... ಎಚ್ಚರ ಏಕೆಂದರೆ ನಿಮ್ಮ ಪ್ರಯಾಣದ ಅವಸರದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ನಿಮಗೆ ಅಪಾಯ ಎದುರಾಗಬಹುದು. ಹೌದು... ಹುಬ್ಬಳ್ಳಿ - ಧಾರವಾಡ ಅವಳಿ ನಗರದ ಪ್ರಯಾಣಿಕರ ಹೆಚ್ಚಿನ ಅನುಕೂಲಕ್ಕಾಗಿ ಮಾಡಿದ ಬಿ.ಆರ್.ಟಿ.ಎಸ್ ಚಿಗರಿ ಬಸ್ ಸಂಚಾರ ಸ್ವಲ್ಪಮಟ್ಟಿಗೆ ಅನುಕೂಲವಾಗಿದೆ. ಆದರೇ ಬಸ್ ಹತ್ತಿ ಇಳಿಯುವುದೇ ದೊಡ್ಡ ಸಮಸ್ಯೆಯಾಗಿದೆ. ಇದರೊಂದಿಗೆ ನಿಲ್ದಾಣದಲ್ಲಿ ಬಸ್ ಹತ್ತಲು ನಿಲ್ಲುವುದು ಕೂಡಾ ಅಪಾಯ ಎನ್ನುವಂತಾಗಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ವಿವಿಧ ಕಡೆಗಳಲ್ಲಿರುವ ಬಿ.ಆರ್.ಟಿ.ಎಸ್ ಚಿಗರಿ ಬಸ್ ನಿಲ್ದಾಣದಲ್ಲಿ ಎಲ್ಲ ಗೇಟ್ ಸದಾ ತೆರೆದೆ ಇದೆ. ಇದರಿಂದ ಬಸ್ ಬಂದಿತು ಎಂದು ಹತ್ತಲು ನಿಂತವರು ಅವಸರ ಮಾಡಿದರೆ ಅಪಾಯ ಕಟ್ಟಿಟ್ಟದ್ದೆ ಎನ್ನುವಂತಾಗಿದೆ.1
- ಶೀರ್ಷಿಕೆ: ಹುಬ್ಬಳ್ಳಿಯ ಈ ದರ್ಗಾದಲ್ಲಿ ಜಾತಿ-ಮತದ ಭೇದವಿಲ್ಲ! 🌙 ಅಂಬೇಡ್ಕರ್ ನಗರದ ಅದ್ಧೂರಿ ಉರುಸ್ 2026 | City Next News ವಿವರಣೆ: ನಮಸ್ಕಾರ ವೀಕ್ಷಕರೇ, ಸಿಟಿ ನೆಕ್ಸ್ಟ್ ನ್ಯೂಸ್‌ಗೆ ಸ್ವಾಗತ. ಹಳೆ ಹುಬ್ಬಳ್ಳಿಯ ಅಂಬೇಡ್ಕರ್ ನಗರದ ಚನ್ನಪೇಟೆಯಲ್ಲಿ ಇಂದು ಸೌಹಾರ್ದತೆಯ ಹಬ್ಬದ ಸಂಭ್ರಮ. ಕೋಮು ಸೌಹಾರ್ದತೆಯ ಪವಿತ್ರ ತಾಣವಾಗಿರುವ ಇಲ್ಲಿ, ನೂರಾರು ಭಕ್ತರ ಆರಾಧ್ಯ ದೈವ ಹಜರತ್ ಸೈಯದ್ ಹಿದಾಯತುಲ್ಲಾಹ ಖಾದ್ರಿಯ ಅಲ ಮಶೂರ್ ಕಮಲಿ ಪೀರ ಷಾ ವಲಿ ಅವರ ಉರುಸ್ ಮಹೋತ್ಸವವು 2026ರ ಈ ಸುದಿನದಂದು ಅತ್ಯಂತ ಸಡಗರದಿಂದ ಜರುಗಿತು. ಈ ವೀಡಿಯೊದಲ್ಲಿ ನೋಡಿ: ✅ ಸಾಂಪ್ರದಾಯಿಕ ವಾದ್ಯಗೋಷ್ಠಿಗಳೊಂದಿಗೆ ನಡೆದ ಭವ್ಯ ಸಂದಲ್ ಮೆರವಣಿಗೆ. ✅ ಸಾವಿರಾರು ಭಕ್ತರಿಗೆ ಹಮ್ಮಿಕೊಳ್ಳಲಾಗಿದ್ದ ಪವಿತ್ರ ಲಂಗರ್ (ಅನ್ನದಾಸೋಹ). ✅ ರಾತ್ರಿ ನಡೆದ ಮಂತ್ರಮುಗ್ಧಗೊಳಿಸುವ ಕವ್ವಾಲಿ ಕಾರ್ಯಕ್ರಮದ ವಿಶೇಷ ದೃಶ್ಯಗಳು. ಜಾತಿ-ಮತದ ಭೇದವಿಲ್ಲದೆ ಎಲ್ಲರೂ ಒಂದಾಗಿ ಆಚರಿಸುತ್ತಿರುವ ಈ ಉರುಸ್, ಹುಬ್ಬಳ್ಳಿಯ ಭಾವೈಕ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಸೌಹಾರ್ದತೆಯ ಸುಂದರ ಕ್ಷಣಗಳನ್ನು ಈ ವರದಿಯಲ್ಲಿ ವೀಕ್ಷಿಸಿ. ನಮ್ಮನ್ನು ಫಾಲೋ ಮಾಡಿ: 🔹 YouTube: @CityNextNews 🔹 Facebook: City Next News Hubli 🔹 Instagram: @CityNextNews_Official #HubliUrus2026 #OldHubballi #CityNextNews #CommunalHarmony #DargahUrus #SandalProcession #HubliNews #KarnatakaFestivals #UnityInDiversity #SufiNight2
- Post by H M ಹರಕುಣಿ1
- ಹಕ್ಕುಪತ್ರ ಕೊಡಲು 25 ವರ್ಷ ಬೇಕಾ? ವ್ಯವಸ್ಥೆಯ ‘ಕಿವುಡು’ತನಕ್ಕೆ ಬಡಿದ ತಮಟೆ! ನಮಸ್ಕಾರ, ಇವತ್ತು ನಾವು ತೋರಿಸಲಿರೋದು ಕೇವಲ ಒಂದು ಪ್ರತಿಭಟನೆಯಲ್ಲ, ಇದು ಒಂದು ಜನಾಂಗದ ಸಬ್ರೂರಿ ಪರೀಕ್ಷೆ! ಅಧಿಕಾರಿಗಳ ಮೇಜಿನ ಮೇಲೆ ಫೈಲುಗಳು ಧೂಳು ಹಿಡಿಯುತ್ತಿದ್ದರೆ, ಇಲ್ಲಿ ಬಡವರ ಬದುಕು ಬೀದಿಗೆ ಬಂದಿದೆ. 25 ವರ್ಷ ಅಂದ್ರೆ ಒಂದು ತಲೆಮಾರೇ ಬದಲಾಗಿ ಹೋಗುತ್ತೆ. ಆದರೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳದ ಈ 61 ಕುಟುಂಬಗಳ ಹಣೆಬರಹ ಮಾತ್ರ ಬದಲಾಗಿಲ್ಲ. ಇವರ ತಾಳ್ಮೆ ಕಟ್ಟೆ ಹೊಡೆದಿದೆ, ಈಗ ಅಧಿಕಾರಿಗಳ ಕಿವಿಗೆ 'ತಮಟೆ' ಏಟು ಬೀಳುವ ಸಮಯ ಬಂದಿದೆ! ಅತಿಕ್ರಮಣಕಾರರಲ್ಲ, ಇವರು ಅನ್ಯಾಯಗಾರರಲ್ಲ. ಇವರು ತಮ್ಮ ಹಕ್ಕಿಗಾಗಿ 25 ವರ್ಷಗಳಿಂದ ಅಲೆದಾಡುತ್ತಿರುವ ಹೊಸ ಡಂಬಳದ ಮಾದಿಗ ಸಮಾಜದ ಮುಗ್ಧ ಜನ. ೧. ಮಂಜೂರಾದ ಜಾಗಕ್ಕೆ ಹಕ್ಕುಪತ್ರದ 'ಗ್ರಹಣ'! 2000ನೇ ಇಸವಿಯಲ್ಲೇ ಗ್ರಾಮ ಪಂಚಾಯಿತಿಯಿಂದ ಜಾಗ ಮಂಜೂರಾಗಿದೆ. ಸರ್ಕಾರಿ ದಾಖಲೆಗಳಲ್ಲಿ ಇವರಿಗೆ ಮನೆ ಕಟ್ಟಲು ಜಾಗವಿದೆ. ಆದರೆ ವಾಸ್ತವದಲ್ಲಿ ಕೈಗೆ ಹಕ್ಕುಪತ್ರವಿಲ್ಲ! ಅಧಿಕಾರಿಗಳೇ.. ನಿಮ್ಮ ಕಚೇರಿಯಿಂದ ಈ ಹಕ್ಕುಪತ್ರ ಜನರಿಗೆ ತಲುಪಲು ಕಾಲು ಶತಮಾನ ಬೇಕಾ? ನಿಮ್ಮ ಈ ಆಮೆಗತಿಯ ಕೆಲಸಕ್ಕೆ ಬಡವರ ಬದುಕು ಅತಂತ್ರವಾಗಿದೆ. ೨. ಅಂಬೇಡ್ಕರ್ ಕನಸಿನ ಭಾರತದಲ್ಲಿ ಇದೇನಾ ನ್ಯಾಯ? ಸಂವಿಧಾನ ನಮಗೆ ಹಕ್ಕುಗಳನ್ನು ಕೊಟ್ಟಿದೆ, ಆದರೆ ನೀವು ಆ ಹಕ್ಕುಗಳನ್ನು ಕಬೀಟಿನಲ್ಲಿ ಕೂಡಿಟ್ಟಿದ್ದೀರಿ. ಲಕ್ಷ್ಮಣ ತಗಡಿನಮನಿ ಅವರ ನೇತೃತ್ವದಲ್ಲಿ ನಡೆದ ಈ ಬೃಹತ್ ತಮಟೆ ಚಳುವಳಿ, ಅಧಿಕಾರಶಾಹಿಯ ಅಹಂಕಾರಕ್ಕೆ ಹಿಡಿದ ಕನ್ನಡಿ. "ನಾವು ದುಡಿಯುವುದನ್ನು ಬಿಟ್ಟು ನಿಮ್ಮ ಕಚೇರಿ ಮುಂದೆ ನಿಲ್ಲಬೇಕಾ?" ಎಂಬ ಇವರ ಪ್ರಶ್ನೆಗೆ ಉತ್ತರ ಕೊಡುವವರು ಯಾರು? "ಸರ್ಕಾರ ಸವಲತ್ತು ಕೊಟ್ಟರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮಗೆ ನ್ಯಾಯ ಸಿಗುತ್ತಿಲ್ಲ. ಇದು ನಮ್ಮ ಹಕ್ಕಿನ ಜಾಗಕ್ಕಾಗಿ ನಡೆಯುತ್ತಿರುವ ಕೊನೆಯ ಎಚ್ಚರಿಕೆ!"ಎಂದು ಲಕ್ಷ್ಮಣ ತಗಡಿನಮನಿ ಮಾತನಾಡಿದರು ಈಗ ಚೆಂಡು ಅಧಿಕಾರಿಗಳ ಅಂಗಳದಲ್ಲಿದೆ. ಬರುವ ಏಪ್ರಿಲ್ 28ರ ಒಳಗಾಗಿ ಈ ಕುಟುಂಬಗಳ ಮುಖದಲ್ಲಿ ನಗು ಕಾಣಿಸದಿದ್ದರೆ, ಈ ಆಕ್ರೋಶ ವಿಧಾನಸೌಧದವರೆಗೂ ತಲುಪುವುದರಲ್ಲಿ ಅನುಮಾನವಿಲ್ಲ. ಜಿಲ್ಲಾಧಿಕಾರಿಗಳೇ ಹಾಗೂ ತಹಶೀಲ್ದಾರರೇ.. ಇನ್ನು ಮುಂದೆ ಭರವಸೆಗಳ ಮಾತು ಬೇಡ, ಫಲಾನುಭವಿಗಳ ಕೈಗೆ ಹಕ್ಕುಪತ್ರ ಸಿಗಲಿ. ನೋಡಿದ್ರಲ್ಲ, ಬಡವರ ಹೊಟ್ಟೆಯ ಮೇಲೆ ಹೊಡೆಯುವ ಈ ಅಧಿಕಾರಿಗಳ ಮನಸ್ಥಿತಿ ಬದಲಾಗಬೇಕಿದೆ. ಒಂದು ಸಣ್ಣ ಕಾಗದಕ್ಕಾಗಿ 25 ವರ್ಷ ಕಾಯಿಸುವುದು ಆಡಳಿತ ಯಂತ್ರಕ್ಕೆ ದೊಡ್ಡ ಅವಮಾನ. ಈ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ಕ್ಷಣ ಕ್ಷಣದ ಮಾಹಿತಿಗಾಗಿ ನೋಡ್ತಾ ಇರಿ ಸಮಗ್ರ ನ್ಯೂಸ್ ಟೈಮ್ಸ್1
- "ಬಿಳಗಿ ತಾಲ್ಲೂಕಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆಯುತ್ತಿರುವ ವಿಚಾರ ಇದೀಗ ಅನುಮಾನಗಳಿಗೆ ಕಾರಣವಾಗಿದೆ. ಇಲ್ಲಿ ಸಬ್ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಭರತೇಶ್ ಪಾಟೀಲ್ ಅವರ ನೇಮಕಾತಿ ಬಗ್ಗೆ ಹಲವು ಪ್ರಶ್ನೆಗಳು ಕೇಳಿಬರುತ್ತಿವೆ." "ಸುಮಾರು ಆರು ತಿಂಗಳ ಹಿಂದೆ ಮುಂಡರಗಿ ಎಂಬ ಅಧಿಕಾರಿ ಬಿಳಗಿ ಸಬ್ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನಂತರ ಅವರ ವರ್ಗಾವಣೆ ನಡೆದಿದ್ದು, ಅವರ ಜಾಗಕ್ಕೆ ಭರತೇಶ್ ಪಾಟೀಲ್ ಅವರು ಬಂದಿದ್ದಾರೆ ಎನ್ನಲಾಗಿದೆ." "ಆದರೆ, ಈ ವರ್ಗಾವಣೆ ಅಧಿಕೃತವಾಗಿದೆಯೇ ಅಥವಾ ಕೇವಲ ಮೇಲ್ನೋಟಕ್ಕೆ ಮಾಡಲಾಗಿದೆಯೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಕಾರಣ ಏನೆಂದರೆ, ಕಚೇರಿಯಲ್ಲಿರುವ ಅಧಿಕಾರಿಗಳ ವಿವರವನ್ನು ಸೂಚಿಸುವ ಫಲಕದಲ್ಲಿ ಇಂದಿಗೂ ಭರತೇಶ್ ಪಾಟೀಲ್ ಅವರ ಹೆಸರು ಕಾಣಿಸುತ್ತಿಲ್ಲ." "ಒಬ್ಬ ಅಧಿಕಾರಿ ಕರ್ತವ್ಯಕ್ಕೆ ಹಾಜರಾಗುವ ದಿನಾಂಕದಿಂದ ಹಿಡಿದು ವರ್ಗಾವಣೆಗೊಂಡ ದಿನಾಂಕದವರೆಗೆ ಎಲ್ಲಾ ವಿವರಗಳನ್ನು ದಾಖಲಿಸುವ ಈ ಫಲಕದಲ್ಲಿ ಅವರ ಹೆಸರು ಇಲ್ಲದಿರುವುದು ಅನುಮಾನಾಸ್ಪದವಾಗಿದೆ." "ಆರು ತಿಂಗಳುಗಳಿಂದ ಕೆಲಸ ಮಾಡುತ್ತಿದ್ದರೆ, ಹೆಸರು ಫಲಕದಲ್ಲಿ ಇರಬೇಕು. ಇದು ಯಾಕೆ ಇಲ್ಲ ಅನ್ನೋದು ಪ್ರಶ್ನೆ." "ಭರತೇಶ್ ಪಾಟೀಲ್ ಅವರ ನೇಮಕಾತಿ ಮತ್ತು ವರ್ಗಾವಣೆ ಕುರಿತು ಸ್ಪಷ್ಟತೆ ಇಲ್ಲದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ." "ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.1
- Post by ನಾಗರಾಜ್ ಕುರಿ1
- ಯೂಥ್ ಕಾಂಗ್ರೆಸ್ ಮುಖಂಡ ಪೈರೋಜ ಪಠಾಣ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದು, ಇದೀಗ ಮತ್ತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು, “ಹತ್ಯಾಕಾಂಡದಲ್ಲಿ ನೇರವಾಗಿ ಭಾಗಿಯಾದ ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ಪ್ರಕರಣದ ಬೇರುಗಳನ್ನು ಹುಡುಕಲಾಗುತ್ತಿದೆ” ಎಂದು ತಿಳಿಸಿದರು. ಈ ಹತ್ಯೆಯ ಹಿಂದೆ ನೇರವಾಗಿ ಭಾಗಿಯಾದವರಲ್ಲದೆ, ಪರೋಕ್ಷವಾಗಿ ಬೆಂಬಲ ನೀಡಿದವರು, ಸಂಚು ರೂಪಿಸಿದವರು ಹಾಗೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಹಕರಿಸಿದ ಯಾರೊಬ್ಬರನ್ನೂ ಪೊಲೀಸರು ಸುಮ್ಮನೆ ಬಿಡುವುದಿಲ್ಲ ಎಂದು ಅವರು ಖಡಕ್ ಎಚ್ಚರಿಕೆ ನೀಡಿದರು.1