ಬಾಗಲಕೋಟ:ಹಿಂದೂ ಬಾಂಧವರೊಂದಿಗೆ ಇಪ್ತಾರ್: ಏಕತೆಯ ಅಪೂರ್ವ ಕ್ಷಣ “ನಾವು ಎಲ್ಲರೂ ಭಾರತೀಯರು” – ಇಪ್ತಾರ್ ಕಾರ್ಯಕ್ರಮದಲ್ಲಿ ಸಂದೇಶ ಬಾಗಲಕೋಟೆ:ಎಲ್ಲರನ್ನು ಪ್ರೀತಿಸೋಣ, ಗೌರವಿಸೋಣ ಹಾಗೂ ಸ್ನೇಹ–ಸೌಹಾರ್ದತೆಯಿಂದ ಬದುಕೋಣ ಎಂದು ನೀಲಪ್ಪ ಬಾದೋಡಗಿ ಹೇಳಿದರು. ನಗರದ ನವನಗರದಲ್ಲಿರುವ ಮಸೀದಿ ಹಸ್ತೈನ್‌ನಲ್ಲಿ ಹಿಂದೂ ಬಾಂಧವರಿಗಾಗಿ ಏರ್ಪಡಿಸಿದ್ದ ಇಪ್ತಾರ್ ಕೂಟದಲ್ಲಿ ಮಾತನಾಡಿದ ಅವರು, ಹಿಂದೂ–ಮುಸ್ಲಿಂ ಬೇರೆಬೇರೆ ಅಲ್ಲ, ಒಂದೇ ಮಾನವ ಧರ್ಮ ಎಂದು ಹೇಳಿದರು. ಈಗಿನ ಸಮಾಜದಲ್ಲಿ ನಾವು ಒಂದೇ ನಾಣ್ಯದ ಎರಡು ಮುಖಗಳಂತೆ ಇದ್ದೇವೆ. ಒಂದು ಮುಖ ಕಾಣದಿದ್ದರೆ ನಾಣ್ಯ ನಡೆಯುವುದಿಲ್ಲ ಎಂಬಂತೆ ಪರಸ್ಪರ ಸಹಕಾರ ಮತ್ತು ಸಹಬಾಳ್ವೆ ಅತ್ಯಂತ ಮುಖ್ಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜನಾಬ್ ಅವರು ಕುರಾನ್ ಪಠಣ ಮಾಡಿದ್ದು, ಅಜಾನ್ ಕುರಿತು ಮಾಹಿತಿಯನ್ನು ವಿವರಿಸಿದರು. ನಾವು ಮೂವತ್ತು–ನಲವತ್ತು ವರ್ಷಗಳಿಂದ ಒಟ್ಟಿಗೆ ಬೆಳೆದವರು. ಒಬ್ಬರನ್ನೊಬ್ಬರು ಕಂಡು ಬೆಳೆದ ಸ್ನೇಹಭಾವದ ಜನ ಎಂದು ಹೇಳಿದರು. ಸಮಾಜಕ್ಕೆ ಹೇಳಬೇಕಾದ ಮುಖ್ಯ ಸಂದೇಶವೆಂದರೆ “ನಮ್ಮ ಮಂದಿ – ನಿಮ್ಮ ಮಂದಿ” ಎಂದು ಬೇರ್ಪಡಿಸಿಕೊಳ್ಳುವುದಕ್ಕಿಂತ ನಾವು ಎಲ್ಲರೂ ಭಾರತೀಯರು ಎಂಬ ಭಾವನೆಯೊಂದಿಗೆ ಬದುಕಬೇಕು. ಸಣ್ಣ ಸಣ್ಣ ವಿಷಯಗಳು ದೊಡ್ಡದಾಗಿ ಸಮಾಜಕ್ಕೆ ಹೊಡೆತ ನೀಡುವ ಸಾಧ್ಯತೆ ಇರುವುದರಿಂದ ಯಾವುದೇ ಗದ್ದಲ, ಗಲಾಟೆ ಆಗದಂತೆ ಎಲ್ಲರೂ ಜಾಗರೂಕರಾಗಿರಬೇಕು ಎಂದು ಅವರು ಕರೆ ನೀಡಿದರು. ಕೊನೆಯಲ್ಲಿ ಎಲ್ಲರನ್ನು ಪ್ರೀತಿಸೋಣ, ವಿಶ್ವಾಸದಿಂದ ಗೌರವಿಸೋಣ ಹಾಗೂ ಸ್ನೇಹ–ಸೌಹಾರ್ದತೆಯಿಂದ ಬದುಕೋಣ ಎಂದು ಹೇಳಿದರು.

- "ಸಂಗೊಂದಿ ಡಾಕ್ಟರ್. ಬಿ .ಆರ್. ಅಂಬೇಡ್ಕರ್ ಅವರ 135 ನೇ ಜಯಂತಿಯ ಆಚರಣೆ" ಭೀಮ ಬಲ ನ್ಯೂಸ್ 24×7 ಕನ್ನಡ ಸುದ್ದಿ: ಬಾಗಲಕೋಟೆ : ಏಪ್ರಿಲ್ 14 ಬಾಗಲಕೋಟೆ ಜಿಲ್ಲೆಯ ಸಂಗೊಂದಿ ಗ್ರಾಮದಲ್ಲಿ ನಡೆದ ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತಿಯ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಜೈ ಭೀಮ ಯುವ ಘರ್ಜನೆಯ ಜಿಲ್ಲಾ ಅಧ್ಯಕ್ಷ ಮಂಜುನಾಥ.ಆರ್. ಮಾದರ ಅವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಜೈ ಭೀಮ ಯುವ ಘರ್ಜನೆಯ ಸಂಘಟನೆಯ ಎಲ್ಲ ಪದಾಧಿಕಾರಿಗಳು ಭಾಗಿಯಾಗಿದ್ದರು ಹಾಗೂ ಜಿಲ್ಲಾ ಅಧ್ಯಕ್ಷ ಮಂಜುನಾಥ್ .ಆರ್ .ಮಾದರ, ಮಲ್ಲು ಬಡಿಗೇರ, ಮಾತನಾಡಿ ಸಂಗೊಂದಿ ಗ್ರಾಮದಲ್ಲಿ ಬಿ .ಆರ್ .ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರಿಗೆ ಸಂಗೊಂದಿ ಗ್ರಾಮದ ಗುರು ಹಿರಿಯರು ಹಾಗೂ ಮಕ್ಕಳು ಪುಷ್ಪ ನಮನ ಸಲ್ಲಿಸಿದರು.ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ಜೀವನ ಮತ್ತು ಹೋರಾಟವನ್ನು ಸ್ಮರಿಸಿದರು. ಜಾತಿ ವ್ಯವಸ್ಥೆಯ ವಿರುದ್ಧ ಅವರು ನಡೆದ ಹೋರಾಟ ಮತ್ತು ಸಮಾನತೆಯ ಸಂದೇಶವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು "ಶಿಕ್ಷಣ ಸಂಘಟನೆ ಮತ್ತು ಹೋರಾಟ"ಎಂಬ ಅವರ ತತ್ವಗಳು ಇಂದಿಗೂ ಯುವಕರಿಗೆ ದಾರಿದೀಪವಾಗಿದೆ ಎಂದು ಹೇಳಿದರು. ದಲಿತ ಮುಖಂಡರು ಮಂಜುನಾಥ .ಆರ್.ಮಾದರ ,ಮಲ್ಲು ಬಡಿಗೇರ, ಆನಂದ ಮೂಗನೂರು, ಹರೀಶ್ ಮಾದರ, ದಾಳಪ್ಪ ಮಾದರ, ದುರ್ಗಪ್ಪ ಕೆರೂರು, ಮಹಾಂತೇಶ್ ಮಾದರ, ಚಂದ್ರು ಮಾದರ,ಯಮನಪ್ಪ ಮಾದರ, ಲಕ್ಷ್ಮಣ್ ಚಲವಾದಿ, ಬೆನ್ನಪ್ಪ ಮಾದರ, ಬೋಜು ಲಮಾಣಿ, ಹಾಗೂ ಯಲ್ಲಪ್ಪ ಮಾದರ ಹಾಗೂ ಗಣ್ಯರು ಪುಷ್ಪ ನಮನ ಸಲ್ಲಿಸಿದರು.1
- ಗುಳೇದಗುಡ್ಡ: ಪಟ್ಟಣದ ಬಸವ ಕೇಂದ್ರದ ವತಿಯಿಂದ ಏ.20ರಂದು ಸ್ಥಳೀಯ ಬಸಮ್ಮ ಮಂಗಳಗುಡ್ಡ ಕಲ್ಯಾಣ ಮಂಟಪದಲ್ಲಿ ಬಸವ ಜಯಂತಿ ಕಾರ್ಯಕ್ರಮ ಆಚರಿಸಲಾಗುವುದು ಎಂದು ವಿಶ್ರಾಂತ ಪ್ರಾಚಾರ್ಯ ಸಿದ್ದಲಿಂಗಪ್ಪ ಬರಗುಂಡಿ ಹೇಳಿದರು. ಅವರು ಮಂಗಳವಾರ ಸ್ಥಳೀಯ ಶ್ರೀಮತಿ ಬಸಮ್ಮ ಮಂಗಳಗುಡ್ಡ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಪಟ್ಟಣದ ಸಮಸ್ತರು ಸೇರಿಕೊಂಡು ಸಂಭ್ರಮದಿಂದ ಆಚರಿಸಲಾಗುವುದು. ಏ.20 ರಂದು ಬೆಳಗ್ಗೆ 7 ಗಂಟೆಗೆ ಸಾಮೂಹಿಕ ಶಿವಯೋಗ, ನಂತರ ಶರಣ ಧ್ವಜಾರೋಹಣ ಬಳಿಕ ಸಾಹಿತಿ ರವಿ ಕಂಗಳ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಅಕ್ಕಮಹಾದೇವಿ ಮಂದಿರದ ಶರಣಮ್ಮತಾಯಿ ಅವರು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ರಾಚಣ್ಣ ಕೆರೂರ, ಕಾಶಿನಾಥ ಶೆಟ್ಟರ, ದಾನಪ್ಪ ಬಂಡಿ, ಪುತ್ರಪ್ಪ ಬೀಳಗಿ, ಶ್ರೀಕಾಂತ ಗಡೇದ, ಬಸಲಿಂಗಯ್ಯ ಕಂಬಾಳಿಮಠ, ವಿಶ್ವನಾಥ ಅಂಗಡಿ, ರವಿ ಅಂಗಡಿ, ಸುರೇಶ ರಾಜನಾಳ, ಮುರುಗೇಶ ಶೇಖಾ, ಬಸವರಾಜ ಚವಡಿ, ಮಹಾದೇವಯ್ಯ ನೀಲಕಂಠಮಠ, ಚಂದ್ರಶೇಖರ ತೆಗ್ಗಿ, ಶರಣಪ್ಪ ಚಿಕ್ಕನರಗುಂದ, ಶಿವಾನಂದ ಸಿಂದಗಿ, ಸಂಗಮೇಶ ಹುಳಪಲ್ಲೇದ, ಸಂಗಣ್ಣ ಪಟ್ಟಶೆಟ್ಟಿ, ಹುಚ್ಚೇಶ ಸಿಂದಗಿ, ಬಸವರಾಜ ಬರಗುಂಡಿ, ರಾಚಪ್ಪ ಯಂಡಿಗೇರಿ, ಜಯಶ್ರೀ ಬರಗುಂಡಿ, ಚನ್ನಮ್ಮ ಜವಳಿ, ಸುರೇಖಾ ಗೆದ್ದಲಮರಿ, ದ್ರಾಕ್ಷಾಯಣಿ ತೆಗ್ಗಿ, ಶ್ರೀದೇವಿ ಶೇಖಾ, ವಿಶಾಲಾಕ್ಷಿ ಗಾಳಿ ಮತ್ತಿತರರು ಇದ್ದರು.1
- Post by @april14news1
- ಸದಾ ಒಂದಿಲ್ಲ ಒಂದು ಉತ್ತಮ ಸೇವೆಯನ್ನು ಮಾಡುತ್ತಾ ಬಂದಿರುವ ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಘಕAದಗಲ್ಲ ವತಿಯಿಂದ ಈ ಬಾರಿ ಬೀರು ಬೇಸಿಗೆ ಸಮಯದಲ್ಲಿ ಪಕ್ಷಿಗಳಿಗೆ ಕುಡಿಯಲು ಅರವಟಿಗೆಗಳನ್ನು ತಯಾರು ಮಾಡಿ ನಗರದ ಮರಗಳಲ್ಲಿ ಇಟ್ಟು, ಪಕ್ಷಿಗಳಿಗೆ ಆಹಾರ ಮತ್ತು ನೀರಿನ ದಾಹವನ್ನು ನೀಗಿಸುವ ಕಾರ್ಯವನ್ನು ಸಂಸ್ಥೆಯ ಅಧ್ಯಕ್ಷ ಸಂತೋಷ ಪೂಜಾರ ಮುಂದಾಗಿದ್ದಾರೆ. ತಮ್ಮ ಪದಾಧಿಕಾರಿಗಳೊಂದಿಗೆ ನಗರದ ವಿಜಯಮಹಾಂತೇಶ ಗದ್ದುಗೆ ಸೇರಿದಂತೆ ವಿವಿಧಡೆ ಗಿಡಗಳಲ್ಲಿ ಮಣ್ಣಿನ ಒಂದು ಕಡೆ ದವಸ ಧಾನ್ಯ, ಇನ್ನೋಂದೆಡೆ ನೀರನ್ನು ಇಟ್ಟು ಮಾನವೀಯತೆಯನ್ನು ಮೆರೆದಿದ್ದಾರೆ.1
- Post by Sharanugouda Patil1
- ವಿಜಯಪುರ: ನಾನು ಸಾಯುವ ಒಳಗೆ ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು ವಿಜಯಪುರದಲ್ಲಿ ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ ಅವರು, ರಾಜ್ಯಕ್ಕೆ ದಲಿತ ಮುಖ್ಯಮಂತ್ರಿ ಆಗಬೇಕು ಎಂದು ಮೊಟ್ಟಮೊದಲು ಹೇಳಿದ್ದು ನಾನೇ ಎಂದು ಹೇಳಿದ್ದಾರೆ. ನಾಲ್ಕು ವರ್ಷಗಳ ಹಿಂದೆ ತಾವು ಈ ಹೇಳಿಕೆ ನೀಡಿದ್ದಾಗ ಕಾಂಗ್ರೆಸ್ ನಲ್ಲಿದ್ದ ದಲಿತರು ಈಗ ಎಚ್ಚೆತ್ತುಕೊಂಡು ತಮ್ಮ ಹಕ್ಕನ್ನು ಕೇಳುತ್ತಿದ್ದಾರೆ. ಅಂದು ಕೇಳಿದ್ದರೆ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಗುತ್ತಿದ್ದರು, ಆಗ ಪಕ್ಷ ಬೇರೆಯಾದರೂ ತಮ್ಮ ಸಮಾಜದವರು ಮುಖ್ಯಮಂತ್ರಿಯಾಗಿದ್ದಕ್ಕೆ ತಮಗೆಲ್ಲರಿಗೂ ಖುಷಿಯಾಗುತ್ತಿತ್ತು ಎಂದು ಅವರು ತಿಳಿಸಿದರು.1
- 10 ನೇ ವರ್ಷದ ಸಂಭ್ರಮದಲ್ಲಿ ಆನ್ಲೈನ್ ಟಿವಿ ಗೆ ಟಿ. ಬಿ ಶೇಖರ್ ಅವರಿಂದ ಶುಭ ಹಾರೈಕೆಗಳು1
- Post by @april14news1