Shuru
Apke Nagar Ki App…
ಸತತ ಮೂರು ಗೆಲುವಿನ ಪ್ರತಿಫಲ; ಇದು ನಾನು ತೀರಿಸಬೇಕಾದ ಋಣ ಚಳ್ಳಕೆರೆ ಜನತೆಗೆ ಸಚಿವ ಟಿ. ರಘುಮೂರ್ತಿ ಭಾವುಕ ನಮನ: ಹಿರಿಯ ಶಾಸಕರ ಬಗ್ಗೆ ನಮ್ರತೆ ಮೆರೆದ ನಾಯಕ
Kiran Mj
ಸತತ ಮೂರು ಗೆಲುವಿನ ಪ್ರತಿಫಲ; ಇದು ನಾನು ತೀರಿಸಬೇಕಾದ ಋಣ ಚಳ್ಳಕೆರೆ ಜನತೆಗೆ ಸಚಿವ ಟಿ. ರಘುಮೂರ್ತಿ ಭಾವುಕ ನಮನ: ಹಿರಿಯ ಶಾಸಕರ ಬಗ್ಗೆ ನಮ್ರತೆ ಮೆರೆದ ನಾಯಕ
More news from ಕರ್ನಾಟಕ and nearby areas
- ಸಚಿವ ಸ್ಥಾನ ಕೈತಪ್ಪಿ ಮುನಿಸಿಕೊಂಡ ಶಾಸಕರ ಬಗ್ಗೆ ಟಿ ರಘೂಮೂರ್ತಿ ಸ್ಪಷ್ಟನೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಶಾಸಕರ ಅಸಮಾಧಾನ ಕುರಿತು ಟಿ ರಘೂಮೂರ್ತಿ ಪ್ರತಿಕ್ರಿಯೆ ನೀಡಿ ಮಾತನಾಡಿದ್ದಾರೆ. ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿ ಗ್ರಾಮದಲ್ಲಿ ಸಚಿವ ಟಿ ರಘೂಮೂರ್ತಿ ಮಾತನಾಡಿದ್ದು ರಾಜ್ಯದ 136 ಶಾಸಕರಲ್ಲಿ 34 ಜನರಿಗೆ ಅವಕಾಶ ಕೊಟ್ಟಿದ್ದಾರೆ. ಸಚಿವ ಸ್ಥಾನ ಕೈತಪ್ಪಿದಲ್ಲಿ ಅಸಮಾಧಾನ ಬರುವುದು ಸಹಜ ಹಾಗಾಗಿ ಅವರ ಮನವೊಲುಸುವ ಕೆಲಸವನ್ನ ವರಿಷ್ಠರು ಹಾಗೂ ರಾಜ್ಯದ ನಾಯಕರು ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡುತ್ತಾರೆ ಎಂದು ಟಿ ರಘೂಮೂರ್ತಿ ಪ್ರತಿಕ್ರಿಯೆ ನೀಡಿದ್ದಾರೆ1
- ‘ಫ್ರೀಡಂ ಹಬ್ಬ’: ವಿಧಾನಸೌಧದ ಅಂಗಳದಲ್ಲಿ ಇದೇ ಮೊದಲ ಬಾರಿಗೆ ಜನಸಾಮಾನ್ಯರ ಬೃಹತ್ ಸ್ವಾತಂತ್ರ್ಯೋತ್ಸವ ಸಂಭ್ರಮ ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯನ್ನು ಕೇವಲ ಸರ್ಕಾರಿ ಗಣ್ಯರ ಔಪಚಾರಿಕ ಸಭೆ ಹಾಗೂ ರಜಾದಿನಕ್ಕೆ ಸೀಮಿತಗೊಳಿಸದೆ, ಪ್ರತಿಯೊಬ್ಬ ನಾಗರಿಕನೂ ಭಾಗವಹಿಸುವ ಬೃಹತ್ ಜನೋತ್ಸವವನ್ನಾಗಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಉದ್ದೇಶದಿಂದ ನಗರದಲ್ಲಿ ಇದೇ ಮೊದಲ ಬಾರಿಗೆ ‘ಫ್ರೀಡಂ ಹಬ್ಬ’ (Freedom Habba) ಆಯೋಜನೆ ಮಾಡಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಅಧಿಕೃತವಾಗಿ ಇದನ್ನು ಘೋಷಿಸಿದ್ದಾರೆ. ಆಗಸ್ಟ್ 15ರಂದು ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ಬೆಳಿಗ್ಗೆ ಅಧಿಕೃತ ಧ್ವಜಾರೋಹಣ ಮುಗಿದ ನಂತರ, ಬೆಳಿಗ್ಗೆ 11ರಿಂದ ರಾತ್ರಿ 10 ಗಂಟೆಯವರೆಗೆ ವಿಧಾನಸೌಧದ ಮೆಟ್ಟಿಲುಗಳು ಹಾಗೂ ಸುತ್ತಮುತ್ತಲಿನ ರಸ್ತೆಗಳು ವರ್ಣರಂಜಿತ ಸಾಂಸ್ಕೃತಿಕ ಕಾರಿಡಾರ್ ಆಗಿ ಬದಲಾಗಲಿವೆ. **‘ಫ್ರೀಡಂ ಹಬ್ಬ’ದ ಪ್ರಮುಖ ಆಕರ್ಷಣೆಗಳು** ಇಂಡಿಯಾ ಪೆರೇಡ್: ದೇಶದ ವಿವಿಧ ರಾಜ್ಯಗಳ ಸಂಸ್ಕೃತಿ, ಕರ್ನಾಟಕದ ವೈವಿಧ್ಯತೆ ಹಾಗೂ ವಿವಿಧ ಭಾಷಿಕ ಸಮುದಾಯಗಳನ್ನು ಪ್ರತಿನಿಧಿಸುವ 40ಕ್ಕೂ ಹೆಚ್ಚು ತುಕಡಿಗಳಿಂದ ಅದ್ಧೂರಿ ಜಾನಪದ ಮೆರವಣಿಗೆ. * **ಮಕ್ಕಳಿಗಾಗಿ ವಿಧಾನಸೌಧದ ಬಾಗಿಲು ಮುಕ್ತ:** ಇತಿಹಾಸದಲ್ಲೇ ಮೊದಲ ಬಾರಿಗೆ ಮಕ್ಕಳಿಗೆ ವಿಧಾನಸೌಧದ ಒಳಗಡೆ ಹೋಗಿ ಪ್ರಜಾಪ್ರಭುತ್ವದ ಆಡಳಿತ ಕೇಂದ್ರವನ್ನು ಹತ್ತಿರದಿಂದ ನೋಡುವ ಮಾರ್ಗದರ್ಶಿತ ಪ್ರವಾಸ (Guided Tour). ಜೊತೆಗೆ ‘ಮಕ್ಕಳ ಮೇಳ’ ಹಾಗೂ ‘ಚಿಲ್ಡ್ರನ್ಸ್ ಫ್ರೀಡಂ ವಿಲೇಜ್’ ಆಯೋಜನೆ. * **ಲಿವಿಂಗ್ ಮ್ಯೂಸಿಯಂ & ಕರ್ನಾಟಕ ಫ್ರೀಡಂ ಪಾಥ್:** ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹಂತಗಳು ಹಾಗೂ ಈ ಹೋರಾಟಕ್ಕೆ ಕರ್ನಾಟಕದ ವಿವಿಧ ಜಿಲ್ಲೆಗಳು ನೀಡಿದ ಅನನ್ಯ ಕೊಡುಗೆಗಳನ್ನು ಬಿಂಬಿಸುವ ಪ್ರದರ್ಶನ ಮಂಟಪಗಳು. * **ಸಂವಿಧಾನ ಚೌಕ:** ಸಂವಿಧಾನ ರಚನಾ ಸಭೆಯ ಅಪರೂಪದ ದಾಖಲೆಗಳ ವೀಕ್ಷಣೆ ಹಾಗೂ ಸಾರ್ವಜನಿಕರಿಂದ ಸಂವಿಧಾನದ ಪ್ರಸ್ತಾವನೆಯ ಸಮೂಹ ವಾಚನ. * **ಸೋಲ್ ಸಂತೆ & 200 ಅಡಿಗಳ ಕಲಾ ಗೋಡೆ:** 120ಕ್ಕೂ ಹೆಚ್ಚು ಸ್ವದೇಶಿ ಉತ್ಪನ್ನ, ಕರಕುಶಲ ಹಾಗೂ ಖಾದ್ಯ ಮಳಿಗೆಗಳು. ನಾಗರಿಕರು ತಮ್ಮ ಕಲ್ಪನೆಯ ಸ್ವಾತಂತ್ರ್ಯವನ್ನು ಚಿತ್ರಿ ಸಲು 200 ಅಡಿಗಳ ಬೃಹತ್ ಸಾರ್ವಜನಿಕ 'ಫ್ರೀಡಂ ವಾಲ್'. * **ಬೃಹತ್ ಸಂಗೀತ ಸಂಜೆ ಹಾಗೂ ಬಾಣಬಿರುಸು:** ಹೆಸರಾಂತ ಕಲಾವಿದರಿಂದ ಕನ್ನಡ ಹಾಗೂ ವಿವಿಧ ಭಾರತೀಯ ಭಾಷೆಗಳ ಸಂಗೀತ ಕಛೇರಿ, ಕೊನೆಯಲ್ಲಿ ವಿಧಾನಸೌಧದ ಮೇಲ್ಭಾಗದಲ್ಲಿ ರೋಮಾಂಚಕ ಪಟಾಕಿ ಪ್ರದರ್ಶನ (Fireworks). ಸಾರ್ವಜನಿಕರು ಕೇವಲ ವೀಕ್ಷಕರಾಗದೆ ಕಲಾವಿದರಾಗಿ, ಸ್ವಯಂಸೇವಕರಾಗಿ ಮತ್ತು ಭಾಗವಹಿಸುವವರಾಗಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ವಿವಿಧ ಚಟುವಟಿಕೆಗಳಲ್ಲಿ ನೋಂದಾಯಿಸಿಕೊಳ್ಳಲು ವಿಶೇಷ ವೆಬ್‌ಸೈಟ್ ಹಾಗೂ ಸಹಾಯವಾಣಿಯನ್ನು ಮುಂದಿನ 48 ಗಂಟೆಗಳಲ್ಲಿ ಸರ್ಕಾರ ಪ್ರಕಟಿಸಲಿದೆ.1
- ಟಿಬಿ ಜಯಚಂದ್ರ ಅವರಿಗೆ ಸಚಿವ ಸ್ಥಾನ ಸಿಗದ ಅಸಮಾಧಾನ ಸ್ಫೋಟ? ನಾಮಿನಿ ಸದಸ್ಯ ಸ್ಥಾನಕ್ಕೆ ರಾಧಾಕೃಷ್ಣ ಗುಡ್‌ಬೈ!1
- ಚಿಕ್ಕನಾಯಕನಹಳ್ಳಿಯ 7 ದಿನಗಳ ಹೇಮಾವತಿ ನೀರಾವರಿ ಹೋರಾಟ ತಾತ್ಕಾಲಿಕ ಅಂತ್ಯ – ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೋರಾಟಗಾರರ ನಿರ್ಧಾರ ಚಿಕ್ಕನಾಯಕನಹಳ್ಳಿಯ 7 ದಿನಗಳ ಹೇಮಾವತಿ ನೀರಾವರಿ ಹೋರಾಟ ತಾತ್ಕಾಲಿಕ ಅಂತ್ಯ – ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೋರಾಟಗಾರರ ನಿರ್ಧಾರ --------------------------- ಚಿಕ್ಕನಾಯಕನಹಳ್ಳಿ: ತಾಲೂಕಿಗೆ ಹೇಮಾವತಿ ನೀರು ಹರಿಸುವ ಕಾಮಗಾರಿ ವಿಳಂಬ ಖಂಡಿಸಿ ಹಾಗೂ ದಬ್ಬೇಘಟ್ಟದವರೆಗಿನ ಕಾಮಗಾರಿಯನ್ನು ತಕ್ಷಣವೇ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಕಳೆದ 7 ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ನೀರಾವರಿ ಹೋರಾಟ ಸಮಿತಿ ಇಂದು ತಾತ್ಕಾಲಿಕವಾಗಿ ಹಿಂಪಡೆದಿದೆ. ಕಳೆದ ಜುಲೈ 30 ರಿಂದ ಪ್ರಾರಂಭಗೊಂಡಿದ್ದ ಈ ಹೋರಾಟವು ಇಂದು (ಏಳನೇ ದಿನ) ಸುಖಾಂತ್ಯ ಕಂಡಿದೆ. ಗ್ಯಾರೇಹಳ್ಳಿಯಿಂದ ದಬ್ಬೇಘಟ್ಟದವರೆಗಿನ ನೀರಾವರಿ ಯೋಜನೆಯ ಕಾಮಗಾರಿಯು ಸಂಪೂರ್ಣವಾಗಿ (ಝೀರೋದಿಂದ ದಬ್ಬೇಘಟ್ಟದವರೆಗೆ) ಮುಕ್ತಾಯಗೊಂಡಿರುವುದನ್ನು ಖಾತರಿಪಡಿಸಿಕೊಂಡ ನಂತರ, ಹೋರಾಟಗಾರರು ತಮ್ಮ ಸತ್ಯಾಗ್ರಹವನ್ನು ಅಂತ್ಯಗೊಳಿಸುವುದಾಗಿ ಘೋಷಿಸಿದರು. ಪ್ರತಿಭಟನೆ ಆರಂಭವಾಗುವ ಮೊದಲು ಕಾಮಗಾರಿ ಅತ್ಯಂತ ಮಂದಗತಿಯಲ್ಲಿ ಸಾಗುತ್ತಿತ್ತು. ದಿನಕ್ಕೆ ಕೇವಲ 6 ರಿಂದ 7 ಗಂಟೆಗಳ ಕಾಲ ಕೆಲಸ ನಡೆಯುತ್ತಿದ್ದು, ಒಂದೇ ಒಂದು ಬ್ಲಾಸ್ಟಿಂಗ್ ಹಾಗೂ ಡಿಗ್ಗಿಂಗ್ ಮೆಷಿನ್ ಬಳಸಲಾಗುತ್ತಿತ್ತು. ಆದರೆ, 30 ನೇ ತಾರೀಖಿನಿಂದ ನೀರಾವರಿ ಹೋರಾಟ ಸಮಿತಿಯು ಧರಣಿ ಕುಳಿತ ತಕ್ಷಣವೇ ಆಡಳಿತ ಯಂತ್ರ ಎಚ್ಚೆತ್ತುಕೊಂಡಿತು. ಅಧಿಕಾರಿಗಳು ಯಂತ್ರೋಪಕರಣಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿ, ಸತತ 24 ಗಂಟೆಗಳ ಕಾಲ ಹಗಲು-ರಾತ್ರಿ ಕೆಲಸ ಮಾಡಿಸುವ ಮೂಲಕ ಗ್ಯಾರೇಹಳ್ಳಿಯಿಂದ ದಬ್ಬೇಘಟ್ಟದವರೆಗಿನ ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಿದ್ದಾರೆ. "ನಾವು ಅಜೆಂಡಾ ಇಟ್ಟುಕೊಂಡು ಬಂದಿದ್ದೆವು; ಕಾಮಗಾರಿ ಮುಗಿಯುವವರೆಗೆ ಜಾಗದಿಂದ ಕದಲುವುದಿಲ್ಲ ಎಂದಿದ್ದೆವು. ಅದರಂತೆ ಇವತ್ತು ಕೆಲಸ ಮುಗಿದಿರುವುದರಿಂದ ಪ್ರತಿಭಟನೆ ಮುಕ್ತಾಯಗೊಳಿಸುತ್ತಿದ್ದೇವೆ" ಎಂದು ಹೋರಾಟಗಾರರು ತಿಳಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ತಹಶೀಲ್ದಾರ್, ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್‌ಗಳು ಹಾಗೂ ಜನಪ್ರತಿನಿಧಿಗಳು ಹೋರಾಟಗಾರರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಮುಖ್ಯ ನಾಲಾ ಕಾಲುವೆಯಲ್ಲಿ ಗ್ಯಾರೇಹಳ್ಳಿಯವರೆಗೆ ಇರುವ ಹೂಳನ್ನು (ಸ್ಲಶ್) ಮುಂದಿನ 5 ರಿಂದ 6 ದಿನಗಳ ಒಳಗಾಗಿ ಸಂಪೂರ್ಣವಾಗಿ ತೆರವುಗೊಳಿಸಿ ನೀರು ಹರಿಯಲು ಅನುವು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು. ಪ್ರತಿಯೊಂದು ಹಂತದ ಕಾಮಗಾರಿಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಪ್ರತಿ ಸೋಮವಾರ ಸಂಬಂಧಪಟ್ಟ ಮೂರೂ ಯೋಜನೆಗಳ ಅಧಿಕಾರಿಗಳು ಸಭೆ ನಡೆಸಿ, ವರ್ಕ್ ಶೆಡ್ಯೂಲ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಸುಧಾರಣೆಗಳ ಹಿನ್ನೆಲೆಯಲ್ಲಿ ಹೋರಾಟಗಾರರು ತಾತ್ಕಾಲಿಕವಾಗಿ ತಮ್ಮ ಧರಣಿಯನ್ನು ವಾಪಸ್ ಪಡೆದುಕೊಂಡಿದ್ದಾರೆ. "ಅಧಿಕಾರಿಗಳು ಹಾಗೂ ಶಾಸಕರ ಭರವಸೆಯನ್ನು ನಂಬಿ ತಾತ್ಕಾಲಿಕವಾಗಿ ಹೋರಾಟ ಹಿಂಪಡೆದಿದ್ದೇವೆ. ಒಂದು ವೇಳೆ ಕೊಟ್ಟ ಮಾತಿನಂತೆ ಕೆಲಸ ಮುಗಿಸದೆ ನಮಗೆ ಯಾಮಾರಿಸಿದರೆ, ಮುಂದಿನ ದಿನಗಳಲ್ಲಿ ಕುರಿ, ಮೇಕೆಗಳೊಂದಿಗೆ ಬೀದಿಗೆ ಇಳಿದು ಎರಡರಷ್ಟು ಉಗ್ರವಾದ ಹೋರಾಟ ರೂಪಿಸಲಾಗುವುದು" ಎಂದು ಎಚ್ಚರಿಸಿದ್ದಾರೆ. ವಿಜಯದ ಸಂಕೇತವಾಗಿ ಹೋರಾಟಗಾರರು ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರಿಗೆ ಜೈಕಾರ ಕೂಗಿದರು. ಈ 7 ದಿನಗಳ ಅಹೋರಾತ್ರಿ ಹೋರಾಟಕ್ಕೆ ಸಾಥ್ ನೀಡಿದ ವಿವಿಧ ಸಂಘಟನೆಗಳು, ಪೋಲಿಸ್ ಇಲಾಖೆ ಹಾಗೂ ಮಾಧ್ಯಮ ಮಿತ್ರರಿಗೆ ಧನ್ಯವಾದಗಳನ್ನು ಅರ್ಪಿಸಿದರು.1
- ಬರ ವೀಕ್ಷಣೆ ನಡೆಸಿದ ಸಚಿವ ಕೆ.ಹೆಚ್ ಮುನಿಯಪ್ಪ; ಬೆಳೆ ವಿಮೆ ಮಾಡಿಸಲು ರೈತರಲ್ಲಿ ಮನವಿ ಬೆಂಗಳೂರು ಗ್ರಾಮಾಂತರ ಜಿಲ್ಲೆ: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕುಂದಾಣ ಹೋಬಳಿಯ ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರಸಂದ್ರ ಗ್ರಾಮದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ರಾಗಿ, ಜೋಳ ಬೆಳೆ ಸೇರಿದಂತೆ ವಿವಿಧ ಬೆಳೆಗಳನ್ನು ವೀಕ್ಷಿಸಿ ರೈತರಿಂದ, ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮಾತನಾಡಿ ಜೂನ್, ಜುಲೈ ನಲ್ಲಿ ಕಡಿಮೆ ಮಳೆ ಆಗಿದೆ. ಜೂನ್ 1 ರಿಂದ ಆಗಸ್ಟ್ 4 ವರೆಗೆ 174.2 ಮಳೆ ಆಗಬೇಕಿತ್ತು, 116.3% ಮಳೆ ಮಾತ್ರ ಆಗಿದ್ದು ಶೇ.33% ರಷ್ಟು ಮಳೆ ಕೊರತೆ ಉಂಟಾಗಿದೆ. ಆಗಸ್ಟ್ 15 ರೊಳಗೆ ಮಳೆ ಬರದಿದ್ದಲ್ಲಿ ಬಿತ್ತನೆ ಆಗಿರುವ ಬೆಳೆಗಳಿಗೆ ತೊಂದರೆ ಆಗುತ್ತದೆ. ಸಾಧ್ಯವಾದಷ್ಟು ಶಾರ್ಟ್ ಟರ್ಮ್ ರಾಗಿ ಬೆಳೆ ಆಯ್ಕೆ ಮಾಡಿಕೊಳ್ಳಿ ಬೇಗ ಬೆಳೆ ಬರುತ್ತದೆ ಎಂದು ರೈತರಿಗೆ ಸಲಹೆ ನೀಡಿದರು. *ತಪ್ಪದೇ ಬೆಳೆ ವಿಮೆ ಮಾಡಿಸಿ* ಮಳೆ ಅಭಾವದಿಂದ ಬೆಳೆ ನಷ್ಟ ಆಗುವ ಸಂಭವವಿದೆ. ಹಾಗಾಗಿ ತಪ್ಪದೇ ಎಲ್ಲಾ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿ ಇದರಿಂದ ನಷ್ಟ ಪರಿಹಾರ ಸರಿದೂಗಲಿದೆ ಎಂದರು. ಈಗಾಗಲೇ ಹಲವಾರು ರೈತರು ರಾಗಿ, ಜೋಳ ಬಿತ್ತನೆ ಮಾಡಿದ್ದಾರೆ. ಮಳೆ ಕೊರತೆಯಿಂದ ಸರಿಯಾಗಿ ಹುಟ್ಟಿಲ್ಲ. ಆಗಸ್ಟ್ 30 ವರೆಗೆ ಕಾದು ನೋಡಬೇಕು ಮಳೆ ಬರದಿದಲ್ಲಿ ಸರ್ಕಾರ ಪರಿಹಾರದ ಬಗ್ಗೆ ಚಿಂತನೆ ಮಾಡಲಿದೆ ಎಂದು ಸಚಿವರು ಹೇಳಿದರು. ಜಾನುವಾರುಗಳಿಗೆ ಮೇವಿಗೆ ಸಂಬಂಧಿಸಿದಂತೆ ರೈತರಿಗೆ ಮೇವು ಬಿತ್ತನೆ ಬೀಜ ಪೂರೈಕೆ ಮಾಡಿ. ಮೇವು ಕಿಟ್ ಗಳನ್ನು, ಸೈಲೇಜ್ ಆಹಾರದ ಬಗ್ಗೆ ರೈತರಿಗೆ ಅರಿವು ಮೂಡಿಸಿ, ಪ್ರಸ್ತುತ ಸನ್ನಿವೇಶದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಿ ಎಂದು ಪಶುಸಂಗೋಪನೆ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಆಲೂರುದುದ್ದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನ್ನಿಮಂಗಲ ಕೆರೆಯಲ್ಲಿ ವಾಸ್ತವ ಸ್ಥಿತಿ ಪರಿಶೀಲನೆ ನಡೆಸಿದರು. ಕೆರೆಗಳ ಹೂಳೆತ್ತುವ ಕೆಲಸ ಮೊದಲು ಆಗಬೇಕಿದೆ. ನಂತರ ನೀರು ತುಂಬಿಸುವ ಕೆಲಸ ಮಾಡಬೇಕು. ಕೆರೆಗಳಲ್ಲಿರುವ ಬಿದಿರು ತೆಗೆಯಬೇಕು. ಅರಣ್ಯ ಇಲಾಖೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕೆರೆಗೆ ಹುರಿದು ಬರುವ ನೀರಿನ ಕಾಲುವೆಗಳನ್ನು ಸ್ವಚ್ಚಗೊಳಿಸಿ ನೀರು ಸರಾಗವಾಗಿ ಹರಿಯಲು ಅನುಕೂಲವಾದರೆ ಮಳೆಗಾಲದಲ್ಲಿ ನೀರು ತುಂಬಲಿದೆ. ಎಲ್ಲಾ ಕೆರೆಗಳ ಸುತ್ತಲೂ ಬೌಂಡರಿ ಫಿಕ್ಸ್ ಮಾಡಿ ಸುತ್ತಲು ಟ್ರೆಂಚ್ ಅಗೆದು, ಹಣ್ಣಿನ ಗಿಡಗಳನ್ನು ಹಾಕಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ, ಜಿ.ಪಂ ಉಪಕಾರ್ಯದರ್ಶಿ ಶಿವಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಕಲಾವತಿ, ತೋಟಗಾರಿಕೆ, ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.3
- ಚಿಕ್ಕನಾಯಕನಹಳ್ಳಿಯಲ್ಲಿ ರೈತರ ಹೋರಾಟಕ್ಕೆ ಮೊದಲ ಗೆಲುವು; ಮಾತು ತಪ್ಪಿದರೆ ಮತ್ತೆ ಉಗ್ರ ಹೋರಾಟ: ಹೇಮಾವತಿ ಹೋರಾಟಗಾರರ ಎಚ್ಚರಿಕೆ1
- ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಚಿಲುಗೋಡು ಗ್ರಾಮದಲ್ಲಿ ಕಲ್ಲೇಶ್ವರ ದೇವಸ್ಥಾನ ದಲ್ಲಿ ನಿಧಿ ಕಳ್ಳತನ ಆಗಿದೆ ದಿನಾಂಕ 4.8.2026 ರಂದು ರಾತ್ರಿ ಈ ಘಟನೆ ನಡೆದಿದೆ ಈ ಕೂಡಲೇ ತಂಬ್ರಳ್ಳಿಗೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ತಿಳಿಸಿದ್ದೇವೆ ಪೊಲೀಸ್ ಅವರು ತನಿಖೆ ನಡೆಸುತ್ತಾ ಇದ್ದಾರೆ1