ಚಿಕ್ಕನಾಯಕನಹಳ್ಳಿಯ 7 ದಿನಗಳ ಹೇಮಾವತಿ ನೀರಾವರಿ ಹೋರಾಟ ತಾತ್ಕಾಲಿಕ ಅಂತ್ಯ – ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೋರಾಟಗಾರರ ನಿರ್ಧಾರ ಚಿಕ್ಕನಾಯಕನಹಳ್ಳಿಯ 7 ದಿನಗಳ ಹೇಮಾವತಿ ನೀರಾವರಿ ಹೋರಾಟ ತಾತ್ಕಾಲಿಕ ಅಂತ್ಯ – ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೋರಾಟಗಾರರ ನಿರ್ಧಾರ --------------------------- ಚಿಕ್ಕನಾಯಕನಹಳ್ಳಿ: ತಾಲೂಕಿಗೆ ಹೇಮಾವತಿ ನೀರು ಹರಿಸುವ ಕಾಮಗಾರಿ ವಿಳಂಬ ಖಂಡಿಸಿ ಹಾಗೂ ದಬ್ಬೇಘಟ್ಟದವರೆಗಿನ ಕಾಮಗಾರಿಯನ್ನು ತಕ್ಷಣವೇ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಕಳೆದ 7 ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ನೀರಾವರಿ ಹೋರಾಟ ಸಮಿತಿ ಇಂದು ತಾತ್ಕಾಲಿಕವಾಗಿ ಹಿಂಪಡೆದಿದೆ. ಕಳೆದ ಜುಲೈ 30 ರಿಂದ ಪ್ರಾರಂಭಗೊಂಡಿದ್ದ ಈ ಹೋರಾಟವು ಇಂದು (ಏಳನೇ ದಿನ) ಸುಖಾಂತ್ಯ ಕಂಡಿದೆ. ಗ್ಯಾರೇಹಳ್ಳಿಯಿಂದ ದಬ್ಬೇಘಟ್ಟದವರೆಗಿನ ನೀರಾವರಿ ಯೋಜನೆಯ ಕಾಮಗಾರಿಯು ಸಂಪೂರ್ಣವಾಗಿ (ಝೀರೋದಿಂದ ದಬ್ಬೇಘಟ್ಟದವರೆಗೆ) ಮುಕ್ತಾಯಗೊಂಡಿರುವುದನ್ನು ಖಾತರಿಪಡಿಸಿಕೊಂಡ ನಂತರ, ಹೋರಾಟಗಾರರು ತಮ್ಮ ಸತ್ಯಾಗ್ರಹವನ್ನು ಅಂತ್ಯಗೊಳಿಸುವುದಾಗಿ ಘೋಷಿಸಿದರು. ಪ್ರತಿಭಟನೆ ಆರಂಭವಾಗುವ ಮೊದಲು ಕಾಮಗಾರಿ ಅತ್ಯಂತ ಮಂದಗತಿಯಲ್ಲಿ ಸಾಗುತ್ತಿತ್ತು. ದಿನಕ್ಕೆ ಕೇವಲ 6 ರಿಂದ 7 ಗಂಟೆಗಳ ಕಾಲ ಕೆಲಸ ನಡೆಯುತ್ತಿದ್ದು, ಒಂದೇ ಒಂದು ಬ್ಲಾಸ್ಟಿಂಗ್ ಹಾಗೂ ಡಿಗ್ಗಿಂಗ್ ಮೆಷಿನ್ ಬಳಸಲಾಗುತ್ತಿತ್ತು. ಆದರೆ, 30 ನೇ ತಾರೀಖಿನಿಂದ ನೀರಾವರಿ ಹೋರಾಟ ಸಮಿತಿಯು ಧರಣಿ ಕುಳಿತ ತಕ್ಷಣವೇ ಆಡಳಿತ ಯಂತ್ರ ಎಚ್ಚೆತ್ತುಕೊಂಡಿತು. ಅಧಿಕಾರಿಗಳು ಯಂತ್ರೋಪಕರಣಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿ, ಸತತ 24 ಗಂಟೆಗಳ ಕಾಲ ಹಗಲು-ರಾತ್ರಿ ಕೆಲಸ ಮಾಡಿಸುವ ಮೂಲಕ ಗ್ಯಾರೇಹಳ್ಳಿಯಿಂದ ದಬ್ಬೇಘಟ್ಟದವರೆಗಿನ ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಿದ್ದಾರೆ. "ನಾವು ಅಜೆಂಡಾ ಇಟ್ಟುಕೊಂಡು ಬಂದಿದ್ದೆವು; ಕಾಮಗಾರಿ ಮುಗಿಯುವವರೆಗೆ ಜಾಗದಿಂದ ಕದಲುವುದಿಲ್ಲ ಎಂದಿದ್ದೆವು. ಅದರಂತೆ ಇವತ್ತು ಕೆಲಸ ಮುಗಿದಿರುವುದರಿಂದ ಪ್ರತಿಭಟನೆ ಮುಕ್ತಾಯಗೊಳಿಸುತ್ತಿದ್ದೇವೆ" ಎಂದು ಹೋರಾಟಗಾರರು ತಿಳಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ತಹಶೀಲ್ದಾರ್, ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್‌ಗಳು ಹಾಗೂ ಜನಪ್ರತಿನಿಧಿಗಳು ಹೋರಾಟಗಾರರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಮುಖ್ಯ ನಾಲಾ ಕಾಲುವೆಯಲ್ಲಿ ಗ್ಯಾರೇಹಳ್ಳಿಯವರೆಗೆ ಇರುವ ಹೂಳನ್ನು (ಸ್ಲಶ್) ಮುಂದಿನ 5 ರಿಂದ 6 ದಿನಗಳ ಒಳಗಾಗಿ ಸಂಪೂರ್ಣವಾಗಿ ತೆರವುಗೊಳಿಸಿ ನೀರು ಹರಿಯಲು ಅನುವು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು. ಪ್ರತಿಯೊಂದು ಹಂತದ ಕಾಮಗಾರಿಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಪ್ರತಿ ಸೋಮವಾರ ಸಂಬಂಧಪಟ್ಟ ಮೂರೂ ಯೋಜನೆಗಳ ಅಧಿಕಾರಿಗಳು ಸಭೆ ನಡೆಸಿ, ವರ್ಕ್ ಶೆಡ್ಯೂಲ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಸುಧಾರಣೆಗಳ ಹಿನ್ನೆಲೆಯಲ್ಲಿ ಹೋರಾಟಗಾರರು ತಾತ್ಕಾಲಿಕವಾಗಿ ತಮ್ಮ ಧರಣಿಯನ್ನು ವಾಪಸ್ ಪಡೆದುಕೊಂಡಿದ್ದಾರೆ. "ಅಧಿಕಾರಿಗಳು ಹಾಗೂ ಶಾಸಕರ ಭರವಸೆಯನ್ನು ನಂಬಿ ತಾತ್ಕಾಲಿಕವಾಗಿ ಹೋರಾಟ ಹಿಂಪಡೆದಿದ್ದೇವೆ. ಒಂದು ವೇಳೆ ಕೊಟ್ಟ ಮಾತಿನಂತೆ ಕೆಲಸ ಮುಗಿಸದೆ ನಮಗೆ ಯಾಮಾರಿಸಿದರೆ, ಮುಂದಿನ ದಿನಗಳಲ್ಲಿ ಕುರಿ, ಮೇಕೆಗಳೊಂದಿಗೆ ಬೀದಿಗೆ ಇಳಿದು ಎರಡರಷ್ಟು ಉಗ್ರವಾದ ಹೋರಾಟ ರೂಪಿಸಲಾಗುವುದು" ಎಂದು ಎಚ್ಚರಿಸಿದ್ದಾರೆ. ವಿಜಯದ ಸಂಕೇತವಾಗಿ ಹೋರಾಟಗಾರರು ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರಿಗೆ ಜೈಕಾರ ಕೂಗಿದರು. ಈ 7 ದಿನಗಳ ಅಹೋರಾತ್ರಿ ಹೋರಾಟಕ್ಕೆ ಸಾಥ್ ನೀಡಿದ ವಿವಿಧ ಸಂಘಟನೆಗಳು, ಪೋಲಿಸ್ ಇಲಾಖೆ ಹಾಗೂ ಮಾಧ್ಯಮ ಮಿತ್ರರಿಗೆ ಧನ್ಯವಾದಗಳನ್ನು ಅರ್ಪಿಸಿದರು.

- ಟಿಬಿ ಜಯಚಂದ್ರ ಅವರಿಗೆ ಸಚಿವ ಸ್ಥಾನ ಸಿಗದ ಅಸಮಾಧಾನ ಸ್ಫೋಟ? ನಾಮಿನಿ ಸದಸ್ಯ ಸ್ಥಾನಕ್ಕೆ ರಾಧಾಕೃಷ್ಣ ಗುಡ್‌ಬೈ!1
- ಚಿಕ್ಕನಾಯಕನಹಳ್ಳಿಯ 7 ದಿನಗಳ ಹೇಮಾವತಿ ನೀರಾವರಿ ಹೋರಾಟ ತಾತ್ಕಾಲಿಕ ಅಂತ್ಯ – ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೋರಾಟಗಾರರ ನಿರ್ಧಾರ ಚಿಕ್ಕನಾಯಕನಹಳ್ಳಿಯ 7 ದಿನಗಳ ಹೇಮಾವತಿ ನೀರಾವರಿ ಹೋರಾಟ ತಾತ್ಕಾಲಿಕ ಅಂತ್ಯ – ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೋರಾಟಗಾರರ ನಿರ್ಧಾರ --------------------------- ಚಿಕ್ಕನಾಯಕನಹಳ್ಳಿ: ತಾಲೂಕಿಗೆ ಹೇಮಾವತಿ ನೀರು ಹರಿಸುವ ಕಾಮಗಾರಿ ವಿಳಂಬ ಖಂಡಿಸಿ ಹಾಗೂ ದಬ್ಬೇಘಟ್ಟದವರೆಗಿನ ಕಾಮಗಾರಿಯನ್ನು ತಕ್ಷಣವೇ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಕಳೆದ 7 ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ನೀರಾವರಿ ಹೋರಾಟ ಸಮಿತಿ ಇಂದು ತಾತ್ಕಾಲಿಕವಾಗಿ ಹಿಂಪಡೆದಿದೆ. ಕಳೆದ ಜುಲೈ 30 ರಿಂದ ಪ್ರಾರಂಭಗೊಂಡಿದ್ದ ಈ ಹೋರಾಟವು ಇಂದು (ಏಳನೇ ದಿನ) ಸುಖಾಂತ್ಯ ಕಂಡಿದೆ. ಗ್ಯಾರೇಹಳ್ಳಿಯಿಂದ ದಬ್ಬೇಘಟ್ಟದವರೆಗಿನ ನೀರಾವರಿ ಯೋಜನೆಯ ಕಾಮಗಾರಿಯು ಸಂಪೂರ್ಣವಾಗಿ (ಝೀರೋದಿಂದ ದಬ್ಬೇಘಟ್ಟದವರೆಗೆ) ಮುಕ್ತಾಯಗೊಂಡಿರುವುದನ್ನು ಖಾತರಿಪಡಿಸಿಕೊಂಡ ನಂತರ, ಹೋರಾಟಗಾರರು ತಮ್ಮ ಸತ್ಯಾಗ್ರಹವನ್ನು ಅಂತ್ಯಗೊಳಿಸುವುದಾಗಿ ಘೋಷಿಸಿದರು. ಪ್ರತಿಭಟನೆ ಆರಂಭವಾಗುವ ಮೊದಲು ಕಾಮಗಾರಿ ಅತ್ಯಂತ ಮಂದಗತಿಯಲ್ಲಿ ಸಾಗುತ್ತಿತ್ತು. ದಿನಕ್ಕೆ ಕೇವಲ 6 ರಿಂದ 7 ಗಂಟೆಗಳ ಕಾಲ ಕೆಲಸ ನಡೆಯುತ್ತಿದ್ದು, ಒಂದೇ ಒಂದು ಬ್ಲಾಸ್ಟಿಂಗ್ ಹಾಗೂ ಡಿಗ್ಗಿಂಗ್ ಮೆಷಿನ್ ಬಳಸಲಾಗುತ್ತಿತ್ತು. ಆದರೆ, 30 ನೇ ತಾರೀಖಿನಿಂದ ನೀರಾವರಿ ಹೋರಾಟ ಸಮಿತಿಯು ಧರಣಿ ಕುಳಿತ ತಕ್ಷಣವೇ ಆಡಳಿತ ಯಂತ್ರ ಎಚ್ಚೆತ್ತುಕೊಂಡಿತು. ಅಧಿಕಾರಿಗಳು ಯಂತ್ರೋಪಕರಣಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿ, ಸತತ 24 ಗಂಟೆಗಳ ಕಾಲ ಹಗಲು-ರಾತ್ರಿ ಕೆಲಸ ಮಾಡಿಸುವ ಮೂಲಕ ಗ್ಯಾರೇಹಳ್ಳಿಯಿಂದ ದಬ್ಬೇಘಟ್ಟದವರೆಗಿನ ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಿದ್ದಾರೆ. "ನಾವು ಅಜೆಂಡಾ ಇಟ್ಟುಕೊಂಡು ಬಂದಿದ್ದೆವು; ಕಾಮಗಾರಿ ಮುಗಿಯುವವರೆಗೆ ಜಾಗದಿಂದ ಕದಲುವುದಿಲ್ಲ ಎಂದಿದ್ದೆವು. ಅದರಂತೆ ಇವತ್ತು ಕೆಲಸ ಮುಗಿದಿರುವುದರಿಂದ ಪ್ರತಿಭಟನೆ ಮುಕ್ತಾಯಗೊಳಿಸುತ್ತಿದ್ದೇವೆ" ಎಂದು ಹೋರಾಟಗಾರರು ತಿಳಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ತಹಶೀಲ್ದಾರ್, ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್‌ಗಳು ಹಾಗೂ ಜನಪ್ರತಿನಿಧಿಗಳು ಹೋರಾಟಗಾರರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಮುಖ್ಯ ನಾಲಾ ಕಾಲುವೆಯಲ್ಲಿ ಗ್ಯಾರೇಹಳ್ಳಿಯವರೆಗೆ ಇರುವ ಹೂಳನ್ನು (ಸ್ಲಶ್) ಮುಂದಿನ 5 ರಿಂದ 6 ದಿನಗಳ ಒಳಗಾಗಿ ಸಂಪೂರ್ಣವಾಗಿ ತೆರವುಗೊಳಿಸಿ ನೀರು ಹರಿಯಲು ಅನುವು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು. ಪ್ರತಿಯೊಂದು ಹಂತದ ಕಾಮಗಾರಿಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಪ್ರತಿ ಸೋಮವಾರ ಸಂಬಂಧಪಟ್ಟ ಮೂರೂ ಯೋಜನೆಗಳ ಅಧಿಕಾರಿಗಳು ಸಭೆ ನಡೆಸಿ, ವರ್ಕ್ ಶೆಡ್ಯೂಲ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಸುಧಾರಣೆಗಳ ಹಿನ್ನೆಲೆಯಲ್ಲಿ ಹೋರಾಟಗಾರರು ತಾತ್ಕಾಲಿಕವಾಗಿ ತಮ್ಮ ಧರಣಿಯನ್ನು ವಾಪಸ್ ಪಡೆದುಕೊಂಡಿದ್ದಾರೆ. "ಅಧಿಕಾರಿಗಳು ಹಾಗೂ ಶಾಸಕರ ಭರವಸೆಯನ್ನು ನಂಬಿ ತಾತ್ಕಾಲಿಕವಾಗಿ ಹೋರಾಟ ಹಿಂಪಡೆದಿದ್ದೇವೆ. ಒಂದು ವೇಳೆ ಕೊಟ್ಟ ಮಾತಿನಂತೆ ಕೆಲಸ ಮುಗಿಸದೆ ನಮಗೆ ಯಾಮಾರಿಸಿದರೆ, ಮುಂದಿನ ದಿನಗಳಲ್ಲಿ ಕುರಿ, ಮೇಕೆಗಳೊಂದಿಗೆ ಬೀದಿಗೆ ಇಳಿದು ಎರಡರಷ್ಟು ಉಗ್ರವಾದ ಹೋರಾಟ ರೂಪಿಸಲಾಗುವುದು" ಎಂದು ಎಚ್ಚರಿಸಿದ್ದಾರೆ. ವಿಜಯದ ಸಂಕೇತವಾಗಿ ಹೋರಾಟಗಾರರು ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರಿಗೆ ಜೈಕಾರ ಕೂಗಿದರು. ಈ 7 ದಿನಗಳ ಅಹೋರಾತ್ರಿ ಹೋರಾಟಕ್ಕೆ ಸಾಥ್ ನೀಡಿದ ವಿವಿಧ ಸಂಘಟನೆಗಳು, ಪೋಲಿಸ್ ಇಲಾಖೆ ಹಾಗೂ ಮಾಧ್ಯಮ ಮಿತ್ರರಿಗೆ ಧನ್ಯವಾದಗಳನ್ನು ಅರ್ಪಿಸಿದರು.1
- ತಾಲ್ಲೂಕಿನ ಹೇಮಾವತಿ ನಾಲೆಗಳಲ್ಲಿ ನೀರು ಹರಿಸಲು ಒತ್ತಾಯಿಸಿ ಎನ್.ಡಿ.ಎ ಮೈತ್ರಿಕೂಟದ ಬೃಹತ್ ಪ್ರತಿಭಟನೆ ತುರುವೇಕೆರೆ, ಆಗಸ್ಟ್ 4: ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು ಈ ವರ್ಷ ತೀವ್ರ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕ್ಷೇತ್ರದಲ್ಲಿ ಕೇವಲ ಶೇಕಡಾ 30ರಷ್ಟು ಮಾತ್ರ ಮಳೆಯಾಗಿದ್ದು, ರೈತರು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಬೋರ್‌ವೆಲ್‌ಗಳು ಒಣಗಿ ಹೋಗಿದ್ದು, ಅಡಿಕೆ ಹಾಗೂ ತೆಂಗಿನ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಜಾನುವಾರುಗಳಿಗೆ ಮೇವು ಬೆಳೆಯಲು ಸಹ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಹೇಮಾವತಿ ನಾಲೆಯಿಂದ ನೀರನ್ನು ಹರಿಸಿ ಕ್ಷೇತ್ರದ ಕೆರೆಗಳನ್ನು ತುಂಬಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಜೆ.ಡಿ.ಎಸ್.–ಬಿಜೆಪಿ ಎನ್.ಡಿ.ಎ ಮೈತ್ರಿಕೂಟವು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪನವರು ಕ್ಷೇತ್ರದಲ್ಲಿ ಕೇವಲ ಶೇಕಡಾ 30ರಷ್ಟು ಮಾತ್ರ ಮಳೆಯಾಗಿದ್ದು, ಯಾವುದೇ ರೈತರು ಬಿತ್ತನೆ ಮಾಡಿಲ್ಲ ಎಂದು ತಿಳಿಸಿದರು. ತುರುವೇಕೆರೆಯು ಬರಗಾಲ ಪೀಡಿತ ಪ್ರದೇಶವಾಗಿದೆ. ಕ್ಷೇತ್ರದ ಅನೇಕ ರೈತರ ಬೋರ್‌ವೆಲ್‌ಗಳು ಒಣಗಿ ಹೋಗಿದ್ದು, ಅಡಿಕೆ ಹಾಗೂ ತೆಂಗಿನ ಬೆಳೆಗಳು ಒಣಗುತ್ತಿವೆ. ಜಾನುವಾರುಗಳಿಗೆ ಮೇವು ಬೆಳೆಯಲು ಸಹ ನೀರಿಲ್ಲದಂತಾಗಿದೆ. ರೈತರು ತೀವ್ರ ಸಂಕಷ್ಟಕ್ಕೆ ಒಳಪಟ್ಟಿದ್ದಾರೆ ಎಂದರು.ಟಿ.ಬಿ.ಸಿ. ಚಾನೆಲ್‌ಗೆ ಲಿಂಕ್ ಕೆನಾಲ್ ಕಾಮಗಾರಿಯನ್ನು ಅನುಷ್ಠಾನಕ್ಕೆ ಹೊರಟಿರುವುದು ಖಂಡನೀಯ ಎಂದು ಹೇಳಿದ ಅವರು, ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಕೈಗೊಳ್ಳಬಾರದು ಎಂದು ಒತ್ತಾಯಿಸಿದರು. ಸರ್ಕಾರ ತಕ್ಷಣ ಬರಗಾಲ ಎಂದು ಘೋಷಣೆ ಮಾಡಬೇಕು. ತಾಲೂಕಿನ ರೈತರು ಅಡಿಕೆ ಹಾಗೂ ತೆಂಗನ್ನು ನೆಚ್ಚಿಕೊಂಡಿದ್ದಾರೆ. ಕ್ಷೇತ್ರದಲ್ಲಿರುವ ಕೆರೆಗಳನ್ನು ಕೂಡಲೇ ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಲಿಂಕ್ ಕೆನಾಲ್ ಯೋಜನೆಯನ್ನು ಹಿಂದೆ ಯಡಿಯೂರಪ್ಪನವರು ಕ್ಯಾಬಿನೆಟ್‌ನಲ್ಲಿ ರದ್ದು ಮಾಡಿದ್ದರು. ಕುಣಿಗಲ್‌ಗೆ ನಾಲೆಯನ್ನು ಅಗಲೀಕರಣ ಮಾಡಿ ನೀರು ಹರಿಸುವ ಬದಲು, ಅದನ್ನು ಬಿಟ್ಟು ರಾಮನಗರಕ್ಕೆ ನೀರನ್ನು ಹರಿಸಲು ಲಿಂಕ್ ಯೋಜನೆಯನ್ನು ಕೈಗೆತ್ತಿಕೊಂಡಿದ್ದೀರಿ. ಈ ಯೋಜನೆಯನ್ನು ನಾವು ಮಾಡಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿಕಟಪೂರ್ವ ಶಾಸಕ ಮಸಾಲ ಜೈರಾಮ್ ಮಾತನಾಡಿ, ಕ್ಷೇತ್ರದ ಕೆರೆ, ಬಾವಿ, ಕಟ್ಟೆಗಳೆಲ್ಲವೂ ಬರಿದಾಗಿದ್ದು, ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೂ ಸಹ ತೊಂದರೆಯಾಗಿದೆ ಎಂದರು. ಈ ಸರ್ಕಾರ ರೈತರಿಗೆ ಆತ್ಮಹತ್ಯೆಯ ಭಾಗ್ಯವನ್ನು ನೀಡಿದೆ ಎಂದು ಟೀಕಿಸಿದರು. ನಮ್ಮ ಸರ್ಕಾರದಲ್ಲಿ ಗೋಶಾಲೆಗಳನ್ನು ತೆರೆದಿದ್ದೆವು, ಅದನ್ನು ಈ ಸರ್ಕಾರ ಮುಚ್ಚಿದೆ. ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಬರಗಾಲ ಬಂದಿರುವುದರಿಂದ ಕೂಡಲೇ ಗೋಶಾಲೆಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.ಹೇಮಾವತಿ ಡ್ಯಾಂನಲ್ಲಿ ಈಗಾಗಲೇ 25 ಟಿ.ಎಂ.ಸಿ. ನೀರು ಕ್ರೂಢೀಕರಣವಾಗಿದೆ. ಕೊನೆಪಕ್ಷ ಕ್ಷೇತ್ರದ ಕೆರೆಗಳಿಗೆ ನೀರು ಬಿಡಲು ಸರ್ಕಾರ ಕ್ರಮ ಕೈಗೊಳ್ಳದೇ ಇರುವುದರಿಂದ, ದಿನಾಂಕ 10-8-2026ರೇ ಸೋಮವಾರ ಬೆಳಿಗ್ಗೆ 11.30ಕ್ಕೆ ಹೇಮಾವತಿ ಸೂಪರಿಂಟೆಂಡಿಂಗ್ ಇಂಜಿನಿಯರ್ ಕಛೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಅಹೋರಾತ್ರಿ ಧರಣಿಯನ್ನು ಎನ್.ಡಿ.ಎ ಮೈತ್ರಿಕೂಟದಿಂದ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಪಾದಯಾತ್ರೆಯನ್ನು ಮಾಡಿಯಾದರೂ ನೀರನ್ನು ಬಿಡಿಸಿಕೊಳ್ಳುತ್ತೇವೆ. ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ರೈತರು ಪಕ್ಷಾತೀತವಾಗಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು. ಮಾಜಿ ಶಾಸಕ ಎಂ.ಡಿ. ಲಕ್ಷ್ಮಿನಾರಾಯಣ್ ಮಾತನಾಡಿ, ಬರಗಾಲದಂತಹ ಕಷ್ಟದ ಸಂದರ್ಭದಲ್ಲಿ ಈ ಕಾಂಗ್ರೆಸ್ ಸರ್ಕಾರ ರೈತರ ತೋಟಗಳಿಗೆ ಸಮರ್ಪಕವಾಗಿ ತ್ರಿಫೇಸ್ ವಿದ್ಯುತ್ ಅನ್ನು ನೀಡುತ್ತಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ. ಹೇಮಾವತಿ ಡ್ಯಾಂನಿಂದ ನಮ್ಮ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸಬೇಕೆಂದು ಒತ್ತಾಯಿಸುತ್ತೇವೆ. ಆದ್ದರಿಂದ ಈ ಕ್ಷೇತ್ರದ ಸಮಸ್ತ ರೈತ ಬಾಂಧವರು ಈ ಬೃಹತ್ ಪ್ರತಿಭಟನೆಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ನಿಮ್ಮ ಪರವಾದ ಹೋರಾಟಕ್ಕೆ ಶಕ್ತಿ ತುಂಬಿಸಬೇಕಾಗಿ ಮನವಿ ಮಾಡಿದರು. ತಾಲೂಕಿನ ಎನ್.ಡಿ.ಎ ಮೈತ್ರಿಕೂಟದ ಸಮಸ್ತ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಜಿ.ವಿ. ಪ್ರಕಾಶ್, ಜೆ.ಡಿ.ಎಸ್ ತಾಲೂಕು ಅಧ್ಯಕ್ಷ ದೊಡ್ಡೇಗೌಡ, ಹೆಡಗಿಹಳ್ಳಿ ವಿಶ್ವನಾಥ್, ವೆಂಕಟಾಪುರ ಯೋಗೀಶ್, ಎನ್.ಆರ್ ಸುರೇಶ್, ಗುಂಡ ಸುರೇಶ್, ಚಿದಾನಂದ, ಸಂತೋಷ್ ಡಿ, ಕೊಂಡಜ್ಜಿ ವಿಶ್ವನಾಥ್, ಹರಿಕಾರನಹಳ್ಳಿ ಪ್ರಸಾದ್, ಸಿದ್ದಪ್ಪಾಜಿ, ಮುತ್ತಣ್ಣ, ಮುನಿಯೂರು ರಂಗಸ್ವಾಮಿ, ಗೊಟ್ಟಿಕೆರೆ ಕಾಂತರಾಜು ಸೇರಿದಂತೆ ಎನ್.ಡಿ.ಎ ಮೈತ್ರಿಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.4
- ಕುಣಿಗಲ್ :ತಾಲೂಕು ಜೋಡಿ ಹೊಸಹಳ್ಳಿ ಗ್ರಾಮದ ಲಕ್ಷ್ಮೀ ದೇವರ ದೇವಾಲಯಕ್ಕೆ ಭೇಟಿ ನೀಡಿದ ನೂತನ ಸಚಿವರಾದ ಮಾಗಡಿ ವಿಧಾನ ಸಭಾಕ್ಷೇತ್ರ ಹೆಚ್ ಸಿ ಬಾಲಕೃಷ್ಣ ಮತ್ತು ಕುಣಿಗಲ್ ವಿಧಾನ ಸಭಾ ಕ್ಷೇತ್ರ ಹೆಚ್. ಡಿ. ರಂಗನಾಥ್ ಕುಣಿಗಲ್ ತಾಲೂಕು ಹುತ್ರಿದುರ್ಗ ಹೋಬಳಿ ಜೋಡಿ ಹೊಸಹಳ್ಳಿ ಗ್ರಾಮದ ಲಕ್ಷ್ಮೀ ದೇವರ ದೇವಾಲಯಕ್ಕೆ ಭೇಟಿ ನೀಡಿ ಅವರು ಲಿಂಕ್ ಕೆನಾಲ್ ಕಾಮಗಾರಿ ಮಾಡೇ ಮಾಡ್ತೀವಿ ಎಂದು ಹೇಳಿದರು1
- ಲಿಂಕ್ ಕೆನಾಲ್ ಕಾಮಗಾರಿ ಬಿಡುವ ಪ್ರಶ್ನೆಯೇ ಇಲ್ಲ ಮಾಡಿಯೇ ತೀರುತ್ತೇವೆ ನೂತನ ಸಚಿವ ಹೆಚ್ ಸಿ ಬಾಲಕೃಷ್ಣ ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿಯ ಜೋಡಿ ಹೊಸಳ್ಳಿ ಗ್ರಾಮದ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿದ ನೂತನ ಸಚಿವರಾದ ಹೆಚ್ ಸಿ ಬಾಲಕೃಷ್ಣ , ಶಾಸಕ ಡಾಕ್ಟರ್ ಎಚ್ ಡಿ ರಂಗನಾಥ್, ಯಾವುದೆ ಖಾತೆ ಕೊಟ್ಟರು ನಿಭಾಯಿಸುವೆ ಎಂದು ನೂತನ ಸಚಿವ ಹೆಚ್.ಸಿ ಬಾಲಕೃಷ್ಣ ತಿಳಿಸಿದರು. ಲಿಂಕ್ ಕೆನಾಲ್ ಯೋಜನೆಯ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.1
- ಚಿಕ್ಕನಾಯಕನಹಳ್ಳಿಯಲ್ಲಿ ರೈತರ ಹೋರಾಟಕ್ಕೆ ಮೊದಲ ಗೆಲುವು; ಮಾತು ತಪ್ಪಿದರೆ ಮತ್ತೆ ಉಗ್ರ ಹೋರಾಟ: ಹೇಮಾವತಿ ಹೋರಾಟಗಾರರ ಎಚ್ಚರಿಕೆ1
- ಸರ್ಕಾರಿ ಬಸ್ ನಲ್ಲಿ ಹೃದಯ ಘಾತ ರಸ್ತೆಯಲ್ಲೇ ಆಸ್ಪತ್ರೆಗೆ ದಾಖಲು ತುಮಕೂರು ನಿಂದ ಶಿರಾ ಭಾಗಕ್ಕೆ ತೆರಳುತ್ತಿದ್ದಂತಹ ಸರ್ಕಾರಿ ಬಸ್ಸಿನಲ್ಲಿ ಪ್ಯಾಸೆಂಜರ್ ಒಬ್ಬರಿಗೆ ಹೃದಯಘಾತ ಕಾಣಿಸಿಕೊಂಡ ಕೂಡಲೇ ಬಸ್ ನಿಲ್ಲಿಸಿ ಸ್ಥಳದಲ್ಲೇ ಇದ್ದ ಪ್ರಯಾಣಕರು ಕೊಡಲೇ ಖಾಸಗಿ ಆಸ್ಪತ್ರೆಗೆ ಸೇರಿಸುವ ಮೂಲಕ ಜೀವ ಉಳಿಸುವ ಕೆಲಸ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.1