ತಾಲ್ಲೂಕಿನ ಹೇಮಾವತಿ ನಾಲೆಗಳಲ್ಲಿ ನೀರು ಹರಿಸಲು ಒತ್ತಾಯಿಸಿ ಎನ್.ಡಿ.ಎ ಮೈತ್ರಿಕೂಟದ ಬೃಹತ್ ಪ್ರತಿಭಟನೆ ತುರುವೇಕೆರೆ, ಆಗಸ್ಟ್ 4: ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು ಈ ವರ್ಷ ತೀವ್ರ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕ್ಷೇತ್ರದಲ್ಲಿ ಕೇವಲ ಶೇಕಡಾ 30ರಷ್ಟು ಮಾತ್ರ ಮಳೆಯಾಗಿದ್ದು, ರೈತರು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಬೋರ್‌ವೆಲ್‌ಗಳು ಒಣಗಿ ಹೋಗಿದ್ದು, ಅಡಿಕೆ ಹಾಗೂ ತೆಂಗಿನ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಜಾನುವಾರುಗಳಿಗೆ ಮೇವು ಬೆಳೆಯಲು ಸಹ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಹೇಮಾವತಿ ನಾಲೆಯಿಂದ ನೀರನ್ನು ಹರಿಸಿ ಕ್ಷೇತ್ರದ ಕೆರೆಗಳನ್ನು ತುಂಬಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಜೆ.ಡಿ.ಎಸ್.–ಬಿಜೆಪಿ ಎನ್.ಡಿ.ಎ ಮೈತ್ರಿಕೂಟವು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪನವರು ಕ್ಷೇತ್ರದಲ್ಲಿ ಕೇವಲ ಶೇಕಡಾ 30ರಷ್ಟು ಮಾತ್ರ ಮಳೆಯಾಗಿದ್ದು, ಯಾವುದೇ ರೈತರು ಬಿತ್ತನೆ ಮಾಡಿಲ್ಲ ಎಂದು ತಿಳಿಸಿದರು. ತುರುವೇಕೆರೆಯು ಬರಗಾಲ ಪೀಡಿತ ಪ್ರದೇಶವಾಗಿದೆ. ಕ್ಷೇತ್ರದ ಅನೇಕ ರೈತರ ಬೋರ್‌ವೆಲ್‌ಗಳು ಒಣಗಿ ಹೋಗಿದ್ದು, ಅಡಿಕೆ ಹಾಗೂ ತೆಂಗಿನ ಬೆಳೆಗಳು ಒಣಗುತ್ತಿವೆ. ಜಾನುವಾರುಗಳಿಗೆ ಮೇವು ಬೆಳೆಯಲು ಸಹ ನೀರಿಲ್ಲದಂತಾಗಿದೆ. ರೈತರು ತೀವ್ರ ಸಂಕಷ್ಟಕ್ಕೆ ಒಳಪಟ್ಟಿದ್ದಾರೆ ಎಂದರು.ಟಿ.ಬಿ.ಸಿ. ಚಾನೆಲ್‌ಗೆ ಲಿಂಕ್ ಕೆನಾಲ್ ಕಾಮಗಾರಿಯನ್ನು ಅನುಷ್ಠಾನಕ್ಕೆ ಹೊರಟಿರುವುದು ಖಂಡನೀಯ ಎಂದು ಹೇಳಿದ ಅವರು, ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಕೈಗೊಳ್ಳಬಾರದು ಎಂದು ಒತ್ತಾಯಿಸಿದರು. ಸರ್ಕಾರ ತಕ್ಷಣ ಬರಗಾಲ ಎಂದು ಘೋಷಣೆ ಮಾಡಬೇಕು. ತಾಲೂಕಿನ ರೈತರು ಅಡಿಕೆ ಹಾಗೂ ತೆಂಗನ್ನು ನೆಚ್ಚಿಕೊಂಡಿದ್ದಾರೆ. ಕ್ಷೇತ್ರದಲ್ಲಿರುವ ಕೆರೆಗಳನ್ನು ಕೂಡಲೇ ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಲಿಂಕ್ ಕೆನಾಲ್ ಯೋಜನೆಯನ್ನು ಹಿಂದೆ ಯಡಿಯೂರಪ್ಪನವರು ಕ್ಯಾಬಿನೆಟ್‌ನಲ್ಲಿ ರದ್ದು ಮಾಡಿದ್ದರು. ಕುಣಿಗಲ್‌ಗೆ ನಾಲೆಯನ್ನು ಅಗಲೀಕರಣ ಮಾಡಿ ನೀರು ಹರಿಸುವ ಬದಲು, ಅದನ್ನು ಬಿಟ್ಟು ರಾಮನಗರಕ್ಕೆ ನೀರನ್ನು ಹರಿಸಲು ಲಿಂಕ್ ಯೋಜನೆಯನ್ನು ಕೈಗೆತ್ತಿಕೊಂಡಿದ್ದೀರಿ. ಈ ಯೋಜನೆಯನ್ನು ನಾವು ಮಾಡಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿಕಟಪೂರ್ವ ಶಾಸಕ ಮಸಾಲ ಜೈರಾಮ್ ಮಾತನಾಡಿ, ಕ್ಷೇತ್ರದ ಕೆರೆ, ಬಾವಿ, ಕಟ್ಟೆಗಳೆಲ್ಲವೂ ಬರಿದಾಗಿದ್ದು, ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೂ ಸಹ ತೊಂದರೆಯಾಗಿದೆ ಎಂದರು. ಈ ಸರ್ಕಾರ ರೈತರಿಗೆ ಆತ್ಮಹತ್ಯೆಯ ಭಾಗ್ಯವನ್ನು ನೀಡಿದೆ ಎಂದು ಟೀಕಿಸಿದರು. ನಮ್ಮ ಸರ್ಕಾರದಲ್ಲಿ ಗೋಶಾಲೆಗಳನ್ನು ತೆರೆದಿದ್ದೆವು, ಅದನ್ನು ಈ ಸರ್ಕಾರ ಮುಚ್ಚಿದೆ. ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಬರಗಾಲ ಬಂದಿರುವುದರಿಂದ ಕೂಡಲೇ ಗೋಶಾಲೆಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.ಹೇಮಾವತಿ ಡ್ಯಾಂನಲ್ಲಿ ಈಗಾಗಲೇ 25 ಟಿ.ಎಂ.ಸಿ. ನೀರು ಕ್ರೂಢೀಕರಣವಾಗಿದೆ. ಕೊನೆಪಕ್ಷ ಕ್ಷೇತ್ರದ ಕೆರೆಗಳಿಗೆ ನೀರು ಬಿಡಲು ಸರ್ಕಾರ ಕ್ರಮ ಕೈಗೊಳ್ಳದೇ ಇರುವುದರಿಂದ, ದಿನಾಂಕ 10-8-2026ರೇ ಸೋಮವಾರ ಬೆಳಿಗ್ಗೆ 11.30ಕ್ಕೆ ಹೇಮಾವತಿ ಸೂಪರಿಂಟೆಂಡಿಂಗ್ ಇಂಜಿನಿಯರ್ ಕಛೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಅಹೋರಾತ್ರಿ ಧರಣಿಯನ್ನು ಎನ್.ಡಿ.ಎ ಮೈತ್ರಿಕೂಟದಿಂದ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಪಾದಯಾತ್ರೆಯನ್ನು ಮಾಡಿಯಾದರೂ ನೀರನ್ನು ಬಿಡಿಸಿಕೊಳ್ಳುತ್ತೇವೆ. ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ರೈತರು ಪಕ್ಷಾತೀತವಾಗಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು. ಮಾಜಿ ಶಾಸಕ ಎಂ.ಡಿ. ಲಕ್ಷ್ಮಿನಾರಾಯಣ್ ಮಾತನಾಡಿ, ಬರಗಾಲದಂತಹ ಕಷ್ಟದ ಸಂದರ್ಭದಲ್ಲಿ ಈ ಕಾಂಗ್ರೆಸ್ ಸರ್ಕಾರ ರೈತರ ತೋಟಗಳಿಗೆ ಸಮರ್ಪಕವಾಗಿ ತ್ರಿಫೇಸ್ ವಿದ್ಯುತ್ ಅನ್ನು ನೀಡುತ್ತಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ. ಹೇಮಾವತಿ ಡ್ಯಾಂನಿಂದ ನಮ್ಮ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸಬೇಕೆಂದು ಒತ್ತಾಯಿಸುತ್ತೇವೆ. ಆದ್ದರಿಂದ ಈ ಕ್ಷೇತ್ರದ ಸಮಸ್ತ ರೈತ ಬಾಂಧವರು ಈ ಬೃಹತ್ ಪ್ರತಿಭಟನೆಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ನಿಮ್ಮ ಪರವಾದ ಹೋರಾಟಕ್ಕೆ ಶಕ್ತಿ ತುಂಬಿಸಬೇಕಾಗಿ ಮನವಿ ಮಾಡಿದರು. ತಾಲೂಕಿನ ಎನ್.ಡಿ.ಎ ಮೈತ್ರಿಕೂಟದ ಸಮಸ್ತ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಜಿ.ವಿ. ಪ್ರಕಾಶ್, ಜೆ.ಡಿ.ಎಸ್ ತಾಲೂಕು ಅಧ್ಯಕ್ಷ ದೊಡ್ಡೇಗೌಡ, ಹೆಡಗಿಹಳ್ಳಿ ವಿಶ್ವನಾಥ್, ವೆಂಕಟಾಪುರ ಯೋಗೀಶ್, ಎನ್.ಆರ್ ಸುರೇಶ್, ಗುಂಡ ಸುರೇಶ್, ಚಿದಾನಂದ, ಸಂತೋಷ್ ಡಿ, ಕೊಂಡಜ್ಜಿ ವಿಶ್ವನಾಥ್, ಹರಿಕಾರನಹಳ್ಳಿ ಪ್ರಸಾದ್, ಸಿದ್ದಪ್ಪಾಜಿ, ಮುತ್ತಣ್ಣ, ಮುನಿಯೂರು ರಂಗಸ್ವಾಮಿ, ಗೊಟ್ಟಿಕೆರೆ ಕಾಂತರಾಜು ಸೇರಿದಂತೆ ಎನ್.ಡಿ.ಎ ಮೈತ್ರಿಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತಾಲ್ಲೂಕಿನ ಹೇಮಾವತಿ ನಾಲೆಗಳಲ್ಲಿ ನೀರು ಹರಿಸಲು ಒತ್ತಾಯಿಸಿ ಎನ್.ಡಿ.ಎ ಮೈತ್ರಿಕೂಟದ ಬೃಹತ್ ಪ್ರತಿಭಟನೆ ತುರುವೇಕೆರೆ, ಆಗಸ್ಟ್ 4: ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು ಈ ವರ್ಷ ತೀವ್ರ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕ್ಷೇತ್ರದಲ್ಲಿ ಕೇವಲ ಶೇಕಡಾ 30ರಷ್ಟು ಮಾತ್ರ ಮಳೆಯಾಗಿದ್ದು, ರೈತರು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಬೋರ್‌ವೆಲ್‌ಗಳು ಒಣಗಿ ಹೋಗಿದ್ದು, ಅಡಿಕೆ ಹಾಗೂ ತೆಂಗಿನ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಜಾನುವಾರುಗಳಿಗೆ ಮೇವು ಬೆಳೆಯಲು ಸಹ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಹೇಮಾವತಿ ನಾಲೆಯಿಂದ ನೀರನ್ನು ಹರಿಸಿ ಕ್ಷೇತ್ರದ ಕೆರೆಗಳನ್ನು ತುಂಬಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಜೆ.ಡಿ.ಎಸ್.–ಬಿಜೆಪಿ ಎನ್.ಡಿ.ಎ ಮೈತ್ರಿಕೂಟವು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪನವರು ಕ್ಷೇತ್ರದಲ್ಲಿ ಕೇವಲ ಶೇಕಡಾ 30ರಷ್ಟು ಮಾತ್ರ ಮಳೆಯಾಗಿದ್ದು, ಯಾವುದೇ ರೈತರು ಬಿತ್ತನೆ ಮಾಡಿಲ್ಲ ಎಂದು ತಿಳಿಸಿದರು. ತುರುವೇಕೆರೆಯು ಬರಗಾಲ ಪೀಡಿತ ಪ್ರದೇಶವಾಗಿದೆ. ಕ್ಷೇತ್ರದ
ಅನೇಕ ರೈತರ ಬೋರ್‌ವೆಲ್‌ಗಳು ಒಣಗಿ ಹೋಗಿದ್ದು, ಅಡಿಕೆ ಹಾಗೂ ತೆಂಗಿನ ಬೆಳೆಗಳು ಒಣಗುತ್ತಿವೆ. ಜಾನುವಾರುಗಳಿಗೆ ಮೇವು ಬೆಳೆಯಲು ಸಹ ನೀರಿಲ್ಲದಂತಾಗಿದೆ. ರೈತರು ತೀವ್ರ ಸಂಕಷ್ಟಕ್ಕೆ ಒಳಪಟ್ಟಿದ್ದಾರೆ ಎಂದರು.ಟಿ.ಬಿ.ಸಿ. ಚಾನೆಲ್‌ಗೆ ಲಿಂಕ್ ಕೆನಾಲ್ ಕಾಮಗಾರಿಯನ್ನು ಅನುಷ್ಠಾನಕ್ಕೆ ಹೊರಟಿರುವುದು ಖಂಡನೀಯ ಎಂದು ಹೇಳಿದ ಅವರು, ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಕೈಗೊಳ್ಳಬಾರದು ಎಂದು ಒತ್ತಾಯಿಸಿದರು. ಸರ್ಕಾರ ತಕ್ಷಣ ಬರಗಾಲ ಎಂದು ಘೋಷಣೆ ಮಾಡಬೇಕು. ತಾಲೂಕಿನ ರೈತರು ಅಡಿಕೆ ಹಾಗೂ ತೆಂಗನ್ನು ನೆಚ್ಚಿಕೊಂಡಿದ್ದಾರೆ. ಕ್ಷೇತ್ರದಲ್ಲಿರುವ ಕೆರೆಗಳನ್ನು ಕೂಡಲೇ ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಲಿಂಕ್ ಕೆನಾಲ್ ಯೋಜನೆಯನ್ನು ಹಿಂದೆ ಯಡಿಯೂರಪ್ಪನವರು ಕ್ಯಾಬಿನೆಟ್‌ನಲ್ಲಿ ರದ್ದು ಮಾಡಿದ್ದರು. ಕುಣಿಗಲ್‌ಗೆ ನಾಲೆಯನ್ನು ಅಗಲೀಕರಣ ಮಾಡಿ ನೀರು ಹರಿಸುವ ಬದಲು, ಅದನ್ನು ಬಿಟ್ಟು ರಾಮನಗರಕ್ಕೆ ನೀರನ್ನು ಹರಿಸಲು ಲಿಂಕ್ ಯೋಜನೆಯನ್ನು ಕೈಗೆತ್ತಿಕೊಂಡಿದ್ದೀರಿ. ಈ ಯೋಜನೆಯನ್ನು ನಾವು ಮಾಡಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿಕಟಪೂರ್ವ ಶಾಸಕ ಮಸಾಲ ಜೈರಾಮ್ ಮಾತನಾಡಿ,
ಕ್ಷೇತ್ರದ ಕೆರೆ, ಬಾವಿ, ಕಟ್ಟೆಗಳೆಲ್ಲವೂ ಬರಿದಾಗಿದ್ದು, ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೂ ಸಹ ತೊಂದರೆಯಾಗಿದೆ ಎಂದರು. ಈ ಸರ್ಕಾರ ರೈತರಿಗೆ ಆತ್ಮಹತ್ಯೆಯ ಭಾಗ್ಯವನ್ನು ನೀಡಿದೆ ಎಂದು ಟೀಕಿಸಿದರು. ನಮ್ಮ ಸರ್ಕಾರದಲ್ಲಿ ಗೋಶಾಲೆಗಳನ್ನು ತೆರೆದಿದ್ದೆವು, ಅದನ್ನು ಈ ಸರ್ಕಾರ ಮುಚ್ಚಿದೆ. ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಬರಗಾಲ ಬಂದಿರುವುದರಿಂದ ಕೂಡಲೇ ಗೋಶಾಲೆಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.ಹೇಮಾವತಿ ಡ್ಯಾಂನಲ್ಲಿ ಈಗಾಗಲೇ 25 ಟಿ.ಎಂ.ಸಿ. ನೀರು ಕ್ರೂಢೀಕರಣವಾಗಿದೆ. ಕೊನೆಪಕ್ಷ ಕ್ಷೇತ್ರದ ಕೆರೆಗಳಿಗೆ ನೀರು ಬಿಡಲು ಸರ್ಕಾರ ಕ್ರಮ ಕೈಗೊಳ್ಳದೇ ಇರುವುದರಿಂದ, ದಿನಾಂಕ 10-8-2026ರೇ ಸೋಮವಾರ ಬೆಳಿಗ್ಗೆ 11.30ಕ್ಕೆ ಹೇಮಾವತಿ ಸೂಪರಿಂಟೆಂಡಿಂಗ್ ಇಂಜಿನಿಯರ್ ಕಛೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಅಹೋರಾತ್ರಿ ಧರಣಿಯನ್ನು ಎನ್.ಡಿ.ಎ ಮೈತ್ರಿಕೂಟದಿಂದ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಪಾದಯಾತ್ರೆಯನ್ನು ಮಾಡಿಯಾದರೂ ನೀರನ್ನು ಬಿಡಿಸಿಕೊಳ್ಳುತ್ತೇವೆ. ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ರೈತರು ಪಕ್ಷಾತೀತವಾಗಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು. ಮಾಜಿ ಶಾಸಕ
ಎಂ.ಡಿ. ಲಕ್ಷ್ಮಿನಾರಾಯಣ್ ಮಾತನಾಡಿ, ಬರಗಾಲದಂತಹ ಕಷ್ಟದ ಸಂದರ್ಭದಲ್ಲಿ ಈ ಕಾಂಗ್ರೆಸ್ ಸರ್ಕಾರ ರೈತರ ತೋಟಗಳಿಗೆ ಸಮರ್ಪಕವಾಗಿ ತ್ರಿಫೇಸ್ ವಿದ್ಯುತ್ ಅನ್ನು ನೀಡುತ್ತಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ. ಹೇಮಾವತಿ ಡ್ಯಾಂನಿಂದ ನಮ್ಮ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸಬೇಕೆಂದು ಒತ್ತಾಯಿಸುತ್ತೇವೆ. ಆದ್ದರಿಂದ ಈ ಕ್ಷೇತ್ರದ ಸಮಸ್ತ ರೈತ ಬಾಂಧವರು ಈ ಬೃಹತ್ ಪ್ರತಿಭಟನೆಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ನಿಮ್ಮ ಪರವಾದ ಹೋರಾಟಕ್ಕೆ ಶಕ್ತಿ ತುಂಬಿಸಬೇಕಾಗಿ ಮನವಿ ಮಾಡಿದರು. ತಾಲೂಕಿನ ಎನ್.ಡಿ.ಎ ಮೈತ್ರಿಕೂಟದ ಸಮಸ್ತ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಜಿ.ವಿ. ಪ್ರಕಾಶ್, ಜೆ.ಡಿ.ಎಸ್ ತಾಲೂಕು ಅಧ್ಯಕ್ಷ ದೊಡ್ಡೇಗೌಡ, ಹೆಡಗಿಹಳ್ಳಿ ವಿಶ್ವನಾಥ್, ವೆಂಕಟಾಪುರ ಯೋಗೀಶ್, ಎನ್.ಆರ್ ಸುರೇಶ್, ಗುಂಡ ಸುರೇಶ್, ಚಿದಾನಂದ, ಸಂತೋಷ್ ಡಿ, ಕೊಂಡಜ್ಜಿ ವಿಶ್ವನಾಥ್, ಹರಿಕಾರನಹಳ್ಳಿ ಪ್ರಸಾದ್, ಸಿದ್ದಪ್ಪಾಜಿ, ಮುತ್ತಣ್ಣ, ಮುನಿಯೂರು ರಂಗಸ್ವಾಮಿ, ಗೊಟ್ಟಿಕೆರೆ ಕಾಂತರಾಜು ಸೇರಿದಂತೆ ಎನ್.ಡಿ.ಎ ಮೈತ್ರಿಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
- ಗುಬ್ಬಿಶಾಸಕ ಶ್ರೀನಿವಾಸ್ ಕೆ ಎಸ್ ಆರ್ ಟಿ ಸಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ? ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಆರ್ ಶ್ರೀನಿವಾಸ್ ಅವರು ಕೆ ಎಸ್ ಆರ್ ಟಿ ಸಿ ನಿಗಮ ಮಂಡಳಿಗೆ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್ಸಿಗೆ ಬರುವಂತಹ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಮುಂದಿನ ದಿನದಲ್ಲಿ ನಿಮಗೆ ಸ್ಥಾನಮಾನವನ್ನು ನೀಡುವುದಾಗಿ ಭರವಸೆ ನೀಡಿದ್ದರು ಭರವಸೆ ಉಸಿಯಾಗಿರುವ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಗುಬ್ಬಿ ಶ್ರೀನಿವಾಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ1
- ಮಳೆ ಕೊರತೆಯಿಂದ ಬೆಳೆ ಹಾನಿ – ಕೊರಟಗೆರೆಯಲ್ಲಿ ರೈತರನ್ನು ಭೇಟಿ ಮಾಡಿ ಪರಿಸ್ಥಿತಿ ಪರಿಶೀಲಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ" ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ದುರ್ಗದಹಳ್ಳಿ, ವಡ್ಡರಹಳ್ಳಿ ಕ್ರಾಸ್ ಇರಕ ಸಂದ್ರ ಕಾಲೋನಿ ತಣ್ಣೆನಹಳ್ಳಿ ಜೋನಿಗರ ಹಳ್ಳಿ ತೋವಿನಕೆರೆ ಗ್ರಾಮಗಳಿಗೆ ಭೇಟಿ ನೀಡಿ ಮತ್ತು ಎಲೇರಾಂಪುರ ನರಸಿಹಂಗಿರಿ ಕ್ಷೇತ್ರ ಪೀಠಾಧ್ಯಕ್ಷರಾದ ಹನುಮಂತನಾಥಸ್ವಾಮೀಜಿಯವರನ್ನು ಭೇಟಿಮಾಡಿ ಆಶೀರ್ವಾದ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ. ಮಳೆ ಕೊರತೆಯಿಂದ ಬೆಳೆ ಹಾನಿಗೊಳಗಾದ ರೈತರ ಸಮಸ್ಯೆಗಳನ್ನು ಆಲಿಸಿದರು. ರೈತರೊಂದಿಗೆ ನೇರವಾಗಿ ಸಂವಾದ ನಡೆಸಿದ ಅವರು, ಬೆಳೆ ನಷ್ಟದ ಕುರಿತು ಮಾಹಿತಿ ಪಡೆದು ಹೊಲಗಳ ಪರಿಸ್ಥಿತಿಯನ್ನು ವೀಕ್ಷಿಸಿದರು. ಈ ವೇಳೆ ರೈತರು ಮಳೆ ಅಭಾವದಿಂದ ಬೆಳೆಗಳು ಸಂಪೂರ್ಣವಾಗಿ ಒಣಗಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದಾಗಿ ತಮ್ಮ ಅಳಲನ್ನು ವ್ಯಕ್ತಪಡಿಸಿದರು. ಸರ್ಕಾರ ತಕ್ಷಣವೇ ಬೆಳೆ ಹಾನಿ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ಹಾಗೂ ಪರಿಹಾರ ಧನವನ್ನು ಬಿಡುಗಡೆ ಮಾಡಬೇಕು ಎಂದು ರೈತರು ಮನವಿ ಮಾಡಿದರು. ರೈತರ ಮನವಿಯನ್ನು ಆಲಿಸಿದ ಬಿ.ವೈ. ವಿಜಯೇಂದ್ರ ಅವರು, ರೈತರ ಸಮಸ್ಯೆಯನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದು, ಬೆಳೆ ಹಾನಿಗೆ ತುರ್ತು ಪರಿಹಾರ, ಬರ ಪರಿಹಾರ ಪ್ಯಾಕೇಜ್ ಹಾಗೂ ಅಗತ್ಯ ನೆರವು ನೀಡುವಂತೆ ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಮತ್ತು ತುಮಕುರು ನಗರ ಶಾಸಕ ಶ್ಯೋತಿ ಗಣೇಶ್ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯ ರೈತರು ಉಪಸ್ಥಿತರಿದ್ದರು.1
- *ವಿಬಿ-ಜಿ ರಾಮ್ ಜಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಅನುಷ್ಠಾನ ಇಲಾಖೆಗಳೊಂದಿಗೆ ಸಮನ್ವಯ ಸಭೆ* ಮಂಡ್ಯ, ಆಗಸ್ಟ್ 3: ಪ್ರಸಕ್ತ ಸಾಲಿನಲ್ಲಿ ವಿಕಸಿತ ಭಾರತ್ – ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ) [VB-G RAM G] ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಅನುಷ್ಠಾನ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು CEO ನಂದಿನಿ ಅಧಿಕಾರಿಗಳಿಗೆ ಸೂಚಿಸಿದರು. ಸೋಮವಾರ ಜಿಲ್ಲಾ ಪಂಚಾಯತ್‌ನ ಕೆಸ್ವಾನ್ ಸಭಾಂಗಣದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಕ್ರಿಯಾ ಯೋಜನೆ ಸಿದ್ಧಪಡಿಸುವ ಕುರಿತು ನಡೆದ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಕೃಷಿ, ಅರಣ್ಯ ಇಲಾಖೆ ಸೇರಿದಂತೆ ಎಲ್ಲಾ ಅನುಷ್ಠಾನ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ವಿಶೇಷವಾಗಿ ಜಲ ಸಂರಕ್ಷಣೆ (Water Conservation) ಹಾಗೂ ಮಣ್ಣಿನ ತೇವಾಂಶ ಸಂರಕ್ಷಣೆ (Soil Moisture Conservation) ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿ, ರೈತರಿಗೆ ದೀರ್ಘಾವಧಿಯಲ್ಲಿ ಅನುಕೂಲವಾಗುವ ಶಾಶ್ವತ ಆಸ್ತಿಗಳ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಅವರು ತಿಳಿಸಿದರು. ಇಲಾಖಾವಾರು ಕ್ರಿಯಾ ಯೋಜನೆ ಸಿದ್ಧಪಡಿಸಲು ಸೂಚನೆ: ಎಲ್ಲಾ ಇಲಾಖೆಗಳ ಅಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಇಲಾಖಾವಾರು ಹಾಗೂ ಗ್ರಾಮ ಪಂಚಾಯಿತಿವಾರು ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಬೇಕು. ಹಿಂದಿನ ಮಾದರಿ ಅಂದಾಜುಪಟ್ಟಿಗಳ ಆಧಾರದ ಮೇಲೆ ಎಸ್ಟಿಮೇಟ್ ತಯಾರಿಸಿ, ಜಿಲ್ಲಾ ಡಿಪಿಸಿ (District Planning Cell) ಲಾಗಿನ್ ಮೂಲಕ ಅನುಮೋದನೆ ಪಡೆದು, ನಂತರ ಹೊಸ ವಿಬಿ-ಜಿ ರಾಮ್ ಜಿ ಸಾಫ್ಟ್‌ವೇರ್‌ನಲ್ಲಿ ಅಪ್‌ಲೋಡ್ ಮಾಡಿ ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸುವಂತೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ (ಅಭಿವೃದ್ಧಿ) ಲಕ್ಷ್ಮಿ ಪಿ., ಜಿಲ್ಲಾ ಮಟ್ಟದ ಇಲಾಖಾಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿವಿಧ ಇಲಾಖೆಗಳ ಸಹಾಯಕ ನಿರ್ದೇಶಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.1
- ಮಳವಳ್ಳಿ:ಆಗಸ್ಟ್.15 ರಂದು ಬೃಹತ್ ರಕ್ತದಾನ ಶಿಬಿರ-ಪ್ರಚಾರ ರಥಕ್ಕೆ ವಿದ್ಯುಕ್ತ ಚಾಲನೆ ಮಳವಳ್ಳಿ:ಆಗಸ್ಟ್.೧೫ ರಂದು ಬೃಹತ್ ರಕ್ತದಾನ ಶಿಬಿರ-ಪ್ರಚಾರ ರಥಕ್ಕೆ ವಿದ್ಯುಕ್ತ ಚಾಲನೆ • ರಕ್ತದಾನ ಮಹಾದಾನ-ರಕ್ತದಾನ ಮಾಡೋಣ ಜೀವ ಉಳಿಸೋಣ-ಸರ್ಕಾರಿ ವಕೀಲ ಎಂ.ಎಸ್.ಶ್ರೀಕAಠಸ್ವಾಮಿ ಕರೆ ಮಳವಳ್ಳಿಯಲ್ಲಿ ಆಗಸ್ಟ್ ೧೫ ರಂದು ಗಡಿ ಕಾಯುವ ಯೋಧರ ಹಾಗೂ ಅನ್ನ ನೀಡುವ ರೈತರ ಸ್ಮರಣಾರ್ಥ ಯುವಕ ಮಿತ್ರರ ತಂಡ ಹಮ್ಮಿಕೊಂಡಿರುವ ಬೃಹತ್ ರಕ್ತದಾನ ಶಿಬಿರದ ಪ್ರಚಾರ ರಥಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀ ಗಂಗಾಧರೇಶ್ವರಸ್ವಾಮಿ ದೇವಸ್ಥಾನದ ಅವರಣದಲ್ಲಿ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕಿನ ಪ್ರತಿ ಹಳ್ಳಿ ಹಳ್ಳಿಯಲ್ಲೂ ಸಂಚಾರ ನಡೆಸಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲು ವಿಶೇಷವಾಗಿ ಸಿದ್ದಗೊಳಿಸಿರುವ ಪ್ರಚಾರ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ರೈತ ಮುಖಂಡರು,ಮಳವಳ್ಳಿ ಯುವಕ ತಂಡದ ಸ್ವಯಂ ಸೇವಕರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಪರ ಸರ್ಕಾರಿ ವಕೀಲ ಎಂ.ಎಸ್.ಶ್ರೀಕAಠಸ್ವಾಮಿ ಮಾತನಾಡಿ, ಇದೊಂದು ಮಾನವೀಯತೆಯ ನೆಲೆಯಲ್ಲಿ ನಡೆಯುತ್ತಿರುವ ಬೃಹತ್ ರಕ್ತದಾನ ಶಿಬಿರವಾಗಿದೆ.ರಕ್ತದಾನ ಮಾಡುವುದರಿಂದ ಇನ್ನೊಂದು ಜೀವ ಉಳಿಸಿದ ಪುಣ್ಯ ರಕ್ತದಾನಿಗೆ ಸಿಗಲಿದೆ,ರಕ್ತದಾನದಿಂದ ಅವರ ಅರೋಗ್ಯ ಉತ್ತಮವಾಗಲಿದೆ,ಜನರು ಯಾವುದೆ ಅತಂಕ ವಿಲ್ಲದೆ ನಿರ್ಭಿತಿಯಿಂದ ರಕ್ತದಾನ ಮಾಡುವ ಮೂಲಕ ಆ.೧೫ ರ ೨೬ ಗಮಟೆಗಳ ನಿರಂತರ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸುವಂತೆ ಹಾಗೂ ೨೦೨೬ ಕ್ಕೂ ಹೆಚ್ಚು ಜನರು ದಾಖಲೆ ರಕ್ತದಾನ ಮಾಡುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಾಣಕ್ಕೆ ಎಲ್ಲರೂ ಕಂಕಣಬದ್ದರಾಗೋಣವೆAದರು. ಈ ಸಮದರ್ಭದಲ್ಲಿ ಮಳವಳ್ಳಿ ತಂಡದ ನೂರಾರು ಸ್ವಯಂ ಸೇವಕರು,ರೈತರು,ಸಮಾಜ ಸೇವಕರು,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬಾಗವಹಿಸಿದ್ದರು.1
- ಆಗಸ್ಟ್ 15 ರಂದು ನಡೆಯಲಿರುವ ಬೃಹತ್ ರಕ್ತದಾನ ಶಿಬಿರ ಹಿನ್ನಲೆ, ಮಳವಳ್ಳಿ ಪಟ್ಟಣದಲ್ಲಿ ಶಿಬಿರದ ಪ್ರಚಾರ ರಥಕ್ಕೆ ಚಾಲನೆ ಮಳವಳ್ಳಿ : ಬರುವ ಆಗಸ್ಟ್ 15 ರಂದು ಪಟ್ಟಣದಲ್ಲಿ ಟೀಮ್ ಮಳವಳ್ಳಿ ಯುವಕ ಮಿತ್ರರ ಬಳಗದ ವತಿಯಿಂದ ಏರ್ಪಡಿಸಿ ರುವ ಐತಿಹಾಸಿಕ ಬೃಹತ್ ರಕ್ತದಾನ ಶಿಬಿರದ ಪ್ರಚಾರ ರಥಕ್ಕೆ ಚಾಲನೆ ನೀಡಲಾಯಿತು. ಮಂಗಳವಾರ ಬೆಳಿಗ್ಗೆ 11.30 ರ ಸಮಯದಲ್ಲಿ ಮಳವಳ್ಳಿ ಪಟ್ಟಣದ ಕೋಟೆ ಶ್ರೀ ಗಂಗಾಧರೇಶ್ವರಸ್ವಾಮಿ ದೇವಾಲಯದ ಬಳಿ ಪ್ರಚಾರ ರಥಕ್ಕೆ ಪೂಜೆ ಸಲ್ಲಿಸಿದ ನಂತರ ಅನ್ನದಾತ ರೈತರಾದ ಡಾ ಕಪನೀಗೌಡ, ಚಿಕ್ಕಣ್ಣ ಶಿವಕುಮಾರ್ ನಾಗರಾಜು, ಮಹೇಶ್ ಹಾಗೂ ನೀವೃತ್ತ ಸೈನಿಕರಾದ ಸುರೇಶ್, ಪ್ರಕಾಶ್ ಮಾದೇಶ, ಬಿಎಸ್ ಎಫ್ ನ ಕೇಶವಮೂರ್ತಿ, ಅವರುಗಳು ಹಸಿರು ನಿಶಾನೆ ತೋರಿಸುವುದ ರೊಂದಿಗೆ ಚಾಲನೆ ನೀಡಿದರು. ಟೀಮ್ ಮಳವಳ್ಳಿ ಬಳಗದ ಪ್ರಮುಖರಾದ ಪೊಲೀಸ್ ಪ್ರಭು, ಶಿವಪ್ರಸಾದ್ ಹರ್ಷಿತ್ ಅಖಿಲ್, ಕಮಲ್ ಷರೀಫ್ ನಗು ಫೌಂಡೇಷನ್ ಡಾ. ಅರುಣ್ ಕುಮಾರ್ , ವಕೀಲ ರಾದ ಶ್ರೀಕಂಠಸ್ವಾಮಿ ಮತ್ತಿತರ ರು ಈ ವೇಳೆ ಹಾಜರಿದ್ದರು. ಸದರಿ ಪ್ರಚಾರ ವಾಹನ ತಾಲ್ಲೂಕಿನ ಎಲ್ಲಾ 200ಕ್ಕೂ ಗ್ರಾಮಗಳಲ್ಲಿ ಸಂಚರಿಸಿ ಪ್ರಚಾರ ನಡೆಸಲಿದ್ದು ಈ ವಾಹನ ತಮ್ಮ ಗ್ರಾಮಗಳಿಗೆ ಬಂದಾಗ ಗ್ರಾಮದ ಮುಖಂಡರು ಯುವಕರು ಜೊತೆಯಾಗಿ ಪ್ರಚಾರ ನಡೆಸುವುದರ ಜೊತೆಗೆ ಆಗಸ್ಟ್ 15 ರ ರಕ್ತದಾನ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂ ಡು ರಕ್ತದಾನ ಮಾಡುವ ಮೂಲಕ ಶಿಬಿರವನ್ನು ಯಶಸ್ವಿ ಗೊಳಿಸಬೇಕು ಎಂದು ಟೀಮ್ ಮಳವಳ್ಳಿ ಸದಸ್ಯರು ಕೋರಿದ್ದಾರೆ.1
- ಚಿಕ್ಕನಾಯಕನಹಳ್ಳಿ ಹೇಮಾವತಿ ಹೋರಾಟ ಆರನೇ ದಿನಕ್ಕೆ ಕಾಲಿಟ್ಟಿದ್ದು ಈ ದಿನ ಸಂಜೆಯ ಸ್ನಾಕ್ಸ್ ಆಗಿ ಅಣೆಕಟ್ಟೆಯ ರೈತರು ಕಾರಪುರಿ, ಬೋಂಡಾ, ಬೆಂಡಿ ಮಸಾಲ ನೀಡಿದರು1
- ಮಂಡ್ಯ ದಲ್ಲಿ ವಿಶ್ವ ಸ್ತನ್ಯ ಪಾನದಿನಾಚರಣೆ ತಾಯಿಯ ಹಾಲೇ ಮಗುವಿನ ಮೊದಲ ನೈಸರ್ಗಿಕ ಲಸಿಕೆ ಮಂಡ್ಯ-ತಾಯಿಯ ಹಾಲು ಮಗುವಿನ ಮೊದಲ ಅತ್ಯುತ್ತಮ ಆಹಾರವಾಗಿದ್ದು, ಜನನವಾದ ಮೊದಲ ಒಂದು ಗಂಟೆಯೊಳಗೆ ಸ್ತನ್ಯಪಾನ ಆರಂಭಿಸಿ, ಮೊದಲ ಆರು ತಿಂಗಳು ಕೇವಲ ತಾಯಿಯ ಹಾಲನ್ನೇ ನೀಡುವುದು ಮಗುವಿನ ಆರೋಗ್ಯ, ಬೆಳವಣಿಗೆ ಹಾಗೂ ರೋಗನಿರೋಧಕ ಶಕ್ತಿಗೆ ಅತ್ಯಂತ ಅಗತ್ಯ ಎಂದು CEO ನಂದಿನಿ ಹೇಳಿದ್ರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಂದಿನಿ, ಈ ವರ್ಷದ ಘೋಷವಾಕ್ಯ "ಸುಸ್ಥಿರ ಜೀವನದ ಭದ್ರ ಅಡಿಪಾಯಕ್ಕಾಗಿ ಸ್ತನ್ಯಪಾನ ಪರಿಣಾಮಕಾರಿ ವಿಧಾನಗಳನ್ನು ಸದೃಢಗೊಳಿಸೋಣ ಎಂಬುದಾಗಿದ್ದು, ತಾಯಿಯ ಹಾಲಿನ ಮಹತ್ವದ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಸಿ. ಬೆಟ್ಟಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗೀತಾಲಕ್ಷ್ಮಿ ಸಿ. ಜಿಲ್ಲಾ ಕ್ಷಯ ರೋಗ ಹಾಗೂ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಎಂ. ಎನ್ ಆಶಾಲತಾ ರವರು ಉಪಸ್ಥಿತರಿದ್ದರು1
- ಟೈರ್‌ಗೆ ಬೆಂಕಿ ಹಚ್ಚಲು ಯತ್ನ: ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು. ತನ್ವೀರ್ ಸೇಠ್‌ಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಭುಗಿಲೆದ್ದ ಆಕ್ರೋಶ: ಮೈಸೂರು-ಬೆಂಗಳೂರು ಹೆದ್ದಾರಿ ತಡೆದು ಕಾರ್ಯಕರ್ತರ ಪ್ರತಿಭಟನೆ! ಸಚಿವ ಸ್ಥಾನ ಸಿಗದಿದ್ದಕ್ಕೆ ಕಣ್ಣೀರು-ಆಕ್ರೋಶ: ರಸ್ತೆಯಲ್ಲೇ ಮಲಗಿ ತನ್ವೀರ್ ಸೇಠ್ ಬೆಂಬಲಿಗರ ಹೈಡ್ರಾಮಾ! ಮೈಸೂರಿನಲ್ಲಿ ತನ್ವೀರ್ ಸೇಠ್ ಅಭಿಮಾನಿಗಳ ಭಾರಿ ಪ್ರತಿಭಟನೆ: ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ತೂರಾಟ!1