ಮಂಡ್ಯ ದಲ್ಲಿ ವಿಶ್ವ ಸ್ತನ್ಯ ಪಾನದಿನಾಚರಣೆ ತಾಯಿಯ ಹಾಲೇ ಮಗುವಿನ ಮೊದಲ ನೈಸರ್ಗಿಕ ಲಸಿಕೆ ಮಂಡ್ಯ-ತಾಯಿಯ ಹಾಲು ಮಗುವಿನ ಮೊದಲ ಅತ್ಯುತ್ತಮ ಆಹಾರವಾಗಿದ್ದು, ಜನನವಾದ ಮೊದಲ ಒಂದು ಗಂಟೆಯೊಳಗೆ ಸ್ತನ್ಯಪಾನ ಆರಂಭಿಸಿ, ಮೊದಲ ಆರು ತಿಂಗಳು ಕೇವಲ ತಾಯಿಯ ಹಾಲನ್ನೇ ನೀಡುವುದು ಮಗುವಿನ ಆರೋಗ್ಯ, ಬೆಳವಣಿಗೆ ಹಾಗೂ ರೋಗನಿರೋಧಕ ಶಕ್ತಿಗೆ ಅತ್ಯಂತ ಅಗತ್ಯ ಎಂದು CEO ನಂದಿನಿ ಹೇಳಿದ್ರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಂದಿನಿ, ಈ ವರ್ಷದ ಘೋಷವಾಕ್ಯ "ಸುಸ್ಥಿರ ಜೀವನದ ಭದ್ರ ಅಡಿಪಾಯಕ್ಕಾಗಿ ಸ್ತನ್ಯಪಾನ ಪರಿಣಾಮಕಾರಿ ವಿಧಾನಗಳನ್ನು ಸದೃಢಗೊಳಿಸೋಣ ಎಂಬುದಾಗಿದ್ದು, ತಾಯಿಯ ಹಾಲಿನ ಮಹತ್ವದ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಸಿ. ಬೆಟ್ಟಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗೀತಾಲಕ್ಷ್ಮಿ ಸಿ. ಜಿಲ್ಲಾ ಕ್ಷಯ ರೋಗ ಹಾಗೂ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಎಂ. ಎನ್ ಆಶಾಲತಾ ರವರು ಉಪಸ್ಥಿತರಿದ್ದರು
ಮಂಡ್ಯ ದಲ್ಲಿ ವಿಶ್ವ ಸ್ತನ್ಯ ಪಾನದಿನಾಚರಣೆ ತಾಯಿಯ ಹಾಲೇ ಮಗುವಿನ ಮೊದಲ ನೈಸರ್ಗಿಕ ಲಸಿಕೆ ಮಂಡ್ಯ-ತಾಯಿಯ ಹಾಲು ಮಗುವಿನ ಮೊದಲ ಅತ್ಯುತ್ತಮ ಆಹಾರವಾಗಿದ್ದು, ಜನನವಾದ ಮೊದಲ ಒಂದು ಗಂಟೆಯೊಳಗೆ ಸ್ತನ್ಯಪಾನ ಆರಂಭಿಸಿ, ಮೊದಲ ಆರು ತಿಂಗಳು ಕೇವಲ ತಾಯಿಯ ಹಾಲನ್ನೇ ನೀಡುವುದು ಮಗುವಿನ ಆರೋಗ್ಯ, ಬೆಳವಣಿಗೆ ಹಾಗೂ ರೋಗನಿರೋಧಕ ಶಕ್ತಿಗೆ ಅತ್ಯಂತ ಅಗತ್ಯ ಎಂದು CEO ನಂದಿನಿ ಹೇಳಿದ್ರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಂದಿನಿ, ಈ ವರ್ಷದ ಘೋಷವಾಕ್ಯ "ಸುಸ್ಥಿರ ಜೀವನದ ಭದ್ರ ಅಡಿಪಾಯಕ್ಕಾಗಿ ಸ್ತನ್ಯಪಾನ ಪರಿಣಾಮಕಾರಿ ವಿಧಾನಗಳನ್ನು ಸದೃಢಗೊಳಿಸೋಣ ಎಂಬುದಾಗಿದ್ದು, ತಾಯಿಯ ಹಾಲಿನ ಮಹತ್ವದ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಸಿ. ಬೆಟ್ಟಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗೀತಾಲಕ್ಷ್ಮಿ ಸಿ. ಜಿಲ್ಲಾ ಕ್ಷಯ ರೋಗ ಹಾಗೂ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಎಂ. ಎನ್ ಆಶಾಲತಾ ರವರು ಉಪಸ್ಥಿತರಿದ್ದರು
- ವಿದ್ಯಾಗಣಪತಿ ದೇವಾಲಯದಲ್ಲಿ ಚಾಮುಂಡೇಶ್ವರಿ ವರ್ಧಂತಿ, ಚಂಢಿಕಾ ಹೋಮ ಅಷ್ಟೋತ್ತರ ಪಾರಾಯಣ ಮಂಡ್ಯ ಆಷಾಢ ಮಾಸದ ಬಹುಳ ಷಷ್ಠಿ ದಿನವಾದ ಇಂದು ಚಾಮುಂಡೇಶ್ವರಿ ವರ್ದಂತಿ ಪ್ರಯುಕ್ತ ಮಂಡ್ಯದ ವಿದ್ಯಾನಗರದ ವಿದ್ಯಾಗಣಪತಿ ದೇವಸ್ಥಾನದಲ್ಲಿ ಮಾತ ಸೇವಾ ಟ್ರಸ್ಟ್ ನಿಂದ ಇಂದು ಚಂಡಿಕಾಯಾಗ,ಅಷ್ಟೋತ್ತರ ಪಾರಾಯಣ ಜರುಗಿತು. ಕಾರ್ಯಕ್ರಮದಲ್ಲಿ ಮಾತಾ ಟ್ರಸ್ಟ್ ನ ಪದಾದಿಕಾರಿ ಗಳಾದಪ್ರತಿಮಾರಮೇಶ್,ಮಾಲಾನಾಗೇಶ್,ಭಾರತೀಅಡಿಗ ಮತ್ತು ಟ್ರಸ್ಟಿಗಳು ಬಾಗವಹಿಸಿದ್ದರು. ದೇವಿಕೃಪೆಗೆಪಾತ್ರರಾಗಲು ಬಂದ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.1
- ಕೋಡಿಪುರ ಗ್ರಾಮದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಯವರ ಸಹಯೋಗ ದೊಂದಿಗೆ ಮೇರಾ ರೇಷಮ್ ಮೇರಾ ಅಭಿಯಾನ ಮತ್ತು ವಿಶೇಷ ಜಾಗೃತಿ ಅಭಿಯಾನ ಹಾಗೂ ಪ್ರಾತ್ಯಕ್ಷತೆ ರೈತರು ವ್ಯವಸಾಯಕ್ಕೆ ಹನಿ ನೀರಾವರಿಯನ್ನು ಬಳಸಿಕೊಳ್ಳುವುದು ಉತ್ತಮ- ಸುಂದರ್ ರಾಜ್. ಹಲಗೂರು:- ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದಾಗಿ ರೈತರು ವ್ಯವಸಾಯ ಮಾಡುವುದಕ್ಕೆ ಕಷ್ಟ ಆಗಿರುವುದರಿಂದ ನೀರಿನ ಸರಿಯಾದ ಬಳಕೆಗೆ ನಿಮ್ಮ ಜಮೀನಿನಲ್ಲಿ ವ್ಯವಸಾಯಕ್ಕಾಗಿಹನಿ ನೀರಾವರಿಯನ್ನು ಬಳಸಿಕೊಳ್ಳುವುದು ಉತ್ತಮ ವಾಗಿರುತ್ತದೆ, ಎಂದು ಮಂಡ್ಯಜಿಲ್ಲಾ ಪಂಚಾಯತ್ ರೇಷ್ಮೆ ಉಪ ನಿರ್ದೇಶಕರಾದ ಡಾ.ಸುಂದರ್ ರಾಜ್ ರೈತರಿಗೆ ಸಲಹೆ ನೀಡಿದರು. ತಾಂತ್ರಿಕ ಸೇವಾ ಕೇಂದ್ರ ಡಿ. ಹಲಸಹಳ್ಳಿ ವ್ಯಾಪ್ತಿಯ ಕೋಡಿಪುರ ಗ್ರಾಮದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಯವರ ಸಹಯೋಗ ದೊಂದಿಗೆ ಮೇರಾ ರೇಷಮ್ ಮೇರಾ ಅಭಿಯಾನ ಮತ್ತು ವಿಶೇಷ ಜಾಗೃತಿ ಅಭಿಯಾನ ಹಾಗೂ ಪ್ರಾತ್ಯಕ್ಷತೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಇಲಾಖಾ ಕಾರ್ಯಕ್ರಮಗಳ ಬಗ್ಗೆ ಹಾಗೂ ಮುಂದಿನ ಆಯೋಜನೆಗಳ ಬಗ್ಗೆ ಮತ್ತು ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ ಎಲ್ಲ ರೀತಿಯಾದಂತಹ ಪರಿಹಾರವನ್ನು ನೀಡುವುದಲ್ಲದೆ ಸರ್ಕಾರಗಳಿಂದ ಹಾಗೂ ಇಲಾಖೆಯಿಂದ ಬರುವಂತಹ ಎಲ್ಲಾ ಅನುದಾನಗಳು ಸರಿಯಾದ ರೀತಿಯಲ್ಲಿ ಸಮಯಕ್ಕೆ ಸರಿಯಾಗಿ ಕೂಡಿಸಿ ಕೊಡುವುದಾಗಿ ರೈತರಿಗೆ ಭರವಸೆಯನ್ನು ನೀಡಿದರು. ಇತ್ತೀಚಿನ ತಂತ್ರಜ್ಞಾನಗಳನ್ನು ಬಳಸಿಕೊಂಡಲ್ಲಿ ಉಂಟಾಗುತ್ತಿರುವ ಹಲವಾರು ತೊಂದರೆಗಳಿಗೆ ಪರಿಹಾರವನ್ನು ನೀಡಬಹುದಾಗಿದೆ ಎಂದು ತಿಳಿಸಿ ಮತ್ತು ರೈತರ ಹಲವಾರು ಪ್ರಶ್ನೆಗಳಿಗೆ ರೈತರೊಂದಿಗೆ ಚರ್ಚಿಸಿ ಉತ್ತರವನ್ನು ನೀಡಿದರು. ಕೇಂದ್ರ ರೇಷ್ಮೆ ಮಂಡಳಿ ಹಾಗೂ ರೇಷ್ಮೆ ವಿಸ್ತರಣಾ ಉಪ ವಿಭಾಗ ಮದ್ದೂರಿನ ವಿಜ್ಞಾನಿ ಡಾ ಶಿವಕುಮಾರ್ ಮಾತನಾಡುತ್ತಾ, ರೈತರು ಬಳಸುತ್ತಿರುವ ರಾಸಾಯನಿಕ ಔಷಧಿಗಳ ಬಳಕೆ ಹಾಗೂ ಸರಿ ಪ್ರಮಾಣದ ಔಷಧಿ ಸಿಂಪಡಣೆ ಬಗ್ಗೆ ಮತ್ತು ರೈತರು ಮಾಡುತ್ತಿರುವ ತಪ್ಪುಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ, ದ್ವಿತಳಿ ರೇಷ್ಮೆ ಬೆಳೆಯನ್ನು ಬೆಳೆಯುವುದರಿಂದ ನಮ್ಮ ಆರ್ಥಿಕ ಲಾಭವು ಹೆಚ್ಚಾಗುವುದಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ರೇಷ್ಮೆಯನ್ನು ನಿಲ್ಲಿಸಿ, ನಮ್ಮಲ್ಲೇ ಬೆಳೆದ ದ್ವಿತಳಿ ರೇಷ್ಮೆ ಬೆಳೆಗೆ ಅತ್ಯುನ್ನತ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗುತ್ತದೆ. ಈಗಿನ ದಿನಗಳಲ್ಲಿ ಹೊಸ ಹೊಸ ತಾಂತ್ರಿಕತೆಗಳಲ್ಲಿ ಟ್ರೆಂಚಿಂಗ್, ಮಲ್ಚಿಂಗ್ ಮಾಡುವುದು ಹಾಗೂ ಹಿಪ್ಪು ನೇರಳೆ ತೋಟದಲ್ಲಿ ಹನಿ ನೀರಾವರಿಯನ್ನು ಅಳವಡಿಸಿಕೊಳ್ಳುವುದು ಹಾಗೂ ವೈಜ್ಞಾನಿಕವಾಗಿ ಹೊಸ ತಾಂತ್ರಿಕತೆಗೆ ಬದಲಾಗುವುದು ತುಂಬಾ ಮುಖ್ಯವಾಗಿರುತ್ತದೆ. ಹಾಗೂ ಸಿ ಎಸ್ ಆರ್ ಅಂಡ್ ಟಿ ಐ ಮೈಸೂರು ರವರ ಹೊಸ ಅನ್ವೇಷಣೆಯ ಹಿಪ್ಪು ನೇರಳೆ ತಳಿಯಾದಂತಹ ಎಜಿಬಿ8 ಎಂಬುದು ಅತಿ ಹೆಚ್ಚು ಜನಪ್ರಿಯವಾಗಿ ಹಾಗೂ ಬೇರು ಕೊಳೆ ರೋಗಕ್ಕೆ ಪರ್ಯಾಯವಾಗಿ ಬೆಳೆಯಬಹುದಾಗಿದೆ, ಈ ತಳಿಯಲ್ಲಿ ನೀರನ್ನು ಅತಿ ಹೆಚ್ಚು ಗಂಟೆಗಳ ಕಾಲ ಹಿಡಿದಿಟ್ಟುಕೊಂಡು ಹಿಪ್ಪು ನೇರಳೆ ಸೊಪ್ಪು ಬೇಗ ಬಾಡಿ ಹೋಗದ ರೀತಿಯಲ್ಲಿ ಇರುವುದರಿಂದ ಹಾಗೂ ಅತಿ ಹೆಚ್ಚು ಇಳುವರಿಯನ್ನು ನೀಡುತ್ತಿರುವುದರಿಂದ ಈ ಒಂದು ಹಿಪ್ಪು ನೇರಳೆ ತಳಿಯು ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಹೊಂದುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಮತ್ತು ಔಷಧಿ ಸಿಂಪಡಣೆಯ ಬಗ್ಗೆ ಇಲಾಖೆಯಿಂದ ಶಿಫಾರಸ್ಸು ಮಾಡಿರುವಂತಹ ಔಷಧಿಗಳನ್ನು ಮಾತ್ರ ಬಳಸುವುದು ಸೂಕ್ತ ಎಂದು ಹೇಳಿ ಹಿಪ್ಪು ನೇರಳೆ ತೋಟದಲ್ಲಿ ಔಷಧಿ ಸಿಂಪಡಣೆಯ ಬಗ್ಗೆ ರೈತರು ಮಾಡುತ್ತಿರುವ ತಪ್ಪುಗಳ ಬಗ್ಗೆ ವಿವರವಾಗಿ ಮನವರಿಕೆ ಮಾಡಿಕೊಟ್ಟು ತೋಟಕ್ಕೆ ಔಷಧಿ ಸಿಂಪಡಣೆಯ ಪ್ರಾತ್ಯಕ್ಷತೆಯ ಮುಖಾಂತರ ರೈತರಿಗೆ ಮನದಟ್ಟು ಮಾಡಿಸಿದರು. ಕೆ ಆರ್ ಪೇಟೆಯ ರೇಷ್ಮೆ ತರಬೇತಿ ಸಂಸ್ಥೆ ಪ್ರಾಚಾರ್ಯರಾದಂತಹ ಡಿ.ಸೋಮಣ್ಣ ಮಾತನಾಡಿ,ರಾಸಾಯನಿಕ ಗೊಬ್ಬರಗಳನ್ನು ಮಿತವಾಗಿ ಬಳಸಿ ಸಾವಯವ ಗೊಬ್ಬರ ವನ್ನು ಬಳಸಿ ಹಾಗೂ ಹಿಪ್ಪು ನೇರಳೆ ತೋಟದಲ್ಲಿ ಸರಿಯಾದ ರೀತಿಯ ಗಾಳಿ ಸಂಚಾರ ಹಾಗೂ ಬೆಳಕು ಅತ್ಯಾವಶ್ಯಕ. ಹಾಗೇನೇ ರೇಷ್ಮೆ ಹುಳು ಸಾಕಾಣಿಕೆ ಮನೆಯಲ್ಲಿ ಶೇಖರಣೆಯಾಗುವ ಹಾಸಿಗೆ ಕಸದಿಂದ ಉತ್ಕೃಷ್ಟವಾದ ಗೊಬ್ಬರವನ್ನು ತಯಾರಿಸಿ ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುವುದಲ್ಲದೆ ರೇಷ್ಮೆ ಗೂಡಿನ ಇಳುವರಿಯು ಕೂಡ ಹೆಚ್ಚಾಗಿ ರೈತರಿಗೆ ಆರ್ಥಿಕವಾಗಿ ಲಾಭವನ್ನು ನೀಡುತ್ತದೆ. ಮಣ್ಣಿನ ಫಲವತ್ತತೆಯಿಂದ ನಮ್ಮ ಮುಂದಿನ ಪೀಳಿಗೆಗೆ ಈ ಒಂದು ಮಣ್ಣನ್ನು ವರದಾನವಾಗಿ ನಾವು ನೀಡಬೇಕಾಗಿದೆ. ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆಯಿಂದಾಗಿ ಹಲವಾರು ರೀತಿಯ ರೇಷ್ಮೆ ಹಾಗೂ ಇನ್ನಿತರ ಕೃಷಿಯಲ್ಲಿ ಬೇರು ಕೊಳೆ ರೋಗ ಹಾಗೂ ಬೇರು ಗಂಟು ರೋಗ ಅದಲ್ಲದೆ ಹಿಪ್ಪು ನೇರಳೆ ಸೊಪ್ಪಿನ ಇಳುವರಿ ಕೂಡ ಕಡಿಮೆಯಾಗಿ ಹಲವಾರು ರೀತಿಯಾದಂತಹ ರೋಗಗಳಿಗೆ ಹಾಗೂ ಕೀಟ ಬಾದೆಗಳಿಗೆ ತುತ್ತಾಗುತ್ತದೆ ಎಂದು ರೇಷ್ಮೆ ಬೆಳೆಗಾರರಿಗೆ ಮಣ್ಣಿನ ಫಲವತ್ತತೆಯ ಬಗ್ಗೆ ಮನದಟ್ಟು ಮಾಡಿದರು. ನಂತರದಲ್ಲಿ ಕಾರ್ಯಕ್ರಮದಲ್ಲಿ ಮಳವಳ್ಳಿ ರೇಷ್ಮೆ ಸಹಾಯಕ ನಿರ್ದೇಶಕ ಎ. ಬಿ. ರವಿ, ರೇಷ್ಮೆ ವಿಸ್ತರಣಾಧಿಕಾರಿ ಎಸ್.ವಿ. ನರಸಿಂಹಮೂರ್ತಿ,ಆಶಾ, ಹೆಚ್.ಜಿ,ಕುಮಾರಿ , ಟಿ.ಆರ್. ಪೂಜಾ, ರೇಷ್ಮೆ ನಿರೀಕ್ಷಕ ಬಿ.ಆರ್ ಕಿರಣ್, ಎಂ.ನವೀನ್, ಉದಯಶಂಕರ್ ಹಾಗೂ ಕೋಡಿಪುರ ಗ್ರಾಮದ ಎಲ್ಲಾ ರೇಷ್ಮೆ ಬೆಳೆಗಾರರು ಇದ್ದರು. ಕೋಡಿಪುರ ಗ್ರಾಮದಲ್ಲಿ ರೇಷ್ಮೆ ಕೃಷಿಯಲ್ಲಿ ತಾಂತ್ರಿಕತೆ ಮತ್ತು ತರಬೇತಿ ಹಾಗೂ ಪ್ರಾತ್ಯಕ್ಷತೆ ಕಾರ್ಯಕ್ರಮದಲ್ಲಿ ರೈತರು ಮತ್ತು ಅಧಿಕಾರಿಗಳು ಇದ್ದಾರೆ.1
- ಆಗಸ್ಟ್ 15 ರಂದು ನಡೆಯಲಿರುವ ಬೃಹತ್ ರಕ್ತದಾನ ಶಿಬಿರ ಹಿನ್ನಲೆ, ಮಳವಳ್ಳಿ ಪಟ್ಟಣದಲ್ಲಿ ಶಿಬಿರದ ಪ್ರಚಾರ ರಥಕ್ಕೆ ಚಾಲನೆ ಮಳವಳ್ಳಿ : ಬರುವ ಆಗಸ್ಟ್ 15 ರಂದು ಪಟ್ಟಣದಲ್ಲಿ ಟೀಮ್ ಮಳವಳ್ಳಿ ಯುವಕ ಮಿತ್ರರ ಬಳಗದ ವತಿಯಿಂದ ಏರ್ಪಡಿಸಿ ರುವ ಐತಿಹಾಸಿಕ ಬೃಹತ್ ರಕ್ತದಾನ ಶಿಬಿರದ ಪ್ರಚಾರ ರಥಕ್ಕೆ ಚಾಲನೆ ನೀಡಲಾಯಿತು. ಮಂಗಳವಾರ ಬೆಳಿಗ್ಗೆ 11.30 ರ ಸಮಯದಲ್ಲಿ ಮಳವಳ್ಳಿ ಪಟ್ಟಣದ ಕೋಟೆ ಶ್ರೀ ಗಂಗಾಧರೇಶ್ವರಸ್ವಾಮಿ ದೇವಾಲಯದ ಬಳಿ ಪ್ರಚಾರ ರಥಕ್ಕೆ ಪೂಜೆ ಸಲ್ಲಿಸಿದ ನಂತರ ಅನ್ನದಾತ ರೈತರಾದ ಡಾ ಕಪನೀಗೌಡ, ಚಿಕ್ಕಣ್ಣ ಶಿವಕುಮಾರ್ ನಾಗರಾಜು, ಮಹೇಶ್ ಹಾಗೂ ನೀವೃತ್ತ ಸೈನಿಕರಾದ ಸುರೇಶ್, ಪ್ರಕಾಶ್ ಮಾದೇಶ, ಬಿಎಸ್ ಎಫ್ ನ ಕೇಶವಮೂರ್ತಿ, ಅವರುಗಳು ಹಸಿರು ನಿಶಾನೆ ತೋರಿಸುವುದ ರೊಂದಿಗೆ ಚಾಲನೆ ನೀಡಿದರು. ಟೀಮ್ ಮಳವಳ್ಳಿ ಬಳಗದ ಪ್ರಮುಖರಾದ ಪೊಲೀಸ್ ಪ್ರಭು, ಶಿವಪ್ರಸಾದ್ ಹರ್ಷಿತ್ ಅಖಿಲ್, ಕಮಲ್ ಷರೀಫ್ ನಗು ಫೌಂಡೇಷನ್ ಡಾ. ಅರುಣ್ ಕುಮಾರ್ , ವಕೀಲ ರಾದ ಶ್ರೀಕಂಠಸ್ವಾಮಿ ಮತ್ತಿತರ ರು ಈ ವೇಳೆ ಹಾಜರಿದ್ದರು. ಸದರಿ ಪ್ರಚಾರ ವಾಹನ ತಾಲ್ಲೂಕಿನ ಎಲ್ಲಾ 200ಕ್ಕೂ ಗ್ರಾಮಗಳಲ್ಲಿ ಸಂಚರಿಸಿ ಪ್ರಚಾರ ನಡೆಸಲಿದ್ದು ಈ ವಾಹನ ತಮ್ಮ ಗ್ರಾಮಗಳಿಗೆ ಬಂದಾಗ ಗ್ರಾಮದ ಮುಖಂಡರು ಯುವಕರು ಜೊತೆಯಾಗಿ ಪ್ರಚಾರ ನಡೆಸುವುದರ ಜೊತೆಗೆ ಆಗಸ್ಟ್ 15 ರ ರಕ್ತದಾನ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂ ಡು ರಕ್ತದಾನ ಮಾಡುವ ಮೂಲಕ ಶಿಬಿರವನ್ನು ಯಶಸ್ವಿ ಗೊಳಿಸಬೇಕು ಎಂದು ಟೀಮ್ ಮಳವಳ್ಳಿ ಸದಸ್ಯರು ಕೋರಿದ್ದಾರೆ.1
- ಕಾಂಗ್ರೆಸ್ ಅಂಗಳದಲ್ಲಿ ತಾರಕಕ್ಕೇರಿದ ಅಸಮಾಧಾನ: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕೈ ನಾಯಕರ ವಿರುದ್ಧ ತಿರುಗಿಬಿದ್ದ ಬೆಂಬಲಿಗರು, ಹೈಕಮಾಂಡ್‌ಗೆ ತಲೆನೋವಾದ ಅತೃಪ್ತರ ಬಂಡಾಯ. ಕಾಂಗ್ರೆಸ್ ಅಂಗಳದಲ್ಲಿ ತಾರಕಕ್ಕೇರಿದ ಅಸಮಾಧಾನ: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕೈ ನಾಯಕರ ವಿರುದ್ಧ ತಿರುಗಿಬಿದ್ದ ಬೆಂಬಲಿಗರು, ಹೈಕಮಾಂಡ್‌ಗೆ ತಲೆನೋವಾದ ಅತೃಪ್ತರ ಬಂಡಾಯ.1
- ಕೊಳ್ಳೇಗಾಲ.= ಕಾಂಗ್ರೆಸ್ ಸರ್ಕಾರವು ನನಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ನೀಡಿದ್ದಾರೆ ಆದರೆ ಇನ್ನೂ ಕೂಡ ಯಾವ ಖಾತೆಯನ್ನು ನೀಡಿಲ್ಲ ಆದರೆ ಸರ್ಕಾರವು ಯಾವ ಖಾತೆಯನ್ನು ಕೊಟ್ಟರೆ ಅದನ್ನು ನಿಭಾಯಿಸುವ ಶಕ್ತಿ ನನ್ನಲ್ಲಿದೆ ಎಂದು ನೂತನ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ರವರು ತಿಳಿಸಿದರು. ಇಂದು ಕೊಳ್ಳೇಗಾಲ ಪಟ್ಟಣಕ್ಕೆ ನೂತನವಾಗಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ್ದ ಸಿ.ಪುಟ್ಟರಂಗಶೆಟ್ಟಿ ಅವರು ಕೊಳ್ಳೇಗಾಲ ಪಟ್ಟಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರವು ನನಗೆ ಯಾವ ಖಾತೆಯನ್ನು ಕೊಟ್ಟರೆ ಅದನ್ನು ನಮ್ಮ ಜಿಲ್ಲೆಯ ಶಾಸಕರುಗಳ ಗಮನಕ್ಕೆ ತಂದು ಅನಂತರ ಖಾತೆಯನ್ನು ಸ್ವೀಕರಿಸುತ್ತೇನೆ ಎಂದು ತಿಳಿಸಿದರು. ನನ್ನ ಗುರಿ ಕೊಳ್ಳೇಗಾಲ ಮತ್ತು ಚಾಮರಾಜನಗರ ಹಾಗೂ ಗುಂಡ್ಲುಪೇಟೆ ಈ ಮೂರು ತಾಲೂಕುಗಳನ್ನು ಅಭಿವೃದ್ಧಿ ಮಾಡುವುದೇ ನನ್ನ ಗುರಿಯಾಗಿದೆ ಏನೇ ಅಭಿವೃದ್ಧಿ ಮಾಡಬೇಕಾದರೆ ನಮ್ಮ ಜಿಲ್ಲೆಯ ಸಂಬಂಧಪಟ್ಟ ಶಾಸಕರುಗಳನ್ನು ಒಟ್ಗೂಡಿ ತೀರ್ಮಾನ ಮಾಡಿಕೊಂಡು ಅಭಿವೃದ್ದಿ ಮಾಡುವುದಕ್ಕೆ ಮುಂದಾಗುತ್ತೇನೆ ಎಂದು ತಿಳಿಸಿದರು . ಈ ವೇಳೆ ನೂತನ ಸಚಿವ ಪುಟ್ಟರಂಗಶೆಟ್ಟಿ ರವರಿಗೆ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಹಾರ ಶಾಲು ಹಾಕಿ ಸನ್ಮಾನಿಸಿ ಗೌರವಿಸಿ ಅಭಿನಂದಿಸಿದರು ನಂತರ ಮಾತನಾಡಿದ ಅವರು ನಾನು ಕೂಡ ಈ ಭಾಗದಲ್ಲಿ ಸಚಿವ ಸ್ಥಾನ ಸಿಗುತ್ತೆ ಎಂದು ನಿರೀಕ್ಷೆಯಲ್ಲಿದ್ದೆ ಆದರೆ ನನ್ನಲ್ಲಿ ಸಚಿವ ಸಂಪುಟದಲ್ಲಿ ನನಗೂ ಕೊಡಿ ಮತ್ತು ಪುಟ್ಟರಂಗಶೆಟ್ಟಿ ಅವರಿಗೆ ಕೂಡ ಕೊಡಿ ಎಂದು ಸಚಿವ ಸಂಪುಟದಲ್ಲಿ ಕೇಳಿಕೊಂಡಿದೆ ಆದರೆ ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ಭಾಗ್ಯ ಸಿಕ್ಕಿದೆ ಆದರೆ ಅವರಿಗೆ ಸಿಕ್ಕಿರುವುದು ನಮ್ಮ ಜಿಲ್ಲೆಗೆ ಒಂದು ಭಾಗ್ಯ ಎಂದು ಶಾಸಕರಾದ ಎ. ಆರ್ ಕೃಷ್ಣ ಮೂರ್ತಿ ರವರು ತಿಳಿಸಿದರು. ಈ ಸಂದರ್ಭದಲ್ಲಿ ಚಾಮುಲ್ ಅಧ್ಯಕ್ಷರು ನಂಜುಂಡಸ್ವಾಮಿ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ರಾಜೇಂದ್ರ, ಉಪ್ಪಾರ ನಿಗಮ ಮಾಜಿ ಅಧ್ಯಕ್ಷರು ಮಧುವನಹಳ್ಳಿ ಶಿವಕುಮಾರ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ತೋಟೇಶ್, ಕಾರ್ಯದರ್ಶಿ ಬಸ್ತೀಪುರ ರವಿ, ಜಿ.ಪಂ ಮಾಜಿ ಸದಸ್ಯರು ಕೊಪ್ಪಾಳಿ ಮಹದೇವನಾಯಕ, ಹನೂರು ಬ್ಲಾಕ್ ಅಧ್ಯಕ್ಷರು ಮುಕುಂದವರ್ಮ, ಉಪ್ಪಾರ ಸಂಘ ಅಧ್ಯಕ್ಷ ರಮೇಶ್, ಲೋಕೇಶ್ ನಂಜುಂಡಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷರು ರೇಖಾ ರಮೇಶ್, ಬಸ್ತೀಪುರ ಶಾಂತರಾಜು, ಮಲ್ಲಿಕಾರ್ಜುನ, ಮಾಜಿ ಸದಸ್ಯರು ಮುಡಿಗುಂಡ ಶಾಂತರಾಜು ಧರಣೇಶ್, ಸುಮಾಸುಬ್ಬಣ್ಣ, ಅಂಬೇಡ್ಕರ್ ಸಂಘದ ಅಧ್ಯಕ್ಷ ಆನಂದಮೂರ್ತಿ, ಮುಖಂಡರು ಶೇಖರ್ ಬುದ್ದ ಹಾಗೂ ಇತರರು ಇದ್ದರು.2
- ಲಿಂಕ್ ಕೆನಾಲ್ ಕಾಮಗಾರಿ ಬಿಡುವ ಪ್ರಶ್ನೆಯೇ ಇಲ್ಲ ಮಾಡಿಯೇ ತೀರುತ್ತೇವೆ ನೂತನ ಸಚಿವ ಹೆಚ್ ಸಿ ಬಾಲಕೃಷ್ಣ ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿಯ ಜೋಡಿ ಹೊಸಳ್ಳಿ ಗ್ರಾಮದ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿದ ನೂತನ ಸಚಿವರಾದ ಹೆಚ್ ಸಿ ಬಾಲಕೃಷ್ಣ , ಶಾಸಕ ಡಾಕ್ಟರ್ ಎಚ್ ಡಿ ರಂಗನಾಥ್, ಯಾವುದೆ ಖಾತೆ ಕೊಟ್ಟರು ನಿಭಾಯಿಸುವೆ ಎಂದು ನೂತನ ಸಚಿವ ಹೆಚ್.ಸಿ ಬಾಲಕೃಷ್ಣ ತಿಳಿಸಿದರು. ಲಿಂಕ್ ಕೆನಾಲ್ ಯೋಜನೆಯ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.1
- ಹೊನ್ನೂರು ಗ್ರಾಮದಲ್ಲಿ ಶ್ರೀ ಚಾಮುಂಡೇಶ್ವರಿಗೆ ವಿಶೇಷ ಪೂಜಾ ಆಷಾಡ ಮಂಗಳವಾರ ಹಿನ್ನೆಲೆಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ತಾಯಿಗೆ ವಿಶೇಷ ಅಲಂಕಾರ ವಿಶೇಷ ಪೂಜೆ ಹೊನ್ನೂರು ಗ್ರಾಮದಲ್ಲಿ ಶ್ರೀ ಚಾಮುಂಡೇಶ್ವರಿಗೆ ವಿಶೇಷ ಪೂಜಾ ಆಷಾಡ ಮಂಗಳವಾರ ಹಿನ್ನೆಲೆಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ತಾಯಿಗೆ ವಿಶೇಷ ಅಲಂಕಾರ ವಿಶೇಷ ಪೂಜೆ ಮಾಡಲಾಗಿತ್ತು ಯಳಂದೂರು :ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಆಷಾಡ ಮಂಗಳವಾರ ಚಾಮುಂಡೇಶ್ವರಿ ಹುಟ್ಟುಹಬ್ಬದ ಹಿನ್ನ್ನೆಲೆಯಲ್ಲಿ ಶ್ರೀ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜಾ ಕಾರ್ಯಕ್ರಮ ಜರುಗಿದವು. ಮುಂಜಾನೆ ದೇವಿಗೆ ವಿಶೇಷ ದ್ರವ್ಯ ಅಭಿಷೇಕ, ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು, ಬಳಿಕ ದೇವಾಲಯದ ಪ್ರಧಾನ ಅರ್ಚಕರಾದ ಶಿವಕುಮಾರ್ ದೀಕ್ಷಿತ್, ಮಂಜುನಾಥ್ ವಿಶೇ ಷ ಪೂಜಾ ಕೈಕಂರ್ಯಗಳು ನೆರವೇರಸಿ . ಬಳಿಕ ಮಹಾಮಂಗಳಾರತಿ ಜರುಗಿತು. ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿನಿಯೋಗ ನೇರವೇರಿತು. ಈ ವೇಳೆ ಮಹಿಳೆಯರು ತಾಯಿ ಚಾಮುಂಡೇಶ್ವರಿಗೆ ನಿಂಬೆಹಣ್ಣಿನ ಆರತಿ ಬೆಳಗಿದರು. ಆಷಾಡ ಮಂಗಳವಾರ ಅಂಗವಾಗಿ ದೇವಾಲಯದಲ್ಲಿ ಸಂಭ್ರಮದಲ್ಲಿ ಕ್ಷೇತ್ರದ ಶಾಸಕ ಎ ಆರ್. ಕೃಷ್ಣಮೂರ್ತಿ ಜಿಲ್ಲಾ ಗ್ಯಾರಂಟಿ ಯೋಜನೆ ಜಿಲ್ಲಾ ಅಧ್ಯಕ್ಷ ಚಂದ್ರು ದೇವಾಲಯಕ್ಕೆ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯಕ್ಕೆ ಅಸಂಖ್ಯಾತ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. . ಈ ಸಂದರ್ಭದಲ್ಲಿ ಗ್ರಾಮದ ಗೌಡರಾದ ಮಹದೇವಸ್ವಾಮಿ ಗೌಡರು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಿರಂಜನ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಗಳಾದ, ಗುರುಪ್ರಸಾದ್ ಮಹಾದೇವಸ್ವಾಮಿ, ಸಿದ್ದಪ್ಪ ಸ್ವಾಮಿ ಆರ್ ಪುಟ್ಟ ಬಸವಯ್ಯ, ಮುಖಂಡರಾದ ಬಿ ರೇವಣ್ಣ, ಹೆಚ್ ಸಿ ಸೋಮಣ್ಣ , ಗುರು ಮಲ್ಲೇಶ್, ಸಿದ್ದಶೆಟ್ಟಿ, ನಾಗರಾಜ್ ಶೆಟ್ಟಿ, ಸೇರಿದಂತೆ ಗ್ರಾಮದ ಎಲ್ಲಾ ವರ್ಗದ ಮುಖಂಡರು ಸಾರ್ವಜನಿಕರು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು ಯಳಂದೂರು2
- *ವಿಬಿ-ಜಿ ರಾಮ್ ಜಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಅನುಷ್ಠಾನ ಇಲಾಖೆಗಳೊಂದಿಗೆ ಸಮನ್ವಯ ಸಭೆ* ಮಂಡ್ಯ, ಆಗಸ್ಟ್ 3: ಪ್ರಸಕ್ತ ಸಾಲಿನಲ್ಲಿ ವಿಕಸಿತ ಭಾರತ್ – ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ) [VB-G RAM G] ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಅನುಷ್ಠಾನ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು CEO ನಂದಿನಿ ಅಧಿಕಾರಿಗಳಿಗೆ ಸೂಚಿಸಿದರು. ಸೋಮವಾರ ಜಿಲ್ಲಾ ಪಂಚಾಯತ್‌ನ ಕೆಸ್ವಾನ್ ಸಭಾಂಗಣದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಕ್ರಿಯಾ ಯೋಜನೆ ಸಿದ್ಧಪಡಿಸುವ ಕುರಿತು ನಡೆದ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಕೃಷಿ, ಅರಣ್ಯ ಇಲಾಖೆ ಸೇರಿದಂತೆ ಎಲ್ಲಾ ಅನುಷ್ಠಾನ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ವಿಶೇಷವಾಗಿ ಜಲ ಸಂರಕ್ಷಣೆ (Water Conservation) ಹಾಗೂ ಮಣ್ಣಿನ ತೇವಾಂಶ ಸಂರಕ್ಷಣೆ (Soil Moisture Conservation) ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿ, ರೈತರಿಗೆ ದೀರ್ಘಾವಧಿಯಲ್ಲಿ ಅನುಕೂಲವಾಗುವ ಶಾಶ್ವತ ಆಸ್ತಿಗಳ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಅವರು ತಿಳಿಸಿದರು. ಇಲಾಖಾವಾರು ಕ್ರಿಯಾ ಯೋಜನೆ ಸಿದ್ಧಪಡಿಸಲು ಸೂಚನೆ: ಎಲ್ಲಾ ಇಲಾಖೆಗಳ ಅಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಇಲಾಖಾವಾರು ಹಾಗೂ ಗ್ರಾಮ ಪಂಚಾಯಿತಿವಾರು ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಬೇಕು. ಹಿಂದಿನ ಮಾದರಿ ಅಂದಾಜುಪಟ್ಟಿಗಳ ಆಧಾರದ ಮೇಲೆ ಎಸ್ಟಿಮೇಟ್ ತಯಾರಿಸಿ, ಜಿಲ್ಲಾ ಡಿಪಿಸಿ (District Planning Cell) ಲಾಗಿನ್ ಮೂಲಕ ಅನುಮೋದನೆ ಪಡೆದು, ನಂತರ ಹೊಸ ವಿಬಿ-ಜಿ ರಾಮ್ ಜಿ ಸಾಫ್ಟ್‌ವೇರ್‌ನಲ್ಲಿ ಅಪ್‌ಲೋಡ್ ಮಾಡಿ ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸುವಂತೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ (ಅಭಿವೃದ್ಧಿ) ಲಕ್ಷ್ಮಿ ಪಿ., ಜಿಲ್ಲಾ ಮಟ್ಟದ ಇಲಾಖಾಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿವಿಧ ಇಲಾಖೆಗಳ ಸಹಾಯಕ ನಿರ್ದೇಶಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.1