logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕಾಂಗ್ರೆಸ್ ಅಂಗಳದಲ್ಲಿ ತಾರಕಕ್ಕೇರಿದ ಅಸಮಾಧಾನ: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕೈ ನಾಯಕರ ವಿರುದ್ಧ ತಿರುಗಿಬಿದ್ದ ಬೆಂಬಲಿಗರು, ಹೈಕಮಾಂಡ್‌ಗೆ ತಲೆನೋವಾದ ಅತೃಪ್ತರ ಬಂಡಾಯ. ಕಾಂಗ್ರೆಸ್ ಅಂಗಳದಲ್ಲಿ ತಾರಕಕ್ಕೇರಿದ ಅಸಮಾಧಾನ: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕೈ ನಾಯಕರ ವಿರುದ್ಧ ತಿರುಗಿಬಿದ್ದ ಬೆಂಬಲಿಗರು, ಹೈಕಮಾಂಡ್‌ಗೆ ತಲೆನೋವಾದ ಅತೃಪ್ತರ ಬಂಡಾಯ.

2 hrs ago
user_ಸೈಯದ್ ಅತೀಕ್
ಸೈಯದ್ ಅತೀಕ್
Furniture Manufacturer ಮೈಸೂರು, ಮೈಸೂರು, ಕರ್ನಾಟಕ•
2 hrs ago

ಕಾಂಗ್ರೆಸ್ ಅಂಗಳದಲ್ಲಿ ತಾರಕಕ್ಕೇರಿದ ಅಸಮಾಧಾನ: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕೈ ನಾಯಕರ ವಿರುದ್ಧ ತಿರುಗಿಬಿದ್ದ ಬೆಂಬಲಿಗರು, ಹೈಕಮಾಂಡ್‌ಗೆ ತಲೆನೋವಾದ ಅತೃಪ್ತರ ಬಂಡಾಯ. ಕಾಂಗ್ರೆಸ್ ಅಂಗಳದಲ್ಲಿ ತಾರಕಕ್ಕೇರಿದ ಅಸಮಾಧಾನ: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕೈ ನಾಯಕರ ವಿರುದ್ಧ ತಿರುಗಿಬಿದ್ದ ಬೆಂಬಲಿಗರು, ಹೈಕಮಾಂಡ್‌ಗೆ ತಲೆನೋವಾದ ಅತೃಪ್ತರ ಬಂಡಾಯ.

More news from ಕರ್ನಾಟಕ and nearby areas
  • *ವಿಬಿ-ಜಿ ರಾಮ್‌ ಜಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಅನುಷ್ಠಾನ ಇಲಾಖೆಗಳೊಂದಿಗೆ ಸಮನ್ವಯ ಸಭೆ* ಮಂಡ್ಯ, ಆಗಸ್ಟ್ 3: ಪ್ರಸಕ್ತ ಸಾಲಿನಲ್ಲಿ ವಿಕಸಿತ ಭಾರತ್ – ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ) [VB-G RAM G] ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಅನುಷ್ಠಾನ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು CEO ನಂದಿನಿ ಅಧಿಕಾರಿಗಳಿಗೆ ಸೂಚಿಸಿದರು. ಸೋಮವಾರ ಜಿಲ್ಲಾ ಪಂಚಾಯತ್‌ನ ಕೆಸ್ವಾನ್ ಸಭಾಂಗಣದಲ್ಲಿ ವಿಬಿ-ಜಿ ರಾಮ್‌ ಜಿ ಯೋಜನೆಯಡಿ ಕ್ರಿಯಾ ಯೋಜನೆ ಸಿದ್ಧಪಡಿಸುವ ಕುರಿತು ನಡೆದ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಕೃಷಿ, ಅರಣ್ಯ ಇಲಾಖೆ ಸೇರಿದಂತೆ ಎಲ್ಲಾ ಅನುಷ್ಠಾನ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ವಿಶೇಷವಾಗಿ ಜಲ ಸಂರಕ್ಷಣೆ (Water Conservation) ಹಾಗೂ ಮಣ್ಣಿನ ತೇವಾಂಶ ಸಂರಕ್ಷಣೆ (Soil Moisture Conservation) ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿ, ರೈತರಿಗೆ ದೀರ್ಘಾವಧಿಯಲ್ಲಿ ಅನುಕೂಲವಾಗುವ ಶಾಶ್ವತ ಆಸ್ತಿಗಳ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಅವರು ತಿಳಿಸಿದರು. ಇಲಾಖಾವಾರು ಕ್ರಿಯಾ ಯೋಜನೆ ಸಿದ್ಧಪಡಿಸಲು ಸೂಚನೆ: ಎಲ್ಲಾ ಇಲಾಖೆಗಳ ಅಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಇಲಾಖಾವಾರು ಹಾಗೂ ಗ್ರಾಮ ಪಂಚಾಯಿತಿವಾರು ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಬೇಕು. ಹಿಂದಿನ ಮಾದರಿ ಅಂದಾಜುಪಟ್ಟಿಗಳ ಆಧಾರದ ಮೇಲೆ ಎಸ್ಟಿಮೇಟ್ ತಯಾರಿಸಿ, ಜಿಲ್ಲಾ ಡಿಪಿಸಿ (District Planning Cell) ಲಾಗಿನ್ ಮೂಲಕ ಅನುಮೋದನೆ ಪಡೆದು, ನಂತರ ಹೊಸ ವಿಬಿ-ಜಿ ರಾಮ್‌ ಜಿ ಸಾಫ್ಟ್‌ವೇರ್‌ನಲ್ಲಿ ಅಪ್‌ಲೋಡ್ ಮಾಡಿ ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸುವಂತೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ (ಅಭಿವೃದ್ಧಿ) ಲಕ್ಷ್ಮಿ ಪಿ., ಜಿಲ್ಲಾ ಮಟ್ಟದ ಇಲಾಖಾಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿವಿಧ ಇಲಾಖೆಗಳ ಸಹಾಯಕ ನಿರ್ದೇಶಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
    1
    *ವಿಬಿ-ಜಿ ರಾಮ್‌ ಜಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಅನುಷ್ಠಾನ ಇಲಾಖೆಗಳೊಂದಿಗೆ ಸಮನ್ವಯ ಸಭೆ*
ಮಂಡ್ಯ, ಆಗಸ್ಟ್ 3: ಪ್ರಸಕ್ತ ಸಾಲಿನಲ್ಲಿ ವಿಕಸಿತ ಭಾರತ್ – ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ) [VB-G RAM G] ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಅನುಷ್ಠಾನ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು CEO ನಂದಿನಿ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ಜಿಲ್ಲಾ ಪಂಚಾಯತ್‌ನ ಕೆಸ್ವಾನ್ ಸಭಾಂಗಣದಲ್ಲಿ ವಿಬಿ-ಜಿ ರಾಮ್‌ ಜಿ ಯೋಜನೆಯಡಿ ಕ್ರಿಯಾ ಯೋಜನೆ ಸಿದ್ಧಪಡಿಸುವ ಕುರಿತು ನಡೆದ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಕೃಷಿ, ಅರಣ್ಯ ಇಲಾಖೆ ಸೇರಿದಂತೆ ಎಲ್ಲಾ ಅನುಷ್ಠಾನ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ವಿಶೇಷವಾಗಿ ಜಲ ಸಂರಕ್ಷಣೆ (Water Conservation) ಹಾಗೂ ಮಣ್ಣಿನ ತೇವಾಂಶ ಸಂರಕ್ಷಣೆ (Soil Moisture Conservation) ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿ, ರೈತರಿಗೆ ದೀರ್ಘಾವಧಿಯಲ್ಲಿ ಅನುಕೂಲವಾಗುವ ಶಾಶ್ವತ ಆಸ್ತಿಗಳ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಅವರು ತಿಳಿಸಿದರು.
ಇಲಾಖಾವಾರು ಕ್ರಿಯಾ ಯೋಜನೆ ಸಿದ್ಧಪಡಿಸಲು ಸೂಚನೆ: ಎಲ್ಲಾ ಇಲಾಖೆಗಳ ಅಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಇಲಾಖಾವಾರು ಹಾಗೂ ಗ್ರಾಮ ಪಂಚಾಯಿತಿವಾರು ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಬೇಕು. ಹಿಂದಿನ ಮಾದರಿ ಅಂದಾಜುಪಟ್ಟಿಗಳ ಆಧಾರದ ಮೇಲೆ ಎಸ್ಟಿಮೇಟ್ ತಯಾರಿಸಿ, ಜಿಲ್ಲಾ ಡಿಪಿಸಿ (District Planning Cell) ಲಾಗಿನ್ ಮೂಲಕ ಅನುಮೋದನೆ ಪಡೆದು, ನಂತರ ಹೊಸ ವಿಬಿ-ಜಿ ರಾಮ್‌ ಜಿ ಸಾಫ್ಟ್‌ವೇರ್‌ನಲ್ಲಿ ಅಪ್‌ಲೋಡ್ ಮಾಡಿ ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ (ಅಭಿವೃದ್ಧಿ) ಲಕ್ಷ್ಮಿ ಪಿ., ಜಿಲ್ಲಾ ಮಟ್ಟದ ಇಲಾಖಾಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿವಿಧ ಇಲಾಖೆಗಳ ಸಹಾಯಕ ನಿರ್ದೇಶಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    7 hrs ago
  • ಮಳವಳ್ಳಿ:ಆಗಸ್ಟ್.15 ರಂದು ಬೃಹತ್ ರಕ್ತದಾನ ಶಿಬಿರ-ಪ್ರಚಾರ ರಥಕ್ಕೆ ವಿದ್ಯುಕ್ತ ಚಾಲನೆ ಮಳವಳ್ಳಿ:ಆಗಸ್ಟ್.೧೫ ರಂದು ಬೃಹತ್ ರಕ್ತದಾನ ಶಿಬಿರ-ಪ್ರಚಾರ ರಥಕ್ಕೆ ವಿದ್ಯುಕ್ತ ಚಾಲನೆ • ರಕ್ತದಾನ ಮಹಾದಾನ-ರಕ್ತದಾನ ಮಾಡೋಣ ಜೀವ ಉಳಿಸೋಣ-ಸರ್ಕಾರಿ ವಕೀಲ ಎಂ.ಎಸ್.ಶ್ರೀಕAಠಸ್ವಾಮಿ ಕರೆ ಮಳವಳ್ಳಿಯಲ್ಲಿ ಆಗಸ್ಟ್ ೧೫ ರಂದು ಗಡಿ ಕಾಯುವ ಯೋಧರ ಹಾಗೂ ಅನ್ನ ನೀಡುವ ರೈತರ ಸ್ಮರಣಾರ್ಥ ಯುವಕ ಮಿತ್ರರ ತಂಡ ಹಮ್ಮಿಕೊಂಡಿರುವ ಬೃಹತ್ ರಕ್ತದಾನ ಶಿಬಿರದ ಪ್ರಚಾರ ರಥಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀ ಗಂಗಾಧರೇಶ್ವರಸ್ವಾಮಿ ದೇವಸ್ಥಾನದ ಅವರಣದಲ್ಲಿ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕಿನ ಪ್ರತಿ ಹಳ್ಳಿ ಹಳ್ಳಿಯಲ್ಲೂ ಸಂಚಾರ ನಡೆಸಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲು ವಿಶೇಷವಾಗಿ ಸಿದ್ದಗೊಳಿಸಿರುವ ಪ್ರಚಾರ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ರೈತ ಮುಖಂಡರು,ಮಳವಳ್ಳಿ ಯುವಕ ತಂಡದ ಸ್ವಯಂ ಸೇವಕರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಪರ ಸರ್ಕಾರಿ ವಕೀಲ ಎಂ.ಎಸ್.ಶ್ರೀಕAಠಸ್ವಾಮಿ ಮಾತನಾಡಿ, ಇದೊಂದು ಮಾನವೀಯತೆಯ ನೆಲೆಯಲ್ಲಿ ನಡೆಯುತ್ತಿರುವ ಬೃಹತ್ ರಕ್ತದಾನ ಶಿಬಿರವಾಗಿದೆ.ರಕ್ತದಾನ ಮಾಡುವುದರಿಂದ ಇನ್ನೊಂದು ಜೀವ ಉಳಿಸಿದ ಪುಣ್ಯ ರಕ್ತದಾನಿಗೆ ಸಿಗಲಿದೆ,ರಕ್ತದಾನದಿಂದ ಅವರ ಅರೋಗ್ಯ ಉತ್ತಮವಾಗಲಿದೆ,ಜನರು ಯಾವುದೆ ಅತಂಕ ವಿಲ್ಲದೆ ನಿರ್ಭಿತಿಯಿಂದ ರಕ್ತದಾನ ಮಾಡುವ ಮೂಲಕ ಆ.೧೫ ರ ೨೬ ಗಮಟೆಗಳ ನಿರಂತರ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸುವಂತೆ ಹಾಗೂ ೨೦೨೬ ಕ್ಕೂ ಹೆಚ್ಚು ಜನರು ದಾಖಲೆ ರಕ್ತದಾನ ಮಾಡುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಾಣಕ್ಕೆ ಎಲ್ಲರೂ ಕಂಕಣಬದ್ದರಾಗೋಣವೆAದರು. ಈ ಸಮದರ್ಭದಲ್ಲಿ ಮಳವಳ್ಳಿ ತಂಡದ ನೂರಾರು ಸ್ವಯಂ ಸೇವಕರು,ರೈತರು,ಸಮಾಜ ಸೇವಕರು,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬಾಗವಹಿಸಿದ್ದರು.
    1
    ಮಳವಳ್ಳಿ:ಆಗಸ್ಟ್.15 ರಂದು ಬೃಹತ್ ರಕ್ತದಾನ ಶಿಬಿರ-ಪ್ರಚಾರ ರಥಕ್ಕೆ ವಿದ್ಯುಕ್ತ ಚಾಲನೆ
ಮಳವಳ್ಳಿ:ಆಗಸ್ಟ್.೧೫ ರಂದು ಬೃಹತ್ ರಕ್ತದಾನ ಶಿಬಿರ-ಪ್ರಚಾರ ರಥಕ್ಕೆ ವಿದ್ಯುಕ್ತ ಚಾಲನೆ
•	ರಕ್ತದಾನ ಮಹಾದಾನ-ರಕ್ತದಾನ ಮಾಡೋಣ ಜೀವ ಉಳಿಸೋಣ-ಸರ್ಕಾರಿ ವಕೀಲ ಎಂ.ಎಸ್.ಶ್ರೀಕAಠಸ್ವಾಮಿ ಕರೆ
ಮಳವಳ್ಳಿಯಲ್ಲಿ ಆಗಸ್ಟ್ ೧೫ ರಂದು ಗಡಿ ಕಾಯುವ ಯೋಧರ ಹಾಗೂ ಅನ್ನ ನೀಡುವ ರೈತರ ಸ್ಮರಣಾರ್ಥ ಯುವಕ ಮಿತ್ರರ ತಂಡ ಹಮ್ಮಿಕೊಂಡಿರುವ ಬೃಹತ್ ರಕ್ತದಾನ ಶಿಬಿರದ ಪ್ರಚಾರ ರಥಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀ ಗಂಗಾಧರೇಶ್ವರಸ್ವಾಮಿ ದೇವಸ್ಥಾನದ ಅವರಣದಲ್ಲಿ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ  ತಾಲೂಕಿನ ಪ್ರತಿ ಹಳ್ಳಿ ಹಳ್ಳಿಯಲ್ಲೂ ಸಂಚಾರ ನಡೆಸಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲು ವಿಶೇಷವಾಗಿ ಸಿದ್ದಗೊಳಿಸಿರುವ ಪ್ರಚಾರ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ  ರೈತ ಮುಖಂಡರು,ಮಳವಳ್ಳಿ ಯುವಕ ತಂಡದ ಸ್ವಯಂ ಸೇವಕರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ  ಅಪರ ಸರ್ಕಾರಿ ವಕೀಲ ಎಂ.ಎಸ್.ಶ್ರೀಕAಠಸ್ವಾಮಿ ಮಾತನಾಡಿ, ಇದೊಂದು ಮಾನವೀಯತೆಯ ನೆಲೆಯಲ್ಲಿ ನಡೆಯುತ್ತಿರುವ ಬೃಹತ್ ರಕ್ತದಾನ ಶಿಬಿರವಾಗಿದೆ.ರಕ್ತದಾನ ಮಾಡುವುದರಿಂದ ಇನ್ನೊಂದು ಜೀವ ಉಳಿಸಿದ ಪುಣ್ಯ ರಕ್ತದಾನಿಗೆ ಸಿಗಲಿದೆ,ರಕ್ತದಾನದಿಂದ ಅವರ ಅರೋಗ್ಯ ಉತ್ತಮವಾಗಲಿದೆ,ಜನರು ಯಾವುದೆ ಅತಂಕ ವಿಲ್ಲದೆ ನಿರ್ಭಿತಿಯಿಂದ ರಕ್ತದಾನ ಮಾಡುವ ಮೂಲಕ ಆ.೧೫ ರ ೨೬ ಗಮಟೆಗಳ ನಿರಂತರ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸುವಂತೆ ಹಾಗೂ ೨೦೨೬ ಕ್ಕೂ ಹೆಚ್ಚು ಜನರು ದಾಖಲೆ ರಕ್ತದಾನ ಮಾಡುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಾಣಕ್ಕೆ ಎಲ್ಲರೂ ಕಂಕಣಬದ್ದರಾಗೋಣವೆAದರು.
ಈ ಸಮದರ್ಭದಲ್ಲಿ ಮಳವಳ್ಳಿ ತಂಡದ ನೂರಾರು ಸ್ವಯಂ ಸೇವಕರು,ರೈತರು,ಸಮಾಜ ಸೇವಕರು,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬಾಗವಹಿಸಿದ್ದರು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    8 hrs ago
  • ಚಾಮರಾಜನಗರದಲ್ಲಿ ನೂತನ ಸಚಿವ ರಾದ ಪುಟ್ಟರಂಗಶೆಟ್ಟಿ ಅಭಿಮಾನಿಗಳ ಹರ್ಷ ಸತತ ನಾಲ್ಕು ಬಾರಿ ಶಾಸಕರಾದ ಶ್ರೀ ಪುಟ್ಟರಂಗಶೆಟ್ಟಿ ರವರಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕ್ಯಾಬಿನೆಟ್ ನಲ್ಲಿ ನೂತನ ಸಚಿವ ರಾಗಿ ಆಯ್ಕೆ ಮಾಡಿದ್ದಕ್ಕೆ ಅವರ ಅಭಿಮಾನಿ ಬಳಗ ತುಂಬಾ ಸಂತೋಷ ವ್ಯಕ್ತಪಡಿಸಿದರು. ನೂತನ ಸಚಿವ ಮಾಡಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ರವರಿಗೆ ವಿಶೇಷ ಧನ್ಯವಾದ ತಿಳಿಸಿದರು. ಈ ಸಂದರ್ಭದಲ್ಲಿ ನಲ್ಲೂರು ಮಹದೇವಸ್ವಾಮಿ ಮತ್ತು ರಾಮಸಮುದ್ರ ನಾಗ್ ರವರು ಮತ್ತು ಅಕ್ಷಯ್ ಕುಮಾರ್ ಮತ್ತು ಚಂದಕವಾಡಿ ಸಿದ್ದಪ್ಪಾಜಿ ಸಹ ಭಾಗವಹಿಸಿದರು.
    1
    ಚಾಮರಾಜನಗರದಲ್ಲಿ  ನೂತನ ಸಚಿವ ರಾದ ಪುಟ್ಟರಂಗಶೆಟ್ಟಿ ಅಭಿಮಾನಿಗಳ ಹರ್ಷ 
ಸತತ ನಾಲ್ಕು ಬಾರಿ ಶಾಸಕರಾದ ಶ್ರೀ ಪುಟ್ಟರಂಗಶೆಟ್ಟಿ ರವರಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕ್ಯಾಬಿನೆಟ್ ನಲ್ಲಿ ನೂತನ ಸಚಿವ ರಾಗಿ ಆಯ್ಕೆ ಮಾಡಿದ್ದಕ್ಕೆ ಅವರ ಅಭಿಮಾನಿ ಬಳಗ ತುಂಬಾ ಸಂತೋಷ ವ್ಯಕ್ತಪಡಿಸಿದರು. ನೂತನ ಸಚಿವ ಮಾಡಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ರವರಿಗೆ ವಿಶೇಷ ಧನ್ಯವಾದ ತಿಳಿಸಿದರು. ಈ ಸಂದರ್ಭದಲ್ಲಿ ನಲ್ಲೂರು ಮಹದೇವಸ್ವಾಮಿ ಮತ್ತು ರಾಮಸಮುದ್ರ ನಾಗ್ ರವರು ಮತ್ತು ಅಕ್ಷಯ್ ಕುಮಾರ್ ಮತ್ತು ಚಂದಕವಾಡಿ ಸಿದ್ದಪ್ಪಾಜಿ ಸಹ ಭಾಗವಹಿಸಿದರು.
    user_ಶಿವಕುಮಾರ ಬಿ
    ಶಿವಕುಮಾರ ಬಿ
    Pharmacist ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    19 hrs ago
  • ತಾಲ್ಲೂಕಿನ  ಹೇಮಾವತಿ ನಾಲೆಗಳಲ್ಲಿ ನೀರು ಹರಿಸಲು ಒತ್ತಾಯಿಸಿ ಎನ್.ಡಿ.ಎ ಮೈತ್ರಿಕೂಟದ ಬೃಹತ್ ಪ್ರತಿಭಟನೆ  ತುರುವೇಕೆರೆ, ಆಗಸ್ಟ್ 4: ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು ಈ ವರ್ಷ ತೀವ್ರ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕ್ಷೇತ್ರದಲ್ಲಿ ಕೇವಲ ಶೇಕಡಾ 30ರಷ್ಟು ಮಾತ್ರ ಮಳೆಯಾಗಿದ್ದು, ರೈತರು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಬೋರ್‌ವೆಲ್‌ಗಳು ಒಣಗಿ ಹೋಗಿದ್ದು, ಅಡಿಕೆ ಹಾಗೂ ತೆಂಗಿನ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಜಾನುವಾರುಗಳಿಗೆ ಮೇವು ಬೆಳೆಯಲು ಸಹ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಹೇಮಾವತಿ ನಾಲೆಯಿಂದ ನೀರನ್ನು ಹರಿಸಿ ಕ್ಷೇತ್ರದ ಕೆರೆಗಳನ್ನು ತುಂಬಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಜೆ.ಡಿ.ಎಸ್.–ಬಿಜೆಪಿ ಎನ್.ಡಿ.ಎ ಮೈತ್ರಿಕೂಟವು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪನವರು ಕ್ಷೇತ್ರದಲ್ಲಿ ಕೇವಲ ಶೇಕಡಾ 30ರಷ್ಟು ಮಾತ್ರ ಮಳೆಯಾಗಿದ್ದು, ಯಾವುದೇ ರೈತರು ಬಿತ್ತನೆ ಮಾಡಿಲ್ಲ ಎಂದು ತಿಳಿಸಿದರು. ತುರುವೇಕೆರೆಯು ಬರಗಾಲ ಪೀಡಿತ ಪ್ರದೇಶವಾಗಿದೆ. ಕ್ಷೇತ್ರದ ಅನೇಕ ರೈತರ ಬೋರ್‌ವೆಲ್‌ಗಳು ಒಣಗಿ ಹೋಗಿದ್ದು, ಅಡಿಕೆ ಹಾಗೂ ತೆಂಗಿನ ಬೆಳೆಗಳು ಒಣಗುತ್ತಿವೆ. ಜಾನುವಾರುಗಳಿಗೆ ಮೇವು ಬೆಳೆಯಲು ಸಹ ನೀರಿಲ್ಲದಂತಾಗಿದೆ. ರೈತರು ತೀವ್ರ ಸಂಕಷ್ಟಕ್ಕೆ ಒಳಪಟ್ಟಿದ್ದಾರೆ ಎಂದರು.ಟಿ.ಬಿ.ಸಿ. ಚಾನೆಲ್‌ಗೆ ಲಿಂಕ್ ಕೆನಾಲ್ ಕಾಮಗಾರಿಯನ್ನು ಅನುಷ್ಠಾನಕ್ಕೆ ಹೊರಟಿರುವುದು ಖಂಡನೀಯ ಎಂದು ಹೇಳಿದ ಅವರು, ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಕೈಗೊಳ್ಳಬಾರದು ಎಂದು ಒತ್ತಾಯಿಸಿದರು. ಸರ್ಕಾರ ತಕ್ಷಣ ಬರಗಾಲ ಎಂದು ಘೋಷಣೆ ಮಾಡಬೇಕು. ತಾಲೂಕಿನ ರೈತರು ಅಡಿಕೆ ಹಾಗೂ ತೆಂಗನ್ನು ನೆಚ್ಚಿಕೊಂಡಿದ್ದಾರೆ. ಕ್ಷೇತ್ರದಲ್ಲಿರುವ ಕೆರೆಗಳನ್ನು ಕೂಡಲೇ ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಲಿಂಕ್ ಕೆನಾಲ್ ಯೋಜನೆಯನ್ನು ಹಿಂದೆ ಯಡಿಯೂರಪ್ಪನವರು ಕ್ಯಾಬಿನೆಟ್‌ನಲ್ಲಿ ರದ್ದು ಮಾಡಿದ್ದರು. ಕುಣಿಗಲ್‌ಗೆ ನಾಲೆಯನ್ನು ಅಗಲೀಕರಣ ಮಾಡಿ ನೀರು ಹರಿಸುವ ಬದಲು, ಅದನ್ನು ಬಿಟ್ಟು ರಾಮನಗರಕ್ಕೆ ನೀರನ್ನು ಹರಿಸಲು ಲಿಂಕ್ ಯೋಜನೆಯನ್ನು ಕೈಗೆತ್ತಿಕೊಂಡಿದ್ದೀರಿ. ಈ ಯೋಜನೆಯನ್ನು ನಾವು ಮಾಡಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿಕಟಪೂರ್ವ ಶಾಸಕ ಮಸಾಲ ಜೈರಾಮ್ ಮಾತನಾಡಿ, ಕ್ಷೇತ್ರದ ಕೆರೆ, ಬಾವಿ, ಕಟ್ಟೆಗಳೆಲ್ಲವೂ ಬರಿದಾಗಿದ್ದು, ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೂ ಸಹ ತೊಂದರೆಯಾಗಿದೆ ಎಂದರು. ಈ ಸರ್ಕಾರ ರೈತರಿಗೆ ಆತ್ಮಹತ್ಯೆಯ ಭಾಗ್ಯವನ್ನು ನೀಡಿದೆ ಎಂದು ಟೀಕಿಸಿದರು. ನಮ್ಮ ಸರ್ಕಾರದಲ್ಲಿ ಗೋಶಾಲೆಗಳನ್ನು ತೆರೆದಿದ್ದೆವು, ಅದನ್ನು ಈ ಸರ್ಕಾರ ಮುಚ್ಚಿದೆ. ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಬರಗಾಲ ಬಂದಿರುವುದರಿಂದ ಕೂಡಲೇ ಗೋಶಾಲೆಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.ಹೇಮಾವತಿ ಡ್ಯಾಂನಲ್ಲಿ ಈಗಾಗಲೇ 25 ಟಿ.ಎಂ.ಸಿ. ನೀರು ಕ್ರೂಢೀಕರಣವಾಗಿದೆ. ಕೊನೆಪಕ್ಷ ಕ್ಷೇತ್ರದ ಕೆರೆಗಳಿಗೆ ನೀರು ಬಿಡಲು ಸರ್ಕಾರ ಕ್ರಮ ಕೈಗೊಳ್ಳದೇ ಇರುವುದರಿಂದ, ದಿನಾಂಕ 10-8-2026ರೇ ಸೋಮವಾರ ಬೆಳಿಗ್ಗೆ 11.30ಕ್ಕೆ ಹೇಮಾವತಿ ಸೂಪರಿಂಟೆಂಡಿಂಗ್ ಇಂಜಿನಿಯರ್ ಕಛೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಅಹೋರಾತ್ರಿ ಧರಣಿಯನ್ನು ಎನ್.ಡಿ.ಎ ಮೈತ್ರಿಕೂಟದಿಂದ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಪಾದಯಾತ್ರೆಯನ್ನು ಮಾಡಿಯಾದರೂ ನೀರನ್ನು ಬಿಡಿಸಿಕೊಳ್ಳುತ್ತೇವೆ. ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ರೈತರು ಪಕ್ಷಾತೀತವಾಗಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು. ಮಾಜಿ ಶಾಸಕ ಎಂ.ಡಿ. ಲಕ್ಷ್ಮಿನಾರಾಯಣ್ ಮಾತನಾಡಿ, ಬರಗಾಲದಂತಹ ಕಷ್ಟದ ಸಂದರ್ಭದಲ್ಲಿ ಈ ಕಾಂಗ್ರೆಸ್ ಸರ್ಕಾರ ರೈತರ ತೋಟಗಳಿಗೆ ಸಮರ್ಪಕವಾಗಿ ತ್ರಿಫೇಸ್ ವಿದ್ಯುತ್ ಅನ್ನು ನೀಡುತ್ತಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ. ಹೇಮಾವತಿ ಡ್ಯಾಂನಿಂದ ನಮ್ಮ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸಬೇಕೆಂದು ಒತ್ತಾಯಿಸುತ್ತೇವೆ. ಆದ್ದರಿಂದ ಈ ಕ್ಷೇತ್ರದ ಸಮಸ್ತ ರೈತ ಬಾಂಧವರು ಈ ಬೃಹತ್ ಪ್ರತಿಭಟನೆಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ನಿಮ್ಮ ಪರವಾದ ಹೋರಾಟಕ್ಕೆ ಶಕ್ತಿ ತುಂಬಿಸಬೇಕಾಗಿ ಮನವಿ ಮಾಡಿದರು. ತಾಲೂಕಿನ ಎನ್.ಡಿ.ಎ ಮೈತ್ರಿಕೂಟದ ಸಮಸ್ತ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಜಿ.ವಿ. ಪ್ರಕಾಶ್, ಜೆ.ಡಿ.ಎಸ್ ತಾಲೂಕು ಅಧ್ಯಕ್ಷ ದೊಡ್ಡೇಗೌಡ, ಹೆಡಗಿಹಳ್ಳಿ ವಿಶ್ವನಾಥ್, ವೆಂಕಟಾಪುರ ಯೋಗೀಶ್, ಎನ್.ಆರ್ ಸುರೇಶ್, ಗುಂಡ ಸುರೇಶ್, ಚಿದಾನಂದ, ಸಂತೋಷ್ ಡಿ, ಕೊಂಡಜ್ಜಿ ವಿಶ್ವನಾಥ್, ಹರಿಕಾರನಹಳ್ಳಿ ಪ್ರಸಾದ್, ಸಿದ್ದಪ್ಪಾಜಿ, ಮುತ್ತಣ್ಣ, ಮುನಿಯೂರು ರಂಗಸ್ವಾಮಿ, ಗೊಟ್ಟಿಕೆರೆ ಕಾಂತರಾಜು ಸೇರಿದಂತೆ ಎನ್.ಡಿ.ಎ ಮೈತ್ರಿಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
    4
    ತಾಲ್ಲೂಕಿನ  ಹೇಮಾವತಿ ನಾಲೆಗಳಲ್ಲಿ ನೀರು ಹರಿಸಲು ಒತ್ತಾಯಿಸಿ ಎನ್.ಡಿ.ಎ ಮೈತ್ರಿಕೂಟದ ಬೃಹತ್ ಪ್ರತಿಭಟನೆ 
ತುರುವೇಕೆರೆ, ಆಗಸ್ಟ್ 4: ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು ಈ ವರ್ಷ ತೀವ್ರ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕ್ಷೇತ್ರದಲ್ಲಿ ಕೇವಲ ಶೇಕಡಾ 30ರಷ್ಟು ಮಾತ್ರ ಮಳೆಯಾಗಿದ್ದು, ರೈತರು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಬೋರ್‌ವೆಲ್‌ಗಳು ಒಣಗಿ ಹೋಗಿದ್ದು, ಅಡಿಕೆ ಹಾಗೂ ತೆಂಗಿನ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಜಾನುವಾರುಗಳಿಗೆ ಮೇವು ಬೆಳೆಯಲು ಸಹ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಹೇಮಾವತಿ ನಾಲೆಯಿಂದ ನೀರನ್ನು ಹರಿಸಿ ಕ್ಷೇತ್ರದ ಕೆರೆಗಳನ್ನು ತುಂಬಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಜೆ.ಡಿ.ಎಸ್.–ಬಿಜೆಪಿ ಎನ್.ಡಿ.ಎ ಮೈತ್ರಿಕೂಟವು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪನವರು ಕ್ಷೇತ್ರದಲ್ಲಿ ಕೇವಲ ಶೇಕಡಾ 30ರಷ್ಟು ಮಾತ್ರ ಮಳೆಯಾಗಿದ್ದು, ಯಾವುದೇ ರೈತರು ಬಿತ್ತನೆ ಮಾಡಿಲ್ಲ ಎಂದು ತಿಳಿಸಿದರು. ತುರುವೇಕೆರೆಯು ಬರಗಾಲ ಪೀಡಿತ ಪ್ರದೇಶವಾಗಿದೆ. ಕ್ಷೇತ್ರದ ಅನೇಕ ರೈತರ ಬೋರ್‌ವೆಲ್‌ಗಳು ಒಣಗಿ ಹೋಗಿದ್ದು, ಅಡಿಕೆ ಹಾಗೂ ತೆಂಗಿನ ಬೆಳೆಗಳು ಒಣಗುತ್ತಿವೆ. ಜಾನುವಾರುಗಳಿಗೆ ಮೇವು ಬೆಳೆಯಲು ಸಹ ನೀರಿಲ್ಲದಂತಾಗಿದೆ. ರೈತರು ತೀವ್ರ ಸಂಕಷ್ಟಕ್ಕೆ ಒಳಪಟ್ಟಿದ್ದಾರೆ ಎಂದರು.ಟಿ.ಬಿ.ಸಿ. ಚಾನೆಲ್‌ಗೆ ಲಿಂಕ್ ಕೆನಾಲ್ ಕಾಮಗಾರಿಯನ್ನು ಅನುಷ್ಠಾನಕ್ಕೆ ಹೊರಟಿರುವುದು ಖಂಡನೀಯ ಎಂದು ಹೇಳಿದ ಅವರು, ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಕೈಗೊಳ್ಳಬಾರದು ಎಂದು ಒತ್ತಾಯಿಸಿದರು. ಸರ್ಕಾರ ತಕ್ಷಣ ಬರಗಾಲ ಎಂದು ಘೋಷಣೆ ಮಾಡಬೇಕು. ತಾಲೂಕಿನ ರೈತರು ಅಡಿಕೆ ಹಾಗೂ ತೆಂಗನ್ನು ನೆಚ್ಚಿಕೊಂಡಿದ್ದಾರೆ. ಕ್ಷೇತ್ರದಲ್ಲಿರುವ ಕೆರೆಗಳನ್ನು ಕೂಡಲೇ ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಲಿಂಕ್ ಕೆನಾಲ್ ಯೋಜನೆಯನ್ನು ಹಿಂದೆ ಯಡಿಯೂರಪ್ಪನವರು ಕ್ಯಾಬಿನೆಟ್‌ನಲ್ಲಿ ರದ್ದು ಮಾಡಿದ್ದರು. ಕುಣಿಗಲ್‌ಗೆ ನಾಲೆಯನ್ನು ಅಗಲೀಕರಣ ಮಾಡಿ ನೀರು ಹರಿಸುವ ಬದಲು, ಅದನ್ನು ಬಿಟ್ಟು ರಾಮನಗರಕ್ಕೆ ನೀರನ್ನು ಹರಿಸಲು ಲಿಂಕ್ ಯೋಜನೆಯನ್ನು ಕೈಗೆತ್ತಿಕೊಂಡಿದ್ದೀರಿ. ಈ ಯೋಜನೆಯನ್ನು ನಾವು ಮಾಡಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಕಟಪೂರ್ವ ಶಾಸಕ ಮಸಾಲ ಜೈರಾಮ್ ಮಾತನಾಡಿ, ಕ್ಷೇತ್ರದ ಕೆರೆ, ಬಾವಿ, ಕಟ್ಟೆಗಳೆಲ್ಲವೂ ಬರಿದಾಗಿದ್ದು, ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೂ ಸಹ ತೊಂದರೆಯಾಗಿದೆ ಎಂದರು. ಈ ಸರ್ಕಾರ ರೈತರಿಗೆ ಆತ್ಮಹತ್ಯೆಯ ಭಾಗ್ಯವನ್ನು ನೀಡಿದೆ ಎಂದು ಟೀಕಿಸಿದರು. ನಮ್ಮ ಸರ್ಕಾರದಲ್ಲಿ ಗೋಶಾಲೆಗಳನ್ನು ತೆರೆದಿದ್ದೆವು, ಅದನ್ನು ಈ ಸರ್ಕಾರ ಮುಚ್ಚಿದೆ. ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಬರಗಾಲ ಬಂದಿರುವುದರಿಂದ ಕೂಡಲೇ ಗೋಶಾಲೆಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.ಹೇಮಾವತಿ ಡ್ಯಾಂನಲ್ಲಿ ಈಗಾಗಲೇ 25 ಟಿ.ಎಂ.ಸಿ. ನೀರು ಕ್ರೂಢೀಕರಣವಾಗಿದೆ. ಕೊನೆಪಕ್ಷ ಕ್ಷೇತ್ರದ ಕೆರೆಗಳಿಗೆ ನೀರು ಬಿಡಲು ಸರ್ಕಾರ ಕ್ರಮ ಕೈಗೊಳ್ಳದೇ ಇರುವುದರಿಂದ, ದಿನಾಂಕ 10-8-2026ರೇ ಸೋಮವಾರ ಬೆಳಿಗ್ಗೆ 11.30ಕ್ಕೆ ಹೇಮಾವತಿ ಸೂಪರಿಂಟೆಂಡಿಂಗ್ ಇಂಜಿನಿಯರ್ ಕಛೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಅಹೋರಾತ್ರಿ ಧರಣಿಯನ್ನು ಎನ್.ಡಿ.ಎ ಮೈತ್ರಿಕೂಟದಿಂದ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಪಾದಯಾತ್ರೆಯನ್ನು ಮಾಡಿಯಾದರೂ ನೀರನ್ನು ಬಿಡಿಸಿಕೊಳ್ಳುತ್ತೇವೆ. ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ರೈತರು ಪಕ್ಷಾತೀತವಾಗಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು.
ಮಾಜಿ ಶಾಸಕ ಎಂ.ಡಿ. ಲಕ್ಷ್ಮಿನಾರಾಯಣ್ ಮಾತನಾಡಿ, ಬರಗಾಲದಂತಹ ಕಷ್ಟದ ಸಂದರ್ಭದಲ್ಲಿ ಈ ಕಾಂಗ್ರೆಸ್ ಸರ್ಕಾರ ರೈತರ ತೋಟಗಳಿಗೆ ಸಮರ್ಪಕವಾಗಿ ತ್ರಿಫೇಸ್ ವಿದ್ಯುತ್ ಅನ್ನು ನೀಡುತ್ತಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ. ಹೇಮಾವತಿ ಡ್ಯಾಂನಿಂದ ನಮ್ಮ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸಬೇಕೆಂದು ಒತ್ತಾಯಿಸುತ್ತೇವೆ. ಆದ್ದರಿಂದ ಈ ಕ್ಷೇತ್ರದ ಸಮಸ್ತ ರೈತ ಬಾಂಧವರು ಈ ಬೃಹತ್ ಪ್ರತಿಭಟನೆಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ನಿಮ್ಮ ಪರವಾದ ಹೋರಾಟಕ್ಕೆ ಶಕ್ತಿ ತುಂಬಿಸಬೇಕಾಗಿ ಮನವಿ ಮಾಡಿದರು. ತಾಲೂಕಿನ ಎನ್.ಡಿ.ಎ ಮೈತ್ರಿಕೂಟದ ಸಮಸ್ತ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಜಿ.ವಿ. ಪ್ರಕಾಶ್, ಜೆ.ಡಿ.ಎಸ್ ತಾಲೂಕು ಅಧ್ಯಕ್ಷ ದೊಡ್ಡೇಗೌಡ, ಹೆಡಗಿಹಳ್ಳಿ ವಿಶ್ವನಾಥ್, ವೆಂಕಟಾಪುರ ಯೋಗೀಶ್, ಎನ್.ಆರ್ ಸುರೇಶ್, ಗುಂಡ ಸುರೇಶ್, ಚಿದಾನಂದ, ಸಂತೋಷ್ ಡಿ, ಕೊಂಡಜ್ಜಿ ವಿಶ್ವನಾಥ್, ಹರಿಕಾರನಹಳ್ಳಿ ಪ್ರಸಾದ್, ಸಿದ್ದಪ್ಪಾಜಿ, ಮುತ್ತಣ್ಣ, ಮುನಿಯೂರು ರಂಗಸ್ವಾಮಿ, ಗೊಟ್ಟಿಕೆರೆ ಕಾಂತರಾಜು ಸೇರಿದಂತೆ ಎನ್.ಡಿ.ಎ ಮೈತ್ರಿಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
    user_Manohara
    Manohara
    Local News Reporter ತುರುವೇಕೆರೆ, ತುಮಕೂರು, ಕರ್ನಾಟಕ•
    4 hrs ago
  • ಮಂಡ್ಯ ದಲ್ಲಿ ವಿಶ್ವ ಸ್ತನ್ಯ ಪಾನದಿನಾಚರಣೆ ತಾಯಿಯ ಹಾಲೇ ಮಗುವಿನ ಮೊದಲ ನೈಸರ್ಗಿಕ ಲಸಿಕೆ ಮಂಡ್ಯ-ತಾಯಿಯ ಹಾಲು ಮಗುವಿನ ಮೊದಲ ಅತ್ಯುತ್ತಮ ಆಹಾರವಾಗಿದ್ದು, ಜನನವಾದ ಮೊದಲ ಒಂದು ಗಂಟೆಯೊಳಗೆ ಸ್ತನ್ಯಪಾನ ಆರಂಭಿಸಿ, ಮೊದಲ ಆರು ತಿಂಗಳು ಕೇವಲ ತಾಯಿಯ ಹಾಲನ್ನೇ ನೀಡುವುದು ಮಗುವಿನ ಆರೋಗ್ಯ, ಬೆಳವಣಿಗೆ ಹಾಗೂ ರೋಗನಿರೋಧಕ ಶಕ್ತಿಗೆ ಅತ್ಯಂತ ಅಗತ್ಯ ಎಂದು CEO ನಂದಿನಿ ಹೇಳಿದ್ರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಂದಿನಿ, ಈ ವರ್ಷದ ಘೋಷವಾಕ್ಯ "ಸುಸ್ಥಿರ ಜೀವನದ ಭದ್ರ ಅಡಿಪಾಯಕ್ಕಾಗಿ ಸ್ತನ್ಯಪಾನ ಪರಿಣಾಮಕಾರಿ ವಿಧಾನಗಳನ್ನು ಸದೃಢಗೊಳಿಸೋಣ ಎಂಬುದಾಗಿದ್ದು, ತಾಯಿಯ ಹಾಲಿನ ಮಹತ್ವದ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಸಿ. ಬೆಟ್ಟಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗೀತಾಲಕ್ಷ್ಮಿ ಸಿ. ಜಿಲ್ಲಾ ಕ್ಷಯ ರೋಗ ಹಾಗೂ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಎಂ. ಎನ್ ಆಶಾಲತಾ ರವರು ಉಪಸ್ಥಿತರಿದ್ದರು
    1
    ಮಂಡ್ಯ ದಲ್ಲಿ ವಿಶ್ವ ಸ್ತನ್ಯ ಪಾನದಿನಾಚರಣೆ ತಾಯಿಯ ಹಾಲೇ ಮಗುವಿನ ಮೊದಲ ನೈಸರ್ಗಿಕ ಲಸಿಕೆ
ಮಂಡ್ಯ-ತಾಯಿಯ ಹಾಲು ಮಗುವಿನ ಮೊದಲ ಅತ್ಯುತ್ತಮ ಆಹಾರವಾಗಿದ್ದು, ಜನನವಾದ ಮೊದಲ ಒಂದು ಗಂಟೆಯೊಳಗೆ ಸ್ತನ್ಯಪಾನ ಆರಂಭಿಸಿ, ಮೊದಲ ಆರು ತಿಂಗಳು ಕೇವಲ ತಾಯಿಯ ಹಾಲನ್ನೇ ನೀಡುವುದು ಮಗುವಿನ ಆರೋಗ್ಯ, ಬೆಳವಣಿಗೆ ಹಾಗೂ ರೋಗನಿರೋಧಕ ಶಕ್ತಿಗೆ ಅತ್ಯಂತ ಅಗತ್ಯ ಎಂದು CEO ನಂದಿನಿ ಹೇಳಿದ್ರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಂದಿನಿ, ಈ ವರ್ಷದ ಘೋಷವಾಕ್ಯ "ಸುಸ್ಥಿರ ಜೀವನದ ಭದ್ರ ಅಡಿಪಾಯಕ್ಕಾಗಿ ಸ್ತನ್ಯಪಾನ ಪರಿಣಾಮಕಾರಿ ವಿಧಾನಗಳನ್ನು ಸದೃಢಗೊಳಿಸೋಣ ಎಂಬುದಾಗಿದ್ದು, ತಾಯಿಯ ಹಾಲಿನ ಮಹತ್ವದ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಸಿ. ಬೆಟ್ಟಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗೀತಾಲಕ್ಷ್ಮಿ ಸಿ. ಜಿಲ್ಲಾ ಕ್ಷಯ ರೋಗ ಹಾಗೂ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಎಂ. ಎನ್ ಆಶಾಲತಾ ರವರು  ಉಪಸ್ಥಿತರಿದ್ದರು
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    7 hrs ago
  • ಚಾಮರಾಜನಗರಕ್ಕೆ ಆಗಮಿಸಿದ ನೂತನ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಅದ್ದೂರಿ ಸ್ವಾಗತ ಚಾಮರಾಜನಗರಕ್ಕೆ ಆಗಮಿಸಿದ ನೂತನ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಅದ್ದೂರಿ ಸ್ವಾಗತ ಮಾಜಿ ನಗರಸಭಾ ಅಧ್ಯಕ್ಷರಾದ ಆರ್.ಎಂ.ರಾಜಪ್ಪ, ಸುರೇಶ್ ನಾಯಕ ನೇತೃತ್ವದಲ್ಲಿ ಅದ್ದೂರಿ ಸ್ವಾಗತ ಚಾಮರಾಜನಗರ:  ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ ಸಿ.ಪುಟ್ಟರಂಗಶೆಟ್ಟಿ ಅವರಿಗೆ ನಗರದ ಭುವನೇಶ್ವರಿ ವೃತ್ತದಲ್ಲಿ ನಗರಸಭಾ ಮಾಜಿ ಅಧ್ಯಕ್ಷರಾದ ಆರ್.ಎಂ.ರಾಜಪ್ಪ, ಸುರೇಶ್ ನಾಯಕ ಅವರ ನೇತೃತ್ವದಲ್ಲಿ ಅದ್ದೂರಿ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು.. ಈ ಸಂದರ್ಭದಲ್ಲಿ ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ ನಾಯಕ,‌ಮಾಜಿ ರಾಮಸಮುದ್ರ ಬಸವರಾಜು, ಎಂ.ಶಿವಮೂರ್ತಿ, ಎಲ್.ಪ್ರಸನ್ನ, ಮುಖಂಡರಾದ  ಹೆಚ್.ಹೆಚ್.ನಾಗರಾಜು, ರಮೇಶ್ ಕುಮಾರ್ ನಾಯಕ ಪಾಂಚಾಗಿ, ಶೇಖರಪ್ಪ, ಪುಟ್ಟಸ್ವಾಮಿ, ನವೀನ್,ಶಿವಕುಮಾರ್,  ರಾಮಸಮುದ್ರ ನಾಗರಾಜು, ಅಕ್ಷಯ್ ಕುಮಾರ್, ಚೆನ್ನಪ್ಪ ಇತರರು ಹಾಜರಿದ್ದರು.
    4
    ಚಾಮರಾಜನಗರಕ್ಕೆ ಆಗಮಿಸಿದ ನೂತನ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಅದ್ದೂರಿ ಸ್ವಾಗತ
ಚಾಮರಾಜನಗರಕ್ಕೆ ಆಗಮಿಸಿದ ನೂತನ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಅದ್ದೂರಿ ಸ್ವಾಗತ
ಮಾಜಿ ನಗರಸಭಾ ಅಧ್ಯಕ್ಷರಾದ ಆರ್.ಎಂ.ರಾಜಪ್ಪ, ಸುರೇಶ್ ನಾಯಕ ನೇತೃತ್ವದಲ್ಲಿ ಅದ್ದೂರಿ ಸ್ವಾಗತ
ಚಾಮರಾಜನಗರ:  ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ 
ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ ಸಿ.ಪುಟ್ಟರಂಗಶೆಟ್ಟಿ ಅವರಿಗೆ ನಗರದ ಭುವನೇಶ್ವರಿ ವೃತ್ತದಲ್ಲಿ ನಗರಸಭಾ ಮಾಜಿ ಅಧ್ಯಕ್ಷರಾದ ಆರ್.ಎಂ.ರಾಜಪ್ಪ, ಸುರೇಶ್ ನಾಯಕ ಅವರ ನೇತೃತ್ವದಲ್ಲಿ ಅದ್ದೂರಿ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು..
ಈ ಸಂದರ್ಭದಲ್ಲಿ ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ ನಾಯಕ,‌ಮಾಜಿ ರಾಮಸಮುದ್ರ ಬಸವರಾಜು, ಎಂ.ಶಿವಮೂರ್ತಿ, ಎಲ್.ಪ್ರಸನ್ನ, 
ಮುಖಂಡರಾದ  ಹೆಚ್.ಹೆಚ್.ನಾಗರಾಜು, ರಮೇಶ್ ಕುಮಾರ್ ನಾಯಕ ಪಾಂಚಾಗಿ, ಶೇಖರಪ್ಪ, ಪುಟ್ಟಸ್ವಾಮಿ, ನವೀನ್,ಶಿವಕುಮಾರ್,  ರಾಮಸಮುದ್ರ ನಾಗರಾಜು, ಅಕ್ಷಯ್ ಕುಮಾರ್, ಚೆನ್ನಪ್ಪ ಇತರರು ಹಾಜರಿದ್ದರು.
    user_Nanjunda Nayak
    Nanjunda Nayak
    Photographer ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    10 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.