Shuru
Apke Nagar Ki App…
ಚಿಕ್ಕನಾಯಕನಹಳ್ಳಿ ಹೇಮಾವತಿ ಹೋರಾಟ ಆರನೇ ದಿನಕ್ಕೆ ಕಾಲಿಟ್ಟಿದ್ದು ಈ ದಿನ ಸಂಜೆಯ ಸ್ನಾಕ್ಸ್ ಆಗಿ ಅಣೆಕಟ್ಟೆಯ ರೈತರು ಕಾರಪುರಿ, ಬೋಂಡಾ, ಬೆಂಡಿ ಮಸಾಲ ನೀಡಿದರು
Huliyarkiran
ಚಿಕ್ಕನಾಯಕನಹಳ್ಳಿ ಹೇಮಾವತಿ ಹೋರಾಟ ಆರನೇ ದಿನಕ್ಕೆ ಕಾಲಿಟ್ಟಿದ್ದು ಈ ದಿನ ಸಂಜೆಯ ಸ್ನಾಕ್ಸ್ ಆಗಿ ಅಣೆಕಟ್ಟೆಯ ರೈತರು ಕಾರಪುರಿ, ಬೋಂಡಾ, ಬೆಂಡಿ ಮಸಾಲ ನೀಡಿದರು
More news from ಕರ್ನಾಟಕ and nearby areas
- ಗುಬ್ಬಿಶಾಸಕ ಶ್ರೀನಿವಾಸ್ ಕೆ ಎಸ್ ಆರ್ ಟಿ ಸಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ? ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಆರ್ ಶ್ರೀನಿವಾಸ್ ಅವರು ಕೆ ಎಸ್ ಆರ್ ಟಿ ಸಿ ನಿಗಮ ಮಂಡಳಿಗೆ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್ಸಿಗೆ ಬರುವಂತಹ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಮುಂದಿನ ದಿನದಲ್ಲಿ ನಿಮಗೆ ಸ್ಥಾನಮಾನವನ್ನು ನೀಡುವುದಾಗಿ ಭರವಸೆ ನೀಡಿದ್ದರು ಭರವಸೆ ಉಸಿಯಾಗಿರುವ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಗುಬ್ಬಿ ಶ್ರೀನಿವಾಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ1
- ಮಳೆ ಕೊರತೆಯಿಂದ ಬೆಳೆ ಹಾನಿ – ಕೊರಟಗೆರೆಯಲ್ಲಿ ರೈತರನ್ನು ಭೇಟಿ ಮಾಡಿ ಪರಿಸ್ಥಿತಿ ಪರಿಶೀಲಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ" ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ದುರ್ಗದಹಳ್ಳಿ, ವಡ್ಡರಹಳ್ಳಿ ಕ್ರಾಸ್ ಇರಕ ಸಂದ್ರ ಕಾಲೋನಿ ತಣ್ಣೆನಹಳ್ಳಿ ಜೋನಿಗರ ಹಳ್ಳಿ ತೋವಿನಕೆರೆ ಗ್ರಾಮಗಳಿಗೆ ಭೇಟಿ ನೀಡಿ ಮತ್ತು ಎಲೇರಾಂಪುರ ನರಸಿಹಂಗಿರಿ ಕ್ಷೇತ್ರ ಪೀಠಾಧ್ಯಕ್ಷರಾದ ಹನುಮಂತನಾಥಸ್ವಾಮೀಜಿಯವರನ್ನು ಭೇಟಿಮಾಡಿ ಆಶೀರ್ವಾದ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ. ಮಳೆ ಕೊರತೆಯಿಂದ ಬೆಳೆ ಹಾನಿಗೊಳಗಾದ ರೈತರ ಸಮಸ್ಯೆಗಳನ್ನು ಆಲಿಸಿದರು. ರೈತರೊಂದಿಗೆ ನೇರವಾಗಿ ಸಂವಾದ ನಡೆಸಿದ ಅವರು, ಬೆಳೆ ನಷ್ಟದ ಕುರಿತು ಮಾಹಿತಿ ಪಡೆದು ಹೊಲಗಳ ಪರಿಸ್ಥಿತಿಯನ್ನು ವೀಕ್ಷಿಸಿದರು. ಈ ವೇಳೆ ರೈತರು ಮಳೆ ಅಭಾವದಿಂದ ಬೆಳೆಗಳು ಸಂಪೂರ್ಣವಾಗಿ ಒಣಗಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದಾಗಿ ತಮ್ಮ ಅಳಲನ್ನು ವ್ಯಕ್ತಪಡಿಸಿದರು. ಸರ್ಕಾರ ತಕ್ಷಣವೇ ಬೆಳೆ ಹಾನಿ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ಹಾಗೂ ಪರಿಹಾರ ಧನವನ್ನು ಬಿಡುಗಡೆ ಮಾಡಬೇಕು ಎಂದು ರೈತರು ಮನವಿ ಮಾಡಿದರು. ರೈತರ ಮನವಿಯನ್ನು ಆಲಿಸಿದ ಬಿ.ವೈ. ವಿಜಯೇಂದ್ರ ಅವರು, ರೈತರ ಸಮಸ್ಯೆಯನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದು, ಬೆಳೆ ಹಾನಿಗೆ ತುರ್ತು ಪರಿಹಾರ, ಬರ ಪರಿಹಾರ ಪ್ಯಾಕೇಜ್ ಹಾಗೂ ಅಗತ್ಯ ನೆರವು ನೀಡುವಂತೆ ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಮತ್ತು ತುಮಕುರು ನಗರ ಶಾಸಕ ಶ್ಯೋತಿ ಗಣೇಶ್ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯ ರೈತರು ಉಪಸ್ಥಿತರಿದ್ದರು.1
- ಮೂಲಬೂತ ಸೌಕರ್ಯಗಳಿಂದ ವಂಚಿತವಾದ ಚಿಕ್ಕಂದವಾಡಿ ಗ್ರಾಮದ ಅಂಗನವಾಡಿ ಕೇಂದ್ರ ಚಿಕ್ಕಂದವಾಡಿ ಗ್ರಾಮದ ಅಂಗನವಾಡಿ ಕೇಂದ್ರ ಮೂಲಬೂತ ಸೌಕರ್ಯಗಳಿಂದ ವಂಚಿತವಾಗಿದೆ. ಅಂಗನವಾಡಿ ಸಹಾಯಕಿ ಕೊರತೆ, ಮಕ್ಕಳು ಮೂಲಭೂತ ಸೌಕರ್ಯದಿಂದ ದೂರ* ಹೊಳಲ್ಕೆರೆ ತಾಲ್ಲೂಕು ಚಿಕ್ಕಂದವಾಡಿ ಗ್ರಾಮದ ಅಂಗನವಾಡಿ 'ಸಿ' ಕೇಂದ್ರದಲ್ಲಿ ಒಟ್ಟು 12 ಮಕ್ಕಳಿದ್ದು, ಆರು ತಿಂಗಳ ಮೇಲ್ಪಟ್ಟು ಮೂರು ವರ್ಷದೊಳಗಿನ 25 ಮಕ್ಕಳಿಗೆ ಫುಡ್ ನ್ನು ಮನೆಗೆ ವಿತರಣೆ ಮಾಡಲಾಗುತ್ತಿದೆ. ಜೊತೆಗೆ 5 ಜನ ಗರ್ಭಿಣಿಯರು 5 ಜನ ಬಾಣಂತಿಯರಿಗೂ ಸಹ ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದ್ದು, ಮುಖ್ಯವಾಗಿ 12 ಮಕ್ಕಳಿಗೆ ಊಟ ಉಪಚಾರವನ್ನು ಸಿದ್ಧಪಡಿಸಲು ಸಹಾಯಕಿ ಇಲ್ಲದ ಕಾರಣ ಅಂಗನವಾಡಿ ಕಾರ್ಯಕರ್ತೆ ಆರ್. ಭಾಗ್ಯಮ್ಮ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸಲು ಕಷ್ಟ ಸಾಧ್ಯವಾಗುತ್ತಿದೆ ಎಂದು ತಮ್ಮ ಅಸಹಾಯಕತೆಯನ್ನು ತಿಳಿಸಿದ್ದಾರೆ. ಈ ಅಂಗನವಾಡಿ ಕೇಂದ್ರದ ಸುತ್ತಮುತ್ತಲು ಕೆರೆ ಜಮೀನು ಹಾಗು ಗುಂಡಿ-ದಿಮ್ಮಿಗಳಿದ್ದು ಮಳೆಗಾಲದಲ್ಲಿ ಮಕ್ಕಳು ಹಾಗೂ ಸಿಬ್ಬಂದಿಗಳು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಸೂಕ್ತವಾದ ನೀರಿನ ವ್ಯವಸ್ಥೆ ಹಾಗೂ ಕರೆಂಟ್ ವ್ಯವಸ್ಥೆ ಮತ್ತು ಅಂಗನವಾಡಿ ಕೇಂದ್ರವು ರಸ್ತೆಯ ಸಮೀಪ ಇರುವುದರಿಂದ ಮಕ್ಕಳು ಸುತ್ತಮುತ್ತ ಹೊರಗಡೆ ಹೋಗದಂತೆ ವ್ಯವಸ್ಥಿತವಾದ ಕಾಂಪೌಂಡ್ ಇರುವುದಿಲ್ಲ ಆದ ಕಾರಣ ಮಕ್ಕಳು ಹಾಗೂ ಸಿಬ್ಬಂದಿಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಿ, ಬ್ಲಾಕ್ ನಾ ಅಂಗನವಾಡಿ ಕಾರ್ಯಕರ್ತೆ ಆರ್ ಭಾಗ್ಯಮ್ಮ ಮಾತನಾಡಿ ಅಂಗನವಾಡಿಗೆ ಸಂಬಂಧಿಸಿದಂತೆ ಕುಂದು ಕೊರತೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಿಳಿಸಿದ್ದು, ಈ ವರೆಗೂ ಯಾವುದೇ ಬದಲಾವಣೆಗಳು ಕಂಡುಬಂದಿರುವುದಿಲ್ಲ ಹಾಗೂ ಎಲ್ಲಾ ಚಟುವಟಿಕೆಗಳನ್ನು ಸಾಧ್ಯವಾದಷ್ಟು ನಿರ್ವಹಿಸುತ್ತಿದ್ದು, ಸಹಾಯಕಿಯನ್ನು ಆದಷ್ಟು ಬೇಗ ನೀಡುವುದು ಸೂಕ್ತವಾಗಿದೆ ಎಂದು ಹೇಳಿದರು.1
- :ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬರ ಆವರಿಸಿದ್ದು, ಕೃಷಿ ಚಟುವಟಿಕೆ ಸ್ತಬ್ಧ ಚಿತ್ರದುರ್ಗ :ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬರ ಆವರಿಸಿದ್ದು, ಕೃಷಿ ಚಟುವಟಿಕೆ ಸ್ತಬ್ಧವಾಗಿದೆ. ರೈತರು ಮಳೆಗಾಗಿ ದಿನ ಆಕಾಶವನ್ನು ನೋಡುವಂತಹ ಪರಿಸ್ಥಿತಿ ಬಂದೊದಗಿದೆ. ಚಿತ್ರದುರ್ಗ ಜಿಲ್ಲೆಯ ಆರೂ ತಾಲೂಕುಗಳಲ್ಲಿ ಒಂದೆರಡು ಅಡಿ ಭೂಮಿ ಹಸಿಯಾಗುವಷ್ಟು ಮಳೆಯಾಗಿಲ್ಲ.. ಇದರಿಂದ ಕೃಷಿ ಕ್ಷೇತ್ರಕ್ಕೆ ತೀವ್ರ ಹಿನ್ನಡೆಯಾಗಿದೆ. ಈಗಾಗಲೇ ಬಿತ್ತನೆ ಮಾಡಿದವರಿಗೂ ಪ್ರಯೋಜನವಿಲ್ಲದಂತಾಗಿದೆ. ಕಳೆದೊAದು ವಾರದಿಂದಲೂ ಜಿಲ್ಲೆಯಲ್ಲಿ ಮೋಡಕವಿದ ವಾತಾವರಣವಿದೆ. ಆದರೆ, ಮಳೆ ಮಾತ್ರ ಸುರಿಯುತ್ತಿಲ್ಲ. ಕೆಲವೆಡೆ ಆಗುತ್ತಿರುವ ಸೋನೆ ಮಳೆ ಕೃಷಿಗೆ ನೆರವಾಗುತ್ತಿಲ್ಲ. ಹೀಗಾಗಿ ಶೇ.೮೨ರಷ್ಟು ಕೃಷಿಕರು ಬಿತ್ತನೆಯನ್ನೇ ಮಾಡಿಲ್ಲ. ಶೇಂಗಾ, ರಾಗಿ, ಮೆಕ್ಕೆಜೋಳ ಬಿತ್ತನೆಗೆ ಹಿನ್ನಡೆಯಾಗಿದೆ.1
- ಬಿಡದಿ ಟೌನ್‌ಶಿಪ್ ವಿರೋಧಿಸಿ ಬೃಹತ್ ಪಾದಯಾತ್ರೆ: ನಮ್ಮ ಭೂಮಿ, ನಮ್ಮ ಹಕ್ಕು!1
- *ವಿಬಿ-ಜಿ ರಾಮ್ ಜಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಅನುಷ್ಠಾನ ಇಲಾಖೆಗಳೊಂದಿಗೆ ಸಮನ್ವಯ ಸಭೆ* ಮಂಡ್ಯ, ಆಗಸ್ಟ್ 3: ಪ್ರಸಕ್ತ ಸಾಲಿನಲ್ಲಿ ವಿಕಸಿತ ಭಾರತ್ – ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ) [VB-G RAM G] ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಅನುಷ್ಠಾನ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು CEO ನಂದಿನಿ ಅಧಿಕಾರಿಗಳಿಗೆ ಸೂಚಿಸಿದರು. ಸೋಮವಾರ ಜಿಲ್ಲಾ ಪಂಚಾಯತ್‌ನ ಕೆಸ್ವಾನ್ ಸಭಾಂಗಣದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಕ್ರಿಯಾ ಯೋಜನೆ ಸಿದ್ಧಪಡಿಸುವ ಕುರಿತು ನಡೆದ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಕೃಷಿ, ಅರಣ್ಯ ಇಲಾಖೆ ಸೇರಿದಂತೆ ಎಲ್ಲಾ ಅನುಷ್ಠಾನ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ವಿಶೇಷವಾಗಿ ಜಲ ಸಂರಕ್ಷಣೆ (Water Conservation) ಹಾಗೂ ಮಣ್ಣಿನ ತೇವಾಂಶ ಸಂರಕ್ಷಣೆ (Soil Moisture Conservation) ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿ, ರೈತರಿಗೆ ದೀರ್ಘಾವಧಿಯಲ್ಲಿ ಅನುಕೂಲವಾಗುವ ಶಾಶ್ವತ ಆಸ್ತಿಗಳ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಅವರು ತಿಳಿಸಿದರು. ಇಲಾಖಾವಾರು ಕ್ರಿಯಾ ಯೋಜನೆ ಸಿದ್ಧಪಡಿಸಲು ಸೂಚನೆ: ಎಲ್ಲಾ ಇಲಾಖೆಗಳ ಅಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಇಲಾಖಾವಾರು ಹಾಗೂ ಗ್ರಾಮ ಪಂಚಾಯಿತಿವಾರು ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಬೇಕು. ಹಿಂದಿನ ಮಾದರಿ ಅಂದಾಜುಪಟ್ಟಿಗಳ ಆಧಾರದ ಮೇಲೆ ಎಸ್ಟಿಮೇಟ್ ತಯಾರಿಸಿ, ಜಿಲ್ಲಾ ಡಿಪಿಸಿ (District Planning Cell) ಲಾಗಿನ್ ಮೂಲಕ ಅನುಮೋದನೆ ಪಡೆದು, ನಂತರ ಹೊಸ ವಿಬಿ-ಜಿ ರಾಮ್ ಜಿ ಸಾಫ್ಟ್‌ವೇರ್‌ನಲ್ಲಿ ಅಪ್‌ಲೋಡ್ ಮಾಡಿ ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸುವಂತೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ (ಅಭಿವೃದ್ಧಿ) ಲಕ್ಷ್ಮಿ ಪಿ., ಜಿಲ್ಲಾ ಮಟ್ಟದ ಇಲಾಖಾಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿವಿಧ ಇಲಾಖೆಗಳ ಸಹಾಯಕ ನಿರ್ದೇಶಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.1
- ಚಿಕ್ಕನಾಯಕನಹಳ್ಳಿ ಹೇಮಾವತಿ ಹೋರಾಟ ಆರನೇ ದಿನಕ್ಕೆ ಕಾಲಿಟ್ಟಿದ್ದು ಈ ದಿನ ಸಂಜೆಯ ಸ್ನಾಕ್ಸ್ ಆಗಿ ಅಣೆಕಟ್ಟೆಯ ರೈತರು ಕಾರಪುರಿ, ಬೋಂಡಾ, ಬೆಂಡಿ ಮಸಾಲ ನೀಡಿದರು1
- ಹುಣಸೆಕಟ್ಟೆ ಗ್ರಾಮದಲ್ಲಿ ಆಹಾರ ಅರಸಿ ಬಂದ ನವಿಲುಗಳಿಗೆ ಆಹಾರ ನೀಡಿದ ರೈತರು ಮಾನವೀಯತೆ ಮೆರೆದಿದ್ದಾರೆ ಹುಣಸೆಕಟ್ಟೆ ಗ್ರಾಮದಲ್ಲಿ ಆಹಾರ ಅರಸಿ ಬಂದ ನವಿಲುಗಳಿಗೆ ಆಹಾರ ನೀಡುವ ಮೂಲಕ ರೈತ ಮುಖಂಡರು ಮಾನವೀಯತೆ ಮೆರೆದಿದ್ದಾರೆ. ಇನ್ನೂ ಚಿತ್ರದುರ್ಗ ತಾಲ್ಲೂಕಿನ ಹುಣಸೆಕಟ್ಟೆ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ. ಇನ್ನೂ ಮಳೆಯ ಕೊರತೆಯಿಂದಾಗಿ ಬರ ಆವರಿಸಿದೆ. ಜನ ಜಾನುವಾರುಗಳಿಗೆ ಆಹಾರ ನೀರಿನ ಕೊರತೆ ಉಂಟಾಗಿದ್ದು ಪ್ರಾಣಿ ಪಕ್ಷಿಗಳ ಮೇಲೆ ಪರಿಣಾಮ ಬೀರುತ್ತಿದೆ. ಇತ್ತ ಚಿತ್ರದುರ್ಗ ಜಿಲ್ಲೆ ಹುಣಸೆಕಟ್ಟೆ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಮಳೆಯ ಕೊರತೆಯಿಂದಾಗಿ ಅಡವಿಗಳಲ್ಲಿ ಆಹರದ ಕೊರತೆ ಉಂಟಾಗಿದ್ದು ನೀರಿಗೂ ಆಹಾಕಾರ ಉಂಟಾಗಿದ್ದು ಪ್ರಾಣಿ ಪಕ್ಷಿಗಳು ನಲುಗಿ ಹೋಗಿವೆ. ಇನ್ನೂ ಗ್ರಾಮದ ರೈತ ಮುಖಂಡ ಕಾಂತರಾಜ್ ಅವರ ಜಮೀನಿಗಿಂದು ಆಹಾರ ಅರಸಿ ಬಂದ ನವಿಲುಗಳಿಗೆ ಆಹಾರ ನೀರಿನ ವ್ಯವಸ್ಥೆ ಮಾಡುವ ಮೂಲಕ ಕಾಂತರಾಜ್ ಅವರು ಮಾನವೀಯತೆ ಮೆರೆದಿದ್ದಾರೆ. ಅಷ್ಟೇ ಅಲ್ಲದೆ ಆಹಾರದ ಕೊರತೆಯಿಂದಾಗಿ ನವಿಲುಗಳು ಅಕ್ಕಪಕ್ಕದ ಜಮೀನು ತೋಟಗಳಿಗೆ ಬರುತ್ತಿವೆ.1
- ಪಾವಗಡದ ಮಣಪ್ಪುರಂ ಗೋಲ್ಡ್ ಲೋನ್ ಕಚೇರಿಗೆ ಬೆಂಕಿ; ಕಂಪ್ಯೂಟರ್, ದಾಖಲೆಗಳು ಸುಟ್ಟು ಭಸ್ಮ ಪಾವಗಡದ ಮಣಪ್ಪುರಂ ಗೋಲ್ಡ್ ಲೋನ್ ಕಚೇರಿಗೆ ಬೆಂಕಿ; ಕಂಪ್ಯೂಟರ್, ದಾಖಲೆಗಳು ಸುಟ್ಟು ಭಸ್ಮ ಪಾವಗಡ: ಪಟ್ಟಣದ ಬಸ್ ನಿಲ್ದಾಣದ ಎದುರಿನಲ್ಲಿರುವ ಮಣಪ್ಪುರಂ ಗೋಲ್ಡ್ ಲೋನ್ ಪಾವಗಡ ಶಾಖೆಯ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆ ಸುಮಾರು 9 ಗಂಟೆಗೆ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅವಘಡದಲ್ಲಿ ಕಚೇರಿಯಲ್ಲಿದ್ದ ಕಂಪ್ಯೂಟರ್‌ಗಳು, ಪ್ರಮುಖ ದಾಖಲೆಗಳು ಸೇರಿದಂತೆ ಕೆಲವು ವಸ್ತುಗಳು ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದುಬಂದಿದೆ. ಬೆಂಕಿ ಕಾಣಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ ಪಾವಗಡ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸ್ ಇಲಾಖೆ ಹಾಗೂ ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಈ ಘಟನೆ ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಅಗ್ನಿ ಅವಘಡದ ನಿಖರ ಕಾರಣ ಹಾಗೂ ಸಂಭವಿಸಿದ ಹಾನಿಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.1