Shuru
Apke Nagar Ki App…
:ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬರ ಆವರಿಸಿದ್ದು, ಕೃಷಿ ಚಟುವಟಿಕೆ ಸ್ತಬ್ಧ ಚಿತ್ರದುರ್ಗ :ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬರ ಆವರಿಸಿದ್ದು, ಕೃಷಿ ಚಟುವಟಿಕೆ ಸ್ತಬ್ಧವಾಗಿದೆ. ರೈತರು ಮಳೆಗಾಗಿ ದಿನ ಆಕಾಶವನ್ನು ನೋಡುವಂತಹ ಪರಿಸ್ಥಿತಿ ಬಂದೊದಗಿದೆ. ಚಿತ್ರದುರ್ಗ ಜಿಲ್ಲೆಯ ಆರೂ ತಾಲೂಕುಗಳಲ್ಲಿ ಒಂದೆರಡು ಅಡಿ ಭೂಮಿ ಹಸಿಯಾಗುವಷ್ಟು ಮಳೆಯಾಗಿಲ್ಲ.. ಇದರಿಂದ ಕೃಷಿ ಕ್ಷೇತ್ರಕ್ಕೆ ತೀವ್ರ ಹಿನ್ನಡೆಯಾಗಿದೆ. ಈಗಾಗಲೇ ಬಿತ್ತನೆ ಮಾಡಿದವರಿಗೂ ಪ್ರಯೋಜನವಿಲ್ಲದಂತಾಗಿದೆ. ಕಳೆದೊAದು ವಾರದಿಂದಲೂ ಜಿಲ್ಲೆಯಲ್ಲಿ ಮೋಡಕವಿದ ವಾತಾವರಣವಿದೆ. ಆದರೆ, ಮಳೆ ಮಾತ್ರ ಸುರಿಯುತ್ತಿಲ್ಲ. ಕೆಲವೆಡೆ ಆಗುತ್ತಿರುವ ಸೋನೆ ಮಳೆ ಕೃಷಿಗೆ ನೆರವಾಗುತ್ತಿಲ್ಲ. ಹೀಗಾಗಿ ಶೇ.೮೨ರಷ್ಟು ಕೃಷಿಕರು ಬಿತ್ತನೆಯನ್ನೇ ಮಾಡಿಲ್ಲ. ಶೇಂಗಾ, ರಾಗಿ, ಮೆಕ್ಕೆಜೋಳ ಬಿತ್ತನೆಗೆ ಹಿನ್ನಡೆಯಾಗಿದೆ.
Suresh Belagere
:ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬರ ಆವರಿಸಿದ್ದು, ಕೃಷಿ ಚಟುವಟಿಕೆ ಸ್ತಬ್ಧ ಚಿತ್ರದುರ್ಗ :ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬರ ಆವರಿಸಿದ್ದು, ಕೃಷಿ ಚಟುವಟಿಕೆ ಸ್ತಬ್ಧವಾಗಿದೆ. ರೈತರು ಮಳೆಗಾಗಿ ದಿನ ಆಕಾಶವನ್ನು ನೋಡುವಂತಹ ಪರಿಸ್ಥಿತಿ ಬಂದೊದಗಿದೆ. ಚಿತ್ರದುರ್ಗ ಜಿಲ್ಲೆಯ ಆರೂ ತಾಲೂಕುಗಳಲ್ಲಿ ಒಂದೆರಡು ಅಡಿ ಭೂಮಿ ಹಸಿಯಾಗುವಷ್ಟು ಮಳೆಯಾಗಿಲ್ಲ.. ಇದರಿಂದ ಕೃಷಿ ಕ್ಷೇತ್ರಕ್ಕೆ ತೀವ್ರ ಹಿನ್ನಡೆಯಾಗಿದೆ. ಈಗಾಗಲೇ ಬಿತ್ತನೆ ಮಾಡಿದವರಿಗೂ ಪ್ರಯೋಜನವಿಲ್ಲದಂತಾಗಿದೆ. ಕಳೆದೊAದು ವಾರದಿಂದಲೂ ಜಿಲ್ಲೆಯಲ್ಲಿ ಮೋಡಕವಿದ ವಾತಾವರಣವಿದೆ. ಆದರೆ, ಮಳೆ ಮಾತ್ರ ಸುರಿಯುತ್ತಿಲ್ಲ. ಕೆಲವೆಡೆ ಆಗುತ್ತಿರುವ ಸೋನೆ ಮಳೆ ಕೃಷಿಗೆ ನೆರವಾಗುತ್ತಿಲ್ಲ. ಹೀಗಾಗಿ ಶೇ.೮೨ರಷ್ಟು ಕೃಷಿಕರು ಬಿತ್ತನೆಯನ್ನೇ ಮಾಡಿಲ್ಲ. ಶೇಂಗಾ, ರಾಗಿ, ಮೆಕ್ಕೆಜೋಳ ಬಿತ್ತನೆಗೆ ಹಿನ್ನಡೆಯಾಗಿದೆ.
More news from ಕರ್ನಾಟಕ and nearby areas
- ಚಳ್ಳಕೆರೆ ನಗರದಲ್ಲಿ ‘ಹೋಳಿಗೆ ಅಮ್ಮ’ ಹಬ್ಬ ಶ್ರದ್ಧಾ–ಭಕ್ತಿಯಿಂದ ಆಚರಣೆ ನಗರದ ಗ್ರಾಮೀಣ ಭಾಗದಲ್ಲಿ ಸಾಂಕ್ರಾಮಿಕ ರೋಗ ರುಜೀನಗಳ ಹರಡದಿರಲಿ ಹಾಗೂ ಊರಿನ ಒಳಿತಿಗಾಗಿ ಪ್ರಾರ್ಥಿಸಿ ಆಷಾಢ ಮಾಸದ ಮಂಗಳವಾರ ಚಳ್ಳಕೆರೆ ನಗರದಲ್ಲಿ ‘ಹೋಳಿಗೆ ಅಮ್ಮ’ ಹಬ್ಬವನ್ನು ಭಕ್ತರು ಶ್ರದ್ಧಾ–ಭಕ್ತಿಯಿಂದ ಆಚರಿಸಿದರು.. ಯಾವುದೇ ಜಾತಿ ಭೇದವಿಲ್ಲದೆ ಹೋಳಿಗೆ ಅಮ್ಮನನ್ನು ಶತಮಾನಗಳಿಂದಲೂ ಬುಡಕಟ್ಟು ಸಂಪ್ರದಾಯ, ಸಂಸ್ಕೃತಿಯ ನೆಲದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ ಭಾಗದಲ್ಲಿ ಅಷ್ಟೇ ಅಲ್ಲದೆ ನಗರದಲ್ಲೂ ಸಹ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಲಾಗುತ್ತದೆ. . ಪ್ರತಿಯೊಂದು ಹಬ್ಬ, ಆಚರಣೆಗೆ ಅದರದೇ ಆದ ನಂಬಿಕೆ ಇದೆ. ಸಂಪ್ರದಾಯ ಹಾಗೂ ಸಂಸ್ಕೃತಿಯ ನೆಲೆಯಿದೆ. ಅದರಲ್ಲಿ ಹೋಳಿಗೆ ಅಮ್ಮ ಹಬ್ಬ ಕೂಡ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಮಂಗಳವಾರ ಬೆಳಿಗ್ಗೆಯಿಂದಲೇ ನಗರದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು ಚಳ್ಳಕೆರೆ ನಗರದ ಅಂಬೇಡ್ಕರ್ ನಗರ ಗಾಂಧಿನಗರ ಸೋಮುಗುದ್ದು ರಸ್ತೆ ತ್ಯಾಗರಾಜನಗರ ಹಳೆ ಟೌನ್ ಹೌಸಿಂಗ್ ಬೋರ್ಡ.ಸೇರಿದಂತೆ ನಗರದಲ್ಲಿ ಹೋಳಿಗೆ ತಯಾರಿಸಿ ಅದನ್ನು ಅರಿಸಿಣ, ಕುಂಕುಮ, ಬಳೆ, ಬೇವಿನ ಸೊಪ್ಪು, ತೆಂಗಿನಕಾಯಿ ಹೋಳುಗಳನ್ನು ಮೊರದಲ್ಲಿ ಇಟ್ಟು ಮನೆಯಲ್ಲಿ ಪೂಜೆ ಸಲ್ಲಿಸಿದರು. ಬಳಿಕ ನಿಗದಿಪಡಿಸಿದ ಮಾರಮ್ಮನ ದೇವಸ್ಥಾನ ಎಲ್ಲಮ್ಮನ. ದೇವಸ್ಥಾನ. ಕಡಿಮೆ ಮಾರಮ್ಮನ ದೇವಸ್ಥಾನ . ಸುಂಕುದ್ ರಸ್ತೆಯ ಮಾರಮ್ಮನ ದೇವಸ್ಥಾನ ಗಳಲ್ಲಿ ಅವುಗಳನ್ನು ಇಟ್ಟು ಸಾಂಕ್ರಾಮಿಕ ರೋಗ ರಜಿನಾ ಬಾರದಂತೆ ಉತ್ತಮ ಮಳೆ ಬೆಳೆಯಾಗಲಿ ಚಿಕ್ಕ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಮಕ್ಕಳನ್ನು ಕಾಪಾಡು ತಾಯಿ ಎಂದು ನಮಿಸಿದರು. ಇನ್ನು ಎಲ್ಲರೂ ಪ್ರಸಾದವನ್ನು ತಾಯಿಗೆ ಅರ್ಪಿಸಿದ ನಂತರ ಒಂದು ಬಿದುರಿನ ಬುಟ್ಟಿಯಲ್ಲಿ ಹೋಳಿಗೆ ಮತ್ತೊಂದು ಬುಟ್ಟಿಯಲ್ಲಿ ಅನ್ನ ಸಾಂಬಾರು ಹಾಗೂ ತೆಂಗಿನಕಾಯಿ ಬಾಳೆಹಣ್ಣು ತುಂಬಿಕೊಂಡು ಊರ ಹೊರಗಿನ ಹಸಿರು ಮರದ ಕೆಳಗೆ ಇಟ್ಟುಮನೆಯಲ್ಲಿರುವ ಮಕ್ಕಳಿಗೆ ಅಮ್ಮ, ಧಡಾರ, ಸಿಡುಬು ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡದಂತೆ, ದುಷ್ಟಶಕ್ತಿ ಊರೊಳಗೆ ಬರದಂತೆ ಹಾಗೂ ಕಾಲಕಾಲಕ್ಕೆ ಮಳೆಯಾಗಿ ಊರು ಸಮೃದ್ಧವಾಗಲಿ ಎಂದು ಬೇಡಿಕೊಳ್ಳಾಯಿತು. ಈ ಹೋಳಿಗಮ್ಮ ಹಬ್ಬದಲ್ಲಿ ದಿನಕರ ಹಾಗೂ ಅಂಬೇಡ್ಕರ್ ನಗರದ ಯುವಕರು ವಾಲಗ ವಾಧ್ಯಕ್ಕೆ.ತಕ್ಕ ಹೆಜ್ಜೆ ಹಾಕಿದ್ದರು.1
- ಕುರುಬ ಸಮಾಜಕ್ಕೆ ಸಚಿವ ಸ್ಥಾನ ನೀಡ ಸರ್ಕಾರದ ವಿರುದ್ಧ ಎಚ್ಚರಿಕೆ ನೀಡಿದ ಮುಖಂಡರು ಹೊಸದುರ್ಗದ ಹಿರಿಯ ಶಾಸಕ ಬಿ ಜಿ ಗೋವಿಂದಪ್ಪ ಅವರಿಗೆ ಸಚಿವ ಸ್ಥಾನ ನೀಡುವಂತೆ ಕುರುಬರ ಸಂಘದ ವತಿಯಿಂದ ಆಗ್ರಹ ಮಾಡಿದ್ದಾರೆ. ಈ ಕುರಿತು ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕುರುಬರ ಸಂಘದ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿದ್ದು ಈ ವೇಳೆ ಜಿಲ್ಲಾ ಕುರುಭರ ಸಂಘದ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಬಿ ಟಿ ಜಗದೀಶ್ ಅವರು ಮಾತನಾಡಿದ್ದು ಡಿ ಕೆ ಶಿವಕುಮಾರ್ ಅವರ ನೂತನ ಸಂಪುಟದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು ನಮ್ಮ ಕುರುಬರ ಸಂಘದ ಶಾಸಕರನ್ನ ಕಡೆಗಣನೆ ಮಾಡಲಾಗಿದೆ. ಇಪ್ಪತ್ತು ನೂತನ ಸಚಿವರ ಪ್ರಮಾಣ ವಚನಕ್ಕೆ ಅಂತಿಮ ಪಟ್ಟಿ ಸಿದ್ದಪಡಿಸಿದ್ದು ಇದರಲ್ಲಿ ನಮ್ಮ ಸಮುದಾಯವನ್ನ ಸರ್ಕಾರ ಕಡೆಗಣನೆ ಮಾಡಲಾಗಿದೆ. ರಾಜ್ಯದ ಕುರುಬರ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯವನ್ನ ಸರ್ಕಾರ ಕೊಟ್ಟಿಲ್ಲ. ಸಚಿವ ಸಂಪುಟ ವಿಸ್ತರಣೆ ವೇಳೆ ಗಾಯತ್ರಿ ಶಾಂತೇಗೌಡ ಅವರ ಹೆಸರು ಪ್ರಸ್ತಾಪ ಆಗಿದ್ದು ಕೊನೆ ಹಂತದಲ್ಲಿ ಸಚಿವ ಸ್ಥಾನವನ್ನ ಕೊಡದೆ ಅನ್ಯಾಯವಾಗಿದೆ. ಇಪ್ಪತ್ತರ ಪೈಕಿ ಕೇವಲ ಹತ್ತೊಂಬತ್ತು ಶಾಸಕರಿಗೆ ಸಚಿವ ಸ್ಥಾನ ನೀಡಿ ಒಂದನ್ನ ಹಾಗೆ ಉಳಿಸಿಕೊಂಡಿದ್ದು ಆ ಸ್ಥಾನವನ್ನ ತಾಲ್ಲೂಕು ಪಂಚಾಯತಿ ಅಧ್ಯಕ್ಷರಾಗಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರಾಗಿ ಕೆಳಮಟ್ಟದಿಂದ ಪಕ್ಷ ಸಂಘಟನೆ ಮಾಡಿಕೊಂಡು ಬಂದು ನಾಲ್ಕು ಬಾರಿ ಶಾಸಕರಾದ ನಮ್ಮ ಸಮುದಾಯದ ಹಿರಿಯ ಶಾಸಕ ಹೊಸದುರ್ಗದ ಬಿಜಿ ಗೋವಿಂದಪ್ಪ ಅವರಿಗೆ ಕೊಡಬೇಕು ಹಾಗೂ ಈ ಕುರಿತು ಮುಖ್ಯಮಂತ್ರಿಗಳ ಬಳಿ ನಿಯೋಗವನ್ನ ಸಹ ತೆಗೆದುಕೊಂಡು ಹೋಗಬೇಕು ಹಾಗೂ ನಮ್ಮ ಸಮುದಾಯದ ಮುಖಂಡರಿಗೆ ಹೆಚ್ಚಿನ ನಿಗಮ ಮಂಡಳಿ ಸ್ಥಾನವನ್ನ ಸಹ ನೀಡಬೇಕು ಎಂದು ಬಿ ಟಿ ಜಗದೀಶ್ ಅವರು ತಿಳಿಸಿದ್ದು ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆ ಹಾಗೂ ರಾಜ್ಯಾದ್ಯಂತ ಸಮುದಾಯವನ್ನ ಒಗ್ಗೂಡಿಸಿ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೂಡ ನೀಡಿದ್ದಾರೆ.1
- ಬಂಗಾರಕ್ಕನಹಳ್ಳಿ ಗಡಿ ದಾಟುವ 'ಹೋಳಿಗೆ ಅಮ್ಮ', ಆಷಾಢದಲ್ಲಿ ಆಚರಿಸಲಾಗುತ್ತೆ ಈ ವಿಶಿಷ್ಟ ಹಬ್ಬ..! ಚಿತ್ರದುರ್ಗ: ಆಷಾಢ ಮಾಸ ಬಂದರೆ ಮಧ್ಯ ಕರ್ನಾಟಕದ ಗ್ರಾಮೀಣ ಭಾಗದಲ್ಲಿ 'ಹೋಳಿಗೆ ಅಮ್ಮ' ಹಬ್ಬ ಆಚರಿಸುವ ಸಂಭ್ರಮ ಮನೆಮಾಡುತ್ತದೆ. ಜೇಷ್ಠ ಹಾಗೂ ಆಷಾಢ ಮಾಸ ರೈತಾಪಿ ಜನರಿಗೆ ಬಿತ್ತುವ ಕಾಲ. ಈ ಮಾಸದ ಮಂಗಳವಾರ ಅಥವಾ ಶುಕ್ರವಾರ ಅನುಕೂಲವಾದ ಯಾವುದಾದರೂ ಒಂದು ದಿನ ಮೀಸಲಿಟ್ಟು ಭಯ ಭಕ್ತಿಯಿಂದ 'ಹೋಳಿಗೆ ಅಮ್ಮ'ನ ಹಬ್ಬ ಆಚರಿಸುವುದು ವಾಡಿಕೆ. ಚಿತ್ರದುರ್ಗ ತಾಲೂಕಿನ ಬಂಗಾರಕ್ಕನಹಳ್ಳಿ ಹಾಗೂ ಇತರ ಗ್ರಾಮಗಳ ಜನ ತಮ್ಮದೇ ಆದ ಬೇಡಿಕೆಗಳನ್ನು ಸಲ್ಲಿಸುವ ಮೂಲಕ ಈ ಹಬ್ಬ ಆಚರಿಸುತ್ತಾರೆ. ಆಯಾ ಊರ ಮುಂದಿನ ಗಡಿ (ಎಲ್ಲೆ) ಇರುವ ಒಂದು ಬೇವಿನ ಮರದ ಕೆಳಗೆ ಹೋಳಿಗೆ ಎಡೆಯನ್ನು ಇಟ್ಟು ಅಮ್ಮನನ್ನು ಕಳಿಸಿ, ಕೈ ಮುಗಿದು ಹಿಂದಿರುಗಿ ನೋಡದಂತೆ ಬರುವುದು ಸಂಪ್ರದಾಯ. ಹಬ್ಬದ ಆಚರಣೆ ಗೊತ್ತಾದ ದಿನ ಬೆಳಗ್ಗಿನಿಂದಲೇ ಮನೆಯ ಮಹಿಳೆಯರು ಹೋಳಿಗೆ ಮಾಡಿ ಹಬ್ಬದ ಸಿದ್ಧತೆಯಲ್ಲಿ ತೊಡಗುತ್ತಾರೆ. ಪುರುಷರು ಸ್ನಾನ ಮಾಡಿ ಪೂಜೆಗೆ ಸಜ್ಜಾಗುತ್ತಾರೆ. ಒಂದು ಪುಟ್ಟ ಮೊರದಲ್ಲಿ ಹೋಳಿಗೆ, ಕೊಬ್ಬರಿ ಬಟ್ಟಲು, ಬೇವಿನ ಸೊಪ್ಪು, ಬಾಳೆಹಣ್ಣು, ಅರಿಷಿಣ, ಕುಂಕುಮ, ಹಸಿರು ಗಾಜಿನ ಬಳೆ ಇರಿಸುತ್ತಾರೆ. ಇದನ್ನೇ 'ಹೋಳಿಗೆ ಅಮ್ಮ' ಎಂಬ ಹೆಸರಲ್ಲಿ ಪೂಜೆ ಮಾಡುತ್ತಾರೆ. ಜನರನ್ನು, ಹಾಗೂ ಜಾನುವಾರುಗಳನ್ನು ಯಾವುದೇ ಕಾಯಿಲೆ ಬರದಂತೆ ಕಾಪಾಡಮ್ಮ ಎಂದು ಬೇಡಿಕೊಂಡು ಎಲ್ಲರೂ ಆ ಮೊರಕ್ಕೆ ನಮಿಸುತ್ತಾರೆ.1
- ಕೂಡ್ಲಿಗಿ : ಹರಪನಹಳ್ಳಿ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರಿಗೆ ಸಚಿವೆ ಸ್ಥಾನ ನೀಡಬೇಕು - ವಂದೇ ಮಾತರಂ ಜಾಗೃತಿ ವೇದಿಕೆ ಮಹಿಳಾ ಮುಖಂಡರ ಹಕ್ಕೊತ್ತಾಯ- ವಿಜಯನಗರ ಜಿಲ್ಲೆ ಕೂಡ್ಲಿಗಿ *ಕೂಡ್ಲಿಗಿ : ಹರಪನಹಳ್ಳಿ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರಿಗೆ ಸಚಿವೆ ಸ್ಥಾನ ನೀಡಬೇಕು - ವಂದೇ ಮಾತರಂ ಜಾಗೃತಿ ವೇದಿಕೆ ಮಹಿಳಾ ಮುಖಂಡರ ಹಕ್ಕೊತ್ತಾಯ*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಹರಪನಹಳ್ಳಿ ಕ್ಷೇತ್ರದ ಶಾಸಕರಾದ ಶ್ರೀಮತಿ ಲತಾಮಲ್ಲಿಕಾರ್ಜುನರವರಿಗೆ ಸಚಿವೆ ಸ್ಥಾನ ನೀಡಬೇಕೆಂದು. ವಂದೇ ಮಾತರಂ ಜಾಗೃತಿ ವೇದಿಕೆ ವಿಜಯನಗರ ಜಿಲ್ಲಾ ಮಹಿಳಾ ಮುಖಂಡರು , ಜಿಲ್ಲಾ ಮುಖಂಡರಾದ ವಿ.ಜಿ.ವೃಷಭೇಂದ್ರ ನೇತೃತ್ವದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರಿಗೆ ಈ ಮೂಲಕ ಮನವಿ ಮಾಡಿದ್ದಾರೆ. ಶ್ರೀಮತಿ ಲತಾ ಮಲ್ಲಿಕಾರ್ಜುನ ರವರು , ಮಾಜಿ ಉಪಮುಖ್ಯಮಂತ್ರಿ ಹಾಗೂ ದಿವಂಗತ ಎಂ.ಪಿ.ಪ್ರಕಾಶರವರ ಪುತ್ರಿಯಾಗಿದ್ದು. ರಾಜ್ಯದಲ್ಲಿ ಕಾಂಗ್ರೇಸ್ ಬಲಗೊಳ್ಳಲು , ಎಂ.ಪಿ.ಪ್ರಕಾಶ ರವರು ಹಾಗೂ ಅವರ ಪುತ್ರ ಎಂ.ಪಿ.ರವಿಯವರು ಶ್ರಮಿಸಿದ್ದಾರೆ. ಅಂತಯೇ ಶ್ರೀಲತಾ ಮಲ್ಲಿಕಾರ್ಜುನ ರವರು , ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಶಾಸಕರಾಗಿದ್ದು. ಮಹಿಳಾ ಖೋಟದಲ್ಲಿ ಹಾಗೂ ವಿಜಯನಗರ ಜಿಲ್ಲೆಯರೇ ಆದ ಅವರನ್ನು , ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರು ತಮ್ಮ ಮಂತ್ರಿಮಂಡಲದಲ್ಲಿ ಸಚಿವೆ ಸ್ಥಾನ ನೀಡಬೇಕಿದೆ. ಇದರಿಂದಾಗಿ ವಿಜಯನಗರ ಉಸ್ತುವಾರಿಯನ್ನು ಸ್ಥಳೀಯರಿಗೆ ನೀಡಿದ , ಹಾಗೂ ಕಲ್ಯಾಣ ಕರ್ನಾಟಕದ ವಿಜಯನಗರ ಜಿಲ್ಲೆಗೆ ಮಹಿಳಾ ಪ್ರಾತಿನಿಧ್ಯ ನೀಡಿದ ಹೆಗ್ಗಳಿಕೆ ಮುಖ್ಯಮಂತ್ರಿಗಳದ್ದಾಗುತ್ತೆ ಎಂದು ಮಹಿಳಾ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರು , ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಪಡಿಸುವುದಕ್ಕಾಗಿ. ಮತ್ತು ಕಾಂಗ್ರೆಸ್ ಪಕ್ಷದಲ್ಲಿ , ಮಹಿಳೆಯರನ್ನು ಸಂಘಟಿಸಿ ಮುಂದಿನ ಚುನಾವಣೆಯಲ್ಲಿ ಮಹಿಳಾ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಯತ್ನಿಸಲು ಪ್ರೇರೇಪಿಸಿದಂತಾಗುತ್ತದೆ. ವೀರಶೈವ ಜಂಗಮ ಸಮುದಾಯದ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರು , ಸಚಿವರಾದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ವೀರಶೈವ ಜಂಗಮ ಸಮಾಜಕ್ಕೆ ಸೂಕ್ತ ಸ್ಥಾನಮಾನಕ್ಕೆ ಗೌರವ ನೀಡಿದ ಕೀರ್ತಿ ಮುಖ್ಯಮಂತ್ರಿಗಳದ್ದಾಗುತ್ತದೆ. ಮತ್ತು ಕಾಂಗ್ರೆಸ್ ಪಕ್ಷವು , ವೀರಶೈವ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದಂತಾಗುತ್ತದೆ. ಕಾರಣ ಕಾಂಗ್ರೇಸ್ ಪಕ್ಷದ ವರಿಷ್ಠರು , ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರು ಕೂಲಂಕುಷವಾಗಿ ಪರಾಮರ್ಶಿಸಿ ಸೂಕ್ತ ನಿರ್ಧಾರ ಕೈಗೊಂಡು. ಸಂಪುಟದಲ್ಲಿ ಹರಪನಹಳ್ಳಿ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರಿಗೆ , ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇೆಕೆಂದು. ವಂದೇ ಮಾತರಂ ಜಾಗೃತಿ ವೇದಿಕೆ , ವಿಜಯನಗರ ಜಿಲ್ಲಾ ಮಹಿಳಾ ಘಟಕ ಈ ಮೂಲಕ. ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ , ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರವರಲ್ಲಿವಮನವಿ ಮಾಡಿದೆ. ವಂದೇ ಮಾತರಂ ಜಾಗೃತಿ ವೇದಿಕೆಯ ಕೂಡ್ಲಿಗಿ ಹಾಗೂ ವಿಜಯನಗರ ಜಿಲ್ಲಾ ಘಟಕದ ಮಹಿಳಾ ಮುಖಂಡರು ಉಪಸ್ಥಿತರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ಚಿಕ್ಕನಾಯಕನಹಳ್ಳಿ ಹೇಮಾವತಿ ಹೋರಾಟದ ಆರನೇ ದಿನದ ರಾತ್ರಿ ಹೋರಾಟಗಾರರು ಭಜನೆಯಲ್ಲಿ ತಲ್ಲಿನರಾಗಿರುವುದು1
- ಮೂಲಬೂತ ಸೌಕರ್ಯಗಳಿಂದ ವಂಚಿತವಾದ ಚಿಕ್ಕಂದವಾಡಿ ಗ್ರಾಮದ ಅಂಗನವಾಡಿ ಕೇಂದ್ರ ಚಿಕ್ಕಂದವಾಡಿ ಗ್ರಾಮದ ಅಂಗನವಾಡಿ ಕೇಂದ್ರ ಮೂಲಬೂತ ಸೌಕರ್ಯಗಳಿಂದ ವಂಚಿತವಾಗಿದೆ. ಅಂಗನವಾಡಿ ಸಹಾಯಕಿ ಕೊರತೆ, ಮಕ್ಕಳು ಮೂಲಭೂತ ಸೌಕರ್ಯದಿಂದ ದೂರ* ಹೊಳಲ್ಕೆರೆ ತಾಲ್ಲೂಕು ಚಿಕ್ಕಂದವಾಡಿ ಗ್ರಾಮದ ಅಂಗನವಾಡಿ 'ಸಿ' ಕೇಂದ್ರದಲ್ಲಿ ಒಟ್ಟು 12 ಮಕ್ಕಳಿದ್ದು, ಆರು ತಿಂಗಳ ಮೇಲ್ಪಟ್ಟು ಮೂರು ವರ್ಷದೊಳಗಿನ 25 ಮಕ್ಕಳಿಗೆ ಫುಡ್ ನ್ನು ಮನೆಗೆ ವಿತರಣೆ ಮಾಡಲಾಗುತ್ತಿದೆ. ಜೊತೆಗೆ 5 ಜನ ಗರ್ಭಿಣಿಯರು 5 ಜನ ಬಾಣಂತಿಯರಿಗೂ ಸಹ ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದ್ದು, ಮುಖ್ಯವಾಗಿ 12 ಮಕ್ಕಳಿಗೆ ಊಟ ಉಪಚಾರವನ್ನು ಸಿದ್ಧಪಡಿಸಲು ಸಹಾಯಕಿ ಇಲ್ಲದ ಕಾರಣ ಅಂಗನವಾಡಿ ಕಾರ್ಯಕರ್ತೆ ಆರ್. ಭಾಗ್ಯಮ್ಮ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸಲು ಕಷ್ಟ ಸಾಧ್ಯವಾಗುತ್ತಿದೆ ಎಂದು ತಮ್ಮ ಅಸಹಾಯಕತೆಯನ್ನು ತಿಳಿಸಿದ್ದಾರೆ. ಈ ಅಂಗನವಾಡಿ ಕೇಂದ್ರದ ಸುತ್ತಮುತ್ತಲು ಕೆರೆ ಜಮೀನು ಹಾಗು ಗುಂಡಿ-ದಿಮ್ಮಿಗಳಿದ್ದು ಮಳೆಗಾಲದಲ್ಲಿ ಮಕ್ಕಳು ಹಾಗೂ ಸಿಬ್ಬಂದಿಗಳು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಸೂಕ್ತವಾದ ನೀರಿನ ವ್ಯವಸ್ಥೆ ಹಾಗೂ ಕರೆಂಟ್ ವ್ಯವಸ್ಥೆ ಮತ್ತು ಅಂಗನವಾಡಿ ಕೇಂದ್ರವು ರಸ್ತೆಯ ಸಮೀಪ ಇರುವುದರಿಂದ ಮಕ್ಕಳು ಸುತ್ತಮುತ್ತ ಹೊರಗಡೆ ಹೋಗದಂತೆ ವ್ಯವಸ್ಥಿತವಾದ ಕಾಂಪೌಂಡ್ ಇರುವುದಿಲ್ಲ ಆದ ಕಾರಣ ಮಕ್ಕಳು ಹಾಗೂ ಸಿಬ್ಬಂದಿಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಿ, ಬ್ಲಾಕ್ ನಾ ಅಂಗನವಾಡಿ ಕಾರ್ಯಕರ್ತೆ ಆರ್ ಭಾಗ್ಯಮ್ಮ ಮಾತನಾಡಿ ಅಂಗನವಾಡಿಗೆ ಸಂಬಂಧಿಸಿದಂತೆ ಕುಂದು ಕೊರತೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಿಳಿಸಿದ್ದು, ಈ ವರೆಗೂ ಯಾವುದೇ ಬದಲಾವಣೆಗಳು ಕಂಡುಬಂದಿರುವುದಿಲ್ಲ ಹಾಗೂ ಎಲ್ಲಾ ಚಟುವಟಿಕೆಗಳನ್ನು ಸಾಧ್ಯವಾದಷ್ಟು ನಿರ್ವಹಿಸುತ್ತಿದ್ದು, ಸಹಾಯಕಿಯನ್ನು ಆದಷ್ಟು ಬೇಗ ನೀಡುವುದು ಸೂಕ್ತವಾಗಿದೆ ಎಂದು ಹೇಳಿದರು.1
- ಪಾದಚಾರಿ ಮಾರ್ಗ ಹಾಗೂ ಸರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿಲುಗಡೆ ಮಾಡಲಾಗಿದ್ದ ವಾಹಗಳ ತೆರವು ಕಾರ್ಯಚರಣೆ:: ಶಿವಮೊಗ್ಗ- ನಗರ ವ್ಯಾಪ್ತಿಯ ರಸ್ತೆ, ಪಾದಚಾರಿ ಮಾರ್ಗ ಹಾಗೂ ಸರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿಲುಗಡೆ ಮಾಡಲಾಗಿದ್ದ ಒಟ್ಟು 84 ವಾಹನಗಳು ಪತ್ತೆಯಾಗಿದ್ದು, ಇವುಗಳಿಂದ ಸಾರ್ವಜನಿಕರಿಗೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವುದು ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿಖಿಲ್ ಬಿ. ಐ.ಪಿ.ಎಸ್. ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಸಂಬಂಧಿತ ವಾಹನಗಳ ಮಾಲೀಕರಿಗೆ ವಾಹನಗಳನ್ನು ತೆರವುಗೊಳಿಸುವಂತೆ ಸೂಚಿಸಿ, ವಾಹನಗಳ ಮೇಲೆ ನೋಟಿಸ್ ಅಂಟಿಸಲಾಗಿತ್ತು. ನೋಟಿಸ್ ನೀಡಿದ ನಂತರ 84 ವಾಹನಗಳಲ್ಲಿ 68 ವಾಹನಗಳ ಮಾಲೀಕರು ಸ್ವಯಂಪ್ರೇರಿತವಾಗಿ ತಮ್ಮ ವಾಹನಗಳನ್ನು ತೆರವುಗೊಳಿಸಿರುತ್ತಾರೆ. ಬಾಕಿ ಉಳಿದಿರುವ 16 ವಾಹನಗಳನ್ನು ಇಂದು, ದಿನಾಂಕ: 03-08-2026 ರಂದು, ಎ,ಜಿ,ಕಾರಿಯಪ್ಪ. ಕೆ.ಎಸ್.ಪಿ.ಎಸ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಹಾಗೂ ಮೋಟಾರು ವಾಹನ ಕಾಯ್ದೆ ಪ್ರಕಾರ ಈ ವಾಹನಗಳನ್ನು ಪರಿತ್ಯಕ್ತ ಅನುಪಯುಕ್ತ (Abandoned Vehicle) ಎಂದು ಪರಿಗಣಿಸಿ ಜಾರಿಯಲ್ಲಿರುವ ನಿಯಮಾನುಸಾರ ಟೋಯಿಂಗ್ ವಾಹನದ ಮೂಲಕ ತೆರವುಗೊಳಿಸುವ ಕಾರ್ಯಚರಣೆ ಕೈಗೊಳ್ಳಲಾಗುತ್ತಿದೆ. ಈ ಕಾರ್ಯಚರಣೆಯ ಅಂಗವಾಗಿ ಸಾಂಕೇತಿಕವಾಗಿ ಅಶೋಕ ನಗರ ಪ್ರದೇಶದಲ್ಲಿನ 06 ವಾಹನಗಳನ್ನು ಟೋಯಿಂಗ್ ಮೂಲಕ ತೆರವುಗೊಳಿಸಲಾಗುತ್ತದೆ. ಸಾರ್ವಜನಿಕರು ರಸ್ತೆ, ಪಾದಚಾರಿ ಮಾರ್ಗ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ವಾಹನಗಳನ್ನು ನಿಲುಗಡೆ ಮಾಡದೇ, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವಿನಂತಿಸಲಾಗುತ್ತದೆ. ನಿಯಮ ಉಲ್ಲಂಘಿಸಿ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟುಮಾಡುವ ವಾಹನಗಳ ವಿರುದ್ಧ ಮುಂದೆಯೂ ಇದೇ ರೀತಿಯ ಕ್ರಮವನ್ನು ನಿರಂತರವಾಗಿ ಕೈಗೊಳ್ಳಲಾಗುವುದು.2