ಪಾದಚಾರಿ ಮಾರ್ಗ ಹಾಗೂ ಸರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿಲುಗಡೆ ಮಾಡಲಾಗಿದ್ದ ವಾಹಗಳ ತೆರವು ಕಾರ್ಯಚರಣೆ:: ಶಿವಮೊಗ್ಗ- ನಗರ ವ್ಯಾಪ್ತಿಯ ರಸ್ತೆ, ಪಾದಚಾರಿ ಮಾರ್ಗ ಹಾಗೂ ಸರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿಲುಗಡೆ ಮಾಡಲಾಗಿದ್ದ ಒಟ್ಟು 84 ವಾಹನಗಳು ಪತ್ತೆಯಾಗಿದ್ದು, ಇವುಗಳಿಂದ ಸಾರ್ವಜನಿಕರಿಗೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವುದು ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿಖಿಲ್ ಬಿ. ಐ.ಪಿ.ಎಸ್. ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಸಂಬಂಧಿತ ವಾಹನಗಳ ಮಾಲೀಕರಿಗೆ ವಾಹನಗಳನ್ನು ತೆರವುಗೊಳಿಸುವಂತೆ ಸೂಚಿಸಿ, ವಾಹನಗಳ ಮೇಲೆ ನೋಟಿಸ್ ಅಂಟಿಸಲಾಗಿತ್ತು. ನೋಟಿಸ್ ನೀಡಿದ ನಂತರ 84 ವಾಹನಗಳಲ್ಲಿ 68 ವಾಹನಗಳ ಮಾಲೀಕರು ಸ್ವಯಂಪ್ರೇರಿತವಾಗಿ ತಮ್ಮ ವಾಹನಗಳನ್ನು ತೆರವುಗೊಳಿಸಿರುತ್ತಾರೆ. ಬಾಕಿ ಉಳಿದಿರುವ 16 ವಾಹನಗಳನ್ನು ಇಂದು, ದಿನಾಂಕ: 03-08-2026 ರಂದು, ಎ,ಜಿ,ಕಾರಿಯಪ್ಪ. ಕೆ.ಎಸ್.ಪಿ.ಎಸ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಹಾಗೂ ಮೋಟಾರು ವಾಹನ ಕಾಯ್ದೆ ಪ್ರಕಾರ ಈ ವಾಹನಗಳನ್ನು ಪರಿತ್ಯಕ್ತ ಅನುಪಯುಕ್ತ (Abandoned Vehicle) ಎಂದು ಪರಿಗಣಿಸಿ ಜಾರಿಯಲ್ಲಿರುವ ನಿಯಮಾನುಸಾರ ಟೋಯಿಂಗ್ ವಾಹನದ ಮೂಲಕ ತೆರವುಗೊಳಿಸುವ ಕಾರ್ಯಚರಣೆ ಕೈಗೊಳ್ಳಲಾಗುತ್ತಿದೆ. ಈ ಕಾರ್ಯಚರಣೆಯ ಅಂಗವಾಗಿ ಸಾಂಕೇತಿಕವಾಗಿ ಅಶೋಕ ನಗರ ಪ್ರದೇಶದಲ್ಲಿನ 06 ವಾಹನಗಳನ್ನು ಟೋಯಿಂಗ್ ಮೂಲಕ ತೆರವುಗೊಳಿಸಲಾಗುತ್ತದೆ. ಸಾರ್ವಜನಿಕರು ರಸ್ತೆ, ಪಾದಚಾರಿ ಮಾರ್ಗ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ವಾಹನಗಳನ್ನು ನಿಲುಗಡೆ ಮಾಡದೇ, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವಿನಂತಿಸಲಾಗುತ್ತದೆ. ನಿಯಮ ಉಲ್ಲಂಘಿಸಿ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟುಮಾಡುವ ವಾಹನಗಳ ವಿರುದ್ಧ ಮುಂದೆಯೂ ಇದೇ ರೀತಿಯ ಕ್ರಮವನ್ನು ನಿರಂತರವಾಗಿ ಕೈಗೊಳ್ಳಲಾಗುವುದು.
ಪಾದಚಾರಿ ಮಾರ್ಗ ಹಾಗೂ ಸರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿಲುಗಡೆ ಮಾಡಲಾಗಿದ್ದ ವಾಹಗಳ ತೆರವು ಕಾರ್ಯಚರಣೆ:: ಶಿವಮೊಗ್ಗ- ನಗರ ವ್ಯಾಪ್ತಿಯ ರಸ್ತೆ, ಪಾದಚಾರಿ ಮಾರ್ಗ ಹಾಗೂ ಸರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿಲುಗಡೆ ಮಾಡಲಾಗಿದ್ದ ಒಟ್ಟು 84 ವಾಹನಗಳು ಪತ್ತೆಯಾಗಿದ್ದು, ಇವುಗಳಿಂದ ಸಾರ್ವಜನಿಕರಿಗೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವುದು ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿಖಿಲ್ ಬಿ. ಐ.ಪಿ.ಎಸ್. ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಸಂಬಂಧಿತ ವಾಹನಗಳ ಮಾಲೀಕರಿಗೆ ವಾಹನಗಳನ್ನು ತೆರವುಗೊಳಿಸುವಂತೆ ಸೂಚಿಸಿ, ವಾಹನಗಳ ಮೇಲೆ ನೋಟಿಸ್ ಅಂಟಿಸಲಾಗಿತ್ತು. ನೋಟಿಸ್ ನೀಡಿದ ನಂತರ 84 ವಾಹನಗಳಲ್ಲಿ 68 ವಾಹನಗಳ ಮಾಲೀಕರು ಸ್ವಯಂಪ್ರೇರಿತವಾಗಿ ತಮ್ಮ ವಾಹನಗಳನ್ನು ತೆರವುಗೊಳಿಸಿರುತ್ತಾರೆ. ಬಾಕಿ ಉಳಿದಿರುವ 16 ವಾಹನಗಳನ್ನು ಇಂದು, ದಿನಾಂಕ: 03-08-2026 ರಂದು, ಎ,ಜಿ,ಕಾರಿಯಪ್ಪ. ಕೆ.ಎಸ್.ಪಿ.ಎಸ್
ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಹಾಗೂ ಮೋಟಾರು ವಾಹನ ಕಾಯ್ದೆ ಪ್ರಕಾರ ಈ ವಾಹನಗಳನ್ನು ಪರಿತ್ಯಕ್ತ ಅನುಪಯುಕ್ತ (Abandoned Vehicle) ಎಂದು ಪರಿಗಣಿಸಿ ಜಾರಿಯಲ್ಲಿರುವ ನಿಯಮಾನುಸಾರ ಟೋಯಿಂಗ್ ವಾಹನದ ಮೂಲಕ ತೆರವುಗೊಳಿಸುವ ಕಾರ್ಯಚರಣೆ ಕೈಗೊಳ್ಳಲಾಗುತ್ತಿದೆ. ಈ ಕಾರ್ಯಚರಣೆಯ ಅಂಗವಾಗಿ ಸಾಂಕೇತಿಕವಾಗಿ ಅಶೋಕ ನಗರ ಪ್ರದೇಶದಲ್ಲಿನ 06 ವಾಹನಗಳನ್ನು ಟೋಯಿಂಗ್ ಮೂಲಕ ತೆರವುಗೊಳಿಸಲಾಗುತ್ತದೆ. ಸಾರ್ವಜನಿಕರು ರಸ್ತೆ, ಪಾದಚಾರಿ ಮಾರ್ಗ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ವಾಹನಗಳನ್ನು ನಿಲುಗಡೆ ಮಾಡದೇ, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವಿನಂತಿಸಲಾಗುತ್ತದೆ. ನಿಯಮ ಉಲ್ಲಂಘಿಸಿ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟುಮಾಡುವ ವಾಹನಗಳ ವಿರುದ್ಧ ಮುಂದೆಯೂ ಇದೇ ರೀತಿಯ ಕ್ರಮವನ್ನು ನಿರಂತರವಾಗಿ ಕೈಗೊಳ್ಳಲಾಗುವುದು.
- :ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬರ ಆವರಿಸಿದ್ದು, ಕೃಷಿ ಚಟುವಟಿಕೆ ಸ್ತಬ್ಧ ಚಿತ್ರದುರ್ಗ :ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬರ ಆವರಿಸಿದ್ದು, ಕೃಷಿ ಚಟುವಟಿಕೆ ಸ್ತಬ್ಧವಾಗಿದೆ. ರೈತರು ಮಳೆಗಾಗಿ ದಿನ ಆಕಾಶವನ್ನು ನೋಡುವಂತಹ ಪರಿಸ್ಥಿತಿ ಬಂದೊದಗಿದೆ. ಚಿತ್ರದುರ್ಗ ಜಿಲ್ಲೆಯ ಆರೂ ತಾಲೂಕುಗಳಲ್ಲಿ ಒಂದೆರಡು ಅಡಿ ಭೂಮಿ ಹಸಿಯಾಗುವಷ್ಟು ಮಳೆಯಾಗಿಲ್ಲ.. ಇದರಿಂದ ಕೃಷಿ ಕ್ಷೇತ್ರಕ್ಕೆ ತೀವ್ರ ಹಿನ್ನಡೆಯಾಗಿದೆ. ಈಗಾಗಲೇ ಬಿತ್ತನೆ ಮಾಡಿದವರಿಗೂ ಪ್ರಯೋಜನವಿಲ್ಲದಂತಾಗಿದೆ. ಕಳೆದೊAದು ವಾರದಿಂದಲೂ ಜಿಲ್ಲೆಯಲ್ಲಿ ಮೋಡಕವಿದ ವಾತಾವರಣವಿದೆ. ಆದರೆ, ಮಳೆ ಮಾತ್ರ ಸುರಿಯುತ್ತಿಲ್ಲ. ಕೆಲವೆಡೆ ಆಗುತ್ತಿರುವ ಸೋನೆ ಮಳೆ ಕೃಷಿಗೆ ನೆರವಾಗುತ್ತಿಲ್ಲ. ಹೀಗಾಗಿ ಶೇ.೮೨ರಷ್ಟು ಕೃಷಿಕರು ಬಿತ್ತನೆಯನ್ನೇ ಮಾಡಿಲ್ಲ. ಶೇಂಗಾ, ರಾಗಿ, ಮೆಕ್ಕೆಜೋಳ ಬಿತ್ತನೆಗೆ ಹಿನ್ನಡೆಯಾಗಿದೆ.1
- ಜನರ ಹಕ್ಕಿಗಾಗಿ ಮೊಳಗಿದ ಧ್ವನಿ… ಬಳ್ಳಾರಿ ಜಿಲ್ಲಾಧಿಕಾರಿಗಳ (DC) ಕಚೇರಿ ಮುಂದೆ ಧರಣಿ ಜನರ ಹಕ್ಕಿಗಾಗಿ ಮೊಳಗಿದ ಧ್ವನಿ… ಬಳ್ಳಾರಿ ಜಿಲ್ಲಾಧಿಕಾರಿಗಳ (DC) ಕಚೇರಿ ಎದುರು ನಡೆದ ಸಭೆಯನ್ನು ಉದ್ದೇಶಿಸಿ, ಬಿಜೆಪಿ ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷರಾದ ಶ್ರೀ ಟಿ. ದರಪ್ಪ ನಾಯಕ ಅವರು ಮಾತನಾಡಿದರು. ಸಮಾಜದ ಹಕ್ಕು, ನ್ಯಾಯ ಹಾಗೂ ಜನಸಾಮಾನ್ಯರ ಸಮಸ್ಯೆಗಳ ಪರವಾಗಿ ಸದಾ ಧ್ವನಿಯಾಗಿರುವ ದರಪ್ಪ ನಾಯಕ ಅವರು, ಜನರ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ದೊರೆಯಬೇಕು ಮತ್ತು ಅವರ ನ್ಯಾಯಯುತ ಹಕ್ಕುಗಳಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು ಎಂಬ ಆಶಯವನ್ನು ವ್ಯಕ್ತಪಡಿಸಿದರು. “ಅಧಿಕಾರಕ್ಕಿಂತ ಜನರ ಹಿತ ಮುಖ್ಯ; ಹುದ್ದೆಗಿಂತ ಜನಸೇವೆ ಶ್ರೇಷ್ಠ” ಎಂಬ ಧ್ಯೇಯದೊಂದಿಗೆ ಜನರ ಮಧ್ಯೆ ನಿಂತು ಅವರ ಧ್ವನಿಗೆ ಶಕ್ತಿ ತುಂಬುತ್ತಿರುವ ಟಿ. ದರಪ್ಪ ನಾಯಕ ಅವರ ಮಾತುಗಳು ಸಭೆಯಲ್ಲಿ ನೆರೆದಿದ್ದವರಲ್ಲಿ ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸ ಮೂಡಿಸಿದವು. ಜನರೊಂದಿಗೆ… ಜನರಿಗಾಗಿ… ಜನರ ಹಕ್ಕಿಗಾಗಿ ಸದಾ ಮುಂಚೂಣಿಯಲ್ಲಿ — ಟಿ. ದರಪ್ಪ ನಾಯಕ. ಶ್ರೀ ಟಿ. ದರಪ್ಪ ನಾಯಕ ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷರು ಭಾರತೀಯ ಜನತಾ ಪಾರ್ಟಿ (ಬಿಜೆಪಿ), ಬಳ್ಳಾರಿ ಜಿಲ್ಲಾ.1
- ಶೇ33 % ಮೀಸಲಾತಿ ನಮ್ಮ ಹಕ್ಕು - ಜನವಾದಿ ಮಹಿಳಾ ಸಂಘ ಹಕ್ಕೊತ್ತಾಯ- ವಿಜಯನಗರ ಜಿಲ್ಲೆ ಕೂಡ್ಲಿಗಿ *ಶೇ33 % ಮೀಸಲಾತಿ ನಮ್ಮ ಹಕ್ಕು - ಜನವಾದಿ ಮಹಿಳಾ ಸಂಘ ಹಕ್ಕೊತ್ತಾಯ*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಮಹಿಳೆಯರಿಗೆ ಶೆೇ 33%ಮೀಸಲಾತಿ ಒದಗಿಸಿ , ಸರ್ಕಾರಗಳು ಆದೇಶ ಹೊರಡಿಸಬೇಕು. ಅದು ನಮ್ಮ ಹಕ್ಕು ಎಂದು ಸರ್ಕಾರಗಳಿಗೆ , ಜನವಾದಿ ಮಹಿಳಾ ಸಂಘ ಹಕ್ಕೊತ್ತಾಯ ಮಾಡಿದೆ. ಜನವಾದಿ ಮಹಿಳಾ ಸಂಘದ ತಾಲೂಕಾಧ್ಯಕ್ಷೆ ಟಿ.ಭಾಗ್ಯರವರ ನೇತೃತ್ವದಲ್ಲಿ , ಜನವಾದಿ ಮಹಿಳಾ ಸಂಘದ ಪದಾಧಿಕಾರಿಗಳು ಸದಸ್ಯರು ಮಹಿಳೆಯರು ತಹಶಿಲ್ದಾರರಿಗೆ ಹಕ್ಕೊತ್ತಾಯ ಪತ್ರ ನೀಡಿದ್ದಾರೆ. ಇದಕ್ಕೂ ಮುನ್ನ ಅವರು , ಗಾಂಧೀಚಿತಾಭಸ್ಮ ಸ್ಮಾರಕದಿಂದ. ಪ್ರತಿಭಟನಾ ಮೆರವಣಿಗೆ ಹೊರಟು , ಪಟ್ಟಣದ ಪ್ರಮುಖ ರಸ್ತೆಗಳು ವೃತ್ತಗಳ ಮೂಲಕ ತಹಶಿಲ್ದಾರರ ಕಚೇರಿ ತಲುಪಿದ್ದಾರೆ. ತಹಶಿಲ್ದಾರರಿಗೆ ಹಕ್ಕೊತ್ತಾಯ ಪತ್ರ ನೀಡಿದ ಸಮಾಜವಾದಿ ಮಹಿಳಾ ಸಂಘದ ಪದಾಧಿಕಾರಿಗಳು, ಎಲ್ಲಾ ಕ್ಷೇತ್ರಗಳಲ್ಲಿ ಸರ್ಕಾರಕ್ಕೆ ಶೇ 33%ರಷ್ಟು ಮೀಸಲಾತಿ ನೀಡುವಂತೆ ಅಗ್ರಹಿಸಿದರು. ಪಟ್ಟಣ ಸೇರಿದಂತೆ , ತಾಲೂಕಿನ ವಿವಿದೆಡೆಗಳಿಂದ ಆಗಮಿಸಿದ್ದ. ಮಹಿಳಾ ಹೋರಾಟಗಾರ್ತಿಯರು , ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- "ಅಸಮಾಧಾನಿತರಿಗೆ ಶಾಂತಿಯಿಂದ ಇರುವಂತೆ ಸಿಎಂ ಡಿ ಕೆ ಶಿವಕುಮಾರ ಸೂಚನೆ.1
- ಈ ಕ್ಷಣದಲ್ಲಿ ತುಮಕೂರು ಮತ್ತು ಶಿವಮೊಗ್ಗ ರಸ್ತೆ ಮಾರ್ಗದಲ್ಲಿ ಬಾರಿ ಮಳೆ ಬರುತ್ತಿರುವ ದೃಶ್ಯ1
- ಹುಣಸೆಕಟ್ಟೆ ಗ್ರಾಮದಲ್ಲಿ ಆಹಾರ ಅರಸಿ ಬಂದ ನವಿಲುಗಳಿಗೆ ಆಹಾರ ನೀಡಿದ ರೈತರು ಮಾನವೀಯತೆ ಮೆರೆದಿದ್ದಾರೆ ಹುಣಸೆಕಟ್ಟೆ ಗ್ರಾಮದಲ್ಲಿ ಆಹಾರ ಅರಸಿ ಬಂದ ನವಿಲುಗಳಿಗೆ ಆಹಾರ ನೀಡುವ ಮೂಲಕ ರೈತ ಮುಖಂಡರು ಮಾನವೀಯತೆ ಮೆರೆದಿದ್ದಾರೆ. ಇನ್ನೂ ಚಿತ್ರದುರ್ಗ ತಾಲ್ಲೂಕಿನ ಹುಣಸೆಕಟ್ಟೆ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ. ಇನ್ನೂ ಮಳೆಯ ಕೊರತೆಯಿಂದಾಗಿ ಬರ ಆವರಿಸಿದೆ. ಜನ ಜಾನುವಾರುಗಳಿಗೆ ಆಹಾರ ನೀರಿನ ಕೊರತೆ ಉಂಟಾಗಿದ್ದು ಪ್ರಾಣಿ ಪಕ್ಷಿಗಳ ಮೇಲೆ ಪರಿಣಾಮ ಬೀರುತ್ತಿದೆ. ಇತ್ತ ಚಿತ್ರದುರ್ಗ ಜಿಲ್ಲೆ ಹುಣಸೆಕಟ್ಟೆ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಮಳೆಯ ಕೊರತೆಯಿಂದಾಗಿ ಅಡವಿಗಳಲ್ಲಿ ಆಹರದ ಕೊರತೆ ಉಂಟಾಗಿದ್ದು ನೀರಿಗೂ ಆಹಾಕಾರ ಉಂಟಾಗಿದ್ದು ಪ್ರಾಣಿ ಪಕ್ಷಿಗಳು ನಲುಗಿ ಹೋಗಿವೆ. ಇನ್ನೂ ಗ್ರಾಮದ ರೈತ ಮುಖಂಡ ಕಾಂತರಾಜ್ ಅವರ ಜಮೀನಿಗಿಂದು ಆಹಾರ ಅರಸಿ ಬಂದ ನವಿಲುಗಳಿಗೆ ಆಹಾರ ನೀರಿನ ವ್ಯವಸ್ಥೆ ಮಾಡುವ ಮೂಲಕ ಕಾಂತರಾಜ್ ಅವರು ಮಾನವೀಯತೆ ಮೆರೆದಿದ್ದಾರೆ. ಅಷ್ಟೇ ಅಲ್ಲದೆ ಆಹಾರದ ಕೊರತೆಯಿಂದಾಗಿ ನವಿಲುಗಳು ಅಕ್ಕಪಕ್ಕದ ಜಮೀನು ತೋಟಗಳಿಗೆ ಬರುತ್ತಿವೆ.1
- ಕೂಲಿ ಮಾಡುವ ಸ್ಥಳದಲ್ಲಿ ಕಾರ್ಮಿಕ ಮೃತಪಟ್ಟಲ್ಲಿ 20 ಲಕ್ಷ ಪರಿಹಾರ ನೀಡಬೇಕು. ಕೂಲಿ ಕೆಲಸಕ್ಕೆ ವಿದ್ಯಾವಂತ ಯುವಕರು ಬರುತ್ತಿರುವುದರಿಂದ ಕೌಶಲ ಆಧಾರಿತ ತರಬೇತಿ ನೀಡಬೇಕು. ರಾಮಜೀ ಕಾಮಗಾರಿಗಳು ನಗರ ಪ್ರದೇಶಕ್ಕೂ ವಿಸ್ತಾರ ಮಾಡಬೇಕು. ಚಳ್ಳಕೆರೆ:ಉದ್ಯೋಗ ಖಾತ್ರಿ ಅಸ್ತಿತ್ವವೇ ಬದಲಾಯಿಸುವ ದೃಷ್ಟಿಯಲ್ಲಿ ಜಾರಿ ಆಗಿರುವ ವಿಬಿರಾಮಜೀಯಿಂದ ದುಡಿಯುವ ಕೈಗಳಿಗೆ ಕೆಲಸ ಸಿಗುತ್ತಿಲ್ಲ ಎಂದು ತಾಲೂಕು ಪಂಚಾಯತಿ ಮುಂಭಾಗದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಾಪಂ ಇಒ ಎಚ್. ಶಶಿಧರ್ ಅವರಿಗೆ ಮನವಿ ಸಲ್ಲಿಸಿದರು. ಉದ್ಯೋಗ ಖಾತ್ರಿ ನರೇಗಾ ಯೋಜನೆ ಹಳ್ಳಿ ಮಟ್ಟದ ಕೂಲಿಗಾರರಿಗೆ ಬದುಕಿನ ಭದ್ರತೆ ಆಗಿತ್ತು. ಇದರಿಂದ ಜಲ ಸಂರಕ್ಷಣೆಗಾಗಿ ಕೆರೆ, ಗೋಕಟ್ಟೆ, ಚೆಕ್ ಡ್ಯಾಂಗಳಲ್ಲಿ ಹೂಳೆತ್ತುವ ಕಾಮಗಾರಿ ಕೆಲಸ ಸಿಗುತ್ತಿತ್ತು. ಆದರೆ, ವಿಬಿ ರಾಮಜೀ ಜಾರಿ ಮಾಡಿವ ಮೂಲಕ ಖಾತ್ರಿ ಕಾಮಗಾರಿಗಳ ಬದಲಾವಣೆ ಮಾಡಲಾಗಿದೆ. ಪಂಚಾಯತಿ ಹಂತದಲ್ಲಿ ಕೂಲಿ ಕೆಲಸ ನೀಡುತ್ತಿಲ್ಲ. ಪಿಡಿಒ ಗಳನ್ನು ಬೇಡಿದರೂ ಎನ್ಎಂಆರ್ ತೆಗೆದು ಕೆಲಸ ಕೊಡುತ್ತಿಲ್ಲ. ಪ್ರಸ್ತುತ ಮಳೆ ಕೊರತೆಯಿಂದ ಕೃಷಿ ಕೆಲಸಗಳಿಲ್ಲ. ಕೂಲಿ ಕಾರ್ಮಿಕರು ಗೂಳೆ ಹೋಗುವ ಪರಿಸ್ಥಿತಿ ಇದೆ. ರಾಮಜೀ ಯೋಜನೆಯಲ್ಲಿ ಹೂಳುತ್ತುವ ಕಾಮಗಾರಿಗೆ ಆದ್ಯತೆ ನೀಡಬೇಕು.ಕಾಮಗಾರಿಗಳ ಆಯ್ಕೆ ಮಾಡುವ ಸಂಪೂರ್ಣ ಅಧಿಕಾರ ಗ್ರಾಮ ಪಂಚಾಯತಿಗೆ ನೀಡಬೇಕು. ಕೂಲಿ ಮಾಡುವ ಸ್ಥಳದಲ್ಲಿ ಕಾರ್ಮಿಕ ಮೃತಪಟ್ಟಲ್ಲಿ 20 ಲಕ್ಷ ಪರಿಹಾರ ನೀಡಬೇಕು. ಕೂಲಿ ಕೆಲಸಕ್ಕೆ ವಿದ್ಯಾವಂತ ಯುವಕರು ಬರುತ್ತಿರುವುದರಿಂದ ಕೌಶಲ ಆಧಾರಿತ ತರಬೇತಿ ನೀಡಬೇಕು. ರಾಮಜೀ ಕಾಮಗಾರಿಗಳು ನಗರ ಪ್ರದೇಶಕ್ಕೂ ವಿಸ್ತಾರ ಮಾಡಬೇಕು. ಈ ವರ್ಷ ಮುಂಗಾರು ಮಳೆ ಸಂಪೂರ್ಣ ಕುಂಠಿತವಾಗಿದೆ. ಕೂಡಲೇ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಇಒ ಎಚ್. ಶಶಿಧರ್, ಪಂಚಾಯತಿ ಹಂತದಲ್ಲಿ ಕೆಲಸ ನೀಡಲು ಕ್ರಮ ವಹಿಸಲಾಗಿದೆ. ಈಗಾಗಲೇ, ಪರಶುರಾಮಪುರ ಗ್ರಾಮ ಪಂಚಾಯತಿಯಲ್ಲಿ 60 ಲಕ್ಷ ವೆಚ್ಚದ ಕಾಮಗಾರಿಗಳ ಅನುಮೋದನೆ ಮಾಡಲಾಗಿದೆ. ಪ್ರತಿ ಪಂಚಾಯತಿಯಲ್ಲೂ ಕಾರ್ಮಿಕರಿಗೆ ಕೆಲಸ ನೀಡುವ ವ್ಯವಸ್ಥೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಸಂಘಟನೆಯ ಟಿ. ಪರಮೇಶ್, ಎಂ.ಆರ್. ಸಂಧ್ಯಾ,ಇ. ಶೋಭಾ, ಆರ್.ಟಿ. ರೇಣುಕಾ, ನಾಗರಾಜ್, ಒ. ರಾಧಮ್ಮ, ನೀಲಮ್ಮ, ಅನ್ನಪೂರ್ಣ, ಶೃತಿ, ಎಚ್. ಸುರೇಶ್, ಗೋವಿಂದಪ್ಪ, ಅಂಜಿನಪ್ಪ, ಹನುಮಂತಪ್ಪ, ಗಿರಿಯಮ್ಮ, ಸ್ವಾಮಿ, ಲತಮ್ಮ ಇದ್ದರು.1
- ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ ಕಾವ್ಯಾರಾಣಿ. ಎಚ್ ಡಿ ಕೋಟೆ : ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ ಕಾವ್ಯಾರಾಣಿ. 5.50ಲಕ್ಷರೂ ನೀಡುವ ವೇಳೆ ಲೋಕಾ ಟ್ರಾಪ್.! ಎಚ್ ಡಿ ಕೋಟೆ ತಾಲೂಕಿನಲ್ಲಿ ನಾಲ್ಕೂವರೆ ಎಕರೆ ಜಮೀನಿಗೆ ನ್ಯಾಯಾಲಯ ಆದೇಶ ಮಾಡಿದ್ದರೂ ಕಂದಾಯ ಮೇಲ್ಮನವಿ ಇತ್ಯರ್ಥ ಪಡಿಸಲು ಲಂಚಕ್ಕೆ ಬೇಡಿಕೆ ಇಟ್ಟದ್ದರು ಎನ್ನಲಾಗಿದೆ.1