Shuru
Apke Nagar Ki App…
ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ ಕಾವ್ಯಾರಾಣಿ. ಎಚ್ ಡಿ ಕೋಟೆ : ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ ಕಾವ್ಯಾರಾಣಿ. 5.50ಲಕ್ಷರೂ ನೀಡುವ ವೇಳೆ ಲೋಕಾ ಟ್ರಾಪ್.! ಎಚ್ ಡಿ ಕೋಟೆ ತಾಲೂಕಿನಲ್ಲಿ ನಾಲ್ಕೂವರೆ ಎಕರೆ ಜಮೀನಿಗೆ ನ್ಯಾಯಾಲಯ ಆದೇಶ ಮಾಡಿದ್ದರೂ ಕಂದಾಯ ಮೇಲ್ಮನವಿ ಇತ್ಯರ್ಥ ಪಡಿಸಲು ಲಂಚಕ್ಕೆ ಬೇಡಿಕೆ ಇಟ್ಟದ್ದರು ಎನ್ನಲಾಗಿದೆ.
ಬಸವರಾಜ ವೀ ಎಚ್
ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ ಕಾವ್ಯಾರಾಣಿ. ಎಚ್ ಡಿ ಕೋಟೆ : ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ ಕಾವ್ಯಾರಾಣಿ. 5.50ಲಕ್ಷರೂ ನೀಡುವ ವೇಳೆ ಲೋಕಾ ಟ್ರಾಪ್.! ಎಚ್ ಡಿ ಕೋಟೆ ತಾಲೂಕಿನಲ್ಲಿ ನಾಲ್ಕೂವರೆ ಎಕರೆ ಜಮೀನಿಗೆ ನ್ಯಾಯಾಲಯ ಆದೇಶ ಮಾಡಿದ್ದರೂ ಕಂದಾಯ ಮೇಲ್ಮನವಿ ಇತ್ಯರ್ಥ ಪಡಿಸಲು ಲಂಚಕ್ಕೆ ಬೇಡಿಕೆ ಇಟ್ಟದ್ದರು ಎನ್ನಲಾಗಿದೆ.
More news from ಕರ್ನಾಟಕ and nearby areas
- "ಅಸಮಾಧಾನಿತರಿಗೆ ಶಾಂತಿಯಿಂದ ಇರುವಂತೆ ಸಿಎಂ ಡಿ ಕೆ ಶಿವಕುಮಾರ ಸೂಚನೆ.1
- ಧಾರವಾಡ: ಪ್ರತ್ಯೇಕ ಮಹಾನಗರ ಪಾಲಿಕೆಗೆ ಒತ್ತಾಯಿಸಿ ಮತ್ತೆ ಪ್ರತಿಭಟನೆ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸುವಂತೆ ಒತ್ತಾಯಿಸಿ ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರತ್ಯೇಕ ಮಹಾನಗರ ಪಾಲಿಕೆ ಕುರಿತು ಸರ್ಕಾರ ಒಂದು ತಿಂಗಳೊಳಗೆ ಅಧಿಸೂಚನೆ ಹೊರಡಿಸುವುದಾಗಿ ಭರವಸೆ ನೀಡಿದ್ದರೂ, ಗಡುವು ಮುಗಿದ ಬಳಿಕವೂ ಯಾವುದೇ ಅಧಿಸೂಚನೆ ಪ್ರಕಟಿಸದಿರುವುದನ್ನು ಖಂಡಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಧಾರವಾಡದ ಜನರ ಬಹುಕಾಲದ ಬೇಡಿಕೆಯಾಗಿರುವ ಪ್ರತ್ಯೇಕ ಮಹಾನಗರ ಪಾಲಿಕೆಯನ್ನು ತಕ್ಷಣ ಜಾರಿಗೊಳಿಸಬೇಕು. ವಿಳಂಬ ಮಾಡದೇ ಅಧಿಸೂಚನೆ ಹೊರಡಿಸಿ ಪಾಲಿಕೆ ರಚನೆ ಪ್ರಕ್ರಿಯೆ ಆರಂಭಿಸಬೇಕು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಆಗ್ರಹಿಸಿದರು. ಸರ್ಕಾರ ಶೀಘ್ರದಲ್ಲೇ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಹೋರಾಟ ಸಮಿತಿ ಎಚ್ಚರಿಕೆ ನೀಡಿತು.1
- ಅಳ್ನಾವರದಿಂದ ದಾಂಡೇಲಿಗೆ ತಲುಪಿ ಆನಂದಿಸುವ ಪ್ರಯಾಣಿಕರ ಗುಂಪು ಅಳ್ನಾವರ-ದಾಂಡೇಲಿ ರೈಲು ಯಾನ ಪ್ರಕೃತಿ ಮಡಲಲ್ಲಿ ಸಾಗುವ ಸುಂದರ ಅನುಭವ ಪ್ರಕೃತಿ ವೈಭವ ಮಡಲಲ್ಲಿ ಅಳ್ನಾವರ–ದಾಂಡೇಲಿ ರೈಲು ಯಾನ ಅಳ್ನಾವರ :ಅಳ್ನಾವರ -ದಾoಡೇಲಿ ಮಾರ್ಗದಲ್ಲಿ ಪಶ್ಚಿಮ ಘಟ್ಟದ ಹಸಿರು ಸಿರಿಯ ನಡುವೆ ಮನಸ್ಸಿಗೆ ಮುದ ನೀಡುವ ಪುಟ್ಟ ರೈಲು ಯಾನ ಪ್ರಕೃತಿ ಪ್ರಿಯರಿಗೆ ಒಂದು ಅಪರೂಪದ ಅನುಭವವನ್ನು ನೀಡುತ್ತದೆ. ರೈಲು ನಿಧಾನವಾಗಿ ಅಳ್ನಾವರ ನಿಲ್ದಾಣದಿಂದ ಹೊರಟ ಕ್ಷಣದಿಂದಲೇ ಪ್ರಕೃತಿಯ ರಮ್ಯ ಲೋಕ ತೆರೆದುಕೊಳ್ಳುತ್ತದೆ. ಮುಗಿಲೆತ್ತರಕ್ಕೆ ಬೆಳೆದಿರುವ ದಟ್ಟ ಕಾಡು, ಹಚ್ಚಹಸಿರಿನ ಮರಗಳ ಸಾಲು, ಅಂಕುಡೊಂಕಾಗಿ ಸಾಗುವ ರೈಲು ಹಳಿ, ಬೆಟ್ಟ–ಕೊಳ್ಳಗಳ ನಡುವೆ ತೇಲುವ ತಂಪಾದ ಗಾಳಿ ಮನಸ್ಸನ್ನು ಮಂತ್ರಮುಗ್ಧಗೊಳಿಸುತ್ತದೆ. ಕಿಟಕಿಯ ಪಕ್ಕ ಕುಳಿತರೆ ಪ್ರಕೃತಿಯೇ ನಮ್ಮೊಂದಿಗೆ ಮಾತಾಡುತ್ತಿರುವ ಅನುಭವವಾಗುತ್ತದೆ. ಮಾರ್ಗದುದ್ದಕ್ಕೂ ಕೇಳಿಬರುವ ಹಕ್ಕಿಗಳ ಕಲರವ, ಕಾಡಿನ ನಿಶ್ಶಬ್ದ, ಅಲ್ಲಲ್ಲಿ ಕಾಣಸಿಗುವ ನವಿಲುಗಳ ನರ್ತನ, ಹಸಿರು ಹೊದಿಕೆಯ ನಡುವೆ ಹರಡಿರುವ ಹೊಲಗದ್ದೆಗಳು ಹಾಗೂ ಪಶ್ಚಿಮ ಘಟ್ಟದ ನೈಸರ್ಗಿಕ ವೈಭವ ಕಣ್ಣಿಗೆ ಹಬ್ಬವಾಗುತ್ತದೆ. ಮಳೆಗಾಲದಲ್ಲಿ ಈ ಮಾರ್ಗ ಇನ್ನಷ್ಟು ಸುಂದರವಾಗಿ ಕಂಗೊಳಿಸುತ್ತದೆ. ಮಂಜಿನ ಹೊದಿಕೆ, ತೇವಗೊಂಡ ಕಾಡು ಮತ್ತು ಹಸಿರಿನ ಸೊಬಗು ಪ್ರಯಾಣಕ್ಕೆ ಹೊಸ ಮೆರುಗು ನೀಡುತ್ತವೆ. ಅಳ್ನಾವರ–ದಾಂಡೇಲಿ ರೈಲು ಮಾರ್ಗ ಕೇವಲ ಸಂಚಾರದ ಸಾಧನವಲ್ಲ; ಅದು ಪ್ರಕೃತಿಯ ಮಡಿಲಲ್ಲಿ ಸಾಗುವ ಒಂದು ಸುಂದರ ಅನುಭವ. ಛಾಯಾಗ್ರಹಣ ಪ್ರಿಯರು, ಪರಿಸರಾಸಕ್ತರು ಹಾಗೂ ವಾರಾಂತ್ಯದ ನೆಮ್ಮದಿಯ ಕ್ಷಣಗಳನ್ನು ಹುಡುಕುವವರಿಗೆ ಈ ಪ್ರಯಾಣ ಅತ್ಯುತ್ತಮ ಆಯ್ಕೆಯಾಗಿದೆ. ಅತ್ಯಂತ ವಿಶೇಷವೆಂದರೆ ಈ ಸುಂದರ ರೈಲು ಯಾನ ಕೇವಲ ಎರಡು ಗಂಟೆ.ಅತಿ ಕಡಿಮೆ ವೆಚ್ಚದಲ್ಲಿ ಇಂತಹ ಪ್ರಕೃತಿ ವೈಭವವನ್ನು ಸವಿಯುವ ಅವಕಾಶ ಅಪರೂಪ. ಒಮ್ಮೆ ಈ ರೈಲು ಯಾನ ಕೈಗೊಂಡರೆ ಪಶ್ಚಿಮ ಘಟ್ಟದ ಸೊಬಗು, ಹಕ್ಕಿಗಳ ಕಲರವ ಮತ್ತು ಹಸಿರಿನ ನೆನಪು ಬಹಳ ದಿನಗಳವರೆಗೆ ಮನಸ್ಸಿನಲ್ಲಿ ಉಳಿಯುತ್ತದೆ. ಪ್ರಕೃತಿಯನ್ನು ಪ್ರೀತಿಸುವ ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದರೂ ಅಳ್ನಾವರ–ದಾಂಡೇಲಿ ರೈಲು ಯಾನವನ್ನು ಅನುಭವಿಸಲೇಬೇಕು. ಇದು ಕೇವಲ ಒಂದು ಪ್ರಯಾಣವಲ್ಲ, ಪ್ರಕೃತಿಯೊಂದಿಗೆ ಬೆಸೆಯುವ ಒಂದು ಅದ್ಭುತ ಅನುಭವ.1
- ಈ ಕ್ಷಣದಲ್ಲಿ ತುಮಕೂರು ಮತ್ತು ಶಿವಮೊಗ್ಗ ರಸ್ತೆ ಮಾರ್ಗದಲ್ಲಿ ಬಾರಿ ಮಳೆ ಬರುತ್ತಿರುವ ದೃಶ್ಯ1
- ಬರುವ ಆಗಸ್ಟ್ 15, 2026 ರಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವ 79ನೇ ಸ್ವಾತಂತ್ರ್ಯ ದಿನಾಚರಣೆಯ ರೂಪರೇಷೆಗಳ ಕುರಿತು ಮುಂಡರಗಿ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ದಂಡಾಧಿಕಾರಿಗಳ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಮಹತ್ವದ ಪೂರ್ವಭಾವಿ ಸಭೆ ಸಭೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ನಡೆಯಬೇಕಾದ ಧ್ವಜಾರೋಹಣ, ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಿದ್ಧತೆಯ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ಆದೇಶ ಪಾಲಿಸದಿದ್ದರೆ ಸೂಕ್ತ ಕ್ರಮದ ಎಚ್ಚರಿಕೆ: ಸಭೆಯನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ದಂಡಾಧಿಕಾರಿಗಳು, "ಸ್ವಾತಂತ್ರ್ಯ ದಿನಾಚರಣೆಯು ರಾಷ್ಟ್ರೀಯ ಹಬ್ಬವಾಗಿದ್ದು, ಪ್ರತಿಯೊಂದು ಇಲಾಖೆ ಹಾಗೂ ಸಂಸ್ಥೆಗಳು ಸರ್ಕಾರದ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯೋಜಿತ ಕರ್ತವ್ಯಗಳಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸಿದರೆ ಅಥವಾ ಆದೇಶ ಉಲ್ಲಂಘಿಸಿದರೆ ಸೂಕ್ತ ಕಾನೂನು ಹಾಗೂ ಶಿಸ್ತುಕ್ರಮ ಕೈಗೊಳ್ಳಲಾಗುವುದು" ಎಂದು ಅಧಿಕಾರಿಗಳಿಗೆ ಮತ್ತು ಸಂಘಟಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಹಲವು ಮುಖಂಡರು ಹಾಗೂ ಸಂಘಟನೆಗಳ ಭಾಗಿ: ಈ ಪ್ರಮುಖ ಸಭೆಯಲ್ಲಿ ತಾಲೂಕಿನ ವಿವಿಧ ಹಂತದ ಜನಪ್ರತಿನಿಧಿಗಳು ಹಾಗೂ ಮುಖಂಡರು ಸಕ್ರಿಯವಾಗಿ ಭಾಗವಹಿಸಿದ್ದರು. ಸಭೆಯಲ್ಲಿ: ತಾಲೂಕು ಮಟ್ಟದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ವಿವಿಧ ಪ್ರಮುಖ ಸಂಘಟನೆಗಳ ತಾಲೂಕು ಮುಖಂಡರು ಎಲ್ಲಾ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದು, ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ಆಚರಿಸಲು ಅಗತ್ಯ ಸಲಹೆ-ಸೂಚನೆಗಳನ್ನು ಹಂಚಿಕೊಂಡರು.1
- ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ ಕಾವ್ಯಾರಾಣಿ. ಎಚ್ ಡಿ ಕೋಟೆ : ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ ಕಾವ್ಯಾರಾಣಿ. 5.50ಲಕ್ಷರೂ ನೀಡುವ ವೇಳೆ ಲೋಕಾ ಟ್ರಾಪ್.! ಎಚ್ ಡಿ ಕೋಟೆ ತಾಲೂಕಿನಲ್ಲಿ ನಾಲ್ಕೂವರೆ ಎಕರೆ ಜಮೀನಿಗೆ ನ್ಯಾಯಾಲಯ ಆದೇಶ ಮಾಡಿದ್ದರೂ ಕಂದಾಯ ಮೇಲ್ಮನವಿ ಇತ್ಯರ್ಥ ಪಡಿಸಲು ಲಂಚಕ್ಕೆ ಬೇಡಿಕೆ ಇಟ್ಟದ್ದರು ಎನ್ನಲಾಗಿದೆ.1